ಅದ್ವೈತ ದರ್ಶನಕ್ಕೆ ರಾಜಕೀಯ ಬೇಕೆ?
ಶ್ರೀ ರಾಮನ ನಡೆ ಶ್ರೀ ಕೃಷ್ಣನ ನುಡಿ ಹಿಂದೂ ಸನಾತನ ಧರ್ಮ ವನ್ನು ಎತ್ತಿ ಹಿಡಿದಿತ್ತು. ಶ್ರೀ ರಾಮಚಂದ್ರನಂತಹ ಮಹಾತ್ಮ ಭೂಮಿಗೆಮಗನಾಗಿ,ಅಣ್ಣನಾಗಿ,ಸೀತಾಪತಿಯಾಗಿ, ಧರ್ಮರಾಜನಾಗಿ,ಸಾಮ್ರಾಟನಾಗಿ,ಪ್ರಜಾಪಾಲಕನಾಗಿ ಪ್ರಜಾಸೇವಕನಾಗಿದ್ದರ ಹಿಂದೆ ಅಹಲ್ಯಾ,ಸೀತ,ತಾರಾ ಮಂಡೋದರಿಯಂತಹ ಮಹಾಪತಿವ್ರತೆಯರೂ ಇದ್ದರು. ಶ್ರೀ ಕೃಷ್ಣನ ಕಾಲಕ್ಕೆ ದ್ರೌಪದಿಯೊಬ್ಬಳೇ ಪಂಚಮಹಾವೀರರ ಪತ್ನಿಯಾಗಿದ್ದು ಧರ್ಮ ಯುದ್ದಕ್ಕೆ ಕಾರಣಕರ್ತಳಾದಳು.
ಅಂದರೆ ಯಶಸ್ವಿ ಪುರುಷನ ಹಿಂದೆ ಮಹಿಳೆಯಿರುತ್ತಾಳೆ
ನ್ನುವುದನ್ನು ನಾವೀಗಲೂ ಕಾಣುತ್ತೇವೆ.ಆದರೆ ಆ ಯಶಸ್ಸು ಭೌತಿಕದ ಮಟ್ಟದಲ್ಲಿದೆ ಅಧ್ಯಾತ್ಮದ ವಿಚಾರದಲ್ಲಿ ಕುಸಿದಿದೆ.
ಈ ಕಾರಣಕ್ಕಾಗಿ ಶ್ರೀ ರಾಮನ ನಡೆಯಿಲ್ಲದ ಪುರುಷರು ಶ್ರೀ ಕೃಷ್ಣನನುಡಿಯಲ್ಲಿದ್ದ ಯೋಗವನ್ನು ಅರ್ಥ ಮಾಡಿಕೊಳ್ಳಲು ಸೋತಿರುವವರ ಸಂಖ್ಯೆ ಬೆಳೆದಿದೆ. ಇದರಿಂದಾಗಿ ಯಾರಿಗೆ ಲಾಭವಾಗಿದೆ? ನಷ್ಟವಾಗಿದೆ? ಪರಮಾತ್ಮನಿಗೇನೂ ಸಮಸ್ಯೆಯಿಲ್ಲ ಆಗಿರೋದು ಜೀವಾತ್ಮರಾಗಿರುವ ಮನುಕುಲಕ್ಕೆ.ಭೂಮಿಗೆ ಆ ಪರಮಾತ್ಮನು ಅವತಾರವೆತ್ತಿ ಧರ್ಮ ಯಾವುದೆನ್ನುವುದನ್ನು ನಡೆದು ನುಡಿದು ಹೋಗಿದ್ದರೂ ಮಾನವ ಮಾತ್ರ ಪರಮಾತ್ಮನೆ ಬೇರೆ ಜೀವಾತ್ಮನೆ ಬೇರೆ ನಾನೇ ದೇವರು ಎನ್ನುವ ಅಹಂಕಾರ ಸ್ವಾರ್ಥ ಕ್ಕೆ ಸಿಲುಕಿ ತನ್ನ ಅಧಿಕಾರವನ್ನು ದುರ್ಭಳಕೆ ಮಾಡಿಕೊಂಡು ಮಕ್ಕಳು ಮಹಿಳೆಯರನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಹೊರಟು ಈಗ ಸರಿಯಾದ ಸತ್ಯದರ್ಶನ ವಾಗದೆ ಎಲ್ಲಾ ಅಸತ್ಯ ನಾನೇ ಸತ್ಯವೆಂದರೆ ನಾನು ಶಾಶ್ವತವಲ್ಲ.ಸತ್ಯ ಶಾಶ್ವತವಾದಾಗ ಆ ಸತ್ಯವನ್ನು ಒಳಗೇ ಕಂಡುಕೊಳ್ಳಲು ಶ್ರೀ ರಾಮನ ತತ್ವದ ನಡೆ ಶ್ರೀ ಕೃಷ್ಣನ ಯೋಗದ ಕಡೆಗೆ ನಡೆಯಬೇಕು.ಎಷ್ಟೇ ಅರ್ಧ ಸತ್ಯ ಪ್ರಚಾರ ಮಾಡಿದರೂ ಅದರೊಂದಿಗೆ ಅಸತ್ಯವೂ ಬೆಳೆಯುತ್ತದೆ. ಭೌತಿಕದಲ್ಲಿ ಅಸತ್ಯವೇ ಆಳುತ್ತಿದ್ದರೆ ಸತ್ಯ ಕಾಣದೆ ಜೀವ ಹೋಗುತ್ತದೆ. ಈ ಕಾರಣದಿಂದಾಗಿ ಧರ್ಮ ರಕ್ಷಣೆ ರಾಜಕೀಯದಿಂದ ಕಷ್ಟವಾಗಿದೆ.ಪ್ರಜಾಪ್ರಭುತ್ವದ ಎಲ್ಲಾ ಪ್ರಜೆಗಳಿಗೂ ಸ್ವತಂತ್ರ ಜ್ಞಾನವಿದ್ದರೂ ಅದನ್ನು ಬಳಸಿ ಜೀವನ ನಡೆಸೋ ಭಾಗ್ಯವಿಲ್ಲ.ಕಾರಣ ಸರ್ಕಾರ ಕೊಡುವ ಎಲ್ಲಾ ಭಾಗ್ಯಗಳು ಉಚಿತವಾಗಿ ಯಾವುದೇ ಶ್ರಮವಿಲ್ಲದೆ ಅನುಭವಿಸಿದವರಿಗೆ ಒಳಹೊಕ್ಕಿ ನೋಡುವ ಶಕ್ತಿಯಿಲ್ಲ. ಒಳಗೇ ಕಾದು ಕುಳಿತಿರುವ ಆ ಪರಮಾತ್ಮನ ಶಕ್ತಿ ಸ್ವತಂತ್ರ ಜೀವನಕ್ಕೆ ಬಳಸಲು ಅಂತಹ ಜ್ಞಾನದ ಶಿಕ್ಷಣ ಅಗತ್ಯವಿತ್ತು.
ಮಕ್ಕಳಿಗೆ ಭೌತಿಕಾಸಕ್ತಿ ಹೆಚ್ಚಿಸುವ ಶಿಕ್ಷಣ ಕೊಟ್ಟು ಯುವಜನರು ದಿಕ್ಕುತಪ್ಪಿದಾಗ ಕಾನೂನಿನಿಂದ ತಡೆಯಬಹುದೆನ್ನುವ ಭ್ರಮೆಯಲ್ಲಿರುವ ನಾವು ಈಗಲೂ ಎಲ್ಲಾ ದೇವರೇ ನೋಡಿಕೊಳ್ಳಲಿ ಸರ್ಕಾರವೇ ಮಾಡಲಿ ಎಂದು ಇದರ ಬಗ್ಗೆ ಗಮನಕೊಡದಿದ್ದರೆ ಇದಕ್ಕೆ ಕೊನೆಯಿಲ್ಲ.
ಎಲ್ಲಾ ಸರ್ಕಾರ ಮಾಡುತ್ತಿದ್ದರೂ ಕೊಡುತ್ತಿದ್ದರೂ ಯಾಕಿಷ್ಟು ಸಮಸ್ಯೆ? ಸರ್ಕಾರ ಎಂದರೆ ನಮ್ಮ ಸಹಕಾರವಷ್ಟೆ. ಅಧರ್ಮ ಅನ್ಯಾಯದೆಡೆಗೆ ತಂತ್ರ ನಡೆದರೂ ಸಹಕಾರ ನೀಡಿದರೆ ನಮ್ಮ ಸ್ವತಂತ್ರ ಜ್ಞಾನವೇ ಬೆಳೆಯೋದಿಲ್ಲ. ಭ್ರಷ್ಟಾಚಾರದ ಹಣದಲ್ಲಿ ಎಷ್ಟೇ ಸುಖಪಟ್ಟರೂ ದು:ಖ ಕಟ್ಟಿಟ್ಟ ಬುತ್ತಿ. ಒಳಗಿನ ಶಕ್ತಿ ಹೊರಗಿನ ಶಕ್ತಿಯನ್ನು ಆಳುವುದು ಸರಿ,ಹೊರಗಿನ ಶಕ್ತಿಯೇ ಒಳಗಿನ ಶಕ್ತಿಯನ್ನು ಆಳಿದರೆ ಇದರರ್ಥ ಜೀವಾತ್ಮ ಪರಮಾತ್ಮನನ್ನು ಆಳುವುದಾದರೆ ಇದು ಸತ್ಯವೆ? ಮಿಥ್ಯವೆ? ಅದ್ವೈತ ದೊಳಗಿರುವ ದ್ವೈತ ಸತ್ಯವಾದರೂ ಭೂಮಿಗೆ ಬಂದಾಗ ಭೂಮಿ ಒಂದೇ ಇರೋದು. ಭೂಮಿಗೆ ಬಂದಿದೆ ಎಂದರೆ ಋಣವಿದೆ ಎಂದರ್ಥ ಅದನ್ನು ತೀರಿಸಲು ಧರ್ಮದಿಂದ ಸತ್ಕರ್ಮದ ನಡೆ ನುಡಿಯಿಂದಷ್ಟೇ ತೀರಿಸಲು ಸಾಧ್ಯವೆಂದರು ಮಹರ್ಷಿಗಳು ಹಾಗೆ ನಡೆದರೆ ಧರ್ಮ ರಕ್ಷಣೆ.ಅಧರ್ಮದಿಂದ ಭೂಮಿ ಆಳಲು ಹೊರಟರೆ ಅಧರ್ಮ ವೇ ಬೆಳೆಯೋದಲ್ಲವೆ? ಶ್ರೀ ವಿಷ್ಣುವಿನವತಾರದ ಮಹಾ ಅವತಾರ ಪುರುಷರ ನಡುವೆಯೇ ಮಾನವರು ಮಧ್ಯವರ್ತಿಯಾಗಿ ಅರ್ಧ ಸತ್ಯ ತಿಳಿದು ನಿಂತರೆ ತತ್ವ ಹಾಗು ತಂತ್ರದ ಉದ್ದೇಶ ಅರ್ಥ ವಾಗದು. ಈ ಲೇಖನದಲ್ಲಿರುವ ಸತ್ಯ ತಿಳಿಯಲು ತತ್ವದರ್ಶನ ವಾಗಬೇಕಿದೆ. ನಂತರವೇ ತಂತ್ರದರ್ಶನ.
ಹೊರಗಿರುವ ತಂತ್ರ ತಾತ್ಕಾಲಿಕವಾದರೆ ಒಳಗಿನ ತತ್ವ ಶಾಶ್ವತ.ಒಟ್ಟಿನಲ್ಲಿ ಎಲ್ಲಾ ತತ್ವಜ್ಞಾನಿಗಳ ಉದ್ದೇಶ ಧರ್ಮ ದ ಮೂಲಕ ಒಂದಾಗಿಸುವುದಾಗಿತ್ತು.ಅದರಲ್ಲಿ ರಾಜಕೀಯತೆ ಇರಲಿಲ್ಲ ರಾಜಯೋಗದ ಸ್ವತಂತ್ರ ಜ್ಞಾನವಿತ್ತು. ತಂತ್ರದಿಂದ ಅದನ್ನು ತಿಳಿದವರಿಗೆ ತತ್ವದ ಅನುಭವವಾಗದೆಯೇ ಅಧಿಕಾರ ಸ್ಥಾನಮಾನ,ಹೆಸರು,ಹಣ ಸಿಕ್ಕಿದ ಪರಿಣಾಮ ಇಂದಿಗೂ ಜನಸಾಮಾನ್ಯರ ಒಳಗಿರುವ ಸಾಮಾನ್ಯಜ್ಞಾನದ ಸದ್ಬಳಕೆ ಮಾಡಿಕೊಳ್ಳಲು ಕಷ್ಟಪಡುವಂತಾಗಿದೆ. ಪ್ರಜಾಪ್ರಭುತ್ವದಲ್ಲಿ ಇದಕ್ಕೆ ಅವಕಾಶವಿತ್ತು ಆದರೆ ಶಿಕ್ಷಣದ ಕೊರತೆಯಿದೆ.ಶಿವಶರಣರ ಕಾಲಕ್ಕೆ ಇದನ್ನು ಎತ್ತಿಹಿಡಿದಿದ್ದರು.ಅವರ ತತ್ವವು ಸಮಾಜದ ಸಮಾನತೆಯು ಯೋಗದಿಂದ ಬೆಳೆಸುವುದಾಗಿತ್ತು.ಭೋಗದ ಜೀವನ ಭೌತಿಕದಲ್ಲಿ ಹೆಚ್ಚಾದಂತೆಲ್ಲಾ ಅಂತಹ ಸರಳ ಜೀವನ ನಡೆಸೋರನ್ನು ಬಡವರು ಹಿಂದುಳಿದವರು,ದೀನ ದಲಿತ ಎನ್ನುವ ಹೆಸರಿನಲ್ಲಿ ಸರಿಯಾದ ಶಿಕ್ಷಣ ನೀಡದೆ ಹಣ ಕೊಟ್ಟು ಒಳಗಿದ್ದ ಜ್ಞಾನ ಗುರುತಿಸದೆ ಭೌತಿಕದೆಡೆಗೆ ನಡೆಸುತ್ತಾ ತಮ್ಮ ಅಧಿಕಾರ ಹೆಚ್ಚಿಸಿಕೊಂಡು ಆಳಿ ಪರಕೀಯರ ತಂತ್ರದ ಶಿಕ್ಷಣ ಹಣವನ್ನು ಗಳಿಸಿದರೂ ಅದನ್ನು ಹೇಗೆ ಬಳಸಿದರೆ ಶಾಂತಿ ಸಮಾಧಾನ ತೃಪ್ತಿ ಮುಕ್ತಿ ಸಿಗುವುದೆನ್ನುವ ಜ್ಞಾನವಿಲ್ಲದೆ ಇಂದಿಗೂ ಕೋಟ್ಯಾಂತರ ರೂ ದೇಶದ ಹಣ ದುರ್ಭಳಕೆ ಆದರೂ ಕೇಳೋಹಾಗಿಲ್ಲ. ಲಕ್ಷಲಕ್ಷ ಸಾಲ ಮಾಡಿ ಕೊಡುವ ಶಿಕ್ಷಣದಲ್ಲಿಯೇ ಮಕ್ಕಳ ಒಳಗಿನ ಜ್ಞಾನ ಬೆಳೆಸುವ ವಿಷಯ
ವಿಲ್ಲವಾದರೆ ಶಿಕ್ಷಣದ ಉದ್ದೇಶ ಏನಾಗಿತ್ತು? ಈಗ ಏನಾಗಿದೆ? ಎತ್ತ ಸಾಗಿದೆ ಭಾರತೀಯ ಶಿಕ್ಷಣ?
ಈ ಪ್ರಶ್ನೆಗೆ ಉತ್ತರಿಸುವವರಿಲ್ಲದೆ ಮಕ್ಕಳ ಶಿಕ್ಷಣ ಸ್ವೇಚ್ಚಾಚಾರದೆಡೆಗೆ ಸಾಗಿದಂತೆಲ್ಲಾ ಯಥಾ ಶಿಕ್ಷಣ ತಥಾ ಜ್ಞಾನ. ಜ್ಞಾನದಂತೆ ಜೀವನ.
ಮಾನವಜನ್ಮ ದೊಡ್ಡದು ಹಾಳುಮಾಡದಿರಿ ಹುಚ್ಚಪ್ಪಗಳಿರ ಎಂದ ದಾಸರನ್ನು ಅರ್ಥ ಮಾಡಿಕೊಳ್ಳಲು ಸೋತಿರುವ ಇಂದಿನ ಯುವಪೀಳಿಗೆ ಹುಚ್ಚರಂತೆ ಹೊರಗೆ ಸುಖಕ್ಕಾಗಿ ಹೋರಾಟ ನಡೆಸಿರೋದು ಕಾಲದ ಪ್ರಭಾವ ಎಂದು ಸುಮ್ಮನೆ ಕೂತರೆ ಬದಲಾವಣೆ ಸಾಧ್ಯವೆ? ಎಲ್ಲಾ ನಡೆಯುತ್ತಿರೋದು ಸತ್ಯ ಆದರೆ ನಡೆಯುತ್ತಿರುವ ದಾರಿ ಸತ್ಯದೆಡೆಗಿಲ್ಲ.ಹಾಗಾದರೆ ದಾರಿ ಎಲ್ಲಿದೆ? ಹೊರಗೋ ಒಳಗೋ? ಆತ್ಮಾವಲೋಕನ ಮಾಡಿಕೊಳ್ಳಲೂ ಮನಸ್ಸು ಶಾಂತವಾಗಿರಬೇಕು.ಮನಸ್ಸಿನ ಶಾಂತಿಗೆ ಕಣ್ಣುಮುಚ್ಚಿ ದ್ಯಾನ ಮಾಡಬೇಕು. ದ್ಯಾನದ ನಂತರ ಸತ್ಕರ್ಮದಿಂದ ಸ್ವಧರ್ಮ ದೆಡೆಗೆ ನಡೆಯಬೇಕು. ಸ್ವಾಭಿಮಾನ ಸ್ವಾವಲಂಬನೆ ಸತ್ಯ ಸರಳ ಜೀವನವೇ ಸ್ವತಂತ್ರ ಜ್ಞಾನದೆಡೆಗೆ ನಡೆಸುವುದೆಂದಾಗ
ನಮ್ಮ ನಡೆ ಆ ಕಡೆ ಇದ್ದರೆ ಪರಮಾತ್ಮನೆಡೆಗೆ ಹೋಗುತ್ತಿರುವುದು ಸತ್ಯವಾಗಿದೆ ಎಂದರ್ಥ. ಕೇವಲ ಪ್ರಚಾರದಲ್ಲಿದೆ ಎಂದರೆ ವ್ಯವಹಾರದಲ್ಲಿದೆ ಜೀವನ ಎಂದರ್ಥ.ಎರಡೂ ಇಲ್ಲದೆ ಪರಕೀಯರ ವಶದಲ್ಲಿದೆ ಎಂದರೆ ನಮಗೆ ಸ್ವತಂತ್ರ ವಿಲ್ಲ ಎಂದರ್ಥ. ನಮ್ಮ ಇಂದಿನ ಸ್ಥಿತಿಗೆ ನಮ್ಮ ಸಹಕಾರವೇ ಕಾರಣ. ಸಹಕಾರ ಧಾರ್ಮಿಕ ಮಾರ್ಗ ಹಿಡಿದರೆ ಉತ್ತಮ ಪ್ರಗತಿ ಸಾಧ್ಯ. ರಾಜಕೀಯ ಎಲ್ಲಾ ಕ್ಷೇತ್ರ ಆವರಿಸಿದೆ. ಅದನ್ನು ರಾಜಯೋಗದೆಡೆಗೆ ಹರಿಸಲು ನಮ್ಮ ಸಹಕಾರ ಬೇಕಷ್ಟೆ. ಇದರಿಂದ ನಮ್ಮ ಆತ್ಮತೃಪ್ತಿ ಸಾಧ್ಯ. ಆತ್ಮಕ್ಕೆ ತೃಪ್ತಿ ಶಾಂತಿ ಸಿಗೋದು ಆಂತರಿಕ ಶುದ್ದಿಯಿಂದ ಮಾತ್ರ ಎಂದಿದ್ದಾರೆ ಮಹಾತ್ಮರು. ಎಲ್ಲೆಡೆಯೂಆವರಿಸಿರುವ
ಈ ಚೈತನ್ಯ ಶಕ್ತಿಯನ್ನು ಮಾನವ ಹೇಗೆ ಬಳಸುವನೋ ಹಾಗೇ ಜೀವನ ನಡೆಯುತ್ತದೆ. ಇದರ ಬಳಕೆಗೆ ಹಣ,ಅಧಿಕಾರದ ಅಗತ್ಯವಿರಲಿಲ್ಲ ಜ್ಞಾನದ ಅಗತ್ಯವಿತ್ತು.
ಮನಸ್ಸನ್ನು ತಡೆಹಿಡಿಯೋದು ಕಷ್ಟ.ಮನುಷ್ಯನ ತಡೆದರೂ ಸಂಕಷ್ಟ. ಇದರಲ್ಲಿ ಏನಾದರೂ ದೋಷ ಕಂಡರೆ ತಿಳಿಸಬಹುದು.ಕಾರಣ ಇಲ್ಲಿ ಯಾರೂ ಸರ್ವಜ್ಞ ರಿಲ್ಲ. ಶ್ರೀ ರಾಮನಂತೆ ಶ್ರೀ ಕೃಷ್ಣ ಇರಲಿಲ್ಲ ಎಂದರೆ ಹುಲುಮಾನವರಾದ ನಾವೆಲ್ಲಿರೋದನ್ನು ತಿಳಿಸುವ ಪ್ರಯತ್ನವಷ್ಟೆ.ಭೂಮಿಗೆ ಬಂದ ಮೇಲೆ ಋಣ ತೀರಿಸಲು ಧರ್ಮ ದ ಜೊತೆಗೆ ಸತ್ಯವಿರಬೇಕು.
ಸತ್ಯವೇ ಇಲ್ಲದ ರಾಜಕೀಯ ತುಂಬಿದ ಧರ್ಮದ ಹಿಂದೆ ನಡೆದರೆ ತಿರುಗಿ ಬರಲೇಬೇಕು. ಹಾಗೆ ಧರ್ಮ ವಿಲ್ಲದ ಭೌತಿಕ ಸತ್ಯದೆಡೆಗೆ ಎಷ್ಟೇ ನಡೆದರೂ ಸುಸ್ತಾಗೋದು ದೇಹಕ್ಕೆ ಹೊರತು ಆತ್ಮಕ್ಕಲ್ಲ.ದೇಹ ಹೋದರೂ ಆತ್ಮನ ನಡಿಗೆ ನಿಲ್ಲದು. ಇದನ್ನು ಎಲ್ಲಾ ಧಾರ್ಮಿಕಾಸಕ್ತರು ಗಮನಿಸಿದರೆ ಸತ್ಯ ಒಳಗೇ ಕಾಣುತ್ತದೆ. ಹೊರಗೆ ಹುಡುಕಿದರೂ ಸಿಗದು. ಲೇಖನ ಭಗವತಿಯ ಕೃಪಾಕಟಾಕ್ಷದಿಂದ ಹೊರಬರುವ ಕಾರಣ ಇದರಲ್ಲಿ ಯಾವ ಅಸತ್ಯವಿಲ್ಲ.ಅನುಭವಕ್ಕೆ ಬರದೆ ಅರ್ಥ ವಾಗದು. ಅರ್ಥ ವಾದರೂ ಸತ್ಯ ತೋರಿಸಲಾಗದು.
ಅದನ್ನು ಅವಳೇ ಪ್ರಕೃತಿ ಮೂಲಕ ತೋರಿಸುವಾಗ ಜೀವ ಇದ್ದರೆ ಒಪ್ಪಬಹುದು. ಒಪ್ಪದೆಯೂ ಹೋಗಬಹುದು.ಎಲ್ಲಾ ಒಳ ಹಾಗು ಹೊರಮನಸ್ಸಿನ ಮೇಲಿದೆ. ಮನಸ್ಸೇ ಎಲ್ಲದ್ದಕ್ಕೂ ಕಾರಣ.ಮಾನವನ ಮನಸ್ಸೇ ಎಲ್ಲಾ ನಡೆಯಲು ಕಾರಣ.
ಇದರ ನಿಯಂತ್ರಣವೇ ಯೋಗಸಾಧನೆ. ಯೋಗದ ಶಿಕ್ಷಣವೇ ಕೊಡದೆ ಆಳಿದರೆ ಅಧರ್ಮ. ಇದರ ಬಗ್ಗೆ ಧಾರ್ಮಿಕ ವರ್ಗ ಚರ್ಚೆ ನಡೆಸಬಹುದು. ವಾದವಿವಾದಕ್ಕಿಂತ ಚರ್ಚೆ ಉತ್ತಮವಾಗಿದೆ. ತನ್ನ ಮಾನ ಮರ್ಯಾದೆ ಉಳಿಸಿಕೊಳ್ಳಲು ಶ್ರಮಪಡುವ ಮಾನವ ತಾನಿರುವ ಭೂಮಿ,ದೇಶ,ಸ್ಥಳದ ಮಹಿಮೆಯನ್ನು ತಿಳಿದರೆ ಇನ್ನಷ್ಟು ಮರ್ಯಾದೆ ಒಳಗೇ ಹೆಚ್ಚುವುದು. ಆತ್ಮಗೌರವ ಅಗತ್ಯ.
ಪ್ರಜಾಪ್ರಭುತ್ವ ರಾಜಪ್ರಭುತ್ವ ವಾದರೆ ಅಧರ್ಮ. ರಾಜಕೀಯ ಧರ್ಮದ ಕಡೆಗೆ ಯಾವ ಸ್ವಾರ್ಥ ವಿಲ್ಲದೆ ನಡೆದರೆ ಉತ್ತಮ. ಧರ್ಮ ವೇ ಸ್ವಾರ್ಥ ಕ್ಕಾಗಿ ರಾಜಕೀಯಕ್ಕೆ ಬಲಿಯಾದರೆ?
ಜ್ಞಾನವಿಜ್ಞಾನದ ನಡುವಿರುವ ಸಾಮಾನ್ಯಜ್ಞಾನ ದೇವಾಸುರ ಶಕ್ತಿಯ ಮಧ್ಯೆ ನಿಂತಿರುವ ಮಧ್ಯವರ್ತಿ ಮಾನವನಿಗೆ ಅಗತ್ಯ ವಿದೆ.
"ಸ್ಮರಣೆಯೊಂದೆ ಸಾಲದೆ ಗೋವಿಂದನಾ ನಾಮವೊಂದೆ ಸಾಲದೆ ಗೋವಿಂದನಾ.."" ಪುರಂಧರದಾಸರು ತಿಳಿಸಿದಂತೆ ನಾಮಸ್ಮರಣೆಯಿಂದಲೇ ಸತ್ಕರ್ಮ ಸ್ವಧರ್ಮದ ಮೂಲಕ ಜೀವನ್ ಮುಕ್ತಿ ಪಡೆಯಬಹುದಾದರೆ ಎಷ್ಟು ಸುಲಭ.
ಆದರೆ ಕಷ್ಟವಿದೆ.ಕಷ್ಟಪಡದೆ ಸುಖವಿಲ್ಲ.ಕೈ ಕೆಸರಾದರೆ ಬಾಯಿ ಮೊಸರು. ಕೆಸರಿನಲ್ಲಿನ ಕಮಲ ಕಿತ್ತು ಲಕ್ಮಿ ಪೂಜೆ ಮಾಡಿದರೆ ಹಣ ಸಿಗಬಹುದು. ಹಣದ ಸದ್ಬಳಕೆಯ ಜ್ಞಾನ ಒಳಗಿನಿಂದ ಬೆಳೆಸಿಕೊಳ್ಳಲು ಕಷ್ಟಪಡಬೇಕು. ಇದೇ ಜೀವನ ರಹಸ್ಯವೆಂದಿದ್ದಾರೆ ಜ್ಞಾನಿಗಳು.
No comments:
Post a Comment