ವೈರಾಗ್ಯ ಮೂರ್ತಿಯಾಗಿ ಬಾಲ ಸಂನ್ಯಾಸಿಯಾಗಿದ್ದ ಶ್ರೀ ಶಂಕರಭಗವತ್ಪಾದರ ಅಧ್ಯಾತ್ಮ ಸಾಧನೆಯನ್ನು ಯಾರೂ ಊಹಿಸಿಕೊಳ್ಳಲು ಕಷ್ಟ ಅದಕ್ಕೆ ಅದ್ವೈತ ವನ್ನು ಕಬ್ಬಿಣದ ಕಡಲೆ ಎಂದರು. ಇದನ್ನು ಸರಳವಾಗಿ ಸುಲಭವಾಗಿ ಒಂದು ಪದದಲ್ಲಿ ತಿಳಿಸಬೇಕೆಂದರೆ ಒಗ್ಗಟ್ಟು ಎನ್ನುವ ಪದವನ್ನು ಮಾನವ ಯಾವ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವನೋ ಅಷ್ಟು ತತ್ವದೆಡೆಗೆ ನಡೆಯಬಹುದಷ್ಟೆ. ಯಾವಾಗ ತತ್ವವನ್ನು ಅಪಾರ್ಥ ಮಾಡಿಕೊಂಡು ಬಿಕ್ಕಟ್ಟು, ಭಿನ್ನಾಭಿಪ್ರಾಯ ಬೆಳೆಯಿತೋ ಆಗಲೇ ತಂತ್ರ ತನ್ನ ಕೆಲಸಮಾಡಿಕೊಂಡು ಒಂದು ಎರಡಾಯಿತು ಎರಡು ಮೂರಾಯಿತು ನಂತರ ಅನೇಕವಾಗಿ ಅಸಂಖ್ಯಾತವನ್ನು ಒಟ್ಟುಗೂಡಿಸಲಾಗದ ಪರಿಸ್ಥಿತಿ ಇಂದಿದೆ. ಆದರೂ ಭಾರತದಲ್ಲಿ ಸರ್ವ ಧರ್ಮ ಸಮ್ಮೇಳನಗಳು ನಡೆಯುತ್ತವೆ. ಅನೇಕತೆಯಲ್ಲಿ ಏಕತೆ ಕಾಣುವ ಪ್ರಯತ್ನಗಳಾಗಿವೆ. ಆದರೆ ಇದನ್ನು ಮೂಲ ಶಿಕ್ಷಣದಲ್ಲಿಯೇ ನೀಡಿದ್ದರೆ ಮಕ್ಕಳಿಗೆ ತತ್ವದರ್ಶನ ಸಾಧ್ಯವೆನ್ನುವುದೆ ಭಾರತೀಯ ಶಿಕ್ಷಣದ ಗುರಿಯಾಗಿತ್ತು.
ಶಿಕ್ಷಣ ನೀಡುವ ಗುರು ಹಿರಿಯರಲ್ಲಿ ಪೋಷಕರಲ್ಲಿ ತತ್ವದರ್ಶನ ವಾಗಿದ್ದರೆ ಮಾತ್ರ ಶಿಷ್ಯನಲ್ಲಿರುವ ಜ್ಞಾನಶಕ್ತಿ ಉನ್ನತಮಟ್ಟಕ್ಕೆ ಸ್ವತಂತ್ರ ವಾಗಿ ಬೆಳೆಯಬಹುದು. ಶಿಷ್ಯನು ಗುರುವಿಗಿಂತ ಎತ್ತರ ಬೆಳೆದರೆ ಗುರುವು ಇನ್ನೂ ಎತ್ತರಕ್ಕೆ ಏರುತ್ತಾರೆ. ಅಧ್ಯಾತ್ಮದ ವಿಚಾರದಲ್ಲಿ ಈ ಎತ್ತರವನ್ನು ಹಣದಿಂದ ಅಳೆಯುವುದೇ ಅಜ್ಞಾನವೆನ್ನುವರು.ಹಿಂದಿನ ಮಹಾತ್ಮರಲ್ಲಿ ಹಣ,ಅಧಿಕಾರ,ಸ್ಥಾನವಿರಲಿಲ್ಲ ಜ್ಞಾನವಿತ್ತು ಸ್ವತಂತ್ರ ಜೀವನವಿತ್ತು. ಹೀಗಾಗಿ ತತ್ವಶಾಸ್ತ್ರ ಅಧ್ಯಾತ್ಮದ ತಳಪಾಯದಲ್ಲಿ ಬೆಳೆದಿತ್ತು. ಅಂದಿನ ವರ್ಣ ಪದ್ದತಿಯಲ್ಲಿ ಧರ್ಮ ಕರ್ಮದ ಆಳ ಅನುಭವಜ್ಞಾನವಿತ್ತು. ಸಮಾಜದಲ್ಲಿ ಸಮಾನತೆಯನ್ನು ತರುವಲ್ಲಿ ತತ್ವ ಸಹಕಾರಿಯಾಗಿತ್ತು. ವಾಸ್ತವದಲ್ಲಿ ಇವೆಲ್ಲವೂ ಪ್ರಚಾರದಲ್ಲಿದ್ದರೂ ಅಳವಡಿಸಿಕೊಳ್ಳಲು ಬಹಳ ಕಷ್ಟ. ಅಳವಡಿಸಿಕೊಂಡವರ ಕಷ್ಟ ನೋಡಿದವರಿಗೆ ಕಷ್ಟಪಡದೆ ಸುಖ ಸಿಗುವಾಗ ಯಾಕೆ ಬೇಕೆನ್ನುವ ನಿರ್ಲಕ್ಷ್ಯ. ಲಕ್ಷ ಲಕ್ಷ ಹಣಸಂಪಾದನೆ ಭೌತಿಕ ವಿಜ್ಞಾನದಲ್ಲಿ ನಡೆದವರಿಗೆ ಸಿಕ್ಕರೆ, ಲಕ್ಷ ನೋಡಲಾಗದೆ ಒಂದು ರುಪಾಯಿ ಸಂಪಾದನೆ ಮಾಡಲಾಗದ ಮಕ್ಕಳ ತಲೆಯ ಮೇಲೆ ಲಕ್ಷ ರುಪಾಯಿಯ ಸಾಲ ಹೋರಿಸುವ ಶಿಕ್ಷಣದಲ್ಲಿಯೇ ಭಾರತೀಯ ತತ್ವಶಾಸ್ತ್ರ ಮರೆಯಾಗಿದ್ದರೆ ಇದಕ್ಕೆ ಕಾರಣಕರ್ತರು ಯಾರು? ಸಾಮಾನ್ಯಪ್ರಜೆಗಳೆ? ಶ್ರೀಮಂತ ಪ್ರಜೆಗಳೆ? ಮಠಾಧೀಶರೆ? ಧಾರ್ಮಿಕ ವರ್ಗ ವೆ?ರಾಜಕಾರಣಿಗಳೆ? ಪರಧರ್ಮದವರೆ? ಪರದೇಶ ಪರರಾಜ್ಯದವರೆ? ಅಥವಾ ಸ್ವಯಂ ಸೇವಕರೆ?
ಇಲ್ಲಿ ಸ್ವಯಂ ಸೇವಕರಾಗಿರುವ ಭಾರತಮಾತೆಯ ಮಕ್ಕಳು
ಎಲ್ಲರೂ ಆಗಿದ್ದಾರೆ.ಅವರವರ ಜ್ಞಾನವನ್ನು ಹಂಚಿಕೊಂಡು
ಜ್ಞಾನ ಬೆಳೆಸಿರೋದರ ಹಿಂದೆ ವ್ಯವಹಾರ ಅಧಿಕವಾಗಿ ಸ್ವಾರ್ಥ ಅಹಂಕಾರ ದ ರಾಜಕೀಯತೆ ಹೆಚ್ಚಾಗಿರೋದೆ ಎಲ್ಲಾ ಸಮಸ್ಯೆಗಳಿಗೆ ಕಾರಣ. ಹಾಗಂತ ಎಲ್ಲರೂ ಸಮಾನರು ಎಂದವರು ಎಲ್ಲರಲ್ಲಿಯೂ ಸಮಾನವಾಗಿರುವಪರಮಾತ್ಮನ ಕಾಣಲಾಗಲ್ಲ.ಕಾಣಲು ಸಾಧ್ಯವೂ ಇಲ್ಲ. ಕಾರಣ ಮಾನವ ರೂಪದಲ್ಲಿರುವವರ ಒಳಗಿನ ಸತ್ಯ ಸತ್ವ ತತ್ವವು ಅವರವರ ಹಿಂದಿನ ಧರ್ಮ ಕರ್ಮ ಋಣವನ್ನು ಆಧರಿಸಿರುವಾಗ ಅದಕ್ಕೆ ತಕ್ಕಂತೆ ಮೇಲಿರುವಪರಮಾತ್ಮ ನಡೆಸುವನೆಂದು
ಪರಮಶುದ್ದವಾಗಿರುವ ಪರಮಾತ್ಮನ ಇಚ್ಚೆಯಿಲ್ಲದೆ ಒಂದು ಹುಲ್ಲು ಕಡ್ಡಿ ಅಲ್ಲಾಡದೆಂದೂ ನಾನೆಂಬುದೇ ಇಲ್ಲವೆಂದು ಅನುಭವಿಸಿದವರಿಗಷ್ಟೆ ಅದ್ವೈತ ದರ್ಶನ ವಾಗಿರೋದು.
ಅಂದಿನ ಸನಾತನ ಧರ್ಮದ ಅವನತಿಯನ್ನು ಸರಿಪಡಿಸಲು ಅವತರಿಸಿದ ಶ್ರೀ ಶಂಕರ ಭಗವತ್ಪಾದರ ಎಲ್ಲಾ ಗ್ರಂಥ ಸಂದೇಶಗಳು ಪ್ರಚಾರದಲ್ಲಿದ್ದಂತೆ ಶ್ರೀ ರಾಮಾನುಜಾಚಾರ್ಯರ ಸಂದೇಶಗಳಿವೆ ಹಾಗೆಯೇ ಮದ್ವಾಚಾರ್ಯರ ಸಂದೇಶಗಳಿವೆ. ಇವುಗಳಲ್ಲಿ ಅಡಗಿರುವ ಒಂದೇ ಸಂದೇಶ ನಾವೆಲ್ಲರೂ ಆ ದೇವರ ಮಕ್ಕಳು.
ದೈವತ್ವ ನಮ್ಮೊಳಗಿದೆ. ದೈವತತ್ವ ವಿಲ್ಲದ ಧರ್ಮ ಕರ್ಮಕ್ಕೆ ಜೀವ ಅಂಟಿಕೊಂಡರೆ ಅಸುರತ್ವ ಬೆಳೆಯುವುದು. ಇಲ್ಲಿ ಯಾರ ಹೆಸರನ್ನೂ ಎತ್ತಿ ಹಿಡಿದಿಲ್ಲ.ಯಾರನ್ನು ದ್ವೇಷ ಮಾಡಿಲ್ಲ.ಯಾರನ್ನೂ ಆಳುವ ಗೊಂದಲವಿಲ್ಲ. ಆದರೆ ಮಧ್ಯವರ್ತಿಗಳು ಮುಂದೆ ಮುಂದೆ ನಡೆಯದೆ ಮಧ್ಯೆ ನಿಂತು ಅರ್ಧ ಸತ್ಯವಷ್ಟೆ ಹಿಡಿದು ಈ ಕಡೆ ದೇವರು ಇನ್ನೊಂದು ಕಡೆ ಅಸುರರನ್ನು ಬೆಳೆಸಲು ಹೊರಟರೆ ತನ್ನ ಜೀವಾತ್ಮನಿಗೆ ಮುಕ್ತಿ ಸಿಗುವುದೆ? ಜ್ಞಾನವಿಜ್ಞಾನದ ಅಂತರದಲ್ಲಿ ಇರುವ ಸಾಮಾನ್ಯಜ್ಞಾನ ಮಾನವನಿಗೆ ಅಗತ್ಯ.
ವಿಶೇಷವಾಗಿ ಹೊರಗಿನ ವಿಚಾರ ತಿಳಿಯೋ ಮೊದಲು ಸಶೇಷವಾಗಿರುವ ನಮ್ಮ ಮೂಲದಿಂದ ಬಂದಿರುವ ಜ್ಞಾನ ಅರ್ಥ ವಾಗಬೇಕಿದೆ.ಅದರಲ್ಲಿಯೇ ಶುದ್ದತೆ ಇಲ್ಲವಾದರೆ ಬೆಳೆಸಿ ಉಪಯೋಗವಿಲ್ಲ. ಪರಿಶುದ್ದ ಮನಸ್ಸಿಗೆ ಪೂರಕ ಶಿಕ್ಷಣಜ್ಞಾನ ನೀಡುವುದೇ ಭಾರತೀಯ ಶಿಕ್ಷಣದ ಗುರಿ.
ಆದರೆ ಈಗಿನ ಶಿಕ್ಷಣದಲ್ಲಿಯೇ ಮರೆಯಾಗಿರುವ ಸತ್ಯವು
ಮಕ್ಕಳಿಗೆ ತಿಳಿಸುವುದಕ್ಕೆ ಪೋಷಕರೆ ವಿರುದ್ದ ನಿಂತರೆ ಸತ್ಯವಿಲ್ಲದ ಧರ್ಮ ಕುಂಟುತ್ತದೆ. ಧರ್ಮ ವೇ ಇಲ್ಲದ ಸತ್ಯ ಕುರುಡಾಗಿರುತ್ತದೆ.
ಈಗ ತಿರುಗಿ ಹಿಂದೆ ಬರುವ ಪ್ರಯತ್ನವಾದರೂ ಭೌತಿಕದ ವ್ಯವಹಾರದಲ್ಲಿ ಧರ್ಮ ಹಣವಿಲ್ಲದೆ ಮುಂದೆ ನಡೆಯದು.
ಹಣವಿದ್ದವರಿಗೆ ಸತ್ಯ ಅರ್ಥ ವಾಗದು. ಸತ್ಯ ತಿಳಿದವರಿಗೆ ಹೇಳುವ ಅಧಿಕಾರವಿಲ್ಲ. ಹೀಗಾಗಿ ಪ್ರಚಾರವು ಮದ್ಯೆ ನಿಂತು ಜನರನ್ನು ತತ್ವ ತಂತ್ರ ಯಾವುದು ಶ್ರೇಷ್ಠ ಕನಿಷ್ಠ ಎನ್ನುವ ಗೊಂದಲಕ್ಕೆ ಎಢಮಾಡಿಕೊಟ್ಟಿದೆ.
ಅಂದಿನ ಸಂನ್ಯಾಸಿಗಳಿಗಿದ್ದ ಸ್ವತಂತ್ರ ಜ್ಞಾನ ಇಂದಿಲ್ಲ. ಅಂದಿನ ರಾಜ ರಲ್ಲಿದ್ದ ತತ್ವಜ್ಞಾನ ಇಂದಿನವರಲ್ಲಿಲ್ಲ
ಅಂದಿನ ಕುಟುಂಬ ವ್ಯವಸ್ಥೆ ಇಂದಿಲ್ಲ,ಅಂದಿನ ಶಿಕ್ಷಣವೇ ಇಂದಿಲ್ಲ. ಆದರೆ ಮನುಕುಲವಿದೆ, ಜೀವನ ನಡೆಸಲು ಭೂಮಿ ಒಂದೇ .ಆ ಒಂದು ಭೂಮಿಯ ಋಣ ತೀರಿಸಲು ಬಂದಿರುವ ಮಾನವನಿಗೆ ಋಣದ ಅರ್ಥ ತಿಳಿಸಿದರೆ ಸಾಕು.
ಸಾಲದ ಹೊರೆಹೊತ್ತು ಸಮಸ್ಯೆಗಳನ್ನು ಹೊರಗೆ ಎಳೆದು ಹರಡಿಕೊಂಡರೆ ಬೆಳೆಯುತ್ತಲೇ ಇರುತ್ತದೆ. ಹಾಗೆಯೇ ನಾನೆಂಬುದಿಲ್ಲ ವೆನ್ನುವ ಅದ್ವೈತ, ನಾನಿದ್ದೇನೆನ್ನುವ ದ್ವೈತ, ಎಲ್ಲರಲ್ಲಿಯೂ ಇರೋದು ಒಬ್ಬನೇ ಪರಮಾತ್ಮ ಎನ್ನುವ ವಿಶಿಷ್ಟಾದ್ವೈತ ದವರು ಒಗ್ಗಟ್ಟನ್ನು ಬೆಳೆಸಿಕೊಂಡರೆ ಒಂದೇ ದೇಶವೆನ್ನುವ ಸತ್ಯವೂ ಅರ್ಥ ವಾಗುತ್ತದೆ. ಆದರೆ ಇದು ಅಂತರಾತ್ಮನಿಂದಲೇ ಅರಿವಿಗೆ ಬರಬೇಕು.ಯಾರೋ ಹೇಳಿದರೆಂದು ಕೇಳಿದರೂ ಮನಸ್ಸು ಯೋಗದೆಡೆಗೆ ಸಾಗದಿದ್ದರೆ ಕೇವಲ ತಾತ್ಕಾಲಿಕ ವಷ್ಟೆ.
ಒಂದು ಸಮುದ್ರದ ನೀರನ್ನು ಒಂದು ಬಿಂದಿಗೆಯಲ್ಲಿ ಹಿಡಿದಿಟ್ಟುಕೊಂಡು ಸಮುದ್ರವನ್ನೇ ಹಿಡಿದಿದ್ದೇನೆಂದರೆ ಸರಿಯಲ್ಲ.ಹಾಗೆ ಅದ್ವೈತ ತತ್ವದ ಆಳ ಅಗಲವನ್ನು ಯಾರೂ ಅಳೆಯಲಾಗದು. ಹೀಗಿರುವಾಗ ನಮಗೆಷ್ಟು ಸಾಧ್ಯವೋ ಅಷ್ಟು ಅರ್ಥ ಮಾಡಿಕೊಂಡು ವಾದ ವಿವಾದಕ್ಕೆ
ಆಸ್ಪದಕೊಡದೆ ಮುಂದೆ ನಡೆದರೆ ಎಲ್ಲರಲ್ಲಿಯೂ ಇರುವ ಪರಮಾತ್ಮನ ದರ್ಶನ ಸಾಧ್ಯ.
ಶ್ರೀ ಶಂಕರಾಚಾರ್ಯರಿಂದ ಹಿಡಿದು ಎಲ್ಲಾ ತತ್ವಜ್ಞಾನಿಗಳ
ಉದ್ದೇಶ ಒಂದೇ ಆದರೂ ಆ ಕಾಲದ ಮಾನವರ ಜ್ಞಾನಸ್ಥಿತಿ, ಪರಿಸ್ಥಿತಿ ಜೊತೆಗೆ ಆರ್ಥಿಕ ಸ್ಥಿತಿಯ ಆಧಾರದಲ್ಲಿ
ಪ್ರಚಾರದಲ್ಲಿ ವ್ಯತ್ಯಾಸವಾಗಿದ್ದರೂ ಇದರಿಂದಾಗಿ ಬೆಳೆದ ಭಿನ್ನಾಭಿಪ್ರಾಯ ದ್ವಂದ್ವವು ಈವರೆಗೆ ಸಾಕಷ್ಟು ಅಸಮಾನತೆ
ಬೆಳೆಸಿದ್ದರೆ ಇದಕ್ಕೆ ತತ್ವ ಕಾರಣವಲ್ಲ ತಂತ್ರವೇ ಕಾರಣ.
ಮಾನವ ಎಲ್ಲಿಯವರೆಗೆ ತಂತ್ರದಿಂದ ಬೇರೆಯವರನ್ನು
ಆಳುವ ರಾಜಕೀಯಕ್ಕೆ ಸಹಕರಿಸುವನೋ ಅಲ್ಲಿಯವರೆಗೆ ತತ್ವದರ್ಶನ ಕಷ್ಟ. ಅದರಲ್ಲೂ ಪ್ರಜಾಪ್ರಭುತ್ವದಲ್ಲಿ ರಾಜ ಯಾರು ಸೇವಕ ಯಾರು? ವಿಶ್ವವಾಳಲು ನಾವ್ಯಾರು ? ನಾನ್ಯಾರು?ಈ ನಾನ್ಯಾರು ಪ್ರಶ್ನೆಗೆ ಉತ್ತರ ಒಳಗಿನಿಂದ ಸಿಗಬೇಕಾದರೆ ತತ್ವವನ್ನು ಒಳಗೆ ಅಳವಡಿಸಿಕೊಂಡು ಸ್ವತಂತ್ರ ವಾಗಿರುವ ಒಂದೇ ಸತ್ಯದೆಡೆಗೆ ಹೋಗಬೇಕೆಂದರು
ಆ ಒಂದೇ ಸತ್ಯ ಧರ್ಮದ ಜೊತೆಗೆ ನಡೆದರೆ ಆತ್ಮಜ್ಞಾನ.
ಆತ್ಮ ಜ್ಞಾನವನ್ನು ಯೋಗದಿಂದ ಗಳಿಸಬೇಕಾದರೆ ಭೋಗ ಜೀವನದಿಂದ ಹೊರಗಿರಬೇಕೆಂದರು ಸಂನ್ಯಾಸಿಗಳು.
ಮಂತ್ರ ತಂತ್ರ ಯಂತ್ರವಿಲ್ಲದೆ ಜೀವನವೇ ಅಸಾಧ್ಯ ಎನ್ನುವ ಪರಿಸ್ಥಿತಿಯಲ್ಲಿ ನಾವೀಗ ಎಲ್ಲವನ್ನೂ ಹೊರಗಿನಿಂದ ಬಳಸಿಕೊಂಡು ಪರಮಾತ್ಮನ ಕಾಣೋದು ಕಷ್ಟ.ಇಲ್ಲಿನ ಪ್ರತಿಯೊಂದು ಆ ಪರಮಾತ್ಮನೇ ನಡೆಸುವುದಾದರೆ ಈಗ ನಡೆದಿರುವ ಭ್ರಷ್ಟಾಚಾರ ಕೂಡ ಅವನ ಪ್ರೇರಣೆಯೆ?
ಪ್ರಜಾಪ್ರಭುತ್ವದಲ್ಲಿ ಎಲ್ಲಾ ಪ್ರಜಾಶಕ್ತಿಯು ದೇಶವನ್ನು ನಡೆಸಿರುವಾಗ ಹೊರಗಿನಿಂದ ಬಂದವರಿಗೇಕೆ ದೇಶ ಕಾಣುತ್ತಿಲ್ಲ? ಅವರ ಜೊತೆಗೆ ನಮ್ಮವರೂ ಯಾಕೆ ಸೇರಿ ದೇಶವಿರೋಧಿ ಕೃತ್ಯಕ್ಕೆ ಸಹಕರಿಸಿದರು? ದೇವರಿಲ್ಲ ಎನ್ನುವ ಮಂದಿಗೇಕೆ ಶಿಕ್ಷೆಯಿಲ್ಲ? ದೇವರಿದ್ದಾನೆನ್ನುವ ಆಸ್ತಿಕರ ಸಮಸ್ಯೆ ಹೆಚ್ಚಾಗಿರೋದು ಯಾಕೆ?
ಇಲ್ಲಿ ಋಣ ಮತ್ತು ಕರ್ಮಕ್ಕೆ ತಕ್ಕಂತೆ ಭಗವಂತ ನಡೆಸಿದಾಗ ಜನ್ಮದ ಪ್ರಾರಂಭದಲ್ಲಿ ಇದ್ದಂತಹ ಸ್ಥಿತಿ ಕೊನೆಯಲ್ಲಿ ಕಾಣಲಾಗದು. ಕೊನೆಯಲ್ಲಿ ಉತ್ತಮವಾಗಿದ್ದರೆ ಪ್ರಾರಂಭದಲ್ಲಿ ಸಾಕಷ್ಟು ಕಷ್ಟ ನಷ್ಟ ಅನುಭವಿಸಿರೋದನ್ನು ಕಾಣುತ್ತೇವೆ.ಇದು ಬಡವರು ಶ್ರೀಮಂತರಲ್ಲಿ ಕಂಡರೂ
ಮಧ್ಯಮವರ್ಗದವರ ಕಥೆ ಬೇರೆ. ಈಕಡೆ ಬಡವರು ಇನ್ನೊಂದು ಕಡೆ ಶ್ರೀಮಂತ ರನ್ನು ಓಲೈಸಿಕೊಂಡು ಒಂದೇ ತಕ್ಕಡಿಯಲ್ಲಿಟ್ಟು ತೂಗುವ ನಾಟಕವಾಡಿದರೂ ಜನರು ನಂಬುವರು. ಹೀಗಾಗಿ ಮಧ್ಯವರ್ತಿ ಮಾನವನಲ್ಲಿ ಬಡವನೂ ಇದ್ದಾನೆ,ಶ್ರೀಮಂತ ನೂ ಅಡಗಿದ್ದಾನೆ. ಬಡತನ ಎಲ್ಲರಿಂದಲೂ ದೂರಮಾಡಿದರೆ ಶ್ರೀಮಂತಿಕೆಗೆ ಜನಬಲ
ಹಣಬಲ ಹೆಚ್ಚಾಗಿ ಅಧಿಕಾರ ಕೊಟ್ಟು ಮೇಲೆ ಕಳಿಸಿ ಕೆಳಗೆ ನಿಂತು ಕಾಲೆಳೆಯೋ ಕೆಲಸ ಮಧ್ಯವರ್ತಿಗಳು ಮಾಡಿ ತಮ್ಮ ಜೀವನ ನಡೆಸುವುದರಿಂದ ತತ್ವಕ್ಕಿಂತ ತಂತ್ರವೇ ಹೆಚ್ಚು ಮುಂದೆ ನಡೆದು ಅತಂತ್ರಸ್ಥಿತಿಗೆ ಜೀವನ ತಲುಪುತ್ತದೆ.
ಒಟ್ಟಿನಲ್ಲಿ ಅದ್ವೈತ ಸಂಶೋಧನೆಗೆ ಹೊರಗಿನ ಸಹಕಾರದ ಅಗತ್ಯವಿಲ್ಲ.ಒಳಗಿನ ಆತ್ಮವಿಶ್ವಾಸ, ಆತ್ಮವಿಮರ್ಷೆ, ಆತ್ಮಸಂಶೋಧನೆ ಅಗತ್ಯವೆಂದಿದ್ದಾರೆ.ಒಗ್ಗಟ್ಟು, ಏಕತೆ ಐಕ್ಯತೆ ಸಮಾನತೆಯು ಒಂದಾಗಿಸುವ ತತ್ವವಾಗಿತ್ತು. ಕಲಿಗಾಲದ ಪ್ರಭಾವದಿಂದಾಗಿ ಅಜ್ಞಾನ ಮಿತಿಮೀರಿ ಮಾನವನಿಗೆ ಭೂಮಿ ಮೇಲಿರುವ ಸತ್ಯ ಸತ್ವ ಕಾಣದೆ ಆಕಾಶದೆತ್ತರ ಹಾರಿದರೂ ತೃಪ್ತಿ ಸಿಗದೆ ಹೊರಗಿನ ರಾಜಕೀಯದ ಹಿಂದೆ ನಡೆಯುತ್ತಾ ಹೋರಾಟ ಹಾರಾಟ ಮಾರಾಟದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ನಾನ್ಯಾರು ಎಂದು ತೋರಿಸಿಕೊಳ್ಳಲು ಮನೆಹೊರಗೆ ನಡೆಯುತ್ತಾ ಮನಸ್ಸು ಹೊರಗೆ ಬೆಳೆದಿದೆ. ಶಿನ ಶರಣರು ದಾಸ ಸಂತರು ಕಂಡ ಪರಮಾತ್ಮ ನಮಗೇಕೆ ಕಾಣಿಸುತ್ತಿಲ್ಲ? ಪರಕೀಯರ ವಶದಲ್ಲಿರುವಾಗ ಕಾಣೋದಕ್ಕೆ ಕಷ್ಟವಿದೆ. ಪರಕೀಯರ ಬಂಡವಾಳ,ಸಾಲ,ವ್ಯವಹಾರ,ಶಿಕ್ಷಣ ನಮ್ಮೊಳಗೇ ಅಡಗಿರುವಾಗ ಇಲ್ಲಿ ನಾವು ಬೇರೆ ಅವರು ಬೇರೆ ಎನ್ನುವುದು ವ್ಯಕ್ತಿಯಷ್ಟೆ. ವ್ಯಕ್ತಿಯನ್ನು ನೋಡುವ ಕಣ್ಣಿಗೆ ಒಳಗಿನ ಪರಮಾತ್ಮನಶಕ್ತಿ ಕಾಣೋದಿಲ್ಲ. ಶಕ್ತಿಯನ್ನು ಗುರುತಿಸುವ ಜ್ಞಾನದ ಶಿಕ್ಷಣದ ಕೊರತೆ ಇದಕ್ಕೆ ಕಾರಣ.
ಎಷ್ಟೇ ಹೊರಗಿನಮಂತ್ರ ತಂತ್ರ ಯಂತ್ರ ಬಳಸಿದರೂ ಮೂಲದ ಸ್ವತಂತ್ರ ಹಿಂದುಳಿದರೆ ಜೀವನ ಅತಂತ್ರ.
ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ತಿಳಿಯೋದಿಲ್ಲ ಎನ್ನುವ ಭ್ರಮೆಯಲ್ಲಿ ಮಾಯೆಯಲ್ಲಿ ಜೀವನ ನಡೆಸಿದರೂ ಪರಮಾತ್ಮನ ಸೃಷ್ಟಿಯನ್ನು ಅರ್ಥ ಮಾಡಿಕೊಂಡು ನಡೆಯುವುದು ರಾಜಕೀಯದಿಂದ ಕಷ್ಟ.
ಸ್ವತಂತ್ರ ಭಾರತದೇಶವೀಗ ಪ್ರಜಾಪ್ರಭುತ್ವದಲ್ಲಿದೆ.ಪ್ರಜೆಗಳ ಜ್ಞಾನ ಮಾತ್ರ ವಿದೇಶದೆಡೆಗೆ ಸಾಗಿದೆ.ಇದನ್ನು ಪ್ರಗತಿಪರ ದೇಶವೆನ್ನುವವರ ಹಿಂದೆ ನಡೆದವರು ಹಿಂದುಳಿದೇ ಇದ್ದಾರೆ.
ಬಡತನವನ್ನು ದುರ್ಭಳಕೆ ಮಾಡಿಕೊಂಡು ಸಾಲದ ಕೂಪಕ್ಕೆ ಬೀಳಿಸಿ ಆಳುವವರೂ ಒಮ್ಮೆ ಆಳಾಗಿ ಜನ್ಮಪಡೆಯಲೇಬೇಕೆಂಬುದು ಅಧ್ಯಾತ್ಮ ಸತ್ಯ.ಹಾಗಾದರೆ ನಾನ್ಯಾರು? ಆಳೋ ಅರಸನೋ?
ನನಗೆ ಈ ವಿಚಾರಗಳು ಒಳಗಿನಿಂದ ಬರುತ್ತಿರುವ ವಿಚಾರ ತಿಳಿಸಿ ಸದ್ಗುರುಗಳಾದ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಸನ್ನಿದಾನಕ್ಕೆ ಹಾಗೆ ವಿಧುಶೇಖರ ಮಹಾಸ್ವಾಮಿಗಳವರ ಸನ್ನಿದಾನಕ್ಕೆ ಬರವಣಿಗೆ ಪುಸ್ತಕ ತಲುಪಿಸುವ ಕಾರ್ಯ ಮಾಡುತ್ತಾ 16 ವರ್ಷಗಳಾಗಿವೆ. ಅವರ ಒಂದು ನುಡಿ ನನ್ನ ಬರವಣಿಗೆ ಆಳವಾಗಿ ಚಿಂತನೆ ನಡೆಸುವಂತೆ ಮಾಡಿದೆ.ಯಾರ ಪ್ರತಿಕ್ರಿಯೆಯ ನಿರೀಕ್ಷೆ ಬಿಟ್ಟು ಬರೆಯೋದು, ಯಾವುದೇ ಹಣ ಅಧಿಕಾರಕ್ಕಾಗಿ ಬೇಡದೆ ಇರೋದು, ದೇಶಕಾಲಮಾನಕ್ಕೆ ತಕ್ಕಂತೆ ತತ್ವದರ್ಶನ ಮಾಡಿಕೊಂಡು ಹೋಗುವುದು. ಸಾಮಾನ್ಯ ಪ್ರಜೆಯಾಗಿ ಗೃಹಿಣಿಯಾಗಿ ಸ್ವತಂತ್ರ ಭಾರತವನ್ನು ನೋಡಿದಾಗ ದೇಶ ಒಂದೇ ಆದರೂ ಒಳಗಿರುವ ಅಸಂಖ್ಯಾತ ಧರ್ಮ, ಪಂಗಡ,ಜಾತಿಪಕ್ಷಪಾತವು ದೇಶವನ್ನು ಒಡೆಯುತ್ತಿದೆ. ಒಡೆಯಲು ಸಹಕರಿಸುವವರಿಗೆ ಒಟ್ಟುಗೂಡಿಸುವ ಜ್ಞಾನವಿಲ್ಲ.ಒಟ್ಟುಗೂಡಿಸುವ ಜ್ಞಾನಿಗಳಿಗೆ ಸರಿಯಾದ ಸಂಘವಿಲ್ಲ. ಆದರೂ ಸ್ವತಂತ್ರ ವಾಗಿರುವ ಸತ್ಯಕ್ಕೆ ಚ್ಯುತಿ ಬರೋದಿಲ್ಲ.ಅತಂತ್ರವಾಗಿಸುವ ಮಿಥ್ಯವೇ ಪರಿಸ್ಥಿತಿಗೆ ಕಾರಣವೆನ್ನುವುದಾಗಿದೆ. ಇದರಿಂದ ಬಿಡುಗಡೆ ಪಡೆಯಲು ತತ್ವವನರಿತು ನಡೆಯಬೇಕು.ಇದು ಮನೆಯೊಳಗೆ ಹೊರಗೆ ಸಮಾನತೆ ತಂದರೆ ಮುಕ್ತಿ.
ಹೆಚ್ಚು ಓದಿ ತಿಳಿಯುವುದಕ್ಕಿಂತ ಏನೂ ಓದದೆ ಸ್ವತಂತ್ರ ಸರಳ ಜೀವನ ನಡೆಸುವ ಯೋಗಿಯೇ ಶ್ರೇಷ್ಠ ವೆಂದರು.
ತಂತ್ರದಿಂದ ಸ್ವತಂತ್ರ ಜ್ಞಾನ ಪಡೆದರೆ ಉತ್ತಮ. ಆದರೆ ಅಧ್ವೈತ ವು ತಂತ್ರದಿಂದ ಬೆಳೆಸೋವಾಗಅಹಂಕಾರ ಸ್ವಾರ್ಥದ ರಾಜಕೀಯವಾಗದಂತೆ ಎಚ್ಚರವಹಿಸುವುದು ಅಗತ್ಯ. ಗುರುವನ್ನೇ ಶಿಷ್ಯ ಆಳುವಂತಾಗಬಾರದು. ಈ ಕಾರಣಕ್ಕಾಗಿ ಹಿಂದಿನ ಎಲ್ಲಾ ಮಹಾತ್ಮರುಗಳ ಸಂಶೋಧನೆಯು ಯೋಗಮಾರ್ಗ, ಯೋಗ್ಯ ಗುರುಗಳ ಮಾರ್ಗದರ್ಶನ, ಯೋಗ ಶಾಸ್ತ್ರ ಯೋಗ ಜೀವನದೆಡೆಗೆ ಸಾಗಿತ್ತು. ಕಾಲಾಂತರದಲ್ಲಿ ಧರ್ಮಾಂತರ, ವರ್ಣಾಂತರ,
ಜಾತ್ಯಾಂತರ, ಪಕ್ಷಾಂತರ,ದೇಶಾಂತರವೇ ಬೆಳೆಯುತ್ತಾ ಆಂತರಿಕ ಶುದ್ದಿ ಕುಸಿದು ಆಂತರಿಕ ಸತ್ಯ ಬಿಟ್ಟು ಭೌತಿಕ ಸತ್ಯವೇ ಇನ್ನಷ್ಟು ಅಂತರ ಬೆಳೆಸಿ ಅಧರ್ಮ ,ಅನ್ಯಾಯ,
ಅಸತ್ಯವನ್ನು ಹಣದಿಂದ ಗೆಲ್ಲಿಸುವ ಹಂತಕ್ಕೆ ಮಾನವ ಬಂದಿದ್ದರೆ ಇದರಿಂದ ಜೀವ ಅಂತ್ಯ ಕಾಣಬಹುದು ಆತ್ಮವಲ್ಲ. ಮಾಡಿದ್ದುಣ್ಣೋ ಮಹಾರಾಯ ಎಂದಿರೋದು ಇದಕ್ಕೆ .ಭೂಮಿಯಲ್ಲಿ ಹೇಗೆ ಬದುಕಬೇಕು ಎಂದು ತೋರಿಸುವ ತತ್ವ ಜ್ಞಾನವೇ ತನ್ನ ಜೀವರಕ್ಷಣೆಗಾಗಿ ಆತ್ಮವಂಚನೆ ಮಾಡಿಕೊಳ್ಳಲು ತಂತ್ರ ದೆಡೆಗೆ ಹೊರಟರೆ ಪರಮಾತ್ಮನು ಕಾರಣನಾಗೋದಿಲ್ಲವೆಂದಿದ್ದಾರೆ ಮಹಾತ್ಮರು. ಈಗಲೂ ಸಾಕಷ್ಟು ಮಹಾತ್ಮರಿದ್ದಾರೆ ದೇಶವಿದೇಶದಲ್ಲಿ ಹಂಚಿಹೋಗಿರುವ ಕಾರಣ ಅಲ್ಪ ಸಂಖ್ಯೆ ಕಂಡರೂ ಇಡೀ ವಿಶ್ವಕಲ್ಯಾಣಕ್ಕೆ ಅವರ ಸಾಧನೆಯು ಪೂರಕವಾಗಿದೆ. ಹಿಂದೂ ಧರ್ಮದ ಬೇರನ್ನು ಕೀಳುವ ಶಕ್ತಿ ಯಾರಿಗೂ ಇಲ್ಲ. ಎಲ್ಲಾ ಹಿಂದಿನವರ ಸತ್ವ ಗುಣದೆಡೆಗೆ ನಡೆದರೆ ಹಿಂದೂ ಧರ್ಮದ ತತ್ವಜ್ಞಾನದಿಂದ ಧರ್ಮ ರಕ್ಷಣೆ ಸಾಧ್ಯವಿದೆ.ಇದಕ್ಕೆ ಸರಿಯಾದ ಒಗ್ಗಟ್ಟು ಸಹಕಾರ ಅಗತ್ಯವಿದೆ
ಸತ್ಯ ಯಾವತ್ತೂ ಸಾಯೋದಿಲ್ಲ. ನಾನೆಂಬುದು ತಾತ್ಕಾಲಿಕ ನಾನೆಂಬುದಿಲ್ಲವೆನ್ನುವುದು ಶಾಶ್ವತ ಸತ್ಯ.
ಸಂಸ್ಕೃತ ದಿಂದ ಸಂಸ್ಕೃತಿ ಬೆಳೆದಿಲ್ಲವಾದರೂ ಸಂಸ್ಕೃತ ಭಾಷೆಯ ಜ್ಞಾನಶಕ್ತಿ ಬಹಳವಾಗಿದೆ. ಸಂಸ್ಕಾರಯುತ ಕೃತಿಯೇ ಸಂಸ್ಕೃತಿ.
ಸಂಸ್ಕಾರವೆಂದರೆ ಶುದ್ದವಾದ ನಡೆ ನುಡಿಯಾಗುತ್ತದೆ. ಅದ್ವೈತ ದೊಳಗಿರುವ ದ್ವೈತ ಬೇರೆಯಾಗಿಸೋದು ಸುಲಭ ಆದರೂ ಅದು ಬೇರೆಯಾಗಿಲ್ಲ ಎಂದು ತಿಳಿಯುವುದು ಕಷ್ಟ. ಭಾರತದೇಶದೊಳಗಿನ ಪ್ರಜೆಗಳು ಭಾರತೀಯತೆ ಬಿಟ್ಟು ಬದುಕಿದರೆ ಹೇಗೆ ಬೇರೆ ಆಗುವರೋ ಹಾಗೆ ಮಾನವ ದೈವತ್ವ ಬಿಟ್ಟು ಹೊರಗೆ ನಡೆದಷ್ಟೂ ಬೇರೆಯಾಗಿಯೇ ಮೂಲ ಬಿಟ್ಟು ಇರುವನು.ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ. ಎನ್ನುವುದು ಸತ್ಯವಾಗಿದ್ದರೂ ಸುಮ್ಮನಿರಲಾಗದ ಪರಿಸ್ಥಿತಿಯಿದೆ. ಆಗೋದೆಲ್ಲಾ ಒಳ್ಳೆಯದಕ್ಕೆ ಒಳ್ಳೆಯದೇ ಆಗೋದು. ಕೆಟ್ಟದ್ದು ಬಿಟ್ಟರೆ ಒಳ್ಳೆಯದು ಬೆಳೆಯುವುದು.
ಎಲ್ಲಾ ಒಳಗಿದೆ ಹೊರಗಿನಿಂದ ಹಾಕಿಕೊಳ್ಳುವಾಗ ಎಚ್ಚರವಾಗಿರಬೇಕೆನ್ನುವರು. ರಾಮನೊಳಗೆ ರಾವಣನಿದ್ದರೂ ರಾಮತತ್ವವೇ ಬೇರೆ ರಾವಣನ ತಂತ್ರವೇ ಬೇರೆಯಾಗಿತ್ತು. ಶ್ರೀ ಶಂಕರಚಾರ್ಯ ಶ್ರೀ ರಾಮಾನುಜಾಚಾರ್ಯರ ಕಾಲದಲ್ಲಿ ಅಂತರವಿದ್ದರೂ ತತ್ವದರ್ಶನ ಒಂದೇ ಆಗಿತ್ತು.ತತ್ವ ಯಾವತ್ತೂ ಜನರನ್ನು ಒಂದುಗೂಡಿಸುವುದಾಗಿದೆ. ತಂತ್ರ ಬೇರೆ ಮಾಡುತ್ತದೆ.
ಎಲ್ಲಾ ತತ್ವಜ್ಞಾನಿಗಳಿಗೂ ನಮೋ ನಮ:
No comments:
Post a Comment