ಭಾರತೀಯರು ಎಡವಿದ್ದೆಲ್ಲಿ? ರಾಜಕೀಯ ಶಿಕ್ಷಣದಲ್ಲಿ ಎನ್ನಬಹುದು. ಪುರಾಣ,ಇತಿಹಾಸದ ಎಲ್ಲಾ ವಿಚಾರದಲ್ಲೂ ರಾಜಯೋಗದ ಧರ್ಮವೂ ಇದೆ ರಾಜಕೀಯದ ಅಧರ್ಮವೂ ಇದೆ. ಪ್ರಚಾರಕರು ಧರ್ಮಬಿಟ್ಟು ಅಧರ್ಮವನ್ನು ಎತ್ತಿ ಹಿಡಿದು ಬೆಳೆಸಿದರು. ಅದೇ ಜನರೊಳಗೆ ಸೇರುತ್ತಾ ಕೊನೆಗೆ ಇಡೀ ದೇಹದ ಜೊತೆಗೆ ದೇಶ ಆವರಿಸಿ ಈಗದು ಆಳುತ್ತಿದೆ.ಯಾವುದನ್ನು ಬೆಳೆಸುವೆವೋ ಹರಡುವೆವೋ ಅದೇ ಬೆಳೆಯುವುದಲ್ಲವೆ? ಅದಕ್ಕೆ ಹಿರಿಯರು ಗುರುಗಳು ಹೇಳಿರುವುದು ಎಲ್ಲಾ ಪರಮಾತ್ಮನ ಇಚ್ಚೆಯಂತೆ ನಡೆಯುವಾಗ ಸಕಾರಾತ್ಮಕ ಚಿಂತನೆ,
ವಿಚಾರಗಳನ್ನು ಬೆಳೆಸಿಕೊಂಡರೆ ಶಾಂತಿ ಎಂದು.
ಆಗೋದನ್ನು ತಡೆಯಲಾಗದು, ಆಗೋದೆಲ್ಲಾ ಒಳ್ಳೆಯದಕ್ಕೆ, ಆದ ಮೇಲೆ ಅರ್ಥ ವಾಗೋದು.ಅರ್ಥ ಮಾಡಿಕೊಳ್ಳಲು ಯೋಗಬೇಕು.ಭೋಗದೆಡೆಗೆ ಹೋದವರಿಗೆ ಯೋಗದ ಅರ್ಥ ತಿಳಿಯುವುದು ಕಷ್ಟ. ಆದರೂ ಕಾಲ ಬಂದಾಗ ಅರ್ಥ ಮಾಡಿಸುವವನೂ ಪರಮಾತ್ಮನೆ. ಒಟ್ಟಿನಲ್ಲಿ ಇಲ್ಲಿ ನಾನಿದ್ದರೂ ನಾನೆಂಬುದಿರಲಿಲ್ಲ.ಅಧ್ವೈತ ದಿಂದ ರಾಜಕೀಯ ನಡೆಸಲಾಗದು ದ್ವೈತದಲ್ಲಿ ರಾಜಕೀಯ ವಿದೆ. ರಾಜಕೀಯ ಧರ್ಮದೆಡೆಗೆ ನಡೆದರೆ ಶಾಂತಿ,ತೃಪ್ತಿ ಮುಕ್ತಿ. ಅಧಿಕಾರ ದಾಹದಲ್ಲಿ ದೇಶದಲ್ಲಿ ದೇಹದಲ್ಲಾಗುವ ಕೆಟ್ಟ ಬದಲಾವಣೆ ಎಲ್ಲರಿಗೂ ತಿರುಗಿ ಕೊಡುವಾಗ ಯಾರನ್ನು ದೂಷಿಸಬೇಕು?
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಸಹಕಾರವೇ ಇದಕ್ಕೆ ಕಾರಣ.
ನಾವು ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ ಭ್ರಷ್ಟಾಚಾರ ತೊಲಗಿಸುತ್ತೇವೆಂದರೆ ಸಾಧ್ಯವೆ? ಶಿಕ್ಷಣವೇ ಭ್ರಷ್ಟಾಚಾರದ ವಶವಾಗುತ್ತಿದೆ ಎಂದರೆ ಒಳಗೆಳೆದುಕೊಂಡ ವಿಷಯದಲ್ಲೇ ವಿಷವಿದ್ದರೆ ಅಮೃತವಾದ ತತ್ವ ದರ್ಶನ ಸಾಧ್ಯವೆ?
ಸಾಧ್ಯವಾದವರು ರಾಜಕೀಯದಲ್ಲಿರುವ. ವಿಷವನ್ನು ಹೊರ ಹಾಕಲು ತಮ್ಮ ಅಧಿಕಾರ,ಸ್ಥಾನ,ಹಣವನ್ನು ಸದ್ಬಳಕೆ ಮಾಡಿಕೊಂಡರೆ ಧರ್ಮ. ಇದರಲ್ಲೂ ಭ್ರಷ್ಟಾಚಾರ ಅಡಗಿದ್ದರೆ ಹೊರಬಂದು ಸ್ವತಂತ್ರವಾಗಿ ಚಿಂತನೆ ನಡೆಸಿ ನಡೆಯುವ ಸ್ವಾತಂತ್ರ್ಯ ವಿದೆ.ಇದಕ್ಕೆ ಮನಸ್ಸು ಬೇಕಷ್ಟೆ.
ವೇದಗಳಲ್ಲಿ ಕೆಲವರು ಪರಮಾತ್ಮನ ಕಾಣೋದಕ್ಕೆ ಮನಸ್ಸಿನಿಂದ ಸಾಧ್ಯವಿದೆ ಎಂದರೆ ಕೆಲವರು ಅಸಾಧ್ಯ ಎಂದರಂತೆ ಅಲ್ಲಿ ದ್ವೈತವಿತ್ತು.ನಂತರ ಶ್ರೀ ಶಂಕರ ಭಗವತ್ಪಾದರು ಬಂದು ಪರಮಾತ್ಮನ ಕಾಣೋದಕ್ಕೆ ಶುದ್ದ ಮನಸ್ಸಿನ ಅಗತ್ಯವಿದೆ ಎಂದು ಸ್ಪಷ್ಟ ಪಡಿಸಿದರಂತೆ.ಅಂದರೆ
ಇಲ್ಲಿ ದೇಶವನ್ನು ಶುದ್ದವಾಗಿಡಲು ಪ್ರಜೆಗಳಲ್ಲಿ ಶುದ್ದಜ್ಞಾನದ ಅಗತ್ಯವಿತ್ತು. ಶಿಕ್ಷಣವೇ ಅಶುದ್ದವಾಗಿದ್ದರೆ ಸ್ವಚ್ಭ ಭಾರತ ಹೇಗೆ ಸಾಧ್ಯ?
ಮೊದಲು ಪ್ರಜೆಗಳಾಗಿರುವ ಜ್ಞಾನಿಗಳು, ವಿಜ್ಞಾನಿಗಳು ತಮ್ಮ ಅಂತರದಲ್ಲಿ ಬೆಳೆದಿರುವ ಅಜ್ಞಾನಕ್ಕೆ ನಾವೆಷ್ಟು ಕಾರಣವೆಂಬುದರ ಬಗ್ಗೆ ಚಿಂತನೆ ನಡೆಸಿ ಜನರ ಬಳಗೆ ಹೋದರೆ ನಿಜವಾದ ಸ್ವಚ್ಚತೆ ಜನಸಾಮಾನ್ಯರಲ್ಲಿದೆ. ಅದನ್ನು ದುರ್ಭಳಕೆ ಮಾಡಿಕೊಂಡು ಆಕಡೆ ಈಕಡೆ ಎಳೆದಾಡುವ ಮಧ್ಯವರ್ತಿಗಳ ಮಾಧ್ಯಮಗಳ ಪ್ರಚಾರಕರ ಶುದ್ದತೆ ಅಗತ್ಯವಿದೆ. ಯಾರು ಮಾಡುವರು? ಮನೆ ಮನೆಗೆ ಸುಲಭವಾಗಿ ತಲುಪುವ ವಿಷಯಗಳಲ್ಲಿ ಶುದ್ದತೆ ಇದೆಯೆ?
ಇದನ್ನು ಪ್ರಜೆಗಳೆ ಎಚ್ಚರವಾಗಿ ಗಮನಿಸಿದರೆ ನಮ್ಮ ಚಿತ್ತ ರಾಜಕೀಯದತ್ತ ನಡೆದಿರೋದೆ ಅಜ್ಞಾನದ ಸಂಕೇತ. ಇದರ ಪ್ರತಿಫಲ ಸಾಲ. ಜೀವ ಸಾಲ ತೀರಿಸಲು ಭೂಮಿಗೆ ಬಂದಿದೆ.ಇಲ್ಲಿ ಇನ್ನಷ್ಟು ಸಾಲ ಹೊತ್ತು ಹೋದರೆ ಜೀವನ್ಮುಕ್ತಿ ಸಿಗುವುದೆ? ಹಿಂದಿನ ಮಹಾತ್ಮರನ್ನು ಪೂಜಿಸುವ ಅಗತ್ಯವಿಲ್ಲ ಅವರ ತತ್ವವನರಿತು ನಡೆ ನುಡಿಯನ್ನು ಶುದ್ದಗೊಳಿಸಿಕೊಳ್ಳಲು ಪ್ರಯತ್ನಪಟ್ಟರೆ ಇದ್ದಲ್ಲಿಯೇ ಅವರು ಸಹಕಾರ ಆಶೀರ್ವಾದ ಮಾಡಿ ಮೇಲೆತ್ತುವರು.ಇದಕ್ಕೆ ಹೊರಗಿನ ಸಹಕಾರದ ಅಗತ್ಯವಿಲ್ಲ.ಒಳಗಿನವರ ಸಹಕಾರ ಬೇಕಿತ್ತು. ಒಳಗಿನವರೆ ದ್ವೇಷ ಮಾಡಿದರೆ ಹೊರಗಿನವರು ಆಳುವರಲ್ಲವೆ? ಸಾಮಾನ್ಯ ಜನರ ಸಾಮಾನ್ಯಜ್ಞಾನ ಕುಸಿಯಲು ವಿಜ್ಞಾನವೇ ಕಾರಣ.
ಕಲಿಯುಗದ ಜನರಿಗೆ ಕಲಿಯುವುದು ಬಹಳಷ್ಟಿದೆ.ಆದರೆ ಯಾವುದನ್ನು ಕಲಿತರೆ ಶಾಂತಿ ಸಮಾಧಾನ ತೃಪ್ತಿ ಮುಕ್ತಿ ಸಿಗುವುದೆನ್ನುವುದನ್ನು ಕಲಿಸುವುದರಲ್ಲಿ ಸೋತಿದ್ದಾರೆ. ನಮ್ಮೊಳಗೇ ಇರುವ ಸತ್ಯವನ್ನು ಬಿಟ್ಟು ಹೊರಗಿನ ಅಸತ್ಯದ ಕಡೆಗೆ ನಡೆದರೆ ಕಲಿಕೆಯಾಗದು. ಸತ್ಯದ ಜೊತೆಗೆ ಸತ್ಯವನ್ನು ಜೋಡಿಸಿಕೊಳ್ಳುವುದೇ ನಿಜವಾದ ಸತ್ಯಜ್ಞಾನ ಆತ್ಮಜ್ಞಾನ.
ನಾಟಕದಲ್ಲಿ ನಾಟಕ ಮಾಡಿದರೆ ಹೊಟ್ಟೆ ತುಂಬಬಹುದು.
No comments:
Post a Comment