ನನ್ನ ಸಂಸಾರದ ಭಾರ ಹೋರಲಾರದವರು ಸಮಾಜದ ಭಾರ ಹೋರುವರೆ? ಹೊತ್ತರೂ ಸಮಾಜವೇ ಅವರನ್ನು ನಡೆಸುವಾಗ ಭಾರವಿರುವುದೆ? ಹಾಗೆಯೇ ಪರಮಾತ್ಮನ ನಂಬಿನಡೆದವರಿಗೆ ಎಲ್ಲಾ ಕೆಲಸವೂ ಹಗುರವಾಗಿರುತ್ತಿತ್ತು.ಯಾವಾಗ ಮಾನವ ಪರಮಾತ್ಮನಿಲ್ಲ ನಾನೇ ಎಲ್ಲಾ ಎಂದುಮುಂದೆ ನಡೆದನೋ ಆಗಲೇ ಎಲ್ಲಾ ಭಾರವೂ ಹೊತ್ತುಕೊಂಡು ಸಾಲದ ಹೊರೆ ಏರಿಸಿಕೊಂಡು ಮಾಡಬಾರದ ಕರ್ಮ ಮಾಡುತ್ತಾ ಇದ್ದಾಗಲೇ ಹೆಣಭಾರವಾಗುತ್ತಾನೆ. ಮಕ್ಕಳನ್ನು ಹೊತ್ತು ಹೆತ್ತ ತಾಯಿಯನ್ನು ಸಾಕಲಾಗದವರು ಭೂಮಿ ಆಳಲು ಹೊರಡುವರು. ಎಂತಹ ಕಾಲ ಬಂದಿದೆ...ಎಚ್ಚರವಾದರೆ ಪರಮಾತ್ಮನಿಗೇ ಎಲ್ಲಾ ಭಾರ ಹೋರಿಸಿ ಸಂನ್ಯಾಸಿಯಂತೆ ಸ್ವತಂತ್ರ ವಾಗಿ ಕಾಡಿನಲ್ಲಿರಬಹುದು. ಕಾಡನ್ನೂ ಬಿಡದೆ ಆಳಲು ಹೊರಟು ಕಾಡು ಪ್ರಾಣಿಗಳೇ ನಾಡಿಗೆ ಬರುವಂತಾಗಿದೆ.ಆದರೂ ಜೀವ ಪ್ರಾಣ ಇರುವವರೆಗೆ ನಡೆಯಲೇಬೇಕು. ಸಂಸಾರಿಗಳ ಕಥೆ ಬೇರೆ.ಒಬ್ಬರೊಬ್ಬರು ಹೊಂದಿಕೊಂಡು ಹೋಗುವುದೇ ಭಾರವಾಗಿರುವಾಗ ಪರಮಾತ್ಮ ಕಾಣೋದು ಹೇಗೆ ಸಾಧ್ಯ.
ಕಲಿಗಾಲ ಎಲ್ಲಾ ಕಲಿಸುತ್ತಾ ತಾವೇ ಅನಾವಶ್ಯಕ ವಾಗಿ ಹೊತ್ತ ಭಾರವನ್ನು ಇಳಿಸುತ್ತದೆ. ಯಾರ ಜವಾಬ್ದಾರಿ ಯಾರೋ ಹೊತ್ತು ನಡೆಯಲು ಎಷ್ಟು ಸಾಧ್ಯ? ಸಹಾಯವನ್ನು ಹಣದಿಂದ ಮಾಡಿದರೆ ಋಣ ಬೆಳೆಯುತ್ತದೆ, ಕೆಲಸ ಮಾಡಿ ಸಹಕರಿಸಿದರೆ ಇನ್ನಷ್ಟು ಮಾಡಲಿ ಎನ್ನುವ ಆಸೆ ಹೆಚ್ಚುತ್ತದೆ. ಹೀಗೇ ಋಣ ತೀರಿಸಲು ಬಂದ ಜೀವಕ್ಕೆ ಜೀವಮಾನವಿಡೀ ದುಡಿದರೂ ಸಂತೃಪ್ತಿಯಿಲ್ಲ.ಕಾರಣವಿಷ್ಟೆ ಎಲ್ಲದರಲ್ಲೂ ಪ್ರತಿಫಲ ಅಪೇಕ್ಷೆ, ಸ್ವಾರ್ಥ, ಅಹಂಕಾರದ ಕರ್ಮದಲ್ಲಿ ಪರಮಾತ್ಮ ಕಾಣದೆ ಭೌತಿಕ ಜಗತ್ತು ಬೆಳೆದಿರೋದು. ಮನಸ್ಸಿಗೆ ಸಾಕಷ್ಟು ವಿಷಯಗಳನ್ನು ತುಂಬಿ ಮನಸ್ಸು ಭಾರವಾದಾಗ ಇಳಿಸಲಾಗದೆ ನಿದ್ರೆ ಹೋದರೂ ಒಳಗಿರೋದು ಹೊರಗೆ ಹೋಗದ ಕಾರಣ ಅದೇ ಭಾರ. ಇದಕ್ಕೆ ಪರಿಹಾರವೇ ಸಾತ್ವಿಕ ಆಹಾರ,ಶಿಕ್ಷಣ ವಿಷಯಗಳನ್ನು ತುಂಬಿ ಸತ್ವಯುತ ಜೀವನ ನಡೆಸಿ ಸ್ವಾವಲಂಬನೆ, ಸ್ವಾಭಿಮಾನ ಸ್ವತಂತ್ರ ಜ್ಞಾನ ಪಡೆಯುವುದೆಂದಿದ್ದರು. ನಾವು ಓದುವ ವಿಷಯವು ಹಿಂದಿನ ಸತ್ಯಕ್ಕೆ ವಿರುದ್ದವಿರದೆ ವಾಸ್ತವತೆಗೆ ದೂರವಿರದಿದ್ದರೆ ಉತ್ತಮ ಭವಿಷ್ಯವಿದೆ.
ಕಾಲಮಾನಕ್ಕೆ ತಕ್ಕಂತೆ ಜೀವನ ನಡೆಸುವುದು ಸರಿ. ತತ್ವವಿಲ್ಲದೆ ತಂತ್ರವೇ ಹೆಚ್ಚಾದರೆ ಭಾರತದಂತಹ ಮಹಾದೇಶಕ್ಕೆ ಭಾರ ತಡೆಯಲಾಗದು.ಸ್ವದೇಶದ ಸಮಸ್ಯೆಯೇ ಇಷ್ಟೊಂದು ಇರೋವಾಗ ವಿದೇಶಿಗಳನ್ನೂ ಒಳಗೆ ಕೂರಿಸಿಕೊಂಡರೆ ಇನ್ನಷ್ಟು ಅಜ್ಞಾನದ ಭಾರ. ಅಜ್ಞಾನ ಎಂದರೆ ಜೀವನ ಸತ್ಯವನ್ನು ಸರಿಯಾಗಿ ತಿಳಿಯದ ನಡೆ- ನುಡಿ ಆಗುತ್ತದೆ.
ಭಾರತಮಾತೆ ಯಾವ ಬೇಧಭಾವವಿಲ್ಲದೆ ತನ್ನ ಗರ್ಭದ ಶಿಶುವಿಗೇ ಕೊಡುವ ಆಹಾರ ಆರೋಗ್ಯ ಕೊಡಬಹುದು.ಆದರೆ, ಬೆಳೆದಮಕ್ಕಳು ಅವಳಿಗೇ ವಿರುದ್ದ ನಿಂತು ಆಳಿದರೆ ಅಧರ್ಮಕ್ಕೆ ತಕ್ಕಂತೆ ಶಿಕ್ಷೆ ನೀಡುವ ಶಕ್ತಿ ಅವಳಲ್ಲಿದೆ. ಒಲಿದರೆ ನಾರಿ ಮುನಿದರೆ ಮಾರಿ ಎಂದಿದ್ದಾರೆ.
ಕೋಶ ಓದು ದೇಶ ಸುತ್ತು ಎಂದರು. ಯಾವ ಕೋಶ ಓದಿದರೆ ಇಡೀ ದೇಶವೇನು ವಿಶ್ವವೇ ಮನಸ್ಸಿನ ಮೂಲಕ ಸುತ್ತಬಹುದೆನ್ನುವ ಬಗ್ಗೆ ತಿಳಿಯುವುದು ಅಗತ್ಯವಾಗಿತ್ತು. ಹೊರಗಿನಿಂದ ಎಷ್ಟೇ ತಂದು ಒಳಗಿಟ್ಟುಕೊಂಡರೂ ಮತ್ತೆ ಹೊರಗೆ ಕಳಿಸದಿದ್ದರೆ ಒಳಗೇ ತಮ್ಮ ಸಾಮ್ರಾಜ್ಯ ಸ್ಥಾಪನೆ ಮಾಡಿಕೊಂಡು ಇಡೀ ದೇಹ ಆಳುತ್ತದೆ. ಓದಿದವರೆಲ್ಲರೂ ಬುದ್ದಿವಂತ ಜ್ಞಾನಿಗಳಾಗಿಲ್ಲ. ಓದದವರೆಲ್ಲರೂ ದಡ್ಡರಾಗಿ ಜೀವನ ನಡೆಸದೆ ಕುಳಿತಿಲ್ಲ. ಇಬ್ಬರ ಅಂತರದಲ್ಲಿ ರಾಜಕೀಯ ಬೆಳೆದು ನಿಂತು ಜನರನ್ನು ಆಡಿಸಿದೆ ಎಂದರೆ ತಪ್ಪಿಲ್ಲ.
ಸಾಲದ ಹೊರೆ ಹೆಚ್ಚಾಗಿದ್ದರೆ ಮಕ್ಕಳಿಗಾಗಿ ಮಾಡಿಟ್ಟ ಆಸ್ತಿ ಕೊಟ್ಟು ಮಕ್ಕಳನ್ನು ಸಾಲದ ಹೊರೆಯಿಂದ ಇಳಿಸಬಹುದು. ಇಲ್ಲವಾದರೆ ಕಷ್ಟಪಟ್ಟು ದುಡಿದು ತೀರಿಸಲೇಬೇಕು. ಅಡ್ಡದಾರಿ ಹಿಡಿದರೆ ಸೀದಾದಾರಿಗೆ ಬರೋವರೆಗೂ ಅಂತಿಮಗುರಿ ತಲುಪಲಾಗದು.ಅಂದರೆ ಅಲ್ಲಿರುವುದು ನಮ್ಮನೆ ಇಲ್ಲಿಗೆ ಬಂದೆ ಸುಮ್ಮನೆ ಎಂದಿದ್ದಾರೆ. ಸಾಲ ತೀರಿಸುವ ಒಂದೇ ಮಾರ್ಗ ಸ್ವಧರ್ಮ ಸತ್ಕರ್ಮ ಸತ್ಯದ ಸಂಗ.ಸತ್ಯ ಒಂದೇ ಅದೇ ಒಳಗೂ ಹೊರಗೂ ಇದೆ. ಹೊರಗೆ ಹುಡುಕುವ ಮೊದಲು ಒಳಗೆ ಬೆಳೆಸಿಕೊಂಡರೆ ಸಿಗುತ್ತದೆ.
No comments:
Post a Comment