ಎಲ್ಲದ್ದಕ್ಕೂ ಕಾರಣ ಸ್ತ್ರೀ ಯೋ ಪುರುಷನೋ?
ಸ್ತ್ರೀ ಪುರುಷನೆನ್ನುವ ಅಜ್ಞಾನವೋ? ಎಲ್ಲದ್ದಕ್ಕೂ ಕಾರಣವೇ ಅಜ್ಞಾನವೆಂಬ ಮುಸುಕು ಮಾನವನ ಮನಸ್ಸನ್ನು ಸುತ್ತಿಕೊಂಡು ಆಡಿಸುವ ಮಾಯೆ.
ಇಲ್ಲಿ ಮಾಯೆ ಎನ್ನುವ ಶಕ್ತಿ ಸ್ತ್ರೀ ಯಲ್ಲಿ ಹೆಚ್ಚಾಗಿರುವ ಕಾರಣ ಸ್ತ್ರೀ ಕಾರಣವೆಂದಿರಬಹುದಷ್ಟೆ.
ಅಜ್ಞಾನದಲ್ಲಿ ಭೌತಿಕದ ಜಗತ್ತಿನ ವ್ಯವಹಾರ ನಡೆದಿದೆ.ವ್ಯವಹಾರದಿಂದ ಹಣಗಳಿಸುತ್ತಾ ಮಾನವ ಕೊನೆಗೆ ಭೂಮಿಯನ್ನು ಖರೀದಿಸಿ ಸ್ತ್ರೀ ಯನ್ನು ವರಿಸಿ ಸಂಸಾರಕ್ಕೆ ಬಂದಾಗ ಅವನಿಗೆ ಸ್ತ್ರೀ ಸಹಕಾರವಿದ್ದರಷ್ಟೆ ಭೂಮಿ ಆಳಲು ಸಾಧ್ಯ. ಸ್ತ್ರೀ ಸಂಸಾರ ಬಿಟ್ಟು ರಾಜಕೀಯಕ್ಕೆ ಇಳಿಯಲು ಸಹಕರಿಸುವಳೋ ಅಥವಾ ಸಂಸಾರದಲ್ಲಿದ್ದು ರಾಜಕೀಯಕ್ಕೆ ಸಹಕರಿಸುವಳೋ ಅವಳ ಸಹಕಾರವೇ ಪುರುಷ ಅಥವಾ ವ್ಯಕ್ತಿ ರಾಜಕೀಯ ನಡೆಸಬಹುದು. ಕೆಲವರು ಭೂಮಿ ಖರೀದಿಸದೆ ಸಂನ್ಯಾಸಿಯಾಗಿದ್ದರೂ ರಾಜಕೀಯ ಕ್ಷೇತ್ರಕ್ಕೆ ಬಂದು ದೇಶವಾಳುತ್ತಾರೆ. ಇದರಲ್ಲೂ ಕೂಡ ನಮ್ಮ ಭಾರತ ಮಾತೆಯ. ಆಶೀರ್ವಾದ ಭಾರತೀಯರ ಸಹಕಾರವಿಲ್ಲದೆ ಸಾಧ್ಯವಿಲ್ಲ. ಹೀಗಿರುವಾಗ ಎಲ್ಲಾ ಅನಾಹುತಕ್ಕೆ ಸ್ತ್ರೀ ಕಾರಣ ಎನ್ನಬಹುದೆ? ಅಥವಾ ಎಲ್ಲಾ ಒಳ್ಳೆಯದಕ್ಕೆ ಸ್ತ್ರೀ ಕಾರಣ ಎನ್ನಬಹುದೆ?
ಯಾರಿಗೆ ಹೇಗೆ ತೋರುವುದೋ ಹಾಗೆ ಮನಸ್ಸನ್ನು ಬೆಳೆಸಿ ಎಲ್ಲದ್ದಕ್ಕೂ ನಾನೇ ಕಾರಣ ಎನ್ನುವ ಬದಲಾಗಿ ಜೊತೆಗೆ ಇದ್ದು ಸಹಕರಿಸಿದವರಿಗೇ ನೀನೇ ಕಾರಣವೆಂದಾಗಲೇ ಪ್ರಾರಂಭ ಯುದ್ದ ಮನಸ್ತಾಪ ದ್ವೇಷ ಭಿನ್ನಾಭಿಪ್ರಾಯ. ಇದನ್ನು ಅಜ್ಞಾನ ಎಂದಿದ್ದಾರೆ ಮಹಾತ್ಮರುಗಳು.
ಹಿಂದೆಯೂ ಇತ್ತು ಈಗಲೂ ಇದೆ ಮುಂದೆಯೂ ಇರುತ್ತದೆ. ಇದರಿಂದ ಬಿಡುಗಡೆ ಪಡೆಯಲು ಜ್ಞಾನದೆಡೆಗೆ ಮನಸ್ಸನ್ನು ಹೊರಳಿಸಬೇಕಷ್ಟೆ. ಜ್ಞಾನ ಹೊರಗಿಲ್ಲ ಒಳಗಿದೆ.ಸತ್ಯಶುದ್ದವಾದ ಆತ್ಮಜ್ಞಾನವೇ ನಿಜವಾದ ಶಾಂತಿ ಸತ್ಯ, ತೃಪ್ತಿ, ಮುಕ್ತಿ ಯಕಡೆಗೆ ನಡೆಸುವಾಗ ಹೊರಗಿನ ಜ್ಞಾನ ಒಳಗೆ ಹಾಕುತ್ತಾ ಮುಂದೆ ಮುಂದೆ ಪುರುಷ ನಡೆದಷ್ಟೂ ಸ್ತ್ರೀ ಕೂಡ ಸಹಕರಿಸುವಳು ಕಾರಣ ಈ ಭೂಮಿಯಲ್ಲಿ ಪುರುಷನ ಹಿಂದೆ ಸ್ತ್ರೀ ನಡೆದರೆ ಗೌರವ ಹೆಚ್ಚು. ಅದೇ ಸ್ತ್ರೀ ಹಿಂದೆ ಪುರುಷ ನಡೆದರೆ ಅಗೌರವ.ಹೀಗಾಗಿ ಹಿಂದಿನಿಂದಲೂ ಪುರುಷ ಪ್ರಧಾನ ದೇಶವಾಗಿ ಸ್ತ್ರೀ ಆಟಕ್ಕುಂಟು ಲೆಕ್ಕಕ್ಕಿಲ್ಲ ವಾಗಿ ಆಧುನಿಕಜಗತ್ತಿನಲ್ಲಿ ಸ್ತ್ರೀ ಪುರುಷನಿಗಿಂತ ಮೇಲಿನ ಮಟ್ಟದಲ್ಲಿ ಸಾಧನೆ ಮಾಡಿ ತೋರಿಸುವ ಹಠದಿಂದ ಮೇಲೆ ನಡೆದು ತನ್ನ ಅಸ್ತಿತ್ವವನ್ನು ತೋರಿಸಿಕೊಂಡರೂ ಅದಕ್ಕೂ ಸ್ತ್ರೀ ಯ ಹಠವೇ ಕಾರಣ ಎನ್ನುವರು.
"ಸ್ತ್ರೀ ಗೆ ಕೆಟ್ಟಹಠವಿರಬಾರದು ಪುರುಷನಿಗೆ ಕೆಟ್ಟ ಚಟ ಇರಬಾರದು" ಇವೆರಡೂ ಈಗ ಹೆಚ್ಚಾಗುತ್ತಲೇ ಇರುವಾಗ ಇಲ್ಲಿ ಯಾರದ್ದು ತಪ್ಪು ಯಾರದ್ದು ಸರಿ?
ಸರ್ಕಾರಗಳಿಗೆ ಅಧಿಕವಾಗಿ ಹಣಸಂಗ್ರಹಣೆಯಾಗೋದು ಈ ಕೆಟ್ಟಚಟಗಳ ಮೂಲಗಳಿಂದ ಹಾಗೆಯೇ ಸ್ತ್ರೀ ಯನ್ನು ಹೆಚ್ಚು ಗೌರವ ಸನ್ಮಾನ,ಪ್ರಶಸ್ತಿ ಪುರಸ್ಕಾರ ಕೊಟ್ಟು ಮೇಲೇರಿಸುವುದು ಅವಳು ಮಾಡುವ ಭೌತಿಕ ಸಾಧನೆಗೆ ಹೀಗಾಗಿ ಮನೆಯಿಂದ ಹೊರಬಂದ ಸ್ತ್ರೀ ಭೌತಿಕದಲ್ಲಿ ಹೆಸರು ಹಣ ಸಾಹಸ ಸಾಧನೆ ಮಾಡುತ್ತಾ ಪುರುಷನಿಗಿಂತ ಮೇಲೆ ಹೋದಾಗ ಕೆಳಗೆ ನಿಂತ ಪುರುಷ ಅಥವಾ ವ್ಯಕ್ತಿ ತನ್ನ ಹದಗೆಟ್ಟಮನಸ್ಸನ್ನು ತಡೆಹಿಡಿಯಲು ಕೆಟ್ಟಚಟಗಳಿಗೆ ಮೊರೆ ಹೋಗಿ ಹಾಳಾಗುತ್ತಾನೆ. ಇಲ್ಲಿ ಹಠ ಚಟಗಳಿಂದ ಚಟ್ಟ ಏರುವುದರಿಂದ ತಪ್ಪಿಸಲಾಗದು. ಚಟ್ಟ ಎಲ್ಲರಿಗೂ ಒಂದೇ. ಜನನ ಮರಣದ ಮದ್ಯೆ ಇರುವಜೀವನದ ಅರ್ಥ ತಿಳಿಯಲು ಇಬ್ಬರೂ ಸೋತಿದ್ದರೆ ತಿರುಗಿ ಮತ್ತೆ ಬರಲೇಬೇಕೆನ್ನುವ ಅಧ್ಯಾತ್ಮ ಸತ್ಯವನ್ನು ಇಬ್ಬರೂ ತಿಳಿಯುತ್ತಾ ಹೋದಾಗಲೇ ಹಠವೂ ಇರದು ಚಟವೂ ಇರದು. ಆಗಲೇ ನಿಜವಾದ ಜೀವನವಾಗುವುದು. ಹೀಗಾಗಿ ಸ್ತ್ರೀ ಪುರುಷರ ಸಮಾನತೆ ಭೂಮಿಯಲ್ಲಿ ಶಾಂತಿಯಿಂದ ಬದುಕಲು ಬಹಳ ಸಹಕಾರಿ ಆಗಿದೆ.
ವಾಸ್ತವದಲ್ಲಿ ನಾವು ಕಾಣುತ್ತಿರುವುದು ಸಂಸಾರ ಬಿಟ್ಟು ಹೊರನಡೆದು ಆಧ್ಯಾತ್ಮ ಸಾಧನೆ ಹೆಸರಿನಲ್ಲಿ ತಮ್ಮದೇ ಆದ ಸಂಘ ಕಟ್ಟಿಕೊಂಡು, ಆಶ್ರಮ ಕಟ್ಟಿಕೊಂಡಿರುವ ಪುರುಷರು.ಇವರ ಪ್ರಕಾರ ನಮಗೆ ಮುಕ್ತಿ ಮೋಕ್ಷ ಸಿಕ್ಕಿದೆ ಎಂದಾದರೂ ಮೇಲಿರುವ ಕೆಳಗಿರುವ ಸಾಲವನ್ನು ತೀರಿಸದೆ ಯಾರೂ ಮುಕ್ತರಾಗೋದಿಲ್ಲ.
ಬಾಲ್ಯ,ಯೌವನ,ಗೃಹಸ್ಥ, ವಾನಪ್ರಸ್ತ,ಸಂನ್ಯಾಸ ಎನ್ನುವ ಹಂತದಲ್ಲಿ ಸರಿಯಾದ ಜ್ಞಾನ ಪಡೆದು ಒಂದೊಂದು ಮೆಟ್ಟಿಲು ಹತ್ತಿದವರಿಗಷ್ಟೆ ಮುಕ್ತಿ ಮೋಕ್ಷ.ಇಲ್ಲಿ ನಮ್ಮ ಜೊತೆಗೆ ಬಂದ ಪಿತೃಗಳು,ಬಂಧು ಬಳಗ, ಸಹಚರರು ನಮಗೆ ಮುಕ್ತಿ ಕೊಡುವಹಾಗಿದ್ದರೆ ಇಷ್ಟು ಜನಸಂಖ್ಯೆ ಬೆಳೆಯುತ್ತಿರಲಿಲ್ಲ.
ಭೂಮಿಯ ಜನರು ಮಾನವರಷ್ಟೆ. ಮಹಾತ್ಮರಾಗೋದಕ್ಕೆ ಸಾಕಷ್ಟು ಶ್ರಮಪಡಬೇಕು.ಇದು ಆಂತರಿಕ ಶುದ್ದಿಯೆಡೆಗೆ ಹೋಗುತ್ತಿದ್ದರೆ ಆತ್ಮಜ್ಞಾನ.ಭೌತಿಕದೆಡೆಗೆ ನಡೆದಿದ್ದರೆ ವಿಜ್ಞಾನ.
ಹೊರಗಿನಿಂದ ಹಿಂದಿನವರು ತಿಳಿಸಿದ್ದನ್ನು ಒಳಗೆ ಎಳೆದುಕೊಂಡು ಜನರಿಗೆ ತಿಳಿಸುವುದು ವಿಜ್ಞಾನ ವಿಶೇಷಜ್ಞಾನವಾದರೂ ಆಂತರಿಕ ವಾಗಿರುವ ನಮ್ಮದೇ ಆದ ವಿಶೇಷ ಶಕ್ತಿಯನ್ನು ಸದ್ಬಳಕೆ ಮಾಡಿಕೊಂಡು ತಿಳಿಯುವುದು ನಿಜವಾದ ಆತ್ಮಜ್ಞಾನವೆಂದರು.ಇದರಿಂದಾಗಿ ಮಾನವನಿಗೆ ತತ್ವದರ್ಶನ ವಾಗಿ ಪರಮಾತ್ಮನ ಕಡೆಗೆ ಜೀವಾತ್ಮ ನಡೆದು ಮುಕ್ತಿಯ ಮಾರ್ಗ ಒಳಗೆ ತೋರುವುದು.ಇದಕ್ಕೆ ಸಂಸಾರದ ಜೊತೆಗೆ ಇದ್ದು ಹಿಂದಿನ ಮಹರ್ಷಿ ಗಳು ತಪಸ್ಸಿನಿಂದ ಪರಮಾತ್ಮನ ಸಾಕ್ಷಾತ್ಕಾರ ಮಾಡಿಕೊಂಡಿದ್ದರು.ಅವರು ರಾಜಕೀಯದಿಂದ ದೂರವಿದ್ದರು,ಸಮಾಜದಿಂದ ದೂರವಿದ್ದರೂ ತಮ್ಮದೇ ಆದ ಶಿಕ್ಷಣದ ಮೂಲಕ ಸಮಾಜಕಲ್ಯಾಣಕ್ಕಾಗಿ ಯಾವುದೇ ಸ್ವಾರ್ಥ, ಅಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದ ಸೇವಾಕಾರ್ಯ ಅವರಿಂದ ನಡೆದಿತ್ತು. ಅವರ ಪತ್ನಿಯೂ ಸೇವಾಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಪತಿವ್ರತೆಯರಾಗಿದ್ದರು.
ಧರ್ಮಪತ್ನಿಯರಾಗಿದ್ದರು.
ಇಲ್ಲಿ ಪತಿವ್ರತೆಗೂ ಧರ್ಮಪತ್ನಿಗೂ ವ್ಯತ್ಯಾಸವಿರಲಿಲ್ಲ ಕಾರಣ ಪತಿಯು ಧರ್ಮದ ಹಾದಿಯಲ್ಲಿರುವಾಗ ಸತಿಯಾದವಳು ಸಹಕರಿಸಿದರೆ ಎರಡೂ ಅವಳಲ್ಲಿರುವುದು.
ಈಗ ನಾವು ಕಾಣುತ್ತಿರುವ ಭಿನ್ನಾಭಿಪ್ರಾಯ ಕ್ಕೆ ಕಾರಣವೇ ಹೆಚ್ಚು ಪುರುಷರು ತನ್ನ ಪತ್ನಿ ಪತಿವ್ರತೆಯಾಗಿರಬೇಕೆಂಬ ಆಸೆಯಲ್ಲಿರುವುದು.ತಾವೆಷ್ಟು ಧರ್ಮದ ಹಾದಿಯಲ್ಲಿ ನಡೆಯುತ್ತಿರುವೆ ಎನ್ನುವ ಪ್ರಶ್ನೆ ಮಾಡಿಕೊಂಡರೆ ಯಾಕೆ ಪತ್ನಿ ತನ್ನ ಮಾತಿಗೆ ಬೆಲೆಕೊಡುತ್ತಿಲ್ಲವೆನ್ನುವ ಸತ್ಯ ಅರಿವಾಗುತ್ತದೆ.
ಕೆಲವೆಡೆ ಇಂತಹ ಪತಿವ್ರತೆಯರು ಇದ್ದರೂ ಸಮಾಜವೇ ಅವರನ್ನು ದೂರವಿಟ್ಟು ಬೇರೆದೃಷ್ಟಿಯಿಂದ ನೋಡಿದರೆ ಹೇಗೆ ಧರ್ಮ ಬೆಳೆಯುವುದು? ಇನ್ನು ಓದಿ ತಿಳಿದು ಅಧ್ಯಾತ್ಮ ಪ್ರಚಾರದಲ್ಲಿರುವವರು ಈ ಕಡೆ ಹಣ,ಅಧಿಕಾರ,ಸ್ಥಾನ ಮಾನ ಪಡೆದಿದ್ದರೂ ಮನೆಯೊಳಗಿನ ಸಮಸ್ಯೆಗೆ ಪರಿಹಾರ ಇಲ್ಲದೆ
ಸೋತವರಿದ್ದಾರೆ.ಕಾರಣ ಇಲ್ಲಿ ಧರ್ಮ ಪ್ರಚಾರವಿದ್ದರೂ ಸರಿಯಾದ ಕರ್ಮ ವಿಲ್ಲದ ಕಾರಣ ಜ್ಞಾನ ಬಂದಿಲ್ಲ. ಹೀಗಾಗಿ ಭೂಮಿಯಲ್ಲಿ ಮಾನವನಿರೋವಾಗ ಅದ್ವೈತ ದೊಳಗೇ ದ್ವೈತ ವಿರುತ್ತದೆ. ಎರಡನ್ನು ಸಮಾನವಾಗಿಸಿಕೊಂಡಿರೋದೆ ಜೀವನದ ಉದ್ದೇಶ.
ಅಂದರೆ ಮಾನವ ಭೂಮಿಮೇಲಿರುವಾಗಲೇ ಅಧ್ವೈತ ದರ್ಶನ ಮಾಡಿಕೊಂಡರೆ ಮುಕ್ತಿ. ದ್ವೈತದಲ್ಲಿದ್ದು ಇಬ್ಬರೂ ಸಮಾನರೆಂಬ ಹೊಂದಾಣಿಕೆಯಿದ್ದರೂ ಮುಕ್ತಿ. ಎರಡೂ ಅರ್ಥ ವಾಗದೆ ಕಿತ್ತಾಟ ನಡೆಸಿಕೊಂಡಿದ್ದರೆ ಮುಕ್ತಿ ಯಿಲ್ಲ. ಜೀವನ್ ಮುಕ್ತಿ ಸಿಗೋದಕ್ಕೆ ಸ್ತ್ರೀ ಋಣ ತೀರಿಸಿರಬೇಕು.ಭೂಮಿ ಋಣ ತೀರಿಸಲು ಭೂ ಸೇವಕನಾಗಬೇಕು. ಸೇವೆಯು ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದೆ ನಡೆಸಬೇಕು. ಹಾಗಿದ್ದವರು ನಿಜವಾದ ಆತ್ಮಜ್ಞಾನಿಗಳೆ. ಆತ್ಮಜ್ಞಾನಿಗಳಿಂದ ಆತ್ಮನಿರ್ಭರ ಭಾರತ. ಅಧ್ಯಾತ್ಮ ಕ್ಕೆ ವಿರುದ್ದವಿದ್ದು ಜನರನ್ನು ಮನೆಯಿಂದ ಹೊರಗೆಳೆದು ರಾಜಕೀಯದೆಡೆಗೆ ನಡೆದವರು ಭಾರತವನ್ನು ವಿದೇಶಮಾಡಬಹುದು. ವಿದೇಶಿಗಳನ್ನು ಸ್ವದೇಶಿಗಳಾಗಿಸುವ ಶಿಕ್ಷಣವಿದ್ದರೆ ಸರಿ.ಶಿಕ್ಷಣವೇ ವಿದೇಶಿಗಳ ಪರವಾಗಿದ್ದರೆ ಆತ್ಮಜ್ಞಾನದ ಗತಿ ಅಧೋಗತಿ.
ಸ್ತ್ರೀ ಯನ್ನು ಜ್ಞಾನಿ ಎಂದರು ದೇವತೆಯೆಂದರು,ಲಕ್ಮಿ ಎಂದರು. ತಾಯಿ ಎಂದರು ಗುರು ಎಂದರು. ಭಾರತಮಾತೆ ಕನ್ನಡಮ್ಮ ವಿಶ್ವಶಕ್ತಿ,ವಿಶ್ವಗುರು ,ಭೂದೇವಿ,ಪ್ರಕೃತಿಮಾತೆ ಎನ್ನುವ ಹಿಂದೂಗಳಿಗೆ ಒಳಗಿದ್ದ ಆ ಶಕ್ತಿಯೇ ಕಾಣದೆ ಹೊರಗಿನ ಶಕ್ತಿಯನ್ನು ಬೆಳೆಸಿಕೊಂಡರೆ ಹೊರಗಿನವರೆ ಆಳೋದಲ್ಲವೆ? ಇಲ್ಲಿ ನಮ್ಮೊಳಗೇ ಅಡಗಿದ್ದ ನಮ್ಮ ಜೊತೆಗೆ ಬಂದ ನಮ್ಮನ್ನು ನಡೆಸಿದ್ದ ಹಿಂದಿನ ಶಕ್ತಿಯನ್ನು ಮರೆತು ಹೊರಗಿನಿಂದ ಬಂದು ಸೇರಿದ್ದನ್ನು ಹೆಚ್ಚು ಹೆಚ್ಚು ಬಳಸಿದರೆ ಬೆಳೆಯೋದು ಅದೇ ಅಲ್ಲವೆ?
ವ್ಯಕ್ತಿ ಶಕ್ತಿಯ ನಡುವಿನ ಅಂತರವೇ ಇದಕ್ಕೆ ಕಾರಣ. ಜ್ಞಾನವಿಜ್ಞಾನದ ಅಂತರದಲ್ಲಿ ಸಾಮಾನ್ಯಜ್ಞಾನವಿತ್ತು ಅದನ್ನು ತಿರಸ್ಕರಿಸಿ ಮಾನವ ಮೇಲೆ ಕೆಳಗೆ ನೋಡಿದರೆ ಮಧ್ಯದಲ್ಲಿ ಸಿಲುಕಿ ಅತಂತ್ರಸ್ಥಿತಿಗೆ ತಲುಪುತ್ತಾನೆ. ಒಟ್ಟಿನಲ್ಲಿ ಯಾರೂ ಸ್ವತಂತ್ರ ಜ್ಞಾನ ಬಳಸಲಾಗಿಲ್ಲ.ಪ್ರತಿಯೊಬ್ಬರೂ ಸ್ವತಂತ್ರ ಜ್ಞಾನ ಪಡೆದ ವಿಶೇಷ ವ್ಯಕ್ತಿಗಳಾಗಿದ್ದರೂ ಭೌತಿಕದ ರಾಜಕೀಯಕ್ಕೆ ಸಹಕರಿಸಿ ಹೊರಗಿನವರಿಗೆ ಮಣೆ ಹಾಕಿ ಒಳಗಿನ ಶಕ್ತಿಯನ್ನು ಮರೆತು ವೇಗವಾಗಿ ಮೇಲಕ್ಕೆ ಏಣಿ ಹಾಕಿ ಹತ್ತಿದರೂ ಕೆಳಗಿನ ಸತ್ಯವರಿಯದೆ ಮೇಲಿನ ಶಕ್ತಿ ಬಿಡದು.
ಈ ಕಾರಣದಿಂದಾಗಿ ಮನೆ ಮನೆಯ ಸಮಸ್ಯೆ ಬೆಳೆದಿದೆ.ಒಳಗೇ ಸಮಸ್ಯೆ ಬೆಳೆದಿರುವಾಗ ಹೊರಗಿನವರು ಪರಿಹಾರ ಕೊಟ್ಟರೂ ಒಳಗೆ ಶುದ್ದವಾಗದೆ ಸಮಸ್ಯೆಯ ಮೂಲ ಸರಿಯಾಗದು.ಇದು ಎಲ್ಲಾ ವಿಚಾರಕ್ಕೂ ಅನ್ವಯಿಸುತ್ತದೆ. ಸ್ತ್ರೀ ಸರಿಯಿಲ್ಲ ಎನ್ನುವ ಪುರುಷನೂ ಸರಿಯಿರೋದಿಲ್ಲ ಕಾರಣವಿಷ್ಟೆ ಆತ್ಮ ಪರಮಾತ್ಮನ ಒಂದಂಶ ಸರಿಯಾಗಬೇಕಾದದ್ದು ಆತ್ಮವೇ ಹೊರತು ಪರಮಾತ್ಮನಲ್ಲ. ಶುದ್ದವಾದ ಹೃದಯವಿದ್ದರೆ ಹೃದಯದಲ್ಲಿರುವ ಲಕ್ಮಿ ಕಾಣುವಳು. ಹೊರಗಿನಲಕ್ಮಿ ಹಣ ಬೇಕು ಅವಳ ಜ್ಞಾನ ಬೇಡ ಎಂದರೆ ಅಜ್ಞಾನ. ಪುರಾಣ ಇತಿಹಾಸದಿಂದಲೂ ಇದು ಬೆಳೆದಿದೆ.ಅಂದಿನ ಶಿಕ್ಷಣದಲ್ಲಿ ಜ್ಞಾನವಿತ್ತು ಸಮಾನತೆಯನ್ನು ಜ್ಞಾನದಿಂದ ತಿಳಿಯುವ ಅವಕಾಶವಿತ್ತು.ಈಗಿನ ಶಿಕ್ಷಣ ಕೇವಲ ಭೌತಿಕ ವಿಜ್ಞಾನದ ಒಕ್ಕಣ್ಣನಂತಿದೆ.ಮೂರನೆಯ ಕಣ್ಣಿನ ವರೆಗೂ ಹೋಗಿ ನೋಡುವ ಶಕ್ತಿ ಇಬ್ಬರಿಗೂ ಇಲ್ಲದೆ ಒಗ್ಗಟ್ಟು ಹೋಗಿ ಬಿಕ್ಕಟ್ಟು ಬೆಳೆದು ಅದನ್ನು ಸರಿಪಡಿಸಲು ಹೊರಗಿನ ರಾಜಕೀಯ ಭ್ರಷ್ಟಾಚಾರದ ಕಡೆಗೆ ಹೊರಟಿದ್ದರೂ ಅದನ್ನು ಸರಿ ಎನ್ನುವ ಮಟ್ಟಿಗೆ ಮಾನವ ನಿಂತಿರೋದು ಭವಿಷ್ಯಕ್ಕೆ ಮಾರಕವಾಗುತ್ತದೆ. ಸತ್ಯ ಎಲ್ಲರಿಗೂ ಒಂದೇ. ಆದರೂ ಸ್ತ್ರೀ ಹೇಳಬಾರದು ಎಂದರೆ ಭೂಮಿಯಲ್ಲಿ ಧರ್ಮ ಇರುವುದೆ? ಸತ್ಯದ ಜೊತೆಗೆ ಧರ್ಮ ನಡೆದರೆ ಶಾಂತಿ.ಇಲ್ಲವಾದರೆ ಕ್ರಾಂತಿ.
ಶಾಂತಿಯಿಂದ ಸತ್ಯದರ್ಶನ .ಅದೂ ಅಧ್ಯಾತ್ಮದ ಸತ್ಯವನ್ನು ಆಂತರಿಕ ವಾಗಿ ಬೆಳೆಸಿಕೊಂಡರೆ ಮಾತ್ರ ಸಾಧ್ಯ. ಇಲ್ಲಿ ಸ್ತ್ರೀ ಗೆ ಜ್ಞಾನಬಂದರೆ ತಡೆಯುವವರೆ ಹೆಚ್ಚು ಹೀಗಾದರೆ ಎಷ್ಟೇ ವಿಗ್ರಹ ಪೂಜೆ ಮಾಡಿ ಉಪಯೋಗವಿಲ್ಲ. ಎಲ್ಲಾ ವ್ಯವಹಾರದಿಂದ ನಡೆಸೋ ಹಾಗಿದ್ದರೆ ಧರ್ಮ ಯಾಕೆ ಬೇಕಿತ್ತು? ಎಲ್ಲಾ ತಂತ್ರ ಯಂತ್ರದಿಂದಾದರೆ ತತ್ವ ಯಾಕೆ ಬೇಕಿತ್ತು? ಸ್ವತಂತ್ರ ಭಾರತದಲ್ಲಿ ಪ್ರತಿಯೊಬ್ಬ ಪ್ರಜೆಯಲ್ಲಿಯೂ ಸತ್ಯವಿದ್ದರೂ ತಿಳಿಸೋ ಅಧಿಕಾರವಿಲ್ಲವಾದರೆ ಅಸತ್ಯವೇ ದೇಶವಾಳೋದಲ್ಲವೆ?
ಈಗಲೂ ಕಾಲವಿದೆ. ಜೀವ ಇರೋವಾಗಲೇ ಸತ್ಯತಿಳಿದು ಹಿಂದೆ ನಡೆಯುವ ಅವಕಾಶವಿದ್ದರೆ ಹಿಂದೂ ಧರ್ಮ ರಕ್ಷಣೆ ಸಾಧ್ಯವಿದೆ. ಸತ್ಯಎಷ್ಟು ತಡೆಯುವರೋ ಅಷ್ಟು ಮುಂದೆ ಕಠೋರವಾಗಿರುತ್ತದೆ. ಇದನ್ನು ತಡೆಯೋ ಶಕ್ತಿ ಯಾರಿಗೂ ಇಲ್ಲ.ಹಾಗಾಗಿಯೇ ಸತ್ಯಹರಿಶ್ಚಂದ್ರ,ಶ್ರೀ ರಾಮಚಂದ್ರ ಸತ್ಯ ಧರ್ಮದ ಎರಡು ಪ್ರಮುಖ ಪಾತ್ರಧಾರಿಗಳಾಗಿರುವರು.
ಯಾರಿಗೆ ಗೊತ್ತು ಯಾರಲ್ಲಿ ಯಾವ ದೇವಾನುದೇವತೆ
ಗಳಿರುವರೆಂಬುದು. ಸಾಮಾನ್ಯಜನರಿಂದಲೇ ಭಾರತ ನಡೆದಿರುವಾಗ ಸಾಮಾನ್ಯಜ್ಞಾನ ಬಹಳ ಅಗತ್ಯವಿದೆ. ಇದನ್ನು ಬಿಟ್ಟು ನಡೆದರೆ ಅತಂತ್ರಸ್ಥಿತಿಯಲ್ಲಿ ಜೀವ ಹೋಗುತ್ತದೆ.
ಪರಕೀಯರ ಹಣ,ವ್ಯವಹಾರ,ಸಾಲ,ಬಂಡವಾಳದಿಂದ ನಮ್ಮವರನ್ನೇ ಆಳುವುದರಲ್ಲಿ ಯಾವ ಪುರುಷಾರ್ಥ ವಿದೆಯೋ ಆ ಭಗವಂತನೆ ಉತ್ತರಿಸಬೇಕಷ್ಟೆ. ಕಲಿಗಾಲ ಪಾಠ ಕಲಿಸುತ್ತದೆ. ಕಲಿಯುವುದಕ್ಕೆ ಮನಸ್ಸಿನ ಜೊತೆಗೆ ಆತ್ಮವೂ ಸೇರಿದರೆ ಯೋಗ.ಯೋಗದಿಂದ ಮುಕ್ತಿ.
ಇಲ್ಲಿ ಸ್ತ್ರೀ ಗಿಂತ ಪುರುಷನೇ ದಾರಿತಪ್ಪಿ ನಡೆದು ಸ್ತ್ರೀ ಯನ್ನೂ ಹೊರಗೆ ನಡೆಸುತ್ತಾ ತಾನೂ ಅಧರ್ಮದಲ್ಲಿದ್ದು ಸ್ತ್ರೀ ಗೆ ಧರ್ಮ ತೋರಿಸಲು ಸಾಧ್ಯವಿಲ್ಲ. ಮೊದಲು ಮಾನವನಾದರೆ ನಂತರ ಮಹಾತ್ಮನಾಗಬಹುದು. ಮೊದಲೇ ಅಸುರನಾಗಿದ್ದರೆ ಒಳಗಿನ ಸುರರ ಶಕ್ತಿ ಕಾಣುವುದೆ? ಎಲ್ಲೋ ಒಂದುಕಡೆ ಸೇರಿದರೂ ಹೇಳುವುದಕ್ಕಾಗದು ಕಾಣೋದಿಲ್ಲ. ಭಗವಂತನೊಳಗಿರುವ ಇಬ್ಬರೂ ಭೂಮಿಗೆ ಬಂದ ಉದ್ದೇಶ ಮರೆತು ಹೋರಾಟ ನಡೆಸಿದರೂ ಮತ್ತೆ ಮತ್ತೆ ಭೂಮಿಗೆ ಬರುವಂತಾಗಿದೆ. ರಾಜಯೋಗವೇ ಬೇರೆ ರಾಜಕೀಯವೇ ಬೇರೆ. ರಾಜಕೀಯದಲ್ಲಿ ರಾಜಯೋಗವಿಲ್ಲ ಸ್ವತಂತ್ರ ಜ್ಞಾನ ಇಲ್ಲದೆ ಜನರನ್ನು ಸ್ವತಂತ್ರ ವಾಗಿ ಬದುಕಲೂ ಬಿಡದೆ ಆಳಿದರೆ ಅಧರ್ಮ ಕ್ಕೆ ತಕ್ಕಂತೆ ಪ್ರತಿಫಲ. ಇದಕ್ಕೆ ಸಹಾಯ ಸಹಕಾರ ಮಾಡಿದವರಿಗೂ ಸಮಸ್ಯೆಯಿಂದ ಬಿಡುಗಡೆ ಸಿಗದು. ಒಟ್ಟಿನಲ್ಲಿ ನಮ್ಮನ್ನು ನಾವು ತಿದ್ದಿ ನಡೆಯುವುದೇ ಸಂಸ್ಕಾರ.
No comments:
Post a Comment