ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, April 21, 2023

ವಿಜ್ಞಾನದಿಂದ ಆತ್ಮನಿರ್ಭರ ಭಾರತ ಸಾಧ್ಯವೆ?


ಆತ್ಮ ಜ್ಞಾನ  ಒಳಗಿದೆ ವಿಜ್ಞಾನ  ಹೊರಗಿನಿಂದ ಬೆಳೆದಿದೆ. ದೈವತ್ವ ‌ಒಳಗಿದೆ  ಅಸುರಿತನ ಹೊರಗಿದೆ. ದೇವಾನುದೇವತೆಗಳನ್ನು  ನಂಬಿ ನಡೆದಿರುವ ಮನುಕುಲಕ್ಕೆ ಹತ್ತಿರವಿರುವ ಗುರುಹಿರಿಯರಲ್ಲಿಯೇ ದೈವತ್ವ ಕಾಣದಿದ್ದರೆ  ಏನು ಉಪಯೋಗ? ತಮ್ಮ ಕಾಲುಬುಡ ನೋಡದೆ  ಮೇಲೆ ನೋಡಿದರೆ ಎಡವಿ ಬೀಳೋದೆ .ಮೂಲ ಗಟ್ಟಿಗೊಳಿಸದೆ ಮೇಲೇರಲು ಕಷ್ಟ.ಹಿಂದಿನವರನ್ನು ಮರೆತ ಹಿಂದೂಗಳಿಗೆ ಮುಂದೆ ನಡೆಯುವ ಸತ್ಯದ ಅರಿವಾಗದು.ಪುರಾಣ ಇತಿಹಾಸದ ಏಳು ಬೀಳುಗಳಲ್ಲಿದ್ದ ಧರ್ಮಧರ್ಮಗಳ  ರಾಜಕೀಯ ದ್ವೇಷದಿಂದ ಗೆದ್ದವರು ದೇವರಾದರು ಸೋತವರು ಅಸುರರಾದರು.ನಾವೀಗ ಮಧ್ಯವರ್ತಿ ಗಳಾಗಿದ್ದು ಒಳಗೇ ಅಡಗಿರುವ ದೇವಾಸುರರ ಗುಣಗಳನ್ನು  ತಿಳಿಯದೆ ಹೊರಗಿನಿಂದ ಎಷ್ಟು ರಾಜಕೀಯ ಮಾಡಿಕೊಂಡು ಜನರನ್ನು ಆಳಿದರೂ  ಅಧರ್ಮ. ಕಾರಣ ಇಲ್ಲಿ  ಪ್ರಜೆಗಳ ಸಹಕಾರವಿಲ್ಲದೆ ಯಾವುದೂ ನಡೆದಿಲ್ಲ. ನಡೆಯುತ್ತಿಲ್ಲ, ನಡೆಯುವುದೂ ಇಲ್ಲ.ಪ್ರಜೆಗಳೆ ದೇವರು ಎಂದರೆ  ಅವರಲ್ಲಿನ ಜ್ಞಾನ ಶಕ್ತಿಯನ್ನು ದೈವತ್ವದೆಡೆಗೆ  ತರದ ಶಿಕ್ಷಣವನ್ನು  ಕೊಟ್ಟು ಅಜ್ಞಾನಿಗಳನ್ನು ಆಳುತ್ತಿರುವವರಲ್ಲಿ ಜ್ಞಾನವಿದ್ದಿದ್ದರೆ ರಾಜಕೀಯದಲ್ಲಿ ಧರ್ಮ ವಿರುತ್ತಿತ್ತು. ಅಂತರ ಹೆಚ್ಚಿಸಿಕೊಂಡು ತಂತ್ರ ಬೆಳೆಸಿಕೊಂಡು  ಇರುವ ಸ್ವತಂತ್ರ ಜ್ಞಾನವನ್ನೂ ಗಾಳಿಗೆತೂರಿ  ಮನೆಯಿಂದ ಜನರನ್ನು ಹೊರಗೆ ತಂದರೆ ಒಳಗೆ ಸೇರಿಸುವವರು ಯಾರು?
ಒಟ್ಟಿನಲ್ಲಿ ಕಟ್ಟುವುದು ಕಷ್ಟ ಮೆಟ್ಟುವುದು ಸುಲಭ ಎಂದಂತೆ
ಬ್ರಿಟಿಷ್ ರಿಂದ ಬಿಡುಗಡೆಯಾದ ಭಾರತವನ್ನು  ಈಗಿನವರು ತಿರುಗಿ ಅವರ ಶಿಕ್ಷಣದಿಂದ ಅವರಿಗೇ ತಿರುಗಿಸಿ ಕೊಡುವುದಕ್ಕೆ  ಹೊರಟವರಿಗೆ  ಭಾರತೀಯ ತತ್ವಜ್ಞಾನದ ಕೊರತೆಯಿದೆ. ಈಗ ಒಳಗೆ ಸೇರಿಸಿಕೊಂಡ ತಂತ್ರವನ್ನು ಬಳಸಿ ಜನರನ್ನು ಆಳುವುದರಿಂದ  ಜ್ಞಾನ ಬರುವುದೆ? ಇದಕ್ಕೆ ಧಾರ್ಮಿಕ ಕ್ಷೇತ್ರದ ಸಹಕಾರವಿದ್ದರೆ  ದೇವರ ಜೊತೆಗೆ ದೇಶವೂ ಕಾಣೋದಿಲ್ಲ. ಮಾನವ ಇರೋದು ದೇವರೊಳಗೆ ದೇಶದೊಳಗೆ ಇರುವ ಪ್ರಜೆಗಳಿಗೆ  ದೇಶಭಕ್ತಿ  ಆಂತರಿಕ ಶಕ್ತಿಯಾಗಬೇಕಿತ್ತು. ಈಗಿದು  ಕೇವಲ ವ್ಯವಹಾರದ ರಾಜಕೀಯ ತಾಣವಾಗಿರೋದು ಭಾರತೀಯರು  ತತ್ವಜ್ಞಾನದ ದೃಷ್ಟಿಯಿಂದ ನೋಡಿದರೆ ಕಾಣಬಹುದು. ದೇಶದ ಪ್ರಗತಿ ಜ್ಞಾನದಿಂದ  ಆಗಬೇಕಾದರೆ ಅದರಲ್ಲಿ ತತ್ವ ಇರಬೇಕು. ವಿದೇಶಿಗರ ತಂತ್ರವನ್ನು ಬಳಸಿ ಸ್ವದೇಶಿಗಳನ್ನು ಆಳುವುದರಿಂದ  ಯಾವ ಪ್ರಗತಿಯಾಗುವುದು? ಮಾನವನ ಜನ್ಮ ಸಾರ್ಥಕ ವಾಗೋದು ಆತ್ಮಜ್ಞಾನದಿಂದ ಎಂದ ಮಹಾತ್ಮರ ದೇಶವನ್ನು   ವೈಜ್ಞಾನಿಕವಾಗಿ  ವಿದೇಶದೆಡೆಗೆ ನಡೆಸಿದರೆ‌  ಇದರ ಪರಿಣಾಮ  ಏನಾಗಬಹುದೆಂದು ಚಿಂತನೆ ನಡೆಸದೆ  ರಾಜಕೀಯದ ಹಿಂದೆ ನಡೆದರೆ ತಿರುಗಿ ಬರೋದು ಕಷ್ಟವಿದೆ. ಕಷ್ಟಪಡದೆ ಸುಖ ಬೇಡುವವರಿಗೆ   ಕುಳಿತು ತಿನ್ನುವವರಿಗೆ ಕುಡಿಕೆ ಹಣ ಸಾಲದು. ವಿದೇಶಿ ಸಾಲ ತೀರಿಸಲು ವಿದೇಶಿ ಬಂಡವಾಳವೆ?
ಮನೆಯೊಳಗಿನ ಸಾಲ ತೀರಿಸಲು ಮನೆಯವರು ಕಷ್ಟಪಟ್ಟು ದುಡಿಯಬೇಕಲ್ಲವೆ?  ಹೊರಗಿನ ಸಾಲ ಶೂಲವಾಗಿರುತ್ತದೆ.
ಸಾಲವೇ ಶೂಲ ಸರ್ಕಾರವೇ ಇದರ ಮೂಲ.
ಚುನಾವಣೆಗಾಗಿ  ದುರ್ಭಳಕೆ ಆಗುತ್ತಿರುವ  ಜನರ ಹಣವನ್ನು ಸಂಪಾದಿಸಲು  ಸಾಧ್ಯವೆ?
 ಹಳೆ ಮನೆ ಒಡೆದು  ಹೊಸಮನೆ ಕಟ್ಟಿದರೂ  ಹಳೆಮನೆಯ ಸಾಲ ತೀರೋದಿಲ್ಲ. ಹಾಗೆಯೇ  ಅಂತರವನ್ನು ಹೆಚ್ಚಿಸಿದಷ್ಟೂ
ಸಮಾಂತರವಾಗದು. ಪಕ್ಷಕಟ್ಟುವುದು ಸುಲಭ. ನಡೆಸುವುದು ಕಷ್ಟ. ಸಂಸಾರ ಒಡೆಯುವುದು ಸುಲಭ  ಒಗ್ಗೂಡಿಸುವುದು ಕಷ್ಟ. ದೇಶ ಕಟ್ಟುವುದು ಕಷ್ಟ ಒಡೆಯುವುದು ಸುಲಭ. ಕಾರಣ ಕಟ್ಟುವುದಕ್ಕೆ ನಮ್ಮವರು ಸಹಕರಿಸಿದರೆ ಒಡೆಯುವುದಕ್ಕೆ ಹೊರಗಿನವರು ಸಹಕರಿಸುವರು.
ಹೊರಗಿನ ಸಾಲ  ಬೆಳೆದಷ್ಟೂ ಒಳಗಿನ ಶಕ್ತಿ ಕ್ಷೀಣವಾಗುವುದು. ಕ್ಷೀಣವಾದಾಗಲೇ ಹೊರಗಿನವರು ಒಳಗೆ ಬಂದು ಆಳುವುದು. ಇದು ಶಿಕ್ಷಣದ ವಿಚಾರದಲ್ಲೂ  ನಾವು ಕಾಣಬಹುದು.ಯಾವಾಗ ಭಾರತೀಯರ ಆಂತರಿಕ ಜ್ಞಾನ ಕುಸಿದು ಒಗ್ಗಟ್ಟು  ಮರೆಯಾಗಲು ಪ್ರಾರಂಭವಾಯಿತೋ ಹೊರಗಿನಿಂದ ಬಂದವರು  ತಮ್ಮೆಡೆ ಎಳೆದುಕೊಂಡು ಆಳಿದರು. ಅತಿಯಾದ ದೌರ್ಜನ್ಯ ಹಿಂಸೆ ತಾಳಲಾರದೆ ಮತ್ತೆ ಒಳಗಿನ  ಶಕ್ತಿ ಜಾಗೃತವಾಗಿ ಒಟ್ಟಾಗಿ  ಹೋರಾಟ ಮಾಡಿ ಹೊರಗಿನವರನ್ನು ಓಡಿಸಿದರು. ಆದರೆ‌ , ವ್ಯಕ್ತಿಯನ್ನು ಹೊರಗೆ ಕಳಿಸಿದರೂ ಅವರು  ನೆಟ್ಟು ಬೆಳೆಸಿದ ಶಿಕ್ಷಣದ ಶಕ್ತಿ ಒಳಗೇ ಇದ್ದು‌ ಈಗಲೂ  ತಿಳಿದೋ ತಿಳಿಯದೆಯೋ ಅದರ ವಶದಲ್ಲಿದ್ದೂ ಸ್ವತಂತ್ರ ಎನ್ನುವ ಭ್ರಮೆಯಲ್ಲಿ  ಭಾರತೀಯ ಶಿಕ್ಷಣವಿದೆ.   ಹೊರಗಿನವರ   ವ್ಯವಹಾರ,ಶಿಕ್ಷಣ,
ಬಂಡವಾಳ,ಸಾಲದ ರೂಪದಲ್ಲಿ  ಜನರನ್ನು ಸಮಸ್ಯೆ ಕಡೆಗೆ ಎಳೆದಿದೆ.  ಅತಿಯಾದ ವಿದೇಶಿ ವ್ಯಾಮೋಹ ಕುಟುಂಬವನ್ನು ಹಾಳುಮಾಡಿ ಆಳುತ್ತಿದೆ. ಇದ್ದ ಆಸ್ತಿಯನ್ನು ಬಿಟ್ಟು ಮಕ್ಕಳು ವಿದೇಶಕ್ಕೆ  ಹಾರುತ್ತಿದ್ದರೂ ಪೋಷಕರು ಇದನ್ನು ಪ್ರಗತಿ ಸಾಧನೆ ಎಂಬ ಅಜ್ಞಾನದಲ್ಲಿ  ಕೊನೆಗಾಲವನ್ನು ವೃದ್ದಾಶ್ರಮದಲ್ಲಿ ಕಳೆಯುತ್ತಿದ್ದಾರೆಂದರೆ ಇಲ್ಲಿ ಧರ್ಮ ಯಾವುದು? ಅಧರ್ಮ ಯಾವುದು? ಜ್ಞಾನವಿಜ್ಞಾನ ಎರಡೂ ಒಂದೇ ನಾಣ್ಯದ ಎರಡು ಮುಖ.ವ್ಯವಹಾರಕ್ಕೆ ಅಗತ್ಯವಿದ್ದರೂ ಧರ್ಮ ಕ್ಕೆ ಚ್ಯುತಿ ಬಂದರೆ  ಕಷ್ಟ ನಷ್ಟ ಯಾರಿಗೆ? ಇಬ್ಬರಿಗೂ  ಇದು ಅನ್ವಯಿಸುತ್ತದೆ. ಹಾಗಾಗಿ  ಅಧ್ಯಾತ್ಮ ವಿಜ್ಞಾನ ಭೌತ ವಿಜ್ಞಾನದ ನಡುವಿನ ಸಾಮಾನ್ಯ ಜ್ಞಾನ ಮಾನವ ಮರೆತರೆ ಇದ್ದೂ ಸತ್ತಂತೆ.ಭೂತ ಭವಿಷ್ಯದ ನಡುವೆ ವರ್ತ ಮಾನವಿದೆ. ಭೂತಹಿಡಿದು ಹೊರಟರೆ  ಭವಿಷ್ಯ ಅರ್ಥ ವಾಗದು.ವರ್ತ ಮಾನವನ್ನರಿತು ನಡೆದರೆ ಉತ್ತಮ  ಬದಲಾವಣೆ ಭವಿಷ್ಯದಲ್ಲಿ ಕಾಣಬಹುದು . ಬದಲಾವಣೆ ಜಗದ ನಿಯಮ ಕಾಲಚಕ್ರ ತಿರುಗುತ್ತಲೇ 
ಇರುತ್ತದೆ. ಮೇಲಿನವರು ಕೆಳಗೆ ಬರುತ್ತಾರೆ.ಕೆಳಗಿನವರು ಮೇಲೇರುತ್ತಾರೆ. ಬೆಳಕಿನ ನಂತರ ಕತ್ತಲೆ ಕತ್ತಲಾಗಿ ಬೆಳಕು. ನಿರಂತರ ನಡೆಯುವ ಕ್ರಿಯೆಯನ್ನು ದೇವರೂ ತಡೆಯಲಾಗದು ಮಾನವನಿಗೆ ಸಾಧ್ಯವೆ? ತಡೆಯುವುದಾದರೆ  ಅಸತ್ಯ,ಅನ್ಯಾಯ ಅಧರ್ಮ ಭ್ರಷ್ಟಾಚಾರ  ತಡೆಯುವ  ಮನಸ್ಸು ಮಾಡಬೇಕು. ನಮ್ಮೊಳಗೇ ಅಡಗಿರುವ ಈ ಗುಣವನ್ನು ಹಣದಿಂದ ತಡೆಯಲಾಗದು  ಹಣದಿಂದ ಬೆಳೆದಿದೆ ಜ್ಞಾನದಿಂದ ಧರ್ಮದಿಂದ  ಹೊರಹಾಕಬೇಕಷ್ಟೆ. ಇದು ಅಧ್ಯಾತ್ಮ ಸಾಧನೆ.
ಇದಕ್ಕೆ ರಾಜಕೀಯ ಬೇಡ ರಾಜಯೋಗ ಬೇಕಿದೆ.

No comments:

Post a Comment