ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Saturday, April 15, 2023

ಯಾವುದೂ ಸ್ಥಿರವಲ್ಲ.ಯಾರೂ ಶಾಶ್ವತವಲ್ಲ

ಮೇಲಿರಿದವರು ಕೆಳಗಿಳಿಯಲೇ ಬೇಕು.ಕೆಳಗಿರುವವರು ಮೇಲಕ್ಕೆ ಹೋಗಲೇ ಬೇಕು. ಸ್ಥಿರವಾಗಿ ಒಂದೇ ಕಡೆ ನಿಂತವರಿಲ್ಲ .ದೇವಾನುದೇವತೆಗಳಿಗೇ ಸಾಧ್ಯವಾಗದ ಸ್ಥಿರ ಸ್ಥಿತಿ ಮಾನವನಿಗೆ ಸಾಧ್ಯವೆ? ಅದಕ್ಕಾಗಿ ಮಹಾತ್ಮರುಗಳು ತಿಳಿಸಿರೋದು ಎಲ್ಲರೊಳಗೊಂದಾಗು ಮೊದಲು ಮಾನವನಾಗು ಎಂದು. ವಾಸ್ತವದಲ್ಲಿ  ಭಾರತ ದೇಶದ  ರಾಜಕೀಯ  ವ್ಯವಸ್ಥೆದಲ್ಲಾಗುತ್ತಿರುವ ಬದಲಾವಣೆಗಳನ್ನು ನೋಡಿದಾಗ ಜನಬಲ ಹಣಬಲ ಅಧಿಕಾರ ಬಲ ಇದ್ದರೆ ಏನು ಮಾಡಿದರೂ ಸರಿಯಾಗಿರುತ್ತದೆ ಎನ್ನುವ ಭ್ರಮೆಯಲ್ಲಿ  ತಮ್ಮ ಅಧಿಕಾರವನ್ನು  ಬಳಸಿ ಜನರನ್ನು ಆಳುವುದಾಗಲಿ,
ದೇವರನ್ನೇ ಆಳಲು ಹೋಗುವುದಾಗಲಿ,ಧರ್ಮದ  ಮೂಲ ತಿಳಿಯದೆ ಅಧರ್ಮಕ್ಕೆ ಸಹಕಾರ ನೀಡುವುದಾಗಲಿ  ಮಾಡಿದರೆ, ಇದರ ಪ್ರತಿಫಲ ತಿರುಗಿ ಬರೋವಾಗ  ಯಾರೂ ಜೊತೆಗಿರೋದಿಲ್ಲ ಎನ್ನುವ ಕಾರಣಕ್ಕಾಗಿ  ಹಿಂದೆ ಮಹಾರಾಜರು  ಧರ್ಮದ ಪರ ನಿಂತರು. ಆದರೂ ಅಜ್ಞಾನ ಹೆಚ್ಚಾದ ನಂತರದ ದಿನಗಳಲ್ಲಿ ಜನರಿಗೆ ಧರ್ಮಧರ್ಮಗಳ  ಭಿನ್ನಾಭಿಪ್ರಾಯ, ದ್ವೇಷದ ರೂಪ ತಳೆದು ರಾಜಕೀಯವಾಗಿ  ತಿರುಗಿ ಪ್ರಜಾಪ್ರಭುತ್ವ ಬಂದರೂ  ರಾಜಪ್ರಭುತ್ವದ  ಹಲವಾರು ವಿಚಾರಗಳನ್ನು ಎಳೆದುತಂದು ಜನರಲ್ಲಿದ್ದ ಅಲ್ಪ ಸ್ವಲ್ಪ  ಒಗ್ಗಟ್ಟನ್ನು  ಕೆಡಿಸಿ ಅಶಾಂತಿ ಹೆಚ್ಚಿಸಿ ಕ್ರಾಂತಿ ಬೆಳೆಸಿದರೆ ಜನಸಾಮಾನ್ಯರು ದಡ್ಡರಲ್ಲ. ಅವರು ನೋಡೋದು  ಧರ್ಮ ವಲ್ಲದ ಕಾರಣ ಯಾರು ಹೆಚ್ಚು ಕೊಡುವರೋ ಅವರೆಡೆಗೆ ಹೋಗುವುದು ಸಾಮಾನ್ಯವಾಗಿದೆ. ಸರ್ಕಾರದ ಹಣ ಜನರ ಋಣ ಎನ್ನುವ  ಸತ್ಯ ತಿಳಿದವರಷ್ಟೆ ಉತ್ತಮ ಕಾರ್ಯ ಕ್ಕೆ ಸರ್ಕಾರದ ಹಣಬಳಸಿ  ಜನಜೀವನದಲ್ಲಿ ಸುಧಾರಣೆ ತರಲು ಸಾಧ್ಯ. ಚುನಾವಣಾ ಸಮಯದಲ್ಲಿ ನಡೆಯುವಷ್ಟು  ಅಧರ್ಮ, ಅನೀತಿ,ಭ್ರಷ್ಟಾಚಾರ, ಅಶಾಂತಿಯ ವಾತಾವರಣ ಬೇರೆ ದಿನಗಳಲ್ಲಿ ಕಾಣೋದಿಲ್ಲ. 
ಪ್ರಜಾಪ್ರಭುತ್ವದಲ್ಲಿ ರಾಜರು ಯಾರು? ಯಾರ ಹಣ ಬಳಕೆ ಆಗುತ್ತದೆ, ಯಾರಿಗೆ ಕೊಡಲಾಗುತ್ತದೆ.ಇದರಿಂದಾಗಿ ಯಾರಿಗೆ ಅಧಿಕಾರ ಸಿಗುತ್ತದೆ? ಯಾರನ್ನು ಆಳುತ್ತಾರೆಂಬ ಪ್ರಶ್ನೆಗೆ ಉತ್ತರ ಪ್ರಜೆಗಳನ್ನು ಪ್ರಜೆಯಾದವರೆ ಆಳೋದಕ್ಕೆ ನೀಡುವ ಸಹಕಾರವೇ ಪ್ರಜಾಸರ್ಕಾರ. ಇಷ್ಟು ವರ್ಷದಲ್ಲಿ  ಆಳಿದ ಪಕ್ಷ ಗಳ  ಉದ್ದೇಶ ದೇಶರಕ್ಷಣೆಯಾಗಿತ್ತೋ ಧರ್ಮ ರಕ್ಷಣೆಯೋ ಪ್ರಜೆಗಳ ರಕ್ಷಣೆಯೋ? 
ಪ್ರಜೆಗಳನ್ನು ರಕ್ಷಿಸುವಂತಾಗಿರೋದುದುರಂತವೆನ್ನಬಹುದಷ್ಟೆ
ಯಾರೋ ಮೂರನೆಯವರು ಬಂದು ಮನೆಯವರನ್ನು ಹೊರಗೆಳೆದು ದೂರಮಾಡಿ ಮನೆಯೊಳಗಿದ್ದು ಮನೆಮಂದಿಯ ಮಧ್ಯೆ  ದ್ವೇಷದ ಕಿಡಿ ಹಾಕಿ ಹೊತ್ತಿ ಉರಿಯುವಾಗ ತಾನು ಮಾತ್ರ ಮಧ್ಯದಿಂದ ಹೊರಬರುವ ಮಧ್ಯವರ್ತಿಗಳಿಗೆ  ತಾನೊಬ್ಬ ಮಾನವನೆನ್ನುವ ಸಾಮಾನ್ಯಜ್ಞಾನದ ಕೊರತೆಯಿರೋದು ಅಜ್ಞಾನವನ್ನು ಬೆಳೆಸಿದೆ. ಆತ್ಮಸಾಕ್ಷಿಯಿಲ್ಲದ  ಜ್ಞಾನ ಅಜ್ಞಾನವಾಗುತ್ತದೆ.
ಯಾರೇ ಗೆದ್ದು ಬಂದರೂ  ದೇಶದ ಪರ ನಿಲ್ಲದೆ ಪ್ರಜೆಗಳ  ಭೌತಿಕಾಸಕ್ತಿ ಬೆಳೆಸುವತ್ತ ಸರ್ಕಾರದ ಸಾಲ,ಸೌಲಭ್ಯ ‌ ಕೊಡುತ್ತಿದ್ದರೆ ಸೋಮಾರಿಗಳಿಗೆ‌ ಕೂತು ತಿನ್ನುವವರಿಗೆ ಕುಡಿಕೆ ಹಣ ಸಾಲದು. ದೇಶವೇ ಸಾಲದಲ್ಲಿ ಮುಳುಗಿದ್ದರೂ  ಶ್ರೀಮಂತ ಮಂದಿಯ ಯಾವುದೇ ಹಣವಾಗಲಿ  ದೇವರ  ಹಣವಾಗಲಿ ಸಾಲ ತೀರಿಸಲು ‌ಬಳಸದೆ ವಿದೇಶಿಗಳ ಸಾಲ ತಂದು ಅದರ ಜೊತೆಗೆ ಅವರ ಶಿಕ್ಷಣ,ವ್ಯವಹಾರ,ವ್ಯಕ್ತಿ  ದೇಶದೊಳಗೆ ಬರಲು ಒಪ್ಪಂದ ಮಾಡಿಕೊಳ್ಳುವಾಗ ಯಾವ ಸಾಮಾನ್ಯಪ್ರಜೆಗಳ ಮತಕ್ಕೆ ಬೆಲೆಯಿರದು. ಮತದಾನದ ಸಮಯದಲ್ಲಿ ಮನೆಮನೆ ಬಾಗಿಲಿಗೆ ಬಂದು ಗೆಲ್ಲಲು ಬಳಸುವ ತಂತ್ರಕ್ಕೆ ಬಲಿಯಾಗೋದು ಜನಸಾಮಾನ್ಯರೆ .
ಒಟ್ಟಿನಲ್ಲಿ  ಸರಳ,ಸುಲಭ ಸುಂದರ ಶಾಂತಿಯ ಜೀವನ‌
ನಡೆಸಲು ಬಿಡದ ಈ ರಾಜಕೀಯದ ಪ್ರಭಾವಕ್ಕೆ ಒಳಗಾದ ಎಷ್ಟೋ ಬಡವರ ಜ್ಞಾನ  ಹಿಂದುಳಿದು ಅಜ್ಞಾನ ಹೆಚ್ಚಾಗಿ ಸಾಲದ ಸುಳಿಯಲ್ಲಿ ಜೀವ ಹೋದರೂ ಕೇಳೋರಿಲ್ಲ. ಸಾವಿನಲ್ಲಿಯೂ ಮಧ್ಯವರ್ತಿ ಗಳು  ರಾಜಕೀಯ ತೂರಿಸಿ ಪಕ್ಷ ಪಕ್ಷ ಗಳ ನಡುವೆ  ಇನ್ನಷ್ಟು ಬೆಂಕಿ ಬಿರುಗಾಳಿ ಎಬ್ಬಿಸಲು ಸ್ವಾತಂತ್ರ್ಯ ಇರೋವಾಗ  ಇದಕ್ಕೆ ಕಾರಣವೇ ಸ್ವಾತಂತ್ರ್ಯ ವನ್ನು ದುರ್ಭಳಕೆ ಮಾಡಿಕೊಂಡು  ಜೀವನ ನಡೆಸುತ್ತಿರುವ ಮಧ್ಯವರ್ತಿಗಳಷ್ಟೆ. ಅಧಿಕಾರ ಯಾರಿಗೆ ಬಂದರೂ ಜನರಲ್ಲಿ ಅಜ್ಞಾನ ತುಂಬಿದ್ದರೆ  ದೇಶವನ್ನು ವಿದೇಶ ಮಾಡೋದರಿಂದ ಪ್ರಗತಿ ಎನ್ನುವ ವರೆ  ಹೆಚ್ಚಾಗಿರೋದು  ಯೋಗಿಗಳ ದೇಶ ಭೋಗಿಗಳ ಕೈವಶವಾಗಲು ಕಾರಣ. ಇದನ್ನು ತಡೆಯಲು ಕಷ್ಟ ಆದರೆ ಪ್ರಜೆಗಳು ಎಚ್ಚರವಾದರೆ ತಡೆಯಬಹುದು. ಪ್ರಜೆಗಳನ್ನು ಎಚ್ಚರಿಸುವ  ಕೆಲಸ ಮಾಡುವವರು ಯಾರು?
ಬೇಲಿಯೇ ಎದ್ದು ಹೊಲಮೇಯ್ದರೆ ಕಾಯುವವರು ಯಾರು?
ಎಲ್ಲರನ್ನೂ ಕಾಯುತ್ತಿರುವ ಮೇಲಿರುವ ಶಕ್ತಿ ಕಡೆಗೆ ದೃಷ್ಟಿ ಹಾಯಿಸಿ ಅಧ್ಯಾತ್ಮದ ಸತ್ಯಕ್ಕೂ ಭೌತಿಕ ಮಿಥ್ಯಕ್ಕೂ ಬೆಳೆದ ಅಂತರ ಕುಗ್ಗಿಸುವ ಕೆಲಸ ಸರ್ಕಾರಗಳು ಮಾಡಿಲ್ಲ.ಪ್ರಜೆಗಳು ಬಿಟ್ಟಿಲ್ಲವೆಂದರೆ ಸರಿಯಾಗಬಹುದು. ಬಿಡದ ಕಾರಣವೇ ಇಂದಿನ ಬಿಕ್ಕಟ್ಟಿನ ‌ಸ್ಥಿತಿ. ಇದರ ಫಲ ಅನುಭವಿಸುವಾಗ ಯಾವ. ರಾಜಕಾರಣಿ‌ ಮಹಾರಾಜರು ಇರೋದಿಲ್ಲ.ಕರ್ಮಕ್ಕೆ ತಕ್ಕಂತೆ ಫಲ ನೀಡುವ ಭಗವಂತನೊಬ್ಬನೆ. ದೇಶ ಒಂದೇ ಅದರೊಳಗಿರುವ‌ಪ್ರಜೆಗಳನ್ನು ಒಂದಾಗಿಸುವ ತತ್ವಜ್ಞಾನವಿಲ್ಲದೆ ತಂತ್ರದಿಂದ ಜನರನ್ನು ಬೇರೆ ಮಾಡಿ ಆಳುವ ರಾಜಕೀಯಕ್ಕೆ  ಸಹಕಾರ ನೀಡಿದವರೆ ಪ್ರಜೆಗಳು. 
ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎನ್ನುವಂತೆ
ಹೊರಗಿನಿಂದ ಬಂದು‌ಮಧ್ಯೆ ನಿಂತು ತಮ್ಮ ಸ್ವಾರ್ಥ ಸುಖಕ್ಕಾಗಿ  ಸರ್ಕಾರದ ಹಣವನ್ನು ದುರ್ಭಳಕೆ ಮಾಡಿಕೊಂಡು  ನಮ್ಮವರನ್ನೇ ನಮಗೆ ಶತ್ರುವಾಗಿಸಿ ಮೆರೆದರೆ  ಎಲ್ಲಾ  ಬಂದಿರೋದೂ ಒಂದೇ ಕಡೆಯಿಂದ ಹೋಗುವಾಗಲೂ ಅದೇ ಸ್ಥಾನದೆಡೆಗೆ ಕರ್ಮ ಧರ್ಮ ಇದ್ದರೆ ಶಾಂತಿ ಒಳಗೇ ಸಿಗುತ್ತದೆ. ಹೊರಗೆ ಬಂದಷ್ಟೂ ಅಶಾಂತಿಯ ಅತಂತ್ರಸ್ಥಿತಿಗೆ ಜೀವ ತಲುಪುತ್ತದೆ ಎನ್ನಬಹುದು.
ದೇಶ ಬಿಟ್ಟು ಹೋದವರಿಗೆ ದೇಶದ ಚಿಂತೆ ಯಾಕೆ? ಅವರ ಹೆಸರಿನಲ್ಲಿರುವ ಆಸ್ತಿ ಬೇಕೆ? ಚುನಾವಣೆಯಲ್ಲಿ ಮತ ಹಾಕದ ಎಷ್ಟೋ  ಮಂದಿಗೆ ಸರ್ಕಾರದ ಸಾಲ,ಸೌಲಭ್ಯ ಯಾಕೆ ಕೊಡಬೇಕು? ವಿದೇಶಿಗಳನ್ನು ಮುಂದಿಟ್ಟುಕೊಂಡು ಹಣ ಮಾಡುವ ವ್ಯವಹಾರದಲ್ಲಿ  ಧರ್ಮ ಬೇಧ ಯಾಕಿಲ್ಲ?.ಸಾಮಾನ್ಯಜನರ  ಸಾಮಾನ್ಯಜ್ಞಾನವನ್ನು ಕೀಳಾಗಿ ಕಾಣೋರು ಅಸಮಾನ್ಯರಾಗೋದಿಲ್ಲ. ಜ್ಞಾನ  ಒಳಗಿನ ಶಕ್ತಿ. ಹಣ  ಹೊರಗಿನ ಶಕ್ತಿ. ಹೊರಗಿನ ಸಾಲ ತೀರಿಸದೆ ಒಳಗಿನ ಜ್ಞಾನ  ಸಿಗೋದಿಲ್ಲ. ಸರಳವಾಗಿರುವ  ಹಲವು ವಿಚಾರಗಳನ್ನು ಬಿಟ್ಟು ಬೇಡವಾದದ್ದನ್ನು ತಲೆಗೆ ತುಂಬಿ  ಜನರನ್ನು ಆಳುವುದೇ ರಾಜಕೀಯ ವಾಗುತ್ತಿದೆ ಎಂದರೆ ಎತ್ತ ಸಾಗುತ್ತಿದೆ ಭಾರತ ದೇಶ? ಬದಲಾವಣೆ ನಮ್ಮಿಂದಾಗಬೇಕು. ರಾಜಕಾರಣಿಗಳ  ಅಧಿಕಾರ ದಾಹ ತೀರಿಸಲು ನಾವ್ಯಾರು,?
ನಮ್ಮ ಅತಿಆಸೆಗೆ ತಕ್ಕಂತೆ  ಭಾಗ್ಯ ಕೊಡಲು ಅವರು ಯಾರು? ಈ ಪ್ರಶ್ನೆಗೆ ಉತ್ತರ  ರಾಜಕೀಯದಲ್ಲಿ ಸಿಗದು.
ಹಿಂದಿನ ಕಾಲದಲ್ಲಿದ್ದ ಶಿಕ್ಷಣದ ಸತ್ಯ ಸತ್ವವಿಲ್ಲ. ನಂತರದಲ್ಲಿ ಬೆಳೆದ  ಅಜ್ಞಾನದ  ಅಸಮಾನತೆಯೂ ಇಲ್ಲ.ಎಲ್ಲರಲ್ಲಿಯೂ ಸಾಕಷ್ಟು ಹಣ ಆಸ್ತಿ ಅಧಿಕಾರವಿದ್ದರೂ ಹಂಚಿಕೊಂಡು ಬಾಳುವ ಜ್ಞಾನವೇ ಇಲ್ಲವಾದರೆ ಶಾಂತಿ ಹೇಗೆ ಸಿಗಬೇಕು?

No comments:

Post a Comment