ಒಬ್ಬರ ಸ್ವತ್ತನ್ನು ಇನ್ನೊಬ್ಬರು ಪಡೆದು ಅನುಭವಿಸುವುದು ಸುಲಭ. ಆದರೆ ಆ ಸ್ವತ್ತಿನ ಹಿಂದೆ ಇದ್ದ ಕರ್ಮ ಫಲವನ್ನು ಅನುಭವಿಸುವಾಗ ಯಾರೂ ಸಹಕರಿಸುವುದಿಲ್ಲ. ಇದೊಂದು ರೋಗವಿದ್ದಂತೆ. ಪಾಲುದಾರರ ಕಥೆ ಹೀಗೇ ತಾನೂ ಸುಖವಾಗಿರೋದಿಲ್ಲ ಇನ್ನೊಬ್ಬರಿಗೂ ಸುಖವಾಗಿರಲು ಬಿಡೋದಿಲ್ಲ. ಇದು ಮನೆ ಮನೆಯ ಕಥೆ.ನಂತರ ಸಮಾಜಕ್ಕೆ ಬಂದು ದೇಶದ ತುಂಬಾ ಹರಡಿಕೊಂಡಾಗ ಪಾಲು ಕೇಳದವರೂ ಅನುಭವಿಸಬೇಕು. ಜನ್ಮ ಪಡೆದಾಗಲೇ ಅವರವರ ಪಾಲನ್ನು ಕೊಟ್ಟು ಕಳಿಸುವ ಪರಮಾತ್ಮ ತಾಳುವುದನ್ನು ಕಲಿಸಲಿಲ್ಲವೆ? ತಾಳುವ ಗುಣವಿದ್ದರೂ ಪೋಷಕರಲ್ಲಿ ತಾಳ್ಮೆಯಿಲ್ಲದೆ ಹೋಗಿದ್ದರೆ ಮಕ್ಕಳಾದರೂ ಏನು ಮಾಡಬಹುದು?
ಹಾಗೆಯೇ ಸಮಾಜದ ಮಧ್ಯೆ ಇದ್ದಾಗ ಒಬ್ಬರಿಗೊಬ್ಬರು ಹೊಂದಿಕೊಂಡು ತಾಳ್ಮೆಯಿಂದ ನಡೆದರೆ ನಿಜವಾದ ಸುಖ ಹತ್ತಿರವೇ ಇರುತ್ತದೆ. ತಾಳ್ಮೆಯಿಲ್ಲದೆ ಸಮಾಜ ಬೇರೆ ನಾನೇ ಬೇರೆ ಎಂದು ಸಮಾಜದ ಸ್ವತ್ತನ್ನು ಬಳಸಿ ದುವರ್ತನೆ ತೋರಿದರೆ ಸಮಾಜ ಒಮ್ಮೆ ಎತ್ತಿ ಒಗೆಯುತ್ತದೆ. ಹಾಗೆಯೇ ದೇಶದ ಮೂಲ ಸಂಪತ್ತನ್ನು ಸರಿಯಾಗಿ ತಿಳಿದು ಬಳಸಿ ಸಮಾಜದ ಏಳಿಗೆಗೆ ಶ್ರಮಿಸಿದರೆ ಸಮಾಜಕಲ್ಯಾಣವಾಗುತ್ತದೆ. ಇಲ್ಲವಾದರೆ ಸಮಾಜ ದ್ರೋಹಿಗಳೇ ಹೆಚ್ಚಾಗಿ ದೇಶವನ್ನು ಆಳಲು ಹೊರಟು ವಿದೇಶ ಮಾಡುವಾಗ ದೇಶದ ಮೂಲ ಸಂಪತ್ತು ಕುಸಿದು ಹೋಗುತ್ತದೆ. ಯಾವುದೇ ಆಗಲಿ ಹೊಂದಿಕೆಯಾಗದಿದ್ದರೆ ಬಿಟ್ಟು ಬಿಡಬೇಕು. ಒತ್ತಾಯದಿಂದ, ಆಪರೇಷನ್ ನಿಂದ, ಅಧಿಕಾರದಿಂದ, ಹಣದಿಂದ ಒಂದಾಗಿಸುವಪ್ರಯತ್ನ ಮಾಡಿದರೆ ತಾತ್ಕಾಲಿಕ ಸಾಧನೆಯಾದರೂ ಹೊರಗಿನ ಶಕ್ತಿ ತನ್ನ ಬಲಪ್ರಯೋಗ ಒಳಗೆ ನಡೆಸುವಾಗ ಒಳಗಿರುವವರ ಶಕ್ತಿ ಇನ್ನೂ ಹೀನಸ್ಥಿತಿಗೆ ತಲುಪಬಹುದು.ಅದಕ್ಕೆ ಹೇಳಿದ್ದು ತಾಳಿದವನು ಬಾಳಿಯಾನು ಎಂದು ಹಾಗೆಯೇ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದು. ಇದಕ್ಕೆ ಬೇಕಿದೆ ತಾಳ್ಮೆಯ ಜೀವನ. ತಾಳ್ಮೆ ಆಂತರಿಕ ಶಕ್ತಿಯಾದ್ದರಿಂದ ಆತ್ಮಜ್ಞಾನದ ನಂತರ ತಾಳ್ಮೆ ಹೆಚ್ಚುವುದು. ವೈಜ್ಞಾನಿಕ ಜಗತ್ತಿನಲ್ಲಿ ಜನರ ಮನಸ್ಸು ತಾಳ್ಮೆಯಿಲ್ಲದೆ ಚಲಿಸುತ್ತಿದೆ.ಇದಕ್ಕೆ ಪರಿಹಾರ ಅಧ್ಯಾತ್ಮ ಜಗತ್ತಿನಲ್ಲಿದೆ. ತುಂಬಾ ಮುಂದೆ ಹೋದವರಿಗೆ ತಿರುಗಿ ಬರಲಾಗದಿದ್ದರೂ ಹಿಂದೆ ನಡೆಯುತ್ತಿರುವವರಿಗೆ ಸರಿಯಾದ ಮಾರ್ಗದರ್ಶನ ವಾದರೆ ಯಾರ ಸ್ವತ್ತಿಗೂ ಆಸೆ ಪಡದೆ ಅವರ ಸ್ವತ್ತನ್ನು ಉತ್ತಮವಾಗಿ ಬೆಳೆಸಿಕೊಂಡು ಬಾಳುವ ಜೀವನ ನಮ್ಮದಾಗಬಹುದು. ಬಹಳ ಕಷ್ಟ ಆಸೆ ಬಿಡೋದು.ಅತಿಆಸೆ ಬಿಟ್ಟರೆ ಸಾಕು. ಬೇರೆಯವರ ಸ್ವತ್ತು ಋಣ ಅಥವಾ ಸಾಲ ಎನ್ನುವ ಸತ್ಯ ತಿಳಿದು ನಡೆದರೆ ಸಾಕಷ್ಟು ಪ್ರಗತಿ ಕಾಣಬಹುದು. ಭೌತಿಕ ಜೀವನ ಅಧ್ಯಾತ್ಮ ಜೀವನ ಒಂದೇ ನಾಣ್ಯದ ಎರಡು ಮುಖಗಳೆ ಆದರೂ ವ್ಯವಹಾರಕ್ಕೆ ಎರಡೂ ಒಂದೇ ಸಮ ನಡೆಸಲಾಗದು.
ಕಾರಣ ಇಲ್ಲಿ ಸಾಲ ತೀರಿಸಲು ಹಣವನ್ನು ದಾನ ಮಾಡಬೇಕು. ದಾನ ಮಾಡಿದರೆ ಹಣದ ನಷ್ಟ ಎನಿಸಿದರೂ ನಮ್ಮ ಸಾಲ ತೀರಿತೆನ್ನುವ ಜ್ಞಾನ ಒಳಗೆ ಇರುತ್ತದೆ. ಬೇರೆಯವರಿಗೆ ದಾನಮಾಡುವಷ್ಟು ಇದೆ ಎಂದರೆ ಬೇರೆಯವರ ಪಾಲು ನಮ್ಮ ಬಳಿ ಇತ್ತು ಎಂದರ್ಥ ವಲ್ಲವೆ?ಸಮಸ್ಯೆಗಳು ರೋಗಗಳೂ ಅದರೊಂದಿಗೆ ಸೇರಿರುವಾಗ ಅದನ್ನು ಅನುಭವಿಸುವ ಬದಲಾಗಿ ಉತ್ತಮಕಾರ್ಯಕ್ಕೆ ಬಳಸುತ್ತಾ ಹೋದರೆ ಕೆರೆಯ ನೀರನು ಕೆರೆಗೆ ಚೆಲ್ಲಿ ಎಂದಂತೆ ಪರಮಾತ್ಮನು ಯಾರಿಗೆ ಸೇರಬೇಕೋ ಕೊಡುತ್ತಾನೆ. ಹೀಗಾಗಿ ಪಿತ್ರಾರ್ಜಿತ ಸ್ವಯಾರ್ಜಿತ ಆಸ್ತಿ ಯಾವ ಮಾರ್ಗದ ಸಂಪಾದನೆ ಎನ್ನುವುದರ ಮೇಲಿದೆ ನಮ್ಮ ಹಾಗು ನಮ್ಮ ಮುಂದಿನ ಪೀಳಿಗೆಯ ಭವಿಷ್ಯ.
ಮತದಾನವೂ ಇದಕ್ಕೆ ಹೊರತಾಗಿಲ್ಲ. ನಾವು ಮಾಡಿದ ದಾನಕ್ಕೆ ಪ್ರತಿಯಾಗಿ ಬಯಸಬಾರದೆನ್ನುವರು.ಆದರೆ ಇಂದು ಬೇಡಿಕೆಯ ಸರಮಾಲೆ ಮೊದಲೇ ತಯಾರಿಟ್ಟುಕೊಂಡು ಮತ ಹಾಕಿ ದಾನವರು ಹೆಚ್ಚಾಗಿದ್ದಾರೆ. ಯಾರ ಹಣವನ್ನೋ ಯಾರ ಭಾಗ್ಯವನ್ನೋ ಯಾರ ಸಾಲವನ್ನೋ ಎಲ್ಲರಿಗೂ ಹಂಚಿದರೆ ಯಾರದ್ದೋ ಕರ್ಮ ಅನುಭವಿಸಲೇಬೇಕಷ್ಟೆ.
ದೇಶದ ಆರ್ಥಿಕ ಸ್ಥಿತಿ ಹದಗೆಟ್ಟರೂ ವಿದೇಶಿ ಬಂಡವಾಳ ಸಾಲ,ವ್ಯವಹಾರಕ್ಕೆ ಹೆಚ್ಚು ಒತ್ತುಕೊಡುವ ಬದಲು ನಮ್ಮ ಸಂಪಾದನೆಯಾಗಲಿ ಅತಿಯಾದ ಆಸ್ತಿಯಾಗಲಿ ದೇಶದ ಋಣ ತೀರಿಸಲು ಬಿಟ್ಟು ಕೊಡುವ ಜ್ಞಾನ ಪ್ರಜೆಗಿದ್ದರೆ ನಿಜವಾದ ಪ್ರಜಾಪ್ರಭುತ್ವ ದೇಶವಾಗಿ ಉತ್ತಮ ಹಿಂದೂ ದೇಶವಾಗಿರುತ್ತದೆ. ಪರಧರ್ಮ, ಪರದೇಶದ ಋಣ ಏರಿಸಿ ರಾಜನಂತೆ ಬದುಕುತ್ತೇನೆಂದರೆ ಧರ್ಮ ವಲ್ಲ. ಇಲ್ಲಿ ಯಾವ ಪಕ್ಷ,ರಾಜಕಾರಣಿ, ವ್ಯಕ್ತಿ,ಧರ್ಮ, ಜಾತಿಯನ್ನು ಹಿಡಿದು ಹೇಳಿಲ್ಲ.ಮನುಕುಲಕ್ಕೆ ಈ ಸ್ವಾರ್ಥದ ಜೀವನ ಎಷ್ಟು ಅಪಾಯಕಾರಿ ಎನ್ನುವ ಸತ್ಯ ಇದರಲ್ಲಿದೆ. ಸ್ವಾರ್ಥಿಗಳು ಅಹಂಕಾರಿಗಳು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದಾರೆ ಎಂದರೆ ನಮ್ಮ ಸಹಕಾರವಿಲ್ಲದೆ ಹೇಗೆ ಬೆಳೆಯಲಾಗುವುದು?
ಇಂತಹ ಸಹಕಾರವು ಸತ್ಯ ಧರ್ಮ, ನ್ಯಾಯ ನೀತಿಯ ಶಿಷ್ಟರಿಗೆ ಸಿಗದ ಕಾರಣ ಭ್ರಷ್ಟಾಚಾರ ಮುಗಿಲುಮುಟ್ಟಿದೆ.
ಒಮ್ಮೆ ಕೆಳಗೆ ಬೀಳಲೇಬೇಕು. ಇದನ್ನು ತಡೆಯಲು ಕಷ್ಟ.
ಮೂರುತಲೆಮಾರು ಕುಳಿತು ತಿನ್ನುವ ಭೌತಿಕ ಆಸ್ತಿಗಿಂತ ನೂರು ತಲೆ ಓಡಿಸಿ ಸ್ವಾವಲಂಬನೆ ಜೀವನ ನಡೆಸುವ ಜ್ಞಾನವನ್ನು ಮುಂದಿನ ಪೀಳಿಗೆ ಪಡೆದರೆ ಎಲ್ಲರೂ ಕ್ಷೇಮ.ಇದು ಸಾಧ್ಯವಾಗದ ಸತ್ಯವಾದರೂ ಇದೇ ಜೀವನ ಸತ್ಯ. ಜೀವನದ ಗುರಿಯೇ ಜ್ಞಾನಸಂಪಾದಿಸಿ ದಾನ ಮಾಡಿ ಹೋಗುವುದು. ಜೀವವಿರೋವರೆಗೂ ಹಣ ಸಂಪಾದನೆ ಮಾಡಿದರೂ ಸತ್ಕರ್ಮ ವಿಲ್ಲವಾದರೆ ದಾನವೂ ವ್ಯರ್ಥ.
ದಾನವರ ಸಂಪಾದನೆಯ ಹಣ ಅಧರ್ಮದ್ದಾಗಿರಬಹುದು. ಹಣದ ಮೂಲಕ ಋಣ ಹಾಗು ಪಾಪಕರ್ಮಗಳೂ ಪಡೆದವರಿಗೆ ಸುತ್ತಿಕೊಳ್ಳುವುದು.ಇದನ್ನು ವೈಜ್ಞಾನಿಕ ಸಂಶೋಧನೆ ಒಪ್ಪಲಿ ಬಿಡಲಿ ಸತ್ಯ ಒಂದೇ ಅದೇ ಅಧ್ಯಾತ್ಮ
No comments:
Post a Comment