ಸಾಮಾಜಿಕ ಕಾರ್ಯ ಕರ್ತರು, ಸಮಾಜಸೇವಕರಾಗಬೇಕಾದರೆ ಹಣಬಲ ಜನಬಲ ಬೇಕುಇದು ಸಮಾಜವೇ ಕೊಡುವುದರಿಂದ ಇದರಲ್ಲಿ ಸೇವೆ ಎಲ್ಲಿರಬೇಕು?ನಿಜವಾದ ಸೇವೆ ತಮ್ಮ ದುಡಿಮೆಯ ಹಣದಿಂದ ಮಾಡಿದಾಗಲೇ ಪರಮಾತ್ಮನ ಸೇವೆಯಾಗುವುದೆಂದಾಗ ನಾವು ಕಾಣುತ್ತಿರುವ ದೇಶಸೇವೆ ದೇವರ ಸೇವೆ,ಸಮಾಜಸೇವೆ,ಸಂಘ ಸೇವೆ,ಶಕ್ತಿ ಸೇವೆಯು ದೇಶವನ್ನು ಸನ್ಮಾರ್ಗದಲ್ಲಿ ನಡೆಸಬೇಕಿತ್ತು. ಎಲ್ಲೋ ಕೆಲವರು ತಾವು ಸಂಪಾದಿಸಿದ ಹಣವನ್ನು ಧಾರ್ಮಿಕ ಸೇವಾಕಾರ್ಯಕ್ಕೆ ರಾಷ್ಟ್ರೀಯ ಸೇವಾ ಸಂಘಕ್ಕೆ ಹಾಗೆಯೇ ಕೆಲವು ಆಶ್ರಮಗಳಿಗೆ ಕೊಟ್ಟು ಸೇವಕರೆನ್ನಿಸಿಕೊಂಡರೂ ಆ ಹಣವನ್ನು ಪಡೆದವರು ನಿಜವಾದ ಬಡವರೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ.ಬಡತನವನ್ನು ಹಣದಿಂದ ಅಳೆಯುವುದಾದರೆ ಸಾಲದಲ್ಲಿರುವ ದೇಶದೊಳಗಿರುವಪ್ರತಿಯೊಬ್ಬರೂ ಸಾಲಗಾರರೆ, ಈ ಸಾಲ ತೀರಿಸಲು ಕಷ್ಟಪಟ್ಟು ದುಡಿಯುವ ಪ್ರಜೆಗಳ ಅಗತ್ಯವಿತ್ತು. ಸರ್ಕಾರಿ ಸೇವೆಯಲ್ಲಿರುವ ಅನೇಕ ರಿಗೆ ಸರ್ಕಾರದ ಹಣವನ್ನು ಹೇಗೆ ಬಳಸಿದರೆ ಜೀವನದಲ್ಲಿ ಸುಖವಾಗಿರಬಹುದೆನ್ನುವ ಜ್ಞಾನವಿಲ್ಲ. ದುಂದುವೆಚ್ಚ ಮಾಡಿ ಖಾಸಗಿ ಉದ್ಯೋಗಸ್ಥರಂತೂ ನಾವೇ ಬೇರೆ ದೇಶ ಬೇರೆ ಎನ್ನುವ ಹಂತಕ್ಕೆ ತಲುಪಿ ಸರ್ಕಾರದ ದಾರಿತಪ್ಪಿಸಿ ಅಥವಾ ಜನಸಾಮಾನ್ಯರ ದಾರಿತಪ್ಪಿಸಿ ಮಧ್ಯವರ್ತಿಗಳಾಗಿರೋದು ದೊಡ್ಡ ದುರಂತ ಕ್ಕೆ ಕಾರಣ.
ನಿಜವಾಗಿಯೂ ಸೇವಕರು ಯಾರು? ದಾಸರು ಯಾರು? ಶರಣರು ಯಾರು? ಮಹಾತ್ಮರು ಎಲ್ಲಿರುವರು? ಇದನ್ನು ಅಧ್ಯಾತ್ಮದ ಸತ್ಯದಿಂದ ಮಾತ್ರ ತಿಳಿಯಬಹುದಷ್ಟೆ. ಈವರೆಗೆ ಜನರಿಗೆ ದೇವರನ್ನು ಹೊರಗೆ ತೋರಿಸಿಕೊಂಡು ಶ್ರೀಮಂತ ವ್ಯಕ್ತಿಯಾಗಿ ದೇಶ ವಿದೇಶದವರೆಗೆ ಪ್ರಸಿದ್ದರಾದವರು ದೇವರೆ? ಸೇವಕರೆ? ಶರಣರೆ? ದಾಸರೆ? ಮಹಾತ್ಮರೆ? ಇದು ನಮ್ಮ ಆತ್ಮಹತ್ಯೆಯವರೆಗೆ ಹೋಗಬಾರದೆಂದರೆ ನಾವು ನಮ್ಮ ಸಂಪಾದನೆಯ ಹಣವನ್ನು ಸದ್ಬಳಕೆ ಮಾಡಿಕೊಂಡು
ಕೆರೆಯನೀರನು ಕೆರೆಗೆ ಚೆಲ್ಲಿ ಎಂದಂತೆ ಪರಮಾತ್ಮನಿಂದ ಬಂದ ಹಣವನ್ನು ಪರಮಾತ್ಮನ ಕಾರ್ಯಕ್ಕೆ ಬಳಸುವಾಗಲೂ
ಪರಕೀಯರಂತೆ ನಡೆದುಕೊಳ್ಳಬಾರದಷ್ಟೆ.ತತ್ವ ಎಲ್ಲರನ್ನೂ ಒಂದಾಗಿಸಬೇಕಿತ್ತು.ತಂತ್ರ ಬೆಳೆದು ಸೇವೆಯ ಹೆಸರಿನಲ್ಲಿ ತಮ್ಮತಮ್ಮಲ್ಲೇ ದ್ವೇಷಬೆಳೆಸಿಕೊಂಡು ದೇಶಕಟ್ಟುವನಾಟಕ ಆಡಬಾರದಲ್ಲವೆ? ಎಲ್ಲಿರುವುದು ಸೇವಕರು? ಪರಕೀಯರಿಗೆ ಸೇವೆ ಮಾಡಿ ಪರದೇಶಕ್ಕೆ ನಮ್ಮ ಜ್ಞಾನ ಬಂಡಾರ ಸಾಗಿಸಿದರೆ ಒಳಗೆ ಉಳಿಯೋರು ಯಾರು? ಹೊರಗಿನಿಂದ ಪರಕೀಯರನ್ನು ಒಳಗೆ ಸ್ವಾಗತಿಸುತ್ತಾ ಒಳಗೇ ಇದ್ದ ನಮ್ಮವರನ್ನೇ ಪರದೇಶಕ್ಕೆ ಸಾಗಿಸಿದರೆ ಪ್ರಗತಿ ಯಾರದ್ದು? ಅಧೋಗತಿ ಯಾವುದು?
ನೇರವಾಗಿ ವಿಚಾರ ತಿಳಿಸಿದರೂ ಅರ್ಥ ವಾಗದ ಮನಸ್ಥಿತಿ ಆವರಿಸಿರುವಾಗ ಈ ರೀತಿ ಅಪರೋಕ್ಷವಾಗಿ ಸತ್ಯತಿಳಿಸಿದರೆ ಅರ್ಥ ವಾಗುವುದೆ? ಮಾಡಿದ್ದುಣ್ಣೋ ಮಹಾರಾಯ ಎಂದರೆ ಇದು ಪುರುಷ ಶಕ್ತಿಗೆ ಹೇಳಿರೋದು.
ಭೂತಾಯಿ,ಭಾರತಮಾತೆ,ಕನ್ನೆಡಮ್ಮ ಹೆತ್ತತಾಯಿಯ ಸೇವೆ ಮಾಡೋದೆಂದರೆ ಸಾಧನೆಯಲ್ಲ ಇದು ಧರ್ಮ ವಾಗುತ್ತದೆ.
ಈಗಿನ ಕಾಲದಲ್ಲಿ ತಂದರತಾಯಿಯರೊಂದಿಗೆ ಮದುವೆ ಆದ ಮಕ್ಕಳು ಇದ್ದಾರೆಂದರೆ ಆಶ್ಚರ್ಯ ಪಡುವಂತವರಿದ್ದಾರೆ.
ಕಾರಣ ಪಾಶ್ಚತ್ಯರ ಪ್ರಕಾರ ಒಟ್ಟಿಗೆ ಇರೋದೆ ಕಷ್ಟ. ಭಾರತವು ಇದನ್ನು ಹಿಂದಿನ ಕಾಲದಿಂದಲೂ ಇದ್ದು ತೋರಿಸಿತ್ತು.
ಇದರ ಪರಿಣಾಮ ಒಗ್ಗಟ್ಟಿನ ಬಲ. ಯಾವಾಗವಿದೇಶಿ ಶಿಕ್ಷಣವೇ ನಮ್ಮ ಬಂಡವಾಳವಾಯಿತೋ ಆಗಲೇ ಸೇವೆ ಮಾಡುವವರಿಗಿಂತ ಸೇವೆ ಮಾಡಿಸಿಕೊಳ್ಳುವೆಉ ಹೆಚ್ಚಾಗಿ ಭ್ರಷ್ಟಾಚಾರ ಮುಗಿಲುಮುಟ್ಟಿದೆ. ಇದಕ್ಕೆ ಕಾರಣಕರ್ತರು ಸಾಮಾಜಿಕ ಕಾರ್ಯ ಕರ್ತರೆ ? ಕಾರ್ಯ ಮಾಡಿದರೂ ನಿಸ್ವಾರ್ಥ ನಿರಹಂಕಾರದಿಂದ ಪ್ರತಿಫಲಾಪೇಕ್ಷೆ ಯಿಲ್ಲದೆ ಸತ್ಕರ್ಮದ ಹಣದಿಂದ ಮಾಡಲಾಗುತ್ತಿದೆಯೆ?
ಭ್ರಷ್ಟಾಚಾರದ ಹಣದಿಂದ ಸೇವೆ ಮಾಡಲಾಗಿದೆಯೋ?
ಹಣದ ಮೂಲ ಸಾತ್ವಿಕವಾಗಿದ್ದರೆ ಜನರಲ್ಲಿ ಸತ್ವಗುಣ
No comments:
Post a Comment