ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Saturday, April 15, 2023

ದೈವಭಕ್ತರಿಗೇಕೆ ಕಷ್ಟ ನಷ್ಟ?

ದೈವಭಕ್ತರಿಗೆ ದೇವರಿದ್ದಾನೆನ್ನುವವರಿಗೇ ಹೆಚ್ಚು ಕಷ್ಟಗಳು ಇಲ್ಲವೆನ್ನುವವರು ಸುಖವಾಗಿದ್ದಾರಲ್ಲ ಹಾಗಾಗಿ ನಾನೂ ಇಲ್ಲವೆನ್ನುವವರ ಹಿಂದೆ ನಡೆದರೆ ಸುಖವಾಗಿರಬಹುದೆನ್ನುವ ಭ್ರಮೆಯಲ್ಲಿ  ನಡೆದವರಿಗೆ ಇಲ್ಲವೆಂದವರು ಇಲ್ಲವಾದಾಗ ತಿಳಿಯುವುದು ದೇವರಿದ್ದಾನೆ ನಾನೇ ದೇವರಲ್ಲ ಎಂದು.ಆಗ ಕಾಲಮೀರಿ ಹೋಗಿ  ಕಾಲನ ದರ್ಶನವಾಗಿರುತ್ತದೆ. ನಾನಿರೋವಾಗ ಸಾವು ಬರದು ಸತ್ತಾಗ ನಾನಿರೋದಿಲ್ಲ ಎಂದಂತೆ ನಾನಿದ್ದಾಗ ದೇವರು ಕಾಣೋದಿಲ್ಲ ಆದರೆ ನಾನು ಹೋದವರು ದೇವರು ಕಂಡಿರೋದು ಸತ್ಯ "ಅಹಂ ಬ್ರಹ್ಮಾಸ್ಮಿ" ಹೇಳಲು ಕೇಳಲು ಸುಲಭ. ಕಂಡುಕೊಳ್ಳಲು ಅಹಂಕಾರ  ಹೋಗಬೇಕು. ಇದು ಸತ್ಯ ಜಗತ್ತಿನಲ್ಲಿ ತುಂಬಿಕೊಂಡಿರುವ ಅಹಂಕಾರ ಸ್ವಾರ್ಥ ದ ರಾಜಕೀಯದಲ್ಲಿ ಮುಳುಗಿರುವ ಮಾನವನಿಗೆ ತತ್ವದರ್ಶನ ಕಷ್ಟ.ತಂತ್ರದ ದರ್ಶನ ವಾಗುತ್ತಿದ್ದರೂ  ಬಿಡಿಸಿಕೊಂಡು  ಹೊರಬರುವುದೇ ದೊಡ್ಡ ಸಮಸ್ಯೆ. ಏನಿಲ್ಲವೆಂದರೂ ಎಲ್ಲಾ ಇದೆ ಎಂದುಕೊಳ್ಳುವುದು ಸುಲಭವಲ್ಲ. ಎಷ್ಟಿದ್ದರೂ ಸಾಕೆಂಬ ತೃಪ್ತಿ ಸಿಗದು. ಹಾಗೆಯೇ ಎಷ್ಟೋ ದೇವರನ್ನು ಕಾಡಿ ಬೇಡಿ ಪಡೆದರೂ ಆತ್ಮತೃಪ್ತಿ ಸಿಗದಿದ್ದರೆ ನಮ್ಮ ಬೇಡಿಕೆಯಲ್ಲಿರುವ ದೋಷ ತಿಳಿಯುವುದು ಅಗತ್ಯವಾಗಿದೆ.ಶಾಶ್ವತವಾದದ್ದನ್ನು ಬೇಡಿದಷ್ಟೂ ಕಷ್ಟಗಳು ಹೆಚ್ಚುವುದು.ಶಾಶ್ವತವಲ್ಲದ್ದು  ಸುಖವಾಗಿ ಸಿಗುತ್ತದೆ. ಕಾರಣವಿಷ್ಟೆ ಭೂಮಿಯ ಮೇಲಿರುವ ಧನ -ಕನಕ ವಸ್ತು -ಒಡವೆ ಸಂಪತ್ತುಗಳು  ಬೇಗ ಪಡೆಯುವಲ್ಲಿ ತಂತ್ರ ಸಹಕಾರಿಯಾದರೆ, ದೈವತ್ವದೆಡೆಗೆ ಹೋಗೋದಕ್ಕೆ  ಇವೆಲ್ಲವನ್ನೂ ಬಿಡುತ್ತಾ ತನ್ನ ಒಳಗಿನ ತತ್ವಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳುತ್ತಾ ಸ್ವತಃ ಪ್ರಯತ್ನ ಪಟ್ಟರೆ ಮಾತ್ರ ಸಾಧ್ಯ.ಈ ಪ್ರಯತ್ನದಲ್ಲಿ ಸಾಕಷ್ಟು ವಿಘ್ನಗಳು ಹೊರಗಿನಿಂದ  ಬಂದಾಗ  ಮಾನವ  ಪ್ರಯತ್ನಕ್ಕೆ ತಡೆಯಾಗುತ್ತದೆ.ನಿರಂತರ ಪ್ರಯತ್ನ ನಡೆಸುತ್ತಾ ಒಳಗೆ ಹೊಕ್ಕಿ ನಡೆದವರಷ್ಟೆ  ಸತ್ಯದರ್ಶನ ಮಾಡಿಕೊಂಡವರಾದರು. ದೇವರನ್ನು ಹೊರಗೆ ಬೆಳೆಸಿದಷ್ಟು ಸುಲಭವಲ್ಲ ಒಳಗೆ ದೈವತ್ವ ತುಂಬಿಕೊಳ್ಳುವುದು. ಹೀಗಾಗಿ ದೇವರನ್ನು ನಂಬಿ ನಡೆದವರಿಗೆ ಕಷ್ಟಗಳೇ ಹೆಚ್ಚು ಕಷ್ಟಪಟ್ಟರೆ ಸುಖವಿದೆ ಎಂದರೆ ದೈವತ್ವ ಪಡೆದ ಮೇಲೇ ಆಂತರಿಕ ಶುದ್ದಿಯಿಂದ ಮನಸ್ಸು ಶಾಂತವಾಗಿರುವುದರಿಂದ ಇದನ್ನು ಶಾಶ್ವತ ಸುಖ ಎಂದರು.
ಅಂದರೆ ಹೊರಗಿನ ವಿಚಾರಗಳನ್ನು ಒಳಗೆ ಸೇರಿಸುವಾಗ  ಯಾವ ವಿಚಾರದಿಂದ ಮನಸ್ಸು ಸ್ವಚ್ಚವಾಗಿ ಶಾಂತವಾಗುವುದೆನ್ನುವುದರ ಪ್ರಜ್ಞೆ ಮಾನವನಿಗಿದ್ದರೆ ಉತ್ತಮ ಮಾರ್ಗ ಇದ್ದಲ್ಲಿಯೇ ಸಿಗುತ್ತದೆ. ದೇಶಸುತ್ತು ಕೋಶ ಓದು ಎನ್ನುವ  ಮೊದಲು ಯಾರ ದೇಶ ಯಾವ ಕೋಶ ಸುತ್ತಿ ಓದಬೇಕೆಂಬ ಅರಿವು ಮುಖ್ಯ. ಅರಿವೇ ಗುರು.ಗುರುವೇ ದೇವರು. ಕಷ್ಟಪಟ್ಟು ದೇವರನ್ನು ಕಂಡವರೆ ಮಹಾತ್ಮರು. ಮಹಾತ್ಮರು ಆತ್ಮಾನುಸಾರ ನಡೆದರು.ಆತ್ಮವೇ ದೇವರು.
ಆತ್ಮ ಯಾವತ್ತೂ ಸತ್ಯದಲ್ಲಿರುವುದು. ಸತ್ಯವೇ ದೇವರು. ಅಂದರೆ ಇಲ್ಲಿ ಯಾವುದೇ ವ್ಯಕ್ತಿಯನ್ನು ದೇವರೆಂದಿಲ್ಲ.
ಒಳಗಿರುವ ಶಕ್ತಿಯನ್ನು  ದೇವರೆಂದಿರುವಾಗ ನಿರಾಕಾರ ಬ್ರಹ್ಮನ ಅರಿಯಲು ಶಕ್ತಿಯ ಅಗತ್ಯವಿದೆ.ವ್ಯಕ್ತಿ ಕಾರಣಮಾತ್ರನಾದ್ದರಿಂದ  ಶಾಶ್ವತವಲ್ಲ. ಪ್ರತಿಯೊಬ್ಬರೂ ದೇವರ ಮಕ್ಕಳಾದರೂ ದೈವತ್ವದ ಗುಣಜ್ಞಾನವಿಲ್ಲದ ಕಾರಣ ದೇವರನ್ನು ಕಾಣಲಾಗಿಲ್ಲ.ಇದಕ್ಕೆ ಪರಿಹಾರ ಒಳಗಿದೆ.
ಶಿಕ್ಷಣದಲ್ಲಿಯೇ  ದೈವತ್ವವಿಲ್ಲವಾದರೆ  ಎಲ್ಲಿಂದ ಸಿಗಬೇಕು? ಒಟ್ಟಿನಲ್ಲಿ ಹೊರಗಿರುವ ವ್ಯವಹಾರದ ರಾಜಕೀಯಕ್ಕೆ  ಹಣ,ಅಧಿಕಾರ,ಸ್ಥಾನಮಾನ ಸನ್ಮಾನ ಪಡೆದ ಜೀವ ಹೋದ ಮೇಲೆ  ದೇವರನ್ನು ಕಾಣಬಹುದಾಗಿದ್ದರೆ ಹಿಂದಿನ ಎಲ್ಲಾ ಮಹಾತ್ಮರೂ ಇವೆಲ್ಲವನ್ನೂ ತ್ಯಜಿಸಿ ಹೋಗುತ್ತಿರಲಿಲ್ಲ. ಇದೊಂದು ಸಾಮಾನ್ಯಜ್ಞಾನವಷ್ಟೆ. ನನಗೆ ದೇವರು ಕಂಡಿದ್ದರೂ ನಾನು ಬೇರೆಯವರಿಗೆ ತೋರಿಸಲಾಗದು  ಆಕಾರವಿಲ್ಲದ್ದನ್ನು  ಇದೆಯೆಂದರೆ ಸತ್ಯವಲ್ಲ. ಸತ್ಯವಿಲ್ಲದ್ದು ತಿಳಿಸಿದರೆ ಧರ್ಮ ವಲ್ಲ. ಧರ್ಮದ ಜೊತೆಗೆ ಸತ್ಯವಿದ್ದರೆ ತತ್ವಜ್ಞಾನ. ಎರಡೂ ಒಂದಾಗಿದ್ದರೆ ಶಾಂತಿ. ಅದ್ವೈತ ದೊಳಗೇ ದ್ವೈತವಿದ್ದರೂ ಶಾಂತಿಗಾಗಿ ನಾವು ಒಗ್ಗಟ್ಟನ್ನು ಬೆಳೆಸಿಕೊಳ್ಳಬೇಕಷ್ಟೆ. ಒಗ್ಗಟ್ಟಿನಲ್ಲಿದೆ ಬಲ. ಜ್ಞಾನಬಲವಿಲ್ಲದೆ ಹಣಬಲ ಜನಬಲವಿದ್ದರೆ  ಪ್ರಯೋಜನವಿಲ್ಲವೆಂದಿದ್ದಾರೆ. 
ಶ್ರೀ ಶಂಕರಾಚಾರ್ಯರಂತಹ ಮಹಾಜ್ಞಾನಿಗಳನ್ನು ಮಂಡನ ಮಿಶ್ರರಂತಹ ಮಹಾತಪಸ್ವಿಗಳೂ ಸಂಸಾರದಲ್ಲಿದ್ದು ಸತ್ಯ ತಿಳಿದವರು ವಾದದಲ್ಲಿ ಸೋತು ಸಂನ್ಯಾಸ ಸ್ವೀಕಾರ ಮಾಡಿದರಂತೆ. ಜ್ಞಾನಯೋಗ ಕರ್ಮಯೋಗಕ್ಕಿಂತ ಶ್ರೇಷ್ಠ ಎನ್ನುವ ವಿಷಯ ಅಂದಿನ ಕಾಲದಲ್ಲಿದ್ದ  ಮಾನವನ ಅಜ್ಞಾನವನ್ನು  ಹೋಗಲಾಡಿಸಲು  ಇಂತಹ‌ಮಹಾತ್ಮರ ಮೂಲಕ ಪರಮಾತ್ಮ ತೋರಿಸಿದ ಸತ್ಯವೆಂದರೂ ಈಗಿನ ನಮ್ಮ  ಪರಿಸ್ಥಿತಿಗೆ  ಈ ವಿಚಾರದಲ್ಲೂ  ವಾದ ವಿವಾದ ಹೆಚ್ಚಾಗಿರೋದು ಕಾರಣ. ಸಂನ್ಯಾಸಿ ಧರ್ಮ ಸಂಸಾರಿ ಧರ್ಮದ ನಡುವಿರುವ ಮಾನವ ಧರ್ಮವನ್ನೇ ಅರ್ಥ ಮಾಡಿಕೊಳ್ಳಲು ಸೋತಿರುವ  ನಮಗೆ ನಮ್ಮ ಗುರುಹಿರಿಯರಲ್ಲಿದ್ದ  ಧರ್ಮ ಕರ್ಮದ ಮೂಲ ಉದ್ದೇಶವೆ ಗೊತ್ತಿಲ್ಲ. ಹೊರಗಿನವರಿಂದ  ತಿಳಿಯುತ್ತಾ ಮನೆಯಿಂದ ಹೊರಗೆ ಹೋದವರು ದೊಡ್ಡವರಾದರು. ಮನೆಯೊಳಗಿದ್ದು ತಿಳಿದು ಬೆಳೆಸಿದವರು ಹಿಂದುಳಿದವರಾದರು. ಅಂದರೆ ನಾವು  ಭೌತಿಕಾಸಕ್ತಿಗೆ ಹೆಚ್ಚು ಬೆಲೆಕೊಟ್ಟು ಅಧ್ಯಾತ್ಮ ಶಕ್ತಿಯನ್ನು ಕಡೆಗಣಿಸಿ ದೇವರಿಲ್ಲ ನಾನೇ ಎಲ್ಲಾ ಎನ್ನುವವರ ಹಿಂದೆ ನಡೆದು ದೇವರನ್ನು ಕಾಣದಿದ್ದರೆ ತಪ್ಪು ನಮ್ಮೊಳಗೇ ಇದೆ. ಇದನ್ನು ಒಳಗಿಂದಲೇ ಸರಿಪಡಿಸೋ ಬದಲು ಹೊರಗಿನ ಸರ್ಕಾರದ ಹಿಂದೆ ನಡೆದರೆ ಸರಿಯಾಗುವುದೆ? ಇಲ್ಲಿ ಸರ್ಕಾರ ಎಂದರೆ ಸಹಕಾರ.ಯಾರು ನಮ್ಮ ಜೀವನ ನಡೆಸುವರು? ಯಾರು ನಮ್ಮ ಜೀವ ಉಳಿಸುವರು? ಯಾರು ನನ್ನ ಸಂಸಾರ ಸಾಕುವರು? ಯಾರು ನನ್ನ ಆತ್ಮ ರಕ್ಷಣೆ ಮಾಡುವರು? ಇದಕ್ಕೆ ಉತ್ತರ  ಯಾರೂ ಯಾರನ್ನೂ   ಸರಿಪಡಿಸಲಾರರು.ಹಿಂದಿನ ಮಹಾತ್ಮರುಗಳು  ನಡೆದು ನುಡಿದ ಸತ್ಯ  ಅಳವಡಿಸಿಕೊಂಡರೆ ಸಾಧ್ಯವಿದೆ ಎಂದಿದ್ದಾರೆ. ಮಕ್ಕಳು ಮಹಿಳೆಯರಿಗೆ ಇದರ ಅಗತ್ಯವಿದೆ.ಅವರನ್ನು ಮನೆಯಿಂದ ಹೊರತಂದು ರಾಜಕೀಯ ನಡೆಸಿದರೆ ಸರಿಯಾಗುವುದೆ?  ಒಟ್ಟಿನಲ್ಲಿ ರಾಜಕೀಯಕ್ಕಿಂತ ರಾಜಯೋಗ ಮಾನವನಿಗೆ ಅಗತ್ಯವಿದೆ.ಯೋಗವೆಂದರೆ ಸೇರುವುದು.ಮನಸ್ಸು ಅಂತರಾತ್ಮನೊಂದಿಗೆ ಸೇರುವುದು.ಪರಮಾತ್ಮನೊಂದಿಗೆ ಜೀವಾತ್ಮ ಸೇರುವುದು.ಸತ್ಯದೊಂದಿಗೆ ಧರ್ಮ ಸೇರುವುದು. ಜ್ಞಾನದೊಂದಿಗೆ ವಿಜ್ಞಾನ ಸೇರುವುದು. ಧರ್ಮದೊಂದಿಗೆ ರಾಜಕೀಯ ಸೇರುವುದು. ಪೋಷಕರ ಧರ್ಮ ಕರ್ಮಫಲವೇ ಮಕ್ಕಳ ಭವಿಷ್ಯ. ಪ್ರಜೆಗಳ ಧರ್ಮ ಕರ್ಮದ ಫಲವೇ ದೇಶದ ಭವಿಷ್ಯ ಹೀಗೇ ವಿಶ್ವಶಕ್ತಿಯನ್ನು ಅರ್ಥ ಮಾಡಿಕೊಳ್ಳಲು ಮೊದಲು ಒಳಗಿನಿಂದ  ಶಿಕ್ಷಣ ಪ್ರಾರಂಭವಾಗಬೇಕು. ಮನೆ ಮನೆಯೇ  ಗುರುಕುಲವಾಗಿದ್ದ ಭಾರತವನ್ನು  ವಿದೇಶದೆಡೆಗೆ ಗುರುಗಳನ್ನು  ಬೆಳೆಸಿದ್ದರೂ ಮನೆಯೊಳಗಿನ ಗುರುವಿಗೇ ಸರಿಯಾದ ಶಿಕ್ಷಣ ನೀಡದಿದ್ದರೆ ಹೊರಗಿನವರೇ ಒಳಬಂದು ಪಾಠ ಮಾಡಲಾಗುವುದೆ? ಭಾರತದ ಸ್ಥಿತಿಗೆ ಕಾರಣವೇ ಅತಿಯಾದ ವೈಜ್ಞಾನಿಕ ಚಿಂತನೆ, ಅತಿಯಾದ ವೈಚಾರಿಕತೆಯ ರಾಜಕೀಯತೆ,ದ್ವೇಷ ಅಸೂಯೆ,ಭಿನ್ನಾಭಿಪ್ರಾಯದ ಬಿಕ್ಕಟ್ಟು. ಎಲ್ಲಾ ಕೊಟ್ಟು ಬಿಟ್ಟು ಹೋಗುವ  ಬದಲು ಎಲ್ಲಾ ಪಡೆದೂ ಏನೂ  ಶಾಂತಿಯಿಲ್ಲದೆ ಹೋಗುತ್ತಿರುವ ಜೀವಗಳೇ ಹೆಚ್ಚಾಗಿರೋದು ಅಜ್ಞಾನ.ಅಜ್ಞಾನವೆಂದರೆ ಜ್ಞಾನವಿಲ್ಲ ಎಂದರ್ಥವಲ್ಲ. ತಿಳುವಳಿಕೆಯನ್ನು ದುರ್ಭಳಕೆ ಮಾಡಿಕೊಂಡಿರಬಹುದು.ತಿಳಿಯಬೇಕಾದ್ದನ್ನು ಬಿಟ್ಟು ನಡೆದಿರೋದು.ತಿಳಿದಿದ್ದರೂ ತಿಳಿಸದೇ ಹೋಗಿರುವುದು. ತಿಳಿದೂ ತಿಳಿದೂ  ತಪ್ಪು ಮಾಡಿರುವುದು. ಹೀಗೇ  ಆಗಬಹುದು.  ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ತಿಳಿಸುವ ಸ್ವಾತಂತ್ರ್ಯ ವಿದೆ.ಆದರೆ ಅಧಿಕಾರ ಹಣ ಎಲ್ಲರಲ್ಲಿಯೂ ಇಲ್ಲ.ಜ್ಞಾನವಿದೆ ಅದು ಸಾಮಾನ್ಯವಾಗಿರಬಹುದು ಅಸಮಾನ್ಯವಾಗಿರಬಹುದು.ಅದೇ ನಮ್ಮ ಜೀವನಕ್ಕೆ ದಾರಿದೀಪ.ಇದು ಹೊರಗಿಲ್ಲ ಒಳಗಿದೆ ಎಂದಿದ್ದಾರೆ ವಿವೇಕಾನಂದರು.

No comments:

Post a Comment