ಭಾರತದಲ್ಲಿ ಕ್ಷಾತ್ರವು ಕೇವಲ ಒಂದು ಸಾಹಸ ಪ್ರವೃತ್ತಿ/ ಆಳುವ ಸಾಮರ್ಥ್ಯವಷ್ಟೇ ಆಗಿರದೆ ಒಂದು ಧರ್ಮವಾಗಿ, ಆತ್ಮೋನ್ನತಿಯ ಸೋಪಾನವಾಗಿ ಹೃನ್ಮನಗಳಲ್ಲಿ ಆರಾಧನೆಯನ್ನೇ ಪಡೆದಿದೆ. ಆತ್ಮರಕ್ಷ ಣೆಗೆ ನಿಲ್ಲುವುದೂ ಕ್ಷಾತ್ರವೇ. ರಕ್ಷ ಣೆ ಕೋರಿದವರ ಸಹಾಯಕ್ಕೆ ನುಗ್ಗುವುದು ಉನ್ನತ ಮಟ್ಟದ ಕ್ಷಾತ್ರ.
ಕ್ಷೇತ್ರರಕ್ಷ ಣಾತ್ ಕ್ಷತ್ರಿಯಃ- ದೇಶದ ಸೀಮೆಯನ್ನೂ, ಶಾಂತಿ- ಸಮರಸತೆಗಳನ್ನೂ ಕಾಪಾಡುವುದೇ 'ಕ್ಷಾತ್ರ'. ಭಾರತದಲ್ಲಿ ಕ್ಷಾತ್ರವು ಕೇವಲ ಒಂದು ಸಾಹಸ ಪ್ರವೃತ್ತಿ/ ಆಳುವ ಸಾಮರ್ಥ್ಯವಷ್ಟೇ ಆಗಿರದೆ ಒಂದು ಧರ್ಮವಾಗಿ, ಆತ್ಮೋನ್ನತಿಯ ಸೋಪಾನವಾಗಿ ಹೃನ್ಮನಗಳಲ್ಲಿ ಆರಾಧನೆಯನ್ನೇ ಪಡೆದಿದೆ
ತ್ಯಾಗ- ಪರಾಕ್ರಮಗಳನ್ನು ಮೆರೆಯುವುದು ಉನ್ನತತಮ ಕ್ಷಾತ್ರ. ಜಗತ್ತಿನಲ್ಲಿ ಎಲ್ಲೇ ನ್ಯಾಯಕ್ಕೆ ಕುತ್ತು ಒದಗಿದರೂ, ದುಷ್ಟದಮನಕ್ಕಾಗಿ ಅಲ್ಲಿಗೇ ಧಾವಿಸುವುದು ಅತ್ಯುನ್ನತ ಕ್ಷಾತ್ರ. ಇಂತಹ ಕ್ಷಾತ್ರವು ಮನುಕುಲದಲ್ಲಿ ಇರುವುದರಿಂದಾಗಿಯೇ ಲೋಕದಲ್ಲಿ ಸತ್ಯಧರ್ಮ ಸುಖಶಾಂತಿಗಳು ಇನ್ನೂ ಸ್ವಲ್ಪ ಉಳಿದಿವೆ.
ತತ್ವದಿಂದ ಆಡಳಿತ ನಡೆಸುತ್ತಿದ್ದ ಶ್ರೀ ರಾಮನ ಕಾಲ ಹೋಗಿ ತಂತ್ರದ ಶ್ರೀ ಕೃಷ್ಣನ ಕಾಲದ ನಂತರ ಸ್ವತಂತ್ರ ಭಾರತದಲ್ಲಿ ನಾವಿದ್ದೇವೆಂದರೆ ನಮ್ಮಲ್ಲಿ ತತ್ವವಿದ್ದರೆ ನಿಜವಾದ ಆತ್ಮಜ್ಞಾನದ ಶಾಂತಿ ಕೇವಲ ತಂತ್ರವೇ ಬೆಳೆದರೆ ವಿಜ್ಞಾನದ ಕ್ರಾಂತಿ. ಯಾವುದು ಬೇಕು? ಎಷ್ಟು ಬೇಕು? ಯಾರಿಗೆ ಕೊಡಬೇಕು? ಹೇಗೆ ಯಾರು ಕೊಡಬೇಕೆನ್ನುವ ಪ್ರಶ್ನೆಗೆ ಉತ್ತರ ನಾವೇ ನಮ್ಮಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಮನೆಯೊಳಗಿನಿಂದಲೇ ಕೊಟ್ಟು ಬೆಳೆಸಿದರೆ ಹೊರಗೆ ಬಂದಾಗ ಉತ್ತಮ ಪ್ರಜೆಗಳಾಗಿ ರಾಜಯೋಗದೆಡೆಗೆ ನಡೆಯಬಹುದು. ಹೊರಗಿನ ರಾಜಕೀಯದ ಹಿಂದೆ ನಾವೇ ನಿಂತು ಬೇಡಿದಷ್ಟೂ ಸಾಲ ಬೆಳೆದು ಅಜ್ಞಾನ ಆವರಿಸಿ ಭ್ರಷ್ಟರ ದುಷ್ಡರ ಕೆಳಗೆ ಜೀವನ ನಡೆಸುವುದು ತಪ್ಪೋದಿಲ್ಲ.
ಇದು ಮಕ್ಕಳು ಮೊಮ್ಮಕ್ಕಳವರೆಗೂ ಬೆಳೆದರೆ ಸ್ವತಂತ್ರ ಜ್ಞಾನ ಪಡೆಯಲಾಗದು.ಏನೇ ಇರಲಿ ಶಿಕ್ಷಣವು ಒಂದು ವ್ಯಕ್ತಿಯ ವ್ಯಕ್ತಿತ್ವವನ್ನು ಹೆಚ್ಚಿಸಬೇಕಾದರೆ ಅದು ತತ್ವದ ಮಾರ್ಗದಲ್ಲಿದ್ದರೆ ಉತ್ತಮ..ಮೂಲ ಶಿಕ್ಷಣವೇ ತಂತ್ರಮಯವಾದರೆ ಒಳಗಿದ್ದ ಸ್ವತಂತ್ರ ತನ್ನ ಅಸ್ತಿತ್ವ ಕಳೆದುಕೊಂಡು ಪರ ತಂತ್ರದ ವಶವಾಗುತ್ತದೆನ್ನಬಹುದು. ಶಾಸ್ತ್ರ ಗಳಿಂದ ಶಾಂತ ಜೀವನ ಇದನ್ನು ದುರ್ಭಳಕೆ ಮಾಡಿಕೊಂಡರೆ ಶಸ್ತ್ರ ಹಿಡಿದು ಹೋರಾಡುವುದು ತಪ್ಪೋದಿಲ್ಲ. ಮೊದಲೇ ಶಸ್ತ್ರ ಹಿಡಿಸುವ ಶಿಕ್ಷಣದಲ್ಲಿ ಶಾಸ್ತ್ರದ ಅರಿವಿರೋದಿಲ್ಲ.ಇಷ್ಟಕ್ಕೂ ನಾವೀಗ ಪ್ರಜಾಪ್ರಭುತ್ವದ ಸಾಮಾನ್ಯಜ್ಞಾನವುಳ್ಳ ಸಾಮಾನ್ಯಪ್ರಜೆಯಾಗಿ ದೇಶದ ಈ ಸ್ಥಿತಿಗೆ ಕಾರಣ ತಿಳಿದು ತಿಳಿಸುವ ತತ್ವಶಾಸ್ತ್ರ ಮಕ್ಕಳಿಗೆ ತಿಳಿಸಿರುವೆಯೇ? ಇಲ್ಲವಾದರೆ ಮೊದಲು ಆ ಕೆಲಸ ಮನೆ ಮನೆಯೊಳಗೆ ಆದರೆ ಹೊರಗಿನಿಂದ ನಡೆಯುತ್ತಿರುವ ಶಸ್ತ್ರ ಕ್ರಿಯೆ ನಿಲ್ಲಿಸಿ ಆರೋಗ್ಯವಂತ ಪ್ರಜೆಗಳನ್ನು ಕಾಣಬಹುದು.ಇದಕ್ಕೆ ಎಲ್ಲಾ ಧಾರ್ಮಿಕ ಕ್ಷೇತ್ರದವರೂ ಒಗ್ಗಟ್ಟನ್ನು ಕಾಪಾಡಿಕೊಂಡು ತಾರತಮ್ಯವನ್ನು ಬಿಟ್ಟು ತತ್ವದ ಮೂಲ ಉದ್ದೇಶವಾಗಿರುವ ಏಕತೆ,ಐಕ್ಯತೆ,ಸಮಾನತೆ ಕಡೆಗೆ ಇದ್ದಲ್ಲಿಯೇ ಒಂದಾದರೆ ಹೊರಗಿನ ದುಷ್ಟರ ಶಕ್ತಿ ಅಡಗಿ ಹೋಗುತ್ತದೆ. ದುಷ್ಟರು ಯಾರು? ಅಜ್ಞಾನದ ವಶದಲ್ಲಿ ಭೌತಿಕಾಸಕ್ತಿ ಬೆಳೆದು ದೈಹಿಕಸುಖಕ್ಕಾಗಿ ಪರರನ್ನು ಹಿಂಸೆ ಮಾಡಿ ಅಥವಾ ಮೋಸ,ವಂಚನೆ ಭ್ರಷ್ಟಾಚಾರದಿಂದ ತಮ್ಮ ಕಡೆ ಓಲೈಸಿಕೊಂಡು ತಾನೂ ಹಾಳಾಗಿ ಎಲ್ಲರನ್ನೂ ಹಾಳು ಮಾಡುವ ಪ್ರವೃತ್ತಿಯುಳ್ಳವರು ದುಷ್ಟರು. ಈ ಶಕ್ತಿ ಒಳಗೇ ಇದೆ. ಪ್ರಜೆಗಳೇ ಆಶಕ್ತಿಯ ಒಡೆಯರು.ಯಾವುದಕ್ಕೆ ಸಹಕಾರ ಕೊಟ್ಟರೂ ಬೆಳೆಯುತ್ತದೆ.ಅದೇ ನಮ್ಮನ್ನು ಆಳುತ್ತದೆ.ಹೀಗಿರುವಾಗ ನಮ್ಮೊಳಗೇ ಇರುವ ಶಕ್ತಿಯನ್ನು ಅರ್ಥ ಮಾಡಿಕೊಂಡರೆ ನಮ್ಮ ಭವಿಷ್ಯವೂ ಅರ್ಥ ಆಗುತ್ತದೆ. ಹೊರಗಿನ ಭವಿಷ್ಯಕ್ಕಿಂತ ಒಳಗಿನ ಭವಿಷ್ಯ ಮುಖ್ಯ. ಒಳಗೇ ಭವಿಷ್ಯ ಹಾಳಾಗಿದ್ದರೆ ಹೊರಗೆ ಸರಿ ಮಾಡಲು ಕಷ್ಟವಿದೆ. ಇದೊಂದು ಅಧ್ಯಾತ್ಮ ಸತ್ಯ. ದೇವತೆಗಳು ಶಸ್ತ್ರ ಹಿಡಿದು ಯುದ್ದ ಮಾಡಿರುವುದು ಧರ್ಮ ರಕ್ಷಣೆಗಾಗಿಯೇ ಹೊರತು ಜೀವರಕ್ಷಣೆಗಲ್ಲ. ಆತ್ಮರಕ್ಷಣೆಯ ಧರ್ಮ ಯುದ್ದ ನಮ್ಮ ಪುರಾಣ ಕಥೆಗಳಾಗಿವೆ. ಇದನ್ನು ಆತ್ಮವಂಚಕರು ಪ್ರಚಾರ ಮಾಡಿದರೆ ಅರ್ಥ ವಾಗದು. ಹಾಗೆ
ಎಲ್ಲಾ ಶುದ್ದತೆಯೂ ಒಳಗಿನ ತತ್ವಜ್ಞಾನದಿಂದ ನಡೆದಾಗಲೇ ತಂತ್ರಜ್ಞಾನದ ಸದ್ಬಳಕೆ ಸಾಧ್ಯವಿದೆ. ಅಲ್ಲಿಯವರೆಗೆ ತಂತ್ರವೇ ತತ್ವವನ್ನು ಕಡೆಗಣಿಸಿ ಆಳುತ್ತದೆ.ಮಾನವನಿಗೆ ನೀಡಿದ ಸ್ವತಂತ್ರ ಸ್ಬೇಚ್ಚಾಚಾರವಾಗುತ್ತದೆನ್ನಬಹುದು.
ಆಗಮೋಕ್ತ ದೇವತಾಮೂರ್ತಿಗಳೂ ಆಯುಧಗಳನ್ನು ಹಿಡಿದಿರುತ್ತಾರೆ. ವಿಷ್ಣುವು ಶಂಖ- ಚಕ್ರ- ಗದೆಗಳನ್ನೂ, ಶಿವನು ತ್ರಿಶೂಲವನ್ನೂ, ಗಣೇಶನು ಅಂಕುಶವನ್ನೂ, ಕಾರ್ತಿಕೇಯನು ಶೂಲವನ್ನೂ, ದುರ್ಗೆಯು ಬಗೆಬಗೆಯ ಪ್ರಹರಣಗಳನ್ನೂ ಧರಿಸಿರುತ್ತಾರೆ. ಪಾಪ ತುಂಬಿದ ಹೃದಯಗಳಿಗೆ ಈ ಆಯುಧಗಳು ಭಯವನ್ನುಂಟುಮಾಡಿದರೆ, ಸಜ್ಜನ ಮನಸ್ಸಿಗೆ ಧೈರ್ಯ- ಆಶ್ವಾಸನೆಗಳು ಸಿಗುತ್ತವೆ.. ಮಿತಿಮೀರಿದ ಅಜ್ಞಾನಕ್ಕೆ ಇವು ಕೇವಲ ಪ್ರತಿಮೆಗಳಷ್ಟೆ. ಪ್ರತಿಮೆಯನ್ನು ರಾಜಕೀಯಕ್ಕೆ ಬಳಸಿದರೆ ಮುಗಿಯಿತು ಅದರ ಸತ್ವ ತತ್ವ ಸತ್ಯವೇ ಕಾಣೋದಿಲ್ಲ.
ನಿಜವಾದ ಪ್ರತಿಭೆ ಜ್ಞಾನ ಹಿಂದುಳಿಸಿ ಆಳುವ ಅಸುರರೆ ಬೆಳೆಯೋದು.ಇದಕ್ಕೆ ಸಹಕಾರ ನೀಡಿದವರಿಗೇ ದೊಡ್ಡ ಕಷ್ಟ ನಷ್ಟ ಸಮಸ್ಯೆ ಹೆಚ್ಚುವುದು.
ಸತ್ಯವಿಲ್ಲದ ಧರ್ಮ ಕುಂಟುತ್ತದೆ. ಧರ್ಮ ವಿಲ್ಲದ ಸತ್ಯ ಕುರುಡಾಗಿರುತ್ತದೆ.ಸತ್ಯದ ಜೊತೆಗೆ ಧರ್ಮ ವಿದ್ದಾಗ ದೈವತ್ವ ಬೆಳೆಯುತ್ತದೆನ್ನುವರು. ಅಂತಹವರು ದೇವರಾಗುವರು.
ರಾಜಕೀಯ ಸತ್ಯದಲ್ಲಿ ನಡೆಸಲಾಗದು.ಅದಕ್ಕೆ ಹರಿಶ್ಚಂದ್ರ ಸತ್ಯಕ್ಕೆ ಹೆಸರಾದನು.ಹಾಗೆ ಶ್ರೀರಾಮ ಧರ್ಮಾತ್ಮನಾದನು. ಸುಲಭವಾದದ್ದು ಎಲ್ಲಾ ಮಾಡುವರು.ಕಷ್ಟವಾದದ್ದು ಕೆಲವರಷ್ಟೆ ಮಾಡಿ ಸಾಧಕರಾದರು.
ಆರೋಗ್ಯಕರ ಶಿಕ್ಷಣ ಹಾಗು ಆಹಾರದಿಂದ ಜ್ಞಾನೋದಯ
ದೈಹಿಕ, ಮಾನಸಿಕ ಮತ್ತು ಸಾಮಾಜಿಕ ನೆಮ್ಮದಿಯ ಸ್ಥಿತಿಯೇ ಆರೋಗ್ಯ. ಆರೋಗ್ಯಕ್ಕೆ ಏನು ಬೇಕು? • ಪೌಷ್ಠಿಕ ಆಹಾರ (ಧಾನ್ಯ, ಹಣ್ಣು, ತರಕಾರಿ, ಹಾಲು,ಮೊಟ್ಟೆ,ಮೀನು, ಮಾಂಸ ಇತ್ಯಾದಿ ಸಮತೋಲನ ಆಹಾರ) • ಶುದ್ಧ ಕುಡಿಯುವ ನೀರು, ಉತ್ತಮ ಪರಿಸರ • ಮನೆಯ ಮತ್ತು ಸುತ್ತಮುತ್ತ ಶುದ್ಧಗಾಳಿ, ಸಾಕಷ್ಟು ಬೆಳಕು,ಈಗ ಇವೆಲ್ಲವೂ ಕಲುಷಿತವಾಗಿರುವ ಕಾರಣ ಆರೋಗ್ಯ ಹದಗೆಟ್ಟಿದೆ.ಶುದ್ದವಾಗಲು ಮೂಲದೆಡೆಗೆ ಸಾಗಬೇಕು.
ಶೈಕ್ಷಣಿಕ ಕಾರಣಗಳು:ಅನಕ್ಷರತೆ,ಮೂಢನಂಬಿಕೆಗಳು ಆರೋಗ್ಯದ ಬಗ್ಗೆ ಅರಿವಿಲ್ಲದಿರುವುದು. ಅತಿಯಾಗಿ ಯಂತ್ರ ಮಂತ್ರ ಇತ್ಯಾದಿಗಳ ಮೊರೆ ಹೋಗುವುದು. ಇವೆಲ್ಲಾ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.
No comments:
Post a Comment