ಎಲ್ಲಾ ಶ್ರೇಷ್ಠ ಮಹಾತ್ಮರುಗಳ ಜಯಂತಿ ಒಂದೇ ತಿಂಗಳಲ್ಲಿ ಬರುತ್ತಿದೆ.ಈ ದಿನ ಪರಶುರಾಮಜಯಂತಿ. ವಿಷ್ಣುವಿನವತಾರ ಪರಶುರಾಮರು ಚಿರಂಜೀವಿಗಳು ಇವರಿಗೆ ಹುಟ್ಟು ಸಾವಿಲ್ಲವಾದರೂ ಪ್ರತಿವರ್ಷ ಜಯಂತಿ ಆಚರಿಸಲಾಗುತ್ತದೆ ಎಂದರೆ ಅಮರತ್ವ ಪಡೆದ ದೇವರನ್ನು ನೆನಪಿಸಿಕೊಂಡರೆ ಮಾನವರಿಗೆ ಇನ್ನಷ್ಟು ಆತ್ಮಬಲ ವೃದ್ದಿಯಾಗುತ್ತದೆ. ಹಾಗೆಯೇ ಸಾಕಷ್ಟು ದೇವಾನುದೇವತೆಗಳು ಗುರು ಹಿರಿಯರು ಮಹಾತ್ಮರು ಸಾದು ಸಂತರು,ದಾಸ ಶರಣರು ಹೀಗೇ ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣುವ ಶಕ್ತಿ ನಮ್ಮಲ್ಲಿದ್ದರೆ ಅದ್ವೈತ ದ್ವೈತ ವಿಶಿಷ್ಟಾದ್ವೈತ ದ ಹಿಂದಿನ ಉದ್ದೇಶವೂ ಅರ್ಥ ವಾಗಬಹುದು.
ಶ್ರೀ ರಾಮನಂತೆ ಶ್ರೀ ಕೃಷ್ಣನ ಅವತಾರವಿರಲಿಲ್ಲವಾದರೂ ಶ್ರೀ ರಾಮನ ನಡೆ ಮಾನವನಿಗೆ ಶ್ರೇಷ್ಠ. ಶ್ರೀ ಕೃಷ್ಣನ ನುಡಿ ಮಾನವನಿಗೆ ಶ್ರೇಷ್ಠ. ನಡೆ ನುಡಿಯ ಏಕತೆಯು ಮಹಾಶ್ರೇಷ್ಟ
ನಡೆ ನುಡಿಯಲ್ಲಿ ಸಮಾನತೆಯನ್ನು ತಂದುಕೊಂಡಿದ್ದ ಮಹಾತ್ಮರುಗಳು ನಮ್ಮ ದೇಶದ ಮಹಾಸಂತರು,ಶರಣರು ದಾಸರು . ಹಾಗಾಗಿ ಭಾರತ ಮಾತೆಯು ಅಸಂಖ್ಯಾತ ಮಹಾತ್ಮರನ್ನು ಹೊತ್ತು ವಿಶ್ವಗುರು ಆಗಿದ್ದಳು. ಈಗಲೂ ಇದ್ದಾರೆ ಆದರೆ ಅದನ್ನು ಗುರುತಿಸುವ ಕಣ್ಣಿಲ್ಲದವರು ದೇಶವನ್ನು ಆಳಲು ಹೊರಟಿರೋದು ದುರಂತ. ಏನೇ ಬರಲಿ ಒಗ್ಗಟ್ಟು ಇರಲಿ ಎನ್ನುವ ಮಂತ್ರವನ್ನು ರಾಜಕೀಯಕ್ಕೆ ಬಳಸಿ ತಂತ್ರದಿಂದ ಜನರನ್ನು ಹೊರಗೆಳೆದು ಭ್ರಷ್ಟಾಚಾರ ದ ಹಣವನ್ನು ಹಂಚಿಕೊಂಡು ಜನಸಂಖ್ಯೆಯಲ್ಲಿ ವಿಶ್ವವಿಖ್ಯಾತಿ ಪಡೆಯುತ್ತಿರುವುದನ್ನು ಪ್ರಗತಿ ಎನ್ನಬೇಕೋ ಅಧೋಗತಿಯೋ?
ಜ್ಞಾನಿಗಳ ಸಂಖ್ಯೆ ಬೆಳೆದರೆ ಶಾಂತಿ ಸಮೃದ್ದಿ,ಅಜ್ಞಾನಿಗಳು ಬೆಳೆದರೆ ಅಶಾಂತಿ ಕ್ರಾಂತಿಯ ಹೋರಾಟದ ಅಧೋಗತಿ.
ಈಗ ನಾವೆಲ್ಲರೂ ಒಂದೇ ದೇಶದ ಪ್ರಜೆಗಳಾಗಿದ್ದರೂ ಇಲ್ಲಿ ಅಧಿಕಾರ ಹಣ ಸ್ಥಾನಮಾನಕ್ಕೆ ಹೊಡೆದಾಡುವವರ ಹಿಂದೆ ನಿಂತವರಿಗೆ ಒಳಗಿದ್ದ ಪರಮಾತ್ಮ ಕಾಣಲಿಲ್ಲ. ಇವೆಲ್ಲವೂ ಆ ಪರಮಾತ್ಮನ ಪ್ರೇರಣೆಯೆ ಎಂದರೆ ಮಾನವನಿಂದ ಏನೂ ನಡೆಯುತ್ತಿಲ್ಲವೆ? ಮನಸ್ಸು ಒಳಗೆ ಹೊರಗೆ ಓಡಾಡುತ್ತಿದೆ.
ಒಳಗಿದ್ದ ಮನಸ್ಸನ್ನು ಕೇಳದೆ ಹೊರಗಿನ ಮನಸ್ಸಿಗೆ ಬೆಲೆ ಹೆಚ್ಚಾದಂತೆ ಹೊರಗೆ ಹೋಗಿದ್ದನ್ನು ಹಿಡಿಯಲಾಗದು. ಈ ಮನಸ್ಸಿನ ಮೇಲೇ ಮಾನವನಿಂತಿರೋದು.ಇದನ್ನು ಯೋಗಕ್ಕಾಗಿ ಬಳಸಿದವರು ಮಹಾತ್ಮರಾದರು.ಭೋಗಕ್ಕೆ ಬಳಸಿದವರು ರೋಗಕ್ಕೆ ಗುರಿಯಾದರು. ಆರೋಗ್ಯವಂತ ಸಮಾಜಕಟ್ಟಲು ಆರೋಗ್ಯವಂತ ಶಿಕ್ಷಕರು, ಗುರುಹಿರಿಯರು ಶಿಕ್ಷಣದಲ್ಲಿಯೇ ಆರೋಗ್ಯಕರ ವಿಚಾರ ತಿಳಿಸಬೇಕಿತ್ತು. ಎಡವಿದ್ದು ಶಿಕ್ಷಣದಲ್ಲಿ , ಸರಿಪಡಿಸಲು ಹೋದದ್ದು ರಾಜಕೀಯಕ್ಕೆ ಎಲ್ಲಿಂದ ಎಲ್ಲಿಗೆ ಹೋಗುತ್ತಿದೆ ಭಾರತ.
ಹೇಳುವುದು, ಕೇಳುವುದು, ನೋಡುವುದು, ಮಾಡುವುದೆಲ್ಲವೂ ನಾನೇ ಎನ್ನುವ ಶ್ರೀ ಕೃಷ್ಣನ ನುಡಿ ಶ್ರೀ ರಾಮನ ನಡೆಯಲ್ಲಿ ನಾನೆಂಬುದೇ ಇರಲಿಲ್ಲ.ಹಾಗಾದರೆ ವಿಷ್ಣು ಒಬ್ಬನಾದರೂ ಅವನ ಅವತಾರದಲ್ಲಿ ಯಾಕೆ ಅದ್ವೈತ ದ್ವೈತ ವಿಶಿಷ್ಟಾದ್ವೈತ? ಕಾರಣ ಇಲ್ಲಿ ಮಾನವನಲ್ಲಿರುವ ನಾನೆಂಬ ಅಹಂಕಾರ ದ ನಾಶಕ್ಕೆ ಪರಮಾತ್ಮನ ಅವತಾರವಾಗಿದೆ.ಹಾಗೆಯೇ ಅನೇಕ ತತ್ವಜ್ಞಾನಿಗಳೂ ಆ ಕಾಲದಲ್ಲಿದ್ದ. ಭಿನ್ನಾಭಿಪ್ರಾಯ ದ್ವೇಷ ಅಧರ್ಮ ವನ್ನು ಸರಿಪಡಿಸಲು ತತ್ವಸಿದ್ದಾಂತ ಮಂಡನೆ ಮಾಡಿದ್ದರು.
ಇವೆಲ್ಲವೂ ನಮಗೆ ಉಚಿತವಾಗಿ ಸುಲಭವಾಗಿ ಓದಿ ತಿಳಿದರೂ ಅದನ್ನು ಅರ್ಥ ಮಾಡಿಕೊಳ್ಳಲು ನಾನು ಒಳಗೆ ನಡೆಯದಿದ್ದರೆ ಹೊರಗಿನ ನಾನು ನನ್ನ ಆಳುವುದು
.ಹಾಗಾದರೆ ನಾನ್ಯಾರು? ನಾನು ಹೊರಗಿದೆಯೋ? ಒಳಗಿದೆಯೋ? ವಾದ ವಿವಾದಕ್ಕಿಂತ ಚರ್ಚೆ ಅಗತ್ಯ.ಚರ್ಚೆಯು ತತ್ವದರ್ಶನ ಆದವರ ಜೊತೆಗೆ ನಡೆಸಬೇಕೇ ಹೊರತು ತಂತ್ರದಲ್ಲಿ ನಡೆಸಬಾರದಷ್ಟೆ.
ಪ್ರತಿಯೊಬ್ಬರೂ ವಿಶೇಷವಾದ ಜ್ಞಾನ ಶಕ್ತಿ ಪಡೆದವರಾದರೂ ಒಳಗಿದ್ದ ವಿಶೇಷವನ್ನು ಗುರುತಿಸದ ಶಿಕ್ಷಣ ಪಡೆದು ಹೊರಗಿನ ವಿಜ್ಞಾನದ ದಾಸರಾಗಿರುವಾಗ ಒಳಗಿನ ವಿಶೇಷಜ್ಞಾನದಲ್ಲಿದ್ದ ನಾನ್ಯಾರು? ಪ್ರಶ್ನೆಗೆ ಉತ್ತರ ಸಿಗದು.
ನಾನಿರುವಾಗ ಪರಮಾತ್ಮ ಕಾಣೋದಿಲ್ಲ. ಪರಮಾತ್ಮನ ದರ್ಶನ ವಾದಾಗ ನಾನಿರೋದಿಲ್ಲ. ಇದು ಸತ್ಯ.
ಸಾವು ನಾನಿರುವಾಗ ಬರದು ನಾನು ಸತ್ತಾಗ ಸಾವಿನ್ನು ಕಾಣೋದಿಲ್ಲ.ಅಂದರೆ ಈ ನಾನು ಎನ್ನುವ ಅಹಂಕಾರ ಮಿತಿಮೀರಿದರೆ ಮಾನವನಿಗೆ ಪರಮಾತ್ಮ ಕಾಣೋದಿಲ್ಲ. ಪರಮಸತ್ಯ ಅರ್ಥ ಆಗೋದಿಲ್ಲ. ಬುದ್ದಿವಂತರೆಲ್ಲ ಜ್ಞಾನಿಗಳಲ್ಲ ಜ್ಞಾನವಿದ್ದವರೆಲ್ಲರೂ ಬುದ್ದಿವಂತರೆಂದಲ್ಲ.
ಅಣುರೇಣು ತೃಣಕಾಷ್ಟ ಪರಿಪೂರ್ಣ ಗೋವಿಂದ. ಇಡೀ ವಿಶ್ವ ಆಳುವ ಬದಲು ಆತ್ಮಜ್ಞಾನ ಪಡೆದು ತನ್ನ ತಾನರಿತು ನಡೆಯುವುದೆ ಶ್ರೇಷ್ಠ. ಭಾರತವನ್ನು ಆಳೋ ಮೊದಲು ಭಾರತೀಯ ತತ್ವ ಒಂದಾಗಿಸಬೇಕು. ಸಾಧ್ಯವೆ? ರಾಜಕೀಯ ಹೊರಗಿನ ಕಣ್ಣು ರಾಜಯೋಗ ಒಳಗಿನಕಣ್ಣು.ಮಧ್ಯದ ಮೂರನೆ ಕಣ್ಣು ತೆರೆಸುವುದೇ ಅನುಭವ ಜ್ಞಾನ. ಹಿಂದಿನ ಮಹಾತ್ಮರನ್ನು ಎಳೆದಾಡಿಕೊಂಡಿರೋದು ಮಾನವರು. ಅವರ ತತ್ವ ತಿಳಿದು ನಡೆದವರು ಮಹಾತ್ಮರು.ಅವರನ್ನು ರಾಜಕೀಯಕ್ಕೆ ಎಳೆದು ಆಳುವವರೆ ಅಸುರರು. ಈ ಮೂರೂ ಜನರು ದೈವಾಂಶವುಳ್ಳವರಾದರೂ ಅದರ ಬಳಕೆಯಲ್ಲಿ ವ್ಯತ್ಯಾಸವಿದೆ ಅಷ್ಟೇ.
ತಾಳಿದವನು ಬಾಳಿಯಾನು. ಒಳಗಿನ ಕಲ್ಮಶ ತೆಗೆದುಕೊಂಡು ಸ್ವಚ್ಚ ಮನಸ್ಸಿನಿಂದ ಪರಮಾತ್ಮನ ಕಡೆಗೆ ಹೊರಟವರು ಬಹಳ ಕಷ್ಟಪಟ್ಟು ತತ್ವಜ್ಞಾನಿಗಳಾದರು. ಇದಕ್ಕೆ ವಿರುದ್ದದ ತಂತ್ರ ಮಾನವನ ಜೀವನವನ್ನು ಅತಂತ್ರಸ್ಥಿತಿಗೆ ತಲುಪಿಸಿದರೂ ಬಿಡೋದಕ್ಕೆ ಕಷ್ಟವಾಗುತ್ತಿದೆ ಎಂದರೆ ಎಲ್ಲಾ ಸಮಸ್ಯೆಗೂ ತಂತ್ರವೇ ಕಾರಣ. ರಾಜಕೀಯ ತಂತ್ರ ರಾಜಯೋಗದ ತತ್ವಸಿದ್ದಾಂತವನ್ನು ಒಪ್ಪದಿದ್ದರೆ ಅತಂತ್ರ ಜೀವನ.
No comments:
Post a Comment