ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, April 5, 2023

ಮತದಾನ ದೇಶದ ಭವಿಷ್ಯ ನಿರ್ಧರಿಸುವ ಸಾಧನ

ನಮ್ಮ ಏರಿಯಾದಲ್ಲಿ ಇಂದು ಎಲ್ಲರ ಮನೆಗೂ ಹೋಗಿ ಗೃಹಲಕ್ಮಿ ಗ್ಯಾರಂಟಿ ಕಾರ್ಡ ಬೇಕ ಎಂದು ಕೇಳಿ ಕೊಟ್ಟು ಹೋಗುತ್ತಿದ್ದರು. ನಾವಂತೂ ಪಡೆದಿಲ್ಲ.ಈಗಾಗಲೇ ಸಾಕಷ್ಟು ಕಾರ್ಡ ತುಂಬಿಹೋಗಿದೆ. ಪಾನ್, ಆಧಾರ್ ಎಲೆಕ್ಷನ್,ಇನ್ನಿತರ ಸಂಘದ ಸದಸ್ಯತ್ವದ ಗುರುತಿನ ಚೀಟಿ ಉಳಿದ ಉಚಿತ ಕಾರ್ಡ ಈವರೆಗೆ ನಮಗೆ ಸಿಕ್ಕಿಲ್ಲ ಬೇಕಾಗಿಲ್ಲ. ಈಗಾಗಲೇ ಸಾಕಷ್ಟು  ಶ್ರಮಪಟ್ಟು ನಮ್ಮ ಸಂಸಾರವನ್ನು ‌ನಡೆಸಿರುವಾಗ ಶ್ರಮಕ್ಕೆ ಬೆಲೆಕೊಡುವವನು ಮೇಲಿದ್ದಾನಲ್ಲ.ಒಟ್ಟಿನಲ್ಲಿ  ಜನಬಲ ಹಣಬಲದ  ಆಡಳಿತದಲ್ಲಿ  ಯಾರಿಗೆ ಲಾಭ ನಷ್ಟ ಎನ್ನುವ ಲೆಕ್ಕಾಚಾರದಲ್ಲಿ ಸೋತಿರುವ ಪ್ರಜಾಪ್ರಭುತ್ವ  ಎಷ್ಟೇ
ಮೇಲೆ ಕೆಳಗಾದರೂ  ಮತದಾನದ ಅರ್ಥ ತಿಳಿಯುವುದರಲ್ಲೇ ಜೀವ ಹೋಗಿರುತ್ತದೆ. ದೇಶದ ಭವಿಷ್ಯ ನಿರ್ಧಾರ ಮಾಡುವ ಮತದಾನ ಎಲ್ಲಾ ದಾನಗಳಿಗಿಂತ ಶ್ರೇಷ್ಠ.
ನಮ್ಮ ಹಣೆಬರಹವನ್ನು  ಸರ್ಕಾರ ನಿರ್ಧಾರ ಮಾಡುವಂತಿದ್ದರೆ  ಇಷ್ಟು ‌ಕುಲಗೆಟ್ಟು ಹೋಗುತ್ತಿರಲಿಲ್ಲ ಜನರ ಜೀವನ. ಧರ್ಮ, ಸತ್ಯ,ನ್ಯಾಯ,ನೀತಿ,ಸಂಸ್ಕೃತಿ ಸಂಪ್ರದಾಯ, ಭಾಷೆ,ಸಾಹಿತ್ಯಗಳು  ಆತ್ಮಜ್ಞಾನದಿಂದ ಬೆಳೆಸಿ ಜನರ ಭವಿಷ್ಯಕ್ಕೆ ಆಧಾರವಾಗಿದ್ದ  ಕಾಲವೆಲ್ಲಿ? ಹೊರಗಿನ ಸರ್ಕಾರದ ಆಧಾರಕ್ಕಾಗಿ  ಅಲೆದಾಡುತ್ತಿರುವ  ಈಗಿನ ಕಾಲ ಎಲ್ಲಿ? ಹಿಂದಿನ ಆಧಾರದಿಂದ  ಜನರು ಜೀವನ್ಮುಕ್ತಿ‌ಕಡೆಗೆ ನಡೆದರೆ ಈಗಿನವರು  ಹೊರಗೆ ನಡೆಯುತ್ತಾ ಬಹಳ ದೂರ ನಡೆದು ಸುಸ್ತಾಗಿ ಕುಸಿದು ಬೀಳುವಂತಾಗಿದೆ. ಯಾರನ್ನು ಯಾರು  ನಡೆಸಬೇಕು? ಗೃಹಲಕ್ಮಿ ಯ ಸ್ಥಿತಿ ಹೇಗಾಗಿದೆ?ಹಣದಿಂದ  ಬದಲಾವಣೆ ತರುವ ಮೊದಲು ಜ್ಞಾನವನ್ನು ಬೆಳೆಸುವತ್ತ ನಡೆದಿದ್ದರೆ  ದೇಶ ಸುರಕ್ಷಿತವಾಗಿರುತ್ತಿತ್ತು.

ಮತದಾನ ಮಾಡದವರ ಸಂಖ್ಯೆ ಹೆಚ್ಚಾಗಿದೆ.ಆದರೆ ಸರ್ಕಾರ ಕೊಡುವ ಎಲ್ಲಾ ಭಾಗ್ಯಗಳೂ ಎಲ್ಲರಿಗೂ ಬೇಕಿದೆ. ಮತದಾನ  ಮಾಡಿದವರಿಗೊಂದು ಗುರುತಿನ ಚೀಟಿ ಕೊಡಿ
ಸರ್ಕಾರದ ಸಾಲ,ಸೌಲಭ್ಯಗಳನ್ನು   ಪಡೆಯುವ  ಹಕ್ಕು ಅವರಿಗಷ್ಟೆ ಎನ್ನುವ‌  ಕಾನೂನು ಚುನಾವಣಾ ಆಯೋಗ ತಂದರೆ  ಎಷ್ಟೋ ಉಳಿತಾಯವಾಗಬಹುದು.ಅಥವಾ ಮತದಾನ ಹೆಚ್ಚಾಗಬಹುದು. ದೇಶದವರಲ್ಲದವರು, ರಾಜ್ಯದವರಲ್ಲದವರು  ವಿದೇಶಿದಲ್ಲಿರುವವರು ಚುನಾವಣಾ ಸಮಯದಲ್ಲಿ  ಎದ್ದು ಬಂದು ಜನರನ್ನು ದಾರಿತಪ್ಪಿಸುವ ಕೆಲಸ ಮಾಡಿದರೂ ಹೇಳೋರಿಲ್ಲ ಕೇಳೋರಿಲ್ಲ.  ಚುನಾವಣ ಸಮಯದಲ್ಲಿ ನಡೆಯುವ ಭ್ರಷ್ಟಾಚಾರ  ಬೇರೆ ಸಮಯದಲ್ಲಾಗದು. ಇದಕ್ಕೆ ಜನರೆ ಸಹಕರಿಸುವಾಗ ಯಾರಿಗೆ ಹೇಳಿ ಉಪಯೋಗವಿಲ್ಲ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ದೈರ್ಯದಿಂದ  ಮುಂದೆ ನಡೆಯುವವರ ಧೈರ್ಯಕ್ಕೆ ಜನಬಲ ಹಣಬಲ ಅಧಿಕಾರ ಬಲವೇ ಕಾರಣ. ಇದು ಹೊರಗಿನ ಕಾನೂನಿಗೆ ವಿರುದ್ದವಾದರೂ ಎಲ್ಲವನ್ನೂ  ಕಾಣುತ್ತಿರುವ  ಮೇಲಿನ ಕಾನೂನು ಸರಿಯಾದ  ಫಲಿತಾಂಶ ಕೊಡುವುದೆನ್ನುವ ಭಯವಿದ್ದವರು  ನೇರವಾದ ದಾರಿ ಹಿಡಿಯುವರು. ಎಲ್ಲಾ ಮಾಡೋದು ನೋಟಿಗಾಗಿ ಓಟು ಸೀಟಿಗಾಗಿ ಎನ್ನುವ ಕಾಲ ಬಂದಿದೆ. ಪಾಪ ಬಡಜನ ಮಾತ್ರ ಎಲ್ಲಾ ಮಾಡೋದು  ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎನ್ನುವುದು ತಪ್ಪಿಲ್ಲ. ಹೊಟ್ಟೆತುಂಬಿದವರಿಗೆ  ಹಸಿವಿನ ಅನುಭವವಿಲ್ಲ. ದೇಶದ  ಭವಿಷ್ಯ ಮತದಾತರ ಜ್ಞಾನದಲ್ಲಿದೆ.  ಸ್ವತಂತ್ರ ಭಾರತದ ಸ್ವತಂತ್ರ ಜ್ಞಾನ  ಪ್ರಜೆಗಳೊಳಗೇ ಇದೆ. ಹೊರಗಿನವರ ವಿಜ್ಞಾನ  ಪಡೆದಷ್ಟೂ ಮೂರ್ಖರಾಗಿ  ಹಿಂದುಳಿಯುವುದು ತಪ್ಪುತ್ತಿಲ್ಲ. ಹೊರಗಿನವರ ತಂತ್ರ ಒಳಗಿದ್ದವರ ತತ್ವವನ್ನು ಹಾಳುಮಾಡಿದರೆ  ಪ್ರಗತಿಯೆ? ಅಧೋಗತಿಯೆ? ಆದರೂ  ಇವರದ್ದೇ ದೊಡ್ಡ ಪ್ರಚಾರ. ವಿದೇಶಿ ವ್ಯಾಮೋಹ ಎಲ್ಲಿಗೆ ಹೋಗುತ್ತಿದೆ ? ಇದು ದೇಶದ ಚುನಾವಣೆಯೋ? ವಿದೇಶದ್ದೋ?  

ಅಧ್ಯಾತ್ಮದ  ಪ್ರಕಾರ  ಚಿಂತನೆ ‌ನಡೆಸಿದರೆ ಭಾರತವನ್ನು ಉಳಿಸಿ ಬೆಳೆಸುವುದಕ್ಕೆ  ಪ್ರಜೆಗಳ  ಮತದಾನ  ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದೆ ನಡೆಯಬೇಕಿತ್ತು. 
ಈಗ ಹೇಗಿದೆ? ಇದಕ್ಕೆ ಕಾರಣವೆ ಅಜ್ಞಾನದ ರಾಜಕೀಯ ಶಿಕ್ಷಣ. ಯಾರದ್ದೋ ಶಿಕ್ಷಣ ಪಡೆದು ಯಾರದ್ದೋ ದೇಶದಲ್ಲಿ ಕುಳಿತು ಯಾರದ್ದೋ ಮನೆಗೆ ಸಂದೇಶ ಸಮಾಚಾರ ಕೊಡುವ‌  ಮಧ್ಯವರ್ತಿಗಳ  ಸ್ವೇಚ್ಚಾಚಾರಕ್ಕೆ ಯಾರದ್ದೋ ಜೀವನ  ಹಾಳುಮಾಡಿದರೆ  ಅಧರ್ಮಕ್ಕೆ ತಕ್ಕಂತೆ ಫಲವಿದೆ.

No comments:

Post a Comment