ವೈಜ್ಞಾನಿಕ ಜಗತ್ತಿನಲ್ಲಿ ಯೋಗ ಮಾನವನ ಇಚ್ಚೆಯಂತೆ ಕೂಡಬಹುದು. ವೈಚಾರಿಕತೆಗೆ ಬಂದಾಗ ಶುದ್ದತೆಯಿಲ್ಲದ ಆಚಾರ ವಿಚಾರ ಪ್ರಚಾರ ಅಧ್ಯಾತ್ಮ ಜಗತ್ತಿನಲ್ಲಿ ಪರಮಾತ್ಮನ ಇಚ್ಚೆಯಿಲ್ಲದೆ ಯೋಗ ಕೂಡಿ ಬರಲಾರದು.
ಭಗವದ್ಗೀತೆ ತಿಳಿಸಿರುವ ನಾಲ್ಕು ಯೋಗವು ಭೌತಿಕದಲ್ಲಿ ತಿಳಿಯಬಹುದು ಅನುಭವಿಸಲು ಅಧ್ಯಾತ್ಮದೆಡೆಗೆ ಸಾಗಬೇಕು. ಅಧ್ಯಾತ್ಮ ಎಂದರೆ ತನ್ನ ತಾನರಿಯುವ ಜ್ಞಾನ.
ಯೋಗದ ಪ್ರಕಾರ ಬ್ರಾಹ್ಮಣ ಜ್ಞಾನದಿಂದ, ಕ್ಷತ್ರಿಯ ರಾಜಯೋಗದ ಕ್ಷಾತ್ರಧರ್ಮದಿಂದ, ವೈಶ್ಯ ಸಮಾನತೆಯ ವ್ಯವಹಾರಿಕ ಧರ್ಮದಿಂದ ಶೂದ್ರ ಪರಮಪವಿತ್ರವಾದ ಸತ್ಕರ್ಮದ ಸೇವೆಯಿಂದ ಪರಮಾತ್ಮನ ಸೇರುವುದೇ ಮಹಾಯೋಗ. ಜ್ಞಾನಯೋಗ,ರಾಜಯೋಗ,ಭಕ್ತಿಯೋಗ,ಕರ್ಮಯೋಗದಲ್ಲಿ ಕರ್ಮಯೋಗವಿಲ್ಲದೆ ಜ್ಞಾನಯೋಗ ರಾಜಯೋಗ ಭಕ್ತಿಯೋಗ ಅರ್ಥ ವಾಗದ ಕಾರಣ ದಾಸ ಶರಣರು ಕರ್ಮ ಯೋಗಿಗಳಿಗೆ ಕಾಯಕವೇ ಕೈಲಾಸವೆಂದರು.
ಪ್ರಜಾಪ್ರಭುತ್ವದ ಪ್ರಜೆಗಳಾಗಿರುವ ನಾವೆಲ್ಲರೂ ಈಗ ದೇಶದ ಸೇವಕರಾಗಿ ಏನು ನಮ್ಮಲ್ಲಿ ಒಳ್ಳೆಯದಿದೆಯೋ ಹಂಚಿಕೊಂಡರೆ ದೇಶದ ಸಾಲ ತೀರುವುದು.ಇದು ಸ್ವಾರ್ಥದ ರಾಜಕೀಯವಾಗಬಾರದು. ಇದನ್ನು ನಮ್ಮ ದೇಶಭಕ್ತರಲ್ಲಿ ಕಂಡಿದ್ದೆವು.
ಪರಮಾತ್ಮನೆಡೆಗೆ ಜೀವಾತ್ಮ ನಡೆಯುವುದೇ ವರ್ಣ ದ ಉದ್ದೇಶವಾಗಿತ್ತು.ಇದನ್ನು ನಾಲ್ಕು ವರ್ಣ ನಾಲ್ಕು ವೇದ ನಾಲ್ಕು ಯೋಗವಾಗಿ ಕಂಡಿದ್ದರೆನ್ನುವುದು ಸನಾತನ ಧರ್ಮದ ತಿರುಳು. ತಿರುಳನ್ನು ಬಿಟ್ಟು ಸಿಪ್ಪೆ ತಿಂದರೆ ಸತ್ವ ಸತ್ಯ ಅರ್ಥ ವಾಗದು. ತೆಂಗಿನಮರ ಬಾಳೆಮರವನ್ನು ಹೇಗೆ ಪರಮಾತ್ಮನ ಪೂಜೆಗೆ ಶ್ರೇಷ್ಠ ವೆಂದು ಬಳಸುವರೋ ಹಾಗೆ ಬೀಜ ಹಲವಿದ್ದರೂ ಅದರ ಮೂಲ ಒಂದೇ. ಬೀಜ
ವಿಲ್ಲದೆಯೇ ಸ್ವತಂತ್ರ ವಾಗಿ ಬೆಳೆದದ್ದು ಶುದ್ದವಾಗಿರುತ್ತದೆ
ಎಂದರ್ಥ. ಎಂದರೆ ಪ್ರತಿಯೊಬ್ಬರಲ್ಲಿಯೂ ಸ್ವತಂತ್ರವಾಗಿ
ರುವ ಆತ್ಮಜ್ಞಾನ ಶ್ರೇಷ್ಠ ವಾದದ್ದು.ಹೊರಗಿನ ಕಲಬೆರಕೆ
ಯಿಂದ ಅಶುದ್ದವಾಗದಂತಹ ಶಿಕ್ಷಣದ ಅಗತ್ಯವಿದೆ. ಸತ್ಯ ಒಂದೇ ಅಸತ್ಯ ಹಲವು. ಆತ್ಮಸಾಕ್ಷಿಯಂತೆ ನಡೆದಾಗಲೇ ಯೋಗಿಯಾಗೋದು. ಮಕ್ಕಳಿಗೆ ಯೋಗ್ಯ ಶಿಕ್ಷಣ ಪ್ರಾರಂಭದಲ್ಲಿಯೇ ಸಿಕ್ಕಿದಾಗಲೇ ಯೋಗ್ಯ ಪ್ರಜೆ ಆಗಲು ಸಾಧ್ಯ.
ಯೋಗಿ ಬಯಸಿದ್ದು ಯೋಗಿಗೆ ಭೋಗಿ ಬಯಸಿದ್ದು ಭೋಗಿಗೆ ಎಂದಂತೆ ಅಧ್ಯಾತ್ಮ ವಿಜ್ಞಾನ ಭೌತಿಕ ವಿಜ್ಞಾನದ ಸಂಶೋಧನೆಯು ವಿರುದ್ದದಿಕ್ಕಿನಲ್ಲಿ ನಡೆದರೂ ಕೂಡೋದು ಒಂದೇ ಸ್ಥಳದಲ್ಲಿ. ಮೇಲಿರುವ ಆಕಾಶದಲ್ಲಿ ಭೂಮಿ ತಿರುಗುತ್ತಿದೆ ಭೂಮಿಯ ಮೇಲೆ ಮನುಕುಲ ತಿರುಗುತ್ತಿದೆ.ಜೀವ ಭೂಮಿಯ ಮೇಲಿದ್ದರೂ ಆಕಾಶದಿಂದ ಬೇರೆಯಾಗಿಲ್ಲ. ಜನನ ಮರಣದ ಮಧ್ಯೆ ಜೀವನವಿದೆ.
ಯೋಗದಿಂದ ಶಾಂತಿ ಭೋಗದಿಂದ ಕ್ರಾಂತಿ.
No comments:
Post a Comment