ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Thursday, April 6, 2023

ಮತದಾನ ದಾನವರ ಪಾಲಾದರೆ ದುರ್ಗತಿ



ಮತದಾನ ದೇಶದ ಭವಿಷ್ಯ ನಿರ್ಧಾರ ಮಾಡುತ್ತದೆ. ದಾನದಿಂದ  ಮಾನವನ ಜ್ಞಾನ ಬೆಳೆಯುತ್ತದೆ ಎಂದರೆ  ಮತದಾನದಿಂದ ಪ್ರಜೆಗಳ ಜ್ಞಾನ ಬೆಳೆಯಿತೆ ?  ಕಾರಣ ನಮ್ಮಲ್ಲಿ ಜ್ಞಾನದ ಶಿಕ್ಷಣವಿಲ್ಲದೆ  ರಾಜಕೀಯ ನಡೆಸಿ ಈಗ  ಸಾಲ ಬೆಳೆದು ಭ್ರಷ್ಟಾಚಾರ  ಮುಗಿಲುಮುಟ್ಟಿದೆ.
ಇದರಿಂದಾಗಿ  ಸದ್ಗತಿ ಸಿಗದ ಜೀವ ದುರ್ಗತಿ ಕಡೆಗೆ ನಡೆದಿದೆ. ದೇಶವನ್ನು ಯಾರು ಬೇಕಾದರೂ ಆಳಬಹುದೆನ್ನುವ ಸ್ವತಂತ್ರ ಪ್ರಜಾಪ್ರಭುತ್ವದ ಮಧ್ಯೆ ನಿಂತಿರುವ ನಿಜವಾದ ದೇಶಭಕ್ತರು,ಜ್ಞಾನಿಗಳು, ವಿದ್ಯಾವಂತರು,ಸಾಹಿತಿಗಳು,
ಆಧ್ಯಾತ್ಮಿಕ ಚಿಂತಕರು ,ಮಾಧ್ಯಮದವರು  ಈವರೆಗೆ 
 ರಾಜಕೀಯ ಕ್ಷೇತ್ರಕ್ಕೆ ಬಂದು ಗೆದ್ದವರು ವಿರಳ. ಕಾರಣವಿಷ್ಟೆ ರಾಜಕೀಯ ನಡೆಸುವುದಕ್ಕೆ  ಧೈರ್ಯದ ಜೊತೆಗೆ ಹಣಬಲ ವಿರಬೇಕು.  ಇವರಿಗೆ ರಾಜಕೀಯ ವ್ಯಕ್ತಿಗಳನ್ನು  ತಮ್ಮೆಡೆ ಸೆಳೆದುಕೊಳ್ಳುವ ಜ್ಞಾನವಿದೆ ಆದರೆ ದೇಶವನ್ನು ಆಳುವ ಶಕ್ತಿಯಿಲ್ಲ ಎಂದರೆ ಇಲ್ಲಿ  ನಾವು ಪ್ರಜಾಪ್ರಭುತ್ವದ ಪ್ರಜೆಗಳಾಗಿದ್ದು ದೇಶ ಆಳುವ ಅಧಿಕಾರವನ್ನು  ಬೇರೆಯವರಿಗೆ ಬಿಟ್ಟು ಮಧ್ಯವರ್ತಿ ಆಗಿದ್ದು  ಸರಿತಪ್ಪುಗಳ ಲೆಕ್ಕಾಚಾರ ಹಾಕುವ ಬದಲು ನೇರವಾಗಿ  ರಂಗಕ್ಕೆ ಇಳಿದಾಗಲೇ  ಅದರ ಪ್ರಭಾವ ಎಷ್ಟಿದೆ ಎಂದು ಅನುಭವಿಸಿ ಸರಿಯಾದ ಮಾರ್ಗದಲ್ಲಿ  ದೇಶ ಕಟ್ಟಿ ನಡೆಸುವ ಕಡೆ  ಮೇಲ್ಮಟ್ಟದ ಬುದ್ದಿ ವಂತ ಜ್ಞಾನಿಗಳು  ತಯಾರಾದರೆ ಹೊರಗಿನಿಂದ ಬಂದು  ಜನರ ದಾರಿತಪ್ಪಿಸಿ  ತಮ್ಮ ಸ್ವಾರ್ಥ ಸುಖಕ್ಕಾಗಿ ಸರ್ಕಾರ ನಡೆಸುವವರ ಹೆಸರಿನಲ್ಲಿ ನಡೆಸುವ ಭ್ರಷ್ಟರು ದುಷ್ಟರು,ವೈರಿಗಳು,ವಿರೋಧಿಗಳ ನಿಜವಾದ ಬಣ್ಣ ಬಯಲಾಗಬಹುದು. ಇದಕ್ಕೆ ಮುಖ್ಯವಾಗಿ ನಮ್ಮ ಮಾಧ್ಯಮ ಮಿತ್ರರು  ದೇಶದ ಪರವಾಗಿ ನಿಲ್ಲುವುದು ಅಗತ್ಯ. ವ್ಯವಹಾರದ ವಿಚಾರಕ್ಕೆ ಬಂದಾಗ ಸರ್ಕಾರದ ಎಲ್ಲಾ ಭಾಗ್ಯ ಗಳು ಜನರೆಡೆಗೆ ತಲುಪಿಸುವುದು ಧರ್ಮ. ಆದರೆ ಮಧ್ಯವರ್ತಿಗಳೆ  ತಡೆದು ನುಂಗಿ ನೀರು ಕುಡಿದು ಫಲಾನುಭವಿಗಳ  ಮೂತಿಗೆ ಒರೆಸಿ ತಿಂದಿದ್ದಾರೆಂದರೆ ಇದಕ್ಕೆ ಸಾಕ್ಷಿ ಹೇಳೋರು ಯಾರು?  ದೇಶದ ಒಂದೊಂದು ರೂಗಳು  ದೇಶದ ಸಾಲವೆಂದು ಪರಿಗಣಿಸಿ ಹಿಂದಿರುಗಿಸಬೇಕೆಂದು  ಪ್ರಜೆ ಬಳಸಿದ್ದರೆ ಪ್ರಜೆಗಳಲ್ಲಿ ಉತ್ತಮ   ಜ್ಞಾನದ  ಪ್ರಗತಿ ಸಾಧ್ಯವಿತ್ತು. ದುಡಿಯದೆ ಕುಳಿತು  ತಿಂದು ಕೂಗಿ ಕಾರಿದರೆ ರಾಜಕೀಯ ಎತ್ತ ಸಾಗುತ್ತಿದೆ?
ಇಷ್ಟೆಲ್ಲಾ ನಡೆದರೂ ತಿಳಿದವರು  ಎದುರಾಡದೆ ಅದರೊಳಗೆ ಒಪ್ಪಂದ ಮಾಡಿಕೊಂಡು  ಮುಚ್ಚಿಹಾಕಿದರೂ ಸಾಲ ಸಾಲವೇ ಮುಂದೆ ತೀರಿಸಬೇಕಾದವರೂ ಪ್ರಜೆಗಳೇ. ಈಗಲೇ ಸರ್ಕಾರದ ಹಣದ ಮೂಲ  ಪ್ರಜೆಗಳ  ಹಣದ ಜೊತೆಗೆ ವಿದೇಶಿ ಹಣವೂ ಇದೆ. ಸ್ವದೇಶಿ ಋಣದ ಜೊತೆಗೆ ವಿದೇಶಿ ಋಣ ತೀರಿಸಲು ಎಷ್ಟು ಜನ್ಮ ಪಡೆಯಬೇಕೋ.ಅಜ್ಞಾನದ ಜಗತ್ತಿನಲ್ಲಿ  ಜ್ಞಾನಿಗಳಾದವರು ರಾಜಕೀಯಕ್ಕೆ ಮೊರೆಹೋಗಿ ಬೇಡುತ್ತಿರುವುದು ದೊಡ್ಡ ಅಜ್ಞಾನ ವೆಂದರೆ ತಪ್ಪಲ್ಲ. ಇಲ್ಲಿ ಸ್ಥಿತಿ ಹದಗೆಟ್ಟಿರುವುದು ಸಾಲದಿಂದ, ಸಾಲ ತೀರಿಸಲು ಪ್ರಜೆಗಳೆ ದುಡಿಯಬೇಕು. ದುಡಿದರೂ ಅದರ ಲಾಭ ದೇಶಕ್ಕೆ ಆಗಬೇಕು.ವಿದೇಶಿ ಕಂಪನಿಗಳ ಲಾಭ ವಿದೇಶಕ್ಕೆ ಸೇರಿದರೆ ದೇಶದ ಗತಿ? ಭೂಮಿ,ನೀರು ಸರ್ಕಾರದ  ಎಲ್ಲಾ ಸೌಕರ್ಯಗಳನ್ನು ಪಡೆದು ದೇಶದ  ಸಾಲ ತೀರಿಸಲು ಸೋತರೆ ಧರ್ಮ ವೆ? ತಿಳಿದವರೆ ಸಹಕಾರ ನೀಡಿ ಬೆಳೆಸಿ ಈಗ ರಾಜಕೀಯ ಸರಿಯಿಲ್ಲ ಎಂದು ಒಂದು ಮಾತಿನಿಂದ ಜನರನ್ನು ದಾರಿತಪ್ಪಿಸಿದರೆ  ಇದನ್ನು  ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವರು. ದೇಶದ ಎಲ್ಲ ಅಧ್ಯಾತ್ಮ ಶಕ್ತಿ ಹಿಂದುಳಿಸಿ ಭೌತಿಕದಲ್ಲಿ ಹೆಸರು,ಹಣ,ಅಧಿಕಾರ ಸ್ಥಾನಮಾನ‌ಪಡೆದು ಜನರಲ್ಲಿದ್ದ ಸಾಮಾನ್ಯಜ್ಞಾನ ತಿಳಿಯದೆ ನೀಡಿದ ವಿಶೇಷ ಜ್ಞಾನದ ವಿಷಯ, ವಿಜ್ಞಾನದ ಪ್ರಗತಿಯಿಂದ ಮನುಕುಲ  ಮೂಲ ಮರೆತು ಮುಂದೆ ನಡೆದರೂ ತಿರುಗಿ ಬರಲಾಗದೆ ಯಾವ ತೃಪ್ತಿ ಸಿಗದು. 
ಆತ್ಮತೃಪ್ತಿ ಹೊಂದಿದ ಮೇಲೆ ಮುಕ್ತಿ ಎಂದರು.ರಾಜಕೀಯಕ್ಕೆ ಇಳಿದಾಗ ತೃಪ್ತಿ ಪಡೆಯಲು ಅಸಾಧ್ಯ. ಹಾಗಾಗಿ ಯಾರೇ ಆಗಲಿ ರಾಜಕೀಯದ ಹಿಂದೆ ನಡೆದಷ್ಟೂ  ಸಾಲದ ಹೊರೆ ಏರಿಸಿಕೊಂಡು ತೀರಿಸಲಾಗದೆ  ತಿರುಗಿತಿರುಗಿ ಜನ್ಮ ಪಡೆದರೂ ಸರಿಯಾದ ಸಾತ್ವಿಕ ಸತ್ಯದ ಶಿಕ್ಷಣ ಪಡೆಯುವವರೆ  ಒಳಗಿನ ಶುದ್ದತೆ ಸಿದ್ದಿಯಾಗದು. ಸಿದ್ದಿಪುರುಷರನ್ನು ಮುಂದಿಟ್ಟುಕೊಂಡು ಪ್ರಸಿದ್ದರಾದರೂ ಅವರ ಜ್ಞಾನದ ಆಳಕ್ಕೆ ಇಳಿಯುವವರೆಗೆ  ಮುಕ್ತಿಯಿಲ್ಲ
ವೆಂದರು. ಅನುಭವವಿಲ್ಲದ  ಅರ್ಧ ಸತ್ಯವಷ್ಟೆ ರಾಜಕೀಯ ನಡೆಸಬಹುದು. ಪೂರ್ಣ ಸತ್ಯವು ರಾಜಯೋಗದೆಡೆಗೆ ನಡೆಸಿ  ಆತ್ಮತೃಪ್ತಿ  ಸಿಗುವುದು. ಒಟ್ಟಿನಲ್ಲಿ ರಾಜಕೀಯವು ಮಾನವನ ಭೌತಿಕ ಜೀವನದಲ್ಲಿ ಸಂತೋಷ ನೀಡಿದರೆ  ರಾಜಯೋಗವು ಅಧ್ಯಾತ್ಮ ಜಗತ್ತಿನಲ್ಲಿ ಸಂತೋಷಕೊಡುತ್ತದೆ. ರಾಜಯೋಗಿಗೆ ಯಾವುದೇ ರೀತಿಯ ಸ್ವಾರ್ಥ ಅಹಂಕಾರ ವಿರದೆ ಲೋಕಕಲ್ಯಾಣಕ್ಕಾಗಿ ತನ್ನ ಜೀವನವನ್ನು ಸದ್ಬಳಕೆ ಮಾಡಿಕೊಳ್ಳುವ ಜ್ಞಾನವಿರುತ್ತದೆ. ಆದರೆ ಇದಕ್ಕೆ ವಿರುದ್ದವಾದ ರಾಜಕೀಯದಲ್ಲಿ ಹಣ,ಅಧಿಕಾರದ ಜೊತೆಗೆ ಜನಬಲವೂ ಇದ್ದು  ಜನರ ಹಣವನ್ನು ಜನರಿಗೆ ಕೊಡುತ್ತಿರುವ ಸಾಮಾನ್ಯ ಜ್ಞಾನವಿಲ್ಲದೆ   ದುರ್ಭಳಕೆ ಮಾಡಿಕೊಂಡು  ಈ ಕಡೆ ದೇಶದ ಪ್ರಗತಿಯೂ ಆಗದೆ ಜನರಲ್ಲಿ ಶಾಂತಿಯೂ  ಬೆಳೆಯದೆ ಕ್ರಾಂತಿಗೆ ದಾರಿಮಾಡಿಕೊಟ್ಟು  ಜೀವನ ಅತಂತ್ರಸ್ಥಿತಿಗೆ ತಲುಪಿಸುತ್ತದೆ. ಇದು ನಾವೀಗ ಪ್ರಜಾಪ್ರಭುತ್ವದಲ್ಲಿ ಕಾಣುತ್ತಿರುವುದರ ಹಿಂದೆ ಪ್ರಜೆಗಳ ಸಹಕಾರವಿದೆ.ಇದನ್ನು ರಾಜಕಾರಣಿಗಳ ದೋಷ ಎನ್ನುವ ಜೊತೆಗೆ ಸಹಕರಿಸಿದ  ಪ್ರಜೆಗಳ ಸಹಕಾರವೇ ಕಾರಣ.
ಅಜ್ಞಾನದ ಶಿಕ್ಷಣ  ಪಡೆದು ಜ್ಞಾನದ ರಾಜಕೀಯ  ನಡೆಸಲಾಗದು.ಒಳಗಿರುವ  ಶಕ್ತಿಯೇ ಎಲ್ಲವನ್ನೂ ನಡೆಸುವುದಾದರೆ  ಆಂತರಿಕ ಪ್ರಜ್ಞೆ  ಹೆಚ್ಚಾದರೆ  ಎಲ್ಲಾ  ಸತ್ಯದರ್ಶನವಾಗುತ್ತದೆ.ಶ್ರೀ ರಾಮರಾಜ್ಯ ಸ್ಥಾಪನೆಗೆ ಶ್ರೀ ರಾಮನ ತತ್ವಜ್ಞಾನದ ಅಗತ್ಯವಿದೆ. ತಂತ್ರದಿಂದ ರಾಮನ ಹೆಸರಿನಲ್ಲಿ ತಾನು ಬೆಳೆದರೆ ಅಧರ್ಮ. ಇದಕ್ಕಾಗಿ ಭೂಮಿ ಆಳುವುದು ತಪ್ಪಲ್ಲ ಅಧರ್ಮದಿಂದ ಭೂಮಿ ಆಳುವುದರಿಂದ  ಭೂಮಿಯಲ್ಲಿ ಶಾಂತಿಯಿರದು. ಕಲಿಗಾಲದ ಪ್ರಭಾವ  ಮಾನವನಿಗೆ  ಸರಿಯಾದ ಪಾಠ ಕಲಿಸುತ್ತದೆ. ಇಲ್ಲಿ ಯಾರೂ ಯಾರನ್ನೂ ಆಳಲು ಸಾಧ್ಯವಿಲ್ಲ.ನಮ್ಮನ್ನು ನಾವು ಆಳಿಕೊಳ್ಳಲು ರಾಜಯೋಗ
ದೆಡೆಗೆ ಹೊರಟ ನಮ್ಮ ಹಿಂದಿನ ಮಹಾತ್ಮರಲ್ಲಿದ್ದ ಸತ್ಯ ಸತ್ವ,ತತ್ವ ಬಿಟ್ಟು ಅಸತ್ಯ ಹಾಗು ತಂತ್ರದಿಂದ ಈವರೆಗೆ ದೇಶವನ್ನೇ ವಿದೇಶಿ ಶಿಕ್ಷಣದಿಂದ ನಡೆಸಿ ಸ್ವದೇಶದ ತತ್ವ ಹಿಂದುಳಿದು, ಇನ್ನಷ್ಟು ಸಾಲ ಏರಿಸಿರುವ ರಾಜಕೀಯ ವ್ಯವಸ್ಥೆ  ಇಂದಿಗೂ  ಒಗಟಾಗಿ ಉಳಿದಿದೆ.ನಿಜ, 
ಭೌತಿಕದಲ್ಲಿ ಬದುಕಲು ಹಣ ಬೇಕು. ಹಣ ಸಂಪಾದಿಸಲು ಜ್ಞಾನವಿರಬೇಕು.ಜ್ಞಾನ ಸಂಪಾದನೆಗೆ ಶಿಕ್ಷಣ ಬೇಕು. ಯಾವ ರೀತಿಯ ಶಿಕ್ಷಣ ಬೇಕಿತ್ತು? ಮಾನವೀಯತೆ,ನೈತಿಕತೆ,ತತ್ವವನ್ನು ಅರ್ಥ ಮಾಡಿಕೊಳ್ಳುವ ಶಿಕ್ಷಣವೇ ನಿಜವಾದ ಶಿಕ್ಷಣವೆಂದರು. ಈಗಲೂ ಕಾಲ ಮಿಂಚಿಲ್ಲ. 
ಹಿಂದಿರುಗಿ  ಬಂದರೆ ಭಗವಂತ ನೀಡಿದ್ದನ್ನು ಪ್ರಸಾದ ವೆಂದು ಭಕ್ತಿಯಿಂದ ಸ್ವೀಕರಿಸಿ ಎಲ್ಲರಲ್ಲಿಯೂ ಅಡಗಿರುವ ಆ ಪರಾಶಕ್ತಿಯನ್ನರಿತು ಹಂಚಿಕೊಂಡು ಬಾಳಿ ಬದುಕುವ ಕಲೆ ಮಾನವನೊಳಗಿದೆ. ಬೆಳೆಸಿಕೊಂಡರೆ ಉತ್ತಮ ಶಾಂತಿ ಸಮಾಧಾನ,ತೃಪ್ತಿ, ಮುಕ್ತಿ ಇದ್ದಲ್ಲಿಯೇ ಸಿಗಬಹುದು. ಎಷ್ಟು ಸರ್ಕಾರ ಬೇಡಿಕೊಂಡಿರುವೆವೋ ಅಷ್ಟು ಭ್ರಷ್ಟಾಚಾರ ಬೆಳೆಯುತ್ತದೆ. ಅಂದರೆ ಸರ್ಕಾರದ ಹಣ ಜನರ ಋಣ.ಋಣ ತೀರಿಸಲು ಸತ್ಕರ್ಮ ಮಾಡಬೇಕಿದೆ.ನಮ್ಮ ಗುರುಹಿರಿಯರು ಹಾಕಿಕೊಟ್ಟ  ಧರ್ಮ ಕರ್ಮದಲ್ಲಿದ್ದ ಶುದ್ದ ಸತ್ಯ,ತತ್ವವನ್ನರಿತರೆ ಎಲ್ಲಾ ಹಿಂದಿನ  ಮಹಾತ್ಮರು ತಿಳಿಸಿದ ಅಧ್ಯಾತ್ಮ ಸತ್ಯವೂ ಅನುಭವಕ್ಕೆ ಬರುತ್ತದೆ. ಅಂದು ಇಂದು ಮುಂದೆಯೂ ಮನುಕುಲ ಭೂಮಿಯಲ್ಲಿರುತ್ತದೆ.ಆದರೆ ಸತ್ಯಾಸತ್ಯತೆಯು  ಕಾಲಮಾನಕ್ಕೆ ತಕ್ಕಂತೆ  ತಕ್ಕಂತೆ ಬದಲಾಗೋದು ಮಾತ್ರ ರಾಜಕೀಯದ ಪ್ರಭಾವ. ಸತ್ಯ ಹಾಗು ತತ್ವ ಬದಲಾಗದು.
ಮನಸ್ಸನ್ನು  ತಡೆಹಿಡಿಯೋದು ಹೊರಗೆ ಆಗದು ಒಳಗೆ ಸಾಧ್ಯವಿದೆ ಇದೇ ಯೋಗ.
ಪರಮಾತ್ಮನ ಜೀವಾತ್ಮ ಸೇರೋದು.
ಪರದೇಶ ಸೇರುವ ರಾಜಕೀಯವೆಲ್ಲಿ? ಪರಮಾತ್ಮನ ಸೇರುವ ರಾಜಯೋಗವೆಲ್ಲಿ?  

No comments:

Post a Comment