ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Saturday, April 8, 2023

ಎಲ್ಲದ್ದಕ್ಕೂ ಯೋಗವಿರಬೇಕು.

ಭ್ರಷ್ಟಾಚಾರದಿಂದ ಹಣ ಸಂಪಾದನೆ ಮಾಡಲು ಮನಸ್ಸಿರುತ್ತದೆ  ಪರಮಾತ್ಮನಲ್ಲ. ಆದರೆ ಶಿಷ್ಟಾಚಾರದಲ್ಲಿ ಹೆಚ್ಚು ಹಣ ಸಂಪಾದನೆಯಾಗದು . ಆತ್ಮನೊಂದಿಗೆ ಬೆರೆತ ಮನಸ್ಸಿಗೆ ಹಣಕ್ಕಿಂತ ಜ್ಞಾನವೇ ಮುಖ್ಯವಾಗಿರುತ್ತದೆ. ಜ್ಞಾನದಲ್ಲೂ ಅಧ್ಯಾತ್ಮ ಭೌತಿಕವೆಂಬುದಿದೆ. ಅಧ್ಯಾತ್ಮ ಜ್ಞಾನ ಹೆಚ್ಚಾದರೆ  ಸಿದ್ದಪುರುಷರಾಗುವರು.ಭೌತಿಕ ಜ್ಞಾನ ಬೆಳೆದಂತೆಲ್ಲಾ ಪ್ರಸಿದ್ದರಾಗುವರು. ಪ್ರಸಿದ್ದರಾದಂತೆಲ್ಲಾ  ಆತ್ಮಜ್ಞಾನ ಹಿಂದುಳಿಯುವುದು..ಒಂದರ ಹಿಂದೆ ಇನ್ನೊಂದು ಇದೆ.
ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ  ತಿಳಿದುಕೊಳ್ಳಲು ಸಮಯ ಬೇಕು. ವ್ಯಕ್ತಿಯ ಅಧಿಕಾರ,ಹಣ,ಸ್ಥಾನಮಾನ ಹೆಚ್ಚಾದಂತೆ ಒಳಗಿನ ತತ್ವ ಹಿಂದುಳಿದು  ತಂತ್ರವೇ ಆಳುವುದು.  ಒಬ್ಬ ಕಡುಬಡವನಿಗೆ  ಅಧಿಕಾರ ಕೊಟ್ಟರೆ  ಹಣವೇ ಸರ್ವಸ್ವ ಎಂದು ವಾದಿಸಬಹುದು.ಆದರೆ ಒಬ್ಬ ಜ್ಞಾನಿಯಾದವನಿಗೆ ಅಧಿಕಾರ ಸಿಕ್ಕರೆ ಜ್ಞಾನವೇ ಶ್ರೇಷ್ಠ ವೆನ್ನುವನು.ತತ್ವಜ್ಞಾನಿ ತತ್ವದ ಕಡೆಗೆ ಹೋದರೆ ತಂತ್ರಜ್ಞಾನಿ ಕೇವಲ ತಂತ್ರವನ್ನೇ ಬಂಡವಾಳವಾಗಿಸಿಕೊಂಡಿರುವನು. ಒಟ್ಟಿನಲ್ಲಿ ಎರಡೂ ಒಂದೇ ನಾಣ್ಯದ ಮುಖವಾದರೂ ಒಂದೇ ಮುಖ ಹೆಚ್ಚು ಜನರನ್ನು ನೋಡುವುದಿಲ್ಲ.ಗುರುತಿಸುವುದೂ ಇಲ್ಲ. ಕಾಣದ ದೇವರನ್ನು ತೋರಿಸುವವರು ವಿರಳ. ಕಾಣದ ದೇವರನ್ನು ಬೆಳೆಸುವುದು ಸರಳ. ತತ್ವದಿಂದ ದೈವತ್ವ ಬೆಳೆದರೆ ಶಾಂತಿ,
ತಂತ್ರದಿಂದ  ಬೆಳೆಸಲು ಹೋದರೆ ಕ್ರಾಂತಿ.ಕಾರಣ ಇಲ್ಲಿ ಎಲ್ಲರಲ್ಲಿಯೂ ಅಡಗಿರುವ ದೇವ ಒಬ್ಬನೇ ಆದರೂ ಕೋಟ್ಯಾಂತರ ದೇವರಿದ್ದರೂ ಕಂಡವರಿಲ್ಲ ಬೆಳೆಸಿದವರಿದ್ದಾರೆ. ದೈವತ್ವವು ಆಂತರಿಕ ಮನಸ್ಸಿನ ಶಕ್ತಿಯಾಗಿದೆ ಕಾಣೋದಿಲ್ಲ.ದೇವಾಸುರ ಗುಣಗಳು ಮಾನವನೊಳಗಿರುವ ಶಕ್ತಿಯಾಗಿದೆ.ಅನುಭವಿಸಿಯೇ ತಿಳಿಯಬೇಕು.
ಇಂತಹ ವಿಚಾರಗಳು ಹೇಗೆ  ಬೇರೆಯವರೊಂದಿಗೆ ಹಂಚಿಕೊಳ್ಳಲು ಮನಸ್ಸು ಬರುವುದಿಲ್ಲವೋ  ಹಾಗೆಯೇ ದೈವತ್ವದೆಡೆಗೆ ಹೋದಂತೆಲ್ಲಾ  ನಾವೂ ದೂರವಾಗುತ್ತೇವೆ.
ಭೂಮಿಗೆ ಬರೋವಾಗ ಬರೀ ಕೈ ಹೋಗುವಾಗಲೂ ಬರಿಕೈಯಿದ್ದರೆ ಯೋಗ. ಅದಕ್ಕಾಗಿ ಹಿಂದಿನ ಮಹಾತ್ಮರುಗಳು  ಕೊನೆಗಾಲದಲ್ಲಿ ಎಲ್ಲಾ ಜವಾಬ್ದಾರಿ ಅಧಿಕಾರ ಅಂತಸ್ತು ತ್ಯಜಿಸಿ ವಾನಪ್ರಸ್ಥಾಶ್ರಮ ಸೇರಿ ಮುಕ್ತರಾದರು.ಇದ್ದಾಗಲೇ ಯೋಗಿಗಳಾಗಿದ್ದವರಿಗಷ್ಟೆ ಈ ಮನಸ್ಸು ಬರುವುದು. ಜನನ ಮರಣದ  ನಡುವಿನ ಜೀವನ  ಸಾರ್ಥ ಕವಾಗುವುದು. ಎಷ್ಟು ಗಳಿಸಿದರೂ ಅದು ಯೋಗದಲ್ಲಿದ್ದರೆ  ಮಾತ್ರ ದಕ್ಕುವುದು.ಅಯೋಗ್ಯರನ್ನು ಕೂಡಿಕೊಂಡಿದ್ದರೆ ಇರುವ ಯೋಗವೂ ನಾಶ.ವಾಗುವುದು.
ತಾಳಿದವನು ಬಾಳಿಯಾನು, ನಿಧಾನವೇ ಪ್ರಧಾನವೆಂದಿದ್ದಾರೆ
ದಾನ ಮಾಡುವಷ್ಟು ಗಳಿಸಬಾರದು. ದಾನವರಿಗೆ ದಾನ ನೀಡಬಾರದು. ಸತ್ಪಾತ್ರರನ್ನು ಗುರುತಿಸುವ ಜ್ಞಾನವಿರಬೇಕು.

No comments:

Post a Comment