ಧರ್ಮ ಹಾಗು ಸತ್ಯ ಹಾದಿಯಲ್ಲಿ ನಡೆಯುವಾಗ ಭಗವಂತನ ಪರೀಕ್ಷೆ ಅಧಿಕವಾಗಿರುವುದಂತೆ ಸಾಕಷ್ಟು ಕಷ್ಟ ನಷ್ಟಗಳನ್ನು ಎದುರಿಸಿ ಮುಂದೆ ನಡೆದವರಿಗಷ್ಟೆ ನಿಜವಾದ ಜ್ಞಾನ ಮುಕ್ತಿ ಮೋಕ್ಷ ಸಿಗುವುದಂತೆ.ಇವು ನಮ್ಮ ಸನಾತನ ಧರ್ಮದವರ ಅನುಭವದ ಸತ್ಯ. ಹಾಗಾದರೆ ಅತಿಯಾದ ಶ್ರೀಮಂತ ರು ಜ್ಞಾನಿಗಳಾಗಲು ಸಾಧ್ಯವಿಲ್ಲವೆಂದಾಯಿತು. ವಾಸ್ತವದಲ್ಲಿ ಹೆಚ್ಚು ಹೆಚ್ಚು ಹಣವಿರುವವರ ಬಳಿ ಸಾಕಷ್ಟು ಜನಬಲವಿದ್ದು ದೊಡ್ಡ ದೊಡ್ಡ ದೇವಸ್ಥಾನ, ಮಠ, ಆಶ್ರಮ,ಪ್ರತಿಮೆಗಳನ್ನು ಕಟ್ಟಿಸಿ ಭಕ್ತರೆನಿಸಿಕೊಳ್ಳುತ್ತಿದ್ದಾರೆಂದರೆ ಇದು ಪರಮಾತ್ಮನ ಕಡೆಗೆ ಹೋಗುವ ದಾರಿಯಲ್ಲವೆ?
ಉಳ್ಳವರು ಶಿವಾಲಯವ ಕಟ್ಟುವರು ನಾನೇನು ಮಾಡಲಿ ಬಡವನಯ್ಯಾ ಎಂದಿರುವ ಶರಣರಂತೆ ಬಡತನವೆಂಬುದು ಹೊರಗಿನ ಕಣ್ಣಿನಿಂದ ನೋಡಿದಾಗ ಎಲ್ಲಾ ದಾಸ ಶರಣ ಸಂತ ಮಹಾತ್ಮರುಗಳು ಬಡವರಾಗಿ ಕಾಣುತ್ತಾರೆ. ಒಳಗಣ್ಣು ತೆರೆದವರಿಗೆ ಮಾತ್ರ ನಿಜವಾದ ಬಡತನವು ಒಳಗಿರುವ ಅಜ್ಞಾನವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಭ್ರಷ್ಟಾಚಾರ ರಾಜಕೀಯಕ್ಕಿಂತ ಮೇಲೆ ಹೋಗುತ್ತಿದ್ದರೂ ದೇವರ ಭಯದಲ್ಲಿ ಜನರು ಬಾಯಿಮುಚ್ಚಿಕೊಂಡು ದೇವರೆ ನೋಡಿಕೊಳ್ಳಲಿ ಎನ್ನುವಂತಾಗಿರೋದು ಭಾರತದಂತಹ ಪವಿತ್ರ ದೇಶಕ್ಕೆ ನುಂಗಲಾರದ ತುತ್ತಾಗುತ್ತಿದೆ. ರಾಜಕೀಯವು
ಧಾರ್ಮಿಕ ಕ್ಷೇತ್ರ ಆವರಿಸಿದಂತೆಲ್ಲಾ ಹಣದ ಹೊಳೆ ಹರಿಯುತ್ತದೆ. ಆ ಹಣದ ಮೂಲವೇ ಭ್ರಷ್ಟಾಚಾರ ಆಗಿದ್ದರೆ ದೈವಶಕ್ತಿ ಹೋಗಿ ಅಸುರಶಕ್ತಿಯೇ ದೇವರನ್ನು ಆಳುವಂತೆ ಮಾಡುತ್ತದೆ.
ಸಾಮಾನ್ಯವಾಗಿ ಎಲ್ಲರೂ ನೋಡೋದು ಭೌತಿಕ ಪ್ರಗತಿ.
ಯಾವಾಗ ಮಾನವನು ಹಣವನ್ನು ಬಳಸಿ ಜನರನ್ನು ವಶಪಡಿಸಿಕೊಂಡು ಭೌತಿಕದಲ್ಲಿ ರಾಜಕೀಯಕ್ಕೆ ಇಳಿದನೋ ಆಗಲೇ ಅಧರ್ಮ ಅನ್ಯಾಯ ಅಸತ್ಯದ ಭ್ರಷ್ಟಾಚಾರ ಜೊತೆಗೆ ಸೇರಿಕೊಂಡು ಮುಂದೆ ನಡೆಯಿತು. ಜನರಲ್ಲಿದ್ದ ಸಾಮಾನ್ಯಜ್ಞಾನ ಹಿಂದುಳಿದು ಹೊರಗಿನ ವಿಶೇಷ ಜ್ಞಾನ ತನ್ನ ಸ್ಥಾನ ಭದ್ರಪಡಿಸಿಕೊಂಡಿತು. ವಿಶೇಷಜ್ಞಾನ ವಿಜ್ಞಾನದ ಸಂಶೋಧನೆಯ ಫಲವಾಗಿ ಮಾನವನು ಆಕಾಶದೆತ್ತರ ಹಾರಿ ತನ್ನ. ಸಾಧನೆಯನ್ನು ಕಣ್ಣಿಗೆ ಕಾಣುವಂತೆ ಮಾಡಿಕೊಂಡು ಸಾಕಷ್ಟು ಹಣ,ಅಧಿಕಾರ,ಸ್ಥಾನಮಾನ ಪಡೆದಿದ್ದರೂ ಒಮ್ಮೆ ಜೀವ ಹೋಗೋದನ್ನು ತಡೆಯಲಾಗಿಲ್ಲವೆಂದರೆ ಅಗೋಚರ ಶಕ್ತಿಯ ಮುಂದೆ ಮಾನವನ ಸಾಧನೆ ಏನೂ ಇಲ್ಲ.
ನಿಜ ಹಿಂದಿನ ಎಲ್ಲಾ ಮಹಾತ್ಮರು ಅಧ್ಯಾತ್ಮ ಸಾಧಕರು ದೇವರುಗಳು ಇದೇ ಭೂಮಿಯ ಮೇಲಿದ್ದೇ ರಾಜಕೀಯದ ಮಧ್ಯೆ ನಿಂತು ಧರ್ಮ ರಕ್ಷಣೆ ಮಾಡಿ ಈಗ ಕಣ್ಮರೆಯಾಗಿದ್ದಾರೆಂದರೆ ಅವರೂ ಕೂಡ ಸಾವನ್ನು ಗೆಲ್ಲಲು ಸಾಧ್ಯವಾಗಿಲ್ಲ ಎನ್ನಬಹುದು. ಇಲ್ಲಿ ಸಾವನ್ನು ಗೆಲ್ಲುವುದೆಂದರೆ
ಜೀವಂತವಾಗಿರೋದಲ್ಲ ಜೀವ ಕ್ಷಣಿಕ ಆತ್ಮ ಅಮರ. ಹಿಂದಿನ ಮಹಾತ್ಮರುಗಳು ಹೆಚ್ಚು ವರ್ಷ ಆಯಸ್ಸನ್ನು ಬೇಡಿರಲಿಲ್ಲ.
ಜಯವಿಜಯರ ಕಥೆಯಲ್ಲಿ ಏಳು ಜನ್ಮಕ್ಕಿಂತ ಮೂರು ಜನ್ಮದ ಅಸುರ ಜನ್ಮವೇ ಸಾಕೆಂದರೆಂದರೆ ನಾವಿಲ್ಲಿ ತಿಳಿಯಬೇಕಾದದ್ದು ಭೂಮಿಯಲ್ಲಿ ದೇವರಾಗಲಿ ಅಸುರರಾಗಲಿ ಜನ್ಮ ಪಡೆಯುವುದು ನಿಶ್ಚಿತ. ಜನ್ಮ ಪಡೆದ ಮೇಲೆ ಧರ್ಮದ ಹಾದಿಯಲ್ಲಿ ನಡೆಯುವುದೇ ನಿಜವಾಗಿ ಸಾವನ್ನು ಗೆಲ್ಲುವ ಮಾರ್ಗ. ಅಂದರೆ ನಮ್ಮ ಮುಂದೆ ಭ್ರಷ್ಟಾಚಾರ ಬೆಳೆದಿದೆ ಅಸುರಿ ಶಕ್ತಿ ಹೆಚ್ಚಾಗಿದೆ ಎಂದರೂ ಅದರ ಸಹಕಾರ ನೀಡುತ್ತಾ ಅಥವಾ ಸುಮ್ಮನೆ ನೋಡುತ್ತಾ ನನಗೂ ಇದಕ್ಕೂ ಸಂಬಂಧ ವಿಲ್ಲ. ನಾನೇ ಬೇರೆ ನೀನೇ ಬೇರೆ ಎಂದರೆ ತತ್ವವಾಗೋದಿಲ್ಲ. ಹಾಗಾಗಿ ಧಾರ್ಮಿಕ ಕ್ಷೇತ್ರದ ಭ್ರಷ್ಟಾಚಾರ ಬೇರೆಯಲ್ಲ ರಾಜಕೀಯ ಕ್ಷೇತ್ರದ ಭ್ರಷ್ಟಾಚಾರ ಬೇರೆಯಲ್ಲ. ಇವೆರಡೂ ದೇಶವನ್ನು ಹಾಳು
ಮಾಡುವಂತಿದ್ದರೆ ಇದರ ಬಗ್ಗೆ ಚಿಂತನೆ ನಡೆಸುವುದು ಪ್ರತಿಯೊಬ್ಬ ಪ್ರಜೆಯ ಧರ್ಮ ವಾಗಿತ್ತು. ಸತ್ಯಕ್ಕೆ ಸಾವಿಲ್ಲವಂತೆ ಆದರೂ ಸತ್ಯವನ್ನು ಮುಚ್ಚಿಟ್ಟು
ಜನರು ಮುಕ್ತಿ ಪಡೆಯಲು ಹೋಗುತ್ತಿದ್ದಾರೆಂದರೆ
ಮುಕ್ತಿ ಸಿಗುವುದೆ? ತುಂಬಾ ಬೇಸರದ ವಿಚಾರವೆಂದರೆ ನಮ್ಮ ಭಾರತದಲ್ಲಿರುವಷ್ಟು ರಾಜಕೀಯ ದ್ವೇಷ ಬೇರೆಲ್ಲೂ ಇಲ್ಲ.
ತತ್ವಜ್ಞಾನಿಗಳ ಪ್ರಕಾರ ಎಲ್ಲಿ ದ್ವೇಷವಿರುವುದೋ ಅಲ್ಲಿ ಧರ್ಮ ನಿಲ್ಲದು. ಸತ್ಯವೇ ದೇವರಾದಾಗ ಅಸತ್ಯದ ರಾಜಕೀಯ ದಲ್ಲಿ ದೈವತ್ವವಿದೆಯೆ? ಹಣದಿಂದ ದೇವರನ್ನು ಕೊಂಡುಕೊಳ್ಳಲು ಸಾಧ್ಯವೆ? ಪ್ರಜಾಶಕ್ತಿಯನ್ನು ಹಣದಿಂದ ಅಳೆಯುವುದು ಅಧರ್ಮ ಅಜ್ಞಾನ.
ಈವರೆಗೆ ತಿಳಿಸಿರುವ ಎಲ್ಲಾ ಸತ್ಯದ ಲೇಖನಗಳಲ್ಲಿ ಅನುಭವದ ಸತ್ಯವಿದ್ದರೂ ಯಾರ ಹೆಸರನ್ನೂ ಹೊರ
ಹಾಕದಿರಲು ಕಾರಣವೆಂದರೆ ಎಲ್ಲಿ ಜನಬಲ ಹಣಬಲ ಇದೆಯೋ ಅಲ್ಲಿ ವ್ಯಕ್ತಿ ಬೆಳೆಯುತ್ತಾನೆಯೋ ಹೊರತು ಶಕ್ತಿಯಲ್ಲ. ಶಕ್ತಿ ಜನರದ್ದು ಕುಸಿದಿರುವುದನ್ನು ಕಾಣಬಹುದು.
ನಮ್ಮ ಸಹಕಾರ ಯಾರಿಗೆ ಕೊಡುವೆವೋ ಅದು ನಮ್ಮನ್ನು
ಯಾವ ದಿಕ್ಕಿಗೆ ಎಳೆಯುತ್ತಿದೆ ಎನ್ನುವ ಬಗ್ಗೆ ಚಿಂತನೆ ನಡೆಸಿದಾಗಲೇ ಇಡೀ ದೇಶದೊಳಗೆ ಬೆಳೆಯುತ್ತಿರುವ ಸಮಸ್ಯೆಗೆ ಕಾರಣ ನಮ್ಮ ಸಹಕಾರ ಎನ್ನುವ ಸತ್ಯ ಅರ್ಥ ಆಗುತ್ತದೆ.
ಸಾಮಾನ್ಯರಲ್ಲಿಯೂ ಇರೋದು ಅದೇ ಒಬ್ಬ ಪರಮಾತ್ಮ ಅಸಮಾನ್ಯರಲ್ಲಿಯೂ ಅವನೇ ಇರೋದು.ಸಾಮಾನ್ಯರಲ್ಲಿ ಅಂತರಾತ್ಮ ಜಾಗೃತವಾಗಿದ್ದರೆ ಅಸಮಾನ್ಯರಲ್ಲಿ ಇದು ಭೌತಿಕ ಮಟ್ಟದಲ್ಲಿ ಜಾಗೃತವಾಗಿರುತ್ತದೆ. ಹೀಗಾಗಿ ರಾಜಕೀಯವೇ ಹೆಚ್ಚಾಗಿ ರಾಜಯೋಗ ಹಿಂದುಳಿದು ಆತ್ಮದುರ್ಭಲ ವಾಗಿ
ಕ್ರಾಂತಿ ಯ ವಿಷಬೀಜ ಬಿತ್ತುವವರು ತಮ್ಮ ಸಾಮ್ರಾಜ್ಯ ಸ್ಥಾಪಿಸಿ ಆಳುವರು. ಹಾಗಾದರೆ ಜಗತ್ತನ್ನು ಆಳುವುದು ಸುಲಭವೆ ಕಷ್ಟವೆ? ಭೌತಿಕ ಜಗತ್ತನ್ನು ಆಳುವುದಕ್ಕೆ ಅಜ್ಞಾನಿಗಳ ಸಹಕಾರ ಬೇಕಾದರೆ,ಅಧ್ಯಾತ್ಮದ ಜಗತ್ತನ್ನು ಅರ್ಥ ಮಾಡಿಕೊಳ್ಳಲು ಜ್ಞಾನಿಗಳ ಸಹಕಾರ ಅಗತ್ಯವಿದೆ. ಭಾರತದಲ್ಲಿನ ಈ ಪರಿಸ್ಥಿತಿಗೆ ಕಾರಣವೆಂದರೆ ಅಧ್ಯಾತ್ಮ ಜಗತ್ತಿನಲ್ಲಿರುವ ಜ್ಞಾನಿಗಳಾದವರೆ ಭೌತಿಕ ಜಗತ್ತನ್ನು ಆಳುವವರಿಗೆ ಶರಣಾಗಿ ಸಹಕಾರ ನೀಡಿ ತಮ್ಮ ಪುಣ್ಯವನ್ನು ಧಾರೆಯೆರೆದಿರೋದು. ಇದರ ಪ್ರಭಾವದಿಂದಾಗಿ ಜನರಲ್ಲಿದ್ದ ಸುಜ್ಞಾನ ಹಿಂದುಳಿಯಿತು ವಿಜ್ಞಾನ ಮುಂದೆ ನಡೆಯಿತು.
ಆಕಾಶದೆತ್ತರ ವಿದೇಶದವರೆಗೆ ಹೋಗುವವರು ಸಾಧಕರು
ಮನೆಯೊಳಗೆ ಮನಸ್ಸಿನೊಳಗೇ ದೇವರನ್ನು ಕಂಡವರು ಬಡವರು ಹಿಂದುಳಿದವರಿಗೆ ಸರ್ಕಾರದ ಸಾಲ ಸೌಲಭ್ಯ ಮನೆ ಮನೆ ತಲುಪಿಸಿ ಸಾಲಮಯವಾಗಿಸಿ ಸರ್ಕಾರದ ಕೈ ಕೆಳಗೆ ನಿಂತು ಬೇಡುವ ಸ್ಥಿತಿಗೆ ತಲುಪಿಸಿದ್ದಾರೆಂದರೆ ಇದು ಪ್ರಗತಿಯೆ? ಆತ್ಮನಿರ್ಭರ ಭಾರತವು ಅಧ್ಯಾತ್ಮ ಸಂಶೋಧನೆಯಿಂದ ಆಗಬೇಕಾದರೆ ಧಾರ್ಮಿಕ ಕ್ಷೇತ್ರ ಶಿಕ್ಷಣ ಕ್ಷೇತ್ರ ಶುದ್ದ ವಾಗಬೇಕಿತ್ತು. ಎಲ್ಲಿದೆ ಶುದ್ದತೆ? ಜನರಲ್ಲಿದ್ದ ಭಕ್ತಿ ಎನ್ನುವ ಆಂತರಿಕ ಶಕ್ತಿಯನ್ನು ದುರ್ಭಳಕೆ ಮಾಡಿಕೊಂಡು ಮನೆಯಿಂದ ಮಹಿಳೆ ಮಕ್ಕಳು ಹೊರಬರುವಂತೆ ಮಾಡಿದರೆ ಶಾಂತಿ ಇರುವುದಿಲ್ಲ. ದೈವತ್ವವು ತತ್ವದಲ್ಲಿದ್ದರೆ ಉತ್ತಮ.
ತಂತ್ರವಾಗಿಸಿದರೆ ಅತಂತ್ರ ಜೀವನ.
ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂದರೆ ಇದೇ.
ಕಷ್ಟಪಟ್ಟು ದುಡಿದ ಅಲ್ಪ ಸ್ವಲ್ಪ ಹಣವನ್ನು ಯಾರದ್ದೋ ಕೈಗೆ ಕೊಟ್ಟು ತಮ್ಮ ಕಷ್ಟಕ್ಕೆ ಪರಿಹಾರ ಕೇಳಿದರೆ ಸಿಗುವುದಾಗಿದ್ದರೆ ಇಷ್ಟು ಸಮಸ್ಯೆ ಬೆಳೆಯುತ್ತಿರಲಿಲ್ಲ. ಕಾಯಕವೇ ಕೈಲಾಸ ಎಂದರು ಶರಣರು. ಈಗ ಕೈಲಾಸವನ್ನೇ ಆಕ್ರಮಣಮಾಡಿ ತಮ್ಮ ಕಾಯಕ ಮಾಡಿಕೊಂಡರೆ ಶಿವ ಒಲಿಯುವನೆ?
ದೇಶಸೇವೆಯೇ ಈಶಸೇವೆ,ಜನರ ಸೇವೆಯೇ ಜನಾರ್ಧನನ ಸೇವೆ ಎಂದರು.ಇಲ್ಲಿ ಸೇವೆಯು ತಮ್ಮ ಸತ್ಕರ್ಮದ ಸಂಪಾದನೆಯ ಹಣದಿಂದ ಮಾಡಬೇಕಿತ್ತು.ಭ್ರಷ್ಟಾಚಾರದ ಹಣದಲ್ಲಿ ಮಾಡಿದರೆ ? ಅಥವಾ ತನ್ನ ಸೇವೆಯನ್ನು ಬೇರೆಯವರಿಂದ ಮಾಡಿಸಿಕೊಂಡರೆ ಸೇವೆ ಆಗೋದಿಲ್ಲ.
ದೇವರ ಸೇವೆ ಮಾಡುವಷ್ಟು ಭಕ್ತಿ ನಮಗಿಲ್ಲವಾದರೂ ದೇಶಸೇವೆಗಾಗಿ ತಮ್ಮ ಸಂಪಾದನೆಯ ಹಣವನ್ನು ಸದ್ಬಳಕೆ ಮಾಡಿಕೊಳ್ಳುವ ಜ್ಞಾನವಿದ್ದರೆ ಉತ್ತಮ. ವಿದೇಶದಿಂದ ಸಾಲ ತಂದು ಜನರಿಗೆ ಹಂಚಿಕೊಂಡು ವಿದೇಶಿಗಳನ್ನು ದೇಶಕ್ಕೆ ತಂದು ಅವರ ಕಂಪನಿಗಳಿಗೆ ನಮ್ಮದೇ ಭೂಮಿ ಕೊಟ್ಟು ನಮ್ಮವರನ್ನೇ ಅವರ ಅಡಿ ಕೆಲಸಮಾಡಲು ಬಿಟ್ಟರೆ ಇಲ್ಲಿ ಎಲ್ಲಿದೆ ಸ್ವಾಭಿಮಾನ, ಸ್ವಾವಲಂಬನೆ, ಸ್ವಾತಂತ್ರ್ಯ? ನಮ್ಮವರಿಗೆ ನಮ್ಮವರೆ ಶತ್ರುಗಳಾದಾಗಲೇ ಪರಕೀಯರ ಮಧ್ಯೆ ಪ್ರವೇಶವಾಗಿ ಆಳೋದು.ಇದು ಹಿಂದಿನ ರಾಜರ ನಡುವಿನ ದ್ವೇಷದ ಮಧ್ಯೆ ಬ್ರಿಟಿಷ್ ರು ಪ್ರವೇಶ ಮಾಡಿ ಇಡೀ ಭಾರತವನ್ನು ಹೇಗೆ ಆಳಿದರೋ ಹಾಗೆಯೇ ಈಗಲೂ ನಮ್ಮ ದೇಶದಲ್ಲಿ ವಿದೇಶಿಗಳಿಗೆ ಕೊಡುವ ಗೌರವ ಸ್ವದೇಶದ ಜ್ಞಾನಿಗಳಿಗಿಲ್ಲ. ಇದರ ಪರಿಣಾಮ ಮುಂದೆ ಮಕ್ಕಳೇ ದೇಶ ಬಿಟ್ಟು ಹೋದಾಗ ಅರ್ಥ ವಾಗೋದು.ಅದಕ್ಕೂ ಕೆಲವರು ಮಕ್ಕಳು ವಿದೇಶದಲ್ಲಿರುವರು ಎಂದು ಹೆಮ್ಮೆಯಿಂದ ಹೇಳಿಕೊಂಡು ಅವರು ಕಳಿಸುವ ಹಣವನ್ನು ಬಳಸಿ ನಮ್ಮ ಜನರನ್ನು ಆಳುತ್ತಿರುವರು .ಒಟ್ಟಿನಲ್ಲಿ ನಮ್ಮ ಅಜ್ಞಾನಕ್ಕೆ ನಮ್ಮ ಶಿಕ್ಷಣಪದ್ದತಿ ಕಾರಣವಾಗಿದ್ದರೂ ಇದರ ವಿರುದ್ದ ದ್ವನಿ ಎತ್ತದ ಮಾಧ್ಯಮ,ಮಧ್ಯವರ್ತಿಗಳು ಕೇವಲ ಹಣ ಅಧಿಕಾರದ ದಾಹದಲ್ಲಿ ಮನರಂಜನೆಯಲ್ಲಿ ದೇಶವನ್ನು ವಿದೇಶದೆಡೆಗೆ ನಡೆಸುವ ಕಾರ್ಯಕ್ರಮಕ್ಕೆ ಸುರಿಯುವ ಕೋಟ್ಯಾಂತರ ಹಣವು ದೇಶದ ಸಾಲ ತೀರಿಸದೆ ಬೆಳೆಸಿದರೆ
ಇದಕ್ಕೆ ತಕ್ಕಂತೆ ಧಾರ್ಮಿಕ ವರ್ಗ ಕುಣಿದರೆ ಧರ್ಮ ರಕ್ಷಣೆ ಕಷ್ಟ. ಮೇಲೇರಿದವರು ಕೆಳಗಿಳಿದು ಬರಲೇಬೇಕು.
ಒಂದು ದೇವರನ್ನಾಗಲಿ,ಧರ್ಮವನ್ನಾಗಲಿ,ಭಾಷೆ,
ದೇಶವನ್ನಾಗಲಿ ಆಳೋದಕ್ಕೆ ನಾವ್ಯಾರು? ನಾನ್ಯಾರು ಎನ್ನುವ ಪ್ರಶ್ನೆಗೆ ಉತ್ತರ ಅಧ್ಯಾತ್ಮ ದಿಂದ ಕಂಡುಕೊಳ್ಳಲು ಒಳಗೆ ನಡೆದವರ ಹೆಸರಿನಲ್ಲಿ ಹೊರಗೆ ವ್ಯವಹಾರ ನಡೆಸಿದರೆ ಹಣ ಸಿಗಬಹುದಷ್ಟೆ ಅವರ ಜ್ಞಾನವಲ್ಲ.ಉತ್ತರವೂ ಸಿಗದು.
ಮಗು ಹುಟ್ಟಿದಾಗ ಹೆಸರಿರೋದಿಲ್ಲ ಆತ್ಮಚೈತನ್ಯವಿರುತ್ತದೆ. ಹೊರಗಿನಿಂದ ಹೆಸರು ಬಂದಂತೆಲ್ಲಾ ಆತ್ಮದುರ್ಭಲ ವಾಗುತ್ತದೆ. ಹಾಗಾಗಿ ಹೊರಗಿನಿಂದ ವಿಷಯ ಒಳಹಾಕುವಾಗ ಆತ್ಮಜ್ಞಾನದ ವಿಚಾರವನ್ನಷ್ಟೆ ಮಕ್ಕಳಿಗೆ ಕೊಡುವುದೇ ನಮ್ಮ ಭಾರತೀಯ ಶಿಕ್ಷಣದ ಉದ್ದೇಶವಾಗಿತ್ತು. ಮೊದಲೇ ಹೊರಗಿನ ಕಸ ಕಡ್ಡಿಯನ್ನು ಒಳಗೆ ತುಂಬಿ ಕೊನೆಗೆ ಸ್ವಚ್ಚ ಮಾಡಲಾಗದೆ ಮಕ್ಕಳು ಸರಿಯಿಲ್ಲ ಎನ್ನುವ ಬದಲಾಗಿ ಪೋಷಕರು ಮಕ್ಕಳಿಗೆ ಸ್ವಚ್ಚಶಿಕ್ಷಣ ಮನೆಯೊಳಗೆ ಹೊರಗೆ ಒಂದೇ ಸಮನಾಗಿ ನೀಡುತ್ತಾ ಬಂದರೆ ಅವರೇ ದೇವರಾಗಬಹುದು, ಮಹಾತ್ಮರಾಗಿ ಸಾದು,ಸಂತ ದಾಸ,ಶರಣರ ತತ್ವವನರಿತು ಆತ್ಮನಿರ್ಭರ ಭಾರತದ ಸತ್ಪ್ರಜೆ ಆಗಬಹುದು. ಸತ್ತ ಪ್ರಜೆಗಳನ್ನು ಆಳುವುದು ಸುಲಭ.ಸತ್ಪ್ರಜೆ ಆಗುವುದು ಬಹಳ ಕಷ್ಟ. ಏನೇ ಇರಲಿ ಪ್ರಜಾಪ್ರಭುತ್ವದಲ್ಲಿ ಆಳುವುದು ಯಾರು? ಆಳುತ್ತಿರುವುದು ಯಾರನ್ನು?
ಸತ್ಯ ಮುಚ್ಚಿಡಲು ಅಸಾಧ್ಯ.ಒಮ್ಮೆ ಹೊರಗೆ ಬಂದಾಗ ಇದ್ದ ಅಲ್ಪ ಸ್ವಲ್ಪ ವೂ ಮಾಯವಾಗುವ ಮೊದಲು ಧಾರ್ಮಿಕ ವರ್ಗ ಎಚ್ಚರವಾದರೆ ಉತ್ತಮ ಪ್ರಗತಿ ಸಾಧ್ಯ. ಏನಿಲ್ಲ ಇಲ್ಲಿ ಎಲ್ಲಾ ಇಲ್ಲ. ಏನಿದ್ದರೂ ಮೇಲಿನವನದ್ದೆ ಅವನ ಇಚ್ಚೆಗೆ ವಿರುದ್ದ ನಡೆದರೆ ಇರೋದು ಇಲ್ಲವಾಗತ್ತೆ. ಸಾಲ ಮಾಡಿದರೂ ತೀರಿಸುವ ಜ್ಞಾನವಿರಬೇಕಷ್ಟೆ.ದೇವರು ಧರ್ಮ, ಭಾಷೆ,ದೇಶದ ಹೆಸರಿನಲ್ಲಿ ಸಾಲ ಬೆಳೆಸಬಾರದು.ಇದರಿಂದ ಆತ್ಮದುರ್ಭಲವಾಗುತ್ತದೆ.
ಈ ಲೇಖನ ಓದಿದವರು ಇದನ್ನು ಹಂಚಿಕೊಳ್ಳಲೂ ತಯಾರಿಲ್ಲವೆಂದರೆ ಸತ್ಯ ಎಷ್ಟರಮಟ್ಟಿಗೆ ಕುಸಿದಿದೆ ಎಂದರ್ಥ.
ಬೇಡವಾದದ್ದು ಬೇಗ ಪ್ರಚಾರವಾಗುತ್ತದೆ ಅದಕ್ಕೆ ಆಗಬಾರದ್ದು ಆಗುತ್ತದೆ. ಸಾಮಾನ್ಯಜ್ಞಾನ ಬಿಟ್ಟು ನಡೆದರೆ ವಿಶೇಷಜ್ಞಾನ ಆಳುತ್ತದೆ. ಇದು ಅಧ್ಯಾತ್ಮದ ಕಡೆಗಿದ್ದರೆ ಉತ್ತಮ ಭೌತಿಕದಲ್ಲಿ ಮಿತಿಮೀರಿದರೆ ಅಧಮ.
ಅದರಲ್ಲೂ ಧಾರ್ಮಿಕ ಭ್ರಷ್ಟಾಚಾರ ಮಿತಿಮೀರಿದರೆ ಅಧೋಗತಿ.
ಧರ್ಮ ಜ್ಞಾನದ ಶಿಕ್ಷಣ ನೀಡದೆ ಭಕ್ತರಿಂದ ಪಡೆಯುವ ಹಣ ಭ್ರಷ್ಟಾಚಾರ ವಾಗುತ್ತದೆ. ಉಚಿತ ವಾಗಿ ಪಡೆದದ್ದು ಖಚಿತವಾಗಿ ಸಾಲವಾಗಿರುತ್ತದೆ. ಸಾಲ ತೀರಿಸದೆ ಮುಕ್ತಿ ಸಿಗದು ಎಂದಿದ್ದಾರೆ ಮಹಾತ್ಮರುಗಳು. ಹೊರಗಿನಿಂದ ಪಡೆದದ್ದು ಹೊರಗೆ ಹಂಚಿಕೊಂಡು ತೀರಿಸಬಹುದು.
ಒಳಗಿನಿಂದ ಪಡೆದದ್ದು ಕಾಣೋದೆ ಇಲ್ಲ ಹೀಗಾಗಿ ಒಳಗಿನ ಧರ್ಮ ಸಂಕಟ ಹಂಚಿಕೊಳ್ಳಲು ಕಷ್ಟವಿದೆ.
ಬೇಡೋನು ದೀನ ಸ್ಮರಿಸೋನೆ ಜಾಣ. ನಾಮಸ್ಮರಣೆಯಿಂದಲೇ ಕಾಯಕವೇ ಕೈಲಾಸವಾಗಿ ನಿಸ್ವಾರ್ಥ ನಿರಹಂಕಾರದಿಂದ ಪ್ರತಿಫಲಾಪೇಕ್ಷೆ ಯಿಲ್ಲದೆ ದೇವರ ಸೇವೆ,ಜನಸೇವೆ,ದೇಶಸೇವೆ ಮಾಡಿದವರು ಮುಕ್ತಿ ಪಡೆದರು. ಈಗಿದು ರಾಜಕೀಯದೆಡೆಗೆ ಸಾಗುತ್ತಾ ಸ್ವಾರ್ಥ ಕ್ಕೆ
ಜನರನ್ನು ಬಳಸುವ ಮಾರ್ಗದಲ್ಲಿ ಮನೆಯೊಳಗಿದ್ದ ಸತ್ಯ ಸತ್ವ ಬಿಟ್ಟು ಮನೆಹೊರಗೆ ಮಹಿಳೆ ಮಕ್ಕಳು ಬಂದರೆ ಆಂತರಿಕ ಶುದ್ದಿಯಿಲ್ಲದೆ ಬಾಹ್ಯಶುದ್ದಿಯಾಗುವುದೆ? ಆತ್ಮಶುದ್ದಿ ಇಲ್ಲದೆ ಆತ್ಮನಿರ್ಭರ ವಾಗುವುದೆ?
ಕೆಲವರಿಗೆ ಸತ್ಯದರ್ಶನ ವಾಗಿದ್ದರೂ ಹೊರಗಿನ ರಾಜಕೀಯ ಬಿಡದಿದ್ದರೆ ಶುದ್ದವಾಗದು. ಸ್ವತಂತ್ರ ಭಾರತದ ಸ್ವತಂತ್ರ ಪ್ರಜೆಗೆ ತನ್ನದೇ ಆದ ಸ್ವತಂತ್ರ ಜ್ಞಾನವಿತ್ತು. ಅದನ್ನು ಸದ್ಬಳಕೆ ಮಾಡಿಕೊಳ್ಳಲು ಸಹಕಾರದ ಅಗತ್ಯವಿತ್ತು. ಅದು ಧಾರ್ಮಿಕ ಕ್ಷೇತ್ರ ಶಿಕ್ಷಣದ ಮೂಲಕ ನೀಡಬೇಕಾಗಿತ್ತು. ಶಿಕ್ಷಣವೇ ವ್ಯಾಪಾರವಾದರೆ ಜ್ಞಾನಕ್ಕೆ ಬೆಲೆಯಿಲ್ಲ. ಒಟ್ಟಿನಲ್ಲಿ ಒಂದೇ ಪುರಾಣ ಇತಿಹಾಸದ ಕಥೆಯನ್ನು ತಿರುಚಿ ತಮ್ಮದೇ ಸತ್ಯವನ್ನು ಹರಡಿಕೊಂಡು ಭೌತಿಕ ಜಗತ್ತು ಬೆಳೆದರೂ ಆ ಒಂದೇ ಸತ್ಯದೆಡೆಗೆ ಹೋದವರ ಸಂಖ್ಯೆ ಕುಸಿದಿದೆ.ಅದಕ್ಕೆ ಭಾರತದ ಜನಸಂಖ್ಯೆ ಮಿತಿಮೀರಿ ಬೆಳೆದಿದೆ.ಜನರಿಗೆ ಜ್ಞಾನದ ಶಿಕ್ಷಣ ನೀಡಿದರೆ ದೇಶದ ಸಂಪತ್ತಾಗುತ್ತಾರೆ. ಇಲ್ಲವಾದರೆ ದೇಶಕ್ಕೆಆಪತ್ತು .
ಆದಿ ಶಂಕರಾಚಾರ್ಯರು ಮಹಾ ಸಂನ್ಯಾಸಿಗಳಾಗಿದ್ದರೂ ಸಂಸಾರಿಗಳಿಗಾಗಲಿ ಸ್ತ್ರೀ ಯರಿಗಾಗಲಿ ಸಮಸ್ಯೆಬರದಂತೆ ಸಾಕಷ್ಟು ಮಂತ್ರ ತಂತ್ರ ಯಂತ್ರದಿಂದ ಪರಮಾತ್ಮನ ಕಾಣುವ ತತ್ವಜ್ಞಾನವನ್ನು ಉಪದೇಶಿಸಿದ್ದಾರೆ. ಇದನ್ನು ಒಬ್ಬಂಟಿಯಾಗಿ ಸಾಧನೆ ಮಾಡಿದ್ದರಿಂದಲೇ ಎಲ್ಲರಲ್ಲಿಯೂ ಪರಮಾತ್ಮನ ಕಾಣಲು ಸಾಧ್ಯವಾಗಿತ್ತು. ಹಾಗಾಗಿ ನಾನೆಂಬುದಿಲ್ಲ ಎನ್ನುವ ಅದ್ವೈತ ಸತ್ಯ ಹೊರಬಂದಿತು
.ಹೀಗೇ ಎಲ್ಲಾ ತತ್ವಜ್ಞಾನಿಗಳೂ ಸತ್ಯ ತಿಳಿದು ಜನರನ್ನು ಜೋಡಿಸಿ ಧರ್ಮ ರಕ್ಷಣೆ ಮಾಡಿದ್ದಾರೆ. ಅಲ್ಲಿ ರಾಜಕೀಯವಿರಲಿಲ್ಲ ರಾಜಯೋಗವಿತ್ತು.
ಬರವಣಿಗೆಯ ಪ್ರಾರಂಭದಲ್ಲಿದ್ದ ಚಿಂತೆ ಈಗಿಲ್ಲ ಕಾರಣವಿಷ್ಟೆ ಅಂದು ಸತ್ಯಜ್ಞಾನವಿದ್ದರೂ ಅನುಭವವಿರಲಿಲ್ಲ.ಈಗ ಅನುಭವದ ಸತ್ಯ ಕಣ್ಣ ಮುಂದೆ ಕಾಣುವಾಗ ಜನರು ನಂಬಲಿ ಬಿಡಲಿ ನಷ್ಟವಿಲ್ಲ ಲಾಭವೂ ಇಲ್ಲ. ಸತ್ಯಕ್ಕೆ ಸಾವಿಲ್ಲ.ಇಲ್ಲಿ ಯಾರೂ ಶಾಶ್ವತವಲ್ಲ. ಜೀವ ಇರೋವಾಗ ತೋರಿಸದ ಭಕ್ತಿ ಪ್ರೀತಿ ವಿಶ್ವಾಸ ಹೋದ ಮೇಲೆ ತೋರಿಸಿದರೂ ವ್ಯರ್ಥ. ದೇಹದೊಳಗೆ ಅಡಗಿರುವ ಮಹಾಚೈತನ್ಯಕ್ಕೆ ಶರಣಾಗದೆ ಹೊರಗೆ ಹೋಗುವ ಮನಸ್ಸನ್ನು ತಡೆಯಲಾಗದು.ಇದಕ್ಕೆ ಬೇಕು ಯೋಗ.
No comments:
Post a Comment