ವ್ಯಾಸಮಹರ್ಷಿಯ ಮಗ ಶುಕ ಮುನಿಯ ಜನ್ಮ ರಹಸ್ಯ ತಿಳಿದರೆ ಒಂದು ಗಿಣಿಯಾಗಿದ್ದು ಮಹಾದೇವ ಪಾರ್ವತಿದೇವಿಗೆ ಅಮರತ್ವದ ರಹಸ್ಯವನ್ನು ಹೇಳಿದ್ದನ್ನು ಕೇಳಿಸಿಕೊಂಡು ವ್ಯಾಸ ಪತ್ನಿಯು ಆಕಳಿಸಿದಾಗ ಅವಳ ಬಾಯಿ ಮೂಲಕ ಒಳಪ್ರವೇಶಿಸಿ ನಂತರದಲ್ಲಿ ಆಕೆ ಗರ್ಭ ವತಿಯಾದಾಗ ಒಳಗಿದ್ದ ಶುಕ್ ವೇದ ಉಪನಿಷತ್ ದರ್ಶನ ಮತ್ತು ಪುರಾಣ ಇತ್ಯಾದಿಗಳ ಸರಿಯಾದ ಜ್ಞಾನಪಡೆದು ಶುಕ ಲೌಕಕದ ಸತ್ಯ ತಿಳಿದು ಗರ್ಭದಿಂದ ಹೊರಬರಲು ತಯಾರಿಲ್ಲದೆ ಹನ್ನೆರಡುವರ್ಷ ಒಳಗಿದ್ದಾಗ ವ್ಯಾಸರು ಕೇಳಿಕೊಂಡರೂ ಬರಲಿಲ್ಲ ಇದರಿಂದಾಗಿ ಋಷಿಪತ್ನಿ ಸಾವನ್ನಪ್ಪಿ ಶ್ರೀ ಕೃಷ್ಣ ನೇ ಬಂದುಶುಕನಿಗೆ ನೀನು ಹೊರಗೆ ಬಂದಾಗ ಮಾಯೆ ನಿನ್ನಬಾಧಿಸುವುದಿಲ್ಲ ಎಂದು ವರ ನೀಡಿದ ಮೇಲೇ ಹೊರಬಂದು ಶ್ರೀ ಕೃಷ್ಣ ಮತ್ತು ಅವನ ತಾಯಿ ತಂದೆಗೆ ನಮಸ್ಕರಿಸಿ ತಪಸ್ಸಿಗಾಗಿ ಕಾಡಿಗೆ ಹೋದದ್ದು ಪುರಾಣ ಕಥೆ.
ನಂತರದ ದಿನಗಳಲ್ಲಿ ತಂದೆ ವ್ಯಾಸರು ಶುಕರಿಗೆ ಶ್ರೀಮದ್ ಭಾಗವತದ ಹದಿನೆಂಟು ಸಾವಿರ ಶ್ಲೋಕಗಳ ಕ್ರಮ ಶಾಸ್ತ್ರೀಯ ಜ್ಞಾನವನ್ನು ನೀಡಿದ ನಂತರ ಶುಕ ಮುನಿಯು ಅದನ್ನು ರಾಜ ಪರೀಕ್ಷಿತನಿಗೆ ನೀಡಿ ರಾಜನ ದೈವೀಕ ಪ್ರಭಾವದಿಂದಾಗಿ ಸಾವಿನ ಭಯವನ್ನು ಜಯಿಸಿದನು ಎಂದಿದ್ದಾರೆ. ಇದನ್ನು ಈಗ ನಂಬದಿದ್ದರೂ ಸತ್ಯವಾಗಿದೆ. ನಾವು ಶುಕಮುನಿಗಳ ಭಾಗವತದಲ್ಲಿ ಬರುವ ಕಥೆ ಓದಿ ತಿಳಿದರೂ ಅವರ ಜನ್ಮವೇ ವಿಶೇಷರೀತಿಯಲ್ಲಾಗಿರೋದನ್ನು
ಗಮನಿಸಿದರೆ ಪ್ರತಿಯೊಂದರಲ್ಲಿಯೂ ಅಡಗಿರುವ ಆತ್ಮ ಜ್ಞಾನವು ಪರಮಾತ್ಮನ ಕೊಡುಗೆ.ಚರಾಚರದಲ್ಲಿಯೂ ಅದೇ ಚೈತನ್ಯ ಶಕ್ತಿಯಿದೆ. ಒಂದು ಸಣ್ಣ ಗಿಳಿ ಜೀವ ತನ್ನ ಜ್ಞಾನದ ಪ್ರಭಾವದಿಂದಾಗಿ ಮಹರ್ಷಿಯಾಗಿರುವಾಗ ಮಾನವ
ನೊಳಗಿರುವ ಎಷ್ಟೋ ಜೀವ ಶಕ್ತಿಯನ್ನು ಮಾನವನೇ ತಿಳಿಯದೆ ಜೀವನವನ್ನು ಹಾಳುಮಾಡಿಕೊಂಡಿರುವ ಸತ್ಯ ಅರ್ಥ ವಾದರೆ ಎಲ್ಲಾ ಶಕ್ತಿ ಒಳಗಿತ್ತು. ಅದನ್ನರಿಯದೆ ಹೊರಗಿನ ಶಕ್ತಿ ಪಡೆದು ಶಕ್ತಿಹೀನ ಬುದ್ದಿಹೀನ ಜ್ಞಾನಹೀನ ಜೀವನದಲ್ಲಿ ಮುಂದೆ ಮುಂದೆ ನಡೆದು ಸುಸ್ತಾಗಿ ತೃಪ್ತಿ ಪಡೆಯದೆ ಜೀವ ಹೋಗುತ್ತಿರುವುದಕ್ಕೆ ಕಾರಣವೇ ಅಜ್ಞಾನದ ಶಿಕ್ಷಣ. ಶಿಕ್ಷಣದಿಂದ ಮಾನವ ಮಹಾತ್ಮನಾಗಬೇಕಿತ್ತು. ಆದರೀಗ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ ನರಳುತ್ತಿರುವವ ಜೀವಕ್ಕೆ ಜ್ಞಾನದ ಕಡೆಗೆ ಬರುವಷ್ಟು ಶಕ್ತಿಯಿಲ್ಲ. ಶಕ್ತಿಯಿದ್ದವರಿಗೆ ಶಿಕ್ಷಣ ನೀಡುವವರ ಕೊರತೆ. ಈ ಕೊರತೆ ನೀಗಿಸುವ ಸರ್ಕಾರ ನಮಗೆ ಬೇಕಾಗಿದೆ.ಇಲ್ಲಿ ಸರ್ಕಾರ ಎಂದರೆ ಸಹಕಾರ ಎಂದರ್ಥ.ಭೌತಿಕದ ವಿಜ್ಞಾನದೆಡೆಗೆ ವೇಗವಾಗಿ ಹೋಗುತ್ತಿರುವ ಹೊರಗಿನ ಸಹಕಾರವಲ್ಲ.ಅಧ್ಯಾತ್ಮ ದೆಡೆಗೆ ನಿಧಾನವಾಗಿ ಹೆಜ್ಜೆ ಹಾಕುತ್ತಿರುವ ಧಾರ್ಮಿಕ ಸಹಕಾರ ಭಾರತಕ್ಕೆ ಅಗತ್ಯವಾಗಿದೆ.ಹೊರದೇಶದವರಿಗೆ ತಿಳಿಸುವುದು ಸುಲಭ.ನಮ್ಮವರಿಗೆ ಕಲಿಸುವುದೇ ಕಷ್ಟ.ಕಾರಣ ಹೊರಗಿನವರಲ್ಲಿ ಹಣವಿದೆ .ಹಣ ಕೊಟ್ಟು ಜ್ಞಾನ ಪಡೆಯುತ್ತಾರೆ.ನಮ್ಮವರಲ್ಲಿರುವ ಅರ್ಧಸತ್ಯದ ಜ್ಞಾನವೇ ಸಾಕಷ್ಟು ವಾದ ವಿವಾದ ,ಭಿನ್ನಾಭಿಪ್ರಾಯ ದ್ವೇಷ ಅಸೂಯೆ ಹೆಚ್ಚಿಸಿರುವಾಗ ಅದರಿಂದ ಹೊರಬರದೆ ಸತ್ಯತಿಳಿಸಲಾಗದು.
ತಿಳಿಸಿದರೂ ಅದನ್ನು ದುರ್ಭಳಕೆ ಮಾಡಿಕೊಂಡು ಜನರನ್ನು ದಾರಿತಪ್ಪಿಸಿ ಆಳುವ ರಾಜಕೀಯ ಶಕ್ತಿ ಜನರ ಸಾಮಾನ್ಯ
ಜ್ಞಾನವನ್ನೂ ಶಕ್ತಿಹೀನವಾಗಿಸಿದರೆ ಪುರಾಣವಾಗಲಿ ಇತಿಹಾಸವಾಗಲಿ ಜ್ಞಾನದೆಡೆಗೆ ನಡೆಸುವುದೆ?
ಪ್ರಚಾರಕರು ಮಧ್ಯವರ್ತಿಗಳು ವ್ಯವಹಾರದಲ್ಲಿ ಧರ್ಮ ಕಾಣುವ ಮೊದಲು ಶಿಕ್ಷಣದಲ್ಲಿಯೇ ಧರ್ಮ ಉಳಿಸುವತ್ತ ನಡೆದರೆ ಸಾಕಷ್ಟು ಬೆಳವಣಿಗೆ ನಮ್ಮಲ್ಲಿ ಕಾಣಬಹುದಲ್ಲವೆ? ಜ್ಞಾನಕ್ಕೆ ಇತಿಮಿತಿ, ಜಾತಿ ರಾಜಕೀಯವಿಲ್ಲ. ಇದು ಸ್ವತಂತ್ರ ವಾಗಿದೆ.ಎನ್ನುವುದಕ್ಕೆ ಶುಕಮುನಿಗಳ ಕಥೆಯೇ ಸಾಕ್ಷಿ.ಈ ಮಾರ್ಗದಲ್ಲಿ ಅಧ್ಯಾತ್ಮ ಚಿಂತನೆ ನಡೆಸಿದರೆ ನಮ್ಮೊಳಗಿರುವ ಅಗಾಧವಾದ ಜ್ಞಾನ ಸಂಶೋಧನೆ ಹೆಚ್ಚುವುದು..
ಹೊರಗಿನಿಂದ ಒಳಗೆಳೆದುಕೊಳ್ಳುವ ಮೊದಲು ಒಳಗಿರುವುದನ್ನು ಕಂಡುಕೊಳ್ಳುವ ಶಿಕ್ಷಣವಿರಬೇಕಿತ್ತು. ನಾವು ಎಲ್ಲಾ ಹಿಂದಿನ ಮಹರ್ಷಿಗಳು, ಮಹಾತ್ಮರುಗಳು, ದೇವಾನುದೇವತೆಗಳು,ಮಹಾರಾಜರುಗಳು,ಸಾದು,ಸಂತ ದಾಸ,ಶರಣ,ಭಕ್ತ,ಯೋಗಿ,ಸಂನ್ಯಾಸಿಗಳ ವಿಚಾರ ಪ್ರಚಾರ ಮಾಡಿದರೂ ಯಾಕೆ ನಮ್ಮಲ್ಲಿ ಶಾಂತಿಯಿಲ್ಲ? ಧರ್ಮ ವಿಲ್ಲ? ಸತ್ಯವಿಲ್ಲ? ಎಂದರೆ ಪ್ರಚಾರ ಹೊರಗಿನಿಂದ ತಿಳಿದು ಹೊರಗೇ ಬಿಡುತ್ತಿರೋದು ಒಳಗಿಟ್ಟುಕೊಂಡು ಸತ್ಯದ ಅನುಭವ ಆಗದ ಕಾರಣ ಇದೊಂದು ವ್ಯವಹಾರಿಕ ಮಾಧ್ಯಮ ವಾಗಿದೆ.ಮಧ್ಯೆ ನಿಂತ ಸತ್ಯ ಮುಂದೆ ನಡೆಯಬೇಕಾದರೆ ಒಳಗೆ ಅಳವಡಿಸಿಕೊಳ್ಳಲು ಗುರುಹಿರಿಯರ ಸಹಕಾರ ಆಶೀರ್ವಾದ ಶಿಕ್ಅಷಣದ ಅಗತ್ಗಯವಿದೆ.ಶಿಕ್ಷಣವೇ ವಿ ರುದ್ದ ದಿಕ್ಕಿನಲ್ಲಿ ನಡೆದಿರುವಾಗ ಜ್ಞಾನ ವಿಜ್ಞಾನವನ್ನು ಸಮಾನ ಮಾಡುವಷ್ಟು ಶಕ್ತಿ ಮಾನವನಿಗಿದೆಯೆ? ನಾವ್ಯಾರು ಎಂದರೆ ಮಾನವರಷ್ಟೆ.ನಮ್ಮೊಳಗೇ ಮಹಾತ್ಮನಿರುವಾಗ ಆತ್ಮನ ಅರಿವು ಅಗತ್ಯವಿಲ್ಲವೆ? ಇದಕ್ಕೆ ಭೌತಿಕದ ರಾಜಕೀಯದ ಹಂಗಿದೆಯೆ? ರಾಜಕೀಯ ಬಿಟ್ಟು ನಡೆಯಲು ಸಾಧ್ಯವಿದೆಯೆ? ಇದ್ದರೆ ಅದು ಮಕ್ಕಳಿಗಿದೆ ಮಹಿಳೆಯರಿಗಿದೆ.ಮನೆಯೊಳಗಿನ ರಾಜಕೀಯ ಹೋದರೆ ಸರಿಯಾಗಬಹುದು. ಮಕ್ಕಳೇ ದೇವರೆಂದರು.ಮಕ್ಕಳಿಗೆ ದೈವತ್ವದ ಶಿಕ್ಷಣ ನೀಡಿದರು.ಸತ್ಯ ಧರ್ಮ ಮಾರ್ಗ ತೋರಿಸಿ ಪಿತೃಗಳು ದೇವರಾದರು. ಆದರೆ ಈಗ ಪೋಷಕರು ಮಕ್ಕಳಿಗೆ ಯಾವ ಮಾರ್ಗ ತೋರಿಸುವ ಶಿಕ್ಷಣ ನೀಡುವಂತಾಗಿದೆ? ಇದನ್ನು ಹೊರಗಿನವರು ಸರಿಪಡಿಸಲಾಗದು. ರಾಜಕೀಯದಿಂದ ಸಾಧ್ಯವಿಲ್ಲ ರಾಜಯೋಗದ ಶಿಕ್ಷಣದಿಂದ ಸಾಧ್ಯವಾದರೂ ಪೋಷಕರ ಸಹಕಾರವಿಲ್ಲದೆ ಅಸಾಧ್ಯ.
No comments:
Post a Comment