ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Thursday, April 27, 2023

ಭಾರತೀಯರ ಭವಿಷ್ಯ ತತ್ವದಲ್ಲಿದೆ

ಭಾರತೀಯರ ಭವಿಷ್ಯವು ಭಾರತೀಯ ತತ್ವಗಳಲ್ಲಿತ್ತು. ಭಾರತೀಯ ಶಿಕ್ಷಣದೊಳಗಿತ್ತು. ಶಿಕ್ಷಣವೇ ವಿದೇಶಿಗಳ ಪರವಾಗಿ ನಿಂತು ಈಗ  ತತ್ವವೇ ತಂತ್ರದ ವಶವಾಗುತ್ತಿದ್ದರೂ
ಭಾರತೀಯರಲ್ಲಿ ಒಗ್ಗಟ್ಟು, ಏಕತೆ,ಐಕ್ಯತೆ ಸಮಾನತೆಯನ್ನು
ಒಳಗೆ ಕಂಡುಕೊಳ್ಳಲು ಕಷ್ಟವಾಗುತ್ತಿದೆ ಎಂದರೆ ನಮ್ಮಲ್ಲಿ ವ್ಯವಹಾರಕ್ಕೆ ಕೊಡುವ ಗೌರವ, ಸನ್ಮಾನ  ಧರ್ಮ ಹಾಗು ಸತ್ಯಕ್ಕೆ ಕೊಡಲಾಗುತ್ತಿಲ್ಲ. ಪುರಾಣ, ಇತಿಹಾಸದ  ಅಧ್ಯಾತ್ಮ ಯೋಗದೆಡೆಗೆ  ನಡೆದಿತ್ತು.ಧರ್ಮರಕ್ಷಣೆಯಾಗಿತ್ತು.
ಈಗಿರುವ ಪ್ರಜಾಪ್ರಭುತ್ವದಲ್ಲಿ  ಧರ್ಮ, ಯೋಗವು ಭೋಗದ  ರಾಜಕೀಯದ ಕಡೆಗೆ ನಡೆಯುತ್ತಾ ವಿದೇಶದವರೆಗೂ ಹೋಗಿದೆ. ದೂರಹೋದಮೇಲೆ ತಿರುಗಿ ನೋಡಿದಾಗಲೇ ತಿಳಿದದ್ದು ನಮ್ಮರಲ್ಲಿಯೇ  ಯೋಗ ಮರೆಯಾಗಿರೋದು. ಈಗಲೂ ಸಮಯವಿದೆ ಮನೆಯೊಳಗೆ ಇದ್ದವರು ಅಳವಡಿಸಿಕೊಂಡರೆ‌ ಉತ್ತಮ ಬದಲಾವಣೆ. ಆದರೆ  ಮನೆ‌ಬಿಟ್ಟು ಹೊರಗೆ ಬಂದರೆ  ಕಷ್ಟವಿದೆ.
ಪರರೆಲ್ಲಾ ನಮ್ಮವರಾದರೆ ಸ್ವರ್ಗ ನಮ್ಮವರೆ ಪರರಾದರೆ ನರಕ.
ಹಿಂದೂ ಧರ್ಮವು ದಾನದಿಂದ ಜ್ಞಾನೋದಯವೆಂದಿದೆ. ಜ್ಞಾನವನ್ನು ದಾನ ಮಾಡೋದು ಕಷ್ಟ.ಅದರಲ್ಲೂ ಸತ್ಪಾತ್ರರಿಗೆ ದಾನ ಮಾಡಿದರಷ್ಟೆ ಧರ್ಮ ರಕ್ಷಣೆ.
ಪರಕೀಯರ ಮೂಲ  ಬೇರೆಯಿದ್ದರೂ ಆತ್ಮ ಶುದ್ದಿಗೆ  ಸದ್ವಿಚಾರ ಅಗತ್ಯವಿದೆ. ಸಾಕಷ್ಟು ಧಾರ್ಮಿಕ ಕಾರ್ಯಕ್ರಮ ಮಾಡಿ  ವಿಗ್ರಹರೂಪದಲ್ಲಿ  ದೇವರನ್ನು  ಅಲಂಕರಿಸಿ ಜನರನ್ನು ಸೆಳೆದರೂ ಒಳಗೆ ಭಕ್ತಿ ಶ್ರದ್ದೆ  ನಿಸ್ವಾರ್ಥ , ಐಕ್ಯತೆ, ಏಕತೆ, ನಿರಹಂಕಾರ, ತ್ಯಾಗ, ಸರಳತೆ,ಸತ್ಯವಿದ್ದರೆ ಮಾತ್ರ  ಪರಮಾತ್ಮನಿಗೆ ತಲುಪುವುದು.
ಹಿಂದೆ  ಎಷ್ಟೋ ಭಕ್ತರಲ್ಲಿ  ಬಡತನವಿದ್ದರೂ ಜ್ಞಾನದಲ್ಲಿ ಶ್ರೀಮಂತರಾಗಿ   ನಿಜವಾದ  ಜೀವನವನ್ನು ಕಂಡುಕೊಂಡು ಮಹಾತ್ಮರಾಗಿದ್ದಾರೆ. ನಾವೀಗ ಮಹಾತ್ಮರುಗಳನ್ನು ಬೆಳೆಸಲು  ತತ್ವ ಅರ್ಥ ಮಾಡಿಕೊಂಡರೆ ಹೊರಗಿರುವ ಕುತಂತ್ರ ನಿಧಾನವಾಗಿ  ಅರ್ಥ ವಾಗಿ  ಸತ್ಯ ತಿಳಿಯಬಹುದು. ಹೊರಗಿನಿಂದ ಸೇರಿದ್ದನ್ನು  ಬಿಟ್ಟು ಸ್ವಚ್ಚವಾಗಿರುವ ತತ್ವದೆಡೆಗೆ ಒಳನಡೆಯಬಹುದು.  ಹೊರಗಿರುವ ತಂತ್ರ ಯಾರಿಗೆ ಮುಕ್ತಿ ಕೊಟ್ಟಿದೆ?

No comments:

Post a Comment