ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Thursday, April 20, 2023

ಪರಮಾತ್ಮನ ಸಾಲಮನ್ನಾ ಸಾಧ್ಯವೆ?

ಮನೆಯು ಚಿಕ್ಕದಾಗಿರಲಿ ಮನಸ್ಸು ದೊಡ್ಡದಾಗಿರಲಿ ಎಂದರು ಯಾಕೆ ಮನೆಯೊಳಗಿನ ಪ್ರತಿಯೊಂದು ಪದಾರ್ಥಗಳಲ್ಲಿಯೂ ಅಡಗಿರುವ ಆ ದೇವರ ಋಣ ತೀರಿಸಲು ಕಷ್ಟ ಸಣ್ಣದಾಗಿದ್ದರೆ ಕಡಿಮೆ ಋಣ ದೊಡ್ಡದಾದಷ್ಟೂ ಹೆಚ್ಚಾಗಿ  ದಾನ ಧರ್ಮದಿಂದ ಋಣ ಕಳೆದುಕೊಳ್ಳಬೇಕು. ಒಳಗೆ ಸೇರಿಸಿಕೊಂಡದ್ದನ್ನು ಹೊರಗೆ ಕೊಡುವುದು ಬಹಳ ಕಷ್ಟ.ಹೀಗಾಗಿ ಏನೇ ನಾವು ವಿಷಯ ವಸ್ತು ಒಡವೆ ವ್ಯಕ್ತಿ,ಅಧಿಕಾರ,ಅಂತಸ್ತು, ಹಣ,ವಿದ್ಯೆ ಒಳಗೆ ಸೇರಿಸಿಕೊಳ್ಳುವ ಮೊದಲು ಚಿಂತನೆ ನಡೆಸುವುದು ಅಗತ್ಯ. ಹೊರಗಿನಿಂದ  ಪಡೆದದ್ದು ಸಾಲ.ಒಳಗಿರೋದನ್ನು ಸದ್ಬಳಕೆ ಮಾಡಿಕೊಂಡು  ಹೊರಗೆ  ಕೊಟ್ಟಷ್ಟೂ  ಸಾಲಮನ್ನಾ. ಇದಿಷ್ಟೆ ಜೀವನದ ರಹಸ್ಯ. ಪುರಾಣ ಇತಿಹಾಸದ ವಿಚಾರದಲ್ಲೂ  ವಾಸ್ತವದಲ್ಲೂ  ವ್ಯತ್ಯಾಸವಿಲ್ಲ ಇದೇ ಭವಿಷ್ಯದಲ್ಲೂ ನಡೆಯುವುದು. ಹಾಗಾಗಿ ಆತ್ಮಜ್ಞಾನದಿಂದ ಮಾನವ ಸತ್ಯ ತಿಳಿದರೆ  ಅನಗತ್ಯವಾಗಿದ್ದನ್ನು ಬಿಟ್ಟು ಅಗತ್ಯತೆಗೆ ಬೆಲೆಕೊಟ್ಟು
ಸರಳ ಸುಲಭ,ಸುಂದರ ಶಾಂತಿಯ ಕಡೆಗೆ ನಡೆಯಬಹುದು.
ಹೆಣ್ಣು,ಹೊನ್ನು ಮಣ್ಣಿನ ಋಣ ತೀರಿಸಲು ಹೆಣ್ಣಿನ ಜ್ಞಾನ ಸದ್ಬಳಕೆ ಮಾಡಿಕೊಂಡು, ಹೊನ್ನನ್ನು ದಾನಧರ್ಮಕ್ಕೆ ಬಳಸಿ ಮಣ್ಣಿನ ಋಣ ತೀರಿಸಲು ಭೂ ಸೇವೆ ಮಾಡಬೇಕೆಂದರು.
ಸೇವೆಯು ನಿಸ್ವಾರ್ಥ ನಿರಹಂಕಾರದಿಂದ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದಾಗಲೇ ಯೋಗಿಯಾಗಿ ಯೋಗ್ಯ ಪ್ರಜೆಯಾಗಿ,ಯೋಗ್ಯ ವ್ಯಕ್ತಿತ್ವವುಳ್ಳವರಾಗಿ  ಪರಮಾತ್ಮನಲ್ಲಿ ಸೇರಬಹುದು. ಪರದೇಶದೆಡೆಗೆ ನಡೆಯುತ್ತಾ ಹಿಂದಿನ  ಸಾಲ ಮರೆತರೆ  ತಾತ್ಕಾಲಿಕ ಭೋಗವಿದ್ದರೂ ಶಾಶ್ವತ ರೋಗಕ್ಕೆ ಜೀವ ಗುರಿಯಾಗೋದು ತಪ್ಪೋದಿಲ್ಲ.
ಸಾಧ್ಯವಾದವರು  ಮನಸ್ಸನ್ನು  ಹಿಡಿತದಲ್ಲಿಟ್ಟುಕೊಂಡು ದಿಟ್ಟ ನಿರ್ಧಾರ  ತೆಗೆದುಕೊಂಡು  ಹಿಂದಿನ ಶಿಕ್ಷಣ, ಹಿಂದಿನ ಧರ್ಮ ಕರ್ಮ ಹಿಂದಿನ ಗುರುಹಿರಿಯರ ಜ್ಞಾನದೆಡೆಗೆ ಬರಲು ಹೊರಗಿನಿಂದ ತುಂಬಿಸಿಕೊಂಡ ಅನಾವಶ್ಯಕ ಆಸ್ತಿಯನ್ನು ಸತ್ಪಾತ್ರರಿಗೆ ದಾನ ಮಾಡಿ ಧರ್ಮದ ಹಾದಿಯಲ್ಲಿ ನಡೆಯಲು ಹಿಂದಿರುಗಿದರೆ  ಒಳಗಿರುವ  ಜ್ಞಾನ ಬೆಳಗುತ್ತಾ ಪರಮಾತ್ಮನ  ಸಾಕ್ಷಾತ್ಕಾರ ವಾಗಬಹುದು. 
ಯಾರನ್ನಾದರೂ ಆಳಬಹುದು ನಮ್ಮ‌ಮನಸ್ಸನ್ನು ತಡೆಹಿಡಿದು ಆಳುವುದೇ ಬಹಳ ಕಷ್ಟ.ಅದಕ್ಕಾಗಿ ಇಂದು ಮಾನವನಿಗೆ ಎಲ್ಲಿಲ್ಲದ ಸಮಸ್ಯೆ. ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ. ಕೆಲವರಂತೂ ಹಿಂದಿನವರ ಆಸ್ತಿ  ಸದ್ಬಳಕೆ ಮಾಡದೆ ಭೂಮಿಯನ್ನು  ಹಾಗೇ ಬಿಟ್ಟು ನಗರದಲ್ಲಿ ಯಾರದ್ದೋ ಕೈಕೆಳಗೆ ದುಡಿದು ಕಷ್ಟಪಡುತ್ತಿದ್ದಾರೆ.ಕೆಲವರು ಮಾರಿಕೊಂಡು ಸಣ್ಣ ಜಾಗ ನಗರದಲ್ಲಿ  ಖರೀದಿಸಿ ಸಾಲ ಮಾಡಿಕೊಂಡು ಜೀವನ ನಡೆಸಿದರೆ ಹಲವರಿಗೆ  ಆಸ್ತಿಯೇ ಸಿಕ್ಕಿಲ್ಲವೆನ್ನುವ ದು:ಖ ದ್ವೇಷ  ಆವರಿಸಿ ಸಂಬಂಧ ವನ್ನು ಬಿಟ್ಟು ಹೊರಬಂದಿರೋದು ದೊಡ್ಡ ಅಜ್ಞಾನ.
ಅಧ್ಯಾತ್ಮದ ಪ್ರಕಾರ ತಿಳಿಸುವುದಾದರೆ ಯಾರಿಗೆ ಆಸ್ತಿ ಸಿಕ್ಕಿಲ್ಲವೋ ಅವರು ಅದೃಷ್ಟ ವಂತರು.ಇರೋವಾಗಲೇ ಪಿತೃ ಋಣ ತೀರಿಸಲು ಸಾಧ್ಯವಾಗಿದೆ. ಆಸ್ತಿ ಪಡೆದವರು ಪಿತೃಗಳು ನಡೆಸಿಕೊಂಡು ಬಂದಂತಹ ಧರ್ಮ ಕರ್ಮ ಆಚಾರ ವಿಚಾರ ಪೂಜೆ ವ್ರತಗಳನ್ನು  ಸರಿಯಾಗಿ ತಿಳಿದು ನಡೆಸಿದರೆ ಮಾತ್ರ ನೆಮ್ಮದಿ ಶಾಂತಿ,ತೃಪ್ತಿ ಜೀವನ‌ನಡೆಸಬಹುದು. ಕಾರಣ ಆ ಆಸ್ತಿಯ ಹಿಂದೆ ಸಾಕಷ್ಟು ಪರಿಶ್ರಮವಿದೆ. ಸಾಲವೂ ಇದೆ. ತೀರಿಸದೆ ವಿಧಿಯಿಲ್ಲ. ಹೀಗಾಗಿ ಹಿಂದೂ ಧರ್ಮದಲ್ಲಿ ಸಾಕಷ್ಟು ಧಾರ್ಮಿಕ ಆಚಾರ ವಿಚಾರ,ಸಂಸ್ಕಾರ ಸಂಪ್ರದಾಯದ ಜೊತೆಗೆ ದೇವರುಗಳಿರೋದು.
ಮಾನವನೊಳಗಿದ್ದು ನಡೆಸುವ ಪರಮಾತ್ಮನ ಋಣ ತೀರಿಸಲು  ಇವೆಲ್ಲವೂ ಅಗತ್ಯವಿದೆ. ಇದು ನಡೆಸಲಾಗದವರು ಆಸ್ತಿ ಪಡೆಯಬಾರದು. ಆಸ್ತಿ ಬೇಕು ಅವರ ಧರ್ಮ ಕರ್ಮ ಬೇಡವೆಂದರೆ ಅಜ್ಞಾನದಿಂದ ಕಷ್ಟ ನಷ್ಟ ಹೆಚ್ಚಾಗುತ್ತದೆ. ಹಾಗೆಯೇಸರ್ಕಾರದ ಹಣ ಪಡೆದು
 ಸರ್ಕಾರದ ಸೇವೆ ಮಾಡದಿದ್ದರೆ ಸುಖವಿಲ್ಲ.  ವಿದೇಶದ ಬಂಡವಾಳ,ಸಾಲ, ಶಿಕ್ಷಣ ಪಡೆದು ಅದರ ಸೇವೆ ಮಾಡದಿದ್ದರೆ ವಿದೇಶಿಗಳು ಬಿಡುವರೆ? ಪರಮಾತ್ಮ ಎಲ್ಲಾ ಕಡೆ ಆವರಿಸಿ ಕಾಣದಿದ್ದರೂ ಪರದೇಶದವರು ಪರಕೀಯರು ಪರಧರ್ಮದವರು ಕಾಣುವರಲ್ಲವೆ? ಒಟ್ಟಿನಲ್ಲಿ ಹೇಳುವುದಾದರೆ ಸಾಲ ಯಾರದ್ದೇ ಆದರೂ ತೀರಿಸಲು  ನಿಸ್ವಾರ್ಥ ನಿರಹಂಕಾರದ ಸೇವಾಗುಣ ಮಾನವನಿಗಿದ್ದರೆ  ಸಾಲದಿಂದ ಮುಕ್ತಿ.ಈ ಸತ್ಯ ಕಾಲಕಾಲಕ್ಕೂ ಬದಲಾಗದು.
"ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ‌ನಾಮವೊಂದಿದ್ದರೆ ಸಾಕೋ" ಎಂದಿರುವ ದಾಸ ವಾಣಿಯ ಹಿಂದಿನ ಸತ್ಯ ಇಷ್ಟೆ.
ಮಾನವನ‌ಜನ್ಮಕ್ಕೆ ಕಾರಣವೆ ಭೂಮಿಯ ಋಣ .ಋಣ ತೀರಿಸದೆ ಮುಕ್ತಿಯಿಲ್ಲ. ಜನ್ಮ‌ಜನ್ಮದಿಂದಲೂ ಹೊತ್ತು ಬಂದ ಸಾಲ ಕಣ್ಣಿಗೆ ಕಾಣದ ಕಾರಣ ಹೊರಗಿನ ಸಾಲ ಬೆಳೆಸಿಕೊಂಡು  ಹೊರಗೇ ಜೀವ ಹೋಗುತ್ತಿದೆ.ಒಳಗಿರುವ ಆತ್ಮನಿಗೆ ತೃಪ್ತಿ ಸಿಗದೆ ಅತೃಪ್ತ ಆತ್ಮಗಳು ರಾಜಕೀಯಕ್ಕೆ ಇಳಿದು ತಂತ್ರದಿಂದ ದೇವರನ್ನು ಆಳಲು ಹೋದರೆ ಅಜ್ಞಾನ
ದೇವರಿರೋದೆಲ್ಲಿ? ಆತ್ಮವೇ ದೇವರಾದರೆ ಆತ್ಮಜ್ಞಾನ ಬೇಡವೆ? ಆತ್ಮನಿರ್ಭರ ಭಾರತಕ್ಕೆ ಅಧ್ಯಾತ್ಮ ಸತ್ಯ ಅಗತ್ಯವಿತ್ತು
ನಮ್ಮವರನ್ನೇ ದ್ವೇಷಮಾಡಿಕೊಂಡು ದೂರವಾದರೆ ಹಿಂದಿರುಗಿ ಬರೋದು ಕಷ್ಟ. ಹಿಂದಿನ ಶಿಕ್ಷಣವಿಲ್ಲ ಹಿಂದಿನ ಆಸ್ತಿ ಬೇಕು. ಹಿಂದಿನ ಜ್ಞಾನವಿಲ್ಲದೆ ಆಂತರಿಕ ಶುದ್ದಿಯಾಗದು
ಒಟ್ಟಾರೆ  ತಾನೇ ತೋಡಿಕೊಂಡ ಹೊಂಡದಲ್ಲಿ ತಾನೇ ಬಿದ್ದರೂ  ಯಾರೋ ಹೊರಗಿನವರು ಬಂದು ಬೀಳಿಸಿದ್ದಾರೆ ಎನ್ನುವ ಜನಸಂಖ್ಯೆ ಬೆಳೆದಿರುವ  ಜಗತ್ತಿನಲ್ಲಿ  ಗೆದ್ದವರು ಯಾರು ಸೋತವರು ಯಾರು? ಯಾರೂ ಗೆದ್ದಿಲ್ಲ ಸೋತೂ ಇಲ್ಲ ಮದ್ಯವರ್ತಿಗಳಷ್ಟೆ. ಈ ಕಡೆ ತತ್ವ ಇನ್ನೊಂದು ಕಡೆ ತಂತ್ರ ಎಳೆದಾಡುತ್ತಿದೆ.ಯಾವ ಕಡೆ ಹೋಗಬೇಕೆನ್ನುವ ಜ್ಞಾನ ಬೇಕು.
ಸಾಮಾನ್ಯಜ್ಞಾನ ದ ನಂತರವೇ ವಿಶೇಷಜ್ಞಾನ ಬೆಳೆಯೋದು.ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದರೂ ರಾಜಕೀಯ ಬಿಡದೆ  ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು  ಮಾನವ ಸೋತರೆ ಒಳಗಿನ‌ಮನಸ್ಸು ದೈವತ್ವ ದೆಡೆಗೆ ನಡೆಯದು. ನಡೆದರೂ ಸ್ವಾರ್ಥ ಅಹಂಕಾರ ಬಿಡದಿದ್ದರೆ ದೇವರು ಕಾಣೋದಿಲ್ಲ. ದೇಶದೊಳಗೆ ಪ್ರಜೆಗಳಿದ್ದರೂ ದೇಶಭಕ್ತಿಯಿಲ್ಲದ  ಸೇವೆಯಿಂದ  ದೇಶದ ಋಣ ತೀರಿಸಲಾಗದು ಹಾಗೆಯೇ ದೇವರೊಳಗಿರುವ‌ ಮಾನವನ ಜೀವದ ಋಣ ತೀರಿಸಲು ದೈವತತ್ವ ಅಗತ್ಯವಿದೆ.ಇದೊಂದು ವ್ಯವಹಾರವಾಗಿ ರಾಜಕೀಯಕ್ಕೆ ಬಳಸಿದಷ್ಟೂ ಅಸುರರೆ ಬೆಳೆಯೋದು. ನಮ್ಮೊಳಗೇ ಇರುವ ದೇವಾಸುರ ಗುಣ ಜ್ಞಾನ ನಮಗೇ ಅರ್ಥ ವಾಗದಿದ್ದರೆ ಮಕ್ಕಳಿಗೆ ಅರ್ಥ ಮಾಡಿಸಲು ಅಸಾಧ್ಯ.  ಸಮಸ್ಯೆ ಒಳಗಿದೆ ಪರಿಹಾರ ಹೊರಗಿನ  ಸರ್ಕಾರದ ಹಣದಿಂದ ಪಡೆದಷ್ಟೂ ಒಳಗೆ ಇನ್ನಷ್ಟು ಋಣ ಬೆಳೆದು ಸಾಲವೇ ಶೂಲವಾಗಿ ಕಾಡುತ್ತದೆ.ಅಜ್ಞಾನಕ್ಕೆ ಮದ್ದು  ಸತ್ಯಜ್ಞಾನದಶಿಕ್ಷಣವಾಗಿತ್ತು.
ಮಿಥ್ಯಜ್ಞಾನವನ್ನು ಸ್ವಚ್ವ ವಾಗಿದ್ದ ಮಕ್ಕಳ ಒಳಗೆ ತುಂಬಿ‌ ಸತ್ಯ ಹಿಂದುಳಿದಿದೆ. ಪೋಷಕರು ದೇಶದ ಭವಿಷ್ಯವಾಗಿರುವ‌
ಮಕ್ಕಳಿಗೆ ರಾಷ್ಟ್ರೀಯತೆಯ ಶಿಕ್ಷಣ ನೀಡುವಲ್ಲಿ ಸೋತರೆ ರಾಷ್ಟ್ರದ ಧರ್ಮ ಕರ್ಮಕ್ಕೆ ವಿರುದ್ದವಿದ್ದರೆ  ಅಧರ್ಮಕ್ಕೆ ತಕ್ಕಂತೆ ಫಲ . ಎಲ್ಲಾ ನಡೆದಿದೆ ನಡೆಯುತ್ತಿದೆ ನಡೆಯುತ್ತಾ ಹೋಗುತ್ತದೆ. ಹಿಂದಿರುಗಿ ಬಂದವರಿಗೆ ಮೂಲ ಸೇರಲು ಸುಲಭ.ದೂರ ಹೋದವರನ್ನು ಕರೆತರುವ ಬದಲು ಹತ್ತಿರವಿರುವವರನ್ನು ದೂರ ಹೋಗದಂತೆ ತಡೆದು ತಾವೂ ಹಿಂದೆ ತಿರುಗಿ ಒಗ್ಗಟ್ಟನ್ನು ಬೆಳೆಸಿಕೊಂಡರೆ  ಸಮಸ್ಯೆಗೆ ಪರಿಹಾರ ಒಳಗೇ ಇರುತ್ತದೆ. 
ಮಹಾತ್ಮರುಗಳು ಯಾಕೆ ಕೊನೆಗಾಲದಲ್ಲಿ ಎಲ್ಲಾ ಭೌತಿಕ ಸುಖ ಸಂಪತ್ತು ಬಿಟ್ಟು  ಹೊರಟರು ಎನ್ನುವ ಸಾಮಾನ್ಯಜ್ಞಾನ ಇದರಲ್ಲಿದೆ. ನಮಗೆ ಅವಕಾಶವಿದ್ದರೆ  ಪರಮಾತ್ಮನ ಕಡೆಗೆ ನಡೆಯಬಹುದು. ನಮಗಿರೋದು ಎರಡೇ ಮಾರ್ಗ ದೇವರು ಕೊಟ್ಟದ್ದನ್ನು ಕೊಟ್ಟು ನಡೆಯೋದು ಅಥವಾ ಬಿಟ್ಟು ನಡೆಯೋದು. ಹೊತ್ತು ನಡೆಯೋದು ನಮ್ಮ ಪಾಪ ಪುಣ್ಯಗಳಷ್ಟೆ.

No comments:

Post a Comment