ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, April 7, 2023

ಸ್ಥಿತಪ್ರಜ್ಞ ಎಂದರೇನಿರಬಹುದು?

ಸ್ಥಿತಪ್ರಜ್ಞನೆಂದರೆ ?
ಸ್ಥಿತಿಯನ್ನು  ಧಾರ್ಮಿಕವಾಗಿ ಅರ್ಥ, ಮಾಡಿಕೊಂಡು
ಪ್ರಜ್ಞಾವಂತರಾಗೋದೆ  ಸ್ಥಿತಪ್ರಜ್ಞರ  ಲಕ್ಷಣ.
ತಟಸ್ಥ ರಾಗಿರೋದೆಂದು  ಕೆಲವರು ತಿಳಿದು, ತಮ್ಮ
ಅಧಿಕಾರವನ್ನೇ  ಸರಿಯಾಗಿ ತಿಳಿಯದೆ,ಸತ್ಯಧರ್ಮ
ಹಿಂದೆ  ನಿಂತಿದೆ. ರಾಜರ ಕಾಲದಲ್ಲಿದ್ದ  ರಾಜಕೀಯತೆ
ಇಂದಿಲ್ಲ.ಅಂದರೆ, ಆಗ ಪ್ರಜೆಗಳ ಜ್ಞಾನ ರಾಜನ ನಡೆ
ನುಡಿಗಳ ಮೇಲಿತ್ತು. ಇಂದು   ಪ್ರಜೆಗಳ   ಜ್ಞಾನ ರಾಜಕಾರಣಿಗಳ  ಮೇಲೆ ನಿಂತಿದೆ. ಹೀಗಿರೋವಾಗ
ರಾಜಕಾರಣಿಗಳ  ನಡೆ ನುಡಿಯಲ್ಲಿನ  ತಪ್ಪನ್ನು ಎತ್ತಿ
ಹಿಡಿದು  ಕೇಳೋ ಸ್ವಾತಂತ್ರ್ಯ  ಪ್ರಜಾಪ್ರಭುತ್ವದ ಪ್ರಜೆ
ಪಡೆದಿದ್ದರೂ, ಧರ್ಮಸತ್ಯದ ಮೂಲವನ್ನೇ ತಿಳಿಯದೆ
ಅರ್ಧಸತ್ಯ ವೇ  ಪೂರ್ಣಸತ್ಯ ವೆಂದು ಒತ್ತಡ,ಒತ್ತಾಯದಿಂದ  ತಲೆಗೆ ತುಂಬಿ ನಾವೇ ಸರಿ ಎಂದು  ಮುನ್ನಡೆದವರ‌ 
ಹಿಂದೆ  ನಡೆದವರ ಸ್ಥಿತಿಗೆ ಪ್ರಜ್ಞಾವಂತರಲ್ಲಿ  ಸರಿಯಾದ 
ಉತ್ತರವಿದ್ದರೆ ,ಅದನ್ನು ನೇರವಾಗಿ  ತಿಳಿದು,ತಿಳಿಸಿ 
ಮಾರ್ಗದರ್ಶನ ನೀಡಿದರೆ ಧರ್ಮ. ಇಲ್ಲ ನಾವು ಸತ್ಯ ತಿಳಿದರೂ  ತಿಳಿಸದೆ,ತಟಸ್ಥರಾಗಿ  ತಮ್ಮ  ಸ್ಥಾನ ಮಾನಕ್ಕೆ  ಬೆಲೆಕೊಟ್ಟರೆ ಅದು ಸ್ಥಿತಪ್ರಜ್ಞತೆ  ಎನಿಸುವುದೆ?.
 ನಡೆಯುವುದನ್ನು  ತಡೆಯಲಾಗದು. ಹಾಗಂತ
ಈಗ  ಪ್ರಚಾರಕರ್ಯಾರು  ಸುಮ್ಮನೆ ಮಾತಾಡದೆ ತನ್ನದೇ  ದಾರಿಯಲ್ಲಿ  ನಡೆಯುತ್ತಿಲ್ಲ. ಶಿಷ್ಯರ ಸಹಕಾರ,ಸಹಾಯ
ವಿಲ್ಲದೆ  ಗುರುವಿಲ್ಲ.ಹಿಂದಿನ ಕಾಲದಲ್ಲಿದ್ದ  ಗುರುಕುಲ ಪದ್ದತಿ  ಇಂದಿಲ್ಲ. ಅಂದಿನ ರಾಜ ಜ್ಞಾನ   ರಾಜಕಾರಣಿಗಳಿಗಿಲ್ಲ. ಆದರೂ, ಎಲ್ಲರ ಒಳಗಿನ  ಪರಮಾತ್ಮ ಒಬ್ಬನೆ. ಇದರಲ್ಲಿ  ಅಧಿಕಾರ ಹಣ ಪಡೆದವರಿಗೆ ಸ್ಥಾನ ಮಾನ ಪದವಿ,ಪಟ್ಟ.ಜ್ಞಾನವನ್ನೇ  ಹಿಂದೆ ತಳ್ಳಿ ನಡೆಸೋ  ರಾಜಕೀಯಪ್ರಚಾರ ಆಚಾರ,ವಿಚಾರಗಳಿಂದ  ಧರ್ಮದ ಬದಲು ಅಧರ್ಮ  ಬೆಳೆದರೆ, ನಮ್ಮಲ್ಲೇ  ಇರೋ  ಭಿನ್ನಾಭಿಪ್ರಾಯ ದ  ಅತಿಯಾದ ಅಹಂಕಾರ,ಸ್ವಾರ್ಥ ಒಂದೆಡೆ ಆದರೆ ಇನ್ನೊಂದು ಕಡೆ  ಅತಿಯಾದ ಪರಮಾತ್ಮನ  ಅವಲಂಬನೆಯ  ಆತ್ಮವಿಶ್ವಾಸ.
ಯಾವುದೇ  ಆಗಲಿ ಅತಿಯಾದರೆ ಗತಿಗೇಡು.
ಗುರು ಹಿರಿಯರ   ಆಶೀರ್ವಾದ, ಮಾರ್ಗದರ್ಶನದಲ್ಲಿ
ಮುನ್ನಡೆದ    ದೇಶವೀಗ ,  ರಾಜಕೀಯದಲ್ಲಿ  ಮುನ್ನಡೆದು ,ಗುರು ಹಿರಿಯರ  ಉಪದೇಶವನ್ನು ಸರಿ ಅರ್ಥಮಾಡಿ
ಕೊಳ್ಳದೆ  ಧರ್ಮ ಹಿಂದೆ ನಿಂತಿದೆ. ಇದುನಮ್ಮ   ಅತಿಯಾದ 
 ಹೊರಜ್ಞಾನದ  ಪ್ರಭಾವ.
ಕೆಲವರಷ್ಟೇ  ಶಿಕ್ಷಣಕ್ಷೇತ್ರದಿಂದ  ತಮ್ಮ  ಧಾರ್ಮಿಕ
ಸೇವೆ  ನಡೆಸಿ  ಭಾರತೀಯರನ್ನು  ಬೆಳೆಸಿದ್ದಾರೆ. ಆ
ಮಹಾತ್ಮರಲ್ಲಿ  ಪ್ರಮುಖರಾದ  ಶ್ರೀ ಶ್ರೀ ಶಿವಕುಮಾರ
ಸ್ವಾಮಿಗಳವರಿಗೆ ಅನಂತಾನಂತ ವಂದನೆಗಳು.
ಶಂಕರಾಚಾರ್ಯರ  ಕಾಲದಲ್ಲಿದ್ದ  ಅಧರ್ಮದ  ಸ್ಥಿತಿ
ಇಂದಿಗೂ ಇದೆ.ಇಲ್ಲಿ ಅದ್ವೈತ ವೆಂದರೆ  ಸಮಾನತೆ,
ಒಗ್ಗಟ್ಟು, ಒಂದು ಎಂದಾದರೂ  ಧರ್ಮದ ಒಳಗಿನ
ರಾಜಕೀಯ  ಬೇರೆ ಬೇರೆಯಾಗಿದೆ. ರಾಜಕೀಯ ಕ್ಷೇತ್ರ
ಭೇರೆ, ಧಾರ್ಮಿಕ ಕ್ಷೇತ್ರ ಬೇರೆ ಎಂದು ಒಂದು ದೇಶದ
ಧರ್ಮವನ್ನು  ಒಂದಾಗಿಸಲಾಗದು. ಹಾಗಂತ  ಇಲ್ಲಿ
ತಪ್ಪು  ಯಾರೋ ಒಬ್ಬರದಾಗಿದ್ದರೆ  ಸರಿಪಡಿಸಲು
ಕಷ್ಟವಿಲ್ಲ. ಹಿಂದಿನ  ರಾಜಪ್ರಭುತ್ವ ದಲ್ಲಿ  ರಾಜನನ್ನು
ಸರಿಪಡಿಸಿದರೆ  ಪ್ರಜೆಗಳು ಸರಿಯಾಗಬಹುದಿತ್ತು.
ಹಾಗೆ, ಸರಿಪಡಿಸೋ  ಗುರು ಸರಿಯಾಗಿರುತ್ತಿದ್ದರು.
ಇಂದಿನ ಪ್ರಜಾಪ್ರಭುತ್ವದ  ಪ್ರಜೆಗಳಲ್ಲೇ ಅಜ್ಞಾನ
ಬೆಳೆದಿದೆ.ಇದನ್ನು  ಜ್ಞಾನಿಗಳಾದವರೆ ಸರಿಪಡಿಸೋ
ಮೊದಲು  ಅವರು ಪೂರ್ಣಸತ್ಯ  ಅರ್ಥಮಾಡಿಕೊಂಡು, ನಡೆಯಬೇಕಿತ್ತು. ಅವರೇ ಪ್ರಜೆಗಳ ಋಣದಲ್ಲಿರೋವಾಗ 
 ಸರಿಯಾಗಲು ಕಷ್ಟ.
ಹೀಗೆ, ರಾಜಯೋಗವಿಲ್ಲದ  ರಾಜಕೀಯದಲ್ಲಿ ಅದ್ವೈತ ತತ್ವ  ಹಿಂದುಳಿದಿದೆ. ಹಾಗಂತ ಪ್ರಚಾರಕರು ಹಿಂದುಳಿದಿಲ್ಲ. 
ಇದರಲ್ಲಿ  ಕೆಲವರಷ್ಟೇ  ದೇಶದ ಪರ ದೇಶಭಕ್ತಿಯ
 ಮೂಲಕ ಧರ್ಮರಕ್ಷಣೆಗಾಗಿ ನಿಜವಾದ ಸಂನ್ಯಾಸ 
ಧರ್ಮದಲ್ಲಿದ್ದು  ಸಮಾಜ ಸೇವೆ ಮಾಡಿ ತತ್ವೋಪದೇಶದ
ಮೂಲಾರ್ಥ ತಿಳಿದು  ನಡೆದಿದ್ದಾರೆ.
ಅದ್ವೈತ ದಲ್ಲಿ  ರಾಜಕೀಯ ಬರೋದೆ ಇಲ್ಲ. ಎಲ್ಲರೂ
ಸಮಾನರೆಂದ ಮೇಲೆ  ರಾಜ ಯಾರು?.ಅದರಲ್ಲೂ
ಪ್ರಜಾಪ್ರಭುತ್ವ  ಸರ್ಕಾರದಲ್ಲಿ  ಪ್ರಜೆಗಳಿಗೆ  ಜ್ಞಾನದ
ಶಿಕ್ಷಣ  ನೀಡದೆ,  ಉಪದೇಶ  ನೀಡಿದರೆ  ಸತ್ಯ  ಅರ್ಥ
ಆಗೋದಕ್ಕೆ ಅಸಾಧ್ಯ.
ರಾಜಯೋಗ ದೊಡ್ಡದು ರಾಜಕೀಯವಲ್ಲ.ಹಾಗೆ
ಅದ್ವೈತದ ಪ್ರಕಾರ  ದೇವನೊಬ್ಬನೆ ನಾಮ ಹಲವು.
ದೇಶ ಒಂದೆ, ಧರ್ಮ ಒಂದೆ,ಜಾತಿ ಒಂದೆ,ಕುಲ ಒಂದೆ.
ಇದನ್ನು ಒಂದಾಗಿಸಲು  ಯಾರಿಗೂ ಸಾಧ್ಯವಿಲ್ಲವೆ?
ಸತ್ಯಜ್ಞಾನದಿಂದ  ಮಾತ್ರ ಮಾನವ  ಮಹಾತ್ಮನಾಗಿ
ನೇರವಾಗಿ  ಸತ್ಯದರ್ಶನ  ಮಾಡಿಕೊಳ್ಳಬಹುದು.
ಸರ್ಕಾರದಿಂದ, ಹಣದಿಂದ,ಅಧಿಕಾರದಿಂದ,ಪುರಾಣ
ಇತಿಹಾಸದಿಂದ  ರಾಜಕೀಯ ನಡೆಸಬಹುದಷ್ಟೆ.
ರಾಜಯೋಗಕ್ಕೆ  ಸ್ವತಃ  ಸತ್ಯದಲ್ಲಿ  ನಡೆಯಬೇಕು
ಎಂದು  ಪುರಾಣ,ಇತಿಹಾಸದ ಮಹಾತ್ಮರ  ನಡೆ ನುಡಿ ತಿಳಿಸಿದೆ. ಇದನ್ನು ದಾಸ,ಶರಣರು ತೋರಿಸಿಕೊಟ್ಟರು.
 ನಾವೀಗ ಎಲ್ಲಾಸತ್ಯ  ಪ್ರಚಾರಮಾಡಿ, ನಮ್ಮೊಳಗಿನ. ಅಸತ್ಯ ಬಿಡದೆವ್ಯವಹಾರ ನಡೆಸಿರೋದೆ  ಅಧರ್ಮ.
ಕಾಲಪ್ರಭಾವ, ಮಾನವ ಕಾರಣ ಮಾತ್ರನೆಂಬ ಸತ್ಯ
ಅದ್ವೈತ ತಿಳಿಸಿ, ಮಾನವನಿಗೆ ಸ್ವಾತಂತ್ರ್ಯ ಕೊಟ್ಟು
ನಿನ್ನ ಆತ್ಮರಕ್ಷಣೆ ನೀನು ಮಾಡಿಕೊಳ್ಳಬಹುದೆಂದು
ದ್ವೈತ  ಬೆಳೆಸಿ, ಕೊನೆಯಲ್ಲಿ  ಪ್ರಾಣಿ,ಪಕ್ಷಿ,ಚರಾಚರ
ವಸ್ತುಗಳಲ್ಲಿ  ಅಡಗಿರೋ  ಪರಮಾತ್ಮನ  ಇರುವಿಕೆ
ಎತ್ತಿ ಹಿಡಿದ ವಿಶಿಷ್ಟಾದ್ವೈತ   ದಾಸ,ಶರಣರವರೆಗೆ
ತಲುಪಿಸಿದೆ.ಇಂದು ನಾನೇ ದೇವರೆಂಬ ಅಹಂಕಾರ
ಸ್ವಾರ್ಥ ಬಿಡಲಾಗದೆ, ಪ್ರಜಾಪ್ರಭುತ್ವ ದೇಶವನ್ನೇ
ರಾಜಪ್ರಭುತ್ವ ದ  ರೀತಿಯಲ್ಲಿ  ಅಧರ್ಮದಿಂದ ಆಳಲು   ಬಿಟ್ಟಿರೋದೆ  ನಮ್ಮ ಅಜ್ಞಾನದ ಶಿಕ್ಷಣ.
ಭಾರತೀಯರಾಗಿ ಗುರುವಾಗಿ, ಪ್ರಜೆಯಾಗಿ,ಪೋಷಕ
ರಾಗಿ  ನಮ್ಮ ಮಕ್ಕಳಿಗೆ  ಸಾಮಾನ್ಯಜ್ಞಾನ ತಿಳಿಸದೆ
ವಿಶೇಷಜ್ಞಾನ,ವಿದೇಶಿ ಜ್ಞಾನವನ್ನು ಓದಿ ತಿಳಿಸಿದರೆ
ಅನುಭವಜ್ಞಾನ ಎಲ್ಲಿರುತ್ತದೆ. ಇದು ಪ್ರಜೆಗಳೇ  ಸಹಕಾರ. ನೀಡಿ ಬೆಳೆಸಿದ  ರಾಜಕೀಯ.ಅದಕ್ಕೆ ಸರಿ  ಆಗಿ  
ರಾಜಕಾರಣಿಗಳೇ  ತಮ್ಮ  ಅಜ್ಞಾನ ಎತ್ತಿ ಹಿಡಿದು
ದೇಶವಾಳುತ್ತಿದ್ದಾರೆ.
ತತ್ವದೊಳಗಿನ. ಸತ್ಯ ಒಂದೆ.ಎಲ್ಲರೂ ಮಾನವರಷ್ಟೆ.
ಮಹಾತ್ಮರಾಗಲೂ  ಆತ್ಮಾನುಸಾರ ಸತ್ಯ ತಿಳಿಯಬೇಕು. ಇದು ಹೊರಗಿಲ್ಲ.ನಮ್ಮೊಳಗೇ ಇದೆ.

No comments:

Post a Comment