ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, May 3, 2023

ಪರತಂತ್ರದಲ್ಲಿ ಸ್ವತಂತ್ರ ಜ್ಞಾನವಿದೆಯೆ?

ಈವರೆಗೆ  ಎಷ್ಟೋ  ಪಕ್ಷಗಳು ದೇಶವನ್ನಾಳಲು ಬಳಸಿದ ತಂತ್ರದಿಂದ ದೇಶದ  ಸಾಲ ತೀರಿತೆ? ದೇಶದ ಧರ್ಮ ಉಳಿಯಿತೆ? ದೇಶದಲ್ಲಿ ಶಾಂತಿ ನೆಲೆಸಿತೆ?  ಬಡವರ ಸಂಖ್ಯೆ  ಇಳಿಯಿತೆ? ಭ್ರಷ್ಟಾಚಾರ  ತೊಲಗಿತೆ? ಇಲ್ಲ ಎಂದರೆ ಇದಕ್ಕೆ ಕಾರಣ ಪಕ್ಷವಲ್ಲ ಶಿಕ್ಷಣ .ಈ ಸತ್ಯ ಹಿಂದಿನ ಎಲ್ಲಾ ಮಹಾತ್ಮರು ಸಾಹಿತಿಗಳು ದೇಶಭಕ್ತರು  ತಿಳಿಸಿದ್ದಾರೆ.ಯಾವ ದೇಶದ ಮೂಲ ಶಿಕ್ಷಣ ಗಟ್ಟಿಯಾಗಿರುವುದೋ ಅದನ್ನು ಯಾವ ಹೊರಗಿನವರೂ ಅಲ್ಲಾಡಿಸಲಾಗದು.ಶಿಕ್ಷಣವೇ ನಮ್ಮದಲ್ಲದ ಮೇಲೆ ನಮ್ಮ ಜ್ಞಾನ  ನಮ್ಮದಾಗಿರುವುದೆ?
ಹೊರಗಿನ ಶಿಕ್ಷಣ  ಮನಸ್ಸನ್ನು ಹೊರಗೇ ಕಳಿಸುತ್ತದೆ. ಆಂತರಿಕ ಶಕ್ತಿಯನ್ನು ಕಳೆದುಕೊಂಡವರನ್ನು ಆಳುವುದು ಸುಲಭ. ಹೀಗಾಗಿ ಭಾರತವಾಳಲು  ಬಂದವರು ಶಿಕ್ಷಣವನ್ನು ಸರಿಪಡಿಸಲಿಲ್ಲ ಬದಲಾಗಿ  ತಮ್ಮದೇ ಶಿಕ್ಷಣ ನೀಡುತ್ತಾ ಗುಲಾಮರಾಗಿಸಿಕೊಂಡರು.ಇದು ಬ್ರಿಟಿಷ್ ಸರ್ಕಾರ  ಬೆಳೆಯಲು ಕಾರಣವಾದಂತೆ ಈಗಲೂ  ಸರ್ಕಾರ ನಡೆಸುವವರಿಗೆ   ನಮ್ಮದೇ ಶಿಕ್ಷಣ ನೀಡಲು ನಮ್ಮವರೆ ವಿರೋಧ ವ್ಯಕ್ತಪಡಿಸಲು ಕಾರಣ  ನಮ್ಮಲ್ಲಿ  ಆಂತರಿಕ ಜ್ಞಾನವಿಲ್ಲ ಭೌತಿಕಜ್ಞಾನ ಅತಿಯಾಗಿದೆ. ಹಿಂದಿನವರ ಶಿಕ್ಷಣ ಬೇಡ ಅವರ ಭೂಮಿ,ಆಸ್ತಿ ಅಂತಸ್ತು ಬೇಕೆಂದರೆ ಹೇಗಿದೆ ನಮ್ಮ ಅಜ್ಞಾನ. ಸರ್ಕಾರ ದಿಂದ ದೇಶ ಬದಲಾಗದು. ಶಿಕ್ಷಣದಿಂದ ಬದಲಾಗಬಹುದು ಇದಕ್ಕೆ ಪೋಷಕರ ಸಹಕಾರ ಬೇಕಷ್ಟೆ. 
ಒಂದನ್ನು ಗಳಿಸಲು ಒಂದನ್ನು ಕಳೆಯಬೇಕು
ಹಣಗಳಿಸಲು ಜ್ಞಾನ ಕಳೆದುಕೊಳ್ಳಬೇಕು.ಜ್ಞಾನ ಸಂಪಾದನೆಗೆ ಹಣವನ್ನು ಸತ್ಕರ್ಮದಿಂದ ಸಂಪಾದಿಸಿ ದಾನ ಧರ್ಮಕ್ಕೆ ಬಳಸಿದರೆ  ಪಾಪ ಕಳೆದು ಪುಣ್ಯ ಗಳಿಸಬಹುದು.ಇವುಗಳು ಯೋಗಮಾರ್ಗದಲ್ಲಿರಬೇಕೆನ್ನುವುದೆ ಹಿಂದೂ  ಧರ್ಮದ ತತ್ವ.
ಭೋಗದೆಡೆಗೆ ವೇಗವಾಗಿ ನಡೆದಂತೆಲ್ಲಾ ಹೊರಗಿನ ಹಣ ಗಳಿಸಿ ವ್ಯರ್ಥ ವಾಗಿ  ದುರ್ಭಳಕೆ, ದುಂದುವೆಚ್ಚ ಮಾಡಿದರೆ ಸಾಲವಾಗುತ್ತದೆ.ಸಾಲ ತೀರಿಸಲು  ಇನ್ನಷ್ಟು ಕಷ್ಟಪಡಬೇಕು ಇಲ್ಲವಾದರೆ ರಾಜಕೀಯ ನಡೆಸಿ,ನಾಟಕವಾಡಿಕೊಂಡು ಭ್ರಷ್ಟರಿಗೆ ಶರಣಾಗಬೇಕು.ದಾಸರಾಗಬೇಕು. 
ಹಿಂದಿನ ಮಹಾತ್ಮರುಗಳು  ಪರಮಸತ್ಯಕ್ಕೆ ಧರ್ಮಕ್ಕೆ ಶರಣಾಗಿ ದಾಸರಾಗಿದ್ದರು ಇದರಿಂದ ಧರ್ಮ ರಕ್ಷಣೆಯಾಗಿತ್ತು. ಈಗ ಧರ್ಮ ವೇ ರಾಜಕೀಯಕ್ಕೆ ಶರಣಾದರೆ  ಅಧರ್ಮವಾಗುತ್ತದೆ. ವಿದೇಶದೊಳಗಿರುವ ದೇಶವನ್ನು ಬಿಡುಗಡೆ ಮಾಡಲು ಜೀವ ಬಿಟ್ಟ ದೇಶಭಕ್ತರು
ಸ್ವತಂತ್ರ ವಾದ ಜ್ಞಾನಿಗಳಾಗಿದ್ದರು. ದೇಶವನ್ನು ವಿದೇಶದ  ಹಾದಿಗೆ ನಡೆಸುವ  ಇಂದಿನ ಸ್ವಾತಂತ್ರ್ಯ ಸ್ವೇಚ್ಚಾಚಾರದೆಡೆಗೆ ನಡೆದಿದೆ. ಇದಕ್ಕೆ ಕಾರಣ  ಅಜ್ಞಾನ. ಪರಿಹಾರ   ಸತ್ಯಜ್ಞಾನ.
ಅಮಾಯಕ ಮುಗ್ದ ಮಕ್ಕಳನ್ನು  ಅಸಹಾಯಕ ಪ್ರಭುದ್ದ ಪ್ರಜೆಗಳಾಗಿಸಿರೋದು ಪ್ರಜಾಪ್ರಭುತ್ವದ  ದುರಂತ. ಈಗ ಎಚ್ಚೆತ್ತುಕೊಳ್ಳದಿದ್ದರೆ  ಮುಂದೆ ಎಚ್ಚರವಾಗೋದಿಲ್ಲ . 
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ಎಂದಂತೆ ನಿಮ್ಮ ನಿಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಿ. ಇವರ ರಕ್ಷಣೆ ಸರ್ಕಾರದ ಕೆಲಸವಲ್ಲ.
ಹಿಂದಿನ ಪುರಾಣ ಇತಿಹಾಸದ ರಾಜಕೀಯವು ರಾಜಪ್ರಭುತ್ವದಲ್ಲಿತ್ತು ಒಬ್ಬ ರಾಜ ಧರ್ಮದೆಡೆಗೆ ನಡೆದರೆ  ಶಾಂತಿ ಸಮೃದ್ದಿ ಆದರೆ ಇಂದು ಪ್ರಜೆಗಳ  ಮಧ್ಯೆ ಧರ್ಮದ  ವಿಷಬೀಜಬಿತ್ತಿ ಧಾರ್ಮಿಕ ಶಿಕ್ಷಣ ನೀಡದೆ ಆಳುವ ರಾಜಕೀಯತೆ ಹೆಚ್ಚಾಗಿದೆ.

ದೇಶ ನಡೆದಿರೋದು ಪ್ರಜಾಶಕ್ತಿಯಿಂದ ಪ್ರಜಾಶಕ್ತಿ ದುರ್ಭಳಕೆ ಆಗಿರೋದು ತಂತ್ರಜ್ಞಾನದಿಂದ  ತಂತ್ರವೇ ಪರಕೀಯರವಶದಲ್ಲಿದ್ದು ತತ್ವವನರಿಯದಿದ್ದರೆ ಸ್ವತಂತ್ರ ಎಲ್ಲಿರುವುದು?

ಎಲ್ಲಿಯವರೆಗೆ ಹಿಂದೂ ಸಂಘಟನೆ,ಧರ್ಮ,ಪಂಗಡಗಳ ನಡುವಿನ ದ್ವೇಷ ಹೋಗದೋ ಅಲ್ಲಿಯವರೆಗೆ ನಮ್ಮ ದೇಶ ತತ್ವದೆಡೆಗೆ ನಡೆಯದು ಪರಕೀಯರ ಒಗ್ಗಟ್ಟು  ನಮ್ಮವರ ಬಿಕ್ಕಟ್ಟನ್ನು ದುರ್ಭಳಕೆ ಮಾಡಿಕೊಂಡಿದೆ.

ದ್ವೇಷದಿಂದ  ದೇಶ ಕಟ್ಟಲಾಗದು ದ್ವೇಷದಿಂದ ತತ್ವ ತಿಳಿಯದು, ದ್ವೇಷ ವೇ ಎಲ್ಲಾ ವಿನಾಶಕ್ಕೆ ಕಾರಣವಾದರೆ ಇಲ್ಲಿ ಯಾರನ್ನು ಯಾರು ದ್ವೇಷಿಸುತ್ತಿರುವುದು? ವಿದೇಶಿಗಳನ್ನು  ಪ್ರೀತಿಸಿ ಸ್ವದೇಶಿಗಳನ್ನು ದ್ವೇಷ ಮಾಡುತ್ತಾ  ಸ್ವದೇಶವನ್ನು ಆಳುವುದರಿಂದ  ಶಾಂತಿ ಸಿಗುವುದೆ? 

ಪ್ರತಿಷ್ಟಿತರಿಗೆ  ತೋರಿಸುವ ಗೌರವ, ಹಣ,ಸಮಯ,ಸಹಕಾರ ನಮ್ಮವರಿಗೆ  ನಮ್ಮನೆಯವರಿಗೆ, ಒಡಹುಟ್ಟಿದವರಿಗೇ  ಕೊಡದೆ  ಇದ್ದರೆ ಧರ್ಮ ವೆ? 
ಆತ್ಮಾವಲೋಕನ ಪ್ರಜೆಗಳೇ ಮಾಡಿಕೊಳ್ಳಲು ಆತ್ಮಜ್ಞಾನದ ಶಿಕ್ಷಣವಿರಬೇಕಿತ್ತು. ನಂತರವೇ ವಿಜ್ಞಾನದೆಡೆಗೆ  ನಡೆದಿದ್ದರು  ಮಹಾತ್ಮರುಗಳು.

No comments:

Post a Comment