ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, May 5, 2023

ಯಾರಿಂದ ಯಾರಿಗೆ ಮೋಸವಾಗಿದೆ?

ಸರ್ಕಾರಗಳು ರೈತಪರ,ಜನಪರ,ಮಹಿಳಾಪರ ಇನ್ನಿತರ ಸಾಮಾಜಿಕ ವಿಚಾರಗಳ ಪರವಾಗಿ ನಿಂತು ಯೋಜನೆಗಳನ್ನು  ತಯಾರಿಸಿ ಎಲ್ಲರ  ಮತಬಳಸಿ ಗೆದ್ದರೂ  ದೇಶದ ಪರ ಯಾವುದೇ  ರೀತಿಯ ಚಿಂತನೆ ನಡೆಸದ ಪ್ರಜೆಗಳಿದ್ದರೆ  ವ್ಯರ್ಥಫಲ. 
ದೇಶದೊಳಗೆ ಇರುವ ಪ್ರಜೆಗಳಲ್ಲಿ ದೇಶಭಕ್ತಿ  ಸರ್ಕಾರದಿಂದ 
ಬೆಳೆಸಲಾಗದು.ಕಾರಣ ಸರ್ಕಾರದ ಸಾಲ,ಸೌಲಭ್ಯಗಳನ್ನು  ಉಳ್ಳವರೂ ಪಡೆದು ಶ್ರೀಮಂತರಾದಾಗ  ನಿಜವಾದ ಬಡವ ದೇಶದ ಪರ ನಿಲ್ಲಲಾಗದು. ಹಸಿದವನಿಗೆ‌ ಉತ್ತಮವಾದ ಆಹಾರ ನೀಡುವುದು ಸರಿ. ಹಾಗೆಯೇ  ಜ್ಞಾನದ ಹಸಿವಿದ್ದವರಿಗೆ ಸರಿಯಾದ ಸಾತ್ವಿಕ ಶಿಕ್ಷಣ ನೀಡುವುದು ಧರ್ಮ. ಇಲ್ಲಿ ಬಡವರಲ್ಲಿರುವ‌ ಜ್ಞಾನ ಗಮನಿಸದೆ ಶಿಕ್ಷಣ ನೀಡದೆ ಶ್ರೀಮಂತ ರು ಆಳಿದರೆ  ಇದೊಂದು ಅಜ್ಞಾನದ ಭ್ರಷ್ಟಾಚಾರ. ಹೀಗಾಗಿ ಭಾರತೀಯತೆ ಹೋಗಿ ವಿದೇಶಿಯತೆ ಮೆರೆದಾಡುತ್ತಿದೆ. ಯಾರು ದೇಶ ಆಳುತ್ತಿರುವರೋ ಯಾರು ದೇಶರಕ್ಷಕರೋ ಎನ್ನುವುದನ್ನು ಗಮನಿಸಲು ನಮಗೆ ಜ್ಞಾನದ ಅಗತ್ಯವಿದೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂದರೆ,
ಯಾರದ್ದೋ ಹೆಸರಿನಲ್ಲಿ  ರಾಜಕೀಯ ನಡೆಸಿಕೊಂಡು ಜನರ ದಾರಿತಪ್ಪಿಸುವ  ಮಧ್ಯವರ್ತಿಗಳು ಸಾಕಷ್ಟು ಬೆಳೆದಿರುವರು.
ಹಲವರು ದೇಶದ ಪ್ರಜೆಗಳೆ  ಆಗಿಲ್ಲ.ಮತಹಾಕುವ ಅಧಿಕಾರ ಪಡೆಯದವರು ಮತದಾನ ಮಾಡಲು ಮನೆ ಮನೆಗೆ ಹೋಗಿ ಪಕ್ಷದ ಪರ ನಿಲ್ಲುವರೆಂದರೆ  ಇದಕ್ಕೆ ಕಾರಣ ಹಣಗಳಿಕೆಯಷ್ಟೆ.
ಮತದಾರರನ್ನು, ಮಕ್ಕಳು,ಮಹಿಳೆಯರಿಗೆ ಹಣ ನೀಡಿ ಖರೀದಿಸುವ ಮಟ್ಟಿಗೆ  ರಾಜಕೀಯ ಬೆಳೆದಿದೆ. ಹಣದ ಮೂಲ  ತಿಳಿದರೆ  ಸಾಕು ಭ್ರಷ್ಟಾಚಾರ  ಯಾವ ರೀತಿಯಲ್ಲಿ ಹರಡಿಕೊಂಡು ಆಳುತ್ತಿದೆ.
ಇದಕ್ಕೆ ರಾಜಕಾರಣಿಗಳು ಕಾರಣರಲ್ಲ. ಯಾವ ವ್ಯಕ್ತಿಯೇ ಆಗಲಿ ಒಮ್ಮೆ ಅಧಿಕಾರ,ಸ್ಥಾನಮಾನ ಪಡೆದ ಮೇಲೆ ಅವನ ಜೀವನವೇ ಬದಲಾಗುತ್ತದೆ. ಅದರಿಂದ ಹೊರಬರುವುದು ಕಷ್ಟ. ಹೊರಬಂದವರನ್ನು ಸಮಾಜವೇ ಹೀನವಾಗಿ ನೋಡುವಾಗ ಯಾರಿಗೇ ಆಗಲಿ ಅಧಿಕಾರ ಬೇಕೆನಿಸುತ್ತದೆ.ಹಾಗಂತ ಪ್ರತಿ ಬಾರಿ ಗೆದ್ದು ಬರಲು ಜನ ಬಿಡೋದಿಲ್ಲ. ಅವರಿಗೆ ಪ್ರತಿಸಲವೂ  ಸಾಕಷ್ಟು  ತಿನ್ನಿಸುತ್ತಿದ್ದರೆ ಆ ಋಣಕ್ಕಾಗಿ ಹಿಂದೆ ನಿಂತು 
ಗೆಲ್ಲಿಸುವರು.ಈ ಕಾರಣದಿಂದಚುನಾವಣೆಯ ಸಮಯದಲ್ಲಿ 
 ಮನೆಯೊಳಗಿದ್ದವರನ್ನೂ ಬಳಸಿಕೊಂಡು  ಮತಪ್ರಚಾರ ಮಾಡಲು ಹಣದ ಜೊತೆಗೆ ಇನ್ನಷ್ಟು ಬೇಡವಾದದ್ದನ್ನು ಹಂಚಿಕೊಂಡು ದಿನನಿತ್ಯದ ಕಾಯಕಬಿಡಿಸಿ ದುಡಿಸಿಕೊಳ್ಳುವರು. ಗೆದ್ದವರ ಹಿಂದೆ ಜನ  ತಮ್ಮ ಬೇಡಿಕೆಗಳ ಪಟ್ಟಿ ಇಟ್ಟು ಹಿಂದಿರುವರು.ಸೋತವರ ವಿರುದ್ದ ನಿಂತು ಕೂಗುವರು. ಒಟ್ಟಿನಲ್ಲಿ ಇಲ್ಲಿ ಕುರಿಗಳನ್ನು ಸಾಕುವಂತೆ ಸಾಕಿಕೊಂಡು ನಂತರ ಜೀವ ಹೋದರೂ ಹೇಳೋರಿಲ್ಲ ಕೇಳೋರಿಲ್ಲ. ಇದಕ್ಕೆ ಕಾರಣವೇ ಅಜ್ಞಾನದ ಜೀವನಶೈಲಿ.
ಸಾಲ ಮಾಡಿಯಾದರೂ ತುಪ್ಪತಿನ್ನುವ ಅತಿಆಸೆ. ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವುದು  ಕೆಲವರಿಗಷ್ಟೆ ಸೀಮಿತವಾಗಿದೆ. 
ಒಂದು ಮನೆಯಲ್ಲಿಯೇ  ಮೇಲು ಕೀಳಿನ ರಾಜಕೀಯ ಇದ್ದರೆ ಸಮಾಜದಲ್ಲಿರುವ ಈ ಅಸಮಾನತೆಯನ್ನು ಸರಿಪಡಿಸಲು ಕಷ್ಟ. ಅವರವರ ಯೋಗಾಯೋಗಕ್ಕೆ  ಅವರವರ ಋಣ ಕರ್ಮವೇ ಕಾರಣ. ಋಣ ತೀರಿಸಲು ಸತ್ಕರ್ಮ ಮಾಡಬೇಕು. ಸತ್ಕರ್ಮ ಯಾವುದೆಂದು ತಿಳಿಯಲು ಸುಜ್ಞಾನವಿರಬೇಕು. ಸುಜ್ಞಾನ ಪಡೆಯಲು ಸುಶಿಕ್ಷಣವಿರಬೇಕು.ಸುಶಿಕ್ಷಣ ಪಡೆಯಲು ಸದ್ಗುರು ಬೇಕು. ಹೀಗಾಗಿ ಗುರುವೇ ದೇವರೆಂದರು. ದೈವತ್ವದೆಡೆಗೆ ನಡೆಸುವ ಗುರುವೇ ಸದ್ಗುರು.
ಗುರುವೇ ರಾಜಕೀಯದಲ್ಲಿದ್ದರೆ ರಾಜಕೀಯದಲ್ಲಿ ದೈವತ್ವಕ್ಕೆ ಸ್ಥಳವಿಲ್ಲ. ಸತ್ಯ ಧರ್ಮ ದಿಂದ  ರಾಜಕೀಯ ನಡೆಸಲಾಗಲ್ಲ.
ಶ್ರೀ ರಾಮಚಂದ್ರನಂತೆ  ಎಲ್ಲರೂ  ಇರಲಾಗದು. ಹಾಗಾಗಿ ದೇವರ ಹೆಸರಿನಲ್ಲಿ ಸಾಕಷ್ಟು ರಾಜಕೀಯ ಬೆಳೆದಿದೆ. ತತ್ವವಿದ್ದರೆ ಧರ್ಮ ರಕ್ಷಣೆ ತಂತ್ರವಿದ್ದರೆ ಅತಂತ್ರ ಜೀವನ.ಶ್ರೀ ರಾಮರಾಜ್ಯದ ಕನಸು ಕಾಣೋದು ಸುಲಭ 
ಆದರೆ ಶ್ರೀ ರಾಮರಾಜ್ಯ ಮಾಡೋದಕ್ಕೆ  ಎಲ್ಲಾ ಬುದ್ದನಂತೆ ಬದ್ದರಾಗಿ ನಿಲ್ಲಬೇಕಿದೆ. ಭಗವಾನ್ ಬುದ್ದ ಜಯಂತಿ ಆಚರಣೆಯಿದೆ.
ಆದರೆ ಅವರಂತೆ ರಾಜಕೀಯ ಬಿಟ್ಟು ಅಧ್ಯಾತ್ಮ ದೆಡೆಗೆ ಹೊರಡುವವರು ಎಷ್ಟಿರುವರು? ರಾಜಕೀಯ ನಡೆಸಲು ಸಹಕರಿಸುವುದೂ ರಾಜಕೀಯದ ಭಾಗವೇ .ಪ್ರಜಾಪ್ರಭುತ್ವ ದೇಶದಲ್ಲಿ ಇದು ಅನಿವಾರ್ಯ ವಾಗಿದೆ. ಆದರೆ  ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಸಹಕರಿಸುವ ‌ಜ್ಞಾನ ಇದಕ್ಕಿಂತ ಮುಖ್ಯವಾಗಿದೆ. ಪ್ರಜೆಗಳಲ್ಲಿ ಅಜ್ಞಾನ ತುಂಬಿ ಆಳಿದರೆ  ಸಾಧನೆಯಾಗದು. ವಿದೇಶಿಗಳ ಹಣದಲ್ಲಿ ದೇಶ ನಡೆಸಿದರೆ ಸಾಲ ತೀರದು. ವಿದೇಶಿ ಶಿಕ್ಷಣವನ್ನು ಕೊಡುತ್ತಾ ನಮ್ಮವರನ್ನೇ ವಿದೇಶಿಗಳಿಗೆ  ಬಿಡುವುದು ಧರ್ಮವಲ್ಲ.
ಹಾಗೆಯೇ ದೇಶದೊಳಗೆ ಇದ್ದು ದೇಶದಿಂದ ನನಗೇನು ಲಾಭ‌ನಷ್ಟ ಎನ್ನುವ  ಮನಸ್ಥಿತಿ ಇರುವ ವರೆಗೂ ದೇಶದ ಸಾಲ ತೀರದು.
ಪಕ್ಷಗಳೇನೂ  ಗೆದ್ದರೆ ನಿಮಗೆ ಉಚಿತವಾದ ಸಾಲ,ಸೌಲಭ್ಯಗಳನ್ನು ಕೊಡಬಹುದು.ಆದರೆ  ಉಚಿತ ಪಡೆದಷ್ಟೂ ಸಾಲ ಬೆಳೆಯುವುದು ಖಚಿತ. ಉಚಿತ ಪಡೆದು  ಯಾರು  ಉದ್ದಾರ ಆಗಿದ್ದಾರೆಂಬುದರ ಅರಿವಿದ್ದರೆ
ನಾವೇ ಉಚಿತ ಕೊಟ್ಟು ಸಾಲ ಬೆಳೆಸುವ   ಸರ್ಕಾರದ  ವಿರುದ್ದ ನಿಲ್ಲಬಹುದು.ಅಥವಾ ದೂರವಿದ್ದು ಸ್ವತಂತ್ರ ಜೀವನ ನಡೆಸಲು  ತತ್ವದೆಡೆಗೆ ನಡೆಯಬಹುದು, ಇದೂ ಸಾಧ್ಯವಿಲ್ಲ ಎಂದರೆ  ದಾರಿ ತಪ್ಪಿ ನಡೆಯುತ್ತಿರುವ ಜನರಿಗೆ ಉತ್ತಮ ದಾರಿದೀಪವಾಗಬಹುದು.  ಕೆಲವೆಡೆ ಈ ಕಾರ್ಯ ನಡೆದಿದೆ.ಎಲ್ಲಾ ಮಾನವ ಮನಸ್ಸು ಮಾಡಿದರೆ ಸಾಧ್ಯ. ಆದರೆ ಮನಸ್ಸನ್ನು ಮಾರಿಕೊಂಡರೆ ಅಸಾಧ್ಯ.  ಒಂದಂತೂ ಸತ್ಯ ಮಾನವ ಒಂದು ನೆನೆದರೆ ದೈವ ಸಂಕಲ್ಪವೇ ಬೇರೆಯಾಗಿರುತ್ತದೆ. ಯಾರೂ ಯಾವುದನ್ನೂ ಬದಲಾಯಿಸಲಾಗದು.ಬದಲಾವಣೆ ನಮ್ಮ ಮನಸ್ಸಿನ ಚಿಂತನೆಯಲ್ಲಿದೆ.ಅದು ರಾಜಕೀಯವಾಗಿದ್ದರೆ ಅಧರ್ಮ
ರಾಜಯೋಗವಾಗಿದ್ದರೆ ಧರ್ಮ. ಈಗ ನಾವೆಲ್ಲರೂ ಒಂದೇ ದೇಶದ ಪ್ರಜೆಗಳಾಗಿದ್ದರೂ ರಾಜಕೀಯ ವಿಚಾರದಲ್ಲಿ ಪಕ್ಷ ಪಕ್ಷಗಳ ಅಂತರದಲ್ಲಿ  ಬೇರೆ ಬೇರೆ ಚಿಂತನೆ ನಡೆಸಿ ಮನಸ್ಸು ಹೊರಗಿದೆ.  ವಿದೇಶಿ ಬಂಡವಾಳದ ಜೊತೆಗೆ ಅವರ ಧರ್ಮ,ಸಂಸ್ಕೃತಿ, ಭಾಷೆ ಶಿಕ್ಷಣ,ವ್ಯವಹಾರವೂ ಇರುತ್ತದೆ. ಇದರಿಂದ ಆತ್ಮಜ್ಞಾನ ಬರುವುದೆ?ಇದರ  ಕೆಟ್ಪಪರಿಣಾಮ  ಸಂಸಾರದೊಳಗೆ ಹೊರಗೆ ನಡೆಯುವಾಗ ಯಾವ ಪಕ್ಷವೂ ಸರಿಪಡಿಸಲಾಗದು. ಹಾಗೆ ನಮ್ಮ ಚಿಂತನೆ  ಅಂತರ್ಮುಖ
ವಾಗಿದ್ದರೆ ಒಂದೇ ದೇಶದಲ್ಲಿ  ಅಸಂಖ್ಯಾತ ಧರ್ಮ, ಜಾತಿ,ಪಂಗಡ,ದೇವರು,ಸಂಘಟನೆಗಳು,ಪಕ್ಷಗಳು ಯಾವ ರೀತಿಯಲ್ಲಿ ದೇಶವನ್ನು ಒಡೆದು ಆಳಲು ಹೊರಟಿದ್ದಾರೆಂಬ ಸತ್ಯ  ತಿಳಿಯಬಹುದು. ಇದಕ್ಕೆ  ನಮ್ಮ ಮನಸ್ಸನ್ನು  ನಮ್ಮ ಹತೋಟಿಯಲ್ಲಿಟ್ಟುಕೊಳ್ಳಲು  ನಾವೇ ಯೋಗದ ಮೂಲಕ ಪ್ರಯತ್ನಪಟ್ಟು ನಮ್ಮನ್ನು ನಾವು ಅರ್ಥ ಮಾಡಿಕೊಂಡರೆ ಒಳಗಿರುವ ಪರಮಾತ್ಮನ ಸತ್ಯ ಅರ್ಥ ವಾಗುತ್ತದೆ. ಎಷ್ಟು ಹೊರಗೆ  ಬರುವುದೋ ಅಷ್ಟು ನಷ್ಟ .
ದೇಶಭಕ್ತಿ ದೇವರ ಭಕ್ತಿಗಿಂತ ದೊಡ್ಡದಾದರೂ  ದೇಶದ ಒಳಗಿದ್ದವರಿಗೆ ಇದು ಅಗತ್ಯವೇ ಹೊರತು ವಿದೇಶದವರೆಗೆ ಹೋದವರಿಗಿದ್ದರೆ ಏನು ಉಪಯೋಗ?  ಭಕ್ತಿ ಆಂತರಿಕ ಶಕ್ತಿ.
ಆತ್ಮನಿರ್ಭರ ಭಾರತಕ್ಕೆ ಅಧ್ಯಾತ್ಮ ಚಿಂತನೆ ಅಗತ್ಯ.ಇಲ್ಲಿ ಅಧ್ಯಾತ್ಮ  ಓದಿ ತಿಳಿಯುವುದಲ್ಲ.ನಡೆದು ನುಡಿದು ತಿಳಿದು ತಿಳಿಸುವುದಾಗಿದೆ. ಪೂರ್ಣ ಹಿಂದೆ ಹೋಗಲಾಗದಿದ್ದರೂ ನಮ್ಮ ಹತ್ತಿರದ ಗುರು ಹಿರಿಯರ  ಸಾತ್ವಿಕ ಶಕ್ತಿಯನರಿತರೆ ನಮ್ಮಲ್ಲಿ ಅಡಗಿರುವ ಆಶಕ್ತಿ  ಬೆಳೆಯುತ್ತದೆ. ಇದು ಶಿಕ್ಷಣ.
ಮೊದಲೇ ಮಕ್ಕಳಲ್ಲಿ ಅಡಗಿರುವ  ಸತ್ವ,ಸತ್ಯ,ತತ್ವವನ್ನು  ತಿಳಿದು ಅದಕ್ಕೆ ಸರಿಹೊಂದುವ ಶಿಕ್ಷಣ ನೀಡುವುದೆ ಪೋಷಕ ಧರ್ಮ ವಾಗಿತ್ತು. ಇದನ್ನರಿಯದೆ ವಿರುದ್ದವಾದ ವಿಷಯ ತುಂಬಿದರೆ ಒಳಗಿದ್ದ ಸತ್ವ ತತ್ವಸತ್ಯ ಹಿಂದುಳಿದು ಹಿಂದುಳಿದ ಹಿಂದೂಗಳಾಗೇ  ಹೋಗಬೇಕಷ್ಟೆ. ಒಟ್ಟಿನಲ್ಲಿ ಭಗವಂತನ ಸಮೀಪಕ್ಕೆ  ಹೋಗೋದು ಕಷ್ಟ.ಆದರೆ ಜನ್ಮ ಪಡೆದಾಗ ಭಗವಂತನ ಹತ್ತಿರವೇ ಮಕ್ಕಳಿರುವರು. ಪೋಷಕರು ಅವರನ್ನು ಹೊರಗಿನ ಶಿಕ್ಷಣದ ಮೂಲಕ ದೂರಮಾಡಿ ಅಜ್ಞಾನದೆಡೆಗೆ ನಡೆಸಿ ಹಣದ ಹಿಂದೆ ಬೀಳುವ ಅಜ್ಞಾನಿಗಳಾಗಿಸಿದರೆ ಇದರಲ್ಲಿ ಸರ್ಕಾರದ ತಪ್ಪು ಎಲ್ಲಿದೆ? ಜ್ಞಾನ ಬೆಳೆಸಿಕೊಳ್ಳಲು ಭೌತಿಕ ಸರ್ಕಾರವೇ  ಅಡ್ಡಲಾಗಿದ್ದರೆ ಅಜ್ಞಾನಕ್ಕೆ ತಕ್ಕಂತೆ  ಜನಸಂಖ್ಯೆ ಬೆಳೆಯುತ್ತದೆ. ಇದೊಂದು ಸಾಧನೆಯಾಗಿದ್ದರೆ  ನಮಗಿಂತ  ಮೋಸಹೋದವರು ಯಾರೂ ಇಲ್ಲವೆನ್ನಬಹುದಷ್ಟೆ.
ಎಷ್ಟೋ ಮಹಾತ್ಮರು  ದೇವಾನುದೇವತೆಗಳು  ಈ ಭೂಮಿಗೆ ಬಂದು  ಸತ್ಯ ತಿಳಿಸಿ ತತ್ವ ತಿಳಿಸಿ ಧರ್ಮ ತಿಳಿಸಿ‌ನಡೆದು ಹೋಗಿದ್ದರೂ ಈಗಲೂ  ಆ ಸತ್ಯಧರ್ಮದ ದಾರಿ ಬಿಟ್ಟು ಹೊರಗಿನ ಅಸತ್ಯ ಅಧರ್ಮ ಭ್ರಷ್ಟಾಚಾರದ ಸುಳಿಯಲ್ಲಿ  ನಿಂತರೆ ಹೊರಗೆ ಬರೋದು ಕಷ್ಟ. ಸಮಸ್ಯೆ ಹೊರಗಿನಿಂದ ಒಳಗೆಳೆದುಕೊಂಡಿರುವಾಗ ಒಳಗಿದ್ದೇ ಅದನ್ನು ಬಿಟ್ಟು ನಡೆಯಬೇಕು. ಇನ್ನಷ್ಟು ಒಳಗೆ ಬೆಳೆಸಿಕೊಂಡರೆ ಅದೇ ದೇಹದ ಜೊತೆಗೆ ದೇಶವನ್ನಾವರಿಸಿ  ಜೀವ ಹೋಗುವುದು.
ಮಾನವ ತನಗೆ ತಾನೇ ಮೋಸಹೋಗುವುದರಲ್ಲಿ ನಿಸ್ಸೀಮ
ಎಂದಿದ್ದಾರೆ ಅನುಭವ ಪಡೆದ ಮಹಾತ್ಮರು.ಬದಲಾವಣೆ ಜಗದ ನಿಯಮ. ನಿಯಮವನ್ನು ಮೀರಿ ನಡೆಯಲಾಗದು. ಪ್ರಗತಿ ವೇಗ ವಾಗಿ  ಆದಷ್ಟೂ ಅಧೋಗತಿಯೂ  ವೇಗ ವಾಗಿರುತ್ತದೆ.

No comments:

Post a Comment