ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, May 16, 2023

ಸತ್ಯಕ್ಕೆ ಚ್ಯುತಿ ಬಂದರೆ ಪರಮಾತ್ಮನೊಲಿಯೋದಿಲ್ಲ

ಆತ್ಮತತ್ವದ ಏಕತೆ ಬಗ್ಗೆ ಅದ್ವೈತ ತಿಳಿಸಿದರೆ ಒಂದಲ್ಲ ಎರಡು ಎಂದು ಬೇರೆ ಬೇರೆಯಾಗಿ ಈಗ ಒಂದೇ ದೇವರನ್ನು ಹಲವು ನಾಮಗಳಾಗಿಸಿ ಅಸಂಖ್ಯಾತ ದೇವಾಲಯಗಳಲ್ಲಿ ಪ್ರತಿಷ್ಟಾಪಿಸಿ ಮನೆಯೊಳಗಿನ ದೇವರನ್ನೇ ಸರಿಯಾಗಿ ಪೂಜಿಸಲಾಗದಿದ್ದರೆ  ಹೊರಗಿನ  ವ್ಯವಹಾರ ನಡೆದರೂ ಒಳಗಿನ ಧರ್ಮ ನಡೆಯದು. ಒಬ್ಬಳೇ ತಾಯಿ ಒಬ್ಬರೆ ತಂದೆ ಎನ್ನುವ ಸತ್ಯ ಎಂದೂ ಸುಳ್ಳಾಗದು.ಹಾಗೆ ಒಂದೇ ಭೂಮಿ  ಈ ಒಂದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು  ಒಬ್ಬ ಗುರುಗಳ  ಅಗತ್ಯ. ಯಾವಾಗ ಹಲವರು ಹಲವಾರು ರೀತಿಯಲ್ಲಿ ತತ್ವದಲ್ಲಿ  ಬೇಧ ಬೆಳೆಸಿದರೋ  ಈವರೆಗೆ ಒಂದು ಸತ್ಯ  ಅರ್ಥ ವಾಗದವರ ಸಂಖ್ಯೆ ಬೆಳೆದಿದೆ. ಎಲ್ಲಾ ದೇವರೆ ಆದಾಗ ದೈವತ್ವ ಹೆಚ್ಚಾಗಬೇಕಿತ್ತು. ದೈವತತ್ವ ಒಂದಾಗಬೇಕು.
ತತ್ವ ತಂತ್ರಕ್ಕೆ ಬಳಸಿದರೆ  ಅರ್ಧ ಸತ್ಯದ ಅತಂತ್ರ ಜೀವನ.
ಭೂಮಿ ಬಿಟ್ಟು ಆಕಾಶದಲ್ಲಿ ಜೀವನ‌ನಡೆಸಲಾಗದವರು ಭೂಮಿಯನ್ನು ದುರ್ಭಳಕೆ ಮಾಡಿಕೊಳ್ಳುವುದು ಅಧರ್ಮ.
ಪ್ರಕೃತಿ ಬಿಟ್ಟು  ಜೀವಿಸಲಾಗದವರು ಪ್ರಕೃತಿ ವಿರುದ್ದ ನಿಂತು ವಿಕೃತನಾಗುವುದು ಅಸುರತೆ. ಭೂಮಿಯನ್ನು ಯೋಗಭೂಮಿ ಎಂದೆಣಿಸಿದ ಯೋಗಿಗಳೆಲ್ಲಿ ಭೂಮಿ ಭೋಗ ಭೂಮಿ ಎಂದೆಣಿಸಿದ  ಅಸುರರೆಲ್ಲಿ? ಭಾರತದಂತಹ ಪವಿತ್ರ ಭೂಮಿಯನ್ನು  ಪಾಶ್ಚಿಮಾತ್ಯ ಸಂಸ್ಕೃತಿ ಶಿಕ್ಷಣ,ಭಾಷೆ ಎಷ್ಟು ದುರ್ಭಳಕೆ ಮಾಡಿಕೊಂಡು ಆಳಿತೋ  ಅದರ ಪರಿಣಾಮ ಇಂದಿಗೂ ಭಾರತೀಯರ ತತ್ವಶಾಸ್ತ್ರ ಹಿಂದುಳಿದಿದೆ. ತತ್ವ ತಿಳಿಯದ ತಂತ್ರ  ಸ್ವತಂತ್ರವಾಗಿರಲಾಗದು. ಒಟ್ಟಿನಲ್ಲಿ ತತ್ವದ ನಂತರ ತಂತ್ರಜ್ಞಾನ  ಬೆಳೆಸಿದ್ದ ಹಿಂದಿನ ಮಹಾತ್ಮರುಗಳು ಏಕತೆ ಐಕ್ಯತೆ,ಒಗ್ಗಟ್ಟು, ಸಮಾನತೆಗಾಗಿ ಸಮಾಜವನ್ನು ಒಗ್ಗೂಡಿಸುವ ಉದ್ದೇಶದಿಂದ ಕಾಲಮಾನಕ್ಕೆ ತಕ್ಕಂತೆ ಕೆಲವು ಸಾಮಾಜಿಕ ಬದಲಾವಣೆ ಮಾಡಿಕೊಂಡರು. ಇದು ಆತ್ಮತತ್ವದ ಕಡೆಗಿತ್ತು.ಆತ್ಮಹತ್ಯೆಯ ಕಡೆಗಿರಲಿಲ್ಲ. ಇದೀಗ ಆತ್ಮಹತ್ಯೆಗೆ ಪ್ರಚೋಧಿಸುವ  ಅಸತ್ಯ,ಅನ್ಯಾಯ ಅಧರ್ಮದ ಭ್ರಷ್ಟಾಚಾರ ದವರೆಗೆ ಬೆಳೆದು  ಒಬ್ಬರನೊಬ್ಬರು ಆಳಿ ಅಳಿಸಿಕೊಂಡು  ಧರ್ಮ ಉಳಿಸುವುದಿರಲಿ ಧರ್ಮ ಯಾವುದು ಅಧರ್ಮ ಯಾವುದು ಎನ್ನುವ ಜ್ಞಾನವಿಲ್ಲದವರಿಂದ ತುಂಬುತ್ತಿದೆ. ಇದಕ್ಕೆ ಕಾರಣವೇ ಒಂದೇ ಆತ್ಮನ ಕಡೆಗೆ ಹೊರಡದ  ಮನಸ್ಸು. ಅಂತರಾತ್ಮನೇ ಆ ಒಂದು ಸತ್ಯ. ಸತ್ಯವೇ ದೇವರು, ದೈವತ್ವ ಪಡೆಯಲು ಸತ್ಯ ಅಗತ್ಯ. ಈಗೆಲ್ಲಿದೆ ಸತ್ಯ? ಭೌತಿಕದ ಮಿಥ್ಯವನ್ನೇ ಸತ್ಯ ಎನ್ನುವ ಭ್ರಮೆಯಲ್ಲಿ ಮಹಾ ಜಗತ್ತಿನಲ್ಲಿ  ಎಷ್ಟು ಹೋರಾಡಿದರೂ ಆತ್ಮತೃಪ್ತಿ ಸಿಗಬೇಕೆಂದರೆ  ತತ್ವಜ್ಞಾನದಿಂದ ಸಾಧ್ಯವಿದೆ. 
ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಒಳಗಿದ್ದ ಸತ್ಯ  ಈಗ ಸುಮ್ಮನೆ ಕುಳಿತಿದೆ. ಹೊರಗಿನ‌ಮನೆ ರಾರಾಜಿಸುತ್ತಿದೆ.  ಆ ಹೊರಗಿನ ಮನೆಯನ್ನು ಯಾವುದೇ ಸಮಯದಲ್ಲಿ ಅಸುರರು ಬಂದು ಆಕ್ರಮಣ ಮಾಡಬಹುದು.ಆದರೆ ಒಳಗಿನ  ಮನಸ್ಸನ್ನು ಕದಿಯಲಾಗದು. ಅದನ್ನು ಕದ್ದು  ಆಳುತ್ತಿದ್ದಾರೆ ಎಂದರೆ  ನಮ್ಮ ಮನಸ್ಸೇ  ಕಾರಣ.

No comments:

Post a Comment