ವಿಶ್ವ ತಾಯಂದಿರ ದಿನಾಚರಣೆಯ ಶುಭಾಶಯಗಳು.
ವಿಶ್ವ ಮಾತೆ, ಜಗನ್ಮಾತೆ,ಭೂಮಾತೆ,ಪ್ರಕೃತಿ ಮಾತೆ, ಭಾರತ ಮಾತೆ, ಕನ್ನಡಮ್ಮ, ಹೆತ್ತಮ್ಮ ಇನ್ನಿತರ ಸ್ತ್ರೀ ಶಕ್ತಿಯನ್ನು ಮಾನವನು ಮಾತೆಯರ ದೃಷ್ಟಿಯಿಂದ ನೋಡುವುದರಿಂದ ಧರ್ಮ ರಕ್ಷಣೆ ಸಾಧ್ಯವೆಂದರು ಮಹಾತ್ಮರುಗಳು. ಕಾಲಾನಂತರದಲ್ಲಿ ಅಜ್ಞಾನದಿಂದಾದ ಬದಲಾವಣೆಗೆ ಸ್ತ್ರೀ ಶಕ್ತಿ ಕಾರಣವೋ ಪುರುಷನೋ ಎನ್ನುವ ವಾದ ವಿವಾದದಿಂದ ತಮ್ಮಲ್ಲೇ ಅಡಗಿದ್ದ ಆ ಮಹಾಶಕ್ತಿಯನ್ನರಿಯದೆ ಭೂಮಿಯ ಮೇಲಿದ್ದು ಭೂಮಿಯನ್ನು ದುರ್ಭಳಕೆ ಮಾಡಿಕೊಂಡು ಆಳುವ ಅಸುರರಿಗೆ ಸಹಕಾರ ನೀಡುವುದರಿಂದ ಸಾಕಷ್ಟು ಭೌತಿಕದಲ್ಲಿ ಸಿರಿ ಸಂಪತ್ತು ಗಳಿಸಿದರೂ ಅಧ್ಯಾತ್ಮದ ಸಿರಿ ಸಂಪತ್ತಿನ ಕೊರತೆ ಮನುಕುಲವನ್ನು ಅಸುರರು ಆಳುವ ಹಾಗೆ ಆಯಿತು. ಇದರ ನಡುವೆಯೂ ವಿಶ್ವ ತಾಯಂದಿರ ದಿನ ಆಚರಣೆ ಮಾಡುವ ಉದ್ದೇಶ ಇನ್ನಾದರೂ ತಾಯಂದಿರು ತಮ್ಮೊಳಗಿನ ಆ ಮಹಾಶಕ್ತಿಯನ್ನು ಸದ್ಬಳಕೆ ಮಾಡಿಕೊಂಡು ವಿಶ್ವ ರಕ್ಷಣೆಗೆ ಸಾಧ್ಯವಾಗದಿದ್ದರೂ ಆತ್ಮರಕ್ಷಣೆಗಾಗಿ ಧರ್ಮದ ದಾರಿ ಹಿಡಿಯಲೆಂಬುದಾಗಿದೆ.ಒಂದು ದಿನದ ಆಚರಣೆಯಲ್ಲಿ ಆತ್ಮರಕ್ಷಣೆ ಆಗದಿರಬಹುದು. ತಾಯಿಯಾಗೋದು ಸುಲಭವಲ್ಲ.ಆಗಿದ್ದೇವೆಂದರೆ ಅದರ ಶಕ್ತಿ ಎಷ್ಟು ಸಾಧ್ಯವೋ ಅಷ್ಟು ಉಳಿಸಿ ಬೆಳೆಸಿದಾಗಲೇ ನಮ್ಮನ್ನು ಹೊತ್ತಿರುವ ಭೂ ತಾಯಿಯ ಋಣ ತೀರಿಸಲು ಸಾಧ್ಯ. ಒಟ್ಟಿನಲ್ಲಿ ಸ್ತ್ರೀ ಇಲ್ಲದೆ ಧರ್ಮ ವೂ ಉಳಿಯದು ಅಧರ್ಮ ವೂ ಬೆಳೆಯದು. ಮನುಕುಲವೇ ಇರದು.
ಈಗ ಭಾರತದಂತಹ ಮಹಾದೇಶವು ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿರಲು ಕಾರಣ ಸ್ತ್ರೀ ಸಹಕಾರ. ಇದರಿಂದ ಮನೆ ಮನೆ ಒಡೆದು ಹೊರಗೆ ಹೋಗುತ್ತಿದೆ. ಸಿರಿಸಂಪತ್ತು ಮನೆಯೊಳಗೆ ಸೇರುತ್ತಿದೆ.ಅನುಭವಿಸಲಾಗದೆ ರೋಗಕ್ಕೆ ಮಾನವ ಗುರಿಯಾಗುತ್ತಿದ್ದಾನೆ. ಮನೆಯು ಚಿಕ್ಕದಾಗಿದ್ದರೂ ಮನಸ್ಸು ದೊಡ್ಡದಾಗಿರಬೇಕೆಂದರು ಹಿರಿಯರು.ಈಗಿನ ಹಿರಿತನ ಸಿರಿವಂತರಿಗಷ್ಟೆ .ಇದಕ್ಕೆ ಕಾರಣ ಸ್ತ್ರೀ ಜ್ಞಾನಕ್ಕೆ ಬೆಲೆ ಕೊಡದೆ ಹಣಕ್ಕೆ ಬೆಲೆಕೊಟ್ಟು ಅಧರ್ಮದ ಹಾದಿ ಹಿಡಿದು ಹೊರ ನಡೆದಿರೋದು. ಇದರ ಮೂಲವೇ ಶಿಕ್ಷಣದ ತಂತ್ರಜ್ಞಾನ.ತತ್ವವಿಲ್ಲದ ತಂತ್ರವು ಜೀವನವನ್ನುಅತಂತ್ರಸ್ಥಿತಿಗೆ ಎಳೆಯುತ್ತದೆ. ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ. ಸುಮ್ಮನಿರಲಾಗದೆ ಮೇಲೆ ಮೇಲೆ ಮನೆ ಕಟ್ಟಿದರೆ ಭೂ ಋಣ ತೀರಿಸಲಾಗದು. ಒಟ್ಟಿನಲ್ಲಿ ಸ್ತ್ರೀ ಋಣ ತೀರಿಸಲು ಸ್ತ್ರೀ ಶಕ್ತಿಗೆ ಗೌರವವಿರಬೇಕು. ಹಣವಿದೆಯಂದಲ್ಲ ಗುಣಜ್ಞಾನಕ್ಕೆ ಗೌರವಿಸು ಗುಣ ಸ್ತ್ರೀ ಗಿರಬೇಕು.ಸ್ತ್ರೀ ಯೇ ಸ್ತ್ರೀ ಗೆ ಶತ್ರು ವಾದರೆ ತನಗೆ ತಾನೇ ಮೋಸಹೋದಂತೆ. ತಾಳಿದವನು ಬಾಳಿಯಾನು ಎನ್ನುವುದು ಸುಳ್ಳಲ್ಲ. ತಾಯಿಯ ಋಣ ತೀರಿಸಲು ನಿಸ್ವಾರ್ಥ ಸೇವೆ ಅಗತ್ಯವಿದೆ.ಇದು ಭಾರತೀಯರು ಅರ್ಥ ಮಾಡಿಕೊಳ್ಳುವುದು ಬಹಳ ಅಗತ್ಯವಿದೆ. ಸ್ತ್ರೀ ಗೆ ಜ್ಞಾನದ ಶಿಕ್ಷಣ ನೀಡಿದರೆ ಸಾಧ್ಯವಿದೆ. ಅಜ್ಞಾನಿಗಳ ಸಂಖ್ಯೆ ಮಿತಿಮೀರಿರುವಾಗ ಇಂತಹ ಪವಿತ್ರ ಮನೋಭಾವ ಬರಲು ಹೇಗೆ ಸಾಧ್ಯವಿದೆ?
ಅದ್ವೈತ, ದ್ವೈತ ವಿಶಿಷ್ಟಾದ್ವೈತ ತತ್ವವೆಲ್ಲವೂ ವಿಶ್ವಮಾತೆಯೊಳಗಿದೆ. ಇವುಗಳನ್ನು ತಂತ್ರವಾಗಿ ಬಳಸಿದಷ್ಟೂ ಜೀವನ ಅತಂತ್ರವೇ.ವಿಶ್ವವಿಖ್ಯಾತರಾಗಲು ಮಾನವರ ಬುದ್ಧಿಶಕ್ತಿ ಹೊರಗೆ ಬೆಳೆದಿದೆ. ವಿದ್ವಾಂಸರು, ವಿಶ್ವವಿದ್ಯಾಲಯ ಗಳು ಹೊರಗಿನ ಶಿಕ್ಷಣ ಪಡೆದು ಪ್ರಸಿದ್ದರಾಗಿದ್ದರೂ ಅಜ್ಞಾನ ಮಿತಿಮೀರಿದೆ ಎಂದರೆ ನಮ್ಮ ದೃಷ್ಟಿ ಒಳಗಿಲ್ಲ ಹೊರಗಿದೆ. ದೈವತ್ವ ಒಳಗಿಲ್ಲವಾದರೆ ಶಕ್ತಿ ಕಾಣೋದಿಲ್ಲ. ಕಲಿಕೆಯು ಹೊರಗಿನ ಸತ್ಯದೆಡೆಗೆ ವೇಗವಾಗಿ ನಡೆದಿದೆ.ಇದರಿಂದ ಕಷ್ಟ ನಷ್ಟ ಯಾರಿಗೆ ಎಂದರೆ ಮಾನವರಿಗಷ್ಟೆ. ದೇವಾಸುರರ ನಡುವಿರುವ ಈ ಮನುಕುಲಕ್ಕೆ ವಿಶ್ವಶಕ್ತಿ ಒಂದು ಮಾಧ್ಯಮ. ಮಾಧ್ಯಮವನ್ನು ಸದ್ಬಳಕೆ ಮಾಡಿಕೊಳ್ಳದಿದ್ದರೆ ಕಾದಿದೆ ಸಂಕಷ್ಟ.
ತಾಯಂದಿರು ಎಷ್ಟು ಭ್ರಷ್ಟಾಚಾರಕ್ಕೆ ಸಹಕರಿಸುವರೋ ಅಷ್ಟು ಅಸುರರು ಆಳುವರು ಅಷ್ಟೇ ಅಧರ್ಮ ಹೆಚ್ಚುವುದು.ಎಲ್ಲಾ ಸ್ತ್ರೀ ಸಹಕಾರದಿಂದ ನಡೆದಾಗ ಅದರ ಫಲ ಸ್ತ್ರೀ ಅನುಭವಿಸೋದು.ಹೀಗಾಗಿ ಎಲ್ಲದ್ದಕ್ಕೂ ಸ್ತ್ರೀ ಕಾರಣವೆಂದರು. ಆದರೆ ಇದಕ್ಕೆ ಕಾರಣ ಸ್ತ್ರೀ ಗೆ ಸಿಗದ ಅಧ್ಯಾತ್ಮ ಶಿಕ್ಷಣ. ಇದು ಮನೆಮನೆಯ ಅಜ್ಞಾನಕ್ಕೆ ಕಾರಣ.
ಇಂತಹ ಹಲವಾರು ವಿಚಾರಗಳು ಪುರುಷರಿಂದ ಹೊರಬಂದರೆ ಸಾಕಷ್ಟು ಪ್ರಚಾರವಾದಂತೆ ಸ್ತ್ರೀ ಯರು ಹೊರ ಹಾಕಲು ಭಾರತದಂತಹ ಮಹಾದೇಶದಲ್ಲಿ ಕಷ್ಟವಿದೆ.ಕಾರಣ ಇಲ್ಲಿ ಸತ್ಯ ಧರ್ಮ ವ್ಯವಹಾರಕ್ಕೆ ಮಾತ್ರ ಸೀಮಿತವಾಗಿಟ್ಟುಕೊಂಡು ಸ್ತ್ರೀ ಯನ್ನು ಬಳಸಿಕೊಂಡು ರಾಜಕೀಯ ಬೆಳೆದಿದೆ.ರಾಜಯೋಗ ಹಿಂದುಳಿದಿದೆ. ಇದರ ಪರಿಣಾಮ ಭ್ರಷ್ಟಾಚಾರ ಹರಡಿಕೊಂಡಿದೆ. ಇದು ಸಾಧನೆ ಎಂದರೆ ಎಲ್ಲಾ ಮಹಾಸಾಧಕರೆ. ಭೌತಿಕದ ಸಾಧನೆಗೆ ಕಷ್ಟಪಡುವ ಅರ್ಧ ಭಾಗ ಅಧ್ಯಾತ್ಮ ಸಾಧನೆಗೆ ಬಳಸಿದರೆ ಮನುಕುಲದ ಉದ್ದಾರ ಸಾಧ್ಯವಿದೆ. ಕಲಿಗಾಲ ಎಲ್ಲಾ ಪಾಠ ಕಲಿಸುತ್ತಿದೆ. ಆಂತರಿಕ ಶುದ್ದಿಯಿಂದ ಆತ್ಮನಿರ್ಭರ ಭಾರತ.
No comments:
Post a Comment