ಮಾನವನ ಹಲವಾರು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲವಾದರೂ ಪ್ರಶ್ನೆ ಮಾಡೋದನ್ನು ಬಿಟ್ಟಿಲ್ಲ ಬಿಡೋದೂ ಇಲ್ಲ ಕಾರಣ ಮಾನವನ ಸಹಜ ಗುಣವೇ ಪ್ರಶ್ನೆ ಮಾಡಿ ತಿಳಿಯೋದು. ಪುರಾಣ ಇತಿಹಾಸ ವೇದಕಾಲದಿಂದಲೂ ಈ ಪ್ರಶ್ನೋತ್ತರ ಸರಮಾಲೆ ಹೆಣೆದುಕೊಂಡು ಬಂದಿದೆ. ಪ್ರಶ್ನೆಗೆ ಮಹಾತ್ಮರು ಕೊಟ್ಟ ಉತ್ತರ ಮಾನವನಿಗೆ ಅರ್ಥ ವಾಗಿಲ್ಲದಿರೋದೆ ದೊಡ್ಡ ಸಮಸ್ಯೆಗಳಿಗೆ ಕಾರಣವಾಗಿದೆ.
ಪ್ರಶ್ನೆ ಮಾನವರಿಗಷ್ಟೆ ಇರೋದು. ಸಮಸ್ಯೆಯೂ ಮನುಕುಲವೇ ಅನುಭವಿಸೋದು.ಹಿಂದೆ ಉತ್ತರ ದೇವರು ಕೊಡೋವಾಗ ಮಹಾತ್ಮರಾಗಿದ್ದರೆ ಅರ್ಥ ವಾಗುತ್ತಿತ್ತು ಕಷ್ಟ ಸಹಿಸಿಕೊಂಡು ದೈವತ್ವದೆಡೆಗೆ ಹೋಗುವ ಆತ್ಮಜ್ಞಾನವಿತ್ತು.ಇಲ್ಲಿ ಅಧ್ಯಾತ್ಮದ ಪ್ರಶ್ನೆಗೆ ಉತ್ತರ ಮಹಾತ್ಮರು ನೀಡಿದ್ದಾರೆ ಆದರೆ, ಅದರ ಅನುಭವವಾಗದೆ ಒಪ್ಪದವರ ಸಂಖ್ಯೆ ಮಿತಿಮೀರಿದರೆ ದೇವರಾದರೂಏನು ಉತ್ತರ ಕೊಡಬಹುದು? ಇಂತಹ ಪ್ರಶ್ನೆ ಸಾಮಾನ್ಯರನ್ನು ಕೇಳಿದರೆ ಇನ್ನಷ್ಟು ಗೊಂದಲ ದ್ವೇಷ ಬೆಳೆಯೋದು ಸತ್ಯ. ಒಟ್ಟಿನಲ್ಲಿ ಹೇಳುವುದಾದರೆ ಅದ್ವೈತ ದಲ್ಲಿ ದ್ವೈತ ದ ಪ್ರಶ್ನೆಯಿದೆ.ಕಾರಣ ಅಲ್ಲಿ ನಾನೆಂಬ ಅಹಂಬಾವ ಇದೆ. ಇದು ಹೋಗದೆ ಉತ್ತರ ಸಿಗದು. ಸಿಕ್ಕಿದವರು ಹೇಳಿದರೂ ಅರ್ಥ ವಾಗದು. ಅಧ್ಯಾತ್ಮದ ಪ್ರಶ್ನೆಗೆ ಉತ್ತರ ಅಧ್ಯಾತ್ಮದ ಲ್ಲಿಯೇ ಸಿಗೋದು. ಭೌತಿಕದ ಪ್ರಶ್ನೆಗೆ ಉತ್ತರ ಭೌತಿಕದಲ್ಲಿ ಸಿಗುತ್ತದೆ.
ಅದ್ವೈತ ದೊಳಗಿರುವ ದ್ವೈತ ನೋಡುತ್ತಿದ್ದರೆ ಅಧ್ವೈತ ಕಾಣೋದಿಲ್ಲ. ಅದ್ವೈತ ಎಂದರೆ ಒಂದು ಗೂಡಿಸಿ,ಸೇರಿಸಿ,ಕೂಡಿಸುವುದಾದರೆ ಈ ಕೆಲಸ ಮಾಡಲು ಭೌತವಿಜ್ಞಾನಕ್ಕಿಂತ ಅಧ್ಯಾತ್ಮ ವಿಜ್ಞಾನ ಅಗತ್ಯವಿದೆ. ಕೇವಲ ಪ್ರಶ್ನೆ ಯಾರೋ ಮಾಡಿದ್ದಾರೆ ನಾನೂ ಮಾಡುವೆ ಎನ್ನದೆ
ನನ್ನೊಳಗೇ ಸದಾ ಕಾಡುವ ಪ್ರಶ್ನೆಗೆ ಉತ್ತರ ತಿಳಿಯುವ ಜಿಜ್ಞಾಸೆ ಎಷ್ಟಿದೆ ಎನ್ನುವುದು ಮುಖ್ಯ. ಎಲ್ಲರಿಗೂ ಒಂದೇ ಪ್ರಶ್ನೆ ನಾನ್ಯಾರು? ಯಾಕೆ ಬಂದೆ? ಎಲ್ಲಿಗೆ ಹೋಗುವೆ? ಎಲ್ಲಿಂದ ಬಂದೆ?....ಇವು ಸಾಮಾನ್ಯವಾಗಿ ಹಿಂದಿನಿಂದಲೂ ಬಂದಿರುವ ಪ್ರಚಾರವಾಗಿರುವ ಪ್ರಶ್ನೆಗಳೆ ಆದರೂ ಇದಕ್ಕೆ ಉತ್ತರ ಕಂಡುಕೊಂಡವರು ವಿರಳ. ಅದನ್ನು ತಿಳಿಸಲು ಪ್ರಯತ್ನಪಟ್ಟವರಂತೂ ಅತಿವಿರಳ. ಕೇಳಿಸಿಕೊಂಡು ಉತ್ತರ ತನ್ನೊಳಗೆ ಕಂಡುಕೊಂಡವರು ಇಲ್ಲವೇ ಇಲ್ಲ.ಕಾರಣ ಪ್ರಶ್ನೆ ಒಂದೇ ಆದರೂ ಅದರ ಉತ್ತರ ಹಲವು.
ಶ್ರೀ ಶಂಕರಭಗವತ್ದಾದರಂತಹ ಮಹಾ ಸಂನ್ಯಾಸಿ, ವಿಶ್ವಗುರು
ಸರ್ವಜ್ಞ ರನ್ನೇ ಪ್ರಶ್ನೆ ಮಾಡುವಷ್ಟು ನಮ್ಮಲ್ಲಿ ಬುದ್ದಿವಂತಿಕೆ ಇದೆ ಆದರೆ ಜ್ಞಾನದ ಕೊರತೆ ಬಹಳಷ್ಟಿದೆ. "ಅಹಂ ಬ್ರಹ್ಮಾಸ್ಮಿ"
ನಾನೇ ಬ್ರಹ್ಮ ಎನ್ನುವುದೇ ದೊಡ್ಡ ವಾದ ವಿವಾದವಾಗಿ ಈಗ ಬ್ರಹ್ಮಾಂಡವೇ ನಾನು ಎನ್ನುವ ಹಂತಕ್ಕೆ ಮನಸ್ಸು ಹೊರನಡೆದಿರುವಾಗ ಆಂತರಿಕವಾಗಿರುವ ಒಂದೇ ಸತ್ಯದ ಕಡೆಗೆ ಹೋಗುವುದು ಕಷ್ಟ. ನಾವೇ ಸೃಷ್ಟಿ ಮಾಡಿಕೊಂಡ ಮಂತ್ರ ತಂತ್ರ ಯಂತ್ರವು ನನ್ನನ್ನೇ ಆಳುತ್ತಿದೆ ಎಂದರೆ ನನಗೆ ಸ್ವತಂತ್ರ ಎಲ್ಲಿದೆ? ನಾನೆಂಬುದಿಲ್ಲವಾಗಿದ್ದರೆ ಒಳಗಿರುವ ನಾನು ಯಾರು? ನಾನೇ ಪರಮಾತ್ಮನಾದರೆ ಯಾಕಿಷ್ಟು ಅಧರ್ಮ, ಅನ್ಯಾಯ ಭ್ರಷ್ಟಾಚಾರ? ಹೀಗೇ ಪ್ರಶ್ನೆಗಳು
ನಮಗೆ ಗೊಂದಲ ಸೃಷ್ಟಿ ಮಾಡುವ ಕಾರಣ ಒಂದೇ ಪ್ರಶ್ನೆಗೆ ಅವರವರೆ ಒಳಹೊಕ್ಕಿ ಉತ್ತರ ಕಂಡುಕೊಂಡರೆ ಅದ್ವೈತ ವಾಗುತ್ತದೆ ಎನ್ನುವಕಾರಣಕ್ಕಾಗಿ ಉತ್ತರವಿದ್ದರೂ ಹೇಳದೆ ಕೇಳದೆ ಮುಂದೆ ನಡೆದರು.
ಇದು ಎಷ್ಟು ಮಂದಿಗೆ ತಿಳಿಯಿತೋ ಇಲ್ಲವೋ ಗೊತ್ತಿಲ್ಲ ಕಾರಣ ನನಗೆ ತಿಳಿದದ್ದು ಇಷ್ಟೆ. ಅದಕ್ಕೆ ವಾದ ವಿವಾದಕ್ಕೆ ನಿಲುಕದ ತತ್ವವೇ ಅದ್ವೈತ ವಾಗಿದೆ. ವಾದ ಮಾಡಲು ಹೋದರೆ ಕಷ್ಟ ನಷ್ಟ ಎರಡೂ ಹೆಚ್ಚುವುದು.
ಮೌನವಾದಷ್ಟು ಪ್ರಶ್ನೆ ಕಡಿಮೆ ಉತ್ತರ ಒಳಗೆ ಸಿಗುವುದಂತೆ.
ಅದಕ್ಕೆ ನಮ್ಮ ಮಹಾತ್ಮರು ಮೌನ ಬಂಗಾರವೆಂದರು. ಈಗ ಮೌನವಾದವರನ್ನೂ ಬಿಡದೆ ಪ್ರಶ್ನೆ ಕೇಳಿ ಮಾತಿಗೆಳೆಯುತ್ತಾರೆ. ಮಾತಿಗಿಂತ ಕೃತಿಯೇ ಮೇಲೆಂದರು. ಕೃತಿಚೌರ್ಯ ಮಾಡಿ ಮಾನವನಿಗೆ ಪ್ರಶ್ನೆ ಮೇಲೆ ಪ್ರಶ್ನೆ ಬೆಳೆದು ಉತ್ತರಕ್ಕಾಗಿ ಹೊರಗೆ ಹುಡುಕುವುದರಲ್ಲಿಯೇ ಜೀವನ ಮುಗಿದಿದೆ. ಆದರೆ ಸರಿಯಾದ ಉತ್ತರ ಒಳಗಿತ್ತು ಹೊರಗೆ ಹುಡುಕಿ ಸೋಲುತ್ತಿರುವುದು ಭೌತಿಕವಿಜ್ಞಾನದ ಪ್ರಭಾವ. ಅದರಿಂದ ಹಿಂದೆ ಬಂದು ಅಧ್ಯಾತ್ಮ ವಿಜ್ಞಾನದಲ್ಲಿ ಆತ್ಮಾವಲೋಕನ ಮಾಡಿಕೊಂಡರೆ ಉತ್ತರ ಸಿಕ್ಕಿದಹಾಗೇ. ಇದಕ್ಕೆ ಯಾವ ರಾಜಕೀಯದ ಹಂಗಿಲ್ಲ.
No comments:
Post a Comment