ಕೊಟ್ಟು ಕೆಟ್ಟ ಮುಟ್ಟಿ ಕೆಟ್ಟ ಎಂದು ಕರ್ಣ ಮತ್ತು ರಾವಣರಿಗೆ ಹೇಳುತ್ತಾರೆ.
ಇಲ್ಲಿ ದಾನ ಶೂರಕರ್ಣ ನಿಗೆ ಕೊನೆಗೆ ಪಟ್ಟಕಟ್ಟಿದ್ದು ಕೊಟ್ಟು ಕೆಟ್ಟ ಅಂತ.ರಾವಣನಂತಹ ಮಹಾಶೂರ ಮಹಾಶಿವಭಕ್ತನೂ ಮುಟ್ಟಿ ಕೆಟ್ಟ ಎನ್ನುವ ಪಟ್ಟಿಗೆ ಸೇರಿದ.ಭೂಮಿಗೆ ಬಂದ ಮೇಲೇ ಇಲ್ಲಿ ಕೊಟ್ಟಿದ್ದು ಮುಟ್ಟಿದೆಲ್ಲವೂ ಕೆಟ್ಟಪರಿಣಾಮ ಬೀರುತ್ತದೆಂದರೆ ಸರಿಯೆ? ಒಂದರ್ಥದಲ್ಲಿ ಇಲ್ಲಿ ಯಾರೂ ಬರೋವಾಗ ತಂದಿರೋದಿಲ್ಲ ಹೋಗುವಾಗ ಕೊಂಡೂ ಹೋಗಲ್ಲ. ಪಾಪ ಪುಣ್ಯಗಳ ಫಲವಷ್ಟೆ ಜೊತೆಗೆ ನಡೆಯೋದು.ಹೀಗಿರುವಾಗ ಯಾರದ್ದೂ ಹಣವನ್ನಾಗಲಿ ಆಸ್ತಿಯನ್ನಾಗಲಿ,ಅಧಿಕಾರವನ್ನಾಗಲಿ ,ಹೆಸರನ್ನಾಗಲಿ ನಮ್ಮದು ಎಂದರೆ ಪಾಪದ ಕರ್ಮ. ನಮ್ಮದೇನಿದ್ದರೂ ನಾವೇ ಕಷ್ಟಪಟ್ಟು ಸಂಪಾದಿಸಿರಬೇಕು.ಅದನ್ನು ಸದ್ಬಳಕೆ ಮಾಡಿ ಕೊಟ್ಟಿರಬೇಕು ಸಾತ್ವಿಕತೆಯಿರಬೇಕೆನ್ನುವರು. ಇಲ್ಲಿ ರಾಜಸೀಕತೆಯಲ್ಲಿ ಕೊಡುವುದು ಪಡೆಯುವುದು ವ್ಯವಹಾರವಷ್ಟೆ ಧರ್ಮ ವಾಗದು. ಕರ್ಣನ ಉತ್ತಮಗುಣವೆ ದಾನ ಮಾಡುವುದಾಗಿತ್ತು.ಆದರೆ ಅವನಿಗೆ ಸ್ವಂತದ ದುಡಿಮೆಯ ಯಾವುದೇ ಆಸ್ತಿಯಿರದೆ ದುರ್ಯೋಧನನ ಸಹಾಯದಿಂದ ಅಧಿಕಾರ ಪಡೆದು ಅವನ ರಾಜ್ಯದಲ್ಲಿ ದ್ದು ದಾನ ಮಾಡಿದ ಕಾರಣ ದಾನದ ಫಲ ದುರ್ಯೋಧನ ನಿಗೂ ಸಿಗುತ್ತಿತ್ತು. ಆದರೆ ಕೌರವರಲ್ಲಿದ್ದ ಅಧರ್ಮ ಹೆಚ್ಚಾದಂತೆಲ್ಲಾ ಕರ್ಣನ ಸಹಕಾರವೂ ಅನಿವಾರ್ಯ ವಾಗಿ ದುಷ್ಟರಿಗೆ ರಕ್ಷಣೆ ಕೊಟ್ಟರೆ ಮಹಾ ಪಾಪ ಎಂದಂತೆ ಕೊನೆಯಲ್ಲಿ ವಿನಾಶದ ಯುದ್ದ ನಡೆಯಿತು.
ಪುರಾಣ ಕಥೆ ಕೇಳುವಾಗ ಹೇಳುವಾಗ ಅದರಲ್ಲಿನ ಧರ್ಮ ಸೂಕ್ಷ್ಮ ತಿಳಿದರೆ ಈಗಲೂ ಪಾಂಡವಕೌರವರ ಗುಣಗಳು ನಮ್ಮಲ್ಲಿದೆ.ಎಲ್ಲಾ ದಾನ ಧರ್ಮಗಳೂ ನಡೆದಿದೆ.ಆದರೆ ಅದರ ಮೂಲ ಧನ ಭ್ರಷ್ಟಾಚಾರ ಆಗಿದ್ದರೆ ಭ್ರಷ್ಟಾಚಾರಕ್ಕೆ ಬಲ. ಹೀಗಾಗಿ ಮಾನವರು ನಾವೆಷ್ಟೇ ಸಂಪತ್ತು ಗಳಿಸಿದರೂ
ಅದರಲ್ಲಿ ಸತ್ವ,ಸತ್ಯ,ತತ್ವವಿಲ್ಲವಾಗಿದ್ದರೆ ಅದರ ಪ್ರತಿಫಲ ತಿರುಗಿ ಬರುತ್ತದೆ .ಇದು ಮಕ್ಕಳು ಮೊಮ್ಮಕ್ಕಳ ಕಾಲದವರೆಗೂ ಹೋಗುವ ಮೊದಲು ನಮ್ಮ ಸಂಪತ್ತನ್ನು ಸತ್ಕರ್ಮಕ್ಕೆ ಸ್ವಧರ್ಮ ಕಾರ್ಯಕ್ಕೆ ಸದ್ವಿನಿಯೋಗ ಮಾಡಿದರೆ ಪುಣ್ಯಸಂಚಯವಾಗಿ ಋಣಮುಕ್ತರಾಗಬಹುದು. ಭೌತಿಕದ ಆಸ್ತಿ ಅಂತಸ್ತು ನಮ್ಮ ಪುಣ್ಯಕಾರ್ಯದಿಂದ ಬೆಳೆಯುವುದು ಭಗವಂತನ ಬಿಕ್ಷೆ. ಆ ಬಿಕ್ಷೆಯನ್ನು ಸದ್ವಿನಿಯೋಗ ಮಾಡುವ ಜ್ಞಾನವಿದ್ದರೆ ಯಾವುದೇ ದಾನವಿರಲಿ ದಾನವರಿಗೆ ಮಾಡದೆ ಸತ್ಪಾತ್ರರಿಗೆ ಮಾಡಬಹುದು. ಆಗ ಆತ್ಮಕ್ಕೆ ತೃಪ್ತಿ ಶಾಂತಿ ಮುಕ್ತಿ ಸಿಗುವುದು. ದೇಶದ ತುಂಬಾ ಶ್ರೀಮಂತ ರಿದ್ದರೂ ದೇಶದ ಸಾಲ ತೀರಿಸಲಾಗದೆ ವಿದೇಶದ ಸಾಲಕ್ಕೆ ಕೈಚಾಚಿದರೆ ಅಧರ್ಮ, ಭ್ರಷ್ಟಾಚಾರವಾಗುತ್ತದೆನ್ನುವರು.
ಅತಿಯಾದ ಆಸ್ತಿ ಮಾಡಿಡುವ ಬದಲಾಗಿ ಮಕ್ಕಳಿಗೆ ಉತ್ತಮ ಜ್ಞಾನಸಂಸ್ಕಾರದ ಶಿಕ್ಷಣ ನೀಡಿದರೆ ಅವರು ದೇಶದ ಆಸ್ತಿ ಆಗುವರಲ್ಲವೆ? ದೇಶದೊಳಗೆ ನಾವಿರುವಾಗ ನಾವು ಬೇರೆ ದೇಶ ಬೇರೆಯೆ? ದೇಶದಿಂದ ಪಡೆದದ್ದು ತೀರಿಸುವ ಜ್ಞಾನ ಪ್ರಜೆಗಳಿಗೆ ಅಗತ್ಯವಾಗಿತ್ತು. ದೇಶರಕ್ಷಕರ ಸಂಖ್ಯೆ ಬೆಳೆಯಲು ದೇಶೀಯ ಜ್ಞಾನದ ಶಿಕ್ಷಣ ಕೊಡುವುದು ಪ್ರಜಾಧರ್ಮ.
ಯಾರದ್ದೋ ಹಿಂದೆ ಬೇಡುವ ಬದಲಾಗಿ ನಮ್ಮಲ್ಲೇ ಇರುವ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡರೆ ಅದನ್ನು ಯಾರೂ ಕದಿಯಲಾಗದು. ಜ್ಞಾನವೇ ನಿಜವಾದ ಆಸ್ತಿ. ಜ್ಞಾನವನ್ನು ದಾನ ಮಾಡಿದರೂ ಇನ್ನಷ್ಟು ಬೆಳೆಯುತ್ತದೆ. ಆದರೆ ಹಣ ದಾನ ಮಾಡುವಾಗ ಅದರ ಮೂಲ ತಿಳಿಯುವುದು ಅಗತ್ಯ.ಹಾಗೇ ಯಾರಿಗೆ ದಾನ ಮಾಡಬೇಕೆಂಬುದರ ಅರಿವು ಅಗತ್ಯವೆಂದಿರುವರು. ಮಂತ್ರ ತಂತ್ರ ಯಂತ್ರ ವಿದ್ಯೆಯಿಂದ ಸ್ವತಂತ್ರ ಜ್ಞಾನ ಬೆಳೆದರೆ ಉತ್ತಮ. ಅತಂತ್ರಸ್ಥಿತಿಗೆ ಹೋದರೆ ಅಧಮ. ದುರ್ಭಳಕೆ ಮಾಡಿಕೊಂಡರೆ ಜೀವನ ಅತಂತ್ರಸ್ಥಿತಿಗೆ ತಲುಪುತ್ತದೆನ್ನುವ ಕಾರಣಕ್ಕಾಗಿ ಎಷ್ಟೋ ಪವಿತ್ರ ಮಂತ್ರ ಪ್ರಚಾರಕ್ಕೆ ಬಂದಿರಲಿಲ್ಲ. ಪವಿತ್ರತೆ ಕಾಪಾಡುವುದು ಕಷ್ಟ.
ಏನೇ ಇರಲಿ ದಾನ ಮಾಡುವಷ್ಟು ಸಂಗ್ರಹ ಮಾಡಬಾರದು.
ಕಾರಣ ಹೆಚ್ಚು ಸಂಗ್ರಹಣೆ ಮಾನವನಿಗೆ ಕಷ್ಟಕೊಡುತ್ತದೆ.
ಸಂಸಾರಿಗಳಿಗೆ ಅನಿವಾರ್ಯ ವಾದರೂ ಸಂನ್ಯಾಸಿಗಳಿಗೆ ಅಗತ್ಯವಿರಲಿಲ್ಲ. ಜ್ಞಾನ ಹೆಚ್ಚಾದರೆ ಅಭಿವೃದ್ಧಿ. ಅದು ಅಧ್ಯಾತ್ಮ ಜ್ಞಾನವಾಗಿರಬೇಕೆನ್ನುವುದೇ ಹಿಂದೂ ಧರ್ಮ.
ಜ್ಞಾನದಿಂದ ಶಾಂತಿ ಸಿಗುವುದು ಭೌತಿಕ ಜ್ಞಾನ ಹೆಚ್ಚಾದಂತೆ ಅಶಾಂತಿಯೇ ಹೆಚ್ಚಾಗಿದೆ ಎಂದರೆ ಆಂತರಿಕ ಶುದ್ದಿಯಾಗದ ದಾನ ಧರ್ಮದಿಂದ ಉಪಯೋಗವಿಲ್ಲವೆಂದರ್ಥ. ನಿಸ್ವಾರ್ಥ ನಿರಹಂಕಾರದಿಂದ ಪ್ರತಿಫಲಾಪೇಕ್ಷೆ ಯಿಲ್ಲದ ದಾನವೇ ಶ್ರೇಷ್ಠ ಎಂದರು. ದೇಶದ ಭವಿಷ್ಯ ನಿರ್ಧಾರ ಮಾಡುವ ಮತದಾನ
ಎತ್ತ ಸಾಗಿದೆ?
No comments:
Post a Comment