ಅಂತೂ ಇಂತೂ ಫಲಿತಾಂಶ ಬಂತು. ಮೇಲೇರಿದಂತೆಲ್ಲಾ ಕೆಳಗಿನವರು ಕಾಣೋದಿಲ್ಲ.ಕೆಳಗಿಳಿದ್ದವರಿಗೆ ಮೇಲೇರಲು ಮಧ್ಯವರ್ತಿಗಳು ಬಿಡೋದಿಲ್ಲ. ಈ ಮಧ್ಯವರ್ತಿಗಳ ಕುತಂತ್ರದಿಂದ ಅತಂತ್ರಸ್ಥಿತಿಗೆ ಜನಜೀವನ ನಿಲ್ಲದಿರೋದು ಒಂದು ಸಮಾಧಾನಕರ ವಿಷಯ. ಚುನಾವಣಾ ಫಲಿತಾಂಶ ಯಾವ ಪಕ್ಷಕ್ಕಾದರೂ ಸೋಲಾಗಲಿ ಗೆಲುವಾಗಲಿ ಇದು ಜನರ ಜೀವನದ ಮೇಲಾಗುವ ಪರಿಣಾಮ ಮಾತ್ರ ನಿರಂತರವಿರುತ್ತದೆ.ಕಾರಣ ಒಂದೇ ದೇಶದಲ್ಲಿ ಪಕ್ಷಪಾತಕ್ಕೆ ಸಹಕರಿಸಿ ಬೆಳೆಸಿ ಕೊನೆಗೆ ಪಕ್ಷವೇ ನಮ್ಮನ್ನು ಪಾತಾಳಕ್ಕೆ ತಳ್ಳಿ ಹೋದರೆ ಇದರ ನಷ್ಟ ಯಾವ ರಾಜಕಾರಣಿಗಳಿಗಲ್ಲ. ಇದು ಪ್ರಜಾಪ್ರಭುತ್ವಕ್ಕೆ ಆದನಷ್ಟ. ಮತದಾನವೇ ಮಾಡದ ಶೇ50 ರಷ್ಟು ಜನಸಂಖ್ಯೆಗೆ ದೇಶ ಬೇಕು ಧರ್ಮ ಬೇಡವೆಂದರೆ ಇನ್ನುಳಿದ 50% ಜನ ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆದು ಬದುಕುತ್ತೇವೆಂದರೆ ಗೆದ್ದವರು ಯಾರು? ಸೋತವರು ಯಾರು?
ಎಲ್ಲಿ ಧರ್ಮ ವಿರುವುದೋ ಅಲ್ಲಿ ಜಯವಿರುತ್ತದೆ ಎಂದರೆ ಇಲ್ಲಿ ಮತದಾನವೇ ಆಗಿಲ್ಲ ಮತಬೇಟೆ ಎಲ್ಲಾ ಪಕ್ಷಗಳೂ ಮಾಡಿಕೊಂಡು ಜನರನ್ನು ದಾರಿತಪ್ಪಿಸಿ ದ್ದಾರೆ..ಧರ್ಮ ವೇ ಇಲ್ಲದೆ ಜಯ ಹೇಗೆ ಸಿಕ್ಕಿದೆ? ಇದರಲ್ಲೂ ಕೆಲವು ಸೂಕ್ಮವಿದೆ.
ಯಾವುದೇ ಪಕ್ಷದವರಾಗಲಿ ತಮ್ಮ ಅವಧಿಯಲ್ಲಿ ಜನಪರ ಕಾರ್ಯಕ್ರಮ ನಡೆಸಿಕೊಂಡು ಜನರನ್ನು ಸೆಳೆಯುವ ಕೆಲಸ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಸರಿಯಾದದ್ದೆ. ಜನಬಲ ಇಲ್ಲದೆ ಯಾರೂ ಗೆದ್ದಿಲ್ಲ ಅಂದರೆ ಜನರ ಸಹಕಾರವೇ ಇಷ್ಟು ವರ್ಷದ ಪಕ್ಷಗಳನ್ನು ನಡೆಸಿದೆ. ಈಗಲೂ ಇವರ ಸಹಕಾರವೆ ಬೆಳೆದಿದೆ.ಇದರೊಂದಿಗೆ ದೇಶದಲ್ಲಿ ಅಧರ್ಮ, ಅನ್ಯಾಯ ಅಸತ್ಯದ ಭ್ರಷ್ಟಾಚಾರ ಮುಗಿಲುಮುಟ್ಟಿದೆ. ವಿದೇಶಿ ವಿಜ್ಞಾನ ಮಿತಿಮೀರಿ ಬೆಳೆದಿದೆ ಎಂದರೆ ಇದರಲ್ಲಿ ಪ್ರಜಾಧರ್ಮ ಎಲ್ಲಿದೆ?
ಒಂದು ದೇಶದ ಪ್ರಜೆಯಾಗಿದ್ದು ತನ್ನ ಮೂಲ ಧರ್ಮ ಕರ್ಮ ಬಿಡದೆ ಸ್ವತಂತ್ರವಾಗಿ ಸಂಸಾರದಜೊತೆಗೆ ಸಮಾಜದ ಸ್ವಾಥ್ಯಕಾಪಾಡಿಕೊಳ್ಳಲು ಆತ್ಮಜ್ಞಾನದಿಂದ ಮಾತ್ರ ಸಾಧ್ಯ ಎನ್ನುವುದು ಭಾರತದ ಹಿಂದಿನ ಸನಾತನ ಧರ್ಮದ ಮುಖ್ಯ ಉದ್ದೇಶವಾಗಿತ್ತು. ಇದನ್ನು ತತ್ವದಿಂದ ಬೆಳೆಸುವುದೇ ಧರ್ಮ.
ವಾಸ್ತವದಲ್ಲಿ ತತ್ವವಿಲ್ಲದ ತಂತ್ರವು ಜನರನ್ನು ಆಳುತ್ತಿದೆ. ಜನಜೀವನ ಅತಂತ್ರಸ್ಥಿತಿಗೆ ತಲುಪಿ ತಮ್ಮವರನ್ನೇ ದ್ವೇಷ ಮಾಡುತ್ತಾ ದೂರ ಮಾಡುತ್ತಾ, ಆಳಲು ಹೊರಟರೆ ಅಧರ್ಮ.
ಇದಕ್ಕೆ ಸರಿಯಾದ ಫಲಿತಾಂಶವೂ ಕಣ್ಣಿಗೆ ಕಾಣುತ್ತಿದೆ. ಇಲ್ಲಿ ಯಾರದ್ದು ತಪ್ಪು ಯಾರದ್ದು ಸರಿ ಎನ್ನುವ ವಾದ ವಿವಾದ ಮಾಡಿಕೊಂಡು ಅರ್ಧ ಸತ್ಯಹಿಡಿದ ಮಧ್ಯವರ್ತಿಗಳು ತಮ್ಮ ಬೇಳೆ ಬೇಯಿಸಿಕೊಂಡು ದೇಶವನ್ನು ವಿದೇಶ ಮಾಡಿದರೆ ಇವರಿಗಿಂತ ದುಷ್ಟರು ಯಾರೂ ಇಲ್ಲ.
ಪ್ರಚಾರಕರಿಗೆ ಅತಿಯಾದ ಸ್ವಾತಂತ್ರ್ಯ ವಿರೋವಾಗ ಅವರು ಧರ್ಮದ ಪ್ರಕಾರ ಸತ್ಯದ ಪ್ರಕಾರ ಜ್ಞಾನದಿಂದ ವಾಸ್ತವಸ್ಥಿತಿ ಅರ್ಥ ಮಾಡಿಕೊಂಡು ಜನರನ್ನು ದಾರಿತಪ್ಪದಂತೆ ಮಾಡಿದರೆ ಅದು ನಿಜವಾದ ದೇಶಭಕ್ತಿ. ವ್ಯವಹಾರಕ್ಕೆ ಸೀಮಿತವಾಗಿಟ್ಟುಕೊಂಡ ತಂತ್ರದಿಂದ ಸಾಕಷ್ಟು ಕುತಂತ್ರ ಬೆಳೆದು ಜೀವನವೇ ಅತಂತ್ರಸ್ಥಿತಿಗೆ ಬಂದರೂ ನಾವು ಮಾತ್ರ ಸ್ವತಂತ್ರ ರು ಎಂದುಕೊಂಡರೆ ಅಜ್ಞಾನವಷ್ಟೆ.
ಯಾರನ್ನೂ ಯಾರೋ ಆಳೋದಕ್ಕೆ ರಾಜಪ್ರಭುತ್ವ ವೆ?
ಇಲ್ಲಿ ಭೂಮಿ ಮೇಲಿರುವ ಮನುಕುಲ ತನ್ನ ಅಸ್ತಿತ್ವಕ್ಕೆ ತಾನೇ ಹೋರಾಟಮಾಡುವ ಪರಿಸ್ಥಿತಿ ಬರಲು ಕಾರಣವೇ ಪರಾವಲಂಬನೆಯ ಜೀವನ.
ಸರ್ಕಾರ ನನ್ನ ಸಂಸಾರ ಸಮಾಜ,ಶಿಕ್ಷಣ, ಜೀವನ ನೋಡಿಕೊಳ್ಳುವುದೆಂದರೆ ನನ್ನ ಕೆಲಸವೇನಿದೆ? ನಾನ್ಯಾಕೆ ಇಲ್ಲಿರೋದು? ನನ್ನೊಳಗಿರುವ ಆತ್ಮಶಕ್ತಿ ಯಾರಿಗೆ ಉಪಯೋಗವಾಗಿದೆ? ಸೋಮಾರಿಯ ಜೊತೆಗೆ ಮಾರಿ ಇರೋವಾಗ ಒಳಗೆ ಸೇರಿದರೆ ಅದನ್ನು ಹಣದಿಂದ ಹೊರಗೆ ತರಲಾಗುವುದೆ? ಮಾನವನ ಜನ್ಮಕ್ಕೆ ಕಾರಣವಾಗಿರುವ ಋಣಮತ್ತು ಕರ್ಮದ ಬಗ್ಗೆ ದೊಡ್ಡದಾಗಿ ಪ್ರಚಾರ ಮಾಡುವುದು ಸುಲಭ.ಆದರೆ , ಋಣ ತೀರಿಸಲು ನಡೆಯಬೇಕಾದ ದಾರಿಯಲ್ಲಿ ನಡೆಯುವುದೇ ಕಷ್ಟ. ಮುಳ್ಳು ಕಲ್ಲುಗಳಿವೆಯೆಂದು ಚಪ್ಪಲಿ ಹಾಕಿಕೊಂಡರೂ ಚಪ್ಪಲಿ ತಯಾರಿಸುವವನಲ್ಲಿರುವ ಪರಮಾತ್ಮನ ಕಾಣುವ ಜ್ಞಾನವಿರಬೇಕಷ್ಟೆ.ತಲೆಯಲ್ಲಿ ಸಾಕಷ್ಟು ಪುರಾಣ ಇತಿಹಾಸ ಜ್ಞಾನವಿದ್ದರೂ ವಾಸ್ತವತೆಯನ್ನು ಅನುಭವಿಸಿ ಸತ್ಯ ತಿಳಿಯುವುದು ಅಗತ್ಯವಿದೆ.ಇವೆಲ್ಲದ್ದಕ್ಕೂ ಸ್ವಯಂ ಪ್ರಯತ್ನ ಬೇಕು.ಇದು ಪ್ರಜಾಪ್ರಭುತ್ವದ ಪ್ರಜಾಶಕ್ತಿಯನ್ನು ಸಧೃಢಗೊಳಿಸಿ ದೇಹದ ಜೊತೆಗೆ ದೇಶವೂ ಗಟ್ಟಿಯಾಗಿ ಸ್ವತಂತ್ರ ಜ್ಞಾನ ಹೆಚ್ಚುವುದು.ಹಿಂದೆ ಯಾರೋ ಹೇಳಿದ್ದು ಕೇಳಿದ್ದು ನಡೆದದ್ದು ಪ್ರಚಾರ ಮಾಡುವಾಗ ಈಗೆಷ್ಟು ಸಾಧ್ಯ ಎನ್ನುವ ಸತ್ಯ ತಿಳಿಯುವುದೇ ಜ್ಞಾನಿಗಳ ಲಕ್ಷಣ.
ಎಲ್ಲಾ ಇದೆ ಆದರೂ ಶಾಂತಿಯಿಲ್ಲ ಎಂದರೆ ಒಳಗಿನ ಶಾಂತಿಗೆ ಹೊರಗಿನ ರಾಜಕೀಯ ಮದ್ದಲ್ಲ. ರಾಜಕೀಯತೆಯು ಮನೆ ಮನೆಯೊಳಗೆ ಹರಡಿರುವಾಗ ಒಳಗಿದ್ದ ರಾಜಯೋಗ ಮೇಲೆ ಏಳಲಾಗದೆ ಹಿಂದುಳಿಯುತ್ತದೆ. ಹಿಂದೂ ಧರ್ಮ ಹಿಂದುಳಿಯಲು ಹಿಂದೂಗಳ ಬಿಕ್ಕಟ್ಟು ಕಾರಣವಾದಾಗ ಹೊರಗಿನವರ ಒಗ್ಗಟ್ಟನ್ನು ದ್ವೇಷ ಮಾಡಿದರೆ ಪರಿಹಾರವಲ್ಲ.
ಹಾಗಾಗಿ ಪಕ್ಷ ಪಕ್ಷಗಳ ನಡುವಿನಬಿಕ್ಕಟ್ಟು ಮೂರನೆಯವರಿಗೆ ಲಾಭವಾದರೂ ನಮ್ಮವರಿಗೇ ನಷ್ಟ. ದೇಶ ಆಳೋದಕ್ಕೆ ಬೇಕಾದ ಜ್ಞಾನ ಬಹಳ ಮುಖ್ಯ.ಜ್ಞಾನದಿಂದ ಹಣಸಂಪಾದನೆ. ಆ ಹಣವನ್ನು ದಾನ ಧರ್ಮಕ್ಕೆ ಬಳಸಿದರೆ ಧರ್ಮ ರಕ್ಷಣೆ.
ಇದು ಬಿಟ್ಟು ಭ್ರಷ್ಟಾಚಾರ ದ ಹಣ ಬಳಸಿದರೆ ಭ್ರಷ್ಟಾಚಾರ ಬೆಳೆಯುತ್ತದೆ. ಮನೆ ಮನೆಗೆ ಮತಬೇಟೆ ಮಾಡಲು ಬಳಸಿದ ಭ್ರಷ್ಟರ ಹಣದಲ್ಲಿ ಪಕ್ಷಗಳು ಗೆದ್ದರೂ ಅದರ ಪ್ರತಿಫಲ ಮಾತ್ರ ಹಣಪಡೆದ ಪ್ರಜೆಗಳೇ ಅನುಭವಿಸಬೇಕೆ ಹೊರತು ಯಾವ ಪಕ್ಷದ ನಾಯಕನಲ್ಲ. ಸೋಲುಗೆಲುವು ತಾತ್ಕಾಲಿಕ ವಷ್ಟೆ. ಆದರೆ ನಾವು ಮಾಡುವ ದಾನ ಧರ್ಮದ ಫಲ ಶಾಶ್ವತ.
ಅಧರ್ಮಕ್ಕೆ ಸಹಕರಿಸಿದಷ್ಟೂ ಅಧರ್ಮ ಬೆಳೆಯುತ್ತದೆ. ಇಲ್ಲಿ ಯಾವ ಪಕ್ಷ ಧರ್ಮ ದಲ್ಲಿದೆ ಎನ್ನುವ ಬದಲು ಪ್ರಜೆಗಳೆಷ್ಟು ಧರ್ಮ ಮಾರ್ಗದಲ್ಲಿರುವೆಂದು ಪ್ರಶ್ನೆ ಮಾಡಿಕೊಂಡರೆ ಅವರ ಆತ್ಮರಕ್ಷಣೆ ಸಾಧ್ಯ. ಆತ್ಮನಿರ್ಭರ ಭಾರತ ಆಧ್ಯಾತ್ಮ ದಿಂದ ಸಾಧ್ಯ ಎನ್ನುವುದು ಸತ್ಯ. ರಾಜಕೀಯದಲ್ಲಿ ಅಧ್ಯಾತ್ಮ ಇದೆಯೆ?
ಒಂದೇ ದೇಶವನ್ನು ಒಡೆದು ಆಳುವುದರಲ್ಲಿ ತತ್ವವಿದೆಯೆ?
ಪರಕೀಯರ ಬಂಡವಾಳ ಸಾಲ, ವ್ಯವಹಾರಕ್ಕೆ ಕೈ ಜೋಡಿಸಿ
ನಮ್ಮವರಲ್ಲಿ ದ್ವೇಷ ಹೆಚ್ಚಿಸಿದರೆ ಧರ್ಮ ವೆ?
ಹಣದಿಂದ ಸಾಲ ತೀರುವುದೆ ಜ್ಞಾನದಿಂದ ತೀರಿಸಬೇಕೆ?
ತತ್ವದಲ್ಲಿರುವ ಸತ್ಯ ತಂತ್ರದಲ್ಲಿದೆಯೆ?
ಭಾರತೀಯರಲ್ಲಿ ಭಾರತೀಯ ತತ್ವವಿದೆಯೆ? ತಂತ್ರವಿದೆಯೆ?
ವಿದೇಶಿಯತೆ ಶಿಕ್ಷಣದಲ್ಲಿಯೇ ಹೆಚ್ಚಾಗಿರುವಾಗ ಯಾರನ್ನು ಯಾರು ಆಳುತ್ತಿರುವುದು?
ಧಾರ್ಮಿಕ ಸಂಘಟನೆಗಳು ಧರ್ಮವನ್ನು ಉಳಿಸುವ ಶಿಕ್ಷಣ ನೀಡಿರುವರೆ? ರಾಜಯೋಗವಿದೆಯೆ? ರಾಜಕೀಯವೆ?
ಪರಮಾತ್ಮನ ಕಂಡವರೆಷ್ಟು ಪರದೇಶ ಕಂಡವರೆಷ್ಟು?
ಆತ್ಮವಿಮರ್ಷೆ ಅಧ್ಯಾತ್ಮದ ಪ್ರಗತಿಯಾದರೆ ಆತ್ಮವಂಚನೆಯೇ ಭೌತಿಕದಲ್ಲಿ ಅಧೋಗತಿ. ಒಟ್ಟಿನಲ್ಲಿ ಮಾನವ ತನ್ನ ಆತ್ಮಸಾಕ್ಷಿಯಂತೆ ನಡೆಯುವ ಸಂಪೂರ್ಣ ಸ್ವಾತಂತ್ರ್ಯ ವಿದ್ದರೂ ಹೊರಗಿನ ಶಿಕ್ಷಣ,ಧರ್ಮ ರಾಜಕೀಯದ ವಶಕ್ಕೆ ಮಕ್ಕಳು ಮಹಿಳೆಯರು ಬಲಿಪಶುಗಳಾಗಿ ಸಂಸಾರದ ಸಮಸ್ಯೆಗಳು ಮಿತಿಮೀರಿಬೆಳೆಯಲು ಕಾರಣ ಅಜ್ಞಾನದ ನಡೆ ನುಡಿ. ಪರಮಾತ್ಮನ ಇಚ್ಚೆಯಿಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲ್ಲಾಡದು ಎಂದರೆ ಪರಮಾತ್ಮ ಇರೋದು ಎಲ್ಲಿ ಎನ್ನುವ ಸತ್ಯ ಮಾನವ ತಿಳಿದರೆ ನಿಜವಾದ ಜೀವನಕ್ಕೆ ಅರ್ಥ ವಿರುತ್ತದೆ. ಇಲ್ಲಿ ಎಲ್ಲರಲ್ಲಿಯೂ ಜೀವವಿದೆ ಹಾಗಂತ ಎಲ್ಲರಲ್ಲಿಯೂ ಆತ್ಮಜ್ಞಾನವಿಲ್ಲ. ಆಂತರಿಕ ಶುದ್ದಿ ಆಗದೆ ಮುಕ್ತಿ ಸಿಗದು. ಸರ್ಕಾರಗಳೇನೂ ಉಚಿತ ಸಾಲ ಸೌಲಭ್ಯಗಳನ್ನು ಕೊಟ್ಟರೂ ಪಡೆದವರಿಗೆ ಜ್ಞಾನವಿಲ್ಲದಿದ್ದರೆ ಸಾಲವೇ ಶೂಲವಾಗಿ ಆತ್ಮಹತ್ಯೆ ಹೆಚ್ಚುವುದು.ಹಿಂದಿನ ಮಹಾತ್ಮರನ್ನು ಪೂಜಿಸುವ ಬದಲು ಅವರ ಗುಣಜ್ಞಾನವನ್ನು ಒಳಗಿದ್ದು ಬೆಳೆಸಿಕೊಂಡರೆ ಅದೇ ಅಧ್ಯಾತ್ಮ ವಿಜ್ಞಾನ.
ಭೂಮಿ ಮೇಲಿರೋದನ್ನು ಮರೆತು ಆಕಾಶದೆತ್ತರ ಹಾರಿದರೂ ಸಾಯೋದಕ್ಕೆ ಭೂಮಿ ಬೇಕು. ಜನ್ಮ ಪಡೆದ ದೇಶ ಸ್ಥಳ ಧರ್ಮ ಶಿಕ್ಷಣವನ್ನು ಬಿಟ್ಟು ಹೊರಗೆ ಹೋದರೂ ತಿರುಗಿ ಬಂದು ಋಣ ತೀರಿಸದೆ ಮುಕ್ತಿ ಯಿಲ್ಲ. ಇವುಗಳನ್ನು
ಹೊರಗಿನ ಸರ್ಕಾರ ತಿಳಿಸಲಾಗದು. ಮನೆಯೊಳಗಿನ ಗುರು ಹಿರಿಯರ ಜ್ಞಾನದಿಂದ ತಿಳಿಯಬಹುದು.ಹಾಗೆಯೇ ಹಿಂದಿನ ಮಹಾತ್ಮರಿಂದ ತಿಳಿಯಬಹುದು.ಅನುಸರಿಸಿದರೆ ಮಾತ್ರ ಅನುಭವಕ್ಕೆ ಬರುವುದು. ಎರಡು ದೋಣಿಯಲ್ಲಿ ಕಾಲಿಟ್ಟು ನದಿ ತಲುಪುವುದು ಕಷ್ಟ.ಒಂದೇ ದೋಣಿಯಲ್ಲಿ ದಡ ತಲುಪಿದರೆ ಉತ್ತಮ ಜೀವನ. ಅದ್ವೈತ ದೊಳಗೇ ದ್ವೈತ ಇದ್ದರೂ ಸೇರಿಕೊಂಡರೆ ಉತ್ತಮ ಧರ್ಮ ರಕ್ಷಣೆ.ಹಾಗೆ ವಿದೇಶದೊಳಗೆ ದೇಶವಿದ್ದರೂ ದೇಶದ ಶಿಕ್ಷಣ ವಿದೇಶಿಗಳಿಗೆ ನೀಡಿದರೆ ಭಾರತೀಯ ತತ್ವ ಶಾಂತಿಯಿಂದ ಬದುಕಲು ಕಲಿಸಬಹುದು. ತತ್ವಮರೆತು ತಂತ್ರ ಬಳಸಿದರೆ ಅತಂತ್ರಸ್ಥಿತಿಗೆ
ಜನಜೀವನ. ಇದು ಭಾರತೀಯರು ಅರ್ಥ ಮಾಡಿಕೊಳ್ಳುವುದು ಅಗತ್ಯವಿದೆ. ಎಷ್ಟು ಜನರನ್ನು ಮೋಸ ಮಾಡಲಾಗುವುದು? ವ್ಯವಹಾರವೇ ಜೀವನವಲ್ಲ. ಧರ್ಮದ ವ್ಯವಹಾರವಿರಬೇಕು. ಜ್ಞಾನದ ನಂತರ ಹಣಸಂಪಾದನೆ ಇದ್ದರೆ ಹಣಸದ್ಬಳಕೆ ಆಗುತ್ತದೆ. ಹಿಂದೂಗಳ ದೊಡ್ಡ ನಷ್ಟಕ್ಕೆ ಕಾರಣ ಅವರಲ್ಲಿರುವ ಬಿಕ್ಕಟ್ಟಿನ ರಾಜಕಾರಣ.ಇದು ಎಲ್ಲಾ ಪಕ್ಷಗಳೂ ದ್ವೇಷ ಮಾಡುವಂತಾಗಿದೆ. ಸಂಘ ಸಂಸ್ಥೆಗಳು ಮಠ ಮಂದಿರ ಮನೆ ಚರ್ಚೆ ಮಸೀದಿಯನ್ನೂ ಬಿಡದೆ ಆವರಿಸಿರುವಾಗ ತತ್ವ ಎಲ್ಲಿದೆ? ಇದಕ್ಕೆ ಉತ್ತರ ಹೊರಗಿಲ್ಲ ಒಳಗಿದೆ. ಆತ್ಮಶುದ್ದಿಯಾದರೆ ಸಿಗುತ್ತದೆ ಎಂದಿರುವರು ಮಹಾತ್ಮರು. ಎತ್ತ ಸಾಗಿದೆ ಭಾರತ? ಎಲ್ಲಿರುವರು ಭಾರತೀಯರು? ಹೊರದೇಶದಲ್ಲಿ ಕುಳಿತು ದೇಶದ ವಿರುದ್ದ ಹೇಳಿಕೆ ನೀಡುವವರಿಗೆ ಹೆಚ್ಚು ಪ್ರಚಾರ ಸಿಕ್ಕಿದರೆ ಧರ್ಮವೆ?ಯಾವುದು ಧರ್ಮ? ಅಧರ್ಮ?
ನಮ್ಮನ್ನು ನಾವಾಳಿಕೊಳ್ಳಲು ಮತದಾನ ಶುದ್ದವಾಗಿರಬೇಕು.
ಪರರು ನಮ್ಮನ್ನು ಆಳುವುದೆ ಮತಬೇಟೆಯಾಗಿದೆ.ಇದು ಜನರ ಸಹಕಾರದಿಂದ ಬೆಳೆದಿದೆ. ಇದಕ್ಕೆ ಅಜ್ಞಾನ ಕಾರಣ.ಅಜ್ಞಾನಕ್ಕೆ ಶಿಕ್ಷಣ ಕಾರಣ.ಈ ವಿಚಾರದ ಬಗ್ಗೆ ಈವರೆಗೆ ಸಾಕಷ್ಟು ಲೇಖನಗಳನ್ನು ಜನಸಾಮಾನ್ಯರಾಗಿ ಸತ್ಯ ತಿಳಿಸಿದ್ದಕ್ಕೆ ಹಿಂದೂಗಳಿಂದ ಬಂದ ಪ್ರತಿಕ್ರಿಯೆ ನಿಮಗೇನು ಅಧಿಕಾರವಿದೆ? ನಿಮ್ಮಲ್ಲಿ ಹಣವಿದೆಯೆ? ನೀವ್ಯಾರು ನಮಗೆ ತಿಳಿಸಲು. ತಿಳಿಸುವ ಅಗತ್ಯವಿಲ್ಲ.ನಮಗೆಲ್ಲಾ ತಿಳಿದಿದೆ..... ಇದು ಪ್ರಜಾಪ್ರಭುತ್ವದ ಸ್ಥಿತಿಗೆ ಕಾರಣ. ಸತ್ಯಕ್ಕೆ ಸಾವಿಲ್ಲ ಸತ್ಯವೇ ದೇವರು .ಇದು ಆತ್ಮಾವಲೋಕನ ದಿಂದ ಕಂಡುಕೊಳ್ಳಲು ಹಿಂದೂಗಳಷ್ಟೆ ಅಲ್ಲ ಎಲ್ಲಾ ಭಾರತೀಯ ಪ್ರಜೆಗಳು ಹಿಂದಿನ ಸತ್ಯ ತಿಳಿಯಲು ಅಧ್ಯಾತ್ಮ ಅಗತ್ಯವಿದೆ. ರಾಜಯೋಗವೇ ಬೇರೆ ರಾಜಕೀಯವೇ ಬೇರೆ ದಿಕ್ಕಿನಲ್ಲಿದೆ.
ಒಟ್ಟಿನಲ್ಲಿ ಮಾನವ ತನ್ನ ಆತ್ಮವಂಚನೆ ಮಾಡಿಕೊಂಡು ಎಷ್ಟು ಜೀವನನಡೆಸಿದರೂ ಜೀವನ್ಮುಕ್ತಿಯಿಲ್ಲ.ಗಳಿಸಿದ್ದು ಕೊಡಲು ಕಷ್ಟಪಡಲೇಬೇಕು. ಯಾರೂ ಶುದ್ದವಾಗಿಲ್ಲ ಯಾವುದೂ ಶಾಶ್ವತವಾಗಿಲ್ಲ.ಬದಲಾವಣೆ ಜಗದ ನಿಯಮ.ಜಗತ್ತನ್ನು ಆಳಬಾರದಷ್ಟೆ.ಆಳಿದರೆ ಧರ್ಮ ರಕ್ಷಣೆ ಆಗಬೇಕಿತ್ತು. ಯಾವತ್ತೂ ಮೂಲವನ್ನು ಬಿಟ್ಟು ನಡೆಯಬಾರದು.ನಡೆದರೂ ದ್ವೇಷಿಸಬಾರದು.ಅದು ಧರ್ಮ ಕರ್ಮ ಜಾತಿ,ಪಕ್ಷ,ದೇಶ,ಭೂಮಿ,ಶಿಕ್ಷಣ ಯಾವುದೇ ಇರಲಿ ಇದು ನಮಗೆ ಶ್ರೀ ರಕ್ಷೆ.ದ್ವೇಷವೆಂಬುದು ಅಜ್ಞಾನದ ಸಂಕೇತ.
No comments:
Post a Comment