ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, May 19, 2023

ಸಾಹಿತ್ಯದ ಸತ್ಯ ಅನುಭವ

[19/05, 11:07 am] Aruna: ಸುಮಾರು 16 ವರ್ಷದ ನನ್ನ ಬರವಣಿಗೆಯಲ್ಲಿ ಕಂಡಂತಹ ಸತ್ಯವನ್ನು ಯಾರಿಗಾದರೂ ಹೇಳುವಂತಿದ್ದರೆ ಅದು ಬರವಣಿಗೆಯಲ್ಲಿಯೇ ಕಾಣುತ್ತದೆ. ದೇಶದ ಪರವಾಗಿ ಯಾವ ವ್ಯಕ್ತಿ ಪಕ್ಷ ಧರ್ಮ, ಜಾತಿಬೇಧವಿಲ್ಲದೆ  ವಾಸ್ತವ ಸ್ಥಿತಿಗೆ ಕಾರಣವಾಗಿರುವ ಶಿಕ್ಷಣದ ಬದಲಾವಣೆಗಾಗಿ ಎಷ್ಟೋ ಲೇಖನಗಳು  ಹೊರಬಂದಿವೆ. "ನಮ್ಮ ಭಾರತೀಯ ಶಿಕ್ಷಣ" ಪತ್ರಿಕೆ  ಪ್ರಾರಂಭ ಮಾಡಿದ್ದು ನಂತರದ ದಿನಗಳಲ್ಲಿ ಸ್ವಯಂ ಭಾರತೀಯ ಹಿಂದೂಗಳೆ  ಅಸಹಕಾರ ತೋರಿಸಿದ್ದು ಜೊತೆಗೆ ಶಾಲಾಕಾಲೇಜ್ ಗಳಲ್ಲಿ  ನಡೆಯುತ್ತಿರುವ ಆಂಗ್ಲ ಮಾಧ್ಯಮದ ಮೂಲಕ ಮಕ್ಕಳನ್ನು  ಮುಂದೆ ತರಲು ಪೋಷಕರು  ಪಡುತ್ತಿರುವ ಶ್ರಮದ ಜೊತೆಗೆ ಸಾಲದ ಹೊರೆ ಇದನ್ನು ತೀರಿಸಲು ಮನೆಯಿಂದ ಹೊರಬಂದು ದುಡಿಯಲೇಬೇಕಾದ ಅನಿವಾರ್ಯತೆ, ಒಬ್ಬಂಟಿ ಮಕ್ಕಳ ಮನಸ್ಥಿತಿ, ತಂದೆತಾಯಿಯನ್ನು ಬಿಟ್ಟು ಬಹುದೂರ ಹೋಗಿ ನೆಲೆಸುವ ಮಕ್ಕಳು, ವೃದ್ದಾಶ್ರಮ, ಅನಾಥ ಆಶ್ರಮ, ಅಬಲಾಶ್ರಮಗಳ ಜೊತೆಗೆ ಬಿಕ್ಷುಕಾಶ್ರಮಗಳ ಬೆಳವಣಿಗೆ.. ಇವುಗಳ ಹಿಂದೆ ಇರುವ ಅಜ್ಞಾನದ ಶಿಕ್ಷಣವನ್ನು ಈವರೆಗೆ ಎಷ್ಟು  ಜನರು ಗಮನಿಸಿರಬಹುದು? ಎಲ್ಲದ್ದಕ್ಕೂ ಸರ್ಕಾರ ಕಾರಣ ನಾವಲ್ಲ.ಸರ್ಕಾರದಲ್ಲಿ ಈ ಪಕ್ಷ ಕಾರಣ ನಮ್ಮ‌ಪಕ್ಷವಲ್ಲ. ಹೀಗೇ ಸ್ವಾತಂತ್ರ್ಯ ಬಂದಾಗಿನಿಂದ ಸರ್ಕಾರದ ವಶದಲ್ಲಿದ್ದು ಎಷ್ಟೋ ಪ್ರಜೆಗಳು ತಮ್ಮ ಒಳಗೇ ಇದ್ದ ಆ ಪರಮಶಕ್ತಿಯನ್ನರಿಯದೆ ಮಧ್ಯವರ್ತಿಗಳ ಕುತಂತ್ರಕ್ಕೆ  ತಮ್ಮ ತಂತ್ರವನ್ನೂ ಸೇರಿಸಿಕೊಂಡು  ಮುಂದೆ ನಡೆದವರಿಗೆ ಸಿಕ್ಕಿದ್ದು ಸಾಲದ ಹೊರೆಯಷ್ಟೆ. ಸರ್ಕಾರಗಳು ವಿದೇಶದಿಂದ ಸಾಲ ತಂದು ದೇಶದ ಜನರಿಗೆ ಹಂಚುವಾಗ ದೇಶದ ಸಾಲ ತೀರುವುದೆ? ಬೆಳೆಯುವುದೆ? 

ದೇಅಸದ ಒಳಗಿರುವ ನಮ್ಮ‌ಮಹಿಳೆ ಮಕ್ಕಳ ಮೇಲೇ ಸಾಲ ಹಾಕಿದರೆ  ಅದನ್ನು ತೀರಿಸಲು ಮನೆಯೊಳಗಿನಿಂದ ಹೊರ ಬಂದು ದುಡಿಯಲೇಬೇಕು. ಯಾವಾಗ ಮನೆಯೊಳಗಿನಿಂದ ಮಹಿಳೆ ಮಕ್ಕಳು ಹೊರಬರುವರೋ ಆಗಲೇ ಮನೆಯಲ್ಲಿ ಶಾಂತಿ ಸಮಾಧಾನ ನೆಮ್ಮದಿ ಕುಸಿಯುತ್ತದೆ.ಎಷ್ಟು ವರ್ಷ  ಹೀಗೇ  ಹೊರಗಿರಲು ಸಾಧ್ಯ? ಆಂತರಿಕ ಶುದ್ದಿಯಿಲ್ಲದೆ ಭೌತಿಕ ಶುದ್ದಿಯಾಗದು.ಸ್ವಚ್ಚಭಾರತ ಪೊರಕೆ ಹಿಡಿದು ಗುಡಿಸಿದರಾಗುವುದೆ? ಅಥವಾ ಆಂತರಿಕವಾಗಿರುವ ಅಶುದ್ದತೆ ಹೆಚ್ಚಿಸಿರುವ  ವಿಷಯದಲ್ಲಿರುವ ವಿಷ ಹೊರಗೆ ಹಾಕಿದರೂ ಅದೂ ಭೂಮಿಗೆ ನಷ್ಟ.
ತಾಳಿದವನು ಬಾಳಿಯಾನು ಎಂದರು, ನಿಧಾನವೇ ಪ್ರಧಾನ ಎಂದರು. ಇಲ್ಲಿ ತಾಳ್ಮೆಯಿಲ್ಲದೆ ಯಾರೋ   ಹೇಳಿದ್ದನ್ನು ಹಿಂದೆ ಆಗಿದ್ದನ್ನು ಕೇಳಿಸಿಕೊಂಡು  ವಾಸ್ತವತೆಯನ್ನರಿಯದೆ ಸಹಕರಿಸಿ ತಮಗಮ ತಾಳ್ಮೆ ಕಳೆದುಕೊಂಡರೆ ಇದರ ಫಲ ಜೀವ ಅನುಭವಿಸಲೇಬೇಕು. ಹಾಗಂತ ಎಲ್ಲದ್ದಕ್ಕೂ  ಕಾರಣವಿಲ್ಲವೆಂದಲ್ಲ ಎಲ್ಲದ್ದಕ್ಕೂ ಕಾರಣವೇ ನಾನು ಎನ್ನುವ ಅಹಂಕಾರ ಸ್ವಾರ್ಥ ದ ಜೀವನ. ಎಲ್ಲರಿಗೂ ರಾಜನಂತೆ ಜೀವನ ನಡೆಸಬೇಕೆಂಬ ಆಸೆ ಆದರೆ ರಾಜಯೋಗದ ಅರ್ಥ ತಿಳಿಯದೆ ರಾಜನ ಕನಸು ಕಂಡರೆ ವ್ಯರ್ಥ ಜೀವನ.ಇದು ಹಿಂದೂ ಧರ್ಮದ ತತ್ವ. ಇಂದಿನ ತಂತ್ರಜ್ಞಾನ ರಾಜಕೀಯದ ಕಡೆಗೆ ನಡೆಯುತ್ತಾ ಒಳಗಿದ್ದ ತತ್ವ ಮರೆತರೆ ಹಿಂದೂ ಧರ್ಮ ಹಿಂದುಳಿಯುವುದು ಸಹಜ. ಎಷ್ಟೇ ಹೊರಗಿನವರ ಸಾಲ ಬಂಡವಾಳ, ವ್ಯವಹಾರಕ್ಕೆ ಕೈ ಜೋಡಿಸಿ ಹಣ ಸಂಪಾದನೆ ಮಾಡಿದರೂ ಒಳಗಿನ ತತ್ವ ಬೆಳೆಯೋದಿಲ್ಲ. ತತ್ವವು ಸ್ವತಂತ್ರ ಜೀವನಕ್ಕೆ  ಸೋಪಾನವಾಗಿತ್ತು. ನಾನು ಕಾರಣಮಾತ್ರದವ ಎಲ್ಲಾ ಪರಮಾತ್ಮನ ಇಚ್ಚೆಯಷ್ಟೆ ಎನ್ನುವ ನಂಬಿಕೆಯಲ್ಲಿ ತನ್ನ ಆತ್ಮಶುದ್ದಿಗಾಗಿ  ಏನು ಮಾಡಬೇಕೆನ್ನುವತ್ತ ತತ್ವ ನಡೆದಿತ್ತು. ಇದಕ್ಕೆ ವಿರುದ್ದವಾಗಿರುವ ತಂತ್ರವು ನಾನಿಲ್ಲದೆ ಪರಮಾತ್ಮ ನಿಲ್ಲ.ನಾನೇ ಶ್ರೇಷ್ಠ. ನಾನೇ ರಾಜನೆನ್ನುವ ಅಹಂಕಾರ ಬೆಳೆಸಿ ತಂತ್ರದಿಂದ ಜನರ ಮನಸ್ಸನ್ನು ಹೊರಗೆಳೆದು  ವೈಜ್ಞಾನಿಕ ಜಗತ್ತಿನಲ್ಲಿ ಸಾಕಷ್ಟು ಸಂಶೋಧನೆ ನಡೆಸುತ್ತಾ ಆತ್ಮಸಂಶೋದನೆಯಿಲ್ಲದೆ ಅಜ್ಞಾನ ಬೆಳೆಸುತ್ತಿದೆ. ಜಗತ್ತನ್ನು ನಾವು ನಡೆಸುವುದಾಗಿದ್ದರೆ ಅದು ನಮ್ಮ ಹಾಗೆ ನಡೆಯುತ್ತದೆ. ನಾವು ಬದಲಾದರೆ ಅದೂ ಬದಲಾಗುತ್ತದೆ.ಪ್ರಕೃತಿಯನ್ನು ನಾವು ಸೃಷ್ಟಿ ಮಾಡಿದೆವೆ? ನಮ್ಮನ್ನು ಪ್ರಕೃತಿ ಸೃಷ್ಟಿ ಮಾಡಿದೆಯೆ? ಪ್ರಕೃತಿಯಿಲ್ಲದೆ ಜೀವ ಉಳಿಯುವುದೆ? ತಾಯಿಯಿಲ್ಲದೆ ಮಕ್ಕಳು ಜನಿಸುವರೆ?
ಹೀಗೇ ಎಷ್ಟೋ ಸಾಮಾನ್ಯಜ್ಞಾನದ ವಿಚಾರಗಳ ಮೂಲಕ ಭಾರತೀಯತೆಯನ್ನು ತತ್ವಜ್ಞಾನದಿಂದ ಹೇಗೆ ಬೆಳೆಸಬಹುದು, ಶಿಕ್ಷಣದಲ್ಲಿ ಬದಲಾವಣೆ ತರಬಹುದು, ಪೋಷಕರ ಸಮಸ್ಯೆಗೆ ಕಾರಣ. ಮನೆಯೊಳಗಿರುವ ಪರಿಹಾರ ದೇಶದ ಸಮಸ್ಯೆಗೆ ಪ್ರಜೆಗಳೆಷ್ಟು ಕಾರಣ ರಾಜಕಾರಣಿಗಳ  ನಡೆ ನುಡಿಗೆ ಮಾಧ್ಯಮಗಳೆಷ್ಟು ಕಾರಣ.ಮಧ್ಯವರ್ತಿಗಳ ಕುತಂತ್ರದಿಂದ  ಬೆಳೆಯುತ್ತಿರುವ ಸಾಮಾಜಿಕ ಸಮಸ್ಯೆಗಳಿಂದ ಬೆಳೆದ ಅಧರ್ಮ. ಧಾರ್ಮಿಕ ಕ್ಷೇತ್ರದ ಭ್ರಷ್ಟಾಚಾರ, ಶೈಕ್ಷಣಿಕ ಕ್ಷೇತ್ರದ ವ್ಯಾಪಾರಿಕರಣದ ಹಿಂದಿನ ದುರುದ್ದೇಶ. ಸಂಸಾರದ ಒಡಕಿಗೆ ಕಾರಣವಾದ ಅಜ್ಞಾನದ ಮೂಲವೇ ಎಲ್ಲಾ ಸಮಸ್ಯೆಗೆ ಕಾರಣ ಇದೇ ಶಿಕ್ಷಣ. ಯಾವಾಗ ಭಾರತೀಯರೆ  ತಮ್ಮ ಜ್ಞಾನದ ವಿರುದ್ದ ನಿಂತರೋ ಆವಾಗಲೇ ಅಜ್ಞಾನ ಮಿತಮೀರಿ ಭಾರತೀಯರನ್ನು ಆಳಲು ಪರಕೀಯರು ಬೆಳೆದರು.ಈಗ ಅವರ  ಸಹಕಾರವಿಲ್ಲದೆ  ಯಾವ ವ್ಯವಹಾರ ನಡೆಸಬಹುದು? ಇಷ್ಟಕ್ಕೂ ಅವರಿಗೂ ನಮಗೂ ಏನು ವ್ಯತ್ಯಾಸ? ಅವರಲ್ಲಿ ಕೇವಲ  ಯಂತ್ರಜ್ಞಾನವಿದೆ.ಯಾಂತ್ರಿಕ ಬದುಕಿಗೆ ಯಾವುದೇ ರೀತಿಯ ಸಾತ್ವಿಕ ಶಕ್ತಿಯ ಅಗತ್ಯವಿಲ್ಲ. ಅಸತ್ಯ ಅನ್ಯಾಯ ಅಧರ್ಮ  ಕ್ರಾಂತಿಯ ಜೀವನವೇ ಅವರ ಗುರಿ. ಇದಕ್ಕೆ ಸಹಕಾರ ಸಿಕ್ಕಿದರೆ  ಇನ್ನಷ್ಟು ಶಕ್ತಿ ಬೆಳೆಯುತ್ತದೆ.
ಇದು ಕಣ್ಣಿಗೆ ಮನರಂಜನೆಯ ಜೊತೆಗೆ  ಪೈಪೋಟಿಯ ದ್ವೇಷದ ರಾಜಕೀಯದಲ್ಲಿದೆ. ಇದನ್ನು ಹಿಂದೂಗಳು ಬೆಳೆಸಿದ್ದರೆ ವ್ಯತ್ಯಾಸ ವಿಲ್ಲ. ವ್ಯವಹಾರ ಬಂಡವಾಳ,ಸಾಲ ಮಾಡುವಾಗ  ಯಾವ ಧರ್ಮ ದೇಶದ  ಚಿಂತನೆ ಇರೋದಿಲ್ಲ.ಅದನ್ನು ತಿರುಗಿ ಕೊಡುವಾಗಲೇ ಬರೋದು ಸಮಸ್ಯೆ. ನಮ್ಮವರೆ ಬಿಡೋದಿಲ್ಲ ಪರಕೀಯರು ಬಿಡುವರೆ?
ಅದಕ್ಕಾಗಿ ಹಿಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮರುಗಳು ವಿದೇಶಿಹಂಗಿನಿಂದ ದೂರವಾಗಲು ಕರೆ ಕೊಟ್ಟು ಸ್ವತಂತ್ರವಾಗಿ ತಮ್ಮ ಶಕ್ತಿಯಿಂದ ತಮ್ಮ ಸಂಪತ್ತಿನಿಂದ  ಆಹಾರ ವಸ್ತು, ವಸ್ತ್ರ ಗಳ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸರಳ ಜೀವನಕ್ಕೆ ಶರಣಾಗಿ ಪರಮಾತ್ಮನ ಒಲಿಸಿಕೊಳ್ಳಲು  ಸುಪವಾಸ ಸತ್ಯಾಗ್ರಹದ ಮೂಲಕ ಯಾವುದೇ ಜೀವ ಹಿಂಸೆಯಾಗದಂತೆ ಹೋರಾಟ ನಡೆಸಿದ್ದರು. ಆದರೂ ಅಂದಿನ ಕ್ರೂರ ಮನಸ್ಸಿನ ಬ್ರಿಟಿಷ್ ರಿಗೆ  ಏಟಿಗೆಏಟು ಕೊಡದೆ ವಿಧಿಯಿರಲಿಲ್ಲ ಹಾಗಾಗಿ ಒಂದು ಕಡೆಯಿಂದ ಕ್ರಾಂತಿಕಾರರು ತಮ್ಮ ದೇಶದ ಸ್ವಾತಂತ್ರ್ಯ ಕ್ಕಾಗಿ ತಮ್ಮದೇ ಆದ  ಹೋರಾಟಕ್ಕೆ ತೊಡಗಿಸಿಕೊಂಡು ತಮ್ಮ ಪ್ರಾಣವನ್ನು ಭಾರತಮಾತೆಗೆ ಅರ್ಪಿಸಿ ವೀರ ಸ್ವರ್ಗ ಸೇರಿದರು. ಸ್ವಾತಂತ್ರ್ಯ ಸಿಕ್ಕ ಮೇಲಿನ ಕಥೆ ಈಗಲೂ ನಮ್ಮ ವ್ಯಥೆಗೆ ಕಾರಣವಾಗಿದೆ. ಅಧಿಕಾರದ‌ದಾಹಕ್ಕೆ ಬಲಿಯಾದ ಮಾನವನಿಗೆ ದೇಶವನ್ನು ಕಟ್ಟುವುದಕ್ಕಿಂತ ಮೆಟ್ಟಿ ವಿದೇಶದ ಕಡೆಗೆ ಹೋಗುವುದೇ ಸಾಧನೆ ಎನ್ನುವ ಅಜ್ಞಾನ ಇಂದಿನ ಯುವಕರಲ್ಲಿದೆ ಪೋಷಕರಲ್ಲಿದೆ ಎಂದರೆ ನಮ್ಮೊಳಗೇ ಅಡಗಿ ಕುಳಿತ ಬ್ರಿಟಿಷ್ ಶಿಕ್ಷಣ ನಮ್ಮನ್ನು ವಿದೇಶಿ ಮಾಡಿದೆ.ಆದರೆ ನಮ್ಮೊಳಗೇ  ಇರುವ ದ್ವೇಷ ಮಾತ್ರ  ಹೋಗಿಲ್ಲವೆಂದರೆ ದ್ವೇಷದಿಂದ ದೇಶಕಟ್ಟಲು ಸಾಧ್ಯವೆ? ಪಕ್ಷಪಕ್ಷ ಧರ್ಮ ಧರ್ಮ, ಜಾತಿಜಾತಿಗಳ ನಡುವಿನ ಅಂತರದಲ್ಲಿ ರಾಜಕೀಯ ಪ್ರವೇಶ ಮಾಡುತ್ತಾ ಅಂತರ ಬೆಳೆದವೇ ಹೊರತು ಸಮಾನತೆಯಲ್ಲ.
ಇದರ ಪ್ರಭಾವ ಇಡೀ ದೇಶವಷ್ಟೆ ಅಲ್ಲ. ವಿಶ್ವವೇ ಅನುಭವಿಸುತ್ತಿದೆ.ಪುರಾಣ,ಇತಿಹಾಸ ಭಗವದ್ಗೀತೆ ರಾಮಾಯಣ ಮಹಾಭಾರತದಲ್ಲಿದ್ದ ಧರ್ಮ ತತ್ವ ಬಿಟ್ಟು ತಂತ್ರದ ಬಳಕೆಯಾದರೆ ಅಜ್ಞಾನವಷ್ಟೆ.ಅಜ್ಞಾನದಲ್ಲಿ ಸತ್ಯ ಕಾಣದು. ಸತ್ಯವಿಲ್ಲದೆ ಧರ್ಮ ನೆಲಸದು.ಧರ್ಮ ವಿಲ್ಲದ ಜೀವನದಲ್ಲಿ ಶಾಂತಿಯಿರದು.ಶಾಂತಿಗಾಗಿ ಹೋರಾಟ ನಡೆಸಿದ್ದ ಮಹಾತ್ಮರುಗಳ ಜ್ಞಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ರಾಜಕೀಯ ಬಿಡದು. ಹೀಗಾಗಿ ಎಲ್ಲಾ ಸರಪಳಿಯೂ ಮಾನವನ ಜೀವನವನ್ನು ಹಿಡಿದಿಟ್ಟುಕೊಂಡು ಉರುಳಾಗಿಸಿದೆ. ಇದರಿಂದ ಬಿಡಿಸಿಕೊಳ್ಳಲು  ಆಂತರಿಕ ಶುದ್ದಿಯಿಂದ ಮಾತ್ರ ಸಾಧ್ಯ. ಸರಳಜೀವನ,ಸ್ವಾವಲಂಬನೆ, ಸತ್ಯ ಧರ್ಮ ದ ನಡೆ ನುಡಿ,ಸ್ವಾಭಿಮಾನವೇ ಸ್ವತಂತ್ರ ಜ್ಞಾನದ ಕಡೆಗೆ ನಡೆಸುತ್ತದೆ ಎಂದಿರುವ‌ಮಹಾತ್ಮರ ದಾರಿಯಲ್ಲಿ  ನಾವು ಈಗ ನಡೆಯಬಹುದೆ? ನಮ್ಮವರನ್ನು ನಾವು ಪ್ರೀತಿ ವಿಶ್ವಾಸದಿಂದ ಗೌರವಿಸಬಹುದೆ? ಹಣವಿಲ್ಲದ ಬಡವರ ಜ್ಞಾನಕ್ಕೆ ತಕ್ಕ ಶಿಕ್ಷಣ ನೀಡಿ ಅವರಿಗೆ ಜೀವಿಸಲು ಬಿಡಬಹುದೆ?

ದೇಅಸದ ಬೆನ್ನೆಲುಬಾದ ರೈತರ  ಭೂಮಿ ಕಿತ್ತುಕೊಂಡು  ವಿದೇಶಿ ಕಂಪನಿ ಬೆಳೆಸಿ ಅದರಲ್ಲಿ ರೈತರ ಮಕ್ಕಳಿಗೆ ಸೇವೆ ಮಾಡಲು ಬಿಟ್ಟರೆ  ಧರ್ಮ ವೆ? ಯಾರ ಸೇವೆ ಯಾರು ಮಾಡಬೇಕು? ಭೂ ತಾಯಿಯ ಮಕ್ಕಳು  ಭೂ ತಾಯಿ ಮಾರಿ ಪರಕೀಯರ ಸೇವೆ ಮಾಡುವುದು ಸರಿಯೆ? ಇದರ ಫಲ ಎಷ್ಟು ಕಠೋರವಾಗಿರುವುದೆಂದು ಆತ್ಮಹತ್ಯೆಗಳು ತಿಳಿಸುತ್ತವೆ.
ಇಲ್ಲಿ ಭೂ ತಾಯಿಯ ಶಾಪ ಜೀವ ಹೋಗುವಂತೆ ಮಾಡಿದ್ದು ವೈಜ್ಞಾನಿಕ ಚಿಂತಕರಿಗೆ ಕಾಣಿಸದು. ತಾತ್ವಿಕ ಚಿಂತಕರು ತಮ್ಮ ವಾದ ವಿವಾದದಲ್ಲಿಯೇ ಮೈ‌ಮರೆತು ದೇಶ ಬೇರೆ ತತ್ವ ಬೇರೆ ಎಂದರೆ ಇರೋದುಒಂದೆ ದೇಶ. ಹಿಂದೂಗಳನ್ನು ವಿದೇಶಕ್ಕೆ ಸೇವೆ ಮಾಡಲು ಕಳಿಸಿ ಪರಕೀಯರ ಬಂಡವಾಳ ಸಾಲ ಹೊತ್ತು ದೇಶಕ್ಕೆ ತರುವ ರಾಜಕೀಯ ದೇಶವನ್ನು ಸಾಲದ ದವಡೆಗೆ ತಳ್ಳಿ ವೈಭವದ ಕಾರ್ಯಕ್ರಮದಲ್ಲಿ  ಜನರನ್ನು ಮನರಂಜನೆಯಲ್ಲಿ ಮುಳುಗಿಸಿ ತಾವೂ ದುಡಿಯದೆ ಜನರೂ ದುಡಿಯದೆ ಕುಳಿತು ತಿನ್ನುವ ತಯಾರಿ ನಡೆಸಿರೋದರ ಹಿಂದೆ ದೊಡ್ಡ  ಕುತಂತ್ರವಡಗಿದೆ. ಇದನ್ನು ಪ್ರಗತಿ ಎಂದರೆ ಮುಂದೆ ಇದೆ ಭಾರತೀಯರ ಅಧೋಗತಿ.  ಒಟ್ಟಿನಲ್ಲಿ ಪಕ್ಷಪಾತ ಧರ್ಮ ದ್ವೇಷ ಭಿನ್ನಾಭಿಪ್ರಾಯದ ರಾಜಕೀಯದಿಂದ ಭಾರತ ತನ್ನ ಅಸ್ತಿತ್ವ ಕಳೆದುಕೊಂಡರೆ  ಇದು ಆತ್ಮದುರ್ಭಲ ಭಾರತವಷ್ಟೆ. ಇದರ ಬಗ್ಗೆ ಚರ್ಚೆ ನಡೆಸಿದರೆ ಇದಕ್ಕೆ ಪರಿಹಾರ ಒಳಗಿದೆ ಹೊರಗಿಲ್ಲ.ಎಷ್ಟು ಹೊರಗಿನವರ  ಸಹಾಯದಿಂದ ದೇಶದ ಆರ್ಥಿಕಸ್ಥಿತಿ ಸುಧಾರಣೆಯ ಪ್ರಯತ್ನವಾಗುವುದೋ ಅಷ್ಟೇ ಶೀಘ್ರವಾಗಿ  ಭಾರತ ಪರಕೀಯರ ವಶವಾಗುವುದು.
ವಿದೇಶಿ ಒಪ್ಪಂದ  ಸ್ವದೇಶಿಗಳ ಸ್ವಾತಂತ್ರ್ಯ ಕಳೆದುಕೊಂಡು ಮನೆ ಸೇರುವ ಹಂತಕ್ಕೆ ಬರಬಾರದು. ಎಷ್ಟೋ ಯುವಕರಿಗೆ ಕೆಲಸವಿಲ್ಲದೆ ಸೋಮಾರಿಗಳಾಗಿ ಸರ್ಕಾರದ ಉಚಿತ ಸಾಲ ಸೌಲಭ್ಯಗಳನ್ನು ದುರ್ಭಳಕೆ ಮಾಡಿಕೊಂಡು ಸ್ವೇಚ್ಚಾಚಾರದೆಡೆಗೆ ನಡೆದಿದ್ದಾರೆಂದರೆ ಇದು ಪ್ರಭುದ್ದ ಭಾರತವೆ? ವಿವೇಕಾನಂದರ ಕನಸಿನ ಪ್ರಕಾರ ಯುವಕರಲ್ಲಿ ರಾಜಯೋಗದ ಶಿಕ್ಷಣವಿದ್ದು ಸ್ವತಂತ್ರ ಚಿಂತನೆ ಮಾಡಿ ಧರ್ಮ ರಕ್ಷಣೆ ಮಾಡಬೇಕಿತ್ತು.ಈಗ ಯಾರೋ ಹೇಳಿದ್ದನ್ನು ಕೇಳಿಸಿಕೊಂಡು ಕೇವಲ ಓದಿಕೊಂಡು ವಾಸ್ತವದ ಅರಿವಿಲ್ಲದೆ ಅಲ್ಪಜ್ಞಾನವನ್ನು ಬಳಸಿ ತಮ್ಮ  ಸಮಾಧಿ ತಾವೇ ಮಾಡಿಕೊಂಡರೆ  ಇದನ್ನು  ಜೀವನವೆನ್ನಲಾಗದು. ಈಗಾಗಲೇ ಮಹಿಳೆ ಮಕ್ಕಳನ್ನೂ ಬಿಡದೆ ರಾಜಕೀಯಕ್ಕೆ ಬಳಸಿಕೊಂಡು ಮನೆಯಿಂದ ಹೊರತಂದಾಗಿದೆ.ಮನೆಸೇರಿಸುವ ಕೆಲಸ  ಧರ್ಮ ರಕ್ಷಕರು ಮಾಬಹುದೆ ಎಂದರೆ ಅವರೂ ಹೊರಗಿನ ಆಚರಣೆಗೆ ಬೆಲೆಕೊಟ್ಟು ಮನೆಯೊಳಗಿರುವ ಗೃಹಿಣಿಯರನ್ನು ಸೇರಿಸಿಕೊಂಡು  ರಾಜಕೀಯದ ಬಲದಲ್ಲಿ ಹೊರಗೆ ಬಂದರು. ಈಗ ಭಾರತದ ಸ್ಥಿತಿಗೆ ಸರ್ಕಾರ ಕಾರಣ ಎಂದು ಜಾರಿಕೊಂಡರೆ ಮೇಲಿರುವ‌ ಪರಮಾತ್ಮ  ಒಲಿಯುವುದಿಲ್ಲ. ಕೆಳಗಿರುವ ಮಾನವರನ್ನು ಆಳುವಷ್ಟು ಸುಲಭವಿಲ್ಲ ಪರಮಾತ್ಮನ ತಿಳಿದು ನಡೆಯೋದು. ಒಟ್ಟಿನಲ್ಲಿ  ನಾವೇ ಬದಲಾಗದೆ ಪರಕೀಯರನ್ನು ಬದಲಾಯಿಸಹೋದರೆ ಅದರ ಪರಿಣಾಮ ಪರಕೀಯರೆ ತಿರುಗಿ ಆಳುವುದು. ಇದು ಎಲ್ಲಾ ಹಿಂದೂಗಳೂ ಅರ್ಥ ಮಾಡಿಕೊಳ್ಳಲು  ಹಿಂದಿರುವ ಸತ್ಯ ತಿಳಿಯಬೇಕಷ್ಟೆ. ಇದನ್ನು ಎಷ್ಟು ನಿರ್ಲಕ್ಷ್ಯ ಮಾಡಿದರೂ ಸತ್ಯ ಸತ್ಯವೆ.ಮಿಥ್ಯ ಮಿಥ್ಯವೆ. ನಮಗೆ ಎಲ್ಲಾ ರೀತಿಯ ಅಧಿಕಾರ ಹಣ ಜನಬಲ ಇದ್ದರೂ ಒಳಗಿನ ಆತ್ಮಜ್ಞಾನವಿಲ್ಲದೆ ಮುಕ್ತಿ ಸಿಗದು. ಈವರೆಗೆ ಕಳಿಸಿರುವ ಲೇಖನಗಳಲ್ಲಿ ಯಾವುದೇ  ಸ್ವಾರ್ಥ ಅಹಂಕಾರವಿರಲಿಲ್ಲ.ಬರವಣಿಗೆ ನನ್ನ ಕರ್ಮ. ಧರ್ಮ ರಕ್ಷಣೆಗಾಗಿ ನಾವು ಸತ್ಯ ತಿಳಿಯುವುದು ಅಗತ್ಯ.‌ಸತ್ಯವೇ ಇಲ್ಲದ ಧರ್ಮ ಕುಸಿಯುತ್ತದೆ. ಹೀಗಾಗಿ ಇದನ್ನು  ನಿಜವಾದ ಹಿಂದೂ ಧರ್ಮದ  ಓದುಗರು  ಸಂಬಂಧ ಪಟ್ಟವರಿಗೆ ಕಳಿಸಿ ತಮ್ಮ ತಮ್ಮ  ಕ್ಷೇತ್ರವನ್ನು ಸ್ವಚ್ಚಗೊಳಿಸಿಕೊಳ್ಳಲು ಸಾಧ್ಯವಾದರೆ ನಮ್ಮ ಮುಂದಿನ ಭಾರತ ಸ್ವಚ್ಚ ಭಾರತ. ಇಲ್ಲವಾದರೆ  ಇರುವ ಸ್ವಾತಂತ್ರ್ಯ ಕಳೆದುಕೊಂಡು ಪರಕೀಯರ ವಶವಾದಾಗ ಎಲ್ಲಾ ಧಾರ್ಮಿಕ ಕ್ಷೇತ್ರವೂ  ತಮ್ಮ ಆಸ್ತಿ ಕಳೆದುಕೊಳ್ಳುವಂತಾಗಬಹುದು.ಇದು ಕಲಿಯುಗ. ಇಲ್ಲಿ ಅಸುರರಿಗೇ ಶಕ್ತಿ.ಹೀಗಿರುವಾಗ ದೈವಗುಣ ಬೆಳೆಸಿಕೊಂಡರೆ  ಉತ್ತಮ ಸಾಧನೆ. ದೇವರ ಹೆಸರಲ್ಲಿ ಧರ್ಮದ ಹೆಸರಲ್ಲಿ ಜನಸಾಮಾನ್ಯರ  ಜ್ಞಾನ ಹಾಳುಮಾಡದಿದ್ದರೆ ಇದೇ ಪುಣ್ಯದ ಕೆಲಸ. ಪುಣ್ಯಭೂಮಿ ಭಾರತವನ್ನು ಪಾಪಿಷ್ಟರು ಆಳುವುದೆ? ಎಂತಹ ಸ್ಥಿತಿ ಬಂದಿದೆ.ಇದಕ್ಕೆ ಕಾರಣವೇ  ಸತ್ಯಕ್ಕೆ ಬೆಲೆಕೊಡದ ರಾಜಕೀಯ. ಧಾರ್ಮಿಕ ವರ್ಗ ವೇ ರಾಜಕೀಯದ ಪರ ನಿಂತರೆ ಧರ್ಮ ವೆ? 
ಇದರಲ್ಲಿನ ಸತ್ಯ ಗಮನಿಸಿದರೆ ನಮ್ಮ ಬಿಕ್ಕಟ್ಟು ನಮಗೇ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ತತ್ವವು ಒಗ್ಗಟ್ಟನ್ನು ಬೆಳೆಸಬೇಕಿತ್ತು.ಅದರಲ್ಲಿ ತಂತ್ರವೇ ಹೆಚ್ಚಾದರೆ ಸ್ವತಂತ್ರಜ್ಞಾನ ಸಿಗದು. ಸ್ವತಂತ್ರ ಭಾರತಕ್ಕೆ ಸ್ವತಂತ್ರ ಜ್ಞಾನದ ಅಗತ್ಯವಿದೆ.
ಇದರ ಬಗ್ಗೆ  ಚರ್ಚೆ ನಡೆಸಬಹುದು. ನಿಮ್ಮ ಸಲಹೆ ಸೂಚನೆ ಅಭಿಪ್ರಾಯವನ್ನು ಈ ನಂಬರಿಗೆ ಕಳುಹಿಸಬೇಕಾಗಿ ವಿನಂತಿ. ಇಂತಿ ಭಾರತೀಯ ಸಾಮಾನ್ಯ ಪ್ರಜೆ.
ಭಗವತಿ
7204262456
[19/05, 11:09 am] Aruna: ದಯವಿಟ್ಟು ಇದನ್ನು ಮಠದವರೆಗೆ ತಲುಪಿಸಬೇಕಾಗಿ ವಿನಂತಿ. 🙏
ಗುರುಗಳ ದರ್ಶನ ಮಾಡಿ ನನ್ನ ಹೊಸ ಪುಸ್ತಕ ಅರ್ಪಣೆ ಮಾಡಬೇಕಿತ್ತು. ನಿಮಗೆ ಪರಿಚಯದವರನ್ನು ವಿಚಾರಿಸಿ ತಿಳಿಸಿ.
ಶೃಂಗೇರಿ ಹರಿಹರಪುರ ಮಠ

No comments:

Post a Comment