ಭಾರತೀಯ ಸರ್ಕಾರ ಎಡವಿರುವುದೆಲ್ಲಿ?
ಪಕ್ಷದ ಕಾರ್ಯ ಕರ್ತರಾಗುವ ಬದಲು ಧರ್ಮದ ಕಾರ್ಯ ಕರ್ತರಾಗಿ ಅವರವರ ಧರ್ಮದ ಶಿಕ್ಷಣ ಮನೆಯವರಿಗೆ ಹೊರಗಿನವರಿಗೆ ಕೊಟ್ಟಿದ್ದರೆ ಈ ಭ್ರಷ್ಟ ರಾಜಕೀಯದ ಬಗ್ಗೆ ಜನರಲ್ಲಿ ಅರಿವಿರುತ್ತಿತ್ತು. ಭ್ರಷ್ಟಾಚಾರದ ಹಣದಲ್ಲಿ ದೇಶ ರಕ್ಷಣೆ ಮಾಡುವುದಾಗಲಿ, ವಿದೇಶಿ ಬಂಡವಾಳದಲ್ಲಿ ದೇಶದ ಸಾಲ ತೀರಿಸುವುದಾಗಲಿ ಅಧರ್ಮ ವೇ ಆಗಿದೆ.ಇದರ ಬಗ್ಗೆ ದೇಶಭಕ್ತ ಜ್ಞಾನಿಗಳು ಚರ್ಚೆ ನಡೆಸಿದರೆ ಎಲ್ಲರ ಬಳಿ ಇರುವ ಆಸ್ತಿ ಹಣ ಅಧಿಕಾರದ ಹಿಂದೆ ರಾಜಕೀಯ ಕಾಣುತ್ತದೆ ರಾಜಯೋಗವಲ್ಲ.ಇದೇ ಪ್ರಜಾಪ್ರಭುತ್ವ ಹಾಳಾಗಲು ಕಾರಣ.
ಸಂಸಾರದಿಂದ ದೂರವಿದ್ದು ದೇಶಕ್ಕಾಗಿ ಸೇವೆ ಮಾಡುವಾಗ ಸಂಸಾರದಲ್ಲಿದ್ದು ದೇಶದ ವಿರುದ್ದ ನಡೆದು ಭ್ರಷ್ಟಾಚಾರದ ಹಣವನ್ನು ಹಂಚಿಕೊಳ್ಳುವ ಜನರೂ ಇರುತ್ತಾರೆ. ಅವರ ಹಣ ಸರ್ಕಾರಗಳು ಬಳಸುತ್ತಿರುವಾಗ ಎಲ್ಲಿ ಸತ್ಯ ಧರ್ಮ?
ಭ್ರಷ್ಟಾಚಾರ ಮಾಡುವವನಿಗಿಂತ ಭ್ರಷ್ಟಾಚಾರದ ಹಣ ಪಡೆಯುವವನೆ ನಿಜವಾದ ಭ್ರಷ್ಟ. ಕಳ್ಳನ ವೃತ್ತಿ ಕದಿಯುವುದು. ಹಾಗಂತ ಪೋಲಿಸ್ ಕಳ್ಳನಿಗೆ ಸಹಾಯ ಮಾಡಿ ಪಾಲು ಪಡೆದರೆ ತಪ್ಪು ಪೋಲಿಸ್ನದ್ದಾಗುತ್ತದೆ.ಕಾರಣ ಪೋಲಿಸ್ ವೃತ್ತಿ ಧರ್ಮ ದ ವಿರುದ್ದ ನಡೆದ.ಹೀಗೇ ನಾವು ದೇಶದ ಪ್ರತಿಯೊಂದು ಸಮಸ್ಯೆಗೆ ಕಾರಣ ಹುಡುಕಿದರೆ ಮೂಲವೇ ಪ್ರಜೆಗಳಾಗಿರುವಾಗ ಹೊರಗಿನವರನ್ನು ದೂರಿ ದ್ವೇಷ ಮಾಡಿದರೆ ಪರಿಹಾರವಿಲ್ಲ. ಸಂನ್ಯಾಸಧರ್ಮ ಬಹಳ ಶ್ರೇಷ್ಠ. ಇದರಲ್ಲಿ ಯಾವುದೇ ರಾಜಕೀಯ ದ್ವೇಷವಾಗಲಿ, ಸ್ವಾರ್ಥ ಅಹಂಕಾರ, ಅಸಹಕಾರ ಅನ್ಯಾಯ, ಭ್ರಷ್ಟಾಚಾರ ವಾಗಲಿ ಇರಬಾರದು. ಹೀಗಿರುವಾಗ ಎಲ್ಲಿ ನಾವು ಇಂತಹ ಶುದ್ದ ಹೃದಯವಂತರನ್ನು ಕಾಣಬಹುದು? ಕಲಿಗಾಲದ ಪ್ರಭಾವ ನಮ್ಮೊಳಗೇ ಇದ್ದ ಶುದ್ದ ಹೃದಯವನ್ನು ಹೊರಗಿನ ವಿಷಯಗಳಿಂದ ಹಾಳು ಮಾಡಿಕೊಂಡು ದೇಶ ವಿದೇಶದವರೆಗೆ ಧರ್ಮ ಪ್ರಚಾರ ಮಾಡಿದರೂ ಜ್ಞಾನ ವಿಜ್ಞಾನದ ಅಂತರ ಕಡಿಮೆಯಾಗದಿದ್ದರೆ ಆ ಅಂತರವೇ ಅವಾಂತರಕ್ಕೆ ಕಾರಣವಾಗುತ್ತದೆ.
ಜ್ಞಾನವೆಂದರೆ ತಿಳುವಳಿಕೆ ವಿಜ್ಞಾನ ಎಂದರೆ ವಿಶೇಷವಾದ ತಿಳುವಳಿಕೆಯಷ್ಟೆ. ನಮ್ಮೊಳಗೇ ಇರುವ ಸತ್ಯವನ್ನು ಹಿಡಿದು ಅದಕ್ಕೆ ಪೂರಕವಾದ ವಿಶೇಷ ಸತ್ಯದೆಡೆಗೆ ಹೊರಟ ನಮ್ಮ ಹಿಂದಿನ ತತ್ವಜ್ಞಾನಗಳು ಆಧ್ಯಾತ್ಮ ದ ವಿಶೇಷ ಜ್ಞಾನಿಗಳಾದರು ನಂತರ ಸಂಸಾರದ ಸತ್ಯವರಿತು ಸಂನ್ಯಾಸಿಗಳಾಗಿ ಧರ್ಮ ದ ಪ್ರಕಾರ ನಡೆದರು. ಈಗಿನ ವಿಜ್ಞಾನಜಗತ್ತು ಒಳಗಣ್ಣನ್ನು ಮುಚ್ಚಿ ಹೊರಗಣ್ಣನ್ನು ತೆರೆಯುತ್ತಾ ಸತ್ಯ ಬಿಟ್ಟು ಧರ್ಮ ತಿಳಿಯಲು ಭೌತಿಕದ ರಾಜಕೀಯಕ್ಕೆ ಸಹಕಾರ ಕೊಡುತ್ತಾ ಸಂನ್ಯಾಸಿಗಳೇ ರಾಜಕೀಯದೆಡೆಗೆ ಹೊರಟರೆ ಸಂಸಾರದ ಒಳಗಿರುವ ಸಮಸ್ಯೆಗೆ ಹಣದಿಂದ ಪರಿಹಾರ ಕೊಡಬಹುದು
ಆದರೆ ಜ್ಞಾನದಿಂದ ಪರಿಹಾರ ಕೊಡಲಾಗದು.ಇಂದಿನ ಸಮಾಜದಲ್ಲಿ ಯಾರಲ್ಲಿ ಹಣ,ಅಧಿಕಾರ,ಸ್ಥಾನವಿದೆಯೋ ಅವರು ಹೇಳಿದ್ದಷ್ಟೇ ಸತ್ಯವೆನ್ನುವ ಮಂದಿ ಹೆಚ್ಚಾಗಿದ್ದಾರೆ ಇಲ್ಲಿ ಕಣ್ಣಿಗೆ ಕಾಣೋದಷ್ಟೆ ಸತ್ಯ ಕಾಣದ ಅಗೋಚರ ಶಕ್ತಿಯ ಹಿಂದಿನ ಕೆಲಸವನ್ನು ಅರ್ಥ ಮಾಡಿಕೊಳ್ಳಲು ಸೋತರೆ ಅದೇ ದೊಡ್ಡ ನಷ್ಟ.ಒಟ್ಟಿನಲ್ಲಿ ಒಳಗೇ ಅಡಗಿರುವ ದೇವಾಸುರರ ಗುಣವನ್ನು ಮಾನವರು ಗಮನಿಸದೆ ವ್ಯಕ್ತಿಪೂಜೆಗೆ ಹೆಚ್ಚು ಗಮನಕೊಟ್ಟರೆ ವ್ಯಕ್ತಿಯ ನಾಟಕವೂ ತಿಳಿಯದೆ,ಆಟವೂ ಅರ್ಥ ವಾಗದೆ ವೇಷ ಮಾತ್ರ ಕಾಣುವುದಲ್ಲವೆ?
ಕೆಲವರು ಯಾವ ವೇಷಹಾಕದೆ ನಾಟಕವಾಡದೆ ಒಂದು ಶಕ್ತಿಯಿಂದ ತನ್ನ ಪಾಡಿಗೆ ತಾನು ನಡೆದು ನಿಜವಾದ ಸಂನ್ಯಾಸಿಯಾಗಿರುವರು. ಅದನ್ನು ಕಾಣುವ ಒಳದೃಷ್ಟಿ ಬೆಳೆಸಿಕೊಂಡರೆ ನಡೆಯುತ್ತಿರುವ ಎಲ್ಲಾ ನಾಟಕ ಕಾಣುತ್ತದೆ.
ಮಾನವ ನಾಟಕದ ಒಬ್ಬ ಪಾತ್ರಧಾರಿಯಷ್ಟೆ.ಇಲ್ಲಿ ದೇವರ ಪಾತ್ರ ಹಾಕಿಕೊಂಡರೆ ಜನರಿಗೆ ದೇವರಂತೆ ಕಾಣಬಹುದಾದರೂ ಒಳಗಿರುವ ದೈವಶಕ್ತಿಯರಿಯದೆ ದೇವರಾಗೋದು ಕೇವಲ ನಾಟಕ.ಹಾಗೆ ನೇರನುಡಿಯಿಂದ ಸತ್ಯ ತಿಳಿಸಿ ಜನರಲ್ಲಿದ್ದ ಅಜ್ಞಾನ ತೊಲಗಿಸಲು ಮಾಡುವ ನಾಟಕದ ಪಾತ್ರ ಎಲ್ಲರಿಗೂ ಇಷ್ಟವಾಗದು ಅವರನ್ನು ಕೆಟ್ಟವರೆಂದು ದೂರ ಮಾಡಿದರೂ ಸತ್ಯ ಸತ್ಯವಾಗಿರುವಾಗ ಅದೇ ದೈವತ್ವವಾಗುತ್ತದೆ. ಹೀಗಾಗಿ ಭೌತಿಕದ ಸತ್ಯ ಅಧ್ಯಾತ್ಮದ ಸತ್ಯ ಒಂದನ್ನೊಂದು ನೋಡದಿದ್ದರೂ ಎರಡೂ ನಾಟಕದ ಒಂದು ಭಾಗವಾಗಿರುತ್ತದೆ.ಎಷ್ಟು ಹಣಗಳಿಸಿ ರಾಜಕೀಯ ನಡೆಸಿದರೂ ಜ್ಞಾನವಿಲ್ಲವಾದರೆ ಅಧರ್ಮ.
ಜ್ಞಾನವಿದ್ದವರು ಆ ಮಾರ್ಗ ಬಿಟ್ಟು ಅಜ್ಞಾನದೆಡೆಗೆ ನಡೆದರೂ ಅಧರ್ಮ. ಅಧರ್ಮಕ್ಕೆ ಬಲ ಬರಲು ಕಾರಣ ಜ್ಞಾನದ ಸಹಕಾರವಷ್ಟೆ. ಭ್ರಷ್ಟಾಚಾರ ಬೆಳೆದಿರೋದಕ್ಕೆ ಕಾರಣವೇ ಭ್ರಷ್ಟರಿಗೆ ನೀಡಿದ ಸಹಕಾರ.
ಹಿಂದೆ ಸ್ವಾತಂತ್ರ್ಯ ಹೋರಾಟಗಾರರಾಗಿ ದೇಶಭಕ್ತರಾಗಿ ಬ್ರಿಟಿಷ್ ಸರ್ಕಾರದ ವಿರುದ್ದ ನಿಂತವರಲ್ಲಿ ದೇಶಭಕ್ತಿಯು ತತ್ವಜ್ಞಾನದಿಂದ ಮೂಡಿತ್ತು. ಬ್ರಿಟಿಷ್ ತಂತ್ರವನ್ನು ವಿರೋಧಿಸಿ ದೇಶವನ್ನು ಸ್ವತಂತ್ರ ಗೊಳಿಸಿತ್ತು.ಈಗಿನ ಹೋರಾಟವೇ ತಂತ್ರದಲ್ಲಿದೆ. ಜನರನ್ನು ಆಳಲು ತಂತ್ರ ಬಳಸಲಾಗಿದೆ. ಹೊರಗಿನ ತಾಂತ್ರಿಕ ಶಿಕ್ಷಣ ವಿದೇಶಿಗರನ್ನು ಕರೆತಂದು ನಮ್ಮವರನ್ನೇ ವಿದೇಶದ ಕೆಳಗೆ ಸೇವೆ ಮಾಡುವ ತಂತ್ರದಿಂದ ದೇಶ ಸ್ವತಂತ್ರವಾಗಿ ಮುಂದೆ ಬರಬಹುದೆ?
ಒಟ್ಟಿನಲ್ಲಿ ಮೋಸಹೋದವರು ನಾವೇ ಮೋಸ ಮಾಡಿದವರೂ ನಮ್ಮವರೆ ಹೊರತು ಪರಕೀಯರಲ್ಲ.
ಕಣ್ಣಿಗೆ ಕಾಣುವ ದೇವರಿಗೂ ಕಾಣದ ಪರಮಾತ್ಮನಿಗೂ ವ್ಯತ್ಯಾಸವಿಷ್ಟೆ. ಹಣವಿದ್ದರೆ ಮೊದಲು ದೇವರ ದರ್ಶನ ಹಣವಿಲ್ಲದವರಿಗಷ್ಟೆ ಪರಮಾತ್ಮನ ದರ್ಶನ ವಾಗಿರೋದಲ್ಲವೆ? ಯಾರ ಹಿಂದೆ ನಡೆದರೆ ಯಾರ ದರ್ಶನ ಆಗುವುದೆನ್ನುವುದಕ್ಕೆ ಹೆಚ್ಚು ಓದುವ ಅಗತ್ಯವಿರಲಿಲ್ಲ. ಹೃದಯದವರೆಗೆ ತತ್ವಜ್ಞಾನ ಬೆಳೆಸಬೇಕಿತ್ತು. ಆಗಲೇ ಆತ್ಮಶುದ್ದಿಯಾಗುತ್ತದೆಂದರು. ಆದರೆ ಹೊರಗಿರುವ ಊಟ ಉಪಚಾರ, ಸಮಾರಂಭ,ಸಮಾವೇಷ,ಉಚಿತ ಭಾಗ್ಯವು ಒಳಗಿನ ಶುದ್ದತೆಗೆ ಬೆಲೆಯೇ ಕೊಡದೆ ಮನಸ್ಸು ಕಲುಷಿತ
ಆದರೆ ಸತ್ಯ ತಿಳಿಯಲಾಗದೆ ಜೀವ ಮಿಥ್ಯಕ್ಕೆ ಶರಣಾಗುತ್ತದೆ
ಅವರವರ ಮೂಲದ ಧರ್ಮ ಕರ್ಮ, ಗುರುಹಿರಿಯರ ತತ್ವದ ಬಳಕೆಯಾಗಿಲ್ಲ.ಪರರ ಧರ್ಮ ಶಿಕ್ಷಣ,ವ್ಯವಹಾರ,
ಬಂಡವಾಳ ಸಾಲವನ್ನು ಹೆಚ್ಚು ಬಳಸಿಕೊಂಡು ಹೊರಗೆ ಬಂದವರೆ ಹೆಚ್ಚು. ಹೊರಗೆ ಬಂದವರನ್ನು ಒಳಗೆ ಕೂರಿಸಲಾಗದು. ಇವರನ್ನು ಹಿಡಿದು ತಮ್ಮ ಸ್ವಾರ್ಥ ಸಂತೋಷಕ್ಕೆ ಬಳಸಿಕೊಂಡು ಮಧ್ಯವರ್ತಿಗಳು ಮನರಂಜನೆಯಲ್ಲಿದ್ದರೂ ಹೇಳೋರಿಲ್ಲ ಕೇಳೋರಿಲ್ಲ. ಆತ್ಮವಂಚನೆಯ ಜೀವನದಲ್ಲಿ ಸತ್ಯಾಸತ್ಯತೆ ಅರ್ಥ ವಾಗದೆ ದೇಶ ಆತ್ಮನಿರ್ಭರ ಭಾರತದ ಕಡೆಗೆ ಹೊರಗೆ ನಡೆದಿದೆ ಒಳಗಣ್ಣು ತೆರೆದಾಗಲೇ ಸತ್ಯದರ್ಶನ ಸಾಧ್ಯ. ಇಲ್ಲಿ ಯಾರೂ ಶಾಶ್ವತವಲ್ಲ. ಯಾರೂ ಶ್ರೇಷ್ಠ ರಲ್ಲ ಕನಿಷ್ಟರೂ ಇಲ್ಲ. ಅವರವರ ಆತ್ಮಸಾಕ್ಷಿಯಂತೆ ನಡೆಯಲು ಶಿಕ್ಷಣದ ಕೊರತೆ ಇದೆ.ಇದನ್ನು ಕೊಡದೆ ರಾಜಕೀಯ ಮಿತಿಮೀರಿ ಎಲ್ಲಾ ಕ್ಷೇತ್ರ ಬೆಳೆದರೆ ಕ್ಷೇತ್ರದಲ್ಲಿ ದೇವರಿರುವರೆ ಅಸುರರೆ?
ಯಾತ್ರಸ್ಥಳ ಪ್ರಚಾಸಿತಾಣವಾದರೆ ವ್ಯವಹಾರವಷ್ಟೆ. ಪುಣ್ಯಕ್ಷೇತ್ರ ದರ್ಶನ ಮಾಡಿದರೆ ಪುಣ್ಯ ಸಿಗಬಹುದು.ಆದರೆ ನಂತರ ಪಾಪದ ಕರ್ಮ ದಲ್ಲಿ ತೊಡಗಿದ್ದರೆ ಕ್ಷೇತ್ರದರ್ಶನ ಕೇವಲ ಪ್ರವಾಸವಾಗುವುದು. ದೈವತ್ವವು ಆಂತರಿಕ ಶಕ್ತಿ.ಇದು ತತ್ವದಲ್ಲಿದ್ದರೆ ಸತ್ಯದರ್ಶನ. ಇದನ್ನು ನಮ್ಮ ಎಲ್ಲಾ ಶರಣರು,ದಾಸರು,ಸಂತರು ಮಹಾತ್ಮರು,ಋಷಿಮುನಿಗಳು ಸಂಸಾರದೊಳಗಿದ್ದೇ ಅರ್ಥ ಮಾಡಿಕೊಂಡು ಪರಮಾತ್ಮನ ಕಂಡಿದ್ದಾರೆಂದರೆ ನಮ್ಮ ಇಂದಿನ ಪರದೇಶದ ನಡಿಗೆಯಲ್ಲಿ ಒಳಗಣ್ಣು ತೆರೆಯುವುದೆ? ಸ್ವದೇಶದೊಳಗಿರುವ ಪರಮಾತ್ಮ ಕಾಣಬಹುದೆ? ದಯವಿಟ್ಟು ಕ್ಷಮಿಸಿ ಸತ್ಯದ ಹಿಂದಿನ ಉದ್ದೇಶ ದೇಶದಲ್ಲಿ ನಡೆಯುತ್ತಿರುವ ನಾಟಕದ ಹಿಂದಿನ ದುರುದ್ದೇಶ ಎಲ್ಲಾ ಪ್ರಜೆಗಳೂ ತಿಳಿದು ತಮ್ಮ ಆತ್ಮರಕ್ಷಣೆ ತಾವು ಮಾಡಿಕೊಳ್ಳಲು ಸಾಧ್ಯವಾದವರು ತಮ್ಮ ಕಾಲುಬುಡದ ಸ್ವಚ್ಚತಾ ಕಾರ್ಯ ನಡೆಸಬಹುದೆಂದಾಗಿದೆ. ಇಡೀ ದೇಶವೇ ಸಣ್ಣ ದ್ವೇಷದ ಕಿಡಿಯನ್ನು ಹಿಡಿದು ತಮ್ಮ ತಮ್ಮವರಿಗೆ ಕಿಡಿ ಇಟ್ಟು ಬೆಂಕಿ ಹೊತ್ತಿಸಿಕೊಂಡರೆ ಇದರಲ್ಲಿ ಧರ್ಮ ಯಾವುದು ಅಧರ್ಮ ಯಾವುದು? ಇಷ್ಟಕ್ಕೂ ಜನ್ಮ ಪಡೆದು ಬಂದಿದ್ದು ಯಾಕೆ? ಬದುಕುವುದಕ್ಕೋ ದ್ವೇಷದಿಂದ ಸಾಯೋದಕ್ಕೋ?
ಇದಕ್ಕಾಗಿಯೇ ಕೆಲವು ಜೀವ ಹುಟ್ಟುತ್ತವೆ ಸಾಯುತ್ತವೆ. ಎಲ್ಲಾ ಜೀವವೂ ಇದೇ ಕಾರ್ಯಕ್ಕೆ ಹುಟ್ಟುವುದಿಲ್ಲ.ಮುಕ್ತಿ ಪಡೆಯುವ ಮಾರ್ಗವೇ ಶ್ರೇಷ್ಠ. ಇದು ತತ್ವಜ್ಞಾನದಿಂದ ಸಾಧ್ಯ.ತಂತ್ರದಿಂದ ಅಸಾಧ್ಯ. ಪರಮಾತ್ಮನ ದರ್ಶನ ನಿರಾಕಾರ ಬ್ರಹ್ಮನಲ್ಲಿರೋವಾಗ ಆಕಾರವನ್ನು ಹೆಚ್ಚಿಸಿದರೆ ಅಧ್ಯಾತ್ಮ ಪ್ರಗತಿಯೆ? ಈ ಲೇಖನ ಎಲ್ಲಾ ಮಾನವರೂ ಓದಿ ತಿಳಿಯಬಹುದು.ಆದರೆ ಅನುಭವಿಸದೆ ಅರ್ಥ ವಾಗದು. ಎಷ್ಟು ಹೊರಗಿನ ಸಾಲ ಬೆಳೆಯುವುದೋ ಅಷ್ಟೇ ಮಾನವನ ಸಮಸ್ಯೆ ಬೆಳೆಯುವುದು. ಇದೇ ಸತ್ಯ.ಸಾಧ್ಯವಾದಷ್ಟು ಸಾಲ ತೀರಿಸಲು ಸತ್ಕರ್ಮ, ಸ್ವಧರ್ಮ, ಸುಜ್ಞಾನ ಸ್ವಾವಲಂಬನೆ, ಸ್ವಾಭಿಮಾನ,ಸತ್ಯದ ಜೀವನದೆಡೆಗೆ ನಡೆದರೆ ಒಳಗಿರುವ ಸ್ವಚ್ಚಜ್ಞಾನ ಸ್ವತಂತ್ರ ಜ್ಞಾನ ಸಿಗುತ್ತದೆ. ಇದು ಹೊರಗಿಲ್ಲ ಒಳಗೇ ಇದೆ. ಇದಕ್ಕಾಗಿ ಹೊರಗಿನ ರಾಜಕೀಯ ದ್ವೇಷ ಬಿಟ್ಟು ಒಳಗಿನ ರಾಜಯೋಗದ ಶಿಕ್ಷಣ ಪಡೆದರೆ ಆತ್ಮಕ್ಕೆ ಶಾಂತಿ ತೃಪ್ತಿ ಮುಕ್ತಿ .ಇದರಲ್ಲಿ ಏನಾದರೂ ತಪ್ಪು ಕಂಡರೆ ಹೇಳಬಹುದು. ತಪ್ಪು ಮಾನವನ ಸಹಜ ಗುಣ.ತಿದ್ದಿಕೊಂಡು ನಡೆಯುವುದು ಜ್ಞಾನ.ತಿಳಿಯದ ಮಕ್ಕಳಿಗೆ ಸತ್ಯ ತಿಳಿಸಬಹುದು, ಎಲ್ಲಾ ತಿಳಿದ ಮಹಾಯೋಗಿಗೆ ಸತ್ಯ ಹೇಳಬಹುದು ಆದರೆ ಎಲ್ಲಾ ತಿಳಿದೂ ತಪ್ಪು ಮಾಡುವ ಮಧ್ಯವರ್ತಿಗಳನ್ನು ತಿದ್ದಲಾಗದು.
ದ್ವೇಷದ ಕಿಚ್ಚು ದೇಶಕ್ಕೆ ಅಪಾಯ.
ಮಧ್ಯವರ್ತಿಗಳ ಅರ್ಧ ಸತ್ಯವೇ ಅತಂತ್ರ ಭಾರತಕ್ಕೆ ಕಾರಣ. ಕಣ್ಣಿಗೆ ಕಂಡದ್ದರ ಹಿಂದಿನ ಕಾಣದ ಶಕ್ತಿ ಮಾನವನಿಗೆ ತನ್ನ ಅಸ್ತಿತ್ವವನ್ನು ತೋರಿಸಲು ಹೊರಟಿದೆ..
No comments:
Post a Comment