ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Monday, May 22, 2023

ಮಾನವ ಸಾಲ ತೀರಿಸಲು ಸಾಧ್ಯವೆ?ಅಥವಾ ಮಹಾತ್ಮರೆ?

ಯಾಕೆ ಮಾನವ ಹೆಚ್ಚು ಆಸ್ತಿ ಅಂತಸ್ತು ಮಾಡಬಾರದೆನ್ನುವರು?

ಜೀವ ಬರೋವಾಗ ಸಾಲ ಹೊತ್ತು ಬಂದರೆ ಹೋಗುವಾಗ ಸಾಲ ತೀರಿಸಿ ಹೋಗಬೇಕು.ಮತ್ತಷ್ಟು ಸಾಲ ಬಿಟ್ಟು ಹೋಗಬಾರದು ಎನ್ನುವುದು ಹಿಂದೂ ಸನಾತನ ಧರ್ಮದ ತಿರುಳು. ಮಾನವ ಎಷ್ಟು ನನಗೆ ನನ್ನವರಿಗೆ ನಾನು ಮಾಡಬೇಕೆಂದು ಸಾಲಕ್ಕೆ ಕೈ ಚಾಚುವನೋ ಅಷ್ಟು  ಜೀವಕ್ಕೆ ಕಷ್ಟ ನಷ್ಟ ಹೆಚ್ಚುವುದು.ಇತಿಮಿತಿಗಳನ್ನು ಕಾಯ್ದುಕೊಂಡು  ಜೀವನ ನಡೆಸುವುದೇ ಸರಿ.ಅತಿಯಾದ ದೈವ ಶಕ್ತಿಯ ರಾಜಕೀಯವೂ  ಬೇಡ ಅಸುರ ಶಕ್ತಿಯೂ ಅಪಾಯವೆ.
ಭೂಮಿಗೆ ಜೀವ ಬರೋದು ಭೂ ಋಣ ತೀರಿಸಲು ಎಂದು ಅಧ್ಯಾತ್ಮ ತಿಳಿಸಿದರೆ,ಭೌತಿಕ ವಿಜ್ಞಾನ  ಭೂಮಿಯಲ್ಲಿ ಸುಖಶಾಂತಿಯೇ ಮುಖ್ಯವಾದಾಗ ಆಸ್ತಿ ಅಂತಸ್ತು ಅಧಿಕಾರ ಹಣವಿಲ್ಲದ ಜೀವನ ವ್ಯರ್ಥ ಎನ್ನುವುದು.ಇವೆರಡರ ಮಧ್ಯೆ ಜೀವನ ನಡೆಸುವ ಮನುಕುಲಕ್ಕೆ ಅಧ್ಯಾತ್ಮ ಬೇರೆ ವಿಜ್ಞಾನ  ಬೇರೆ ದೃಷ್ಟಿಯಿಂದ ನೋಡುವುದು ಸಹಜ ಗುಣ. ಮಾನವನ ಆಂತರಿಕ ದೃಷ್ಟಿ  ತೆರೆದುಕೊಳ್ಳಲು ಆತ್ಮಜ್ಞಾನದಿಂದ ಸಾಧ್ಯ. ಇದಕ್ಕೆ ಒಳಗಿರುವ‌ ಕಲ್ಮಶಗಳು  ಕಡಿಮೆಯಾಗಲು ಸಾಕಷ್ಟು ರೀತಿಯಲ್ಲಿ  ಸಂಸ್ಕಾರ ಬೇಕಿದೆ.ಸಂಸ್ಕಾರವೆಂದರೆ ಶುದ್ದವಾದ ಮನಸ್ಸು ಕ್ರಿಯೆ ಕರ್ಮ ಶಿಕ್ಷಣ ಹೀಗೇ ಅನೇಕ ಶಾಸ್ತ್ರ ಸಂಪ್ರದಾಯ ಆಚರಣೆ ದೇವತಾರಾಧನೆ  ಪೂಜೆ ಪುನಸ್ಕಾರ ಹಬ್ಬ ಹರಿದಿನ ಪುರಾಣ ಶ್ರವಣ ಮನನ ನಿಧಿಧ್ಯಾಸನ....ಎಲ್ಲಾ ಹೊರಗಿನಿಂದ ಬೆಳೆದ ಹಿಂದೂ ಸನಾತನ ಧರ್ಮದ  ಮೆಟ್ಟಿಲುಗಳಾಗಿವೆ. ಈ ಮೆಟ್ಟಿಲು  ಹಲವರಿಗೆ ಮೇಲಿರುವ ಆ ಪರಮಸತ್ಯವರಿಯಲು ದಾರಿ ಮಾಡಿಕೊಟ್ಟಿತು. ಆದರೆ ಮೆಟ್ಟಿಲು ಹತ್ತುವಾಗಿನ ಕಷ್ಟ ನಷ್ಟಗಳ ಹಿಂದೆ ಜ್ಞಾನವಿದ್ದ ಕಾರಣ ಅದನ್ನು ಪರಮಾತ್ಮನ ಪರೀಕ್ಷೆ ಎಂದು ತಿಳಿದು ಮುಂದೆ ನಡೆದವರು ಮಹಾತ್ಮರಾಗಿ ಈಗಲೂ ಪೂಜನೀಯರಾಗಿದ್ದಾರೆ.ಭೂಮಿಯ ಮೇಲಿದ್ದು ಅಧ್ಯಾತ್ಮ ಸಾಧನೆ ಮಾಡಿದ ಅಸಂಖ್ಯಾತ ಮಹಾತ್ಮರುಗಳು ಯೋಗಿಗಳಾಗದ್ದು ಸತ್ಯ ತಿಳಿದರು. ಇದು ಆಂತರಿಕ ಶುದ್ದತೆ ಕಡೆಗೆ  ಮಾನವ ನಡೆಯಲು ತೋರಿಸಿಕೊಟ್ಟ ದಾರಿಯಷ್ಟೆ.
ಇದನ್ನು ಪ್ರಚಾರ ಮಾಡಬಹುದು.ನಡೆಯುವುದು ಬಿಡುವುದು ಅವರವರಿಗೆ ಬಿಟ್ಟದ್ದು. 
ಭೌತವಿಜ್ಞಾನ ಜಗತ್ತಿನಲ್ಲಿ  ಹರಡಿರುವಾಗ ಭೂ ವಿಜ್ಞಾನವನ್ನು  ಅಷ್ಟು  ಸುಲಭವಾಗಿ ಒಪ್ಪಿಕೊಳ್ಳಲಾಗದು.ಆದರೂ ಇಲ್ಲಿ ಮಾನವನಿಗೆ ಆಶ್ರಯಕೊಟ್ಟಿರುವ ಭೂ ತಾಯಿಯಿಲ್ಲದೆ ಮನುಕುಲ ಯಾವ‌ಸಾಧನೆ ಮಾಡಲಾಗುವುದಿಲ್ಲ ಎನ್ನುವ ಸಾಮಾನ್ಯಜ್ಞಾನ ನಮ್ಮ ಹಿಂದಿನ ಪ್ರತಿಯೊಬ್ಬ ಯೋಗಿಯಲ್ಲಿ ಕಾಣಬಹುದು. ತಮ್ಮ ಸಾಧನೆಯಿಂದ ಭೂಮಿಗೆ ಕಷ್ಟನಷ್ಟ ಇರದೆ ತಾವೂ ಆತ್ಮಸಾಕ್ಷಿಯಂತೆ  ಸರಳವಾಗಿ ಸ್ವತಂತ್ರ ವಾಗಿ ಜೀವನ‌ನಡೆಸುತ್ತಿದ್ದ ಕಾಲ  ಈಗಿಲ್ಲವಾದರೂ ಪ್ರಚಾರವಿದೆ. ಯಾಕೆಂದರೆ ಹಿಂದಿನ ಸದ್ವಿಚಾರ  ಕೊನೆಪಕ್ಷ ಪ್ರಚಾರದಲ್ಲಿ ಇದ್ದರೆ ಮಾನವನಿಗೆ ತನ್ನ ತಪ್ಪಿನ ಅರಿವಾಗಿ  ತಿರುಗಿ ಹಿಂದೆ ಬರುವ‌ಅವಕಾಶವಿದ್ದವರಾದರೂ ಜೀವನ ಸತ್ಯವರಿತು ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳಲು ಸಾಧ್ಯ.
ಇತಿಹಾಸ ಪುರಾಣ ಕಾಲದ ಕಥೆಯಲ್ಲಿ ನಾವು ರಾಜಯೋಗವನ್ನು ಹೆಚ್ಚಾಗಿ ಕಾಣುತ್ತೇವಾದರೂ ಪ್ರಚಾರಕರು ರಾಜಕೀಯವನ್ನು ಹೆಚ್ಚು ಪ್ರಚಾರ ಮಾಡಿದರೆ ಕ್ರಾಂತಿಯೇ ಹೆಚ್ಚು. ಅಸುರ ಶಕ್ತಿಯ ಜೊತೆಗೆ ದೈವಶಕ್ತಿಯೂ ಭೂಮಿ ಆಳುವುದೇ ಮುಖ್ಯವೆಂದರೆ ಸಾಲ ತೀರುವುದೆ? ಸೇವೆಯಲ್ಲಿ ರಾಜಕೀಯವಿರುವುದೆ? ತತ್ವದಲ್ಲಿ ಒಗ್ಗಟ್ಟು ಏಕತೆ ಐಕ್ಯತೆ ಸಮಾನತೆಯೇ ಮುಖ್ಯವಾದಾಗ ಅದನ್ನು ತಂತ್ರವಾಗಿ ಪ್ರಚಾರಮಾಡಿ ಮಾನವನೊಳಗೇ ಅಡಗಿದ್ದ ಸತ್ಯ ಧರ್ಮ ಹಿಂದುಳಿದರೆ ದೇಹರಕ್ಷಣೆಗಾಗಿ ಜೀವಬಳಿಸಿಕೊಂಡು ಆತ್ಮವಂಚನೆ ಹೆಚ್ಚುವುದು. ಇದಕ್ಕೆ ಹೊರಗಿನ ಆಸ್ತಿ ಅಂತಸ್ತು ಅಧಿಕಾರವೇ ಬಂಡವಾಳ. ಈ ಬಂಡವಾಳ  ಹೆಚ್ಚಾದಂತೆ ಸಮಸ್ಯೆ ಒಳಗೇ ಬೆಳೆಯುತ್ತಾ ಸಾಲದ ಹೊರೆ ಹೋರಲಾಗದೆ ಜೀವ ಹೋಗುತ್ತದೆ. ಹೀಗಾಗಿ ಯಾವುದೇ ಇರಲಿ ಇತಿಮಿತಿ ಇರಲಿ ಎಂದರು. ಹಂಚಿಕೊಳ್ಳಲು ಸಾಕಷ್ಟು ಅಧ್ಯಾತ್ಮ ವಿಷಯ ಇದ್ದಂತೆ ಭೌತಿಕದ ವಿಷಯವೂ ಇರುತ್ತದೆ.ಕೇವಲ ಹಂಚಿಕೊಂಡರೆ ಪುಣ್ಯವಿರದು. ಅದರಂತೆ ನಡೆದು ನುಡಿದು ಸತ್ಯ ತಿಳಿದವರು ಹಿಂದಿನ  ಧರ್ಮ ಕರ್ಮ ದ ಮಹತ್ವವರಿತು ಕಾಲ ದೇಶ ಭವಿಷ್ಯವನ್ನು ಅರ್ಥ ಮಾಡಿಕೊಂಡು ಜನರನ್ನು ಶಿಷ್ಯರನ್ನು ಮಹಿಳೆ ಮಕ್ಕಳನ್ನು ಅವರವರ ಜ್ಞಾನ ಸದ್ಬಳಕೆ ಮಾಡಿಕೊಳ್ಳಲು ಅವಕಾಶ ಕೊಟ್ಟು  ಸಂಸಾರದ ಜೊತೆಗೆ ಸಮಾಜದ ಸಮಸ್ಯೆ ಯೂ  ಪರಿಹಾರವಾಗುವ ರೀತಿಯಲ್ಲಿ ಶಿಕ್ಷಣ ನೀಡುತ್ತಿದ್ದ ನಮ್ಮ‌ಮಹಾತ್ಮರು ಯಾವ ಹಣ ಆಸ್ತಿ ಅಂತಸ್ತಿನ ಹಿಂದೆ ನಿಲ್ಲದೆ ಪಾಲಿಗೆ ಬಂದದ್ದು ಪಂಚಾಮೃತ ಎಂದಿದ್ದರು.
ಈಗಿನ ಭಾರತವು ಆಸ್ತಿ ಅಂತಸ್ತಿನಲ್ಲಿ ಯಾವ ಕೊರತೆಯಿಲ್ಲವಾದರೂ ಅದರೊಳಗಿರುವ ಪ್ರಜೆಗಳಲ್ಲಿ ಅಜ್ಞಾನ ಮಿತಿಮೀರಿದೆ. ದೇಶ ವಿದೇಶ ಸುತ್ತುವುದಕ್ಕೆ ಜೊತೆಗೆ ಹೊರಗಿನ ರಾಜಕೀಯನಡೆಸುವುದಕ್ಕೆ, ಪ್ರತಿಮೆಗಳು ದೊಡ್ಡ ದೊಡ್ಡ ಮಹಡಿ ಕಟ್ಟಿ ವ್ಯವಹಾರಕ್ಕೆ ಸಾಕಷ್ಟು ದೇಶದ ಹಣ ಬಳಸುತ್ತಾ ಬಡವರಲ್ಲಿದ್ದ ಉತ್ತಮವಾದ ಜ್ಞಾನ ಗುರುತಿಸದೆ ಸಾಲದ ಹಣವನ್ನು ಕೊಟ್ಟು ಇನ್ನಷ್ಟು ಸಾಲಗಾರರಾಗಿಸಿ ವಿದೇಶಿ ಬಂಡವಾಳ ಸಾಲ ವನ್ನೂ  ದೇಶಕ್ಕೆ ತಂದು ಅದರ ಜೊತೆಗೆ ವಿದೇಶಿಗರನ್ನೂ ಕರೆದುಕೂರಿಸಿ ಭೂಮಿ ಕೊಟ್ಟರೆ  ಇದನ್ನು ಅಧ್ಯಾತ್ಮ ಸಾಧನೆ ಎನ್ನಲಾಗದು.ಎಲ್ಲಾ ನಡೆದಿದೆ ಅದರ ಪ್ರತಿಫಲ ಅನುಭವಿಸುತ್ತಿರುವುದು ಸಾಮಾನ್ಯಪ್ರಜೆಗಳೇ ಕಾರಣ ಪ್ರಜೆಗಳ ಸಹಕಾರವಿಲ್ಲದೆ ಯಾವ ಸರ್ಕಾರವೂ ನಡೆದಿಲ್ಲ. ಹೆಚ್ಚು ಹೆಚ್ಚು ಆಸ್ತಿ ಹಣ ಅಂತಸ್ತು  ಭೌತಿಕದಲ್ಲಿ ಬೆಳೆಸಿದರೂ ಅದರ ಹಿಂದಿನ ಸಾಲ ಮಾತ್ರ ಅಧ್ಯಾತ್ಮ ಶಕ್ತಿ ಕುಸಿಯುವಂತೆ ಮಾಡುತ್ತದೆ ಹೀಗಾಗಿ ಹಿಂದೂ ಧರ್ಮದ ಮಹಾತ್ಮರುಗಳು ಅತಿಯಾಗಿ ಅನಾವಶ್ಯಕ ವಾಗಿ ಕೂಡಿಡಬಾರದು.ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ.ದಾನ ಧರ್ಮ ವೂ ನಿಸ್ವಾರ್ಥ ನಿರಹಂಕಾರದಿಂದ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದಾಗಲೇ  ಪರಮಾತ್ಮನ ಸಾಲಮನ್ನಾ ಆಗೋದು ಎಂದರು.ಈಗಿನ ಪರಿಸ್ಥಿತಿ ಇದಕ್ಕೆ ತದ್ವಿರುದ್ದವಿದೆ. ಹಾಗಾಗಿ ದೇಶ ಹೀಗಿದೆ.ಇದಕ್ಕೆ ಕಾರಣವೇ ಅತಿಯಾದ  ಸಂಪಾದನೆ ಮಿತವಾದ ದಾನಧರ್ಮ ಕರ್ಮದ ಮಾನವನ ಜೀವನ ಶೈಲಿ. ಮನರಂಜನೆಯಲ್ಲಿಯೇ ಆತ್ಮವಂಚನೆಯಿರೋವಾಗ ಎಲ್ಲಿ ಅಧ್ಯಾತ್ಮ. ತನ್ನ ತಾನರಿಯದೆ ಎಲ್ಲಾ ನನ್ನ ತಿಳಿಯಬೇಕೆಂದರೆ? ಇದರಿಂದ ಕಷ್ಟನಷ್ಟ  ತಮಗೇ ಎನ್ನುವ ಜ್ಞಾನವಿದ್ದರೆ ಇದಕ್ಕೆ ಪರಿಹಾರವೂ ಒಳಗೇ ಸಿಗುತ್ತದೆ. ಹಿಂದಿರುಗುವುದು ಕಷ್ಟ.ಆದರೆ ಅನಿವಾರ್ಯ. ಮುಕ್ತಿ ಪಡೆಯಲು ಹಿಂದಿನವರ  ಧರ್ಮ ಕರ್ಮದ ಶುದ್ದತೆಯ ಹಿಂದಿನ ಉದ್ದೇಶ ತಿಳಿದರೆ ಸಾಕು.ಆಹಾರ ವಿಹಾರ ಶಿಕ್ಷಣ,ವ್ಯವಹಾರವೆಲ್ಲವೂ ಮುಂದೆ ಹೋಗಿ ಹಿಂದಿನ  ಕೊಂಡಿ ಕಳಚಿಕೊಂಡರೆ  ಒಗ್ಗಟ್ಟಿಲ್ಲದ ತತ್ವಕ್ಕೆ ಬಲವಿಲ್ಲತಂತ್ರವೇ ಬಲವಾಗುವುದು.ತಂತ್ರ ಅತಂತ್ರ ಜೀವನಕ್ಕೆ ದಾರಿಮಾಡಿಕೊಡದೆ ಸ್ವತಂತ್ರ ಚಿಂತನೆಕಡೆಗೆ ನಡೆದರೆ ಉತ್ತಮವಾದ ಜ್ಞಾನದಿಂದ ಆಸ್ತಿ ಅಂತಸ್ತು ಹಣವನ್ನು ಸದ್ವಿನಿಯೋಗ ಮಾಡಿ ಸಾಲ ತೀರಿಸಬಹುದು. ಒಟ್ಟಿನಲ್ಲಿ ಸರಸ್ವತಿ ಲಕ್ಮಿಯರ ಸಮಾನತೆಯನ್ನು ಕಾಪಾಡಲು ಜ್ಞಾನದ ನಂತರ ಹಣ ಬಂದರೆ ಉತ್ತಮ ಜೀವನ. ಎರಡೂ ಒಂದೇ ನಾಣ್ಯದ ಎರಡು ಮುಖ.ಧರ್ಮದಿಂದ ಹಣಗಳಿಸಿ ಜ್ಞಾನದಿಂದ ಹಣ ಬಳಸಿದರೆ  ಸಂಸಾರದ ಜೊತೆಗೆ ಸಮಾಜವೂ ಉದ್ದಾರ. ಸಾಧ್ಯವೆ?  ಶಂಖದಿಂದ ಬಂದರೆ ತೀರ್ಥ .ಶಂಖ ಊದಿದರೆ  ಶಬ್ದ.ಊದದಿದ್ದರೆ ಕೇಳೋರಿಲ್ಲ. ಕೇಳುಗರಿಗೂ  ಸತ್ಯದ ಅನುಭವ ವಾಗಲೂ ಸಮಯ ಬರಬೇಕು.ಹಾಗಾಗಿ ಪರಮಾತ್ಮ ಕೊಟ್ಟದ್ದು ಹಂಚಿಕೊಳ್ಳಲು ಸತ್ಯಜ್ಞಾನದ ಅಗತ್ಯವಿದೆ.ಮಿಥ್ಯಜ್ಞಾನ ತಾತ್ಕಾಲಿಕ ಸುಖ ನೀಡಿ ದುರ್ಭಳಕೆ ಮಾಡಿಕೊಂಡರೆ ಸಾಲವೇ ಬೆಳೆಯುತ್ತದೆ. ಸಾಲ ತೀರಿದ ಮೇಲೇ ಜೀವನ್ಮುಕ್ತಿ ಎಂದರು ಮಹಾತ್ಮರು.

No comments:

Post a Comment