ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, May 7, 2023

ನಮ್ಮ ಸಹಕಾರ ಯಾರ ಕಡೆಗಿದೆ?

ಜನರ ಸಹಕಾರವೇ ಹದಗೆಟ್ಟು ಹೋಗಿರುವಾಗ ಯಾವ ಪಕ್ಷ ಬಂದರೇನು ಹೋದರೇನು? ಸರ್ಕಾರದ ಹಣ ಬೇಕು ಸೇವೆ ಮಾಡಲಾಗೋದಿಲ್ಲ ಎನ್ನುವ ಜನಸಂಖ್ಯೆ ದೇಶವನ್ನು ಹಾಳು ಮಾಡುತ್ತಿದ್ದರೂ  ಜಾತಿ,ಧರ್ಮ, ಪಕ್ಷದ ನಡುವೆ ಅಂತರ ಹೆಚ್ಚಿಸಿಕೊಂಡಿರುವುದು  ದಾನವರಿಗೆ ವರದಾನವಾಗುತ್ತಿದೆ.
ಒಟ್ಟಿನಲ್ಲಿ  ಭಾರತವನ್ನು ಸ್ಮಾರ್ಟ್ ಮಾಡಲು ವಿದೇಶಿ ತಂತ್ರಜ್ಞಾನ ಬಳಸಿಕೊಂಡು ದೇಶದ  ಧರ್ಮ ತತ್ವ ಹಿಂದುಳಿದರೆ ಇದಕ್ಕೆ ನಾನು ಕಾರಣವಲ್ಲ ಸರ್ಕಾರ ಕಾರಣ ಎನ್ನುವ. ನಮ್ಮ ಅಜ್ಞಾನವೇ ಸತ್ಯವನ್ನು ಮರೆಮಾಚಿದೆ.
.ಪ್ರಜಾಪ್ರಭುತ್ವ ದೇಶ ನಡೆದಿರೋದೆ ಪ್ರಜೆಗಳ ಸಹಕಾರದಲ್ಲಿ. ಎಷ್ಟೋ ವರ್ಷಗಳಾದವು ಸ್ವಾತಂತ್ರ್ಯ ಬಂದು ಅಂದಿನಿಂದಲೂ ಅಧಿಕಾರಕ್ಕಾಗಿ  ಪೈಪೋಟಿ ನಡೆಸಿಕೊಂಡು ಬಂದಿರುವವರಿಗೆ ಜನಬಲ ಹಣಬಲ  ಅಧಿಕಾರ ಸಿಕ್ಕಿದೆ.ಪಕ್ಷ ಬದಲಾದರೂ ಮೀಸಲಾತಿ,ಭ್ರಷ್ಟಾಚಾರ  ಹೋಗದಿದ್ದರೆ  ಏನು ಪ್ರಗತಿಯಾಯಿತು? ಇವೆರಡೂ ಅಜ್ಞಾನದ ಸಂಕೇತ.
ಇಡೀ ವಿಶ್ವದ  ದೇವರ ಮೂಲೆಯಲ್ಲಿರುವ ಭಾರತ ದೇಶ ದೈವತ್ವ ಕಳೆದುಕೊಂಡರೆ  ಪ್ರಗತಿಯೆ?
ಎಲ್ಲಿದೆ  ನ್ಯಾಯ,ನೀತಿ,ಸಂಸ್ಕೃತಿ, ಧರ್ಮ? ಶಿಕ್ಷಣದಲ್ಲಿಯೇ  ಇಲ್ಲದೆ ಹೊರಗೆ ಪ್ರಚಾರ ಮಾಡಿದರೆ ಮಕ್ಕಳು ಮಹಿಳೆಯರು ಎಷ್ಟು ಹೊರಗೆ ಬರುವರೋ ಅಷ್ಟು  ಅಸುರಕ್ಷತೆಯ ಸಂಸಾರ ಬೆಳೆಯುವುದು. ಇದಕ್ಕೆ ಯಾವ ಗ್ರಂಥ ಓದುವ ಅಗತ್ಯವಿಲ್ಲ. ವಿಶೇಷ ಜ್ಞಾನದ ಮೊದಲು  ಸಾಮಾನ್ಯ ಜ್ಞಾನ ಮಾನವನಿಗೆ ಅಗತ್ಯವಿದೆ. ನಮ್ಮ ಭಾರತ ನಡೆದಿರೋದೆ ಸಾಮಾನ್ಯರಿಂದ.
ಅಂತಹ ಶ್ರಮ ಜೀವಿಗಳ ಒಳಗಿರುವ ಜ್ಞಾನವನ್ನು ತಿರಸ್ಕಾರ ಮಾಡಿ ಹೊರಗಿನ ವಿಜ್ಞಾನ  ಬೆಳೆಸಿದರೆ ಅಧರ್ಮ. ಮಕ್ಕಳ ಮುಗ್ದ  ಮನಸ್ಸಿಗೆ ಪ್ರಭುದ್ದವಾದ ವಿಷಯ ತುಂಬಿದರೆ  ಬುದ್ದಿವಂತಿಕೆ ಬೆಳೆದರೂ ಜ್ಞಾನ ಬೆಳೆಯದು.ಆಂತರಿಕ ಜ್ಞಾನಕ್ಕೂ  ಭೌತಿಕ ವಿಜ್ಞಾನಕ್ಕೂ  ಅಂತರ ಬೆಳೆದಷ್ಟೂ ಅಜ್ಞಾನ ಆವರಿಸಿ ಒಮ್ಮೆ ಜೀವ ಹೋಗುತ್ತದೆ. ಹೋದ ಜೀವ ಮರಳಿ ತರುವ ಶಕ್ತಿ ಮಾನವನಿಗಿದೆಯೆ? ದೇವಾನುದೇವತೆಗಳೇ ಮರೆಯಾಗಿರುವಾಗ ಸಾಮಾನ್ಯ ಮಾನವ ಎಲ್ಲಿಯ ಲೆಕ್ಕ.
ಸರ್ಕಾರ ಸತ್ತವರಿಗೆ ಕೊಡುವ  ಹಣಕ್ಕೆ ಬದಲಾಗಿ ಇದ್ದವರಿಗೆ ಜ್ಞಾನ ಬರುವ ಶಿಕ್ಷಣ ಕೊಟ್ಟಿದ್ದರೆ ಭಾರತ ಈ ಸ್ಥಿತಿಗೆ ಬರುತ್ತಿರಲಿಲ್ಲ. ಎಲ್ಲಾ ನಮ್ಮ ಸಹಕಾರದ ಫಲವಷ್ಟೆ.ಅಧಿಕಾರ ಹಣದಿಂದ ಜ್ಞಾನ ಬರದು. ಅದರಿಂದ ದೂರವಿದ್ದವರಷ್ಟೆ ಜ್ಞಾನಿಗಳಾಗಿರೋದು.ಇದು ನಮ್ಮ ಮಹಾತ್ಮರುಗಳಿಂದ ತಿಳಿದು ಅವರಲ್ಲಿದ್ದ ಆ ಜ್ಞಾನಕ್ಕೆ ಅವರ ನಡೆ ನುಡಿಯಲ್ಲಿದ್ದ ಸತ್ಯ ಧರ್ಮ ವೇ ಕಾರಣ. ಇಲ್ಲಿ ಅಸತ್ಯ ಅಧರ್ಮ ವನ್ನು ಬಂಡವಾಳ ಮಾಡಿಕೊಂಡು ಜನರನ್ನು ಆಳುವ ರಾಜಕೀಯ ಮನೆಮಾಡಿದೆ. ಇದರಲ್ಲಿ ಗೆದ್ದವರು ಇನ್ನಷ್ಟು ಆಳುವರು, ಸೋತವರು ಪರದಾಡುವರು ಹೋರಾಟ ಮಾಡುತ್ತಾ ವಿರೋಧ ಮಾಡುತ್ತಾ ಜನರಲ್ಲಿದ್ದ  ಸ್ವಲ್ಪ ಜ್ಞಾನವನ್ನೂ ಅಳಿಸಿ ತಾವೂ ಒಮ್ಮೆ ಮರೆಯಾಗುವರು. ಹಾಗಾದರೆ ಶಾಶ್ವತ ಯಾರು? ಯಾವುದು ಶಾಶ್ವತ? ದೇಶ ಯಾವಾಗಲೂ ಇರೋದೆ.ಆದರೆ ಅದರೊಳಗೆ ಯಾರಿರುವರೋ ಅವರು ದೇಶದ ಪ್ರಜೆಗಳಷ್ಟೆ. ದೇಶ ಸೇವೆಗೆ ಹಣಕ್ಕಿಂತ ಜ್ಞಾನಮುಖ್ಯ.
ಎಷ್ಟು   ದೇಶಭಕ್ತರಿರುವರೋ ಆ ದೇಶ ಸುರಕ್ಷಿತವಾಗಿರುವುದು. ದೇಶದೊಳಗೆ ವಿದೇಶಿಗಳನ್ನು ತುಂಬಿ ಕೊಂಡಿದ್ದರೆ ಸ್ವದೇಶವಾಗುವುದೆ? ಇದೊಂದು ಭ್ರಮೆಯಷ್ಟೆ.ಭೌತಿಕಾಸಕ್ತಿ ಬೆಳೆಸಿಕೊಂಡರೆ  ಹೊರಗಿನ ಸತ್ಯವೆ ಕಾಣೋದು ಒಳಗಿರುವ ಸತ್ಯವೇ ದೇವರೆಂದಾಗ ದೈವತ್ವ ಹಿಂದುಳಿದರೆ ನಮ್ಮನ್ನು ಅಸುರರೆ ಆಳೋದಲ್ಲವೆ?
ಇಲ್ಲಿ ಯಾವ ಪಕ್ಷ ಭ್ರಷ್ಟಾಚಾರ ಮಾಡಿಲ್ಲ? ಭ್ರಷ್ಟಾಚಾರಕ್ಕೆ  ಜನಬಲ ಸಿಕ್ಕಿಲ್ಲವೆ? ಮೀಸಲಾಗಿರುವ ಎಷ್ಟೋ  ಜನರನ್ನು ದುರ್ಭಳಕೆ ಮಾಡಿಕೊಂಡು  ಸಾಲದ ಹೊಳೆಯಲ್ಲಿ ಮುಳುಗಿಸಿರುವಾಗ ಸಾಲ ತೀರಿಸಲು ಸರ್ಕಾರವೇ ಮತ್ತಷ್ಟು ಭ್ರಷ್ಟಾಚಾರಿಗಳಿಗೇ ಅಧಿಕಾರ ಕೊಟ್ಟರೆ ಶಿಷ್ಟಾಚಾರ ಎಲ್ಲಿರುವುದು? ಇಲ್ಲಿ ಒಬ್ಬ ವ್ಯಕ್ತಿಯಿಂದ ದೇಶ ಹಾಳಾಗಿಲ್ಲ ಒಳಿತೂ ಆಗಿಲ್ಲ.ಜನರ  ಅಜ್ಞಾನದ ಸಹಕಾರದಿಂದ  ಬೆಳೆದಿದೆ.
ಈ ಸಹಕಾರ ಜ್ಞಾನದ ಮೂಲಕ ಬೆಳೆದಾಗಲೇ ಆತ್ಮನಿರ್ಭರ ಭಾರತ. ಆತ್ಮಜ್ಞಾನ ಒಳಗಿದೆ.ವಿಜ್ಞಾನ ಹೊರಗಿದೆ.ಮೂಲ ಸರಿಪಡಿಸದೆ ಬೆಳೆದ ರೆಂಬೆ ಕೊಂಬೆಗಳನ್ನು ಕತ್ತರಿಸಿದರೆ ಏನು ಉಪಯೋಗವಿಲ್ಲ. ಮೂಲದ ಬೇರನ್ನು ಅರ್ಥ ಮಾಡಿಕೊಂಡು  ಕಿತ್ತು ಹೊಸ ಸಸಿ ನೆಡಬೇಕು.  ಆ ಸಸಿ ಸತ್ಪಲ ನೀಡುವಂತಿರಬೇಕು. ಅದೂ ಹೊರಗಿನ ಬಳುವಳಿಯಾದರೆ ?
ಬೆಳೆಯುವ ಪೈರು ಮೊಳಕೆಯಲ್ಲಿಯೇ ಎನ್ನುವಂತೆ ಮೊಳಕೆ ಸರಿಯಿಲ್ಲದೆಯೇ ಬೆಳೆಸಿದರೆ ದೊಡ್ಡದಾಗಿ ಬೆಳೆದು ಎಲ್ಲವನ್ನೂ ಸುತ್ತಿಕೊಂಡು ಬೆಳೆಯದಂತೆ ಮಾಡುವುದಲ್ಲವೆ?
ಈಗಲಾದರೂ ಸಾಮಾನ್ಯರ ಸಾಮಾನ್ಯಪ್ರಜ್ಞೆ ಕಡೆಗೆ ಗಮನ ಕೊಟ್ಟರೆ  ಪ್ರಜಾಪ್ರಭುತ್ವ ಉಳಿಸಬಹುದಷ್ಟೆ. ಇಲ್ಲಿ ಎಲ್ಲಾ ಕ್ಷೇತ್ರವೂ  ಜನರ ಹಣದಲ್ಲಿಯೇ ಬಲದಲ್ಲಿಯೇ ಭ್ರಷ್ಟಾಚಾರ ಕ್ಕೆ ಸಹಕರಿಸಿರುವಾಗ ಇದರ ಫಲ ಜನರೆಡೆಗೇ ತಿರುಗಿ ಬರಲು ಕಾರಣವೇ ಸಹಕಾರ. ನಮ್ಮ ಸಹಕಾರವೇ ಎಲ್ಲಾ ಅನರ್ಥಕ್ಕೆ ಕಾರಣವಾಗಿರುವಾಗ ಮೇಲೇರಿದವರನ್ನು ಕೇಳುವ ಅಧಿಕಾರ ಇಲ್ಲ. ಕೇಳಿದರೂ ಅರ್ಥ ವಾಗದು. ಮೇಲೆ ಹೋದವರನ್ನು ಸರಿಪಡಿಸಲಾಗದ ಮೇಲೆ ಕೆಳಗಿದ್ದವರನ್ನು ಎಚ್ಚರಿಸಿ ಸರಿ ದಾರಿಗೆ ತರುವ ಪ್ರಯತ್ನ ಮಾಡಬಹುದು.ಮಕ್ಕಳಿಗೆ ಶಿಕ್ಷಣ ನೀಡುವಾಗ ಅವರೊಳಗಿನ‌ಜ್ಞಾನ,ಆಸಕ್ತಿ, ಪ್ರತಿಭೆ ಜೊತೆಗೆ ನಮ್ಮ ಮೂಲ ಧರ್ಮ ಕರ್ಮ ಸಂಸ್ಕಾರದ ಬಗ್ಗೆ ಮನೆಯ ಒಳಗಿನ ಗುರು ಹಿರಿಯರು ಪೋಷಕರು ಗಮನಕೊಟ್ಟರೆ ಹತ್ತಿರವೇ ಇರುವ ಆಶಕ್ತಿ ನಮ್ಮನ್ನು ಕಾಯುವುದು.ಅದನ್ನು ಬಿಟ್ಟು ಹೊರಹೋದಷ್ಟೂ ಅಂತರ ಬೆಳೆದು ಜೀವನವೇ ಅತಂತ್ರಸ್ಥಿತಿಗೆ ತಲುಪುವುದರಲ್ಲಿ ಸಂದೇಹವಿಲ್ಲ.
ಹಣದ ಬಡತನವಿರುವವರಲ್ಲಿ ಜ್ಞಾನದ ಸಿರಿತನವಿರುವುದು.
ಹಣದ ಸಿರಿತನವಿದ್ದವರಿಗೆ ಜ್ಞಾನದ ಬಡತನವಿರುವುದು.
ಇವೆರಡೂ ಒಂದೇ ನಾಣ್ಯದ ಮುಖವಾಗಿ ವ್ಯವಹಾರಕ್ಕೆ ಇಳಿದಾಗಲೇ  ಅಜ್ಞಾನ ಇನ್ನಷ್ಟು ಬೆಳೆಯುವುದು. ಧರ್ಮದ ಹಾದಿಯಲ್ಲಿ ನಡೆದವರಿಗಷ್ಟೆ  ಇದರ ಜ್ಞಾನವಿದ್ದು ಸದ್ಬಳಕೆ ಆಗುತ್ತದೆ. ಹಾಗಾಗಿ ಇಲ್ಲಿ ಅಜ್ಞಾನದ ಕಾರಣದಿಂದಾಗಿ ದೇಶ ವಿದೇಶದಕಡೆಗೆ ವೇಗವಾಗಿ ನಡೆಸಿದ್ದಾರೆ. ವೈಜ್ಞಾನಿಕ ಚಿಂತನೆ ವೈಚಾರಿಕ ಚಿಂತನೆ  ನಡುವಿನ  ಸಾಮಾನ್ಯರ ಚಿಂತನೆಗೆ ಬೆಲೆ ಕೊಡದ ಮಧ್ಯವರ್ತಿಗಳು  ಮನರಂಜನೆಗಾಗಿ ಆತ್ಮವಂಚನೆಗೆ ಬೆಲೆಕೊಟ್ಟರೆ ಇದು ಮನುಕುಲಕ್ಕೆ ನಷ್ಟ. ದೇವಾಸುರರ ನಡುವೆ ಮಾನವ ತನ್ನ ನಿಜವಾದ ಅಸ್ತಿತ್ವಕ್ಕೆ ಹೋರಾಟ ನಡೆಸುವಂತಾಗಿರೋದು  ವಾಸ್ತವ ಸತ್ಯ. ಯಾವ ಪಕ್ಷ ಬಂದರೂ ಪ್ರಜೆಗಳಲ್ಲಿ ದೇಶಭಕ್ತಿ ಇಲ್ಲವಾದರೆ ಉಪಯೋಗವಿಲ್ಲ.ಭಕ್ತಿ  ಆಂತರಿಕ ಶಕ್ತಿ. ಇದನ್ನು ಯಾರೂ ಹೊರಗಿನಿಂದ ತುಂಬಲಾಗದು. ಒಳಗಿನವರೆ  ಕಂಡುಕೊಂಡು ತಿಳಿದು ತಿಳಿಸಿದಾಗಲೇ ಆತ್ಮನಿರ್ಭರ ಭಾರತ. ಅದು ಬಿಟ್ಟು ಮಹಿಳೆ ಮಕ್ಕಳೆ ಮನೆಯಿಂದ ಹೊರಬಂದರೆ ಸಾಧ್ಯವೆ? ಎಷ್ಟೇ ಹಣಸಂಪಾದಿಸಿದರೂ ಸದ್ಬಳಕೆ ಮಾಡಿಕೊಂಡು ಉಳಿತಾಯ ಮಾಡುವ ಜ್ಞಾನವಿಲ್ಲವಾದರೆ ಸಾಲದಿಂದ ಬಿಡುಗಡೆ ಸಿಗದು. ಅಧ್ಯಾತ್ಮ  ಭೌತಿಕದ  ನಡುವಿರುವ  ಅಜ್ಞಾನಕ್ಕೆ ಕಾರಣ ರಾಜಕೀಯತೆ. ಯಾರನ್ನೂ ಯಾರೋ ಆಳುವುದೆ ಅಜ್ಞಾನ. ಆಳುವುದಿದ್ದರೆ ಮೊದಲು ನಮ್ಮನ್ನು ನಾವು ಆಳಿಕೊಳ್ಳಲು ಬೇಕಾದ ಜ್ಞಾನವಿರಬೇಕಿತ್ತು. ಹಣದಿಂದ ಆಳುವುದಾಗಲಿ ಅದರಲ್ಲೂ ವಿದೇಶಿ ಶಿಕ್ಷಣ ಬಳಸಿ ಬಂಡವಾಳ,ಸಾಲ, ವ್ಯವಹಾರದಿಂದ ದೇಶ ಆಳುವುದರಲ್ಲಿ ಧರ್ಮ ವಿದೆಯೆ? ಜನಮರುಳೋ ಜಾತ್ರೆಯೋ ಎಂದಂತಾಗಿದೆ. ಕುಳಿತು ತಿನ್ನುವವರಿಗೆ ಕುಡಿಕೆ ಹಣ ಸಾಲದು.
ಕೋಟ್ಯಾಂತರ ರೂ ಚುನಾವಣೆಗೆ ಬಳಸಲಾಗುತ್ತಿದೆ ಎಂದರೆ ಯಾರದ್ದೂ ದುಡ್ಡು ಯಲ್ಲಮ್ಮನ ಜಾತ್ರೆ ಎಂದಂತೆ. ಇದು ಎಲ್ಲಾ ಪಕ್ಷಗಳ ಕಥೆ. ಇದೇ ಜನರ ವ್ಯಥೆಯಾಗದಿದ್ದರೆ ಸರಿ.ಪ್ರಜ್ಞಾವಂತರ ಭಾರತ ಪ್ರಜ್ಞೆ ತಪ್ಪಿ ನಡೆದಿದೆ ಎಂದರೆ ತಪ್ಪೆ? ಎಲ್ಲಿರುವುದು ಧರ್ಮ? ದೇವರು? ದೇಶ? 
ನಾಟಕದಲ್ಲಿ ನಾಟಕವಾಡುವಾಗ ನಮ್ಮ ಪಾತ್ರ ಪರಿಚಯ ಅಗತ್ಯವಾಗಿರಬೇಕು. ಯಾರೋ ಪಾತ್ರ ಕೊಟ್ಟು ಖಾಲಿ ಪಾತ್ರೆ ಹಿಡಿಯುವಂತಾಗಬಾರದಲ್ಲವೆ?

ಮತದಾನ ಎಲ್ಲಾ ಪ್ರಜೆಗಳ ಧರ್ಮ. ಇದು ಧರ್ಮದ ಪರ ಇದ್ದರೆ ನಿಜವಾದ ದಾನ. ಅಧರ್ಮಿಗಳಿಗೆ ದಾನವರಿಗೆ ಕೊಟ್ಟರೆ  ಅದೇ ಮುಂದೆ  ಸಮಸ್ಯೆಗೆ ಕಾರಣ. ಒಟ್ಟಿನಲ್ಲಿ ದೇಶದ ನಾಡಿನ ಹಿತವನ್ನು  ತಿಳಿದವರು ಮತವನ್ನು ಹಣದಿಂದ ಖರೀದಿಸುವುದಿಲ್ಲ. ಜನರು ಮತ ಹಾಕೋದಕ್ಕೆ ಮತವನ್ನು ಮಾರಿಕೊಳ್ಳುವುದಿಲ್ಲ.  ಇದು ನಿಜವಾದ ಚುನಾವಣೆಯಾಗಿರುತ್ತದೆ.50ಶೇ ಜನರು ಮತಚಲಾಯಿಸದೆ
ದೇಶದೊಳಗೆ  ಇದ್ದಾರೆಂದರೆ ಇದನ್ನು ಕಾನೂನಿನಿಂದ  ಸರಿ ಪಡಿಸಲಾಗದೆ? ಇದರ ಬಗ್ಗೆ ಪ್ರಶ್ನೆ ಮಾಡಬಾರದೆ? 

No comments:

Post a Comment