ಭಾರತದ ಇತಿಹಾಸದಲ್ಲಿ ಸಮಾನತೆಯ ಹೋರಾಟದ ಯುದ್ದದಲ್ಲಿ ಗೆದ್ದವರು ಯಾರು ಸೋತವರು ಯಾರು ಎನ್ನುವ ಪ್ರಶ್ನೆ ಗೆ ಉತ್ತರ ಈಗಿನ ಅಸಮಾನತೆ ತಿಳಿಸುತ್ತದೆ. ಇಲ್ಲಿ ಸಮಾನತೆಯನ್ನು ರಾಜಕೀಯವಾಗಿ ಅರ್ಥ ಮಾಡಿಕೊಂಡವರೆ ಹೆಚ್ಚು ರಾಜಯೋಗದಿಂದ ಸಮಾನತೆಯನ್ನು ತಿಳಿಸಿದ ಮಹಾತ್ಮರನ್ನು ಅನುಸರಿಸಿದವರು ವಿರಳ.ಹೀಗಾಗಿ ಸರಳವಾಗಿದ್ದ ತತ್ವ ತಂತ್ರಕ್ಕೆ ಬಳಕೆಯಾಗುತ್ತಾ ಅಸಮಾನತೆಯು ತಾಂಡವವಾಡಿ ತನ್ನ ಅಸ್ತಿತ್ವಕ್ಕೆ ತಾನೇ ಹೋರಾಟ ಮಾಡುವ ಪರಿಸ್ಥಿತಿ ಮಾನವನಿಗೆ ಹೆಚ್ಚಾಗಿದೆ. ಹಾಗಾದರೆ ಸಮಾನತೆ ಎಂದರೇನು?
ಎಲ್ಲಾ ಸಮಾನರಾದರೆ ಯಾಕಿಷ್ಟು ರಾಜಕೀಯ ದ್ವೇಷ?
ಎಲ್ಲಾ ಸರಿಸಮಾನರಾಗಿದ್ದರೆ ಎಲ್ಲರಲ್ಲಿಯೂ ಅಡಗಿರುವ ಆ ಪರಮಶಕ್ತಿ ಯಾಕೆ ಜಾಗೃತವಾಗಿಲ್ಲ?
ದೇವರಿರೋದು ಸತ್ಯವೆಂದಿರುವ ಮಹಾತ್ಮರನ್ನು ನಂಬುವ ನಮಗೆ ದೇವರು ಕಾಣುತ್ತಿಲ್ಲ ಯಾಕೆ?
ಕಾರಣವೇನೆಂದರೆ ನಮ್ಮ ಕಲಿಕೆಯಲ್ಲಿ ಆಗಿರುವ ವ್ಯತ್ಯಾಸ.
ಅಂದಿನ ಕಲಿಕೆಯು ಆಂತರಿಕ ಶುದ್ದಿಯ ಕಡೆಗೆ ನಡೆದಿತ್ತು ನಂತರ ಭೌತಿಕದೆಡೆಗೆ ಮಾನವ ನಡೆದು ಸತ್ಯಾಸತ್ಯತೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿತ್ತು.
ಅಧ್ಯಾತ್ಮ ಮಾನವನಲ್ಲಿ ಆತ್ಮಚೈತನ್ಯ ಹೆಚ್ಚಿಸುವಂತಿದ್ದು
ಇದರಲ್ಲಿ ರಾಜಕೀಯ ಒಂದು ಭಾಗವಷ್ಟೆ.ಅದೂ ಕೂಡ ಧರ್ಮದ ತಳಹದಿಯಲ್ಲಿತ್ತು.
ಧರ್ಮದಲ್ಲಿಯೂ ಮೂರು ರೀತಿಯ ಧರ್ಮ ಕಾಣಬಹುದು
ಒಂದು ದೇವತೆಗಳ ಧರ್ಮ, ಮಾನವಧರ್ಮ, ಅಸುರಧರ್ಮ.
ಈಗಲೂ ಈ. ಮೂರೂ ಗುಣಗಳ ಜನರಿದ್ದರೂ ಧರ್ಮ ವೇ ರಾಜಕೀಯದ ವಶದಲ್ಲಿರುವಾಗ ಸ್ವತಂತ್ರ ವಾಗಿರುವ ಸ್ವಧರ್ಮ ಮಾನವನಿಗೆ ಕಾಣಲಾಗುತ್ತಿಲ್ಲ.
ದೇಶದೊಳಗೆ ಅಸಂಖ್ಯಾತ ಧರ್ಮ, ಜಾತಿ,ಪಕ್ಷಗಳು ದೇವರ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ವ್ಯವಹಾರಕ್ಕೆ ಇಳಿದು ಹಣ ಹೆಸರು ಅಧಿಕಾರ ಪಡೆದರೂ ಅದು ಶಾಶ್ವತ ಸುಖ ನೀಡುವುದಿಲ್ಲ ಎನ್ನುವ ಸತ್ಯಜ್ಞಾನವಿಲ್ಲದೆ ಅಸಮಾನತೆ ಬೆಳೆದಿದೆ.
ಒಂದೇ ಸತ್ಯವನ್ನು ಹಲವಾರು ರೀತಿಯಲ್ಲಿ ಹಲವಾರು ಪುರಾಣ, ಇತಿಹಾಸವನ್ನು ಅಸಂಖ್ಯಾತ ಸಂಶೋಧಕರಿಗೆ ಕಂಡಂತೆ ವಿವರಿಸಿದ್ದರೂ ಅದರಿಂದ ಸಮಾಜದಲ್ಲಿ ಶಾಂತಿ ಬೆಳೆದಿದ್ದರೆ ಸರಿ ಇಲ್ಲವಾದರೆ ಅದು ಅಸತ್ಯವಾಗಿರುತ್ತದೆ.
ಅನುಭವಜ್ಞಾನವು ಅವರವರ ಮನಸ್ಸಿಗೆ ಸರಿಯಾಗಿದ್ದರೂ
ಆ ಆ ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ತರಲು ಸಹಾಯ ಮಾಡಿದ್ದರೂ ವಾಸ್ತವದಲ್ಲಿ ನಾವೆಷ್ಟು ಅದರಲ್ಲಿದ್ದ ಸತ್ಯ ಸತ್ವತತ್ವವನ್ನು ನಮ್ಮೊಳಗೇ ಅಳವಡಿಸಿಕೊಂಡು ಸತ್ಯ ತಿಳಿದೆವು ಎನ್ನುವುದು ಬಹಳ ಮುಖ್ಯ.
ರಾಜಕೀಯಕ್ಕೆ ಇಳಿದಾಗ ಆತ್ಮವಿಮರ್ಷೆಗೆ ಸಮಯವಿರದು
ಹೀಗಿರುವಾಗ ನಾನೇ ಸರಿಯಿಲ್ಲದೆ ಪರರನ್ನು ಸರಿಪಡಿಸಲಾಗದು. ಆಗೋದಾದರೂ ಅದು ನಮ್ಮ ಜೊತೆಗೆ ಇರುವ ಮಹಾತ್ಮರುಗಳ ಸಹಕಾರ, ಸಹಾಯ,ಆಶೀರ್ವಾದದಿಂದ ಸಾಧ್ಯವಿದೆ. ಹಾಗಾಗಿ ಇಲ್ಲಿ ಏನೇ ಬದಲಾವಣೆ ಆಗಬೇಕಾದರೆ ಮೊದಲು ನಾವು ಬದಲಾಗಬೇಕಿದೆ.ನಮ್ಮ ದಾರಿ ಸರಿಯಿದ್ದರೆ ಗುರಿ ತಲುಪಬಹುದು. ಸತ್ಯವಿದ್ದರೆ ಧರ್ಮ ವಿರುತ್ತದೆ. ಹಾಗೆಯೇ
ಪೋಷಕರು ಉತ್ತಮ ಮಾರ್ಗದಲ್ಲಿದ್ದರೆ ಮಕ್ಕಳೂ ಉತ್ತಮ ಮಾರ್ಗದಲ್ಲಿರುವರು. ಹೊರಗೆ ಕಾಣುವುದಕ್ಕಿಂತ ಒಳಗಿನ ಸಂಶೋಧನೆಯೇ ಮುಖ್ಯ.
ಅಂದರೆ ಅಧ್ಯಾತ್ಮದ ನಂತರವೇ ಭೌತಿಕದ ಸತ್ಯ ದರ್ಶನ ಸಾಧ್ಯ.
ಅಧ್ಯಾತ್ಮ ದ ಹೆಸರಿನಲ್ಲಿ ಅಸತ್ಯ ಅನ್ಯಾಯ ಅಸಮಾನತೆ ಹೆಚ್ಚಿದಂತೆಲ್ಲ ಭೌತಿಕದಲ್ಲಿ ಭ್ರಷ್ಟಾಚಾರ ಹೆಚ್ಚುವುದು. ದೈವತ್ವಕುಸಿದಂತೆಲ್ಲಾ ಅಸುರೀ ಗುಣಗಳು ಮಾನವನೊಳಗೆ ಪ್ರವೇಶಿಸಿ ಆಳುವುದು.
ಹಿಂದೆ ಇಂದು ಮುಂದೆ ಯಾವಾಗಲೂ ಈ ಮೂರೂ ಶಕ್ತಿಯ ಪ್ರೇರಣೆಯಂತೆ ಮನುಕುಲ ನಡೆದಿದೆ.ಶ್ರೀ ರಾಮಚಂದ್ರನು ಸಾಮಾನ್ಯಪ್ರಜೆಯ ಮಾತಿಗೆ ಬೆಲೆಕೊಟ್ಟು ಪತಿವ್ರತೆಯಾದ ಸೀತಾಮಾತೆಯನ್ನೇ ತೊರೆದ ಕಾಲವನ್ನೂ ಈ ಜಗತ್ತು ನೋಡಿದೆ ಹಾಗೆ ಎಷ್ಟೋ ದೇವಾನುದೇವತೆಗಳ ಕಾಲದ ಕಥೆಯೂ ಕೇಳಿದೆ ಈಗಿನ ಕಥೆಯೂ ಪ್ರಚಾರದಲ್ಲಿದೆ ಅಂದರೆ ಕಥೆಯ ಹಿಂದಿನ ತತ್ವ ಉತ್ತಮವಾಗಿದ್ದರೆ ಜೀವನದಲ್ಲಿ ವ್ಯಥೆ ಇರದು. ತಂತ್ರವೇ ಹೆಚ್ಚಾಗಿದ್ದರೆ ಸ್ವತಂತ್ರ ಇರದು. ಎಷ್ಟೇ ಮೇಲೆ ಕೆಳಗೆ ಮಾಡಿದರೂ ಈ ಭೂಮಿಯಿಂದ ಮುಕ್ತಿ ಪಡೆಯುವುದಕ್ಕೆ ತತ್ವಜ್ಞಾನವೇ
ಬೇಕು.
ತಂತ್ರದಿಂದ ಭೂಮಿಯನ್ನು ಆಳಬಹುದಾದರೂ ಅದರ ಫಲ ತಿರುಗಿ ಬರೋವಾಗ ಆಳಾಗಿ ದುಡಿಯುವುದು ಅಗತ್ಯ.
ವಾಸ್ತವತೆಗೆ ಬಂದರೆ ಪುರಾಣ ಇತಿಹಾಸದ ತತ್ವ ಶಾಸ್ತ್ರ ಒಂದೇ ಆದರೂ ಅದರ ಪ್ರಚಾರಕರು ಒಂದಾಗಿಲ್ಲ ಇಲ್ಲಿ ಅಸಮಾನತೆ ತಾಂಡವವಾಡುತ್ತಿರುವಾಗ ಮಧ್ಯವರ್ತಿಗಳು ಮಾಧ್ಯಮಗಳು ಮಧ್ಯೆ ಇರುವ ಮಾನವರು ಮುಂದೆ ನಡೆಯುವುದೇ ದೊಡ್ಡ ಸಮಸ್ಯೆ. ಹಾಗೇ ಮುಂದೆ ನಡೆದವರೆ ಮಹಾತ್ಮರಾಗಿರೋದು ಅವರಿಗೆ ಯಾವುದೇ ರಾಜಕೀಯ ಬೆಂಬಲವಿರಲಿಲ್ಲ.ಸಮಾಜದ ಸಹಕಾರವಿರಲಿಲ್ಲ ಆದರೂ ಸ್ವತಂತ್ರ ಜ್ಞಾನವಿದ್ದ ಕಾರಣ ಮುಂದೆ ನಡೆದರು.ಈಗಲೂ ಭಾರತದ ಸಾಮಾನ್ಯಪ್ರಜೆಗಳಿಗೆ ಸ್ವತಂತ್ರ ಜ್ಞಾನ ಒಳಗಿದೆ.ಅದನ್ನು ಸ್ವತಂತ್ರವಾಗಿ ಬೆಳೆಸಿಕೊಳ್ಳಲು ನಮ್ಮ ಶಿಕ್ಷಣ ಅವಕಾಶ ಕೊಟ್ಟಿಲ್ಲವೆನ್ನುವುದೇ ಭಾರತೀಯರ ಈ ಸಮಸ್ಯೆಗಳಿಗೆ ಕಾರಣ. ಇಲ್ಲಿ ವಿದೇಶಿಗಳ ಶಿಕ್ಷಣಕ್ಕೆ ಸಹಕಾರ ಹೆಚ್ಚಾಗಿ ಕೊಟ್ಟು ಸ್ವದೇಶ ಶಿಕ್ಷಣವನ್ನು ನಿರ್ಲಕ್ಷ್ಯ ಮಾಡಿದವರಿಗೆ ವಿದೇಶಿ ಸಂಸ್ಥೆ ಕೆಲಸ ಕೊಟ್ಟು ವಿದೇಶದವರೆಗೆ ಕರೆಸಿಕೊಂಡಿತು. ಹಣ ಅಧಿಕಾರವಿದ್ದರೂ ಸ್ವದೇಶದ ಮೂಲ ಭೂತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಂತ್ರದಿಂದ ಅಸಾಧ್ಯವಾಗಿದೆ. ಸಮಸ್ಯೆ ಒಳಗಿದೆ ಪರಿಹಾರ ಹೊರಗಿನಿಂದ ಪಡೆದಷ್ಟೂ ಹೆಚ್ಚುವುದು.ಅಧ್ಯಾತ್ಮದ ಪ್ರಕಾರ ನಾವೆಷ್ಟೇ ಹೊರಗಿನಿಂದ ಸೇರಿಸಿದರೂ ಒಳಗೆ ಬೆಳೆಯುತ್ತದೆ.ಅದು ಸದ್ಗುಣವಾಗಿದ್ದರೆ ಉತ್ತಮ ಶಾಂತಿ.ದುರ್ಗುಣವಾಗಿದ್ದರೆ ಕ್ರಾಂತಿಯ ಅಶಾಂತಿ.
ನಮ್ಮ ಗುಣಕ್ಕೆ ಹೊಂದಿಕೊಳ್ಳುವ ಗುಣವನ್ನು ಹೊರಗಿನಿಂದ ಸೇರಿಸಿದರೆ ಉತ್ತಮ.ಇದರಲ್ಲಿ ದೈವಗುಣ, ಮಾನವಗುಣ ಅಸುರಗುಣವಿದೆ. ದೈವಗುಣಕ್ಕೆ ಸಾಕಷ್ಟು ಕಷ್ಟಪಟ್ಟು ತ್ಯಾಗ ಮಾಡಬೇಕು ಹೀಗಾಗಿ ಮಾನವ ಇದನ್ನು ಇಷ್ಟಪಡೋದಿಲ್ಲ
ಮಾನವಗುಣದಲ್ಲಿ ಪ್ರತಿಫಲಾಪೇಕ್ಷೆ ಬಯಸೋದು ಸಹಜ ಇದರಿಂದ ಋಣ ತೀರೋದಿಲ್ಲ.
ಇನ್ನು ಅಸುರಗುಣವಂತೂ ಅತಿಯಾದ ಸ್ವಾರ್ಥ ಅಹಂಕಾರದೆಡೆಗೆ ನಡೆಸುವುದಾದರೆ ಮಾನವನಿಗೆ ಮಾನವನೆ ಶತ್ರು. ಈ ಮೂರರಲ್ಲಿ ನಮ್ಮೊಳಗಿರುವ ಯಾವ ಗುಣದಿಂದ ನಮಗೆ ಕಷ್ಟ ನಷ್ಟ ಅತೃಪ್ತಿ ಅಸಹಾಯಕತೆ ಅನ್ಯಾಯ ಅಧರ್ಮ ಅಸತ್ಯ ಹೆಚ್ಚಿಗೆಯಾಗಿದೆ ಇದರಿಂದಾಗಿ ನಮ್ಮ ಆತ್ಮಬಲ ಎಷ್ಟು ಕ್ಷೀಣಿಸಿದೆ ಬೆಳೆದಿದೆ ಎನ್ನುವ ಪ್ರಶ್ನೆ ಎಲ್ಲಾ ಮಾನವರೂ ಸ್ವಯಂ ಚಿಂತನೆ ನಡೆಸುವುದಕ್ಕೂ ಯೋಗವಿರಬೇಕು. ಕಾರಣ ಯೋಗಾಸನದಿಂದ ಯೋಗ ಎನ್ನುವ ಬದಲು ಯೋಗಾಸನದಿಂದ ನಮ್ಮ ಮನಸ್ಸಿನ ನಿಗ್ರಹ ಎಷ್ಟರ ಮಟ್ಟಿಗೆ ಆಗಿದೆ ಎನ್ನುವ ಬಗ್ಗೆ ಚಿಂತನೆ ಅಗತ್ಯ.
ಮನಸ್ಸೇ ಮನುಷ್ಯನ ಶತ್ರುವೂ ಹೌದು ಮಿತ್ರನೂ ಹೌದು.
ಮನಸ್ಸಿನಲ್ಲೇ ಅಡಗಿರುವ ಅಸಮಾನತೆಯೆನ್ನುವ ವಿಷ ಬೀಜ ಬಿತ್ತಿದವರು ಈಗಿಲ್ಲವಾದರೂ ಬೆಳೆದು ಹರಡಿರುವುದು ನಾವೇ ಆದಾಗ ನಿಜವಾಗಿಯೂ ಅಸಮಾನತೆ ಎಂದರೇನು?
ಸಮಾನವಾಗಿ ಎಲ್ಲಾ ಇರಲು ಸಾಧ್ಯವೆ? ಯಾವ ಕಾಲದಲ್ಲಿ ಇತ್ತು? ಶ್ರೀ ರಾಮನ ಕಾಲದಲ್ಲೇ ಅಲ್ಲಲ್ಲಿ ಇದ್ದ ಇದನ್ನು ಸ್ವಯಂ ಮಹಾರಾಜನಾಗಿ ಹೇಗೆ ಧರ್ಮದ ಹಾದಿಯಲ್ಲಿ ನಡೆದು ಜನಪ್ರಿಯನಾಗಿ ದೇವನಿಗೆ ದೇವನಾಗಿ ಮಹಾದೇವನಾದರೂ ಈಗಿನಮಾನವರು ಆ ರಾಮನನ್ನೂ ಬಿಡದೆ ರಾಜಕೀಯ ನಡೆಸಿರುವ ಕಲಿಗಾಲದ ಇಂದಿನ ಭಾರತದಲ್ಲಿ ಜನ ಬುದ್ದಿವಂತರು ಸತ್ಯ ಅರ್ಥ ಮಾಡಿಕೊಳ್ಳುವ ಶಕ್ತಿಯಿದೆ. ಆದರೆ ಇದನ್ನು ರಾಜಕೀಯವಾಗಿಸಿದರೆ ಅಧರ್ಮ ವಾಗಿ ಇರುವ ಸತ್ಯವೂ ಹಿಂದುಳಿಯುವುದು.
ಇಡೀ ಭಾರತ ದೇಶವು ಸ್ವತಂತ್ರವಾಗಿ ಉಳಿಯಲು ದೇಶಭಕ್ತರು ಹೋರಾಡಿದ್ದರು. ಈಗ ಆ ಸ್ವತಂತ್ರ ಜ್ಞಾನ ಬಿಟ್ಟು ಪರತಂತ್ರಜ್ಞಾನ ಒಳಗೆಳೆದುಕೊಂಡಂತೆ ಆಳವಾದ ತತ್ವಜ್ಞಾನದ ಸಮಾನತೆ ಅರ್ಥ ವಾಗದೆ ಅತಂತ್ರಸ್ಥಿತಿಗೆ ತಲುಪಿತು. ಆದರೂ ಈಗಲೂ ಒಗ್ಗಟ್ಟನ್ನು ಬೆಳೆಸಿಕೊಳ್ಳಲು ಸಾಕಷ್ಟು ಕಾರ್ಯಕ್ರಮ ಹೊರಗೆ ನಡೆದಿದೆ.ಇದೇ ರೀತಿ ಮನೆಯ ಒಳಗೆ ಒಗ್ಗಟ್ಟನ್ನು ಬೆಳೆಸಿಕೊಂಡರೆ ಹೊರಗಿನ ಶತ್ರುಗಳಿಗೆ ಸ್ಥಳವಿರದು.ಯಾವಾಗ ಮನೆಯವರನ್ನೇ ಹೊರಗೆ ಕಳಿಸಿ ಹೊರಗಿನವರನ್ನು ಸ್ವಾಗತಿಸುವ ಪಾಶ್ಚಾತ್ಯ ಸಂಸ್ಕೃತಿ ಬೆಳೆಯಿತೋ ಅದೇ ಈಗ ಮನೆ ಒಡೆಯುವ ಕೆಲಸಮಾಡುತ್ತಿದೆ. ಮನರಂಜನೆಯ ಹಿಂದಿರುವ ಆತ್ಮವಂಚನೆ ಗಮನಕೊಡದ ಅಜ್ಞಾನ ಬೆಳೆದಿದೆ.ಇದಕ್ಕೆ ಸಹಾಯಕರಾಗಿರೋದೂ ನಮ್ಮವರೆ ಅಂದರೆ ಅಜ್ಞಾನದಲ್ಲಿ ನಮಗೆ ನಾವೇ ಶತ್ರುವಾಗಿ ನಿಂತಾಗ ಇದನ್ನು ತಡೆಯಲಾಗದು.
ಒಟ್ಟಿನಲ್ಲಿ ಮಕ್ಕಳು ಮಹಿಳೆಯರು ಈ ದೇಶದ ಆಸ್ತಿ.ಇವರ ಒಳಗಿರುವ ಸತ್ಯಜ್ಞಾನ ಎಷ್ಟು ಸದ್ಬಳಕೆ ಆಗುವುದೋ ಅದು ಭಾರತಮಾತೆಯ ಶಕ್ತಿಯಾಗುತ್ತದೆ. ಯಾವಾಗ ವಿಶ್ವಗುರು ಶಕ್ತಿಯುತವಾಗಿ ಬೆಳೆಯುವಳೋ ವಿಶ್ವವೇ ಜಾಗೃತವಾಗುತ್ತದೆ.
ಇಷ್ಟಕ್ಕೂ ಸಾವನ್ನು ಗೆದ್ದವರಿಲ್ಲ. ಇದ್ದೂ ಇಲ್ಲದಂತಿರೋ
ದೆಂದರೆ ಏನೂ ಮಾಡದಿರೋದಲ್ಲ. ಸತ್ಯಕ್ಕೆ ಬೆಲೆಕೊಟ್ಟು ಆತ್ಮಸಾಕ್ಷಿ ಯಂತೆ ನಡೆಯುವುದು ಮಹಾತ್ಮರ ಲಕ್ಷಣ. ಇವರಿಗೆ ಜೀವಕ್ಕಿಂತ ಆತ್ಮರಕ್ಷಣೆಯೇ ಮುಖ್ಯ.ಹೀಗಾಗಿ ದೇಶಕ್ಕಾಗಿ ಧರ್ಮ ಕ್ಕಾಗಿ ಹೋರಾಟ ಮಾಡಲು ಮುಂದಾಗುವರು. ದೇಶ ಆಳುವಮೊದಲು ನನ್ನ ನಾನು ಆಳಿಕೊಳ್ಳುವ ಜ್ಞಾನ ಮುಖ್ಯವೆಂದಿದ್ದಾರೆ ವಿವೇಕಾನಂದರು. ಯುವಪೀಳಿಗೆಗೆ ಪಾಶ್ಚಾತ್ಯ ಶಿಕ್ಷಣ ನೀಡಿ ದೇಶರಕ್ಷಿಸಿ ಎಂದರೆ ಅವರಲ್ಲಿರುವ ರಕ್ತದಲ್ಲಿ ವಿದೇಶಿ ತಂತ್ರವಿರುತ್ತದೆ ಸ್ವದೇಶದ ತತ್ವವಲ್ಲ.ನಮ್ಮವರನ್ನೇ ಬಿಟ್ಟು ವಿದೇಶಕ್ಕೆ ಹೋದವರಿಗೆ ದೇಶಭಕ್ತಿ ಇರಲು ಸಾಧ್ಯವೆ? ನಿಜವಾದ ದೇಶಭಕ್ತರು ದೇಶಕ್ಕಾಗಿ ಒಳಗಿದ್ದು ದುಡಿದು ಸ್ವಯಂ ಸೇವಕರಾಗಿರುವರು ಇಂತವರಿಗೆ ಸಹಕಾರ ನೀಡಿದರೂ ಪುಣ್ಯಕಾರ್ಯ ವಾಗುವುದು.
ಹಿಂದಿನಿಂದಲೂ ಭಾರತವನ್ನು ಆಳಲು ಬಂದ ಅನ್ಯಧರ್ಮಕ್ಕೆ ಭಾರತದ ಸತ್ವ ಸತ್ಯ ತತ್ವ ತಿಳಿಯಲಾಗಿಲ್ಲ. ಕಾರಣ ಮೇಲೆ ಕಾಣುವ ಸತ್ಯಕ್ಕೂ ಒಳಗಿರುವ ಸತ್ಯಕ್ಕೂ ಬಹಳ ಅಂತರವಿದೆ.
ಅಂತರಾಳಕ್ಕೆ ಇಳಿದಾಗಲೇ ಇದು ಅರ್ಥ ವಾಗುತ್ತದೆ. ಹಾಗೇ ಇಳಿಯುವುದಕ್ಕೆ ಎಲ್ಲರಿಗೂ ಸ್ವತಂತ್ರ ಜ್ಞಾನವಿದೆ.ಆದರೂ ಇಳಿಯಲು ಭೌತಿಕದ ಶಿಕ್ಷಣ ಬಿಡದೆ ಹೊರಗೆಳೆದರೆ ಜೀವನ ಅತಂತ್ರಸ್ಥಿತಿಗೆ ತಲುಪುತ್ತದೆ.
ಯಾರೋ ಯಾರನ್ನೂ ಆಳುವುದಕ್ಕೆ ರಾಜಪ್ರಭುತ್ವ ವಿಲ್ಲ.
ಆದರೂ ಪ್ರಜೆಗಳಾಗಿ ದೇಶದ ಭವಿಷ್ಯಕ್ಕೆ ಉತ್ತಮವಾದ ಆಡಳಿತ ನಡೆಸುವವರು ಅಗತ್ಯವಾಗಿದ್ದಾರೆ.
ಇದಕ್ಕೆ ಪೂರಕವಾದ ಜ್ಞಾನ ಪ್ರಜೆಗಳಿಗೆ ಕೊಟ್ಟಾಗಲೇ ದೇಶ ಭಕ್ತಿ ಹೆಚ್ಚಾಗಲು ಸಾಧ್ಯ.ಹೇಗೆ ದೇವರು ಕಾಣದಿದ್ದರೂ ದೇವರನ್ನು ಪೂಜಿಸುವರೋ ದೇಶವನ್ನು ನೋಡುವ ದೃಷ್ಟಿ ಇದ್ದರೆ ಸಮಾನತೆಗೆ ಅರ್ಥ ವಿದೆ. ಅಸುರರಿಗೆ ಅಧಿಕಾರ ಕೊಟ್ಟು ದೇಶವನ್ನು ವಿದೇಶ ಮಾಡಬೇಕೋ ಅಥವಾ ಉತ್ತಮರಿಗೆ ಸಹಕರಿಸಿ ಸ್ವದೇಶವನ್ನು ಸ್ವಧರ್ಮ ವನ್ನು ಉಳಿಸಿಕೊಳ್ಳಬೇಕೋ ತೀರ್ಮಾನ ಮಾಡುವುದು ಪ್ರಜೆಗಳ ಧರ್ಮ ಹಾಗು ಕರ್ಮ ವಷ್ಟೆ. ಇದಕ್ಕೆ ತಕ್ಕಂತೆ ನಮ್ಮೊಳಗಿನ ಜೀವನದ ಪಯಣವಿದೆ. ಜೀವ ಒಳಗಿದೆ ನಮ್ಮ ನಡೆ ಹೊರಗಿದೆ.ಸಮಾನತೆ ಎಲ್ಲಿದೆ? ಆತ್ಮಾವಲೋಕನ ಅಗತ್ಯವಿದೆ.
ಪ್ರಜೆಗಳ ತಪ್ಪು ನಡೆ ನುಡಿಯೇ ಅಸಮಾನತೆಗೆ ಕಾರಣ.
ಇದನ್ನು ದುರ್ಭಳಕೆ ಮಾಡಿಕೊಂಡು ಆಳುವವರಿಗೆ ನಮ್ಮದೇ ಸಹಕಾರ ಸಿಕ್ಕಿದರಂತೂ ಆತ್ಮಹತ್ಯೆಯೇ ಹೆಚ್ಚುವುದು.
ಆತ್ಮನಿರ್ಭರ ಭಾರತವು ಅಧ್ಯಾತ್ಮದ ತತ್ವಜ್ಞಾನದಿಂದ ಬೆಳೆದರೆ ಶಾಂತಿ,ಸಮೃದ್ದಿ ,ತೃಪ್ತಿ ಮುಕ್ತಿ. ಇದು ಕೇವಲ ನಾಟಕೀಯವಾಗಿ ರಾಜಕಾರಣದೆಡೆಗೆ ನಡೆದಿದ್ದರೆ ಆತ್ಮದುರ್ಭಲ ಭಾರತವಾಗುವುದು. ಇದರಲ್ಲಿ ಸತ್ಯ ನಮ್ಮ ಅನುಭವಕ್ಕೆ ಬರುತ್ತಿದೆ.ನಾವು ಒಪ್ಪಲು ಕಷ್ಟವಿದೆ.ಅದಕ್ಕೆ ಜೀವನ ಕಷ್ಟವಾಗಿದೆ. ಉತ್ತಮ ವಿಚಾರದಲ್ಲಿ ಸಮಾನತೆ ಇದ್ದರೆ ಉತ್ತಮ ಪ್ರಗತಿ. ಶಂಖದಿಂದ ಬಂದರೆ ಮಾತ್ರ ತೀರ್ಥ ಎನ್ನುವ ಕಾಲದಲ್ಲಿ ಶಂಖದಲ್ಲಿ ಕುಳಿತ ಕೊಳೆ ನೋಡಲು ಕಷ್ಟ
ಸತ್ಯ ಒಂದೇ ಇದ್ದರೂ ಅಸತ್ಯ ಬೆಳೆಯುತ್ತಿರುವುದು ಎಲ್ಲಿಂದ? ನಮ್ಮೊಳಗಿಂದಲೇ ಬೆಳೆಯುತ್ತಿರುವ ಅಸತ್ಯವೇ ಅಸಮಾನತೆಗೆ ಕಾರಣವಾಗಿರುವಾಗ ನಾವು ಸತ್ಯದ ಪರ ನಿಂತರೆ ಸಮಾನತೆಯ ತತ್ವದರ್ಶನ ಸಾಧ್ಯವಿದೆ. ಇಲ್ಲವಾದರೆ ತಂತ್ರದೆಡೆಗೆ ಹೊರಟವರ ಜೀವನವೇ ಅತಂತ್ರಸ್ಥಿತಿಗೆ ತಲುಪುತ್ತದೆ. ಇದೊಂದು ಸಾಮಾನ್ಯಜ್ಞಾನವಷ್ಟೆ. ಬ್ರಹ್ಮನ ಅರ್ಥ ಮಾಡಿಕೊಳ್ಳಲು ಕಷ್ಟವಾದರೂ ನಮ್ಮ ಸೃಷ್ಟಿ ಯ ಮೂಲ ತಿಳಿಯಬಹುದಲ್ಲ. ಅದರ ಧರ್ಮ ಕರ್ಮ ದಲ್ಲಿ ಸತ್ಯ ಸತ್ವ ತತ್ವ ಬೆಳೆಸಬಹುದಲ್ಲ. ಇದಕ್ಕೆ ಹೊರಗಿನ ರಾಜಕೀಯ ಬೇಕೆ? ಒಳಗಿನ ರಾಜಯೋಗವೆ? ಯೋಗಿಗಳ ದೇಶವನ್ನು ಭೋಗದೆಡೆಗೆ ನಡೆಸಿರೋದೆ ರಾಜಕೀಯವಾಗಿರುವಾಗ ಇದರಿಂದ ರೋಗ ಹರಡಿರೋದಕ್ಕೆ ನಮ್ಮ ಸಹಕಾರ ಕಾರಣ.
ನಾನೇ ಕಾರಣವಾಗಿರುವಾಗ ನನ್ನ ಬದಲಾವಣೆ ನಾನೇ ಕಷ್ಟಪಟ್ಟು ಮಾಡಿಕೊಳ್ಳಲು ದೈವತ್ವದ ಜ್ಞಾನವಿರಬೇಕೆನ್ನುವುದೇ ಅಧ್ಯಾತ್ಮ ಸತ್ಯ. ಕಣ್ಣಿಗೆ ಕಾಣದ ಈ ಶಕ್ತಿಯನ್ನು ದುರ್ಭಳಕೆ ಮಾಡಿಕೊಳ್ಳುವುದು ಸುಲಭ ಆದರೆ ಅದರ ಪ್ರತಿಫಲ ಅನುಭವಿಸುವುದೇ ಕಷ್ಟ. ರೋಗವನ್ನು ಯಾರೂ ಹಂಚಿಕೊಳ್ಳಲು ಬರೋದಿಲ್ಲ. ಇದು ಕೊರೊನ ಮಹಾಮಾರಿ ತೋರಿಸಿದ್ದಾಳೆ. ಜನಸಾಮಾನ್ಯರ ಸಾಮಾನ್ಯಜ್ಞಾನವನ್ನು ಬೆಳೆಯಲು ಬಿಟ್ಟರೆ ಸ್ವತಂತ್ರ ವಾಗಿ ಸತ್ಯ ತಿಳಿಯುತ್ತಾ ದೈವತ್ವದೆಡೆಗೆ ಮನುಕುಲ ಹೋಗಬಹುದು. ಅಸುರರ ಹಿಂದೆ ನಡೆದಷ್ಟೂ ಆತ್ಮಹತ್ಯೆ ಹೆಚ್ಚುವುದು. ಹಣದಿಂದ ಜ್ಞಾನವಲ್ಲ. ಗುಣದಿಂದ ಜ್ಞಾನ ಬೆಳೆದಿದೆ. ಇದರಲ್ಲೂ ಸದ್ಗುಣ ದುರ್ಗುಣ ಎರಡಿದೆ. ಇವೆರಡೂ ಒಂದೇ ನಾಣ್ಯದ ಎರಡು ಮುಖವಷ್ಟೆ.ಸದ್ಗುಣ ಹೆಚ್ಚಾದಂತೆ ದುರ್ಗುಣದವರು ಕಾಣಿಸುವುದು.
ದುಷ್ಟರಿಗೆ ಸಹಕರಿಸುತ್ತಿರುವವರನ್ನು ದುಷ್ಟರು ಎನ್ನುವ ಬದಲು ಅಜ್ಞಾನಿಗಳೆಂದರೆ ಸರಿಯಾಗಬಹುದಷ್ಟೆ. ಇವರ ಸಹಕಾರದಿಂದ ದುಷ್ಟ ಶಕ್ತಿ ತಡೆದುಕೊಂಡಿರಬಹುದು ಅಥವಾ ಇನ್ನಷ್ಟು ಬೆಳೆದು ತಮ್ಮ ವಿನಾಶ ತಾವೇ ಮಾಡಿಕೊಳ್ಳಬಹುದು.
ಶ್ರೀ ಕೃಷ್ಣಾವತಾರದಲ್ಲಿ ಕಂಸನ ಒಳ್ಳೆಯ ಗುಣದಿಂದ ದೇವಕಿಯ ಮೊದಲ. ಮಕ್ಕಳ ಹತ್ಯೆ ಮಾಡಿರಲಿಲ್ಲ ನಾರದರು ಬಂದು ಪ್ರಚೋಧನೆಕೊಟ್ಟು ತನ್ನ ಅಂತ್ಯಕ್ಕೆ ತಾನೇ ತಯಾರಿ ಮಾಡಿಕೊಂಡ ಕಂಸ. ಒಟ್ಟಿನಲ್ಲಿ ಪರಮಾತ್ಮನ ಇಚ್ಚೆಯಿಲ್ಲದೆ ಏನೂ ನಡೆಯದು, ನಡೆಯುತ್ತಿಲ್ಲ.ನಡೆಯುವುದೂ ಇಲ್ಲ.
ಹೀಗಾಗಿ ಅವರವರ ಆತ್ಮರಕ್ಷಣೆ ಅವರೆ ಮಾಡಿಕೊಂಡರೆ ಉತ್ತಮ.
ದುರ್ಗುಣದವರು ಹೆಚ್ಚಾದಂತೆ ಸದ್ಗುಣದವರು ಸಹಕಾರ ನೀಡಿ ಸುಮ್ಮನಿದ್ದರೆ ಅವರನ್ನೂ ಆಳುವರು.ಸಮಾನತೆಗೆ ಭೂಮಿಯ ಸಮತೋಲನಕ್ಕೆ ಇವೆರಡೂ ತಮ್ಮದೇ ಆದ ಕೆಲಸದಲ್ಲಿ ತೊಡಗಿರುವುದೇ ಜಗತ್ತಿನ ನಿಯಮ.
ಯಾವುದೂ ಅತಿಯಾದರೆ ಗತಿಗೇಡು.
No comments:
Post a Comment