ಯಾಕೆ ಭಾರತೀಯರಿಗೆ ಭಾರತದಲ್ಲಿ ನೆಮ್ಮದಿಯಿಲ್ಲ ಸುಖವಿಲ್ಲ ಶಾಂತಿಯಿಲ್ಲ?
ಭಾರತ ತತ್ವಜ್ಞಾನಿಗಳ ದೇಶ. ಇದನ್ನು ಹಿಂದಿನ ಮಹಾತ್ಮರು ತತ್ವದಿಂದ ಉಳಿಸಿ ಬೆಳೆಸಿ ಗೌರವಿಸಿದ್ದರು. ಇತ್ತೀಚೆಗೆ ನಮ್ಮ ಜೀವನವೇ ತಂತ್ರಮಯವಾಗಿದೆ. ಅದೂ ಸ್ವತಂತ್ರವಾಗಿದ್ದ ತಂತ್ರವಲ್ಲ ಹೊರಗಿನವರಿಂದ ಪಡೆದ ತಂತ್ರಜ್ಞಾನ. ಮನಸ್ಸು ಹೊರಗಿದ್ದು ದೇಹ ಮಾತ್ರ ಒಳಗಿದ್ದರೆ ಹೇಗೆತಾನೆ ನೆಮ್ಮದಿ ಸುಖ ಶಾಂತಿ ಪಡೆಯಬಹುದು? ಯೋಗವೆಂದರೆ ಸೇರುವುದು ಕೂಡುವುದೆಂದರ್ಥ ಮನಸ್ಸು ಆತ್ಮ ಸೇರಿದರೆ ಯೋಗ. ನಮ್ಮ ಮನಸ್ಸು ವಿದೇಶದೆಡೆಗೆ ನಡೆದಿದ್ದು ಅದ್ಯಾತ್ಮ ಮಾತ್ರ ಕೇಳಿಬಿಡುವುದಾದರೆ ಹಣಸಂಪಾದನೆಯು ತಂತ್ರದ ವಶವಾಗಿದ್ದು ಜ್ಞಾನ ತತ್ವದೆಡೆಗೆ ಬೆಳೆಸುವುದು ಕಷ್ಟ. ಹೀಗಾಗಿ ಅದ್ವೈತ ದ್ವೈತ ವಿಶಿಷ್ಟಾದ್ವೈತ ವು ಪ್ರಚಾರದಲ್ಲಿದ್ದರೂ ಅದರ ಒಂದೇ ಉದ್ದೇಶ ಒಂದಾಗಲಾಗಿಲ್ಲ.ಆದರೂ ಅದರ ಅರಿವು ನಮ್ಮಲ್ಲಿ ಸ್ವಲ್ಪ ಇರುವುದರಿಂದ ಧರ್ಮ ಉಳಿದಿದೆ. ಪರಕೀಯರ ತಂತ್ರಕ್ಕೂ ನಮ್ಮ ತಂತ್ರಕ್ಕೂ ಬಹಳ ವ್ಯತ್ಯಾಸವಿಲ್ಲ .ಇಬ್ಬರಿಗೂ ಇನ್ನೊಬ್ಬರನ್ನು ಆಳುವ ಆಸೆ. ಆಳುವುದೆಂದರೆ ಸುಲಭದ ಮಾತಲ್ಲ.ಇದಕ್ಕೆ ಸಾಕಷ್ಟು ಹಣ ಬೇಕು. ಹೆಚ್ಚು ಹಣಗಳಿಸಲು ತತ್ವದಿಂದ ಸಾಧ್ಯವಿಲ್ಲ.ಹಾಗಾಗಿ ತಂತ್ರಪ್ರಯೋಗವಾಯಿತು. ತಂತ್ರದಿಂದ ಗಳಿಸಿದ ಹಣವು ಪೂರ್ಣ ಸತ್ಯದ ಸಂಪಾದನೆಯಾಗದ ಕಾರಣ ಅಸತ್ಯಕ್ಕೆ ತಕ್ಕಂತೆ ನಷ್ಟವೂ ಆಗುತ್ತದೆ. ಆ ನಷ್ಟ ಸರಿಪಡಿಸಲು ಮತ್ತಷ್ಟು ತಂತ್ರಸಾಧನೆ ಹೀಗೇ ತಂತ್ರದ ಬೆಳವಣಿಗೆಯು ತತ್ವದಿಂದ ದೂರವಾಗುತ್ತಾ ಸ್ವತಂತ್ರ ಜ್ಞಾನವಿಲ್ಲದೆ ಪರತಂತ್ರದ ಜೀವನ ನಡೆಸುವಂತಾಗಿದೆ. ಮಾನವನಿಗೆ ಆತ್ಮತೃಪ್ತಿ ಸಿಗೋದಕ್ಕೆ ತತ್ವದಿಂದ ಮಾತ್ರ ಸಾಧ್ಯ.ರಾಜಕೀಯದಲ್ಲಿ ತತ್ವ ನಡೆಯದು ಹೀಗಾಗಿ ರಾಜಕೀಯದ ಹಿಂದೆ ನಡೆದವರಿಗೆ ನೆಮ್ಮದಿ, ಸುಖ ಶಾಂತಿ ಸಿಗೋದಿಲ್ಲ.ಹಾಗೇನಾದರೂ ಸಿಕ್ಕಿದ್ದರೆ ಅಧರ್ಮದ ನಡೆ ನುಡಿಯಾಗಿದ್ದರೂ ತಾತ್ಕಾಲಿಕ ವಷ್ಟೆ. ಹೀಗಾಗಿ ತತ್ವದ ಪ್ರಕಾರ ಎಲ್ಲಾ ಒಂದೇ ಶಕ್ತಿಯ ಪ್ರತಿಬಿಂಬಗಳೆಂದರು.ಅವರವರ ಹಿಂದಿನ ಋಣ ಕರ್ಮಕ್ಕೆ ತಕ್ಕಂತೆ ಜನ್ಮ ಪಡೆಯುವರೆಂದರು.ಅತಿಆಸೆಯೇ ಗತಿಗೇಡು ಎಂದರು, ಜನರ ಸೇವೆಯೇ ಜನಾರ್ದನನನ ಸೇವೆ ಎಂದರು. ಕಾಯಕವೇ ಕೈಲಾಸ ವೆಂದರು.ಕೊನೆಗೆ ಮಾಡಿದ್ದುಣ್ಣೋ ಮಹಾರಾಯ ಎಂದು ಮುಂದೆ ನಡೆದರು ಮಹಾತ್ಮರುಗಳು. ಇವರಲ್ಲಿ ತಂತ್ರವಿರದೆ ಸ್ವತಂತ್ರ ಜ್ಞಾನವಿದ್ದು ಅದನ್ನು ತತ್ವದಿಂದ ತಿಳಿದು ಯೋಗಿಗಳಾದರು. ಈಗ ಇದಕ್ಕೆ ವಿರುದ್ದದ ಜೀವನವಿದೆ. ಹೀಗಾಗಿ ಸ್ವತಂತ್ರವಾಗಿ ಚಿಂತನೆ ನಡೆಸಿ ಯೋಗಿ ಆಗುವುದಕ್ಕೆ ಕಷ್ಟವಾಗಿ ಭೋಗದೆಡೆಗೆ ಹೋದಂತೆಲ್ಲಾ ರೋಗ ಹೆಚ್ಚಾಗಿ ಮಾನವನಿಗೆ ಸಿಗಬೇಕಾದ ಸುಖ, ನೆಮ್ಮದಿ ಶಾಂತಿ ಮನೆಯೊಳಗೆ ಇದ್ದರೂ ಹೊರಗಿನ ರಾಜಕೀಯದ ಸುದ್ದಿ ಬಿಡದೆ ಕಾಡುತ್ತಿದೆ.ಇದಕ್ಕೆ ಪರಿಹಾರ ರಾಜಕೀಯ ಬಿಟ್ಟು ತತ್ವವರಿತು ಸ್ವತಂತ್ರವಾಗಿ ಬದುಕಲು ಕಲಿತು ತಂತ್ರದ ಸಹಾಯದಿಂದ ಗಳಿಸಿದ ಹಣವನ್ನು ಸದ್ಬಳಕೆ ಮಾಡಿಕೊಂಡು ದಾನ ಧರ್ಮದಿಂದ ಪರಮಾತ್ಮನ ಸ್ಮರಣೆಯಲ್ಲಿರೋದು.ಎಷ್ಟು ಮಂದಿಗೆ ಸಾಧ್ಯವಿದೆ? ಸೇವೆ ಮಾಡೋದಾದರೆ ತತ್ವವಿರಬೇಕಿದೆ.ಯೋಗವಿರಬೇಕು. ಇದು ಕಲಿಗಾಲ ಹಾಗಾಗಿ ನಿಧಾನವಾಗಿ ಸತ್ಯತಿಳಿಯುತ್ತಾ ಪರಮಾತ್ಮನ ಹಿಂದೆ ಹಿಂದೆ ನಡೆದರೆ ಒಳಗಿರುವ ಪರಮಾತ್ಮನ ಸೇರಬಹುದು. ಹೊರಗಿರುವ ಪರಕೀಯರ ಹಿಂದೆ ಹಿಂದೆ ನಡೆದಷ್ಟೂ ತಂತ್ರವೇ ಜೀವವನ್ನು ಹಿಂಡುತ್ತದೆ.
ಯೋಗಿ ಬಯಸಿದ್ದು ಯೋಗಿಗೆ ಭೋಗಿ ಬಯಸಿದ್ದು ಭೋಗಿಗೆ. ಯೋಗಿಯೇ ಭೋಗಿಯ ಬಯಸಿದರೆ ರೋಗಿ.
ಮನೆಯೊಳಗೆ ಸಾಕಷ್ಟು ಆಧುನಿಕ ಯಂತ್ರವಿದ್ದಷ್ಟೂ ನಮ್ಮ ಸ್ವತಂತ್ರ ಕ್ಕೆ ಹಾನಿ. ಇಲ್ಲಿ ಒಳಗಿನ ಸ್ವತಂತ್ರವೇ ಬೇರೆ ಹೊರಗಿನ ಸ್ವತಂತ್ರ ಬೇರೆಯಾಗಿದೆ. ಯಾವಾಗ ನಮ್ಮ ಜ್ಞಾನ, ಬುದ್ದಿ ಶಕ್ತಿ ಉಪಯೋಗಕ್ಕೆ ಬರದೆ ಪರರ ಜ್ಞಾನ ಮತ್ತು ಬುದ್ದಿ ಕೆಳಗೆ ದುಡಿಯುವೆವೋ ಆತ್ಮಕ್ಕೆ ತೃಪ್ತಿ ಸಿಗದೆ ಸಮಾಧಾನ, ನೆಮ್ಮದಿ, ಸುಖವನ್ನು ಕೇವಲ ಹಣದಿಂದ ಪಡೆಯುವ ಮಾರ್ಗ ಹಿಡಿಯುವುದು ಮಾನವನ ಸಹಜ ಗುಣ. ಆದರೆ ಮಹಾತ್ಮರಿಗೆ ಇದು ತೃಣ ಸಮಾನ ಕಾರಣ ಅವರಿಗೆ ಪರಮಾತ್ಮನ ಮುಂದೆ ಯಾರೂ ದೊಡ್ಡವರಲ್ಲ ಯಾವುದೂ ದೊಡ್ಡದಲ್ಲ ..ಆದ್ದರಿಂದ ಅಂತಹ ಮಹಾತ್ಮರ ಸ್ಮರಣೆ ಮಾಡಿದರೂ ನಮಗೆ ಸಂತೋಷ ವಾಗುತ್ತದೆ ಎಂದರೆ ಅವರು ನಡೆದ ದಾರಿ ಹಿಡಿದರೆ ಹೇಗಿರಬಹುದು ಮನಸ್ಸು.
ಇದು ತಂತ್ರದಿಂದ ಸಾಧ್ಯವಿಲ್ಲ ತತ್ವದಿಂದ ಸಾಧ್ಯವಿದೆ. ಇದೇ ಹಿಂದಿನ ಸನಾತನ ಧರ್ಮ ವಾಗಿತ್ತು. ತತ್ವಜ್ಞಾನದ ಶಿಕ್ಷಣದ ನಂತರವೇ ತಂತ್ರಜ್ಞಾನದ ಬಳಕೆಯಾಗಿತ್ತು. ಯಾವುದೇ ಜ್ಞಾನ ಸದ್ಬಳಕೆಯಾದರೆ ಸಂತೋಷ ಸಮಾಧಾನ ನೆಮ್ಮದಿ ತೃಪ್ತಿ ಸಿಗುತ್ತದೆ. ದುರ್ಭಳಕೆ ಯಾದಂತೆ ಹಣವೇನೂ ಹೆಚ್ಚು ಸಿಗಬಹುದು ಅದರೊಂದಿಗೆ ಅತಿಆಸೆ, ದ್ವೇಷ ಅಹಂಕಾರ ಸ್ವಾರ್ಥ ಇನ್ನಿತರ ದುಷ್ಟ ಗುಣಗಳೂ ಬೆರೆತು ಮನಸ್ಸನ್ನು ಕೆಡಿಸುತ್ತದೆನ್ನುವಕಾರಣಕ್ಕಾಗಿ ಮಕ್ಕಳನ್ನು ದೂರವಿಟ್ಟಿದ್ದರು.ಈಗ ಮಕ್ಕಳೇ ಪೋಷಕರಿಗೆ ಹೇಳಿಕೊಡುವ ಪರಿಸ್ಥಿತಿ ಬಂದಿರೋದು ಪೋಷಕರಿಗೆ ಹೆಮ್ಮೆ ಎನಿಸಿದರೂ ಅದರ ದುಷ್ಪರಿಣಾಮ ಮುಂದೆ ಅನುಭವಿಸುವುದು ಬಹಳ ಕಷ್ಟ. ಒಟ್ಟಿನಲ್ಲಿ ಭಾರತೀಯ ತತ್ವಶಾಸ್ತ್ರ ವಿದೇಶಿಗರಿಗೆ ಇಷ್ಟವಾಗುತ್ತಿದೆ ಭಾರತೀಯರೆ ಇದರ ವಿರುದ್ದ ನಿಂತಿರೋದೆ ದೊಡ್ಡ ಅಜ್ಞಾನ. ಇದಕ್ಕೆ ಈ ಪರಿಸ್ಥಿತಿ ನಿರ್ಮಾಣವಾಗಿದೆ.
No comments:
Post a Comment