ಧರ್ಮ ರಕ್ಷಣೆಗಾಗಿ ಯಾರೂ ಹೊರಗೆ ಹೋರಾಟ ಮಾಡುವ ಅಗತ್ಯವಿಲ್ಲ. ಕಾರಣ ಇಲ್ಲಿ ಅಧರ್ಮ ಬೆಳೆದಿರೋದೆ ಒಳಗೆ.ಮನಸ್ಸಿನ ಸ್ವಚ್ಚತೆ ಕಡೆಗೆ ಮನೆಯೊಳಗೆ ಕುಳಿತವರು ಗಮನಹರಿಸಿದರೆ ಹೊರಗಿನ ರಾಜಕೀಯವು ಎಷ್ಟು ಸ್ವಚ್ಚವಾಗಿದೆ ನಮ್ಮ ಸಹಕಾರದಿಂದ ಹದಗೆಟ್ಟಿದೆ ಎನ್ನುವ ಸತ್ಯ ಅರ್ಥ ವಾಗುತ್ತದೆ. ಮಕ್ಕಳು ಮಹಿಳೆಯರಲ್ಲಿದ್ದ ಸ್ವಚ್ಚ ಮನಸ್ಸನ್ನು ಹಾಳುಮಾಡಿ ಮಾಧ್ಯಮಗಳು ಎಷ್ಟು ಅಶುದ್ದತೆ ಪಡೆದಿವೆ ಅದನ್ನು ನೋಡಿ ಹೊರಗೆ ಬಂದವರು ಎಷ್ಟು ಸ್ವಚ್ಚ ಮನಸ್ಸನ್ನು ಕಳೆದುಕೊಂಡಿದ್ದಾರೆ ಹೀಗೇ ಹೊರಗಿನ ಸ್ವಚ್ಚತೆಗೆ ಬೆಲೆಕೊಡುವ ನಾವು ಒಳಗೆಷ್ಟು ಮನಸ್ಸನ್ನು ಕೆಡಿಸಿಕೊಂಡು ನಮ್ಮವರನ್ನೇ ದೂರಮಾಡಿಕೊಂಡಿದ್ದೇವೆಂದು ತಿಳಿಯಲು ಇದ್ದಲ್ಲಿಯೇ ಸುಮ್ಮನಿದ್ದು ನೋಡಿದಾಗಲೇ ಕ್ರಾಂತಿಯಿಂದ
ಈವರೆಗೆ ಯಾವುದೇ ಬದಲಾವಣೆ ದೇಶದಲ್ಲಿ ಮನೆಯಲ್ಲಿ ಆಗಿಲ್ಲ. ಕೇವಲ ಮಧ್ಯವರ್ತಿಗಳು ಬೆಳೆದಿದ್ದಾರೆ. ಇದರಿಂದ ನಮ್ಮ ಮನೆಯ ಶಾಂತಿ ಕುಸಿದಿದೆ. ಕಷ್ಟ ನಷ್ಟಗಳು ಹೆಚ್ಚಾಗಿ
ರಾಜಕೀಯದಹಿಂದೆ ನಡೆದವರಿಗೆ ಸಿಕ್ಕಿದ್ದು ಭ್ರಷ್ಟಾಚಾರ ವಷ್ಟೆ.
ಶಿಕ್ಷಣದ ವಿಷಯದಲ್ಲೂ ಭ್ರಷ್ಟಾಚಾರ ಬೆಳೆದಿರೋದಕ್ಕೆ ಕಾರಣ ಪೋಷಕರ ಸಹಕಾರ. ಯಾವ ವಿಚಾರ ತಿಳಿಸಿದರೆ ಜ್ಞಾನ ಬರುವುದೋ ಅದು ಬಿಟ್ಟು ಬೇರೆ ವಿಷಯಗಳನ್ನು ತಲೆಗೆ ತುಂಬುವುದಕ್ಕೆ ಪೋಷಕರು ಸಾಲ ಮಾಡಿ ಮಕ್ಕಳ ತಲೆಯ ಮೇಲೆ ಸಾಲದ ಹೊರೆ ಹಾಕಿದರೆ ಅದನ್ನು ದೊಡ್ಡವರಾಗಿ ತೀರಿಸಲು ದೊಡ್ಡ ಕೆಲಸವೇ ಬೇಕು.ದೊಡ್ಡ ಕೆಲಸ ಸಿಗುವಷ್ಟು ವಿದ್ಯಾವಂತ ರಾಗ ಬೇಕು. ಇತ್ತೀಚೆಗೆ ವಿದೇಶಿ ಕೆಲಸಗಳಷ್ಟೆ ತಾಂತ್ರಿಕವಾಗಿ ಬೆಳೆದಿದ್ದು ಲಕ್ಷಾಂತರ ರೂ ಕೊಡುವ ಕಂಪನಿಗಳು ದೇಶದ ಸಂಪತ್ತಾಗಿದೆಯೋ ಆಪತ್ತಿಗೆ ಕಾರಣವಾಗಿದೆಯೋ ಒಟ್ಟಿನಲ್ಲಿ ಜನರು ಮಾಡಿದ ಸಾಲ ತೀರಿಸಲು ಇವು ಜನರನ್ನು ಸೆಳೆಯುತ್ತವೆ.ಸಿಕ್ಕಿದವರಿಗೆ ಇದೊಂದು ಹೆಮ್ಮೆಯ ವಿಚಾರ ಸಿಗದಿದ್ದವರು ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿಯಾದರೂ ಸಾಲ ತೀರಿಸುವತ್ತ ಹೋಗಿ ಅಧರ್ಮ ಬೆಳೆದಿದೆ ಎಂದರೆ ಎಲ್ಲದ್ದಕ್ಕೂ ಕಾರಣ ಶಿಕ್ಷಣ ದ ಖರ್ಚು ವೆಚ್ಚದ ಸಾಲ.
ಸರ್ಕಾರಗಳ ಉಚಿತ ಭಾಗ್ಯಗಳಿಂದ ಇನ್ನಷ್ಟು ಭ್ರಷ್ಟಾಚಾರ ಖಚಿತ. ಇವುಗಳನ್ನು ಸರಿ ಎನ್ನುವವರ ಪಂಗಡ ಒಂದೆಡೆ ಸರಿಯಿಲ್ಲವೆಂದು ಕೂಗುವವರ ಪಂಗಡ ಇನ್ನೊಂದು ಕಡೆ.
ಇವರಿಬ್ಬರ ನಡುವಿನ ಮಧ್ಯವರ್ತಿಗಳು ಮಾತ್ರ ಎಲ್ಲರ ಅಭಿಪ್ರಾಯ ಮನೆಮನೆಗೂ ತಲುಪಿಸಿ ಮನರಂಜನೆಯ ಮೂಲಕ ಜನರ ದಾರಿತಪ್ಪಿಸಿದರೆ ಯಾರಿಗೆ ಲಾಭ ನಷ್ಟ.
ಒಂದಂತೂ ಸತ್ಯ ಯಾರೆಷ್ಟು ಕೊಡುವರು ಪಡೆಯುವರು ಈ ವ್ಯವಹಾರದಿಂದ ಜೀವನದ ಸತ್ಯ ತಿಳಿಯುವಂತಿದ್ದರೆ ಎಷ್ಟೋ ಜನರು ಭ್ರಷ್ಟಾಚಾರ ಬಿಟ್ಟು ಸ್ವತಂತ್ರವಾಗಿ ಜ್ಞಾನವೇ ಶಕ್ತಿ ಶಕ್ತಿಯೇ ಜೀವನ ಎಂದು ನಡೆಯಬಹುದಿತ್ತು.ಆದರೆ ಮನಸ್ಸು ಹೊರಗೆ ಹೋಗುವಷ್ಟು ಸುಲಭವಾಗಿ ಒಳಗೆ ನಡೆಯಲಾಗದು. ಇದೇ ಕಾರಣಕ್ಕಾಗಿ ಹಿಂದಿನ ಮಹಾತ್ಮರು ರಾಜಕೀಯದಿಂದ ದೂರವಿದ್ದು ಅಧ್ಯಾತ್ಮ ಸಾಧಕರಾಗಿ ಯಾವ ಧರ್ಮ ರಕ್ಷಣೆಯ ಹೋರಾಟ ಮಾಡದೆಯೇ ಧರ್ಮ ಉಳಿಸಿದ್ದರು. ಹಣಬಲ,ಜನಬಲ,ಅಧಿಕಾರಬಲದಿಂದ ತತ್ವ ಉಳಿಯುವಂತಿದ್ದರೆ ಇಂದು ತಂತ್ರ ಬೆಳೆಯುತ್ತಿರಲಿಲ್ಲ. ಈಗ ಪ್ರಜ್ಞಾವಂತರಿದ್ದರೂ ಅವರನ್ನೂ ದಾರಿತಪ್ಪಿಸುವ ಮಂದಿ ಇದ್ದಾರೆಂದರೆ ಇನ್ನು ಸಾಮಾನ್ಯರ ಪಾಡೇನು?
ಆಪರೇಷನ್ ಮಾಡಿಕೊಂಡ ಮೇಲೆ ಹೊರಗಿನ ಶಕ್ತಿಯ ಪ್ರವೇಶ ದೇಹದೊಳಗೆ ಸೇರುತ್ತದೆ. ಸೇರಿದ ಮೇಲೆ ತನ್ನ ಶಕ್ತಿ ಪ್ರದರ್ಶನ ಮಾಡಿದರೂ ಹೊರಗೆ ಹಾಕುವ ಶಕ್ತಿಯಿರದು ಕಾರಣ ತನ್ನ ರೋಗ ಸರಿಪಡಿಸಲು ಅದನ್ನು ಸೇರಿಸಿಕೊಂಡು ರೋಗವಾಸಿಯಾದನಂತರ ಬೇಡವೆಂದರೆ ಬಿಡುವುದೆ? ಹಾಗೆ ಮಕ್ಕಳ ಒಳಗಿದ್ದ ಶುದ್ದ ಹೃದಯಕ್ಕೆ ಹೊರಗಿನ ವಿಷಯ ತಿಳಿಸುತ್ತಾ ಬೆಳೆದಂತೆಲ್ಲಾ ಹೊರಗಿನ ವಿಷಯವೇ ವಿಷವಾಗಿ ದೇಹವನ್ನು ಆವರಿಸಿದ್ದರೆ ಅದನ್ನು ಹೊರಹಾಕಲು ಪೋಷಕರಿಗೆ ಕಷ್ಟವಾದಾಗ ಮಕ್ಕಳಿಗೆ ಸಾಧ್ಯವೆ? ಅದಕ್ಕಾಗಿ ಯಾವುದೇ ಸಮಸ್ಯೆಗೆ ಹೊರಗೆ ಹೋರಾಡುವ ಬದಲು ಒಳಗೆ ಹೋರಾಡಿ ಮೂಲವನ್ನು ಸ್ವಚ್ಚಗೊಳಿಸಿಕೊಂಡರೆ ಉತ್ತಮ ಜೀವನ. ವಾಸ್ತವದಲ್ಲಿ ಬೆಳೆದಿರುವ ಭ್ರಷ್ಟಾಚಾರದ ರೋಗ ಪ್ರಜೆಗಳಲ್ಲಿ ಹರಡಿರುವಾಗ ಹೊರಗೆ ಹೋರಾಡಿದರೆ ಪರಿಹಾರವಿಲ್ಲ. ಸಾಧ್ಯವಾದರೆ ಭ್ರಷ್ಟರಿಂದ ದೂರವಿರಬೇಕು.ಭ್ರಷ್ಟರಿಗೆ ಸಹಕರಿಸಬಾರದು.ವಿರೋಧ ಮಾಡಿದರೂ ವ್ಯರ್ಥ. ಭ್ರಷ್ಟಾಚಾರ ಯಾವುದೆನ್ನುವ ಬಗ್ಗೆ ಅರಿವಿಲ್ಲದವರಿಗೆ ತಿಳಿಸುವುದೂ ವ್ಯರ್ಥ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಉತ್ತಮ ಪ್ರಜೆಯಾಗಿ ಬೆಳೆಸಲು ಮನೆಯೊಳಗೆ ಸಾಧ್ಯವಾದವರು ಮೌನವಾಗಿ ತಮ್ಮ ಕರ್ತವ್ಯ ನಿರ್ವಹಿಸುವ ಅವಕಾಶವಿದ್ದರೆ ಪುಣ್ಯ.ಇದು ನಮ್ಮ ಭಾರತೀಯ ಗೃಹಿಣಿಯರಿಗಿದೆ. ಅವರಿಗೆ ಜ್ಞಾನದ ಶಿಕ್ಷಣ ಕೊಟ್ಟರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದೆ. ಇವರೆ ಭಾರತಮಾತೆಯ ಶಕ್ತಿಯಾಗಿದ್ದಾರೆ.ವೇದಕಾಲದಲ್ಲಿದ್ದ ಮಹಿಳಾ ವಿದ್ಯಾಭ್ಯಾಸಕ್ಕೂ ಈಗಿನ ಶಿಕ್ಷಣಕ್ಕೂ ಇದೆ ವ್ಯತ್ಯಾಸ.
No comments:
Post a Comment