ಸಾಮಾನ್ಯ ಪ್ರಜೆಯಾಗಿ ಕಂಡ ಮಹಾಭಾರತದ ವಾಸ್ತವ ಸತ್ಯ ಪ್ರಜಾಪ್ರಭುತ್ವ ದೇಶದ ಮಹಾಪ್ರಜೆಗಳಲ್ಲಿ ತತ್ವಕ್ಕಿಂತ ತಂತ್ರವೇ ಹೆಚ್ಚಾಗಿದೆ. ತತ್ವದಿಂದ ಒಗ್ಗಟ್ಟು ಒಮ್ಮತ ಸಮಾನತೆ,ಶಾಂತಿ ತೃಪ್ತಿ ಮುಕ್ತಿ ಪಡೆಯೋ ಬದಲಾಗಿ ತಂತ್ರದಿಂದ ತತ್ವ ಹಿಂದುಳಿಸಿ ತಾನೇ ದೇವರೆನ್ನುವಂತಹ ವ್ಯಕ್ತಿಗಳ ಸಂಖ್ಯೆ ಬೆಳೆದಂತೆಲ್ಲಾ ಅಂತರ ಬೆಳೆದು ವ್ಯಕ್ತಿಗಳ ಹಿಂದೆ ನಡೆದವರಿಗೆ ನಮ್ಮೊಳಗೇ ಅಡಗಿದ್ದ ಮಹಾ ಭಾರತೀಯತೆಯ ಶಕ್ತಿ ಯ ಅರಿವಾಗಲಿಲ್ಲ. ಇದನ್ನು ಗುರುತಿಸಿದ ಅಧರ್ಮಿಗಳು ಜನರನ್ನು ತಮ್ಮೆಡೆ ಸೆಳೆಯುವಪ್ರಯತ್ನದಲ್ಲಿ ಯಶಸ್ಸು ಕಂಡಿದ್ದರೂ ಅವರಲ್ಲಿಯೇ ಇರದ ಶಾಂತಿ ಸಮಾಧಾನ ತೃಪ್ತಿ ಸೇರಿಕೊಂಡವರಲ್ಲಿರುವುದೆ? ಇದು ತಮಗೆ ತಾವೇ ಮಾಡಿಕೊಂಡ ಮೋಸವಷ್ಟೆ. ಇಡೀ ಜಗತ್ತನ್ನು ಪಾಲನೆ ಮಾಡುವ ಏಕೈಕ ಶಕ್ತಿಯ ಒಳಗಿರುವ ಈ ಅಸಂಖ್ಯಾತ ಧರ್ಮ, ಜಾತಿ,ಪಂಗಡ,ಪಕ್ಷ,ದೇಶದಲ್ಲಿ ತತ್ವಜ್ಞಾನವೇ ಇರದೆ ತಂತ್ರವೇ ಬೆಳೆದಿದ್ದರೆ ಮೇಲೇರಿದವರು ಕೆಳಗಿಳಿಯಲೇಬೇಕು
ಕೆಳಗಿದ್ದವರು ಮೇಲೇರುವಮುನ್ನ ಆತ್ಮಾವಲೋಕನ ಮಾಡಿಕೊಂಡರೆ ಉತ್ತಮ ಭವಿಷ್ಯವಿದೆ.ಒಟ್ಟಿನಲ್ಲಿ ಇಲ್ಲಿ ಯಾರು ಯಾರನ್ನೂ ಆಳಲಾಗದು.ಯಾರನ್ನೂ ಮೋಸಮಾಡಿ ಸಾಧನೆ ಮಾಡಲಾಗದು. ತಂತ್ರದಿಂದ ಸ್ವತಂತ್ರ ಜ್ಞಾನ ಸಿಗುವಂತಿದ್ದರೆ ಇಷ್ಟು ಕುತಂತ್ರಿಗಳು ಬೆಳೆಯುತ್ತಿರಲಿಲ್ಲ.ಭ್ರಷ್ಟಾಚಾರ ಕ್ಕೆ ಕಾರಣವೇ ತತ್ವವನ್ನು ತಂತ್ರವಾಗಿಸಿಕೊಂಡು ರಾಜಕೀಯದೆಡೆಗೆ ಜನರನ್ನು ಎಳೆದು ಆಳಿರುವುದು..ಆಳಿದವರಿಗೆ ಸುಖ ನೆಮ್ಮದಿ ಸಂತೋಷ ಸಿಕ್ಕಿದೆಯೆ? ಹಿಂದಿನ ಆಳ್ವಿಕೆಯಲ್ಲಿ ಧರ್ಮ ವಿತ್ತು ತತ್ವವಿತ್ತು.ಈಗ ಅಧರ್ಮ ವೇ ತನ್ನ ಸ್ಥಾನಮಾನ ಪಡೆದಿದೆ ಎಂದರೆ ಇದರಲ್ಲಿ ಮಹಾಭಾರತ ಕಾಣಬಹುದೆ?
ಒಬ್ಬ ವ್ಯಕ್ತಿಯಿಂದ ದೇಶ ನಡೆಸಲಾಗದು. ಎಲ್ಲಾ ಪ್ರಜೆಗಳ ಜ್ಞಾನಶಕ್ತಿಯಿಂದ ಜ್ಞಾನಿಗಳ ದೇಶವಾಗುವುದಕ್ಕೆ ಅಂತಹ ಜ್ಞಾನದ ಶಿಕ್ಷಣದ ಅಗತ್ಯವಿತ್ತು.ಈಗಲೂ ಕೆಲವೆಡೆ ನೀಡಿದರೂ ಅದರಲ್ಲೂ ಪಕ್ಷಪಾತ ಜಾತಿ,ಪಂಗಡ ಗಳಲ್ಲಿ ಅಂತರ ಹೆಚ್ಚಾಗಿ ದೈವತ್ವದ ಕೊರತೆಯಿದೆ ಎಂದರೆ ಮಹಾಭಾರತವನ್ನು ನಾವು ರಾಜಕೀಯವಾಗಿ ತಿಳಿದೆವು. ರಾಜಯೋಗದ ಕಡೆಗೆ ಗಮನ ಕೊಟ್ಟರೆ ನಮ್ಮೊಳಗಿನ ಸ್ವತಂತ್ರ ಜ್ಞಾನ ಹಿಂದುಳಿದಿದೆ. ಪರರ ತಂತ್ರಜ್ಞಾನದಿಂದಲೇ ಭಾರತ ನಡೆದಿದೆ ಎಂದರೆ ಇದರಲ್ಲಿ ಭೌತಿಕ ಸಾಧನೆಯಿದೆ ಅಧ್ಯಾತ್ಮ ಸಾಧನೆ ಹಿಂದುಳಿದಿದೆ ಎಂದರ್ಥ.
ಅವರವರ ಮೂಲ ಧರ್ಮ ಕರ್ಮ ವನರಿಯಲು ಸರ್ಕಾರ ಬೇಡ.ಅವರವರ ಮಕ್ಕಳಿಗೆ ಜ್ಞಾನದ ಶಿಕ್ಷಣ ನೀಡಲು ಯಾವ ಸರ್ಕಾರವೂ ಅಡ್ಡಿಯಾಗಿಲ್ಲ. ಅವರವರ ಕುಲದೇವರು ಗುರುವಿನ ಬಳಿ ಬೇಡಲು ಯಾವುದೇ ಅಡ್ಡಿಯಿಲ್ಲ ಆದರೆ ಇಲ್ಲಿ ಅಡ್ಡಿಯಾಗಿರೋದೆ ನಮ್ಮ ಒಳಮನಸ್ಸನ್ನು ಪ್ರಶ್ನೆ ಮಾಡಿಕೊಳ್ಳಲು ಸೋತಿರುವ ಶಿಕ್ಷಣದ ವಿಷಯ. ಬೌತಿಕದ ತಂತ್ರವನ್ನು ಮಕ್ಕಳು ಮಹಿಳೆಯರಿಗೆ ನೇರವಾಗಿ ಕೊಟ್ಟು ಪ್ರಭುದ್ದತೆ ಹೆಚ್ಚಾಗಿ ಮನೆಯೊಳಗಿದ್ದ ಸತ್ಯಧರ್ಮ ಬಿಟ್ಟು ಹೊರಗೆ ಬಂದ ಮೇಲೆ ತಿರುಗಿ ಹೋಗಲಾಗದೆ ಪರರ ವಶದಲ್ಲಿ ಪರದೇಶದಲ್ಲಿ ದುಡಿಯಬೇಕಾಯಿತು.ಇದು ನಮ್ಮ ಆತ್ಮಕ್ಕೆ ತೃಪ್ತಿ ಸಿಗದ ಕಾರಣ ರಾಜಕೀಯವಾಗಿ ಪರಕೀಯರನ್ನು ಬಳಸುತ್ತಾ ಮುಂದೆ ನಡೆದವರು ಮರೆಯಾದರು.ಭೌತಿಕದಲ್ಲಿ ಇದನ್ನು ಕ್ಷಾತ್ರಧರ್ಮ ವೆಂದರೂ ವಾಸ್ತವದ ಸತ್ಯ ಬೇರೆಯಿದೆ.ಈಗ ಭಾರತ ಪ್ರಜಾಪ್ರಭುತ್ವ ದೇಶವಾದ್ದರಿಂದ ಇಲ್ಲಿ ಯಾವ ರಾಜರಿಲ್ಲ.ನಿಜವಾದ ದೇಶ ಕಾಯುವ ಸೈನಿಕರಿದ್ದರೂ ಅವರಿಗೆ ಒಳಗೇ ಅಡಗಿರುವ ದೇಶದ್ರೋಹಿಗಳನ್ನು ಸದೆಬಡಿಯುವ ಅಧಿಕಾರವಿಲ್ಲವಾದರೆ ದೇಶದ ರಕ್ಷಣೆ ಹೇಗೆ ಸಾಧ್ಯ?
ಮೊದಲು ಮಾನವನಾಗು ಎಂದಿರುವುದರ ಹಿಂದೆ ಇರುವ ತತ್ವ ಬಿಟ್ಟು ಮೊದಲೇ ಮಹಾತ್ಮರಾಗಲು ಮಧ್ಯವರ್ತಿಗಳು
ತಂತ್ರ ಹಣೆದು ಅಧಿಕಾರ ಹಣ ಸ್ಥಾನಮಾನ ಗಳಿಸಿದರೂ ಮಹಾತ್ಮರುಗಳ ಅನುಭವಜ್ಞಾನದ ಕೊರತೆ ತಮಗೂ ಸತ್ಯ ತಿಳಿಯದೆ ಇತರರಲ್ಲಿನ ಸತ್ಯಕ್ಕೂ ಸಹಕರಿಸದೆ ರಾಜಕೀಯ ಮಿತಿಮೀರಿದೆ.
ನಾವೆಷ್ಟೇ ವಿದೇಶಗಳಿಗೆ ಹೋಗಿ ಹೆಸರು ಹಣ ಗೌರವಾಧರ ಪಡೆದರೂ ಸ್ವದೇಶದಲ್ಲಿ ಸಿಗದಿದ್ದರೆ ಆತ್ಮಕ್ಕೆ ತೃಪ್ತಿ ಸಿಗದು.
ಹಾಗೆಯೇ ನಮ್ಮೊಳಗೇ ಅಡಗಿರುವ ತತ್ವಜ್ಞಾನ ಬಳಸದೆ ಹೊರಗಿನ ತಂತ್ರ ಬಳಸಿದರೆ ಆತ್ಮನಿರ್ಭರ ಭಾರತವಾಗದು.
ಹಣದ ಹಿಂದಿನ ಋಣ ತೀರಿಸದೆ ಮುಕ್ತಿ ಸಿಗದು ಎನ್ನುವುದು ಅಧ್ಯಾತ್ಮ ಸತ್ಯ.
ಮಾನವನಿಗೆ ಸಮಸ್ಯೆಯಾಗಿರೋದು ಜ್ಞಾನದ ಕೊರತೆಯಿಂದಾದಾಗ ಅದಕ್ಕೆ ಪರಿಹಾರ ಜ್ಞಾನದ ಶಿಕ್ಷಣವೇ ನೀಡಬೇಕು.ಶಿಕ್ಷಣ ನೀಡುವ ಗುರುಗಳು ಸ್ವತಂತ್ರ ಜ್ಞಾನ ಪಡೆದಿರಬೇಕು. ಹೀಗೇ ನಾನು ಬದಲಾಗದೆ ಬೇರೆಯವರನ್ನು ಬದಲಾವಣೆ ಮಾಡುವ ತಂತ್ರದಿಂದ ಮನುಕುಲ ದಾರಿತಪ್ಪಿದ ಹಳಿಯಾಗಿದೆ.ಮೂಲ ಬಿಟ್ಟು ಮೇಲೇರಿದರೂ ಮೂಲದಿಂದ ಮೇಲೇರಿದವರು ಸೇರಿಸಿಕೊಳ್ಳದೆ ಕೆಳಗೆ ತಳ್ಳುವರಷ್ಟೆ.
ಒಟ್ಟಿನಲ್ಲಿ ಅಧ್ಯಾತ್ಮ ದಿಂದ ಆತ್ಮನಿರ್ಭರ ಭಾರತ ಸಾಧ್ಯವಿದೆ. ಇದಕ್ಕೆ ಪೂರಕವಾದ ಶಿಕ್ಷಣದ ಅಗತ್ಯವಿದೆ,ಗುರು ಹಿರಿಯರು ತತ್ವದಿಂದ ದೇಶಕಟ್ಟುವ ಧರ್ಮ ಉಳಿಸುವ ಅಗತ್ಯವಿದೆ.
ಪ್ರತಿಯೊಂದು ರಾಜಕೀಯವಾಗುತ್ತಿದೆ ಎಂದರೆ ನಮ್ಮ ಮನಸ್ಸು ಹೊರಗಿದೆ ಒಳ ಮನಸ್ಸು ಹಿಂದುಳಿದರೆ ಹಿಂದೂ ಧರ್ಮ ಹಿಂದುಳಿದಂತೆ. ಹಿಂದೂ ಧರ್ಮದ ಬೇರನ್ನು ಯಾರೂ ಕೀಳಲಾಗದು ಅದಕ್ಕೆ ಅಂಟಿಕೊಂಡಿರುವ ರೆಂಬೆ ಕೊಂಬೆಗಳನ್ನು ಕತ್ತರಿಸಿದರೂ ಬೇರು ಚಿಗುರುವುದು.
ಹಾಗಾಗಿ ಯಾರೂ ರಾಜಕೀಯವಾಗಿ ಹೋರಾಡಿ ಧರ್ಮ ಉಳಿಸಿಲ್ಲ ತಮ್ಮ ತಪ್ಪು ತಿದ್ದಿ ಕೊಂಡು ಧರ್ಮ ದೆಡೆಗೆ ಹೋದರೆ ನಮ್ಮ ಆತ್ಮರಕ್ಷಣೆಯಾಗುತ್ತದೆ. ಹಿಂದಿನ ವರ್ಣಪದ್ದತಿಯು ಅವರವರ ಧರ್ಮ ಕರ್ಮ ಜ್ಞಾನದ ಮೇಲಿತ್ತು. ಮೇಲುಕೀಳೆಂಬುದು ಅಜ್ಞಾನದ ಸೂಚನೆಯಾಗಿತ್ತು.ರಾಜಕೀಯವು ಧರ್ಮದ ಮೇಲಿತ್ತು.
ಶಿಕ್ಷಣವೇ ಇದರ ಮೂಲಾಧಾರವಾಗಿತ್ತು. ಮೂಲಾಧಾರ ಬಿಟ್ಟು ಸಹಸ್ರಾರ ಚಕ್ರ ಶುದ್ದಿ ಮಾಡಲಾಗದು. ಮಹಾಭಾರತ ಯುದ್ದವು ಯುಗದ ಕೊನೆಯಲ್ಲಿ ನಡೆದಿತ್ತು.ಆದರೆ ಈಗ ಯುಗದ ಪ್ರಾರಂಭವಷ್ಟೆ ಈಗಲೇ ಯುದ್ದ ನಡೆಯುತ್ತಿದೆ ಎಂದರೆ ಅಜ್ಞಾನ ಮಿತಿಮೀರಿದೆ ಎಂದರ್ಥ.
ಸಾಮಾನ್ಯಜ್ಞಾನವನ್ನು ಅಧ್ಯಾತ್ಮದ ವಿಶೇಷಜ್ಞಾನದಿಂದ ಬೆಳೆಸಿಕೊಳ್ಳಲು ಹೊರಗಿನ ಸರ್ಕಾರದ ಅಗತ್ಯವಿಲ್ಲ. ಇದು ಭೌತಿಕ ವಿಜ್ಞಾನವಾಗುತ್ತದೆ ಹೀಗಾಗಿ ತಾತ್ಕಾಲಿಕ ಪ್ರಗತಿಯಷ್ಡೆ.
ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು. ತಂತ್ರಕ್ಕಿಂತ ತತ್ವ ದೊಡ್ಡದು.
ಪರದೇಶಕ್ಕಿಂತ ಪರಮಾತ್ಮನೇ ದೊಡ್ಡವ. ಪರಕೀಯರ ವಶದಲ್ಲಿ ಮನಸ್ಸಿಟ್ಟು ಸ್ವದೇಶ ರಕ್ಷಣೆ ಮಾಡಲಾಗದು. ಏನೇ ಬರಲಿ ಒಗ್ಗಟ್ಟು ಇರಲಿ ಎನ್ನುವ ಮಂತ್ರವು ರಾಜಯೋಗಕ್ಕೆ ಯೋಗ ಶಿಕ್ಷಣಕ್ಕೆ ಅಧ್ಯಾತ್ಮ ಸಂಶೋಧನೆ ಕಡೆಗೆ ನಡೆದರೆ ನಮ್ಮ ದೇಶ ಆತ್ಮನಿರ್ಭರ ಭಾರತ. ಎಷ್ಟು ಮನಸ್ಸು ಹೊರಗೆ ಓಡುವುದೋ ಅಷ್ಟೇ ನಮ್ಮ ಆತ್ಮವಂಚನೆಯಾಗುವುದು. ಹೀಗಾಗಿ ಋಷಿಮುನಿಗಳ ಸಾಧನೆ ನಿಸ್ಸಂಗ, ನಿರಾಹಾರ,ನಿರಾಕಾರ,ನಿರ್ಗುಣ ಸ್ವರೂಪನಾದ ಪರಮಾತ್ಮನ ಕಡೆಗೆ ನಡೆದಿತ್ತು.ಇದು ಭಾರತೀಯ ತತ್ವಶಾಸ್ತ್ರ. ಇದರಲ್ಲಿ ತಂತ್ರವಿದ್ದರೆ ಅತಂತ್ರ ಜೀವನ.
ಎಲ್ಲಾ ಕಾಲದಲ್ಲಿಯೂ ಇರುವ ದೇವರು ಮಾನವರು ಅಸುರರು ಈಗಲೂ ನಮ್ಮ ಹತ್ತಿರ ಒಳಗೇ ಇದ್ದರೂ ಗುರುತಿಸುವ ಜ್ಞಾನದ ಕಣ್ಣಿಲ್ಲವಾದರೆ ಕುರುಡು ಜಗತ್ತಿನಲ್ಲಿ ಜೀವವಿರುತ್ತದೆ. ಕುಣಿಸಿದಂತೆ ಕುಣಿಯುತ್ತದೆ. ಅಳಿಸಿದರೆ ಅಳುತ್ತದೆ.ನಗಿಸಿದರೆ ನಗುತ್ತದೆ.ಸಾಯಿಸಿದರೆ ಸಾಯುತ್ತದೆ.
ಆದರೆ ಸತ್ತನಂತರದ ಪಯಣದಲ್ಲಿ ಯಾರೂ ಜೊತೆಗೆ ಬರೋದಿಲ್ಲವೆನ್ನುವುದು ಸತ್ಯ. ಇದ್ದಾಗಲೇ ಜೀವನದ ಸತ್ಯ ತಿಳಿಯುವುದಕ್ಕೆ ಸತ್ಯಜ್ಞಾನ ಅಗತ್ಯವಿದೆ. ಮಂತ್ರ ತಂತ್ರ ಯಂತ್ರಗಳ ಸರಿಯಾದ ಬಳಕೆ ಮಾಡುವುದು ಧರ್ಮ.ಜನರನ್ನು ವಶಪಡಿಸಿಕೊಂಡು ಆಳಲು ದುರ್ಭಳಕೆ ಆದರೆ ಇದರಷ್ಟು ಅಧರ್ಮ ಬೇರೊಂದು ಇಲ್ಲ.
ಜನಸಾಮಾನ್ಯರ ಅತಿಯಾದ ಅಜ್ಞಾನವನ್ನು ದುರ್ಭಳಕೆ ಮಾಡಿಕೊಳ್ಳಲು ಆಳಿದರೂ ಅಸುರಶಕ್ತಿಯೇ ಬೆಳೆಯೋದು.ಓದಿ ತಿಳಿ ಮಾಡಿ ಕಲಿ ಎಂದರೆ ಅಧ್ಯಾತ್ಮ ಸತ್ಯ ಓದಿ ತಿಳಿದರೂ ಮಾಡಿ ಕಲಿಯದಿದ್ದರೆ ನಡೆಯದಿದ್ದರೆ ಅಂತರಾತ್ಮನಿಗೆ ತೃಪ್ತಿ ಸಿಗದು ಎಂದಿದ್ದಾರೆ. ಇದಕ್ಕೆ ಕಾರಣವೇ ನಾನೇ ಸರಿ ಎನ್ನುವ ಅಹಂಕಾರ, ಅಹಂಬಾವ,ಸ್ವಾರ್ಥ ದ ತಂತ್ರದ ಬಳಕೆ.ಭೂಮಿಗೆ ಬರುವ ಜೀವಕ್ಕೆ ಇನ್ನಷ್ಟು ಸಾಲ ಏರಿಸುವ ತಂತ್ರಕ್ಕಿಂತ ಸ್ವತಂತ್ರವಾಗಿ ಜೀವನನಡೆಸಲು ಸಹಕಾರಿಯಾದ ತತ್ವವೇ ಶ್ರೇಷ್ಠ
ನಾವ್ಯಾರು ತತ್ವಜ್ಞಾನಿಗಳೋ ತಂತ್ರಜ್ಞಾನಿಗಳೋ? ಯಂತ್ರ ಮಾನವರೋ? ಸ್ವತಂತ್ರವಾಗಿ ಆರೋಗ್ಯವಾಗಿ ಒಗ್ಗಟ್ಟಿನಿಂದ ಬಾಳಿ ಬದುಕುತ್ತಿದ್ದ ಭಾರತೀಯ ಹಿಂದೂಗಳು ಈಗ ಮನೆಯಿಂದ ದೂರವಾಗಿ ಪರತಂತ್ರದಲ್ಲಿ ಪರಕೀಯರ ವಶದಲ್ಲಿ ನಮ್ಮವರನ್ನೇ ದ್ವೇಷಮಾಡುತ್ತಾ ವಿದೇಶವ್ಯಾಮೋಹ ಹೆಚ್ಚಿಸಿಕೊಂಡಿರೋದರ ಹಿಂದೆ ಅವರ ಶಿಕ್ಷಣ ಜ್ಞಾನವಿದೆ. ನಮ್ಮ ಜ್ಞಾನದ ಕೊರತೆ ನಮಗಿದೆ.ಇದನ್ನು ಸಾಧನೆ ಎಂದರೆ ಸರಿಯೆ?
ಭೌತಿದ ಸಾಧಕರು ಗುರುತಿಸಲ್ಪಡುತ್ತಾರೆ.ಅಧ್ಯಾತ್ಮ ಸಾಧಕರನ್ನು ಅವಮಾನಿಸಲಾಗುತ್ತಿದೆ ಎಂದರೆ ಆತ್ಮನಿರ್ಭರ ಭಾರತವಾಗೋದು ಬಹಳ ಕಷ್ಟವಿದೆ.ಕಷ್ಟಪಡದೆ ಸುಖ ನೀಡುವ ಸರ್ಕಾರದಿಂದ ಆತ್ಮನಿರ್ಭರ ಭಾರತವಾಗದು.
ಹೊಟ್ಟಗೆ ಹಿಟ್ಟಿಲ್ಲದೆ ಜುಟ್ಟಿಗೆ ಮಲ್ಲಿಗೆ ಹೂ ಎಂದಂತಾಗಿದೆ ದೇಶದ ಪರಿಸ್ಥಿತಿ.
ದೇಶದ ಹಿತದೃಷ್ಟಿಯಿಂದ ಧರ್ಮ ವನ್ನು ನೋಡಿದಾಗ ಈ ಸತ್ಯದರ್ಶನ ಸಾಧ್ಯ. ಪ್ರಜೆಗಳ ಹಿತ ಅವರ ಜ್ಞಾನದಲ್ಲಿದೆ.
ಪ್ರಜೆಗಳ ಜ್ಞಾನಶಕ್ತಿ ದೇಶದ ಭವಿಷ್ಯವಾಗಿದೆ ಎಂದರೆ ಪ್ರಜೆಗಳಲ್ಲಿ ಯಾವ ದೇಶದ ಜ್ಞಾನ ನೀಡಲಾಗುತ್ತಿದೆ.
ನೀಡಲಾಗಿದೆ? ನೀಡಲು ಸಹಕಾರವಿದೆ? ಇದರಲ್ಲಿ ಸರ್ಕಾರದ ಪಾತ್ರ ಎಷ್ಟಿದೆ? ಪ್ರಜೆಗಳ ಸಹಕಾರ ಎಷ್ಟಿದೆ?
ದೇಶದೊಳಗೆ ಪ್ರಜಾಶಕ್ತಿಯಿದೆ ಪ್ರಜೆಗಳೊಳಗೆ ವಿದೇಶಶಕ್ತಿಯಾದ ತಂತ್ರ ಅಧಿಕವಾಗಿದೆ.ದೇಶದ ತತ್ವ ಹಿಂದುಳಿದರೆ ಹಿಂದೂ ಧರ್ಮಕ್ಕೆ ಬಲಬರುವುದೆ? ಆಚರಣೆ ಹೊರಗಿದೆ ಒಳಗಿದ್ದ ಸದಾಚಾರ ಸದ್ಗುಣ, ಸತ್ಯ,ಧರ್ಮ ಕುಸಿದರೆ ಆಚರಣೆಯ ಮುಖ್ಯ ಗುರಿಯೇ ಆತ್ಮಸಂತೋಷ.
No comments:
Post a Comment