ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, May 17, 2023

ಇದುಆತ್ಮನಿರ್ಭರ ಭಾರತವೆ ಆತ್ಮದುರ್ಭಲ ಭಾರತವೆ?

 ಭೌತಿಕದ  ಆತ್ಮನಿರ್ಭರ ಭಾರತದ ಯೋಜನೆಗಳು ಕಾರ್ಯರೂಪಕ್ಕೆ ಬಂದಿದ್ದರೂ ಅದನ್ನು ಪ್ರಜೆಗಳು ಯಾವ ರೀತಿಯಲ್ಲಿ ಅರ್ಥ ಮಾಡಿಕೊಂಡರು ಎನ್ನುವುದು ಮುಖ್ಯ. ಜನ   ಆತ್ಮಜ್ಞಾನದಿಂದ ಸತ್ಯ ತಿಳಿಯುವುದಕ್ಕೂ  ವೈಜ್ಞಾನಿಕವಾಗಿ ಚಿಂತನೆ ನಡೆಸುವುದಕ್ಕೂ  ವ್ಯತ್ಯಾಸವಿದೆ. ವಿಜ್ಞಾನ ಜಗತ್ತು ಬೆಳೆದಿರೋದು  ಹೊರಗಿನ  ಸತ್ಯದಿಂದ ಆದರೆ ಆತ್ಮನಿರ್ಭರ ಆಗೋದಕ್ಕೆ ಅಧ್ಯಾತ್ಮ ಸತ್ಯವೇ ಮೂಲಧಾರ. 
ಇಲ್ಲಿ ಭಾರತೀಯರ ಸಾಲ ಮಿತಿಮೀರಲು ಕಾರಣವೇ ಸರ್ಕಾರದ ಸಾಲ ಸೌಲಭ್ಯಗಳನ್ನು  ಅನಾವಶ್ಯಕ ಬಳಸಿ ಯಾವುದೇ  ರೀತಿಯಲ್ಲಿ  ಕೆಲಸ ಕಾರ್ಯ ವಿಲ್ಲದೆ   ದುಂದುವೆಚ್ಚ  ಮಾಡುವವರ ಹಿಂದೆ ಕುಶಲಕರ್ಮಿಗಳು  ನಿಂತು  ಬೇಡುವಂತಾಗಿದೆ ಎಂದರೆ ವಿದೇಶಿ ವಿಜ್ಞಾನ, ಸಾಲ,ಬಂಡವಾಳ ತಾತ್ಕಾಲಿಕ ಸುಖ ಸಂತೋಷ ನೀಡಿದರೂ ತಿರುಗಿ ಸಾಲ  ಕೊಡಬೇಕಾದರೆ  ಸಾಲಗಾರರು ಶ್ರಮಪಟ್ಟು ದುಪ್ಪಟ್ಟು  ದುಡಿಯಬೇಕಿತ್ತು. ಇದಕ್ಕೆ ಬದಲಾಗಿ ಸಾಲಮನ್ನಾ ಮಾಡಬೇಕೆಂಬ ಹೋರಾಟ ಮಾಡಿ ಸರ್ಕಾರದಿಂದ ಸಾಲಮನ್ನಾ ಆದರೂ ಮೇಲಿರುವ‌ಪರಮಾತ್ಮನ ಸಾಲವಾಗಲಿ ಪರಕೀಯರ ಸಾಲವಾಗಲಿ ತೀರುವುದಿಲ್ಲ.
ಒಂದು ಮನೆಯ ಸಾಲ ತೀರಿಸಲು ಮನೆಮಂದಿ ದುಡಿದರೆ ತೀರಬಹುದು.ಅದನ್ನು ತೀರಿಸಲು ಹೊರಗಿನವರ ಸಾಲ ಪಡೆದರೂ‌ ಸಾಲಮನ್ನಾ ಆಗೋದಿಲ್ಲ.ಹೊರಗಿನವರು ಒಳಬಂದು ದುಡಿಸಿಕೊಂಡು ಆಳುವರಷ್ಟೆ. ಇದು ಭಾರತದ ಸ್ಥಿತಿಯಾಗಿದೆ. ಎಲ್ಲಾ ಪಕ್ಷಗಳಿಗೂ  ಅಧಿಕಾರ ಬೇಕು.ಜನರಿಗೆ ಉಚಿತ ಕೊಟ್ಟರೆ ಮತದಾನ ಎನ್ನುವ ಹಂತಕ್ಕೆ ಜನರನ್ನು ಬೆಳೆಸಿ ಸೋಮಾರಿಗಳನ್ನು ಸಾಕೋದಕ್ಕೆ ವಿದೇಶಿ ಒಪ್ಪಂದ ಹೆಚ್ಚಾಯಿತು.ತಂತ್ರಜ್ಞಾನವು ತತ್ವ ಬಿಟ್ಟು ಮುಂದೆ ನಡೆಯುತ್ತಾ ಸ್ವದೇಶದ ವಿದ್ಯಾವಂತ ಬುದ್ದಿವಂತರುವಿದೇಶದ ಸೇವೆ ಮಾಡುವಂತಾಯಿತು. ಸೇವೆ ಮಾಡುವುದು ತಪ್ಪಲ್ಲ ಆದರೆ  ನಮ್ಮವರನ್ನೇ ಸೇವಕರಂತೆ ಕಾಣುವುದೇ ತಪ್ಪು. ಇದು ಪೋಷಕರನ್ನು ದೂರ ಮಾಡುತ್ತಾ ಅನಾಥಾಶ್ರಮ,ವೃದ್ದಾಶ್ರಮ,ಅಬಲಾಶ್ರಮದ ಜೊತೆಗೆ ಬಿಕ್ಷುಕಾಶ್ರಮಗಳನ್ನು ಬೆಳೆಸಿದ್ದರೆ ಇದರಲ್ಲಿ ಆತ್ಮನಿರ್ಭರ ಭಾರತವಿದೆಯೆ? 
ಪ್ರಜೆಗಳ ಅಜ್ಞಾನವನ್ನು ಹೋಗಲಾಡಿಸದೆ  ಆಳಿದ ಸರ್ಕಾರ ಗಳಿಗೆ   ದೇಶದ ಸಾಲ ಕಾಣದೆ ಪ್ರಜೆಗಳ ಬಡತನಮಾತ್ರ ಕಾಣುತ್ತಿದೆ. ಉಚಿತ ಕೊಟ್ಟರೆ ಸಾಲ ಖಚಿತ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೂ  ಉಚಿತವಾಗಿ ಸಿಗೋವಾಗ ಯಾಕೆ ಬಳಸಬಾರದೆನ್ನುವ  ಅತಿಆಸೆಯೇ ದು:ಖಕ್ಕೆ ಕಾರಣ.
ಯಾವ ದೇಶದಲ್ಲಿ ಪ್ರಜೆಗಳು  ಸತ್ಕರ್ಮದಿಂದ ಸ್ವಧರ್ಮದಿಂದ  ಸರಳಜೀವನ,ಸ್ವಾವಲಂಬನೆ, ಸ್ವಾಭಿಮಾನ ಇಲ್ಲದೆ ಜೀವನ‌ನಡೆಸುವರೋ ಆ ದೇಶ ಆತ್ಮದುರ್ಭಲ ವಾಗಿ 
ಸತ್ಯದಿಂದ ದೂರವಾಗುತ್ತಾ ಧರ್ಮ ಬಿಟ್ಟು  ಪರಕೀಯರ ವಶವಾಗುವುದು  ಸಹಜ.
ಈಗ ಭಾರತೀಯರು ಎಚ್ಚರವಾಗದಿದ್ದರೆ  ಮುಂದೆ ಎದ್ದು ನಡೆಯಲಾಗದ ಪರಿಸ್ಥಿತಿ ಪರಕೀಯರೆ ತರುವರು. ಕಾರಣ ಈಗಾಗಲೇ ತಮ್ಮ ವ್ಯವಹಾರದ‌ಮೂಲಕ ದೇಶದ ಭೂಮಿ ಬಳಸಿದ್ದಾರೆ.ಜನರನ್ನು ಸೇವಕರನ್ನಾಗಿಸಿಕೊಂಡು ದುಡಿಸಿ ತಮ್ಮ ದೇಶದ ಆಸ್ತಿ ಮಾಡಿಕೊಂಡಿದ್ದಾರೆ.ಜೊತೆಗೆ ಧರ್ಮ ವೂ ಮತಾಂತರದ ಮೂಲಕ  ಬೆಳೆಸಿಕೊಂಡಿದ್ದಾರೆ. ಆದರೂ ತಮ್ಮ ದ್ವೇಷ ಭಿನ್ನಾಭಿಪ್ರಾಯ, ಅಹಂಕಾರ ಸ್ವಾರ್ಥ ಬಿಡದೆ ಜನರ ಹಣವನ್ನು ದುರ್ಭಳಕೆ ಮಾಡಿಕೊಂಡು ಸಮಾವೇಷ, ಸಮಾರಂಭ, ವಿದೇಶಿಗಳ ದೊಡ್ಡ ದೊಡ್ಡ ಯೋಜನೆಗಳು, ದೊಡ್ಡ ದೊಡ್ಡ ದೇವಸ್ಥಾನ ,ಪಕ್ಷ‌ ಮಠ,ಪ್ರತಿಮೆಗಳಿಗೆ  ಸಾಲದ ಹಣ ಬಳಸಿದರೆ  ನಿಜವಾದ ದೈವತ್ವ  ಬೆಳೆಯುವುದಿಲ್ಲ.
ದೇವರು ಸರ್ವಾಂತರ್ಯಾಮಿ  ಯಾವ ರೂಪದಲ್ಲಾದರೂ ಬರಬಹುದು. ಅದರಲ್ಲೂ ಬಡವರಲ್ಲಿ ಹೆಚ್ಚಿನ ದೈವ ಶಕ್ತಿ ಇರುತ್ತದೆ.ಕಾರಣ ಅವರಲ್ಲಿ ಅಹಂಕಾರ ಸ್ವಾರ್ಥ ಗುಣ ಕಡಿಮೆ.ಭಕ್ತಿ ಹೆಚ್ಚು.ಸೇವಾಗುಣ ಹೆಚ್ಚು.ಶ್ರಮಪಟ್ಟು ದುಡಿದು ಜೀವನ‌ನಡೆಸುತ್ತಾರೆ ಎನ್ನುವ ಕಾರಣಕ್ಕಾಗಿ ಶಿವ ಶರಣರು  ಕಾಯಕವೇ ಕೈಲಾಸ ಮಂತ್ರದಿಂದ ಶರಣರನ್ನು ಉತ್ತಮ ಭಕ್ತಿಮಾರ್ಗದಲ್ಲಿ ನಡೆಸಿ  ಶಿವನಿಗೆ ಶರಣಾಗಿದ್ದರು. ಇವರ ಸಾಮಾಜಿಕ  ಸಮಾನತೆಯ  ಧಾರ್ಮಿಕ ನಡೆ ನುಡಿಯಿಂದ  ಆದ  ಸಾತ್ವಿಕ‌ಬದಲಾವಣೆ ಮಾನವನ ಸಾಲ ತೀರಿ ಪರಮಾತ್ಮನ ದರ್ಶ ನವಾಗಿತ್ತು. ಆದರೆ ಇಂದಿನ ಹೋರಾಟವು ಅಧರ್ಮದ ಪರವಾಗಿದೆ.ಉತ್ತಮ ಶ್ರಮಿಕರನ್ನು ಬಡವರೆಂದು ಕರೆದು ಅವರ ಜೀವನವೇ ನರಕವಾದರೂ  ಹಣದಿಂದ  ಮೇಲೆತ್ತುವ ಸರ್ಕಾರದ  ಯೋಜನೆಗಳು ಇನ್ನಷ್ಟು ಬಡತನವನ್ನು ಹೆಚ್ಚಿಸಿ ಪರಕೀಯರ ವಶಕ್ಕೆ ದೇಶ ನಡೆದಿದೆ ಎಂದರೆ ಇದನ್ನು ಆತ್ಮನಿರ್ಭರ ಎಂದರೆ ಸರಿಯೆ?
ಒಂದೊಂದು ರೂಗಳು ದೇಶದ ಸಾಲ. ಅದನ್ನು ತೀರಿಸಲು ಪ್ರಜೆಗಳು  ದುಪ್ಪಟ್ಟು ದುಡಿಯಲೇಬೇಕು. ದುಡಿಯುವುದಿರಲಿ ಹೊರಗಿನ ಸಾಲದ ಬಂಡವಾಳವನ್ನು  ದುರ್ಭಳಕೆ ಮಾಡಿಕೊಂಡು  ಜನರ ತಲೆಯ ಮೇಲೆ ಸಾಲದ ಹೊರೆ ಹಾಕಿ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಏರಿಸಿ ತಿನ್ನುವುದಕ್ಕೂ  ಕಷ್ಟಪಡುವಂತಾದರೆ ಯಾರ ಬಳಿ ಹೋಗಬೇಕು? ಇದೊಂದು  ವಿದೇಶಿಗಳ ಷಡ್ಯಂತ್ರ.ನಮ್ಮ ರಾಜಕಾರಣಿಗಳ  ಅಸಹಾಯಕತೆಯನ್ನು   ಬಳಸಿಕೊಂಡು ಭಾರತವನ್ನು ಎತ್ತಿ ಹಿಡಿಯುವ ನೆಪದಲ್ಲಿ  ಹಲವು ರೀತಿಯ ವ್ಯವಹಾರಕ್ಕೆ  ಕೈಜೋಡಿಸಿ ಭಾರತದಲ್ಲಿ ತಮ್ಮ ಕಂಪನಿ  ಬೆಳೆಸಿ, ಯುವಕಯುವತಿಯನ್ನು ಕೆಲಸಕ್ಕೆ ಬಳಸುತ್ತಾ ತಮ್ಮ ದೇಶದ ಆರ್ಥಿಕ ಸ್ಥಿತಿ ಸುಧಾರಣೆಗಾಗಿ  ನಡೆಸುತ್ತಿರುವ ಕುತಂತ್ರವಷ್ಟೆ.ಇದನ್ನು  ಪ್ರಜೆಗಳು ಅಜ್ಞಾನದಿಂದ  ಪ್ರಗತಿಪರ ದೇಶವೆಂದರೆ ಅಧ್ಯಾತ್ಮದ ಪ್ರಕಾರ ಇದು ಅದೋಗತಿಯ ಸೂಚನೆ. ಲಕ್ಷಾಂತರ ಹಣ ಸಂಪಾದಿಸಿದರೂ ಬಳಸಲು ತತ್ವಜ್ಞಾನವಿಲ್ಲವಾದರೆ  ಅದೊಂದು  ಭೋಗದ ಜೀವನವಷ್ಟೆ.ಭೋಗದಿಂದ ಯಾರಾದರೂ ಆತ್ಮಜ್ಞಾನ ಪಡೆದರೆ? ಆತ್ಮನಿರ್ಭರ ಎಂದರೇನೆ ಆತ್ಮಜ್ಞಾನ ಬೇಕಿದೆ. ಎಲ್ಲಿದೆ ಅಂತಹ ಶಿಕ್ಷಣ? ಎಲ್ಲಿರುವರು ಆತ್ಮಜ್ಞಾನಿಗಳು?ವಿದೇಶದವರೆಗೂ ನಮ್ಮ ಧರ್ಮ ಹರಡಿದೆ ಆದರೆ ನಮ್ಮಲ್ಲಿ ಧರ್ಮ ಜ್ಞಾನವಿಲ್ಲವಾದರೆ  ದೇಶವೇ ಬೇರೆ ದೇಹವೇ ಬೇರೆ ಎಂದಂತೆ.ಇದೊಂದು ಅಜ್ಞಾನದ ಮಹಾ ಜನಸಂಖ್ಯೆಯಳ್ಳ ದೇಶ ನಡೆಸುವುದು ಸುಲಭವಲ್ಲ. ಆದರೂ ರಾಜಕಾರಣಿಗಳು ಜನರನ್ನು ಆಳೋದಕ್ಕೆ ಪೈಪೋಟಿ ನಡೆಸಿದ್ದಾರೆಂದರೆ ಎಷ್ಟು ಸುಲಭವಾಗಿದೆ.
ಜ್ಞಾನವಿದ್ದವರಷ್ಟೆ ಇದರ ಹಿಂದಿನ ಅಧರ್ಮ ಅಜ್ಞಾನ ಸ್ಪಷ್ಟವಾಗಿ ಕಾಣಬಹುದು.
ಏನೇ ಬರಲಿ ಒಗ್ಗಟ್ಟಿರಲಿ ಎನ್ನುವುದು ಭ್ರಷ್ಟಾಚಾರ ಕ್ಕೆ ಹೆಚ್ಚಾಗಿದೆ.ಭ್ರಷ್ಟಾಚಾರವು  ಅಜ್ಞಾನದಿಂದ ಬೆಳೆದಿದೆ.ಅಜ್ಞಾನವು ಶಿಕ್ಷಣದೊಳಗೇ ಬೆಳೆಸಲಾಗಿದೆ. ತತ್ವ ಮರೆತು ತಂತ್ರ ಬೆಳೆಸಿದರೆ ಜೀವನ ಅತಂತ್ರಸ್ಥಿತಿಗೆ ತಲುಪುತ್ತದೆ ಎನ್ನುವುದು ಸರ್ವ ಕಾಲಿಕ ಸತ್ಯ.ಹಾಗಾಗಿ ನಮ್ಮ ಭಾರತ  ಮಾತ್ರ ಯಾಕೆ ಯಾವಾಗಲೂ ಪರಕೀಯರ ವಶ ಆಗುತ್ತದೆ ಎಂದರೆ ಇಲ್ಲಿಯ ಸ್ತ್ರೀ ಯರ ಆತ್ಮಜ್ಞಾನಕ್ಕೆ ಬೆಲೆ ಇಲ್ಲ.ಅವರನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ದುರ್ಭಳಕೆ ಮಾಡಿಕೊಂಡರೂ ಕೇಳೋದಿಲ್ಲ. ಹೀಗಾಗಿ ಸ್ತ್ರೀ ಹೊರಬಂದು ತಂತ್ರದ ವಶವಾಗಿ ಸ್ವತಂತ್ರ ಜ್ಞಾನ ಕಳೆದುಕೊಂಡರೆ ಅದೂ ದೇಶಕ್ಕೆ  ಕಷ್ಟ ನಷ್ಟ. ಇವುಗಳಲ್ಲಿ ಅಧ್ಯಾತ್ಮ ಸತ್ಯವಿದೆ.
ಭೌತಿಕದ ದೃಷ್ಟಿಯಿಂದ  ಪ್ರಗತಿ ಎಂದು ಕಾಣುವುದು ಅಧ್ಯಾತ್ಮದ ದೃಷ್ಟಿಯಿಂದ ಅಧೋಗತಿಯಾಗಿರುತ್ತದೆ.ಹೀಗಾಗಿ ಮೊದಲು ಅಧ್ಯಾತ್ಮ ಸತ್ಯವರಿತು ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡರೆ  ಉತ್ತಮ. ಇದೀಗ ವಿಪರೀತ ಹದಗೆಟ್ಟಿದೆ.
ಒಟ್ಟಿನಲ್ಲಿ ತತ್ವಜ್ಞಾನಿಗಳೇ ತಂತ್ರದ ವಶದಲ್ಲಿ ಸರ್ಕಾರದ ಹಿಂದೆ ನಡೆದರೆ ಇದನ್ನು ಆತ್ಮನಿರ್ಭರ ಭಾರತ ಎನ್ನಬಹುದೆ? ನಿಜವಾದ ಜ್ಞಾನಿಗಳಾದವರು ಇದಕ್ಕೆ ಉತ್ತರ ಕೊಡಬಹುದು. ರಾಜಕೀಯಕ್ಕೆ ಇಳಿದವರಿಗೆ ಮೂಲದ ಸತ್ಯ ಕಾಣದು. ಇದು ಪ್ರಜಾಪ್ರಭುತ್ವಕ್ಕಾದ‌ ಅವಮಾನ. ಪ್ರಜೆಗಳ ಮಾನಾಪಮಾನ ದೇಶದ ಮಾನ ಹೋಗುವಷ್ಟು ಬೆಳೆಯಬಾರದು. ನಮ್ಮ ಸನ್ಮಾನಕ್ಕಾಗಿ ವಿದೇಶಿಗರಿಗೆ ಶರಣಾಗೋದೆ ಅವಮಾನ. ಎಲ್ಲಿಗೆ ಬಂತು ಭಾರತದ ಸ್ಥಿತಿಗತಿ.
ಸತ್ಯ ಕಠೋರವೆಂದು ಕೇಳಿಸಿಕೊಳ್ಳದೆ ಸಿಹಿಯಾದ ಮಿಥ್ಯದ ಪರ ನಿಂತು ಎಷ್ಟು  ಹೋರಾಟ ನಡೆಸಿದರೂ ಒಳಗಿನ ಸತ್ಯವೇ ದೇವರು. ದೇವರನ್ನು ಎಷ್ಟು ಹೊರಗಿನಿಂದ  ಕಾಡಿ ಬೇಡಿದರೂ ಒಳಗಿನ ದೈವತ್ವ ಬೆಳೆಸಿಕೊಳ್ಳದೆ  ಆತ್ಮತೃಪ್ತಿ ಆತ್ಮಶಾಂತಿ ಪಡೆಯಲಾಗದು. ಭಾರತ ಆಧ್ಯಾತ್ಮಿಕ ವಾಗಿ ಆತ್ಮನಿರ್ಭರ ವಾಗಬೇಕಾದರೆ  ಮೂಲದ ಶಿಕ್ಷಣ ಅಧ್ಯಾತ್ಮ ಆಗಬೇಕಿತ್ತು.ಅಪಾರವಾದ ಜ್ಞಾನ ಸಂಪತ್ತನ್ನು ಹೊಂದಿರುವ ಸಾಮಾನ್ಯ ಪ್ರಜೆಗಳಿಗೆ  ಒಳಗಿದ್ದ ಸತ್ಯ ಧರ್ಮ  ಬಿಟ್ಟು ಹೊರ ಬರುವಂತೆ ಮಾಡಿರುವ ರಾಜಕೀಯವೇ ಎಲ್ಲದ್ದಕ್ಕೂ ಕಾರಣ. ಆ ರಾಜಕೀಯ ಕೇವಲ ದೇಶವನ್ನು   ನೋಡದೆ ವಿದೇಶ ನೋಡುತ್ತಾ ಹೊರಗೆ ಹೊರಟು ಅಲ್ಲಿಯ ವ್ಯವಹಾರಕ್ಕೆ ಕೈ ಜೋಡಿಸಿಕೊಂಡು  ಸಾಲ ತಂದರೆ ದೇಶದ ಸಾಲ ತೀರುವುದೆ ಬೆಳೆಯುವುದೆ? ಈಗಲೂ ಸೋಮಾರಿ ಪ್ರಜೆಗಳು ಕೇಳುವುದು ವಿದೇಶದಲ್ಲಿರುವ ಕಪ್ಪು ಹಣ ಯಾವಾಗ  ರಾಜಕಾರಣಿಗಳು ದೇಶಕ್ಕೆ ತರುತ್ತಾರೆ ? ಯಾವಾಗ ನಮ್ಮ ಖಾತೆಗೆ ಹಣ ಹಾಕುತ್ತಾರೆ? ಎಂದು.ಇಲ್ಲಿ ನಾವು ಅಧ್ಯಾತ್ಮ ದ ಪ್ರಕಾರ ತಿಳಿಯಬೇಕಾಗಿರೋದು  ಮಾನವ ಎಷ್ಟು ಸಾಲ ಪಡೆಯುವನೋ ಅಷ್ಟು ಆಪತ್ತನ್ನು  ಹೊತ್ತು ನಡೆಯುತ್ತಾನೆ.
ಸಾಲವೇ ಶೂಲ ಯಾವುದಿದರ ಮೂಲ ಎಂದರೆ ಸರ್ಕಾರವೆ ಇದರ ಮೂಲ.ಇಲ್ಲಿ ಸರ್ಕಾರ ಎಂದರೆ ಸಹಕಾರ ಎಂದರ್ಥ.
ಭ್ರಷ್ಟಾಚಾರ ಕ್ಕೆ ನೀಡುವ ಸಹಕಾರವೇ ಸಾಲವನ್ನು ಬೆಳೆಸಿ ಜೀವನದಲ್ಲಿ ಸಮಸ್ಯೆ ಹೆಚ್ಚಾಗಿದೆ.ಇದು ಮನೆ ಮನೆಯನ್ನು ಧರ್ಮ, ಜಾತಿ,ಪಕ್ಷ,ದೇವರನ್ನೂ ಬಿಡದೆ ಆಳುತ್ತಿದೆ ಎಂದರೆ ಇದರಲ್ಲಿ ಯಾರ ಉದ್ದಾರವಾಗಿದೆ?
ಪ್ರಜಾಪ್ರಭುತ್ವದ ದೇಶದಲ್ಲಿ ಸ್ವಾತಂತ್ರ್ಯ ಸಿಕ್ಕಿದ್ದು ಯಾರಿಗೆ? ಯಾರೋ ಬಂದು ಆಳುವುದಕ್ಕೆ  ನಾವೇ ಸಹಕಾರ ನೀಡಿ ಈಗ ವಿರೋಧವ್ಯಕ್ತಪಡಿಸಿದರೆ  ಹೋಗುವರೆ? ವಿದೇಶಕ್ಕೆ ಹೋದರೆ ಪ್ರಗತಿ ಸ್ವದೇಶದಲ್ಲಿ ಇದ್ದು ದುಡಿದು ತಿಂದರೆ ಅಧೋಗತಿಯೆ? ಇದೊಂದು ಅಜ್ಞಾನದ ಮತಿಯಷ್ಟೆ.
ಬುದ್ದಿವಂತರಲ್ಲಿ ಜ್ಞಾನಶಕ್ತಿಯಿಲ್ಲ.ಜ್ಞಾನಿಗಳಿಗೆ ಬುದ್ದಿವಂತಿಕೆ ಕಡಿಮೆಯಾಗಿ ಒಬ್ಬರನೊಬ್ಬರು ದೂರಿಕೊಂಡು  ತಾವೇ ಸರಿ ಎನ್ನುವ ವಾದ ವಿವಾದದಿಂದ ದೇಶವನ್ನು  ಬಿಟ್ಟು ನಡೆದರೆ ಹೊರಗಿನವರು ಬಂದು ತಮ್ಮ ಸ್ಥಾನಭದ್ರಪಡಿಸಿಕೊಂಡರೂ
ಚಿಂತೆಯಿಲ್ಲ.ಎಂತಹ  ಅಜ್ಞಾನ  ನಮ್ಮ ಸರ್ಕಾರದಲ್ಲಿದೆ ಎಂದರೆ  ತಾವು ಮಾಡಿದ ಕೆಲಸವನ್ನೇ ಇನ್ನೊಂದು ಪಕ್ಷ ಮಾಡಿದರೆ ತಪ್ಪು ಎಂದರೆ ಸರಿಯಾದವರು ಯಾರು?
ತಾವೇ ವಿದೇಶದ ಹಂಗಿನಲ್ಲಿದ್ದರೆ ಸ್ವದೇಶ ಬೆಳೆಯುವುದೆ?
ಮನೆಯವರನ್ನು ದ್ವೇಷ ಮಾಡಿದರೆ ಲಾಭವೆ ನಷ್ಟವೆ? ದೇಶವನ್ನು ದ್ವೇಷದಿಂದ ಕಟ್ಟಬಹುದೆ?
ಸಂಸಾರದ ಸಮಸ್ಯೆ ತಿಳಿಯದವರು ಸಂಸಾರದ ಸಮಸ್ಯೆಗೆ ಪರಿಹಾರ ಕೊಡಬಹುದೆ? 
ತತ್ವಜ್ಞಾನವಿಲ್ಲದೆ ತಂತ್ರಜ್ಞಾನ ಬೆಳೆಸಿದರೆ ಅತಂತ್ರ ಜ್ಞಾನವಲ್ಲವೆ?
ಸ್ವಾತಂತ್ರ್ಯ ವಿದೆಯೆಂದು ಜನರನ್ನು ಅಧರ್ಮ ದೆಡೆಗೆ ನಡೆಸಿ ಹಣ,ಅಧಿಕಾರ,ಸ್ಥಾನಮಾನ ಸನ್ಮಾನ ಪಡೆದರೂ ದೇಶದ ಒಳಗಿದ್ದು ಋಣ ತೀರಿಸದೆ ಇದ್ದರೆ  ಮುಕ್ತಿ ಸಿಗದು.ಜನರ ಋಣ ತೀರಿಸಲು  ಜ್ಞಾನವೇ ಬಂಡವಾಳ. ಸತ್ಯವಿಲ್ಲದ ಜ್ಞಾನ ಎಷ್ಟು ಬೆಳೆಸಿದರೂ ಅಜ್ಞಾನ. ಒಟ್ಟಿನಲ್ಲಿ ಕಲಿಗಾಲದಲ್ಲಿ ಮಾನವರು ಹೇಗಿರುವರೆಂಬ ಪಾಂಡವರ ಪ್ರಶ್ನೆಗೆ ಶ್ರೀ ಕೃಷ್ಣ ನೀಡಿದ ಉತ್ತರ ಈಗಲೇ ಕಣ್ಣಿಗೆ ಕಾಣುವಂತಾಗಿದೆ ಎಂದರೆ ಮುಂದೆ ಹೇಗಿರಬಹುದು? ಅಸುರಶಕ್ತಿಯನ್ನು ಬೆಳೆಸಿ ರಾಜಕೀಯಕ್ಕೆ ಸಹಕಾರ ನೀಡಿ ಮನರಂಜನೆಯ ಮಾಧ್ಯಮದಲ್ಲಿ  ವಿಹರಿಸಿಕೊಂಡಿರುವ ಸಾಕಷ್ಟು ಜನರಿಗೆ ಅಧ್ಯಾತ್ಮ ಪದಕ್ಕೆ ಅರ್ಥ ಗೊತ್ತಿಲ್ಲ. ಇನ್ನು ಆತ್ಮನಿರ್ಭರ ಭಾರತವನ್ನು  ವಿಜ್ಞಾನದಿಂದ ಮಾಡಲು ಹೊರಟವರಿಗೆ ಅಧ್ಯಾತ್ಮದ  ಕಡೆಗೆ  ಬರಲಾಗದೆ  ಮಧ್ಯವರ್ತಿಗಳ ವಶದಲ್ಲಿ ನಿಂತರೆ  ಅವರ ಹಿಂದೆ ನಡೆದವರ ಗತಿ ಅಧೋಗತಿ.
ಕೆಲವೇ ಕೆಲವರು ಇದರಲ್ಲಿನ ಸತ್ಯ ತಿಳಿಯಬಹುದು. ಸತ್ಯಕ್ಕೆ ಸಾವಿಲ್ಲ ಎಂದರೆ  ಸತ್ಯದೆಡೆಗೆ ನಡೆದವರಿಗೆ ಸಾವಿನ ಭಯವಿಲ್ಲ. ಅದಕ್ಕಾಗಿ ಹಿಂದಿನ ಮಹಾತ್ಮರುಗಳು  ಸಾವಿರದ ನಾಮ ಸಹಸ್ರನಾಮದ ಹಿಂದಿನ  ನಿಗೂಡ ಅರ್ಥ ತಿಳಿದು ನಾಮಜಪದಿಂದಲೇ ಪರಮಾತ್ಮನ ಸೇರಿದರು. ಈಗಿನ ಪರದೇಶದ ಕಡೆಗೆ ಹೊರಟವರ ಹಿಂದೆ ನಡೆದರೆ ಪರಮಾತ್ಮ ಸಿಗೋದಿಲ್ಲ ಬಿಡಿ. ಅಧರ್ಮಕ್ಕೆ ತಕ್ಕಂತೆ ಫಲವಿದೆ. ಹಾಗಂತ ಪರಮಾತ್ಮನಿಗೇನೂ‌  ಲಾಭ ನಷ್ಟವಿಲ್ಲ.ಎಲ್ಲಾ ಮಾನವರೂ ಅವನೊಳಗಿರುವಾಗ  ಅತಿಯಾಗಿ ದೂರ ಹೋದವರು ತಿರುಗಿ ಬರೋದು ಕಷ್ಟ.ಹತ್ತಿರವಿದ್ದವರು  ಬೇಗ ಮೂಲ ಸೇರುವರು.ಬಡವರಲ್ಲಿ ಸಾಲದ ಹೊರೆ ಕಡಿಮೆಯಿತ್ತು.ಸರ್ಕಾರ  ಅವರಿಗೆ ಉಚಿತಕೊಟ್ಟು ಸಾಲದ ಹೊರೆ ಏರಿಸಿ ಜೀವನದ ಮುಖ್ಯ ಗುರಿತಲುಪದಂತೆ ಮಾಡಿದೆ. ಇದನ್ನು ತಿಳಿಸಬೇಕಾದ ಧಾರ್ಮಿಕ ವರ್ಗ ವೂ ಸರ್ಕಾರದ ಪರ ನಿಂತರೆ ಬೇಲಿಯೇ ಎದ್ದು ಹೊಲಮೇಯ್ದಂತೆ.ಇದು ಕಲಿಯುಗದ  ಸತ್ಯವಾಗಿದೆ ಅಷ್ಟೆ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ. ಎಂದರು ಮಹಾತ್ಮರು.ಇಂದು ನಿಮ್ಮ ನಿಮ್ಮ ಮಕ್ಕಳ ನೀವೇ ಸಾಕಿಕೊಳ್ಳಿ ಎಂದು ಸರ್ಕಾರ ಕೈ ಬಿಟ್ಟರೆ ಆತ್ಮನಿರ್ಭರ ಭಾರತ ಸಾಧ್ಯವಿದೆ. ಇದನ್ನು ಯಾರು ಹೇಳಬಹುದು? ಹೇಳಿದರೂ ಕೇಳಿಸಿಕೊಳ್ಳುವ ಜ್ಞಾನ  ಮಂದಿಗಿದೆಯೆ? ಸ್ವದೇಶದ ಋಣ ತೀರಿಸಲು ದೇಶಸೇವೆ ಮಾಡಬೇಕು.ವಿದೇಶಿ ಋಣ ತೀರಿಸಲು ವಿದೇಶ ಸೇವೆ ಮಾಡಬೇಕಷ್ಟೆ.ಸೇವೆಯು ನಿಸ್ವಾರ್ಥ ನಿರಹಂಕಾರದಿಂದ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಬೇಕೆಂದು ಅಧ್ಯಾತ್ಮ ತಿಳಿಸುತ್ತದೆ ಸಾಧ್ಯವೆ?
ದೇಶದ ಪ್ರಜೆಯಾಗಿ ದೇಶದ ಭವಿಷ್ಯ ಶಿಕ್ಷಣದಲ್ಲಿಯೇ ಇದೆ ಎಂದು ತಿಳಿದು ತಿಳಿಸುವ‌ಕೆಲಸದಲ್ಲಿ ಈವರೆಗೆ ಬರೆದ ಲೇಖನಗಳು ಅನುಭವದ ಸತ್ಯವಾಗಿದೆ. ಇಲ್ಲಿ ಯಾರೂ ಯಾರನ್ನೂ ಆಳುವ ರಾಜಪ್ರಭುತ್ವ ವಿರದಿದ್ದರೂ ರಾಜರಂತೆ ಅಧಿಕಾರ ಚಲಾವಣೆ ಮಾಡುವ ಸಾಕಷ್ಟು ಮಂದಿ ಇದ್ದಾರೆ. ಇವರಿಗೆ ದೇಶದ ಮಾನಮರ್ಯಾದೆಗಿಂತ ತಮ್ಮ ಸ್ವಾರ್ಥ ದ ಜೀವನವೇ ಮುಖ್ಯ.ಇವರನ್ನು ಪ್ರತಿಷ್ಟಿತರು,ಜ್ಞಾನಿಗಳು,ವಿದ್ಯಾವಂತರು,ಬುದ್ದಿವಂತ ತಿಳುವಳಿಕಸ್ಥರೆಂದು  ಮೇಲೇರಿಸಿ ಮಧ್ಯವರ್ತಿಗಳು  ಬೆಳೆದರು. ಆದರೆ ನಿಜವಾದ ದೇಶಭಕ್ತರ ಜ್ಞಾನ ಪಡೆಯದೆ ದೇಶರಕ್ಷಣೆ ಮಾಡಲು ಸಾಧ್ಯವಿಲ್ಲ. ಹಾಗೆ ಧರ್ಮ ಸೂಕ್ಷ್ಮ ಅರ್ಥ ವಾಗದೆ ಧರ್ಮ ರಕ್ಷಣೆ ಅಸಾಧ್ಯ. ಹೀಗಾಗಿ ಮಿತಿಮೀರಿದ ಅಜ್ಞಾನದಲ್ಲಿ ಮಾನವನು ಮಾನವನನ್ನು ದ್ವೇಷಮಾಡುವ ರಾಜಕೀಯಕ್ಕೆ ದೇಶ ಬಲಿಯಾಗಿದೆ. ಯುವಪೀಳಿಗೆಗೆ ರಾಜಯೋಗದ ಸತ್ಯ ತಿಳಿದಾಗಲೇ ತಾವು ತಪ್ಪಿರುವ  ದಾರಿ ಬಿಟ್ಟು ಸರಿದಾರಿಗೆ ವಿವೇಕದೆಡೆಗೆ ಬರಲು ಸಾಧ್ಯ.ಆದರೆ ಎಲ್ಲಿರುವರು ವಿವೇಕಾನಂದರು?
ರಾಜಕೀಯ ಬಿಟ್ಟು ವಿವೇಕದೆಡೆಗೆ ನಡೆಯುವುದು ಕಷ್ಟ.ಹೀಗಾಗಿ ಎಲ್ಲಾ ರಾಜಕೀಯ ಹಿಡಿದು ಹೊರದೇಶದವರ ಬಂಡವಾಳ ಸಾಲ ವ್ಯವಹಾರ,ಮನರಂಜನೆಯ ಮಾಧ್ಯಮದಲ್ಲಿ ಮುಳುಗಿದ್ದಾರೆ. ಇದಕ್ಕೆ ಕೊನೆಯಿದೆಯೆ? 
ಯಾರು ಶ್ರೇಷ್ಠ ರು ಕನಿಷ್ಟರು? ಆಪರೇಷನ್  ಮಾಡಿಕೊಂಡ ಶರೀರವನ್ನು  ಸ್ವಚ್ಚ ಮಾಡಲು ಸಾಧ್ಯವೆ?  ಹಾಗೆಯೇ ದೇಶವನ್ನು ವಿದೇಶದವರಿಂದ  ಸ್ಮಾರ್ಟ್ ಮಾಡಲು ಹೋದರೆ  ವಿದೇಶಿಗಳಂತೆಯೇ ಅಜ್ಞಾನದ ಅಹಂಕಾರ ಸ್ವಾರ್ಥ ಕ್ಕೆ ಬಲಿಯಾಗಿ ಜೀವನವೇ  ಸಣ್ಣದಾಗುತ್ತದೆ. ಆಯಸ್ಸು ಕ್ಷೀಣವಾಗಲು ಕಾರಣವೇ ಆತ್ಮದುರ್ಭಲ ತೆ.
ಹಿಂದಿನ ಮಹರ್ಷಿಗಳು ಸಾವಿರಾರು ವರ್ಷ ಜೀವಿಸಿದ್ದರೆಂದರೆ ಆತ್ಮಕ್ಕೆ ಸಾವಿಲ್ಲ. ಭೂಮಿ ಋಣ ತೀರಿಸಿ ದೇಹತ್ಯಾಗ ಮಾಡಿ ಹೋಗುತ್ತಿದ್ದ ಅಂದಿನ ಯೋಗಿಗಳೆಲ್ಲಿ?  ಭೂಮಿಯ ಋಣ ತೀರಿಸದೆ  ಜೀವನ ನಡೆಸುವ ಇಂದಿನ ಭೋಗವೆಲ್ಲಿ? ರೋಗಕ್ಕೆ ಕಾರಣವೇ  ಅಜ್ಞಾನದ ಭೋಗದ ಜೀವನ. ಇದರಲ್ಲಿ ಯಾವ ಪುರಾಣ ಇತಿಹಾಸ ವೇದ ಶಾಸ್ತ್ರ ವಿಲ್ಲ ಆದರೆ ವಾಸ್ತವ ಸತ್ಯವಿದೆ. ಸತ್ಯವೇ ದೇವರು.ಇರೋದು ಒಂದೇ ಸತ್ಯ, ಒಂದೇ ಧರ್ಮ, ದೇಶ,ಭೂಮಿಯಾದರೆ ಅದರ ಪ್ರಕಾರ ನಡೆಯಲು ಹೊರಗಿನ ರಾಜಕೀಯ ಬೇಕೆ? ಒಳಗಿರುವ ರಾಜಯೋಗವೆ?
ಜ್ಞಾನ ಬಂದಾಗಿನಿಂದ  ತಿಳಿದ ವಿಚಾರವನ್ನು ದೇಶದ ಪರ ಲೇಖನದ ಮೂಲಕ ಹೊರಹಾಕುವ ಪ್ರಯತ್ನ ನಿರಂತರ ವಾಗಿ ನಡೆದಿದೆ.ಆದರೆ  ಅದನ್ನು ತಿರಸ್ಕಾರ ಮಾಡಿ ನಿಂತ ನೀರಾಗಿರುವ  ಜನರು ಮಾತ್ರ ಸರ್ಕಾರದ ಋಣ ಬೆಳೆಸಿ ತಾವೂ  ಸಾಲದ ಹೊರೆ ಏರಿಸಿಕೊಂಡು  ತನ್ನ ನಂಬಿ ಬಂದ ಮಕ್ಕಳು ಮಹಿಳೆಯರನ್ನು ಮನೆಯಿಂದ ಹೊರತಂದು ದುಡಿಸಿದರೂ ಸಾಲ ತೀರಿಸಲಾಗಿಲ್ಲವೆಂದರೆ  ಇದಕ್ಕೆ ಕಾರಣ ಸಾಲ ಒಳಗಿನಿಂದ ಬೆಳೆದಿದೆ. ಮೊದಲು ಒಳಗಿನ ಸಾಲ ತೀರಿಸಲು ಮೂಲದ ಧರ್ಮ ಕರ್ಮದೆಡೆಗೆ ಜೀವನ ನಡೆಯಬೇಕಿತ್ತು.ಅವರ ಆಸ್ತಿ ಬೇಕು ಜ್ಞಾನಬೇಡ ಎಂದರೆ ಹೇಗೆ ಸಾಲ ತೀರುತ್ತದೆ? ಹಿಂದೂಗಳ ಆಂತರಿಕ ಜ್ಞಾನವೇ ಸ್ಥಿರಾಸ್ತಿ. ಅದನ್ನು ಸದ್ಬಳಕೆ ಮಾಡಿಕೊಂಡಷ್ಟೂ ಚರಾಸ್ತಿ ಬೆಳೆಯುವುದು. ಚರಾಸ್ತಿಯನ್ನು ದಾನ ಧರ್ಮಕ್ಕೆ ಬಳಸಿದರೆ ಮುಕ್ತಿ ಮೋಕ್ಷ. ಇದಕ್ಕೆ ವಿರುದ್ದ ನಡೆದಷ್ಟೂ ಮುಗಿಯದ ಕಥೆ.
ಈ ಕಥೆಯಲ್ಲಿಯೇ ವ್ಯಥೆಯಿದ್ದು ಹೊರಗೆ ಹರಡಿದರೆ ಇನ್ನಷ್ಟು  ವ್ಯಥೆಯೇ ಬೆಳೆಯುವುದಲ್ಲವೆ? ಮನರಂಜನೆಯಲ್ಲಿಯೇ ಆತ್ಮವಂಚನೆಯಾಗುತ್ತಿದ್ದರೆ  ಅದಕ್ಕೆ ತಕ್ಕಂತೆ ಫಲ ಜೀವ ಅನುಭವಿಸಲೇಬೇಕೆನ್ನುವುದು ಹಿಂದು ಧರ್ಮದ ತತ್ವ. ಹಾಗಾಗಿ ಹಿಂದೂ ಧರ್ಮ ಹಾಳಾಗಿಲ್ಲ ಹಿಂದೂಗಳೇ ಧರ್ಮವನ್ನು ಹಾಳುಮಾಡಲು ಹೊರಗೆ ಹೊರಟಿರೋದು. ಒಟ್ಟಿನಲ್ಲಿ  ತಮಗೆ ತಾವೇ ಮೋಸ ಮಾಡಿಕೊಂಡು ಯಾರೋ ಮೋಸ ಮಾಡಿದ್ದಾರೆಂದು  ಹೊರಗೆ  ದ್ವೇಷ ಮಾಡಿದರೆ ಒಳಗೇ ಇನ್ನಷ್ಟು ಅಜ್ಞಾನ ಬೆಳೆದು ಅಸುರಶಕ್ತಿ ದೇಹವನ್ನು ಆಳುವುದು.ಇದು ದೇಶಕ್ಕೂ ಆಗುತ್ತಿದೆ. ನಿಧಾನವೇ ಪ್ರಧಾನವೆಂದರು.ಯಾರು ನಿಧಾನವಾಗಿ ಚಿಂತನೆ ನಡೆಸಿ ಪ್ರಧಾನಿಯಾದರು?  ದೇಶದ ಶಾಂತಿ ಕಾಪಾಡಲು  ದೇಶೀಯ ಶಿಕ್ಷಣದಲ್ಲಿಯೇ ಶಾಂತಿ ಮಂತ್ರವಿತ್ತು.ಅದನ್ನು ಬಿಟ್ಟು ಕ್ರಾಂತಿ ಮಂತ್ರ ಪ್ರಚಾರ ಮಾಡಿ ಜನರಲ್ಲಿದ್ದ ಶಾಂತಿ ಕೆಡಿಸಿದರೆ ಅಧರ್ಮ. 
ಒಳಗಿರುವ ಪರಮಾತ್ಮನ ಕಾಣದೆ ಹೊರಗೆ  ಕಾಣುವನೆ?

No comments:

Post a Comment