ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, May 16, 2023

ಹೊರಗಿನ ರೋಗಕ್ಕೆ ಕಾರಣ ವಿದೇಶಿ ವ್ಯವಹಾರ ಜ್ಞಾನ


2021  may 16, ಬೌತಿಕ ದೃಷ್ಟಿಯಿಂದ  ಈಗಿನ ಕೊರೊನ ಚಿಕಿತ್ಸೆ ಉತ್ತಮವಾದರೂ, ಜನರಲ್ಲಿ  ಆಧ್ಯಾತ್ಮ ಸತ್ಯದ ಅರಿವನ್ನು ಮೂಡಿಸದೆ ಚಿಕಿತ್ಸೆ ನೀಡಿದರೂ ಮುಂದೆ ಇನ್ನೊಂದು ಹೊಸ ರೋಗ ಹರಡುವುದಂತೂ ಸತ್ಯ. ಇಲ್ಲಿ ಎಚ್ಚರ‌ ಆಗಬೇಕಾಗಿ
ರೋದು ಜನರೆ. ರಾಜಕೀಯತೆಗೆ ಬಲಿಯಾಗಿರೋದು ಅಜ್ಞಾನದಿಂದ. ಪ್ರಕೃತಿಗೆ ವಿರುದ್ದ ವಿಜ್ಞಾನಜಗತ್ತು ನಡೆದ ಪರಿಣಾಮವನ್ನು ಈಗ ಅನುಭವಿಸಿರೋದು. ಸಾವನ್ನು ತಡೆಯಲಾಗದು.
ಸಾಯೋ ಮೊದಲು ಸತ್ಯ ತಿಳಿದರೆ ಒಳ್ಳೆಯದು. 
ಅಧಿಕಾರ, ಹಣ ಶಾಶ್ವತವಲ್ಲ.ಜ್ಞಾನ ಶಾಶ್ವತವಲ್ಲವೆ? ಈಗ ಎಲ್ಲಾ ನಮ್ಮ  ಮನಸ್ಸಿಗೆ ಬಂದ ಹಾಗೆ ನಡೆದಿದ್ದೇವಷ್ಟೆ.
ಆತ್ಮಾನುಸಾರ ನಡೆದಿಲ್ಲ.ಇದಕ್ಕೆ ಈ ವಿಕೋಪದ ಮಹಾಮಾರಿ. ಭಾರತದಲ್ಲಿ ಯೋಗ ಜೀವನ ನಡೆಸಿ
ಆಯಸ್ಸು ತೀರಿ ಸಾಮಾನ್ಯ ಸಾವು ಕಂಡವರ ಸಂಖ್ಯೆ  ಕಡಿಮೆಯಾಗಲು ಕಾರಣವೆ ಭೋಗದ ಜೀವನದಲ್ಲಿ ವೈಜ್ಞಾನಿಕ ವಿಚಾರಗಳಿಂದ ದೇಹದ ರೋಗಕ್ಕೆ ಹೊರಗಿನಿಂದ ಹಾಕಿಕೊಂಡ  ವಿಜ್ಞಾನದ ಔಷಧ.
 ಅದರಿಂದಾಗಿ ದೇಹದ ಸಾತ್ವಿಕತೆ ಕುಸಿದು ಇನ್ನಷ್ಟು
ಪರಾವಲಂಬನೆಯ ಜೀವನ ಬೆಳೆಯಿತು. ಅಂಗಾಂಗ ದಾನದ ಜೊತೆಗೆ ಕಸಿ ಮಾಡೋ ವೈಧ್ಯರೂ ಬೆಳೆದರು. 
ಎಷ್ಟು ವರ್ಷ ಭೂಮಿ ಮೇಲೆ ಬದುಕುತ್ತೇವೆನ್ನುವುದಕ್ಕಿಂತ ಎಷ್ಟು ಭೂಮಿಯ ಸತ್ವ ,ಸತ್ಯ,ಧರ್ಮಉಳಿಸುತ್ತೇವೆನ್ನುವುದು ಮುಖ್ಯ.
ಇದಕ್ಕಾಗಿ ಮಾನವ ತನ್ನತಾನರಿತು ನಡೆಯೋದಕ್ಕೆ
ಸತ್ಯಜ್ಞಾನದ ಶಿಕ್ಷಣ ಅಗತ್ಯವಿತ್ತು. 
ಸತ್ಯ ಬಿಟ್ಟು ಧರ್ಮವನ್ನು  ವಿಂಗಡಿಸಿ ವ್ಯವಹಾರಕ್ಕೆ ಇಳಿದವರ ಸಂಖ್ಯೆ ಕಲಿಪ್ರಭಾವದಲ್ಲಿ  ಹೆಚ್ಚಾಯಿತು. ಬುದ್ದನ ಕಾಲದಲ್ಲಿದ್ದ ಅಹಿಂಸೋ ಪರಮೋ ಧರ್ಮ:  ಮಾನವನಲ್ಲಿದ್ದ ಹಿಂಸಾತ್ಮಕ  ಪ್ರವೃತ್ತಿಗೆ ತಡೆಹಾಕೋ ಪ್ರಯತ್ನದಲ್ಲಿ ಸೋತು ,
ನಂತರದ ಸನಾತನ ಧರ್ಮದ ವೈದೀಕ ಪರಂಪರೆಯ
 ಅದ್ವೈತ ದಲ್ಲಿಯೂ ರಾಜಕೀಯತೆ  ಬೆಳೆದು ದ್ವೈತದ ಸಮಾನತೆಯಲ್ಲಿಯೂ ಭಿನ್ನಾಭಿಪ್ರಾಯ ಹೆಚ್ಚಾಗಿ ವಿಶಿಷ್ಟಾ
ದ್ವೈತ ದಲ್ಲಿದ್ದ ಪರಮಶಕ್ತಿಯನ್ನು ಎಲ್ಲರಲ್ಲಿಯೂ
ಕಾಣಲಾಗದೆ, ಶರಣರ ಕಾಯಕವೆ ಕೈಲಾಸದ  ಮೂಲ 
ಉದ್ದೇಶ ಬಿಟ್ಟು  ಜಾತಿ ರಾಜಕೀಯ ಬೆಳೆದು ಪರಮಾತ್ಮನಿಗೆ ಶರಣಾಗೋ ಬದಲಾಗಿ ಇಂದು ಪರದೇಶಕ್ಕೆ ಶರಣಾದ ಪ್ರಭಾವವೆ  ರೋಗ.ಇದಕ್ಕೆ ಕಾರಣಭಾರತೀಯರ  ಅರ್ಧ
ಸತ್ಯದ ರಾಜಕೀಯ. 
ಇಲ್ಲಿ  ವರ್ಣ ಹೋಗಿ ಜಾತಿ ಇದೆ.
ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದಿದೆ. ಆದರೆ
ಪುರಾಣ ಇತಿಹಾಸವನ್ನು ತಮ್ಮ ಮನಸ್ಸಿಗೆ ಬಂದ ಹಾಗೆ ತಿರುಚಿಕೊಂಡು ,ದೇವರ ಹೆಸರಲ್ಲಿ,ಧರ್ಮದ ಹೆಸರಲ್ಲಿ, ದೇಶ,ಭಾಷೆ,ಸಂಸ್ಕೃತಿ, ಸಂಪ್ರಧಾಯದ ಹೆಸರಲ್ಲಿ  ತನ್ನ
ಒಳಗೇ ಅಡಗಿದ್ದ ಸತ್ಯ ಬಿಟ್ಟು ಬೌತಿಕಾಸಕ್ತಿ ಬೆಳೆಸಿ ಆಳಿ
ಅಳಿಸುವವರ ಸಂಖ್ಯೆ ಹೆಚ್ಚಾಗಿದೆ. ಸಾಮಾನ್ಯಜ್ಞಾನ ಕ್ಕೆ
ಬೆಲೆಕೊಡದಿದ್ದರೂ  ವಿಶೇಷ ಜ್ಞಾನಕ್ಕೆ ಬೆಲೆಕೊಟ್ಟವರು ತನ್ನ
ಜೀವ  ಬಿಡುವ  ಮೊದಲು ಸಾಮಾನ್ಯಸತ್ಯದ ಕಡೆಗೆ
ಬಂದರೆ  ಮುಂದೆ  ಜೀವಕ್ಕೆ ಸದ್ಗತಿ ಸಿಗಬಹುದು. ಮಕ್ಕಳು, ಮಹಿಳೆಯರೆನ್ನದೆ  ಮನೆಯಿಂದ ಹೊರಬಂದು ಮಾಧ್ಯಮಗ
ಳಲ್ಲಿ ಮನರಂಜನೆಯ ವಸ್ತುವಾಗಿ  ಬಳಕೆಯಾದವರ ಆತ್ಮಜ್ಞಾನ  ಕುಸಿದು ಭಾರತದ ಮೂಲ ಶಕ್ತಿಯ ದುರ್ಭಳಕೆ
 ಮಾಡಿಕೊಂಡರೆ   ಆರೋಗ್ಯ ರಕ್ಷಣೆ ಕಷ್ಟ.ಇದಕ್ಕೆಕಾರಣವೆ 
ಅಜ್ಞಾನದ ಶಿಕ್ಷಣ.ಇದನ್ನು ಸರಿಪಡಿಸೋ ಬದಲು , ಜನರನ್ನು ಆಳೋದಕ್ಕೆ ಪರಕೀಯರ ಸಹಾಯ ಪಡೆದು ದೇಶದೊಳಗೆ
ತುಂಬಿಸಿದರೆ   ಯಾವ ಧರ್ಮ?
ಅತಿಥಿ ಸತ್ಕಾರ ಸರಿ,ಆದರೆ,ಅವರೇ  ತಿಥಿ ಮಾಡುವಷ್ಟರ
ಮಟ್ಟಿಗೆ  ಮನೆಯೊಳಗೆ  ಕೂರಿಸಿ ಸತ್ಕಾರ ಮಾಡಿದರೆ
ಅಧರ್ಮ. ಪರಮಾತ್ಮನ ಬೇಡೋದು ಸರಿ.ಆದರೆ ನಮ್ಮ
ಬೇಡಿಕೆಯಿಂದ ಆತ್ಮರಕ್ಷಣೆ ಆದರೆ ಮುಕ್ತಿ .ಆತ್ಮನಿರ್ಭರ
ಭಾರತ  ರೋಗಕ್ಕೆ ಔಷಧ ತಯಾರಿಸುವಷ್ಟು ಕೆಳಮುಖ
ಆಗಿದ್ದರೂ ಅದರಲ್ಲಿಯೂ ಮೂಲದ ಆಯುರ್ವೇದ ಕ್ಕೆ
ವಿರುದ್ದ ನಿಂತವರಿಗೆ  ಆಂತರಿಕ ಶಕ್ತಿಯ ಪರಿಚಯವಿಲ್ಲ.
ಈಗ ಕೊರೊನ ಸಮಯದಲ್ಲಿ ಇವರುಗಳ ವ್ಯವಹಾರಕ್ಕೆ ಕಡಿವಾಣ ಹಾಕೋರು ಯಾರು? ದೇಹ ವ್ಯವಹಾರದ ವಸ್ತುವೆ?.ಚಿಂತನೆ ಆಧ್ಯಾತ್ಮದ ಪ್ರಕಾರ ನಡೆಸಿದಾಗಲೆ ಪರಿಹಾರ ಒಳಗೇ ಕಾಣಬಹುದಷ್ಟೆ. ಆದರೆ ಮುಂದೆ ನಡೆದವರಿಗೆ ಸತ್ಯ ಅರ್ಥ ಆಗಲ್ಲ. ಹೇಳೋರಿಗೆಅಧಿಕಾರವಿಲ್ಲ
 ಎಲ್ಲಾ  ಆ ಮೇಲಿನ ಶಕ್ತಿಯ ಆಟ.ಇಂತಹ ಕೆಟ್ಟ ಸಮಾಜದಿಂದ  ಮರೆಯಾದವರೆ ಒಂದು ರೀತಿಯಲ್ಲಿ ಅದೃಷ್ಟವಂತರು. ಯಾರೂ ಶಾಶ್ವತವಲ್ಲ. ಯಾರಿಗೆ ಯಾರೂ ಇಲ್ಲ. ಈ ಮಹಾಮಾರಿ  ಮಾನವನಿಗೆ ಜ್ಞಾನದಕಡೆಗೆನಡೆಸಿದೆ.
 ಸಂಬಂಧಗಳಿಗೆ ಬೆಲೆ ಇಲ್ಲ. ಆಗೋದೆಲ್ಲಾ ಒಳ್ಳೆಯದಕ್ಕೆ ಎಂದು  ಆಧ್ಯಾತ್ಮಿಕ ಚಿಂತನೆ ನಡೆಸಿದರೆ  ಸತ್ಯ ದರ್ಶನ.
ಸಾವಿಗೆ ಕೊನೆಯಿಲ್ಲ.ಇರೋದೊಂದೆ ಭೂಮಿ.ಅದನ್ನರಿತು ತಮ್ಮ ಜೀವನ ನಡೆಸಿದರೆ ಉತ್ತಮ.ಮಾನವ ನಿರ್ಮಿತ ಯಾವ ವಸ್ತು ಔಷಧವೂ ಆತ್ಮರಕ್ಷಣೆ ಮಾಡಲಾಗೋದಿಲ್ಲ.
ಇದಕ್ಕೆ ಕಾರಣರು ಯಾರೂ ಅಲ್ಲವೆಂದು  ನಿಜವಾದ ಜ್ಞಾನಿಗಳು  ತಮ್ಮ ಆಂತರಿಕ ಶುದ್ದಿ ಮಾಡಿಕೊಳ್ಳಲು  ಪ್ರಯತ್ನಪಟ್ಟರೆ, ಹಿಂದೆ  ಬರುತ್ತಿರುವ ಮುಂದಿನ ಪೀಳಿಗೆ
ಗಾದರೂ ಆರೋಗ್ಯ ಹೆಚ್ಚಾಗಬಹುದು. ಅತಿಯಾದ ಹಣಸಂಪಾಧಿಸಿದಂತೆ  ದಾನ ಧರ್ಮ ಕಾರ್ಯವೂ ಹೆಚ್ಚು
ಮಾಡಬೇಕು. ಕಾರಣವಿಷ್ಟೆ. ಜೀವಕ್ಕೆ ಮುಕ್ತಿ ಸಿಗಲು ಋಣ
 ಅಥವಾ ಸಾಲದಿಂದ ಬಿಡುಗಡೆ ಪಡೆಯಬೇಕು. ಹೊರಗಿನ
ಸಾಲ ಒಳಗಿನ  ಸಾಲ  ಸೇರಿಸಿಕೊಂಡು ಜೀವಾತ್ಮ ಇದ್ದರೆ
ಪರಮಾತ್ಮ ದೂರವಾಗುತ್ತಾನಲ್ಲವೆ?
ದೇಹಕ್ಕಿಂತ  ಮನಸ್ಸಿನ ರೋಗದಿಂದ ಜನ ಸಾಯುತ್ತಿದ್ದಾರೆ. 
ಇದಕ್ಕೆ ಕಾರಣವೆ ಅಜ್ಞಾನದ ಶಿಕ್ಷಣ ಅಸತ್ಯದ  ನಡೆ ನುಡಿ. 
ಅಧರ್ಮದ ರಾಜಕೀಯ ಜೀವನ.
ರಾಮನ ಹೆಸರಲ್ಲಿ  ರಾವಣನ ರಾಜಕೀಯ, ಪ್ರಜಾಪ್ರಭುತ್ವ ದ
ಧರ್ಮಕ್ಕೆ ವಿರುದ್ದವಾಗಿದೆ. ಜನರೆ ಎಚ್ಚರವಾಗಬೇಕಷ್ಟೆ.
"ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ" ಹಾಗೆ ಯಾರದ್ದೋ ಜೀವ ಯಾರದ್ದೋ  ಸರ್ಕಾರ. ಜೀವ ಒಳಗಿದೆ ಆತ್ಮಶಕ್ತಿ 
ಒಳಗಿದೆ. ಆತ್ಮವೇ ದೇವರು. ಸತ್ಯವೇ ದೇವರು.ಯಾರ ಕಥೆ ಓದಿ,ಬರೆದು,ಹರಡೋ ಬದಲಾಗಿ ಈಗ ನಮ್ಮ ಮುಂದಿನ 
ಕಥೆ ಬಗ್ಗೆ ಆತ್ಮಾವಲೋಕನನಡೆಸಿಕೊಳ್ಳಲು  ಮನೆಯಲ್ಲಿ  ಅವಕಾಶವಿದೆ. ಇದಕ್ಕೆ ಏಕಾಂತ ಬೇಕು.

No comments:

Post a Comment