ಆಧ್ಯಾತ್ಮ ಅದ್ವೈತ ಪ್ರಜಾಪ್ರಭುತ್ವ.
ಆದಿಆತ್ಮ, ಅ ದ್ವೈತ, ಪ್ರಜೆಗಳ ಪ್ರಭುತ್ವ. ಇದರಲ್ಲಿ
ಮಾನವನ ಮೂಲ ಧರ್ಮ ಒಂದೆ ಎನ್ನೋ ಸತ್ಯವಿದೆ
ಆದರೆ, ಸತ್ಯವನ್ನು ತಿಳಿಯಲು ಆತ್ಮಾನುಸಾರ ನಡೆ
ಯಲು ಕಷ್ಟವಾಗಿದೆ. ಅದ್ವೈತ ದೊಳಗಿನ ದ್ವೈತ ವೆ
ಎಲ್ಲರಿಗೂ ಕಾಣುತ್ತಿದೆ. ಪ್ರಜಾಪ್ರಭುತ್ವವನ್ನು ತಮ್ಮ
ಸ್ವಾರ್ಥ ಕ್ಕೆ ಬಳಸಿಕೊಂಡು ದೇಶವನ್ನೇ ಆಳೋರಿಗೆ
ಧರ್ಮದ ಮೂಲಾರ್ಥ ತಿಳಿಯದೆ, ರಾಜಪ್ರಭುತ್ವ
ನಡೆದಿದೆ. ಅದ್ವೈತ ಸಂನ್ಯಾಸಿಗಳಿಗೆ ಸುಲಭವಾಗಿ
ಅರ್ಥವಾಗೋ ಹಾಗೆ ದ್ವೈತ ದ ಸಂಸಾರ ನಡೆಸಲು
ಕಷ್ಟ. ಆದರೂ, ಇಂದಿನ ಪ್ರಜಾಪ್ರಭುತ್ವದ ಧರ್ಮ
ಸಂನ್ಯಾಸಿ, ಸಂಸಾರಿಗಳೆಂದು ಬೇಧ ಬಾವ ತಿಳಿಸದೆ
ಎಲ್ಲರೂ ದೇಶದೊಳಗಿನ ಸಾಮಾನ್ಯಜ್ಞಾನದ ಪ್ರಜೆ
ಗಳೆಂಬ ಸತ್ಯ ತಿಳಿಯದೆ, ಯಾವುದೇ ತತ್ವದಿಂದ
ಮತದಿಂದ ,ಜಾತಿ,ಪಂಗಡ,ಪಕ್ಚಗಳಿಂದ ದೇಶವನ್ನು
ಆಳುತ್ತೇನೆಂದು ನಮ್ಮವರನ್ನೇ ವಿರೋಧಿಸಿ ವಿದೇಶಿ
ಗಳನ್ನು ಅತಿಯಾಗಿ ಗೌರವಿಸಿ, ಕರೆದು ಕೂರಿಸಿದರೆ
ಅತಿಥಿ ಸತ್ಕಾರ ವೆಂದು ಕಂಡರೂ, ಕೊನೆಯಲ್ಲಿ ಆ
ಅಥಿತಿಗಳ ಸಂಖ್ಯೆ ಮಿತಿಮೀರಿ ಸ್ವದೇಶವೇ ವಿದೇಶ
ಆಗೋದಕ್ಕೆ ನಮ್ಮಲ್ಲಿಯ ವಿಶೇಷಜ್ಞಾನವೆಕಾರಣ.
ಹೊರಗಿನ ವಿಶೇಷವಿಜ್ಞಾನ,ಒಳಗಿನ ವಿಶೇಷಜ್ಞಾನ
ಓದಿ,ನೋಡಿ,ಕೇಳಿ,ಆಚರಿಸಿ,ಪರೀಕ್ಷಿಸೋದರಿಂದ
ಇನ್ನಷ್ಟು ಮಾನವೀಯತೆ ಬೆಳೆದು ಆತ್ಮಜ್ಞಾನ ದೊರೆಯುತ್ತದೆ.ಎಂಬ ಉದ್ದೇಶದಲ್ಲಿ ಹಿಂದಿನ ಗುರು
ಹಿರಿಯರು ನಮಗೆ ತೋರಿಸಿಟ್ಟ. ಧರ್ಮ ಸತ್ಯದಲ್ಲಿ
ರಾಜಕೀಯ. ಬೆರೆಸಿಕೊಂಡು, ನಾನೇ ಸರಿ ಎಂದರೆ
ನಾನೆಂಬ ಅಹಂಕಾರವೆನ್ನಬೇಕೋ? ಆತ್ಮವಿಶ್ವಾಸ
ಎನ್ನಬೇಕೋ. ಒಟ್ಟಿನಲ್ಲಿ ಇಲ್ಲಿ ತತ್ವಪ್ರಚಾರವಿದೆ.
ಹಾಗೆ ಆಚರಣೆಯಿದೆ, ಗುರು ಹಿರಿಯರು ಇದ್ದಾರೆ. ಮಹಾತ್ಮರುಗಳು ಕಡಿಮೆಯಾಗಿಸರ್ಕಾರನಡೆಸೋರ
ಹಿಂದೆ ನಡೆದು ಏನು ಸಿಕ್ಕಿದೆ?.
ಶ್ರೀ ಶಂಕರಾಚಾರ್ಯರು ಅವರ ತತ್ವವನ್ನರಿತವರಲ್ಲಿ
ಇದ್ದಾರೆ.ಮದ್ವಾಚಾರ್ಯರೂ ಅವರ ತತ್ವ ಸಿದ್ದಾಂತ
ತಿಳಿದು ನಡೆದವರಲ್ಲಿದ್ದಾರೆ,ಹಾಗೆ ರಾಮಾನುಜಾಚಾರ್ಯರು ,ಶಿವಶರಣರು,ದಾಸ,ಸಂತ ದೇಶಭಕ್ತರು,ದೇವರಭಕ್ತರೆಲ್ರೂ ಆ ಮೂಲ ಶಕ್ತಿಯ ಒಳಗಿದ್ದರೂ ಹೊರಗಿನ ದೇಶದೊಳಗಿದ್ದರೂ ರಾಜಕೀಯದಲ್ಲಿ ಮೈ ಮರೆತು ,ನಾನೆಂಬ ಅಹಂಕಾರ ಸ್ವಾರ್ಥ ಕ್ಕೆ ಬಲಿಯಾದರೆ ಜೀವಾತ್ಮನಿಗೆಮುಕ್ತಿ ಹೇಗೆ ದೊರೆಯುತ್ತದೆ..?
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಶೂದ್ರರ ಕಾಯಕವೇ ಕೈಲಾಸ,ಧರ್ಮ ಕರ್ಮಗಳ ಲೆಕ್ಕಚಾರದ ವ್ಯವಹಾರ
ಮಾನವನನ್ನು ರಾಜಕೀಯಕ್ಕಿಳಿಸಿ ನಾನ್ಯಾರು? ಈ
ಪ್ರಶ್ನೆ ಕೇಳಿ ಕೊಳ್ಳ ದಂತೆ ಮಾಡಿದರೆ ನಷ್ಟ ಯಾರಿಗೆ
ಕಾಲಮಾನಕ್ಕೆ ತಕ್ಕಂತೆ ನಡೆಯೋ ಜೀವನದಲ್ಲಿ ಸತ್ಯ
ಮರೀಚಿಕೆಯಂತೆ ಮರೆಯಾದರೆ ಧರ್ಮ ಎಲ್ಲಿದೆ?.
ಸ್ವಾರ್ಥ ರಹಿತ ಸೇವಕರಾಗಲು ಸಂನ್ಯಾಸಿಗಳಿಗೆ
ಸಾಧ್ಯ. ಸಂಸಾರದಲ್ಲಿನ ಸ್ವಾರ್ಥ ಪೂರ್ಣ ರಾಜಕೀಯ ಸಮಾಜವನ್ನೇ ತುಂಬಿದೆ. ಹಾಗಾದರೆಇಲ್ಲಿ ಸಂನ್ಯಾಸಿ ಗಳ
ಪ್ರಚಾರಕ್ಕೆ ಮಾತ್ರ ಸೀಮಿತವೆ?
ಕಲಬೇಡ, ಕೊಲಬೇಡ,ಹುಸಿಯ ನುಡಿಯಲುಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ.ಎನ್ನ ಬಣ್ಣಿಸಬೇಡ,ಇದಿರ ಹಳಿಯಲು ಬೇಡ.. ಇದೇಅಂತ
ರಂಗ ಶುದ್ದಿ ಇದೇ ಬಹಿರಂಗ ಶುದ್ದಿ. ಇದೇ ಕೂಡಲ
ಸಂಗಮನೊಲಿಯೋ ಪರಿ.ಈ ರೀತಿಯಲ್ಲಿ ಬದುಕಲು
ಅದ್ವೈತ ದಿಂದ ಮಾತ್ರಸಾಧ್ಯ. ಸಂನ್ಯಾಸಿ,ಯೋಗಿಗಳ.
ಜೀವನ ನಿಸ್ವಾರ್ಥನಿರಹಂಕಾರದಿಂದ ನಡೆಯುವಾಗ
ಈ ಮೇಲಿನ ಎಲ್ಲಾ ಗುಣಲಕ್ಷಣಗಳನ್ನು ಅವರಲ್ಲಿ ಕಾಣಬಹುದು.
ಆದರೆ, ಅಧಿಕಾರ ,ಹಣದಲ್ಲಿರೋ ಮನಸ್ಸನ್ನು ತಡೆ
ಹಿಡಿದು, ಸಮಾಜಸೇವೆ ಮಾಡೋದು ಕಷ್ಟ.
ಹಾಗಾಗಿ ಇಂದು ತತ್ವಗಳಿದೆ,ತತ್ವೋಪದೇಶವಿದೆ.
ತತ್ವಜ್ಞಾನಿಗಳು ಕಡಿಮೆ. ಅದ್ವೈತ, ದ್ವೈತ, ವಿಶಿಷ್ಟಾದ್ವೈತ ತತ್ವಗಳಲ್ಲಿ ಮಾನವೀಯತೆಯನ್ನುಎತ್ತಿ ಹಿಡಿದು ಎಲ್ಲರೂ
ಮಾನವರೆಂಬುದಿದೆ. ಆದರೆ, ಭಿನ್ನಾಭಿಪ್ರಾಯ ಬೆಳೆದು
ನಾನೇ ಬೇರೆ ನೀನೆ ಬೇರೆ ಆಗಿ ಇಂದು ನಾನೇ
ದೇವರು ಎನ್ನೋ ಮಟ್ಟಿಗೆನಮ್ಮಲ್ಲಿ ಅಹಂ ಬೆಳೆದರೂ,
ನಾನೆಂಬುದಿಲ್ಲ ಎನ್ನೋ ಸತ್ಯದ ಹಿಂದಿನ ವಿಜ್ಞಾನ ಕೇವಲ ಹೊರಜಗತ್ತಿನಲ್ಲಿ ಅಣು ಪರಮಾಣುಗಳನ್ನು ತನ್ನ
ಮನಸ್ಸಿಗೆ ಬಂದಂತೆ ಬಳಸಿಕೊಂಡಿದೆ.
No comments:
Post a Comment