ಒಬ್ಬರು ಸ್ನೇಹಿತರು ಫೇಸ್‌ಬುಕ್ ನಲ್ಲಿ 70ಕೋಟಿ ಹಿಂದುಗಳು ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಬೇಡಿಕೆಯಿಟ್ಟಿದ್ದಾರೆಂಬ ಸುದ್ದಿ ಹಂಚಿಕೊಂಡಿದ್ದರು. ಅದಕ್ಕೆ ದೇಶದ ಸ್ವತಂತ್ರ ಪ್ರಜೆಯಾಗಿದ್ದು ತಿಳಿದ ಸತ್ಯವನ್ನು ಬಿಚ್ಚಿಡುತ್ತಿದ್ದೇನೆ. ನಿಜವಾಗಿಯೂ ನಾವು ದೇಶದ ಭವಿಷ್ಯದ ಕುರಿತು ಚಿಂತನೆ ಮಾಡುವವರಾಗಿದ್ದರೆ ಇದರಲ್ಲಿರುವ ಸತ್ಯವನ್ನು ಪಕ್ಷಪಾತವಿಲ್ಲದೆ ಸ್ವಾರ್ಥ ಅಹಂಕಾರ ವಿಲ್ಲದೆ ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದು ಓದಿದಾಗಲೇ ವಾಸ್ತವದ ಅರಿವಾಗುತ್ತದೆ.
ಪುರಾಣ ಇತಿಹಾಸ ಭವಿಷ್ಯವನ್ನು ಸಾಕಷ್ಟು ಚರ್ಚೆ ಗೆ ಬಳಸುವಾಗ ವಾಸ್ತವತೆಯನ್ನು ಸರಿಯಾಗಿ ತಿಳಿಯುವುದು ಬಹಳ ಅಗತ್ಯವಿದೆ. ಅನುಭವಜ್ಞಾನವಿಲ್ಲದೆ ಏನೂ ಅರ್ಥ ಆಗದು. ಅದಕ್ಕೆ ಹಿಂದಿನ ಮಹಾತ್ಮರುಗಳು ನಿನ್ನ ನೀ ತಿಳಿದು ನಡೆ, ಮೊದಲು ಮಾನವನಾಗು..ಸ್ಥಿತಿ ಗೆ ಕಾರಣ ಸೃಷ್ಟಿ. ನಾವೇ ಸೃಷ್ಟಿಸಿದ ಅಸತ್ಯ ಅನ್ಯಾಯ ಅಧರ್ಮ ಅರ್ಧಸತ್ಯವೆ ನಮ್ಮನ್ನು ಅತಂತ್ರಸ್ಥಿತಿಗೆ ತಂದಿರುವಾಗ ಇದನ್ನು ರಾಜಕೀಯತೆಯಿಂದ ಸರಿಪಡಿಸಲಾಗದು. ಇದಕ್ಕೆ ರಾಜಕಾರಣಿಗಳು ಕಾರಣವಾಗುವುದಾದರೆ ನಾವೇ ಅವರನ್ನು ಬೆಳೆಸಿರೋದು. ಎಲ್ಲದ್ದಕ್ಕೂ ನಾವೇ ಕಾರಣವಾಗಿರುವಾಗ ನಮ್ಮ ದೋಷ ನಮಗೆ ಕಂಡರೆ ಉತ್ತಮ ಪ್ರಗತಿಯಾಗುವುದು. ಇಲ್ಲಿ ಯಾರೋ ಒಬ್ಬರಿಂದ ದೇಶ ನಡೆಯುತ್ತಿಲ್ಲ ಪ್ರತಿಯೊಬ್ಬರಿಂದ ನಡೆದಿದೆ ಎಂದರೆ ದೇಶದ ಈ ಸ್ಥಿತಿಗೆ ಎಲ್ಲರೂ ಕಾರಣ. ದೇಶದೊಳಗೆ ಪ್ರಜೆಗಳಿದ್ದರೂ ಪ್ರಜೆಗಳೊಳಗೆ ವಿದೇಶಿ ವ್ಯಾಮೋಹ,ಸಾಲ,ಬಂಡವಾಳ,ವ್ಯವಹಾರ,ಶಿಕ್ಷಣ ತುಂಬಿದ್ದರೆ ಹಿಂದಿನವರ ಧರ್ಮ ಕರ್ಮ ಶಿಕ್ಷಣ ಬೆಳೆಯುವುದೆ? ಸರಳವಾದ ಪ್ರಶ್ನೆ ಉತ್ತರ ಒಳಗೇ ಸಿಗುತ್ತದೆ.
ಹಿಂದೂ ರಾಷ್ಟ್ರ ಮಾಡೋದಕ್ಕೆ ರಾಜಕೀಯವೇ ಬೇಡ. ಹಿಂದೂಗಳ ಒಗ್ಗಟ್ಟು ಏಕತೆ ಐಕ್ಯತೆ ಸಮಾನತೆ ಸತ್ಯದ ನಡೆ ನುಡಿ ಅಗತ್ಯ. ಈಗ ರಾಜಕೀಯದೆಡೆಗೆ ಮಠಾಧೀಶರೆ ಹೊರಟಿರುವಾಗ ಇಲ್ಲಿ ಸತ್ಯವೂ ಇಲ್ಲ ಏಕತೆಯೂ ಇಲ್ಲ ಧರ್ಮ ವೂ ಇಲ್ಲ. ಬೇಡಿಕೆಗಳ ಹಿಂದೆ ಸ್ವಾರ್ಥ ಅಹಂಕಾರ ಎದ್ದು ಕಾಣುತ್ತಿದೆ.ಇದೊಂದು ಆತ್ಮದುರ್ಭಲತೆಯಷ್ಟೆ.ಇದು ನನಗನ ಸ್ವಂತ ಅನುಭವದ ಸತ್ಯ.
ಅಧ್ಯಾತ್ಮದ ಹಲವು ವಿಚಾರಗಳನ್ನು ಈವರೆಗೆ ಲೇಖನಗಳ ಮೂಲಕಹಿಂದೂಸಂಫಟಕರಿಗೆ,ಮಠಾಧೀಶರಿಗೆ,ಜನಸಾಮಾನ್ಯರಿಗೆ ತಲುಪಿಸುವ ಕೆಲಸದಲ್ಲಿ ರಾಷ್ಟ್ರದ ಹಿತಚಿಂತನೆಯ ದೃಷ್ಟಿಯಿಂದ ನಡೆಸುತ್ತಿರುವಾಗ ಪ್ರತ್ಯಕ್ಷವಾಗಿ ಕಂಡಂತಹ ಸತ್ಯ ನಮ್ಮಲ್ಲಿ ಅರ್ಧಸತ್ಯದ ಪ್ರಚಾರಕರು ಮಧ್ಯವರ್ತಿಗಳು ಇನ್ನಿತರ ನಾಟಕ ಕಾರರು ಜನಸಾಮಾನ್ಯರ ಹಣವನ್ನು ಬಳಸಿ ದೇಶವನ್ನು ವಿದೇಶಮಾಡುವುದಕ್ಕೆ ಸರ್ಕಾರಕ್ಕೆ ಸಹಕಾರ ನೀಡುವರು. ದೊಡ್ಡ ದೊಡ್ಡ ಯೋಜನೆಗಳ ಫಲಾನುಭವಿಗಳು ಮಧ್ಯವರ್ತಿಗಳು. ಇನ್ನು ಮಠ ಮಾನ್ಯಗಳ ಆಸ್ತಿ ದೇಶದ ಸಾಲ ತೀರಿಸಲು ತಯಾರಿಲ್ಲದೆ ವಿದೇಶಿ ಸಾಲ ಬಂಡವಾಳ ದೇಶಕ್ಕೆ ದೊಡ್ಡ ಸಂಕಟ ತಂದಿದೆ. ಇದನ್ನು ತೀರಿಸಲು ಹಿಂದೂಗಳು ವಿದೇಶದ ಸೇವೆ ಪರಕೀಯರ ಸೇವೆ,ಪರಧರ್ಮದವರ ವಶವಾದಾಗ ಎಲ್ಲಿಯ ಹಿಂದೂ ರಾಷ್ಟ್ರ?
ಸ್ವಲ್ಪ ಈ ದೃಷ್ಟಿಯಿಂದ ದೇಶ ನೋಡಿದರೆ ನಾವೆತ್ತ ಸಾಗಿದ್ದೇವೆನ್ನುವ ಅರಿವಾಗುತ್ತದೆ. ನಮಗೆ ಇಸ್ಲಾಂ ಶಿಕ್ಷಣ ಮುಸ್ಲಿಂ ವ್ಯವಹಾರ ಬೇಕು ಹಿಂದಿನ ಧರ್ಮ ಕರ್ಮದ ಅರಿವಿಲ್ಲವಾದರೆ ನಾವು ಹಿಂದೂಗಳೆ? ಇದನ್ನು ಎಲ್ಲಾ ಹಿಂದೂ ಬಾಂಧವರು ಅರ್ಥ ಮಾಡಿಕೊಳ್ಳಲು ಮನೆಯೊಳಗೆ ಸ್ವಚ್ಚಶಿಕ್ಷಣ ಸ್ವಚ್ಚ ಮನಸ್ಸು ಬೆಳೆಸಿಕೊಂಡರೆ ಸಾಕು. ಇದಕ್ಕೆ ವಿರೋದಿಸಿ ಹೊರಗಿನ ರಾಜಕೀಯ ಬೆಳೆಸಿದರೆ ರಾಜಕಾರಣಿಗಳು ವಿದೇಶದೆಡೆಗೆ ನಮ್ಮನ್ನು ಸಾಗಿಸಿ
ಕುಟುಂಬ ವ್ಯವಸ್ಥೆ ಹಾಳಾಗಿ ಹೋಳಾಗಿ ಹೋದರೂ ಸರಿ ನಾವು ವೈಭವದ ಜೀವನ ನಡೆಸಬೇಕೆಂದರೆ ಇದು ಪಾಶ್ಚಾತ್ಯ ರಲ್ಲಿ ಕಾಣಬಹುದು.ದೇಶಕ್ಕೆ ಹೊಸ ಸಂಸತ್ತು ಭವನಕ್ಕೆ ಕೋಟ್ಯಾಂತರ ಹಣ,ದೊಡ್ಡ ದೊಡ್ಡ ರಸ್ತೆ ನಿರ್ಮಾಣ ಕ್ಕೆ ಪ್ರತಿಮೆಗಳಿಗೆ,ಇನ್ನಿತರ ಸಭೆ ಸಮಾರಂಭ,ಸಮಾವೇಶ,ನಾಟಕಗಳಿಗೆ ಸುರಿಯುತ್ತಿರುವ ಹಣ ಯಾರದ್ದು? ಧರ್ಮದ ಸಂಪಾದನೆಯೆ ಭ್ರಷ್ಟಾಚಾರದ ಹಣವೆ? ಇದರಿಂದ ಬೆಳೆಯೋದು ಧರ್ಮ ವಲ್ಲ ಭ್ರಷ್ಟಾಚಾರ. ಭ್ರಷ್ಟರಿಗೆ ಎಲ್ಲಾ ವೈಭೋಗಗಳಿಗೆ ಸರಿಯಾದ ಸಹಕಾರ ನಮ್ಮ ಸರ್ಕಾರ ಒದಗಿಸುತ್ತಿದೆ. ಹಿಂದೂಗಳು ಒಳಜಗಳ ಬಿಟ್ಟು ಎಚ್ಚರವಾದರೆ ಉತ್ತಮ.ಮುಂದೆ ಕಾದಿದೆ ಇದರ ಪರಿಣಾಮ. ಎಲ್ಲಿರುವರು ಮಹಾತ್ಮರು? ದೇವರು? ಅವರನ್ನು ಪ್ರತಿಮೆಯೊಳಗೆ ಕೂರಿಸಿ ವ್ಯವಹಾರ ನಡೆಸಿದರೆ ಹಣ ಅಧಿಕಾರ ಸ್ಥಾನಮಾನ ಜನಬಲ ಸಿಗಬಹುದಷ್ಟೆ ಅವರ ತತ್ವಜ್ಞಾನ,ಸತ್ಯ ಜ್ಞಾನವಲ್ಲ. ಇದೇ ಇಂದಿನ ಹಿಂದೂಗಳ ಸಮಸ್ಯೆಗೆ ಕಾರಣ. ಇದಕ್ಕೆ ಉತ್ತರವಿದ್ದರೆ ತಿಳಿಸಿ. ಇದೊಂದು ಸಾಮಾನ್ಯಪ್ರಜೆಯ ಕಟುಸತ್ಯ. ಈವರೆಗೆ ಲೇಖನಗಳು ದೇಶದ ಪರ ಬರೆದ ಕಾರಣ ಪಕ್ಷಪಕ್ಷಗಳ ಒಡಕಿನಲ್ಲಿರುವ ಜನಗುರುತಿಸದಿದ್ದರೂ ಇದು ಸತ್ಯ. ಎಷ್ಟು ವರ್ಷ ಈ ಅಜ್ಞಾನದ ಅಹಂಕಾರ ಸ್ವಾರ್ಥದ ರಾಜಕೀಯ ?ಒಂದೊಂದು ಪೈಸೆಯೂ ದೇಶದ ಋಣ.ಅದನ್ನು ಸತ್ಕರ್ಮ ಸ್ವಧರ್ಮ ಸುಶಿಕ್ಷಣ,ಸರಳಜೀವನ,ಸ್ವಾವಲಂಬನೆ, ಸ್ವಾಭಿಮಾನ ದಿಂದ ತೀರಿಸಲು ಯೋಗಿಗಳಿಗಷ್ಟೆ ಸಾಧ್ಯವೆನ್ನುವುದು ಹಿಂದೂ ಧರ್ಮ, ಆದರೆ ಪರಧರ್ಮದಲ್ಲಿ ಇಂತಹ ಕಟ್ಟುಪಾಡುಗಳಿಲ್ಲ
ಹಣವಿದ್ದರೆ ಹೆಣವನ್ನಾದರೂ ಖರೀದಿಸಿ ವ್ಯವಹಾರಕ್ಕೆ ಇಳಿಯಬಹುದು. ಇದನ್ನು ಹಿಂದೂಗಳಾದವರು ವಿರೋದಿಸುತ್ತಿದ್ದ ಕಾಲಹೋಗಿದೆ. ನಮ್ಮವರನ್ನೇ ದ್ವೇಷ ಮಾಡಿ ಆಳುವ ಕಾಲ ಬಂದಿದೆ ಎಂದರೆ ದ್ವೇಷದಿಂದ ದೇಶ ಕಟ್ಡುವುದು ಸಾಧ್ಯವೆ?
ಹಿಂದೆ ಮಹಾಭಾರತ ಯುದ್ದ ನಡೆಯಲು ಪಾಂಡವರ ಕೌರವರ ನಡುವಿನ ಅಂತರ ಕಾರಣವಾಗಿತ್ತು.ಅಲ್ಲಿ ದ್ವೇಷಕ್ಕಿಂತ ಅಹಂಕಾರ ಮಿತಿಮೀರಿದ ಕಾರಣ ಕೌರವ ಸೇನೆ ಸೋಲಿಸಲು ತಂತ್ರ ಬಳಸಲಾಗಿತ್ತು. ಈಗ ಪ್ರಜಾಪ್ರಭುತ್ವ ವಿದೆ. ಪ್ರಜೆಗಳಿಗೆ ನೀಡಬೇಕಾದ ಜ್ಞಾನದ ಶಿಕ್ಷಣದ ಕೊರತೆಯಿದೆ.ಧಾರ್ಮಿಕ ವರ್ಗ ರಾಜಕೀಯದವರ ಹಿಂದೆ ನಡೆದು ಬೇಡುತ್ತಿದ್ದಾರೆಂದರೆ ಧರ್ಮದ ಪ್ರಗತಿಯಾಗಿದೆಯೆ? ಜನಸಾಮಾನ್ಯರಲ್ಲಿ ಜ್ಞಾನ ಸದ್ಬಳಕೆ ಆಗಿದೆಯೆ? ಸ್ತ್ರೀ ಶಕ್ತಿಯನ್ನು ಯಾವ ರೀತಿಯಲ್ಲಿ ಬಳಸಿ ಧರ್ಮ ಉಳಿಸಲಾಗಿದೆ? ಮಕ್ಕಳಿಗೆ ಎಂತಹ ಶಿಕ್ಷಣ ನೀಡಿ ಹೊರಗೆ ಕಳಿಸಲಾಗುತ್ತಿದೆ? ಆದರೂ ಪ್ರಗತಿಯಾಗಿದೆ ಎಂದರೆ ಅದರಲ್ಲಿ ಅಧ್ಯಾತ್ಮ ವಿಲ್ಲ.ಭೌತವಿಜ್ಞಾನ ಹಣದಿಂದ ಬೆಳೆದರೆ ಅಧ್ಯಾತ್ಮ ವಿಜ್ಞಾನ ಸತ್ಯಜ್ಞಾನದಿಂದ ಬೆಳೆಯಬೇಕಿತ್ತು. ಅಧ್ಯಾತ್ಮ ವಿಜ್ಞಾನದಿಂದ ಬೆಳೆದ ಹಿಂದೂ ಸನಾತನ ಧರ್ಮ ವನ್ನು ಭೌತವಿಜ್ಞಾನದಿಂದ ಉಳಿಸಲಾಗುವುದೆ? ಇವೆರಡೂ ಒಂದೇ ನಾಣ್ಯದ ಎರಡು ಮುಖವಾದರೂ ವ್ಯವಹಾರಕ್ಕೆ ಮಾತ್ರ ನಾಣ್ಯದ ಬಳಕೆ ಧರ್ಮದ ವಿಚಾರಕ್ಕೆ ಬಂದರೆ ಸತ್ಯಜ್ಞಾನ ಬೇಕಿದೆ.ಸತ್ಯಕ್ಕೆ ಬೆಲೆಯೇ ಕೊಡದವರು ಧರ್ಮ ಉಳಿಸಬಹುದೆ? ಒಟ್ಟಿನಲ್ಲಿ ಸತ್ಯಧರ್ಮ ವು ವ್ಯವಹಾರಕ್ಕೆ ಇಳಿದಾಗ ಹಣಸಂಪಾದನೆಯಾದರೂ ಜ್ಞಾನಾರ್ಜನೆ ಆಗದು.ಹಿಂದಿನವರಲ್ಲಿದ್ದ ಆಂತರಿಕ ಜ್ಞಾನಕ್ಕೂ ಈಗಿನವರ ಭೌತಿಕ ವಿಜ್ಞಾನಕ್ಕೂ ಬಹಳ ಅಂತರ ಬೆಳೆದು ಆ ಅಂತರದಲ್ಲಿ ಮಧ್ಯವರ್ತಿಗಳು ಇಳಿದು ತಾವೇ ಸ್ವತಂತ್ರವಾಗಿಲ್ಲದಿದ್ದರೂ
ಬೇರೆಯವರ ಸ್ವತಂತ್ರಕ್ಕೆ ದಕ್ಕೆ ತರುವ ಕೆಲಸದಲ್ಲಿ ಮಗ್ನರಾಗಿ ಜನಸಾಮಾನ್ಯರನ್ನು ಇನ್ನಷ್ಟು ಬಡವರನ್ನಾಗಿಸಲು ಹೊರಟರೆ ಧರ್ಮ ರಕ್ಷಣೆಯಾಗದು. ಸ್ವತಂತ್ರ ಭಾರತಕ್ಕೆ ಮುಖ್ಯವಾಗಿ ಬೇಕಾಗಿರೋದು ಸ್ವತಂತ್ರ ಜ್ಞಾನದ ಶಿಕ್ಷಣ.ಪರಕೀಯರ ಶಿಕ್ಷಣ ಪಡೆದು ಪರದೇಶದ ಸಾಲತಂದರೆ ಪರದೇಶದ ಸೇವೆಯ ಜೊತೆಗೆ ಪರಕೀಯರ ಧರ್ಮ ವೇ ಬೆಳೆಯುತ್ತದೆ. ಇದಕ್ಕೆ ಯಾವ ಪುರಾಣ ಇತಿಹಾಸದ ಸಾಕ್ಷಿ ಬೇಕೆ? ಕಣ್ಣಿಗೆ ಕಾಣುತ್ತಿದೆ.ಮಕ್ಕಳು ಮಹಿಳೆಯರೆನ್ನದೆ ಮನೆಯಿಂದ ಹೊರಗೆ ಹೋಗಿ ದುಡಿದರೂ ಸಾಲ ತೀರುತ್ತಿಲ್ಲವೆಂದರೆ ಹಣವನ್ನು ಸದ್ಬಳಕೆ ಮಾಡಿಕಿಳ್ಳುವ ಜ್ಞಾನದ ಕೊರತೆಯಿದೆ.
ಲೇಖನದ ಉದ್ದೇಶ ಯಾರ ದೋಷ ತಿಳಿಸುವುದಲ್ಲ.ನಮ್ಮಲ್ಲಿ ಎಷ್ಟು ದೋಷವಿದೆ ಎಂದು ತಿಳಿದಾಗಲೇ ಸರ್ಕಾರದ ಪ್ರತಿಯೊಂದು ನಡೆ ನುಡಿಯ ಹಿಂದಿನ ಅಜ್ಞಾನದ ಪ್ರದರ್ಶನ ನಮ್ಮೊಳಗೇ ಆಗುತ್ತದೆ.
ಒಂದು ಪಕ್ಷವಹಿಸಿಕೊಂಡಿದ್ದವರು ಇಷ್ಟು ವರ್ಷ ಆಳಿದ ಎಲ್ಲಾ ಪಕ್ಷಗಳು ನೀಡಿದ ಸಾಲ ಸೌಲಭ್ಯಗಳನ್ನು ಪಡೆದಿಲ್ಲವೆ? ಇದು ದೇಶದ ಸಾಲವಾದಾಗ ದೇಶಕ್ಕಾಗಿ ನಮ್ಮ ಸ್ವಂತ ಜ್ಞಾನದಿಂದ ದುಡಿದ ಹಣವನ್ನು ಬಳಸಲು ಯಾವ ಸಂಘ ಸಂಸ್ಥೆ ಮಠ ಮಂದಿರ ಮನೆಯವರು ಮುಂದೆ ಬಂದರು? ಅಂದರೆ ಇಲ್ಲಿ ರಾಜಕಾರಣಿಗಳನ್ನು ಮಧ್ಯೆ ನಿಲ್ಲಿಸಿಕೊಂಡು ತಮ್ಮತಮ್ಮ ಸ್ವಾರ್ಥ ದ ಬೇಳೆ ಬೇಯಿಸಿಕೊಳ್ಳುವ ಮಧ್ಯವರ್ತಿಗಳು ಬೆಳೆದರು.ಇವರನ್ನು ನಂಬಿ ಸಾಮಾನ್ಯಜನರು ಸತ್ಯ ತಿಳಿಯದೆ ಮೋಸಹೋದರು. ಮೋಸಹೋದವರಿಗೆ ಸರ್ಕಾರ ಮೋಸ ಮಾಡಿದೆ ಎಂದು ಮಧ್ಯವರ್ತಿಗಳು ನಂಬಿಸಿ ಕ್ರಾಂತಿಗೆ ಅವಕಾಶಕೊಟ್ಟರು.ಕ್ರಾಂತಿಯಿಂದ ಏನಾದರೂ ಸಾಲ ತೀರಿತೆ?
ಅಧ್ಯಾತ್ಮ ದಿಂದ ಮಾತ್ರ ಧರ್ಮ ರಕ್ಷಣೆ ಎಂದಿರುವ ಹಿಂದೂ ಸನಾತನ ಧರ್ಮದ ಪ್ರಕಾರ ತನ್ನ ತಾನರಿತು ತನ್ನ ತಾನಾಳಿಕೊಂಡರೆ ಅಧ್ಯಾತ್ಮ ಸಾಧನೆ. ಪ್ರಜಾಪ್ರಭುತ್ವದ ಪ್ರಜೆಗೆ ಸ್ವಾತಂತ್ರ್ಯ ತಂದುಕೊಟ್ಟಂತಹ ಎಷ್ಟೋ ದೇಶಭಕ್ತರು
ಜೀವತ್ಯಾಗಮಾಡಿದ್ದರು. ಅವರಲ್ಲಿಯೇ ದೋಷ ಹುಡುಕಿ ತಾವೇ ಸರಿ ಎನ್ನುವ ಮಟ್ಟಿಗೆ ರಾಜಕೀಯ ಬೆಳೆಸಿಕೊಂಡವರಿಗೆ ನಮ್ಮದೇ ಸಹಕಾರ, ಸ್ವಾಗತ,ಸಹಾಯಹಸ್ತ ಹೆಚ್ಚಾದರೆ ಇದರಲ್ಲಿ ಸತ್ಯವಿದೆಯೆ? ಧರ್ಮ ವಿದೆಯೆ? ಒಟ್ಟಿನಲ್ಲಿ ರಾಜಕೀಯವು ಅಧ್ಯಾತ್ಮ ಬಿಟ್ಟು ಭೌತಿಕವಿಜ್ಞಾನದೆಡೆಗೆ ವೇಗವಾಗಿ ಹೊರಟು ದೇಶವನ್ನೇ ವಿದೇಶಮಾಡಲು ದೇಶದ ಸಂಪತ್ತನ್ನು ದುರ್ಭಳಕೆ ಮಾಡಿಕೊಂಡು ಮಹಿಳೆ ಮಕ್ಕಳ ಆಂತರಿಕ ಜ್ಞಾನಶಕ್ತಿ ಗುರುತಿಸದೆ ಭೌತಿಕದೆಡೆಗೆ ಎಳೆದು ನಾಟಕದಲ್ಲಿ ನಾಟಕವಾಡಿ ಧರ್ಮ ರಕ್ಷಣೆ ಎಂದರೆ ಸತ್ಯವಲ್ಲ. ಸತ್ಯ ಯಾವತ್ತೂ ಒಂದೇ ಅದು ಆತ್ಮಸಾಕ್ಷಿಯಾಗಿದೆ. ಇದು ಪ್ರತಿಯೊಬ್ಬ ಹಿಂದೂಗಳ ಒಳಗಿದೆ. ಹೊರಗೆ ಕಾಣೋದು ವ್ಯವಹಾರವಷ್ಟೆ. ಹೀಗಾಗಿ ಹಿಂದೂ ಧರ್ಮ ವನ್ನು ನಮ್ಮ ಹಿಂದಿನ ಮಹಾತ್ಮರ ನಡೆ ನುಡಿಯಲ್ಲಿದ್ದ ತತ್ವದಿಂದ ಅರಿತರೆ ಉತ್ತಮ.ಅದನ್ನು ತಂತ್ರವಾಗಿ ಬಳಸಿ ಆಳಿದರೆ ಅಧಮ.ಕಲಿಗಾಲದ ಪ್ರಭಾವ ಎಷ್ಟೇ ಧರ್ಮದ ಪುಸ್ತಕ ಓದಿದರೂ ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸೋತರೆ ಒಳಗಿನ ಸತ್ಯ ಸತ್ತಂತಿರುತ್ತದೆ. ಸತ್ಯಕ್ಕೆ ಸಾವಿಲ್ಲ ಕಾರಣ. ಒಳಗಿರುವ ಆತ್ಮಕ್ಕೆ ಸಾವಿಲ್ಲ. ಆತ್ಮಾನುಸಾರ ನಡೆಯುವುದೆಂದರೆ ಸತ್ಯದ ಪರ ನಡೆಯುವುದು.ಸಾಧ್ಯವಾದರೆ ಹಿಂದೂಗಳು ಅವರವರ ಮೂಲ ಧರ್ಮ ಕರ್ಮ ಶಿಕ್ಷಣವನ್ನು ಮನೆಯೊಳಗೆ ಬೆಳೆಸುವ ಕೆಲಸ ಮಾಡಿದರೆ ಹೊರಗಿನ ರಾಜಕೀಯವೂ ಉತ್ತಮದಾರಿ ಹಿಡಿಯಬಹುದು. ರಾಜಕಾರಣಿಗಳು ವಿದೇಶದಿಂದ ಬಂಡವಾಳ ತಂದು ದೇಶ ನಡೆಸುವಂತಾಗಿರೋದು ದುರಂತ.
ಸ್ಮಾರ್ಟ್ ಭಾರತದ ಅಗತ್ಯವಿಲ್ಲ ಕಾರಣ ಭಾರತಮಾತೆ ಸರಳ,ಸ್ವಚ್ಚ,ಶುದ್ದತೆಗೆ ಮಾತ್ರ ಒಲಿಯುವುದು.ಇವಳ ಸಾಲ ತೀರಿಸಲು ಶುದ್ದವಾದ ಶಿಕ್ಷಣ ಅಗತ್ಯವಿದೆಯಷ್ಟೆ.ಅದರಲ್ಲೂ ಕಲಬೆರಕೆಮಾಡಿಕೊಂಡು ಜನರನ್ನು ಅಜ್ಞಾನದೆಡೆಗೆ ಎಳೆದರೆ ಎಲ್ಲಿಯ ಧರ್ಮ?
ಈಗಲಾದರೂ ಸತ್ಯ ಅರ್ಥ ವಾಗಿದ್ದರೆ ನಮ್ಮಪುಣ್ಯವಷ್ಟೆ.
ಪುಣ್ಯಭೂಮಿ ಭಾರತಕ್ಕೆ ಯೋಗಿಗಳ ಅಗತ್ಯವಿದೆ ಭೋಗದೆಡೆಗೆ ನಡೆದವರಷ್ಟೆ ವಿದೇಶ ವ್ಯಾಮೋಹದಲ್ಲಿದ್ದು ಜನರನ್ನು ಆಳುತ್ತಿರುವುದು. ಸತ್ಯ ಕಠೋರವಾಗಿದ್ದರೂ ಧರ್ಮ ರಕ್ಷಣೆಗೆ ಸತ್ಯ ಅಗತ್ಯವಿದೆ. ಸಾಧ್ಯವಾದಷ್ಟು ಶೇರ್ ಮಾಡಿ ವಾಸ್ತವದ ಅರಿವಲ್ಲಿ ಪ್ರಜಾಪ್ರಭುತ್ವ ನಡೆದರೆ ಧರ್ಮ ರಕ್ಷಣೆ ಸಾಧ್ಯವಿದೆ. ಭಾರತ ಸ್ವತಂತ್ರ ವಾಗಿಲ್ಲ ಕಾರಣ ಇಲ್ಲಿಯ ಶಿಕ್ಷಣದಲ್ಲಿಯೇ ಸ್ವತಂತ್ರ ಜ್ಞಾನವಿಲ್ಲ.
ಹಿಂದೂ ಧರ್ಮ ಹಿಂದುಳಿಯಲು ಕಾರಣವೇ ರಾಜಕೀಯ ದ್ವೇಷ, ತತ್ವದೊಳಗಿರುವ ಭಿನ್ನಾಭಿಪ್ರಾಯ, ಒಳಜಗಳ ಶಿಕ್ಷಣದಲ್ಲಿಯೇ ಬೆಳೆದಿರುವ ಅಜ್ಞಾನದ ವಿಷಯ.ಅಹಂಕಾರ ಸ್ವಾರ್ಥ ಪೂರಿತ ಜೀವನ ಶೈಲಿ, ವಿದೇಶ ವ್ಯಾಮೋಹ,ವ್ಯವಹಾರ,ಸಾಲ,ಬಂಡವಾಳ ಹಾಗು ಪರತಂತ್ರದ ಅತಿಯಾದ ತಂತ್ರಜ್ಞಾನ ಬಳಕೆಯ ಯಾಂತ್ರಿಕ ಜೀವನ ಪದ್ದತಿ. ಸತ್ಯ ತಿಳಿಸಬಾರದೆನ್ನುವರು.ಸತ್ಯವೇ ದೇವರೆನ್ನುವರು ಅಂದರೆ ದೇವರಿರೋದೆಲ್ಲಿ? ಒಳಗೋ ಹೊರಗೋ? ರಾಜಕೀಯದಲ್ಲೋ? ರಾಜಯೋಗದಲ್ಲೋ?
ಆತ್ಮಾವಲೋಕನಕ್ಕೆ ಸರ್ಕಾರ ಬೇಕಾಗಿಲ್ಲವಲ್ಲ.
ಕೆಸರಿನಲ್ಲಿ ಸ್ವಚ್ಚವಾಗಿದ್ದ ಕಮಲ ಕೈಗೆ ಕೈ ಜೋಡಿಸಿ ಆಪರೇಷನ್ ಮಾಡಿಕೊಂಡು ಹೊರಬಂದರೆ ಸ್ವಚ್ಚವಾಗೋದು ಕಷ್ಟವಿದೆ. ಇದ್ದಲ್ಲಿಯೇ ಇದ್ದು ನಮ್ಮತನ ಉಳಿಸಿಕೊಳ್ಳಲು ಸರಳವಾದ ಸತ್ಯ ಧರ್ಮ ತಿಳಿದರೆ ಉತ್ತಮ ಜೀವನ ಸಾಧ್ಯವಿದೆ. ಬೇರೆಯವರನ್ನು ಬದಲಾಯಿಸುವ ಮೊದಲು ನಾವು ಬದಲಾಗುವುದು ಉತ್ತಮ. ಇದು ಹಿಂದೂ ಧರ್ಮದ ತತ್ವ. ಎಲ್ಲರಲ್ಲಿಯೂ ಅಡಗಿರುವ ಪರಮಾತ್ಮನ ಕಾಣೋದಕ್ಕೆ ಒಳಗಿನ ಕಣ್ಣು ತೆರೆಯೋ ಶಿಕ್ಷಣ ಬೇಕಿದೆ.ಹೊರಗಿನ ಕಣ್ಣು ತೆರೆಸಿ ನಂತರ ಒಳಗೆ ಎಳೆಯಲಾಗದಲ್ಲವೆ? ಈವರೆಗೆ ಸಾಕಷ್ಟು ಇಂತಹ ವಿಚಾರವುಳ್ಳ ಲೇಖನಗಳು ಎಲ್ಲರಿಗೂ ತಲುಪಿದೆ ಆದರೆ ಇದು ಸಾಮಾನ್ಯ ಪ್ರಜೆಯಿಂದ ಬಂದ ಸತ್ಯ ವಾದ ಕಾರಣ ಬೆಳಕಿಗೆ ಬಂದಿಲ್ಲ.ಇದೇ ನಮ್ಮ ಸಮಸ್ಯೆಗೆ ಕಾರಣ. ಹಣವಿದ್ದವರಲ್ಲಿ ಸತ್ಯದ ಅರಿವಿಲ್ಲ ಸತ್ಯವಿದ್ದವರಲ್ಲಿ ಹಣವಿಲ್ಲ. ಹಾಗಾದರೆ ಸತ್ಯಕ್ಕೆ ಅಧಿಕಾರ ಹಣ ಬೇಕೆ? ಆತ್ಮಸಾಕ್ಷಿಗೆ ರಾಜಕೀಯ ಬೆಂಬಲವಿರುವುದೆ?
ಈವರೆಗೆ ಧಾರ್ಮಿಕ ಕ್ಷೇತ್ರವು ನಡೆಸಿದ ಕಾರ್ಯಕ್ರಮದಿಂದ ಧರ್ಮ ರಕ್ಷಣೆಯಾಗಿ ಶಾಂತಿ ನೆಲೆಸಬೇಕಿತ್ತು ಆಗಿಲ್ಲವೆಂದರೆ ಅದಕ್ಕೆ ಬಳಸಲಾಗಿರುವ ಹಣವೇ ಭ್ರಷ್ಟರದ್ದಾಗಿದೆ.ಅದಕ್ಕೆ ಭ್ರಷ್ಟಾಚಾರ ಮುಗಿಲುಮುಟ್ಟಿದೆ.ಇದಕ್ಕೆ ಪರಿಹಾರವೆಂದರೆ ಸತ್ಯಜ್ಞಾನದ ಶಿಕ್ಷಣ ನೀಡಿ ಮಹಿಳೆ ಮಕ್ಕಳ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ತತ್ವವರಿತು ನಡೆಯೋದು. ಇದಕ್ಕೆ ಹೊರಗಿನ ಸಹಕಾರಕ್ಕಿಂತ ಒಳಗಿನ ಸಹಕಾರ ಅಗತ್ಯವಿತ್ತು. ನಮ್ಮವರೆ ನಮಗೆ ಶತ್ರುಗಳಾದರೆ ಪರರು ಮಿತ್ರರಾಗುವರೆ? ಆದರೂ ನಮ್ಮ ಜ್ಞಾನ ಅವರಲ್ಲಿರುವುದೆ?
ಮಾನವನಿಗೆ ಸಾಮಾನ್ಯಜ್ಞಾನದ ಅಗತ್ಯವಿದೆ. ಪರರೆಲ್ಲಾ ನಮ್ಮವರಾದರೆ ಸ್ವರ್ಗ ನಮ್ಮವರೆ ಪರಕೀಯರಾದರೆ ನರಕ.
ಮಾಧ್ಯಮಗಳು ಅರ್ಧ ಸತ್ಯ ಬಿಟ್ಟು ಪೂರ್ಣ ಸತ್ಯದ ಕಡೆಗೆ ನಡೆದರೆ ಜನರಲ್ಲಿ ಅರಿವು ಮೂಡುತ್ತದೆ. ದೇಶದ ಭವಿಷ್ಯ ಮಾಧ್ಯಮದಲ್ಲಿದೆ.
ತತ್ವಜ್ಞಾನ ಒಳಗಿತ್ತು ತಂತ್ರಜ್ಞಾನ ಹೊರಗೆ ಬೆಳೆಯಿತು. ಪರಧರ್ಮದವರ ಸಂಖ್ಯೆ ಬೆಳೆಯಲು ತತ್ವ ಬಿಟ್ಟು ತಂತ್ರಕ್ಕೆ ಸಹಕರಿಸಿದ ಹಿಂದಿನವರೆ ಕಾರಣ. ರಾಜಯೋಗ ತಿಳಿಯದೆ ರಾಜಕೀಯ ನಡೆಸಿದ ಮಾನವರೆ ಕಾರಣ. ಈಗಲೂ ಕಾಲ ಮಿಂಚಿಲ್ಲ. ನಮ್ಮ ಆತ್ಮರಕ್ಷಣೆ ಮಾಡಿಕೊಳ್ಳಲು ಹೊರಗಿನ ಸರ್ಕಾರದ ಅಗತ್ಯವಿಲ್ಲ.ಮನೆಯವರ ಒಳಗಿನ ಸಹಕಾರ ಬೇಕಷ್ಟೆ. ಉತ್ತಮ ಸದ್ವಿಚಾರಕ್ಕೆ ಹಣ ಸಿಗದು. ಹೆಸರು ಸಿಗದು ಎನ್ನುವ ಕಾರಣಕ್ಕಾಗಿ ಕೆಟ್ಟ ವಿಚಾರವನ್ನು ಪ್ರಚಾರ ಮಾಡಿ ಸುಲಭವಾಗಿ ಹೆಸರು ಹಣ ಸಂಪಾದಿಸಿ ಭ್ರಷ್ಟಾಚಾರ ಬೆಳೆಸಿದರೆ ಇದರಿಂದಾಗಿ ಸಂಸಾರದ ಜೊತೆಗೆ ಸಮಾಜವೂ ಹಾಳಾಗುತ್ತದೆ. ಇದಕ್ಕಾಗಿ ಹಿಂದಿನ ಗುರುಹಿರಿಯರು ಬಹಳ ಕಟ್ಟುನಿಟ್ಟಾಗಿ ಸಂಸ್ಕಾರಯುತ ಶಿಕ್ಷಣ ನೀಡಿ ಒಳಗಿನ ದುಷ್ಟ ಶಕ್ತಿಯನ್ನು ಸಣ್ಣ ವಯಸ್ಸಿನಲ್ಲೇ ತಡೆದು ಒಳ್ಳೆಯ ಬುದ್ದಿ ತುಂಬುವ ಜ್ಞಾನಿಗಳಾಗಿದ್ದರು. ಈಗ ವಿರುದ್ದವಾಗಿದೆ ಅದಕ್ಕೆ ಮಾನವ ಅಸುರನಾಗಿ ಭೂಮಿಯನ್ನು ದುರ್ಭಳಕೆ ಮಾಡಿಕೊಂಡು ಆಳುತ್ತಿರುವುದು.
No comments:
Post a Comment