ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Saturday, June 3, 2023

ವಿದೇಶಿ ಸಾಲ ತೀರಿಸೋದು ಹೇಗೆ?


ಸ್ವಾತಂತ್ರ್ಯ ಬಂದು ಇಷ್ಟು ವರ್ಷ ವಾದರೂ ಭಾರತ ತನ್ನ ಮೂಲದ ಸತ್ಯ ಸತ್ವ ತತ್ವದೆಡೆಗೆ ಹೋಗದೆ ಹೊರಗಿನ ತಂತ್ರವನ್ನು ಬಂಡವಾಳವಾಗಿಸಿಕೊಂಡಿದ್ದರೆ  ಸಾಲ ತೀರೋದಿಲ್ಲ.ಇದು ಅದ್ಯಾತ್ಮ ಸತ್ಯವಾಗಿದೆ.
 ದೇಶದ ಸರ್ಕಾರವನ್ನು ವಿದೇಶಿಗಳು ನಡೆಸಿರೋದೆ? ಸತ್ಯ ಸರ್ಕಾರಗಳು ವಿದೇಶಿ ಬಂಡವಾಳ ಸಾಲ ವ್ಯವಹಾರಕ್ಕೆ  ದೇಶವನ್ನು ಒತ್ತೆ ಇಟ್ಟು ದೇಶದ ಜನರಿಗೆ ಉಚಿತವಾಗಿ ಸಾಲ ಸೌಲಭ್ಯಗಳನ್ನು ನೀಡಿ ಮತಬೇಟೆ ಮಾಡಿದ್ದಾರೆಂದರೆ ತಪ್ಪೆ? ಇದನ್ನು ಪ್ರಗತಿ ಎನ್ನಬೇಕೆ ಅಧೋಗತಿ ಯೆ?
ಅಧ್ಯಾತ್ಮ ಚಿಂತಕರ ಭವಿಷ್ಯವನರಿಯದೆ ಮಹಾತ್ಮರ ದೇಶಭಕ್ತಿ ತಿಳಿಯದೆ  ಸ್ವಾತಂತ್ರ್ಯ ವನ್ನು ಸ್ವೇಚ್ಚಾಚಾರಕ್ಕೆ ಬಳಸಿ ಯೋಗಿಗಳ ದೇಶವನ್ನು ಭೋಗದೆಡೆಗೆ ನಡೆಸಿ ಸಾಲ ಬೆಳೆದಾಗ ಅದನ್ನು ತೀರಿಸಲು ವಿದೇಶಿಗಳೊಂದಿಗೆ ಒಪ್ಪಂದ ಇದರ ಫಲವೇ ಮಕ್ಕಳು ಮಹಿಳೆಯರೆನ್ನದೆ ದುಡಿದರೂ ತೀರದ ಸಾಲ. ಅತಿಆಸೆ ಗತಿಗೇಡು ಎನ್ನುವಂತೆ ನಮ್ಮೊಳಗೇ ಇದ್ದ ಜ್ಞಾನವನ್ನು ಬಿಟ್ಟು ಹೊರಗಿನಿಂದ ಹೊರಗಿನವರ ವಿಜ್ಞಾನ  ಒಳಗೆ ತುಂಬಿಕೊಂಡರೆ ನಡೆಸೋದು ಹೊರಗಿನವರೆ.
ಸಾಮಾನ್ಯಜ್ಞಾನವಿದ್ದರೆ  ನಮ್ಮ ಜೀವಕ್ಕೆ ಜೀವನಕ್ಕೆ ಯಾವ ಸಮಸ್ಯೆಯಿರದು. ಎಲ್ಲಾ ಸಾಮಾನ್ಯಪ್ರಜೆಗಳಾಗಿ ದೇಶದ ಬಗ್ಗೆ ಚಿಂತನೆ ನಡೆಸುವಷ್ಟು  ಸಾಮಾನ್ಯಜ್ಞಾನವನ್ನು ಬೆಳೆಸುವ ಶಿಕ್ಷಣವೇ ನೀಡದೆ ವಿಶೇಷ ಜ್ಞಾನವನ್ನು ಸಣ್ಣವಯಸ್ಸಿಗೇ ತಲೆಗೆ ತುಂಬಿ  ಮನಸ್ಸು ಹೊರದೇಶದೆಡೆಗೆ ಹೊರಟಿತು. ಅಲ್ಲಿನ ಸಾಲ ತೀರಿಸಲು ದೇಶ ಬಿಟ್ಟು ಹೋಗಲೇಬೇಕಿತ್ತು.
ಆದರೆ ತನ್ನ ಮೂಲದವರು ತಮಗಾಗಿ ಮಾಡಿಟ್ಟ ಆಸ್ತಿ ಜ್ಞಾನವನ್ನು  ಸದ್ಬಳಕೆ ಮಾಡಿಕೊಳ್ಳದೆ ಎಷ್ಟೇ ದೂರಹೋದರೂ ಸಾಲ ತೀರದು. ಕೊನೆಪಕ್ಷ ಆಸ್ತಿಯನ್ನು ದಾನ ಧರ್ಮ ಕಾರ್ಯಕ್ಕಾದರೂ ಬಳಸಿದರೆ  ನೆಮ್ಮದಿಯ ಜೀವನವಿರುತ್ತದೆ. ಎಂತಹ ವಿಪರ್ಯಾಸವೆಂದರೆ  ತನ್ನ ಹತ್ತಿರವೇ  ಇದ್ದು ತನ್ನ ಧರ್ಮ ಕರ್ಮವನರಿತು ಗುರುಹಿರಿಯರ ಸೇವಾಕಾರ್ಯದಲ್ಲಿ ನಿರತರಾದವರಿಗೆ  ನಮ್ಮಲ್ಲಿ ಬೆಲೆಯಿಲ್ಲ. ಎಲ್ಲೋ ದೂರಕ್ಕೆ ಹೋಗಿ  ಯಾರದ್ದೋ ಸೇವಕರಾಗಿದ್ದು  ಸಾಲ ಮಾಡಿಕೊಂಡರೂ ಅದೊಂದು ಪ್ರಗತಿಯಾದರೆ ಈ ಕೆಲಸ  ಸುಲಭ. ನಮ್ಮವರ ಕಿರಿಕಿರಿಯಿಲ್ಲ  ಸ್ವೇಚ್ಚೇಯಾಗಿರಬಹುದು. ಹಿಂದೂಗಳಲ್ಲಿರುವ‌ ದೋಷ ನಮ್ಮವರನ್ನೇ ದ್ವೇಷಮಾಡುತ್ತಾ ಹೊರಗಿನವರನ್ನು ಬೆಳೆಸೋದು. 
ಆದರೆ  ಜೀವನದ ಉದ್ದೇಶ ಮಾತ್ರ  ಇದಾಗಿಲ್ಲವೆನ್ನುವುದು ಹಿಂದೂ ಧರ್ಮ. ಪರಕೀಯರು ಹೊರಗಿನ ಸತ್ಯ ಎತ್ತಿ ಹಿಡಿದರೆ ಭಾರತೀಯರು ಒಳಗಿನ ಸತ್ಯ ಕಂಡುಕೊಂಡಿದ್ದರು.
ಆಂತರಿಕ ಅರಿವಿನಿಂದ ಭೌತಿಕ ಅರಿವಿನೆಡೆಗೆ ನಡೆದರೆ ಉತ್ತಮ . ಏನೇ  ಪಡೆದರೂ ಕೊಟ್ಟು ಹೋಗೋವರೆಗೆ ಮುಕ್ತಿಯಿಲ್ಲ.ಹಾಗಾದರೆ  ಪಡೆಯುವುದು ತಪ್ಪೆ? ಇಲ್ಲ ಉತ್ತಮವಾದದ್ದನ್ನು ಪಡೆದು ಹಂಚಿಕೊಂಡರೆ ಧರ್ಮ.
 ಸತ್ಯಜ್ಞಾನವೇ  ಇಲ್ಲದೆ ಹಣಗಳಿಸಿದರೆ ದುರ್ಭಳಕೆಯೇ ಹೆಚ್ಚು. ಹೊರಗೆ ಹೋಗುವುದು ತಪ್ಪಲ್ಲ ಒಳಗೆ ಸೇರದಿರೋದು ತಪ್ಪು. ಹೊರಗಿನ ಸಾಲ ತೀರಿಸುತ್ತಾ ಒಳಗೆ ನಡೆಯುವುದು  ಧರ್ಮ. ಒಳಗಿನ ಸಾಲ ಬೆಳೆಸುತ್ತಾ ಹೊರಗೆ ನಡೆಯುವುದೇ ಅಧರ್ಮ. ಸಾಲ ತೀರಿಸಲು ಬಂದವರ ತಲೆಯ ಮೇಲೆ ಸಾಲದ ಹೊರೆ ಹಾಕಿ ಆಳುವುದು ಅಧರ್ಮ. ಇದಕ್ಕೆ ಸಹಕಾರ ಕೊಟ್ಟವರಿಗೇ ಇದರ ಪ್ರತಿಫಲ ಹೆಚ್ಚು.
ಪ್ರಜಾಪ್ರಭುತ್ವ  ದೇಶವನ್ನು  ರಾಜಪ್ರಭುತ್ವದಂತೆ  ಭೋಗದ ಕಡೆಗೆ ನಡೆಸುವಷ್ಟು  ಜ್ಞಾನಶಕ್ತಿ‌ ಪ್ರಜೆಗಳಿಗಿರಬೇಕಾದರೆ ಪ್ರತಿಯೊಬ್ಬರೂ ದೇಶಕ್ಕಾಗಿ  ಸೇವೆ ಮಾಡುವ ಜ್ಞಾನಪಡೆದಿರಬೇಕಿತ್ತು. ದೇಶದಿಂದ ನನಗೇನು ಲಾಭ ಎನ್ನುವ ಅಜ್ಞಾನದಲ್ಲಿ ದೇಶವನ್ನೇ ಸಾಲದೆಡೆಗೆ ನಡೆಸಿ ತಾನು ಶ್ರೀಮಂತ ನೆಂದರೆ  ಅಜ್ಞಾನವಷ್ಟೆ. ಇದನ್ನು ಸರ್ಕಾರ ಸರಿಪಡಿಸಲಾಗದು ನಮ್ಮದೇ ಸಹಕಾರದ ಅಗತ್ಯವಿದೆ. ಜನರು ಏನು ಕೇಳುವರೋ ಸರ್ಕಾರ ಕೊಡಬಹುದು ಹಾಗೆ ದೇವರೂ ಕೂಡ ಬೇಡಿದ್ದನ್ನೆಲ್ಲಾ ಕೊಡುತ್ತಾನೆ.ನಂತರ ಅದನ್ನು ತಿರುಗಿ ಕೊಡಬೇಕಾದವರೂ  ಜನರೆ ಹೊರತು ದೇವರಲ್ಲ. ಕಾರಣ ದೈವತ್ವವನ್ನು ಸಂಪಾದಿಸಿಕೊಳ್ಳುವುದು ಮಾನವರ ಧರ್ಮ ಮತ್ತು ಕರ್ಮ. ಇದು ಒಳಗಿದೆ  ಕೊಡೋದಕ್ಕೆ ಹೊರಗಿಲ್ಲ. ಯಾರೂ ಕದಿಯಲಾಗದ ಜ್ಞಾನವೇ  ಶ್ರೇಷ್ಠ.

No comments:

Post a Comment