ಸರ್ಕಾರ ಕೊಡುವ ಉಚಿತ ಭಾಗ್ಯಗಳನ್ನು ಸ್ವಾಗತಿಸುವವರು ಹಲವರು ವಿರೋಧಿಸುವವರು ಕೆಲವರು ವಾದಿಸುವವರು ಎಲ್ಲರೂ ಹಾಗಾದರೆ ವಾದ ವಿವಾದದಲ್ಲಿ ಏನಾದರೂ ಈವರೆಗೆ ಬದಲಾವಣೆ ಆಗಿದೆಯೇ?ಚರ್ಚೆ ನಡೆಸುವಾಗ ಒಂದು ಕಡೆಯಿಂದ ವಿಚಾರವಿರುತ್ತದೆ.ವಾದ ಮಾಡುವಾಗ ಎರಡೂ ಕಡೆಯಿಂದ ಘರ್ಷಣೆಯಿರುತ್ತದೆ. ಘರ್ಷಣೆಯಿಂದ ಹೋರಾಟ ಹೋರಾಟದಿಂದ ಅಶಾಂತಿ,ಅತೃಪ್ತಿ, ಅಸಂತೋಷ ಅದೇ ಮುಂದೆ ದ್ವೇಷ ಹೆಚ್ಚಿಸಿ ಸತ್ಯನಾಶ.
ಭಾರತದ ಈ ಸ್ಥಿತಿಗೆ ಕಾರಣ ಸರ್ಕಾರದ ಉಚಿತ ಸಾಲ ಸೌಲಭ್ಯವೆಂದರೆ ತಪ್ಪು ಎನ್ನುವವರಿಗೆ ಈ ಸಾಲದ ಹಿಂದಿನ ಉದ್ದೇಶ ಅರ್ಥ ವಾಗದ ಅಜ್ಞಾನವಿದೆ.ಸುಲಭವಾಗಿ ಸಿಗುವಾಗ ಯಾರು ತಾನೆ ಬಿಡುವರು.ಈಗಲೂ ಹಾಗೆ ಎಲ್ಲರಿಗೂ ಉಚಿತವೆಂದ ಕಾರಣಕ್ಕಾಗಿ ಸರ್ಕಾರ ಗೆದ್ದಿದೆ.ಈಗ ಕೆಲವರಿಗಷ್ಟೆ ಉಚಿತವೆಂದರೆ ಎಲ್ಲಾ ಸುಮ್ಮನಿರಲಾಗದು.
ಮಾತಿಗೆ ತಪ್ಪಿ ನಡೆದರೆ ಮೆಚ್ಚನಾಪರಮಾತ್ಮನು ಎಂದರು.ಆದರೆ ಇಲ್ಲಿ ಪರಮಾತ್ಮ ಇರೋದೆಲ್ಲಿ ? ಸರ್ಕಾರದಲ್ಲೇ? ಜನರ ಸಹಕಾರದಲ್ಲೆ?
ಪರದೇಶದ ಸಾಲ ತಂದು ಬಂಡವಾಳ ತಂದು ದೇಶವನ್ನು ನಡೆಸುವುದೇ ಅಧರ್ಮ. ಅದರಲ್ಲೂ ಉಚಿತವಾಗಿ ಜನರಿಗೆ ಸಾಲ ಹಂಚಿದರೆ ದೇಶದ ಗತಿ ಏನಾಗಬಹುದು? ಇಷ್ಟಕ್ಕೂ ಇದು ರಾಜಪ್ರಭುತ್ವವೋ ಪ್ರಜಾಪ್ರಭುತ್ವವೋ? ಪ್ರಜೆಗಳೇ ದೇಶವನ್ನು ಸಾಲದಡಿ ಮಲಗಿಸಿದರೆ ದೇಶ ನಡೆಯೋದು ಹೇಗೆ? ಇಂತಹ ಪರಿಸ್ಥಿತಿ ಬರಲು ಕಾರಣವೇ ಬಡತನದ ಹೆಸರಿನಲ್ಲಿ, ಧರ್ಮ, ಜಾತಿ,ಭಾಷೆಪಂಗಡ,ಪಕ್ಷದ ಹೆಸರಿನಲ್ಲಿ ಕೋಟ್ಯಾಂತರ ರೂಗಳನ್ನು ರಾಜಕೀಯ ಪ್ರೇರಿತ ಸಮಾರಂಭ,ಸಮಾವೇಶ,ಸಮಾಚಾರದ ಮೂಲಕ ಜನರನ್ನು ಹೊರಗೆಳೆದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಮಧ್ಯವರ್ತಿಗಳು. ಮಧ್ಯವರ್ತಿಗಳು ಎಂದಾಗ ಮಾನವರಾಗಬಹುದು. ಮಾನವರಲ್ಲಿ ಮದ್ಯವರ್ತಿಗಳೆಂದರೆ ಮಹಿಳೆ,ಮಕ್ಕಳು,ಮಾಧ್ಯಮ .ಮಹಿಳಾದೇಶ ನಡೆದಿರೋದು
ಅವಳ ಸಹಕಾರದಿಂದ. ಆ ಸಹಕಾರದಲ್ಲಿ ಸಾಲವೇ ಹೆಚ್ಚಾದರೆ ಅದನ್ನು ತೀರಿಸಲು ಮಹಿಳೆಯೂ ದುಡಿಯಬೇಕು. ಮನೆಯಿಂದ ಹೊರಹೋಗಿ ದುಡಿಯುವ ಮಹಿಳೆಯರೊಳಗಿನ ಆತ್ಮಜ್ಞಾನ ಹಿಂದುಳಿಯುತ್ತದೆ.
ಬಡತನ ಬೆಳೆದಿರೋದು ಅಜ್ಞಾನದಿಂದ. ಅಂದರೆ ಶಿಕ್ಷಣ ನೀಡದೆ ಸ್ತ್ರೀ ಯನ್ನು ಆಳಿದರು. ಅವಳ ಜ್ಞಾನವನ್ನು ಗುರುತಿಸದೆ ಅವಳನ್ನು ನಿರ್ಲಕ್ಷ್ಯ ಮಾಡಿ ಲಕ್ಷ ಗಟ್ಟಲೆ ಸಾಲ ಮಾಡಿದರೆ ಇದನ್ನು ತೀರಿಸದೆ ಮುಕ್ತಿ ಯಿಲ್ಲ. ಮುಕ್ತಿ ಗಾಗಿ ಸ್ತ್ರೀ ಯನ್ನು ಬಿಟ್ಟು ಮನೆಯಿಂದ ಹೊರಗೆ ನಡೆದವರನ್ನು ಯಾರೂ ಕೇಳಲಿಲ್ಲ. ಆದರೆ ಸ್ತ್ರೀ ಹಾಗೆ ಹೋದರೆ ಸಮಾಜ
ಬಿಡಲಿಲ್ಲ.ಈಗ ಕಾಲಬದಲಾಗಿದೆ ಆದರೂ ಸಾಲದ ಹೊರೆ ಬೆಳೆದಿದೆ. ಕಾರಣ ಜನ್ಮ ಜನ್ಮ ಕಳೆದರೂ ಅವರವರ ಹಿಂದಿನ ಸಾಲ ತೀರಿಸಲು ಜನ್ಮ ಪಡೆದು ಬರಲೇಬೇಕು ಎನ್ನುವ ಅಧ್ಯಾತ್ಮ ಸತ್ಯ ಯಾವತ್ತೂ ಬದಲಾಗದು.ಹೀಗಾಗಿ ಈಗ ಸ್ತ್ರೀ ಗೆ ವಿದ್ಯೆ,ಬುದ್ದಿ ಜ್ಞಾನ ಹಣ ಅಧಿಕಾರ,ಸ್ಥಾನಮಾನ ಎಲ್ಲಾ ಇದೆ ಆದರೆ ಸಾಲ ತೀರಿಸುವ ಧಾರ್ಮಿಕ ಸತ್ಯದ ಕೊರತೆಯಿದೆ.ಪುರುಷರಲ್ಲಿರುವ ಈ ಅಜ್ಞಾನವನ್ನು ದೂರ ಮಾಡಲು ಜ್ಞಾನಿಯಾದ ಸ್ತ್ರೀ ಗೆ ಜ್ಞಾನದ ಶಿಕ್ಷಣದ ಅಗತ್ಯವಿತ್ತು.ಭೌತಿಕ ವಿಜ್ಞಾನದ ವಿದ್ಯೆ ಭೌತಿಕದೆಡೆಗೆ ನಡೆಸಿ ಆಸೆ ಆಕಾಂಕ್ಷೆಗಳನ್ನು ಹೆಚ್ಚಿಸಿ ಸಾಲ ಮಾಡಿಯಾದರೂ ತುಪ್ಪ ತಿನ್ನುವ ಮಟ್ಟಿಗೆ ವೈಭೋಗದ ಜೀವನಕ್ಕೆ ಮಾನವ ಅಂಟಿಕೊಂಡಷ್ಟೂ ಅಧ್ಯಾತ್ಮದ ಋಣ ಪದದ ಅರ್ಥ ತಿಳಿಯಲು ಕಷ್ಟ.
ಕೈತುಂಬಾ ಸಂಪಾದನೆಮಾತ್ರವಲ್ಲ ಮನೆತುಂಬಾ ಸಂಪಾದಿಸುವವರಿದ್ದರೂ ಸಾಲದ ಸಮಸ್ಯೆ ಹೆಚ್ಚಾಗಿದೆ ಎಂದರೆ ಮಾನವನಿಗೆ ಹಣವನ್ನು ಸದ್ಬಳಕೆ ಮಾಡಿಕೊಳ್ಳಲು ಗೊತ್ತಿಲ್ಲ. ಜನರನ್ನೂ ಸಾಲದ ದವಡೆಗೆ ಎಳೆದು ಆಳುವ ರಾಜಕೀಯದಿಂದ ಈವರೆಗೆ ಸಾಕಷ್ಟು ವಿದೇಶಿ ಸಾಲ ಬಂಡವಾಳ, ವ್ಯವಹಾರಕ್ಕೆ ದೇಶದ ರಾಜಕಾರಣಿಗಳು ಒಪ್ಪಂದ ಮಾಡಿಕೊಂಡು ದೇಶದ ಜನರನ್ನು ವಿದೇಶದವರೆಗೆ ಕಳುಹಿಸಿ ಅವರ ಸೇವೆ ಮಾಡಲು ತಮ್ಮವರನ್ನೇ ಮರೆತು ದೂರಹೋಗಬೇಕಾಗಿದೆ. ಇಲ್ಲಿರುವ ಹಣದ ಶ್ರೀಮಂತ ರಿಗೆ ಬಡವರಲ್ಲಿದ್ದ ಜ್ಞಾನವನ್ನು ಗುರುತಿಸಲಾಗದೆ ಶಿಕ್ಷಣ ನೀಡದೆ ಅಜ್ಞಾನದಿಂದ ಜೀವನ ನಡೆಸುವಂತಾಗಿದೆ ಎಂದರೆ ಸತ್ಯದ ಅರಿವಿಲ್ಲದೆ ಭೂಮಿಯಲ್ಲಿ ಎಷ್ಟು ಹಣವಿದ್ದರೂ ವ್ಯರ್ಥ.
ಭೋಗ ಜೀವನದಿಂದ ಸಾಕಷ್ಟು ರೋಗ ಬೆಳೆದಿದೆ.ರೋಗಕ್ಕೆ ಸರಿಯಾಗಿ ಆರೋಗ್ಯಕೇಂದ್ರಗಳಾಗಿದೆ.ಅದಕ್ಕೆ ಸರಿಯಾದ ವೈಧ್ಯಕೀಯ ಸಂಶೋಧನಾ ಕೇಂದ್ರ. ಆದರೆ ಆರೋಗ್ಯವೆಂದರೆ ಆರು ಯೋಗ್ಯವಾಗಿರೋದೆಂದರ್ಥ.
ಮಾನವನೊಳಗಿರುವ ಕಾಮ,ಕ್ರೋಧ,ಲೋಭ,ಮೋಹ,ಮಧ ಮತ್ಸರಗಳು ಮಾನವನನ್ನು ದೈವತ್ವದೆಡೆಗೆ ನಡೆಸುವುದೋ ಅಸುರತ್ವದೊಡನೆ ನಡೆಸುವುದೋ ಎನ್ನುವ ಬಗ್ಗೆ ಚಿಂತನೆ ನಡೆಸಬೇಕಾದ ಭಾರತೀಯರೆ ಉಚಿತವಾಗಿ ಸಾಲ ಸೌಲಭ್ಯಗಳನ್ನು ಕೊಟ್ಟು ತಿಂದು ತೇಗಿದ ಮೇಲೆ ಎದ್ದು ಕೆಲಸ ಮಾಡಿ ಎಂದರೆ ಏಳಲಾಗುವುದೆ? ಸೋಮಾರಿತನ ಮಾನವನ ಶತ್ರು.' ಸೋ' ಮಾರಿಯ ಮನೆತನವಾಗುತ್ತಿದೆ.
ಎಲ್ಲಾ ಪಕ್ಷಗಳಿಗೂ ಅಧಿಕಾರ ಬೇಕು. ಹಾಗಾದರೆ ಪ್ರಜಾಧರ್ಮದ ಪ್ರಕಾರ ದೇಶವನ್ನು ಸಾಲದಿಂದ ಬಿಡುಗಡೆಗೊಳಿಸಲು ಪ್ರಜೆಗಳೆಲ್ಲರೂ ಧರ್ಮ ಮಾರ್ಗ ದಲ್ಲಿ ನಡೆಯಬೇಕಿತ್ತು.ಇರೋದೊಂದು ಭೂಮಿ,ಅಲ್ಲೊಂದು ಪವಿತ್ರವಾದ ದೇಶ.ಆ ದೇಶದ ಒಳಗಿರುವ ಪ್ರಜೆಗಳಿಗೆ ಸತ್ಯ ಧರ್ಮದ ಶಿಕ್ಷಣವೇ ಕೊಡದೆ ಆಳಿದರೆ ಅಧರ್ಮ. ಇಷ್ಟು ವರ್ಷಗಳಿಂದಲೂ ಸಾಲ ಕೊಟ್ಟರೂ ಬಡತನ ನಿವಾರಣೆ ಆಗಿಲ್ಲವೆಂದರೆ ಇಲ್ಲಿ ಹಣದಿಂದ ಸಾಲ ತೀರಿಸುವ ಮೊದಲು ಸತ್ಯಜ್ಞಾನವಿರಬೇಕಿತ್ತು. ಅಜ್ಞಾನವನ್ನು ಹೊರಗಿನಿಂದ ತುಂಬುತ್ತಾ ರಾಜಕೀಯದೆಡೆಗೆ ಜನರನ್ನು ಎಳೆದಾಡುತ್ತಾ ಮನೆಯೊಳಗಿದ್ದ ಶಾಂತಿ ನೆಮ್ಮದಿ ತೃಪ್ತಿ ಯನ್ನು ಮಧ್ಯವರ್ತಿಗಳು ಕೆಟ್ಟ ವಿಚಾರಗಳಿಂದ ಮನಸ್ಸನ್ನು ಕೆಡಿಸಿ ಹೊರಗೆ ಬರುವಂತೆ ಮಾಡಿದರೆ ಹೊರಗೆ ಹೋರಾಟ ಹಾರಾಟ ಮಾರಾಟ ಹೆಚ್ಚಾಗುವುದು.ಆದರೆ ಒಳಗಿನ ಸಾಲ ತೀರದು.ಜೊತೆಗೆ ಜ್ಞಾನವೂ ಬೆಳೆಯದು.
ಅಧ್ಯಾತ್ಮ ಎಂದರೆ ಪುರಾಣ ಇತಿಹಾಸ, ಶಾಸ್ತ್ರ ಸಂಪ್ರದಾಯ ಎಂದರೆ ತಪ್ಪು. ಇವೆಲ್ಲವೂ ನಮಗೆ ಸತ್ಯಾಸತ್ಯತೆಯನ್ನು ತಿಳಿಸುವ ಮೆಟ್ಟಿಲು. ಸತ್ಯ ತಿಳಿದು ಸರಿಯಾದ ಮೆಟ್ಟಿಲು ಹತ್ತಿದರೆ ಜ್ಞಾನ ಹೆಚ್ಚುವುದು. ಸತ್ಯ ತಿಳಿದೂ ತಪ್ಪು ದಾರಿಗೆ ನಡೆದರೆ ಅಜ್ಞಾನ. ಹೊರಗಿನ ರಾಜಕೀಯದಿಂದ ಸಾಲ ಬೆಳೆದರೆ ಒಳಗಿನ ರಾಜಯೋಗದಿಂದ ಸಾಲಮನ್ನಾ ಆಗುವುದು. ಇವೆರಡರ ನಡುವೆ ಇರುವ ಅಂತರ ಇಂದು ದುಷ್ಟ ಶಕ್ತಿಗಳ ವಶದಲ್ಲಿದ್ದು ಭ್ರಷ್ಟಾಚಾರ ಮುಗಿಲುಮುಟ್ಟಿದೆ.
ಭೂಮಿ ಮೇಲಿರುವಾಗ ನಾನು ಶಾಶ್ವತವೆನ್ನುವ ಭ್ರಮೆಯಲ್ಲಿ ಸಾಲದ ಮೂಟೆ ಕಟ್ಟಿದರೆ ಹೊತ್ತು ನಡೆಯುವಾಗ ಯಾರೂ ಬರೋದಿಲ್ಲ. ಒಟ್ಟಿನಲ್ಲಿ ಸಾಲವೇ ಶೂಲ ಯಾವುದಿದರ ಮೂಲವೆಂದರೆ ಪ್ರಜೆಗಳ ಸಹಕಾರವೇ ಇದರ ಮೂಲ.
ಪ್ರತಿಯೊಬ್ಬರೂ ಹಣದ ಶ್ರೀಮಂತರಾದರೆ ಜ್ಞಾನದ ಶ್ರೀಮಂತಿಕೆಗೆ ಬೆಲೆಯೇ ಇರದು.ಹಿಂದಿನ ಮಹಾತ್ಮರುಗಳಲ್ಲಿ ಜ್ಞಾನದ ಶ್ರೀಮಂತ ವರ್ಗದವರು ಸಮಾಜದ ಋಣ ತೀರಿಸಲು ಸಮಾಜ ಸೇವೆಗೆ ದೇಶ ಸೇವೆಗೆ ಜೀವ ತೆತ್ತಿದ್ದರು.
ಈಗ ಸಂಸಾರ ನಿರ್ವಹಣೆಗೆ ಸಮಾಜ ದೇಶವನ್ನು ಸಾಲದ ಕೂಪಕ್ಕೆ ತಳ್ಳಿದರೆ ಇದನ್ನು ತೀರಿಸುವವರೆಗೂ ಜೀವಕ್ಕೆ ಮುಕ್ತಿ ಸಿಗದು. ಈ ವಿಚಾರವನ್ನು ಜನಸಾಮಾನ್ಯರು ಮನೆಯಲ್ಲಿಯೇ ಇದ್ದು ಆತ್ಮಾವಲೋಕನ ಮಾಡಿಕೊಂಡರೆ ನಾವು ಮಾಡುತ್ತಿರುವ ಸೇವೆಯಿಂದ ಯಾರಿಗೆ ಒಳಿತಾಗಿದೆ? ಯಾರ ಹಣದಲ್ಲಿ ಸೇವೆ ಮಾಡುತ್ತಿರುವುದು? ಅಧ್ಯಾತ್ಮದ ಸೇವೆಗೂ ಭೌತಿಕ ಸೇವೆಗೂ ಅಂತರವಿದೆಯೆ? ಅಂತರಕ್ಕೆ ಕಾರಣವೇನು? ಸ್ವಾತಂತ್ರ್ಯ ಬಂದ ನಂತರಕ್ಕೂ ಪೂರ್ವ ಕಾಲಕ್ಕೂ ವ್ಯತ್ಯಾಸವಿದೆಯೆ?
ಒಂದೇ ದೇಶ ಒಂದೇ ಭೂಮಿ ಆದರೆ ನಮ್ಮ ಚಿಂತನೆ ಒಂದಾಗದೆ ಇದ್ದರೆ ಮನುಕುಲವಾಗದು. ಅಸುರಕುಲವಾಗಿ ಸಾಲವೇ ಶೂಲವಾಗಿರುತ್ತದೆ. ಅದಕ್ಕಾಗಿ ಸರಳಜೀವನದಿಂದ ತತ್ವಜ್ಞಾನದಿಂದ ಸತ್ಯವರಿತು ಧರ್ಮದ ಹಾದಿಯಲ್ಲಿ ನಡೆದರೆ ನಿಧಾನವಾಗಿಯಾದರೂ ಒಳಗಿನ ಜಗತ್ತಿನ ಸತ್ಯದರ್ಶನ ಸಾಧ್ಯ. ಅದೇ ನಿಜವಾದ ಜಗತ್ತು. ಕತ್ತಲಿನಲ್ಲಿದ್ದು ಬೆಳಕನ್ನು ಹುಡುಕಿದರೆ ಸಿಗದು. ಬೆಳಕಿನಕಡೆಗೆ ನಡೆಯಲು ಸ್ವತಂತ್ರ ಜ್ಞಾನದ ಅಗತ್ಯವಿದೆ.ಪ್ರತಿಯೊಬ್ಬ ಪ್ರಜೆಯಲ್ಲಿಯೂ ವಿಶೇಷ ಶಕ್ತಿಯಿದೆ.ಅದನ್ನು ತಿಳಿದು ನಡೆಯಲು ಬಿಟ್ಟರೆ ಸ್ವಾವಲಂಬನೆ ಯ ಜೀವನವಾಗುತ್ತದೆ. ಅಷ್ಟು ಸುಲಭವಿಲ್ಲದ ಕಾರಣ ಅಸತ್ಯದಲ್ಲಿ ಸುಲಭವಾಗಿ ಹೊರಬಂದು ಸಾಲ ಮಾಡುತ್ತಾ ದೊಡ್ಡ ವ್ಯಕ್ತಿಯೆನಿಸಿದರೂ ಸಾಲ ತೀರಿಸಲು ತಿರುಗಿ ಬಂದಾಗ ಸಣ್ಣ ವ್ಯಕ್ತಿಯಾಗೇ ಇರಬೇಕು. ವ್ಯಕ್ತಿಗಿಂತ ಶಕ್ತಿಮುಖ್ಯ.
ಬಡವರಲ್ಲಿರುವ ಜ್ಞಾನ ಶ್ರೀಮಂತರಲ್ಲಿರದು. ಹಾಗಾಗಿ ಯೋಗಿಯಾಗಿ ಶಾಂತಿ ಪಡೆಯಬೇಕೋ ಭೋಗದಿಂದ ಸಾಲಮಾಡಿ ಕ್ರಾಂತಿಯಾಗಬೇಕೋ ಎಲ್ಲಾ ಮೇಲಿರುವ ಆ ಪರಮಶಕ್ತಿಯೇ ನಿರ್ಧಾರ ಮಾಡುವಾಗ ಮಾನವ ಕಾರಣಮಾತ್ರದವನಷ್ಟೆ.
ವಿದೇಶಿ ಒಪ್ಪಂದಕ್ಕೆ ಒಪ್ಪುವ ಪ್ರಜೆಗಳಿಗೆ ನಮ್ಮವರು ಹೇಳಿದ್ದು ಒಪ್ಪಲು ಕಷ್ಟವೆಂದರೆ ನಮ್ಮವರನ್ನೇ ದೂರಮಾಡಿ ದ್ವೇಷಮಾಡಿದರೆ ಸಾಲ ತೀರೋದಿಲ್ಲ.ಕಾರಣ ಅವರು ಬಿಟ್ಟು ನಡೆದ ಆಸ್ತಿಬೇಕು ಸಾಲ ಬೇಡವೆಂದರೆ ಹೇಗೆ? ಆಸ್ತಿಯೂ ಸಾಲದೊಳಗಿದ್ದರೆ ದೇವರೆ ಗತಿ. ದೈವತ್ವದಿಂದ ದೇವರನ್ನು ಕಾಣಬಹುದು. ಉತ್ತಮ ಗುಣಜ್ಞಾನವೇ ದೈವಶಕ್ತಿಯಾಗಿತ್ತು.ಈಗ ದೇವರ ಹೆಸರಿನಲ್ಲೇ ರಾಜಕೀಯ ಬೆಳೆದಿರುವಾಗ ಅದರಲ್ಲಿ ಸತ್ಯವಿದೆಯೆ? ಧರ್ಮ ವಿದೆಯೆ? ನ್ಯಾಯಾಲಯಗಳಿವೆ ಅದರೊಳಗಿನ ನ್ಯಾಯಾಧೀಶರಲ್ಲಿ ಸತ್ಯ ಧರ್ಮ ಇದೆಯೆ? ಮಠ ಮಂದಿರಗಳು ಶಿಕ್ಷಣ
ದಾಸೋಹದಿಂದ ಜ್ಞಾನ ನೀಡಬೇಕಿತ್ತು. ಶಾಲಾಕಾಲೇಜ್ಗಳಲ್ಲಿ ದೇಶೀಯ ಶಿಕ್ಷಣಪದ್ದತಿ ಅಗತ್ಯವಿತ್ತು.
ಎಲ್ಲಾ ವಿದೇಶಿಮಯವಾದಾಗ ಎಲ್ಲಿಯ ಸ್ವದೇಶ? ಸ್ವದೇಶದ ಮೂಲವೇ ಧಾರ್ಮಿಕ ಶಿಕ್ಷಣವಾಗಿತ್ತು. ಇದರಲ್ಲಿಯೇ ರಾಜಕೀಯವಿದ್ದರೆ ರಾಜಯೋಗದವಿಚಾರ ತಿಳಿಸುವವರಿಗೆ ಒಳಹೊಕ್ಕಿ ಸತ್ಯ ತಿಳಿಯುತ್ತಿಲ್ಲ. ಸ್ವಾಮಿ ವಿವೇಕಾನಂದರ ಮಹಾತ್ಮ ಗಾಂಧಿಯವರ ತತ್ವಜ್ಞಾನ ಇಂದಿನ ರಾಜಕೀಯತೆ ತಂತ್ರವಾಗಿ ಬಳಸಿದರೂ ಜನರಲ್ಲಿ ಸತ್ಯಜ್ಞಾನದ ಕೊರತೆಯಿದ್ದು ಸಾಲ ಹೆಚ್ಚಿದಂತೆಲ್ಲ ಸಮಸ್ಯೆಗಳಿಗೆ ಕೊನೆಯಿಲ್ಲ. ಸಾಲಕ್ಕೆ ಮಿತಿಯಿಲ್ಲ.
ಪ್ರಜೆಗಳ ಅಜ್ಞಾನದ ಸಹಕಾರವೇ ಭ್ರಷ್ಟಾಚಾರ ತುಂಬಿದ ಸಮಾಜವಾಗಿದೆ. ಇದನ್ನು ಶಿಷ್ಟಾಚಾರ ದಿಂದ ಮುಂದೆ ನಡೆಸಲು ಮಕ್ಕಳು ಮಹಿಳೆಯರಿಗೆ ಮನೆಯೊಳಗಿದ್ದೇ ಸತ್ಯಜ್ಞಾನದ ಶಿಕ್ಷಣ ಬೇಕಿತ್ತು. ಮಿಥ್ಯಜ್ಞಾನದ ಶಿಕ್ಷಣ ನೇರವಾಗಿ ತಂತ್ರದಿಂದ ತಲೆಗೆ ತುಂಬಿದರೆ ತಲೆಕೆಟ್ಟವರೆ ಬೆಳೆಯೋದಷ್ಟೆ. ನಮ್ಮ ತಲೆಯೊಳಗೆ ತುಂಬಿಕೊಂಡಿರುವ ವಿಷಯದಲ್ಲಿಯೇ ವಿಷವಿದ್ದರೆ ಬದುಕುವುದು ಕಷ್ಟ. ಅಮೃತವೂ ಅತಿಯಾದರೆ ವಿಷವಾಗುವಂತೆ ಅತಿಯಾದ ವಿಷವೂ ಜನರನ್ನು ಸಾವಿನ ಬಳಿಗೆ ಎಳೆಯುವಾಗ ಒಳಗೇ ಕುಳಿತಿರುವ ಅಮೃತ ಸಿಗುವಂತಿದ್ದರೆ ಉತ್ತಮ ಜೀವನ ಸಾಧ್ಯವಿದೆ
ಇದಕ್ಕಾಗಿ ಅಮೃತವಾದ ವಿಚಾರ ತಲೆಗೆ ತುಂಬುವುದು ಅಗತ್ಯವಿದೆ. ಇದು ಪೋಷಕರ ಧರ್ಮ. ದೇಶದ ಪೋಷಣೆ ಮಾಡಬೇಕಾದ ಪ್ರಜೆಗಳೇ ಸಾಲ ಮಾಡುತ್ತಾ ಶೋಷಣೆ
ಗಿಳಿದರೆ ಅಜ್ಞಾನ ಮಿತಿಮೀರಿದೆ.
ಲೇಖನದಲ್ಲಿ ಯಾವುದೇ ಪಕ್ಷಪಾತವಿಲ್ಲ. ಕಾರಣ ಎಲ್ಲಾ ಪಕ್ಷ ದೇಶ ನಡೆಸಲು ವಿದೇಶಿಬಂಡವಾಳದ ಮೊರೆಹೋಗಿದೆ. ಆದರೆ ಸ್ವದೇಶಿ ಜನರಲ್ಲಿದ್ದ ಜ್ಞಾನ ಬಂಡಾರ ಹೆಚ್ಚಿಸುವಲ್ಲಿ ಸೋತಿವೆ. ಇದಕ್ಕೆ ಕಾರಣ ನಮ್ಮವರ ಸಹಕಾರ. ಧಾರ್ಮಿಕ ವರ್ಗವೇ . ರಾಜಕಾರಣಿಗಳ ಹಿಂದೆ ನಿಂತು ಬೇಡಿದರೆ ಎತ್ತ ಸಾಗುತ್ತಿದೆ ಧರ್ಮ?
ಈಗಲೂ ಕಾಲವಿದೆ ಅತಿಯಾದ ಆಸ್ತಿ ಅಂತಸ್ತು ಸಮಾಜದ ಋಣವಷ್ಟೆ. ಅದನ್ನು ಸಮಾಜದ ಹಿತಕ್ಕಾಗಿ ಸದ್ಬಳಕೆ ಮಾಡಿಕೊಂಡರೆ ಸಾಲಮನ್ನಾ. ಪರಮಾತ್ಮನ ಸಾಲ ತೀರಿಸಲು ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕೆನ್ನುವುದೆ ಹಿಂದೂ ಧರ್ಮದ ಗುರಿ. ಹಿಂದಿನ ಸಾಲವನ್ನೇ ತೀರಿಸದೆ ಮುಂದೆ ಸಾಲ ಮಾಡಿದರೆ ತೀರುವುದೆ?
ಸಾಮಾನ್ಯಜ್ಞಾನದಿಂದ ಸಾಮಾನ್ಯ ಪ್ರಜೆಯಾಗಿ ಸಮಾಜದಲ್ಲಿ ನಡೆಯುತ್ತಿರುವ ಬೆಳವಣಿಗೆಗೆ ಕಾರಣ ತಿಳಿದರೆ ಒಂದು ಸಾಲ ತೀರಿಸಲು ಇನ್ನೊಂದು ಸಾಲ ಮಾಡುತ್ತಾ ವಿದೇಶದೆಡೆಗೆ ಹೋದರೂ ಇದನ್ನು ಪ್ರಗತಿ ಎಂದು ಕರೆದು ಮೇಲೇರಿಸಿದ ಮನರಂಜನೆ ತಾತ್ಕಾಲಿಕ. ಮಧ್ಯವರ್ತಿಗಳು ಈಗಲೂ ಇದೇ ಮನರಂಜನೆಯಲ್ಲಿ ಆತ್ಮವಂಚನೆಯ ಕಾರ್ಯಕ್ರಮ ನಡೆಸಿದರೆ ಸರಿಯಾಗದು.
ಬದಲಾವಣೆ ಆಂತರಿಕವಾಗಿದ್ದರೆ ಉತ್ತಮ ಪ್ರಗತಿ.
ನಕಾರಾತ್ಮಕ ಶಕ್ತಿಗಳನ್ನು ಬಳಸಿ ಸಕಾರಾತ್ಮಕ ಶಕ್ತಿಯನ್ನು ಹಿಂದುಳಿಸಿದರೂ ಕೊನೆಗೆ ಉಳಿಯೋದು ಸಕಾರಾತ್ಮಕ ಶಕ್ತಿ.ಇದೇ ದೈವತ್ವ.
ಭಾರತೀಯರ ಸ್ವತಂತ್ರ ಜ್ಞಾನಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ವಾದರೂ ಶಿಕ್ಷಣ ಮಾತ್ರ ಜ್ಞಾನದೆಡೆಗೆ ಹೋಗದೆ ಅತಂತ್ರಸ್ಥಿತಿಗೆ ಜನಜೀವನ ನಿಂತಿರೋದು ದುರಂತ.
No comments:
Post a Comment