ಹಿಂದಿನ ಧರ್ಮ ರಕ್ಷಣೆಗೂ ಈಗಿನ ಧರ್ಮ ರಕ್ಷಣೆಗೂ ವ್ಯತ್ಯಾಸವೇನು?
ಹಿಂದಿನ ಧರ್ಮ ಆಂತರಿಕ ಶುದ್ದಿಯಿಂದ ನಡೆದು ಭೌತಿಕದಲ್ಲಿ ರಕ್ಷಣಾಕಾರ್ಯ ವಿತ್ತು.ಈಗ ಭೌತಿಕದೆಡೆಗೆ ನಡೆಯುತ್ತಾ ಆಂತರಿಕ ಶುದ್ದಿಯಿಲ್ಲದ ಆಚರಣೆಯಾಗಿದೆ.ಅಂದು ಹಣ ಸಂಪಾದನೆಯಿಲ್ಲದೆಯೇ ಜ್ಞಾನಸಂಪಾದನೆಗೆ ಒಲವಿತ್ತು ಈಗ ಹಣವಿಲ್ಲದೆ ಜ್ಞಾನಕ್ಕೆ ಬೆಲೆಯೇ ಇಲ್ಲ.ಅಂದಿನ ಶಿಕ್ಷಣವು ಸತ್ಯ ಶುದ್ದ ಧರ್ಮ ಜ್ಞಾನವಾಗಿತ್ತು. ಇಂದು ಅಸತ್ಯ ಅಶುದ್ದವಾದ ವಿಷಯಜ್ಞಾನವಾಗಿದೆ. ಅಂದಿನ ವಿಜ್ಞಾನ ಅಧ್ಯಾತ್ಮ ಬಿಟ್ಟು ಹೋಗಿರಲಿಲ್ಲ ಇಂದಿನ ವಿಜ್ಞಾನ ಅಧ್ಯಾತ್ಮದ ವಿರುದ್ದವೇ ನಿಂತು ಮುಂದೆ ಹೋಗಿದೆ. ಅಂದಿನ. ಸಂನ್ಯಾಸಿಗಳಿಗೆ ಯಾವ ಸಂಸಾರಿಗಳ ಸಹಾಯದ ಅಗತ್ಯವಿರಲಿಲ್ಲ.ಇಂದು ಸಂನ್ಯಾಸ ಸ್ವೀಕರಿಸುವುದಕ್ಕೂ ಸಂಸಾರಿಗಳ ಸಹಕಾರ ಬೇಕು.ಅಂದಿನ ಭಾರತದಲ್ಲಿ ರಾಜಾಡಳಿತವಿತ್ತು ಇಂದಿನ ಭಾರತ ಪ್ರಜಾಪ್ರಭುತ್ವ ವಾಗಿದೆ. ಅಂದಿನ ಶ್ರೀಮಂತ ರಾಜರು ಸ್ವಧರ್ಮ, ಸ್ವರಾಜ್ಯಕ್ಕಾಗಿ ಸ್ವತಃ ಜೀವಭಯಬಿಟ್ಟು ಯುದ್ದ ದಲ್ಲಿ ಹೋರಾಟ ಮಾಡಿ ಕ್ಷಾತ್ರಧರ್ಮ ಉಳಿಸಿದ್ದರು.ಇಂದಿನ ರಾಜಕಾರಣಿಗಳಿಗರ ತಮ್ಮ ಜೀವಕ್ಕಾಗಿ ಅಧಿಕಾರಕ್ಕಾಗಿ ಸ್ವಧರ್ಮ ಬಿಟ್ಟರೂ ಸರಿ ರಾಜ್ಯ ಹೋದರೂ ಸರಿ ಅಧಿಕಾರ ಮಾತ್ರ ಬಿಡೋದಿಲ್ಲವೆನ್ನುವ ಹೋರಾಟದಲ್ಲಿರುವರು.
ಇವೆಲ್ಲವೂ ನಮಗೆ ಕಾಣುವ ಸತ್ಯ.ಹಾಗಾದರೆ ತಪ್ಪು ಯಾರದ್ದು ಎಲ್ಲಿದೆ? ಎನ್ನುವ ಪ್ರಶ್ನೆಗೆ ಉತ್ತರ ಒಳಗಿರುವ ತಪ್ಪು ಕಣ್ಣಿಗೆ ಕಾಣುತ್ತಿಲ್ಲ.ಹೊರಗಿನ ತಪ್ಪು ಕಾಣುತ್ತಿದೆ.ಹೊರಗೆ ಹೋರಾಟ ನಡೆಸಿದರೂ ಒಳಗಿನ ತಪ್ಪು ಸರಿಯಾಗದೆ ಹೋರಾಟ ವ್ಯರ್ಥ. ಹಣವನ್ನು ದುರ್ಭಳಕೆ ಮಾಡಿಕೊಂಡು ಎಷ್ಟೇ ಹೋರಾಡಿದರೂ ಸಾಲವಾಗುತ್ತಾ ತಿರುಗಿ ಬರೋವಾಗ ಒಳಗಿರುವ ತಪ್ಪಿಗೆ ಶಿಕ್ಷೆ ಹೆಚ್ಚಾಗುವುದು.
ಇದೇ ಕಾರಣಕ್ಕಾಗಿ ಭಾರತ ಬಡತನದಿಂದ ದೂರವಾಗದೆ ಇನ್ನಷ್ಟು ಸಾಲದೆಡೆಗೆ ನಡೆದಿದೆ.ಆಂತರಿಕ ಶುದ್ದಿಗಾಗಿ ನೀಡುವ ಶಿಕ್ಷಣ ಕೊಡಬೇಕಾದವರೆ ಭ್ರಷ್ಟರ ಹಿಂದೆ ನಿಂತು ಬೇಡಿದರೆ ಭ್ರಷ್ಟಾಚಾರ ಹೋಗುವುದೆ? ಹಣದ ಶ್ರೀಮಂತ ರಲ್ಲಿರುವ ಜನರ ಋಣ ತೀರಿಸಲು ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆಇಲ್ಲದೆ ದಾನ ಧರ್ಮ ಕಾರ್ಯ ನಡೆಸಬೇಕೆಂದು ಹಿಂದೂ ಧರ್ಮ ತಿಳಿಸುತ್ತದೆ ಆದರೆ ಆಗಿರೋದೇನು ದೇಶವನ್ನು ಆಧುನಿಕತೆಯಿಂದ ಶೃಂಗಾರ ಮಾಡಲು ಸ್ಮಾರ್ಟ್ ಆಗಿ ಕಾಣೋದಕ್ಕೆ ವಿದೇಶಿ ತಂತ್ರಜ್ಞಾನ ಬಳಸುತ್ತಾ ಒಳಗೇ ಅಡಗಿದ್ದ ಸರಳ ಸುಂದರ ಸಾತ್ವಿಕ ಶಕ್ತಿಗೆ ಅವಮಾನ ಮಾಡುವ ಮೂಲಕ ದೇಶದ ಸ್ತ್ರೀ ಯರ ಆಂತರಿಕ ಜ್ಞಾನಶಕ್ತಿಯನರಿಯದೆ ಸರಿಯಾದ ಶಿಕ್ಷಣ ನೀಡದೆ
ಭೌತಿಕದೆಡೆಗೆ ಎಳೆದರೆ ಭಾರತಮಾತೆ ಕಾಣೋದಿಲ್ಲ.ವಿದೇಶಿ ಮಹಿಳೆಯಾಗಬಹುದು. ಒಟ್ಟಿನಲ್ಲಿ ಸರಳವಾಗಿ ಜೀವನ ನಡೆಸಿದ ಭಾರತೀಯರಿಗೂ ವೈಭೋಗದಲ್ಲಿ ಜೀವನನಡೆಸುವ ವಿದೇಶಿ ನಾಗರೀಕತೆಗೂ ವ್ಯತ್ಯಾಸವಿಷ್ಟೆ. ಭಾರತೀಯತೆಯಿಂದ ಋಣಮುಕ್ತರಾಗಿ ಜೀವನ್ಮುಕ್ತಿ ಸಿಗುತ್ತದೆ. ವಿದೇಶಿವಿಜ್ಞಾನದ ಹಿಂದೆ ನಡೆದರೆ ಇನ್ನಷ್ಟು ಸಾಲ ಬೆಳೆದು ಜೀವನವೇ ವ್ಯರ್ಥ ವಾಗುತ್ತದೆ. ಆದರೆ ಇತ್ತೀಚೆಗೆ ವಿದೇಶಿಗರು ಭಾರತೀಯ ಧರ್ಮ ಸಂಸ್ಕೃತಿ ಕಡೆಗೆ ಒಲವು ತೋರಿಸಿ ತಮ್ಮನ್ನು ತಾವು ಬದಲಾಯಿಸಿಕೊಳ್ಳಲು ಪ್ರಯತ್ನ ಪಟ್ಟರೂ ಭಾರತೀಯರೆ ವಿದೇಶದೆಡೆಗೆ ಹೋಗುತ್ತಾ ಸಾಧಕರಂತೆ ನಟನೆ ಮಾಡಿಕೊಂಡು ಮನೆಯೊಳಗಿದ್ದ ಮಕ್ಕಳು ಮಹಿಳೆಯರನ್ನು ಕೀಳಾಗಿ ಕಾಣುತ್ತಿರುವುದೆ ದುರಂತ. ಒಟ್ಟಿನಲ್ಲಿ ಅಂದಿನ ರಾಜಯೋಗದ ಆತ್ಮಜ್ಞಾನ ಇಂದಿನ ರಾಜಕೀಯದ ವಿಜ್ಞಾನ ಒಂದರ ಮುಖ ಇನ್ನೊಂದು ನೋಡದೆ ವಿರುದ್ದ ದಿಕ್ಕಿನಲ್ಲಿ ನಡೆದರೂ ವ್ಯವಹಾರದ ವಿಷಯದಲ್ಲಿ ಎರಡೂ ಹಣವೇ ಸರ್ವಸ್ವ ಎಂದರೆ ಜ್ಞಾನದ ಗತಿ ಅಧೋಗತಿ. ಭೂಮಿಯ ಮೇಲಿದ್ದೇ ನಭೋಮಂಡಲದ ಸಂಶೋಧನೆ ನಡೆಸಿ ಮನುಕುಲ ರಕ್ಷಣೆ ಮಾಡಿದ್ದ ಋಷಿಪರಂಪರೆಗೂ ಭೂಮಿಯನ್ನೇ ಸಿಡಿಸಿ ಪ್ರಕೃತಿ ವಿರುದ್ದ ನಡೆದು ಆಕಾಶದೆತ್ತರ ಹಾರುತ್ತಾ ಮನುಕುಲ ಭಕ್ಷಣೆಯಾದರೂ ಸರಿ ಎನ್ನುವ ಇಂದಿನ ಸಂಶೋಧನೆಗೂ ಬಹಳ ವ್ಯತ್ಯಾಸವಿದೆ. ಮೊದಲು ಮಾನವನಾಗಿ ನಂತರ ಮಹಾತ್ಮರಾಗುತ್ತಿದ್ದ ಕಾಲ ಹೋಗಿ ಮೊದಲೇ ಅಸುರಶಕ್ತಿಗೆ ದಾಸರಾಗುವ ಮಾನವನಿಗೆ ದೈವತ್ವದೆಡೆಗೆ ಹೋಗಲು ಕಷ್ಟ. ಒಳಗೇ ಅಡಗಿರುವ ದೇವಾಸುರ ಗುಣಜ್ಞಾನದಿಂದ ಮಾನವ ಜೀವನ ನಡೆಸಿರೋವಾಗ ಯಾವ ಶಕ್ತಿಯನ್ನು ಹೆಚ್ಚಿಸಿ ಕೊಂಡರೆ ಜೀವನ ಸಾರ್ಥ ಕ ಎನ್ನುವ ಸಾಮಾನ್ಯಜ್ಞಾನ ಇದ್ದರೆ ಎಲ್ಲಾ ಸಮಸ್ಯೆಯ ಮೂಲವೇ ನಮ್ಮ ಅಜ್ಞಾನ.
ಅತಿಯಾದ ಜ್ಞಾನವೂ ಅಜ್ಞಾನವಾಗಬಹುದು. ಅತಿಯಾದ ಅಜ್ಞಾನವೂ ಜ್ಞಾನದೆಡೆಗೆ ಎಳೆಯಬಹುದು. ಅಂದರೆ ಕೆಲವರಿಗಷ್ಟೆ ಇಂತಹ ಬದಲಾವಣೆ ಸಾಧ್ಯ.
ಭಗವಾನ್ ಬುಧ್ದನ ಮುಂದೆ ನಿಂತ ಅಂಗುಲಿಮಾಲ ಹೇಗೆ ಸಾತ್ವಿಕ ಶಕ್ತಿ ಬದಲಾಯಿಸಿತೋ ಹಾಗೆ ಮಾನವನೊಳಗಿರುವ ಸತ್ವ ರಜಸ್ಸು ತಮಸ್ಸಿನ ಶಕ್ತಿ ಯ ಮೇಲೇ ಅವನ ಮುಂದಿನ ಜನ್ಮದ ನಿರ್ಧಾರ. ಕೆಲವರಿಗೆ ನಿಧಾನವಾಗಿ ಆತ್ಮಜ್ಞಾನ ಸಿಕ್ಕರೆ,ಕೆಲವರಿಗೆ ಬೇಗ ಸಿಗಬಹುದು.ಆದರೆ ಅದನ್ನು ಹೇಗೆ ಬಳಸುವರೋ ಅದೇ ಮುಖ್ಯ. ವ್ಯವಹಾರವೇ ಮುಖ್ಯವಾದರೆ ಹಣದ ಶ್ರೀಮಂತ ಧರ್ಮ ವೇ ಮುಖ್ಯವಾದರೆ ಜ್ಞಾನದ ಶ್ರೀಮಂತ. ಈಗ ಎಲ್ಲಾ ತರಹದ ವ್ಯಕ್ತಿಗಳಿರುವರು.ಆದರೂ ಅಧರ್ಮ ಮುಗಿಲುಮುಟ್ಟಿದೆ ಎಂದರೆ ಜ್ಞಾನ ಸದ್ಬಳಕೆಯಾಗದೆ ದುರ್ಭಳಕೆ ಆಗಿದೆ ಎಂದರ್ಥ. ಇದರ ಫಲ ಅನುಭವಿಸೋದೂ ಒಳಗಿನ ಜೀವವೇ.ಪರಮಾತ್ಮನಿಗೆ ಏನೂ ಆಗದು.ಕಾರಣ ಅವನು ಸರ್ವಾಂತರ್ಯಾಮಿ.
ಭಾರತವನ್ನು ವಿದೇಶ ಮಾಡೋದು ಅಜ್ಞಾನವಷ್ಟೆ.
ವಿದೇಶವನ್ನು ಭಾರತ ಮಾಡೋದು ಜ್ಞಾನ.ಹಾಗಾಗಿ ನಾವೀಗ ಏನು ಮಾಡುತ್ತಿರೋದೆಂದು ನಮ್ಮ ಮಕ್ಕಳಿಗೆ ಕೊಡುವ ಶಿಕ್ಷಣದಲ್ಲಿಯೇ ತಿಳಿಯಬಹುದು.ಇದನ್ನು ನಾವೇ ಕೊಡುತ್ತಿರುವಾಗ ಇದರ ಫಲ ನಮಗೆ ಮುಂದೆ ಸಿಗುತ್ತದೆ.
ಈಗ ಕಷ್ಟವಾದರೂ ಮುಂದೆ ಸುಖವಿರುತ್ತದೆ.ಈಗ ಸುಖವಿದ್ದರೆ ಮುಂದೆ ಕಷ್ಟವಿರುತ್ತದೆ. ಆಯಸ್ಸು ಆರೋಗ್ಯವಿದ್ದಾಗಲೇ ಕಷ್ಟಪಟ್ಟು ಒಳ್ಳೆಯ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಸುಖವಿರುತ್ತದೆ. ಮುಂದೆ ಮಾಡೋಣ
ವೆಂದರೆ ಆಯಸ್ಸು ಆರೋಗ್ಯ ಹೇಗಿರುವುದೆಂದು ಹೇಳಲಾಗದು. ಒಟ್ಟಿನಲ್ಲಿ ಕಷ್ಟಪಟ್ಟರೆ ಸುಖವಿದೆ.ಅದು ಅಧ್ಯಾತ್ಮದ ದಾರಿಯಾಗಿದ್ದರೆ ಆತ್ಮತೃಪ್ತಿ.
ಭಗವಂತನ ಇಚ್ಚೆಯಿಲ್ಲದೆ ಏನೂ ನಡೆಯದು ಹಾಗಾದರೆ ಭಗವಂತ ಇರೋದೆಲ್ಲಿ? ಅಧರ್ಮ ಧರ್ಮ,ಸತ್ಯ ಅಸತ್ಯದ ಮಾನವನಲ್ಲಿ. ಪ್ರಾಣಿಪಕ್ಷಿ ಜೀವಜಂತು ಪ್ರಕೃತಿಯ ಚರಾಚರದಲ್ಲಿಯೂ ಅಡಗಿರುವ ಮಹಾಶಕ್ತಿಯನ್ನು ದುರ್ಭಳಕೆ ಮಾಡಿಕೊಂಡು ಆಳಿದರೆ ಅಸುರೀಶಕ್ತಿ ಬೆಳೆಯುವುದು. ಅವುಗಳನ್ನು ಸ್ವತಂತ್ರವಾಗಿ ಬಿಟ್ಟು ತನ್ನ ತಾನರಿತು ಬದುಕಲು ಕಲಿತರೆ ಅದೇ ದೈವಶಕ್ತಿಯಾಗುತ್ತದೆ.
ಇದಕ್ಕೆ ಸತ್ಯ ಹಾಗೂ ಧರ್ಮ ದಿಂದ ಆಂತರಿಕ ಶುದ್ದಿಯ ಅಗತ್ಯವಿತ್ತು. ಇದನ್ನು ಹಣದಿಂದ ಖರೀದಿಸಲಾಗದು.ಸ್ವಪ್ರಯತ್ನ ಅಗತ್ಯ.ರಾಜಕೀಯದಿಂದ ಕಷ್ಟ ರಾಜಯೋಗದಿಂದ ಸಾಧ್ಯವಿದೆ. ನರೇಂದ್ರರು ನರರನ್ನು ಆಳಲಿಲ್ಲ.ವಿವೇಕದಿಂದ ತನ್ನ ತಾನರಿತು ವಿವೇಕಾನಂದರಾದರು. ಯಾವ ಇಂದ್ರನೇ ಆಗಲಿ ಜ್ಞಾನದಿಂದ ರಾಜನಾದರೆ ಉತ್ತಮ ದೇವಲೋಕ ಸೃಷ್ಟಿ ಯಾಗುತ್ತದೆ. ವಿಜ್ಞಾನದ ಅಮಲಿನಲ್ಲಿ ನಡೆದರೆ ಅಜ್ಞಾನವೇ ಅಸುರರಿಗೆ ದಾರಿಮಾಡಿಕೊಡುವುದಲ್ಲವೆ? ಹಿಂದೆಯೂ ಇದೇ ರೀತಿಯಲ್ಲಿ ದೇವತೆಗಳು ತಮ್ಮ ಸ್ವಾರ್ಥ ಸುಖಕ್ಕಾಗಿ ಮೈಮರೆತಿರುವಾಗ ಅಸುರರು ದೇವಲೋಕವನ್ನು ಗೆದ್ದು ದೇವತೆಗಳನ್ನು ಆಳಿದ ಎಷ್ಟೋ ಪುರಾಣಕಥೆಗಳಿವೆ ಎಂದರೆ ಈಗ ನಾವ್ಯಾರು? ಅಸುರರೆಲ್ಲಿರೋದು? ನಮ್ಮೊಳಗೇ ಇರುವ ಅತಿಯಾದ ಸ್ವಾರ್ಥ ಅಹಂಕಾರದಿಂದ ದೈವಶಕ್ತಿ ಕ್ಷೀಣಿಸಿ ಅಸುರಶಕ್ತಿಗೆ ನಾವೇ ಸಹಕಾರ ಕೊಟ್ಟು ನಮ್ಮವರನ್ನೇ ದ್ವೇಷ ಮಾಡುತ್ತಾ ಪರಕೀಯರೆಡೆಗೆ ದೇಶವನ್ನು ನಡೆಸಿದರೆ ಇದು ಅಧರ್ಮ. ಸರ್ಕಾರಗಳು ಜನರ ಬೇಡಿಕೆಗಳನ್ನು ಪೂರೈಸಲು ಸಾಲ ಮಾಡಿದರೂ ಅದನ್ನು ತೀರಿಸದೆ ಜನರ ಸಮಸ್ಯೆ ತೀರದು. ಹಾಗಾಗಿ ಸರಳ ಜೀವನ ಸ್ವಾವಲಂಬನೆ, ಸ್ವಾಭಿಮಾನ ಸ್ವತಂತ್ರ ಜ್ಞಾನವೇ ಈಗಿರುವ ದಾರಿ.ಬಡತನ ನಿವಾರಣೆಗೆ ಹಣ ಕ್ಕಿಂತ ಜ್ಞಾನವೇ ಮುಖ್ಯ. ಹಸಿದ ಹೊಟ್ಟೆಗೆ ಒಂದು ಹೊತ್ತಿನ ಊಟ ಕೊಟ್ಟು ಕೆಲಸಕೊಟ್ಟರೆ ಮಾನವ ಮಹಾತ್ಮನಾಗಬಹುದು. ಮೂರೂ ಹೊತ್ತು ಉಚಿತತಿಂದು ಮಲಗಿದರೆ ಮರಣವೇ ಗತಿ. ಸೋ'ಮಾರಿ' ಒಳಗಿರುವ ಮಾರಿಯನ್ನು ಒಳಗಿನಿಂದ ಓಡಿಸಲು ಜ್ಞಾನದಿಂದ ಸಾಧ್ಯ.ಯೋಗಿಗಳ ದೇಶವನ್ನು ಭೋಗದೆಡೆಗೆ ನಡೆಸಿ ರೋಗಿಗಳ ದೇಶ ಮಾಡುತ್ತಾ ವೈದ್ಯರನ್ನು ಆಸ್ಪತ್ರೆ ಗಳನ್ನು ಕಟ್ಟುವ ಕೆಲಸ ಮಾಡಲು ಸಾಕಷ್ಟು ಹಣ ಬೇಕು.ಆದರೆ ಅದೇ ರೋಗ ನಿವಾರಣೆಗೆ ಉತ್ತಮವಾದ ಸತ್ಯ ಸಾತ್ವಿಕ ತತ್ವಜ್ಞಾನದ ಶಿಕ್ಷಣ ನೀಡುತ್ತಾ ಒಳಗಿದ್ದ ನಕಾರಾತ್ಮಕ ಶಕ್ತಿಯನ್ನು ಸಕಾರಾತ್ಮಕ ಶಕ್ತಿಯಿಂದ ಹೋಗಲಾಡಿಸಿ ದೇಹದ ಜೊತೆಗೆ ಆತ್ಮಶುದ್ದಿ ಮಾಡಿದ್ದರೆ ಈಗ ಇಂತಹ ಸ್ಥಿತಿಗೆ ಭಾರತದೇಶ ಬರುತ್ತಿರಲಿಲ್ಲ.ಈಗಲೂ ಇದಕ್ಕೆ ಅವಕಾಶ ನೀಡದೆ ವಿರುದ್ದ ನಿಂತಿರುವ ಪೋಷಕರಿಗೆ ಜೀವನದ ಸತ್ಯ ಅರ್ಥ ಮಾಡಿಸೋ ಬದಲು ತಿಳಿದವರು ತಿರುಗಿ ಬಂದು ಮಕ್ಕಳ ಆತ್ಮಶುದ್ದಿಗೆ ತಾವೂ ಅಧ್ಯಾತ್ಮದ ಕಡೆಗೆ ನಡೆದರೆ ಬದಲಾವಣೆ ಒಳಗೆ ಆಗುತ್ತದೆ. ಇದಕ್ಕೆ ಹಣವನ್ನು ಸದ್ಬಳಕೆ ಮಾಡಿಕೊಳ್ಳುವ ಜ್ಞಾನವಿರಬೇಕು.ಹೊರಗಿನ ಆಸ್ತಿ ಅಂತಸ್ತು ಮಾನವರು ಗುರುತಿಸಬಹುದು.ಒಳಗಿನ ಜ್ಞಾನದ ಆಸ್ತಿ ಅಂತಸ್ತು ಒಳಗಿನ ದೇವರಷ್ಟೆ ಕಾಣಬಹುದು. ಯಾರ ಕಡೆಗೆ ಮನಸ್ಸು ನಡೆದರೆ ಸುಖ ಶಾಂತಿ ತೃಪ್ತಿ ಮುಕ್ತಿ ಸಿಗುತ್ತದೆ?
16 ವರ್ಷಗಳ ಲೇಖನಗಳಲ್ಲಿ ಅಧ್ಯಾತ್ಮ ಸತ್ಯವಿದ್ದರೂ ಭೌತಿಕದ ರಾಜಕೀಯಕ್ಕೆ ಬಲಿಯಾದವರಿಗೆ ಸತ್ಯ ಕಾಣಲಿಲ್ಲ ಎಂದರೂ ಸತ್ಯ ಯಾವತ್ತೂ ಬದಲಾಗದು. ಒಂದೇ ಸತ್ಯ ಅದೇ ನಮ್ಮ ಆತ್ಮಸಾಕ್ಷಿಯಾಗಿದೆ. ಇದೇ ನಮ್ಮ ಜನ್ಮ ಜನ್ಮದ ಕಥೆಯಾಗಿರುತ್ತದೆ. ಕಥೆ ಬರೆಯುವವರಿಗೆ ಹಣ ಸಿಕ್ಕರೂ ಒಳಗಿದ್ದ ಜ್ಞಾನ ಸಿಗದಿದ್ದರೆ ವ್ಯಥೆಯೇ ಹೆಚ್ಚು. ಕಷ್ಟ ಸುಖ ನಿರಂತರವಾಗಿ ಹರಿದಾಡುತ್ತದೆ.ಆದರೆ ಅದನ್ನು ಹೇಗೆ ಸ್ವೀಕಾರ ಮಾಡಿದರೆ ಒಳ್ಳೆಯದೆಂದು ಮಾನವನಿಗೆ ತಿಳಿಸುವ ಮಹಾತ್ಮರ ಕೊರತೆಯಿದೆ. ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರು ಯಾರು? ಇದು ನಮ್ಮ ದೇಶದ ಕಥೆಯಾಗಬಾರದಷ್ಟೆ.
ದ್ವೇಷ ಭಿನ್ನಾಭಿಪ್ರಾಯ, ಅಸೂಯೆ,ಕಲಹ,ಕ್ರಾಂತಿಕಾರಕ ಬೆಳವಣಿಗೆಯಲ್ಲಿ ಧರ್ಮ ಎಲ್ಲಿದೆ? ಸತ್ಯ ಯಾವುದು?
ರಾಜಕೀಯ ಬಿಟ್ಟು ದೇಶ ನೋಡಿದರೆ ಸತ್ಯದರ್ಶನ ಸಾಧ್ಯ.
ನಮ್ಮ ಮುಂದಿನನಡಿಗೆ ಮೇಲಿದೆ ಭಾರತದ ಭವಿಷ್ಯ. ನಡಿಗೆ ಒಳಗಿದ್ದರೆ ಧರ್ಮ ರಕ್ಷಣೆ ಸಾಧ್ಯ. ಮತ್ತಷ್ಟು ಹೊರಗೆ ಹೋದರೆ ತಿರುಗಿ ಬರೋದು ಕಷ್ಟ. ಆದರೂ ಮುಂದೆ ನಡೆದವರನ್ನು ತಡೆಯಬಾರದು.ಹಿಂದೆ ನಡೆಯುವವರನ್ನು ಸರಿದಾರಿಯಲ್ಲಿ ನಡೆಯಲು ಬಿಟ್ಟರೆ ಸಾಕು ಆತ್ಮನಿರ್ಭರ ಭಾರತವಾಗುವುದು. ಮಧ್ಯವರ್ತಿಗಳ ಕುತಂತ್ರದಿಂದ ಅತಂತ್ರಸ್ಥಿತಿಗೆ ಜನಜೀವನವಾಗುತ್ತಿದೆ. ಉಚಿತವಾದ ಸಲಹೆ ಸೂಚನೆ ಯೋಜನೆ ಭಾಗ್ಯಗಳೇ ಎಲ್ಲಾ ಸಮಸ್ಯಯ ಮೂಲ.
No comments:
Post a Comment