ವಿಶ್ವ ಪರಿಸರದಿನದ ಶುಭಾಷಯಗಳು.
ನಿಮ್ಮ ನಿಮ್ಮ ಮನವ ಶುದ್ದವಾಗಿಡಿ,ನಿಮ್ಮ ನಿಮ್ಮ ತನುವ ಶುದ್ದವಾಗಿಡಿ ನಿಮ್ಮನಿಮ್ಮ ಮನೆಯ ಶುದ್ದವಾಗಿಡಿ ಆಗ ಪರಿಸರ ಶುದ್ದವಾಗಿರುವುದೆನ್ನಬಹುದೆ? ಯಾರದ್ದೋ ಮನೆಯಲ್ಲಿ ಯಾರೋ ವಾಸವಾಗಿರೋದು ಯಾರದ್ದೋ ದೇಶದಲ್ಲಿ ಯಾರೋ ವಾಸವಾಗೋದು ಯಾರದ್ದೋ ವಿಚಾರವನ್ನು ಯಾರೋ ಪ್ರಚಾರಮಾಡೋದು ಯಾರದ್ದೋ ಜೀವನವನ್ನು ಯಾರೋ ತೀರ್ಮಾನ ಮಾಡೋದು.
ಯಾರೊಳಗೆ ಯಾರಿರುವರೆನ್ನುವುದೇ ಗೊತ್ತಿಲ್ಲ ನಮಗೆ ಕೊನೆಪಕ್ಷ ನಮ್ಮೊಳಗೆ ಯಾರಿರೋದೆನ್ನುವ ಸತ್ಯದ ಅರಿವಾದರೆ ಪ್ರಕೃತಿ ಯ ಜೊತೆಗೆ ಪರಿಸರವೂ ಉತ್ತಮವಾಗಿ ಸದ್ಬಳಕೆಯಾಗುತ್ತದೆ. ಯಾರನ್ನೂ ಯಾರೋ ಆಳೋದರ ಬದಲು ನಮ್ಮನ್ನು ನಾವು ಆಳಿಕೊಳ್ಳಲು ಬೇಕಾದ ಸದ್ವಿಚಾರವಿದ್ದರೆ ಅದೇ ಪ್ರಗತಿ.
ಪರಿಸರ ಸಂರಕ್ಷಣೆಗಾಗಿ ಸಾಕಷ್ಟು ಕಾರ್ಯಕ್ರಮಕ್ಕೆ ಹಣ
ಬಳಸುತ್ತಾರೆ, ಜನರನ್ನು ಎಚ್ಚರಿಸುತ್ತಾರೆ.ಮಕ್ಕಳಿಗೆ ಪಾಠ ಮಾಡುತ್ತಾರೆ.ಮೆರವಣಿಗೆಯ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಾರೆ. ಇವೆಲ್ಲವೂ ಭೌತಿಕದ ಕಾರ್ಯಕ್ರಮ. ಇದೊಂದು ದಿನದಂದು ನಡೆದ ಕಾರ್ಯಕ್ರಮ ಇಡೀ ವರ್ಷದ ಬದಲಾವಣೆಗೆ ಸಹಕಾರ ಮಾಡಿದ್ದರೆ ಪ್ರಕೃತಿ ವಿಕೋಪ,ಪರಿಸರ ಮಾಲಿನ್ಯವಿಲ್ಲದೆ ಮಾನವನಿಗೆ ಸಮಸ್ಯೆಗಳಿಂದ ಬಿಡುಗಡೆ ಸಿಗುತ್ತದೆ. ತೋರುಗಾಣಿಕೆಯ ಆಚಾರ ವಿಚಾರ ಪ್ರಚಾರವು ತಾತ್ಕಾಲಿಕ ವಷ್ಟೆ.ಆಂತರಿಕ ಶುದ್ದಿಯಾಗುವ. ಶುದ್ದ ಸತ್ಯ ಸತ್ವ ತತ್ವದ ವಿಚಾರವನ್ನು ವಿರೋಧಿಸಿ ಹೊರಗಿನ ರಾಜಕೀಯದ ಹಣ ಬಳಸಿ ಜನರನ್ನು ಮನೆಯಿಂದ ಹೊರಗೆಳೆದು ನಡೆಸುವ ಕಾರ್ಯಕ್ರಮದಲ್ಲಿ ಸಾಕಷ್ಟು ಹಣ ದುರ್ಭಳಕೆ ಜನರ ಸಮಯದ ಜೊತೆಗೆ ಹಣವೂ ಹಾಳು. ಅರಿವನ್ನು ಮೂಡಿಸುವಂತಿದ್ದರೆ ಶಿಕ್ಷಣ ಸರಿಪಡಿಸಬೇಕು. ಶಿಕ್ಷಣ ಸರಿಪಡಿಸಲು ಪೋಷಕರ ಸಹಕಾರಬೇಕು.ಪೋಷಕರ ಸಹಕಾರ ವಿದ್ದರೂ ಶಿಕ್ಷಕರಲ್ಲಿ ಸರಿಯಾದ ಮಾಹಿತಿಯಿರಬೇಕು. ಎಲ್ಲರಿಗೂ ಪ್ರಕೃತಿ ಬೇಕು ಆದರೆ ಅದನ್ನು ವಿಕೃತಗೊಳಿಸಿ ಆಳುವವರನ್ನು ತಡೆಯುವುದು ಸಾಧ್ಯವಾಗಿಲ್ಲ ಅದಕ್ಕೆ ಸಹಕಾರ ಕೊಟ್ಟ ಕೆಲವರು ಪರಿಸರ ದಿನಾಚರಣೆ ನಡೆಸುವವರಿದ್ದಾರೆ. ಯಾವ ಆಚರಣೆಯಿಲ್ಲದೆಯೇ ದೈವತ್ವ ಪಡೆದವರಿದ್ದಾರೆ ಶರಣರಾಗಿ ದಾಸರಾಗಿ ಸಂತರಾಗಿ ಮಹಾತ್ಮರಾದವರಿದ್ದಾರೆಂದರೆ ಅವರು ಪರಿಸರವನ್ನು ತಮ್ಮ ಜ್ಞಾನದಿಂದ ಶುದ್ದಗೊಳಿಸಿದ್ದರು.
ಯಾರೂ ಆಳುವ ರಾಜಕೀಯ ನಡೆಸಿರಲಿಲ್ಲ. ಪ್ರಜಾಪ್ರಭುತ್ವದ ಪ್ರಜೆಗಳಿಗೆ ಈಗಲೂ ತಮ್ಮದೇ ಆದ ಕುಟುಂಬದ ಪರಿಸರವಿದೆ ಅದನ್ನು ತತ್ವವನರಿತು ಒಗ್ಗಟ್ಟಿನ ಬಲದಿಂದ ಗಟ್ಟಿಯಾಗಿಸಿಕೊಳ್ಳಲು ಹೊರಗಿನ ಕಾರ್ಯಕ್ರಮದ ಅಗತ್ಯವಿಲ್ಲ. ಪ್ರಚಾರ ಮಾಡುವವರು ಮುಖ್ಯವಾಗಿ ಪರಿಸರ ಮಾಲಿನ್ಯವನ್ನು ತಡೆಯುವಂತಿದ್ದರೆ ಉತ್ತಮ. ಮಕ್ಕಳಿಗೆ ಒಂದು ದಿನದ ಕಾರ್ಯಕ್ರಮ ನಡೆಸಲು ಕೊಡಲಾಗುವ ದೊಡ್ಡ ದೊಡ್ಡ ಚಿತ್ರಪಟಗಳು ಮರುದಿನ ಕಸದ ತೊಟ್ಟಿಗೆ ಬೀಳದಂತಿದ್ದರೆ ಉತ್ತಮ. ಇದರ ಬದಲು ಅವರ ಮನಸ್ಸಿನೊಳಗೇ ಪರಿಸರದ ಕಾಳಜಿ ಹೆಚ್ಚಿಸುವ ವಿಚಾರಗಳನ್ನು ಪ್ರತಿದಿನ ತುಂಬುವ ಕೆಲಸ ಶಿಕ್ಷಕರು ಪೋಷಕರು ಮಾಡುವಂತಿದ್ದರೆ ಸ್ವಚ್ಚ ಭಾರತ ಅಭಿಯಾನ ಯಶಸ್ವಿಯಾಗುತ್ತದೆ. ಭೂಮಿಯೊಳಗಿರೋದನ್ನು ಬಗೆದು ಹೊರತಂದರೆ ಕಸ ಅದೇ ಆತ್ಮದೊಳಗಿನ ಸತ್ಯ ಸತ್ವ ತತ್ವವರಿತು ನಡೆದರೆ ರಸ. ಕಸದಿಂದ ರಸಮಾಡುವ ಕೆಲಸ ಹೆಚ್ಚಾದರೂ ಪರಿಸರ ನಾಶ.ಒಳಗಿನ ಆತ್ಮ ಶುದ್ದತೆಯಿಂದ ಪರಿಸರ ಸಂರಕ್ಷಣೆಯ ಕೆಲಸವಾದರೆ ಮನುಕುಲಕ್ಕೆ ಹಿತ.
ಪ್ರತಿಯೊಂದರಲ್ಲಿಯೂ ತಪ್ಪು ಕಾಣುವುದು ತಪ್ಪು ನಿಜ. ಆದರೆ ಇಲ್ಲಿ ಆಂತರಿಕ ಶುದ್ದಿಯಾಗದೆ ಭೌತಿಕ ಪ್ರಸಿದ್ದಿಗೆ ಹೆಚ್ಚು ಪರಿಸರ ನಾಶವಾಗುತ್ತಿರುವಾಗ ತಪ್ಪು ನಮ್ಮೊಳಗೇ ಇದೆ ಎನ್ನುವ ವಿಷಯವಿದೆ.ನಾವೆಲ್ಲರೂ ಇದಕ್ಕೆ ಸಹಕಾರ ನೀಡಿರೋದರಿಂದ ನಮ್ಮ ಒಳಗಿನ ಪರಿಸರ ಪ್ರಜ್ಞೆ ಜಾಗೃತವಾದರೆ ಉತ್ತಮವೆನ್ನಬಹುದು. ದೇಹಕ್ಕೆ ಹೊರಗಿನಿಂದ ಕೊಡುವ ಆಹಾರದ ಜೊತೆಗೆ ಆತ್ಮಕ್ಕೆ ಕೊಡುವ ಜ್ಞಾನದ ಶಿಕ್ಷಣ ಎಷ್ಟು ಇಂದು ಅಗತ್ಯವಿದೆ ಎನ್ನುವ ಕಾರಣಕ್ಕಾಗಿ ವಿಚಾರವನ್ನು ಹೀಗೆ ತಿಳಿಸುವ ಸಣ್ಣ ಪ್ರಯತ್ನ.
ಇದಕ್ಕೆ ಸಹಕಾರಕೊಡಲಿ ಬಿಡಲಿ ಇದು ನಮ್ಮ ಆತ್ಮಕ್ಕೆ ನಾವೇ ಕೊಡುವ ಆಹಾರವಷ್ಟೆ. ನಮ್ಮಮನೆಯ ಕಸ ಹೊರಹಾಕಿದರೆ ಸಮಾಜದಲ್ಲಿ ಕಸ ಹೆಚ್ಚುವುದು. ಮನಸ್ಸಿನ ಕಸ ತೆಗೆದರೆ ಮನಸ್ಸು ಶುದ್ದವಾಗುತ್ತದೆ ಆಗ ಸಮಾಜವೂ ಶುದ್ದವಾಗಿ ಪರಿಸರ ಉತ್ತಮವಾಗುವುದು. ನಮ್ಮೊಳಗೇ ಅಡಗಿರುವ ಅತಿಯಾದ ಅಹಂಕಾರ ಸ್ವಾರ್ಥ ಬಿಡದೆ ಹೊರಗೆ ಎಷ್ಟೇ ಸ್ವಚ್ಚಕಾರ್ಯ ನಡೆಸಿದರೂ ತಾತ್ಕಾಲಿಕವಷ್ಟೆ.
ಪರಿಸರ ಮಾಲಿನ್ಯಕ್ಕೆ ಅತಿಯಾದ ವೈಜ್ಞಾನಿಕ ಚಿಂತನೆ ಕಾರಣ.ಪರಿಸರ ರಕ್ಷಣೆ ಅಧ್ಯಾತ್ಮ ಚಿಂತನೆಯಿಂದ ಸಾಧ್ಯ.
ಪ್ರಕೃತಿಯ ಸಣ್ಣ ಕಣ ಹೊಂದಿರುವ ಮಾನವ ಪ್ರಕೃತಿ ಆಳೋದಕ್ಕೆ ಹೋಗೋದೆ ಅಜ್ಞಾನ. ಹೀಗಾಗಿ ಇಂದು ಮಾನವನಿಗೆ ಮಾನವನೇ ಶತ್ರು.ಶತ್ರು ಹೊರಗಿಲ್ಲ ಒಳಗೇ ಇರೋದು. ಗಿಡನೆಡಿ ಗಿಡನೆಡಿ ಎನ್ನಬಹುದು ಗಿಡನೆಡುವಷ್ಟು ಭೂಮಿಯ ಅಗತ್ಯವಿದೆ. ಭೂ ತಾಯಿ ಸೇವೆ ಮಾಡುವವರಿಗೆ ಗೌರವವಿಲ್ಲದೆ ಮನೆಬಿಟ್ಟು ಭೂಮಿ ಕೊಟ್ಟು ಹೊರಬರೋ ಮೊದಲು ಭೂಮಿಯನ್ನು ಯಾರಿಗೆ ಕೊಟ್ಟು ಬರುತ್ತಿರುವುದೆನ್ನುವ ಜ್ಞಾನವಿದ್ದರೆ ಉತ್ತಮ. ಅಯೋಗ್ಯರಿಗೆ ಭೂಮಿ ಕೊಟ್ಟರೆ ಪರಿಸರ ಹಾಳಾಗುವುದು.ಮನೆಯೊಳಗೆ ಹೊರಗೆ ಸಣ್ಣ ಗಿಡ ಬೆಳೆಸಬಹುದು.ಆದರೆ ದೊಡ್ಡ ದೊಡ್ಡ ಮರಗಳನ್ನು ಉರುಳಿಸಿ ಕಾರ್ಖಾನೆ, ರಸ್ತೆ ಮನೆ ಮಾಡಿಕೊಂಡರೆ ಉಪಯೋಗವಿಲ್ಲ. ಸಾಧ್ಯವಾದಷ್ಟು ದೊಡ್ಡ ಮರಗಳ ರಕ್ಷಣೆ ಅಗತ್ಯ.ದೊಡ್ಡವರು ಬಿಟ್ಟು ಹೋಗಿರುವ ತತ್ವಜ್ಞಾನ ಅಗತ್ಯ.
ಅವರ ಜ್ಞಾನದಿಂದ ನಿಧಾನವಾಗಿ ಜೀವನ ನಡೆಸಿದಾಗಲೇ ಪರಿಸರದ ಉನ್ನತಿ ಸಾಧ್ಯ. ಮೊದಲೇ ಕಡಿದು ದೂರವಾಗಿ ಹೊರಗೆ ನಡೆದವರಿಗೆ ಪರಿಸರದ ಬಗ್ಗೆ ಕಾಳಜಿಯಿರದು.
ಒಟ್ಟಿನಲ್ಲಿ ಆಚರಣೆಯು ಸಾತ್ವಿಕವಾದಷ್ಟೂ ಉತ್ತಮ ಪ್ರಗತಿ.
ಬದಲಾವಣೆ ಆಗುತ್ತಿದೆ ಹೆಚ್ಚು ಸಹಕಾರವಿದ್ದರೆ ಹೆಚ್ಚು ಬೇಗ ಬದಲಾವಣೆಯಾಗುವುದು. ನಿಜವಾದ ಅದೃಷ್ಟವಂತರು ಪರಿಸರ ಸಂರಕ್ಷಕರು. ಸಂರಕ್ಷಣೆ ಆಗುತ್ತಿದೆ.
ಬದಲಾವಣೆ ನಮ್ಮೊಳಗೇ ಆಗುವುದು ಕಷ್ಟವಾದರೂ ಸಾಧ್ಯವಿದೆ ಎಂದು ಮಹಾತ್ಮರೆ ನಡೆದು ನುಡಿದಿದ್ದಾರಲ್ಲವೆ?
ನಾವೀಗ ನುಡಿಯುವುದೇ ಸುಲಭ ನಡೆಯಲು ಕಷ್ಟಪಡಬೇಕಿದೆ. ಇದಕ್ಕೆ ಸರಿಯಾದ ಸಹಕಾರ ಅವಕಾಶವೂ ಮುಖ್ಯ.
ಪ್ರತಿವರ್ಷಕೊಮ್ಮೆ ಬರೋ ದಿನಾಚರಣೆ ಮಕ್ಕಳಿಂದ ಹಿಡಿದು ಎಲ್ಲಾ ಪೋಷಕರಿಗೆ ಪರಿಸರ ವಿಚಾರ
ತಲುಪಿಸಬಹುದು.ಆದರೆ,ದಿನದಿಂದ ದಿನಕ್ಕೆ
ಹೆಚ್ಚಾಗುತ್ತಿರುವ ಪರಿಸರ ಹಾನಿಯ ಹೊರಜಗತ್ತಿನ
ಅಸಂಖ್ಯಾತ ಕಾರ್ಯಕ್ರಮಗಳನ್ನ ನಿಲ್ಲಿಸಲು ಸಾಧ್ಯ
ವಿಲ್ಲವಾದರೆ ಆಚರಣೆಯ ಉದ್ದೇಶ ಏನು?.
ಆಚರಣೆಗಳಿಂದ ಮಾನವನ ಮನಸ್ಸು ಶುದ್ದವಾಗಿ
ತನ್ನ ಸುತ್ತಲಿನ ಪರಿಸರವನ್ನೂ ಸ್ಚಚ್ಚವಾಗಿಡಬೇಕಿತ್ತು
ಇಂದು ಆಚರಣೆಗಳೇ ಪರಿಸರವನ್ನ ಹಾಳುಮಾಡಿ
ಎಲ್ಲೆಂದರಲ್ಲಿ ಮಾನವ ಕಸ ಕೊಳಕುಮಾಡಿ ತನ್ನ
ಮನರಂಜನೆಯನ್ನೇ ಮುಖ್ಯವಾಗಿಟ್ಟುಕೊಂಡು ಸಭೆ
ಸಮಾರಂಭ,ಸಮಾವೇಶ, ಪ್ರಚಾರ ಮಾಡಿಕೊಂಡು
ಊಟ,ಉಪಚಾರ, ಅನಾವಶ್ಯಕ ವಾಗಿ ಸಮಯ ಹಣವನ್ನ ಹಾಳುಮಾಡಿ,ಸಮಾಜದ ಜನರನ್ನ ದುಡಿಯದಂತೆ ಸರ್ಕಾರದ ವಿರುದ್ದ ಎತ್ತಿಕಟ್ಟಿ ತಮ್ಮರಾಜಕೀಯದ ಬೇಳೆ
ಬೇಯಿಸಿಕೊಂಡರೆ ,ಮಾನವನ ಮನಸ್ಸು ಹಾಳಾಗುತ್ತದೆ.
ಹಾಳಾದ ಮನಸ್ಸಿನ ಮಾನವನಿಗೆ ಪರಿಸರದ ಕಾಳಜಿ
ಯಿಲ್ಲದೆ ನಡೆದರೆ ,ಪರಿಸರ ಉಳಿಸುವವರು ಯಾರು?.
ಸಸಿಗಳನ್ನ ಒಮ್ಮೆ ನೆಟ್ಟು ದಿನವೂ ಮರಗಳನ್ನ ಕಡಿದರೆ
ಪ್ರಯೋಜನವಿಲ್ಲ.ಪ್ಲಾಸ್ಟಿಕ್ ನಿಂದ ಪರಿಸರ ನಾಶವೆಂದು ತಿಳಿದೂ ಪ್ಲಾಸ್ಟಿಕ್ ತಯಾರಿಕೆ ನಿಲ್ಲಿಸದೆ ಜನರಿಗೆ ಅರಿವು
ಮೂಡಿಸಲು ಹೋದರೆ ಪ್ರಯೋಜನವಿಲ್ಲ.ಮೂಲ ಸರಿಪಡಿಸದೆ ಬೆಳೆದಿರೋರೆಂಬೆಕೊಂಬೆ ಕಡಿದರೆ ಸಮಸ್ಯೆ
ಬಗೆಹರಿಯಲು ಕಷ್ಟ. ಇದು ಎಲ್ಲಾ ವಿಚಾರಕ್ಕೆ ಅನ್ವಯಿಸುತ್ತದೆ.
ದೇಶದ ಅಧರ್ಮ,ಅನ್ಯಾಯ, ಭ್ರಷ್ಟಾಚಾರ ದ ಮೂಲವೇ ನಮ್ಮ ವಿದೇಶಿ ವ್ಯಾಮೋಹದ ಶಿಕ್ಷಣ. ಮೊದಲು ಶಿಕ್ಷಣ
ದೊಳಗಿನ ಕೊಳಕನ್ನ ತೆಗೆದು ಸ್ವಚ್ಚಮಾಡಬೇಕು.
ಆದರೆ,ಪೋಷಕರೇ ಇದನ್ನ ಒಳಗೆಸೇರಿಸಿಕೊಂಡಿರುವಾಗ,
ನಮ್ಮ ಸಮಸ್ಯೆಗೆ ನಾವೇ ಕಾರಣವೆಂದು ತಿಳಿಯದೆ
ಸರ್ಕಾರದ ವಿರುದ್ದ ನಡೆದರೆ ನಮ್ಮ ಪರಿಸರದ ಕೊಳಕಿಗೆ ರೋಗವೇ ಸರಿಯಾಗಿ ಉತ್ತರ ನೀಡುತ್ತದೆ.
ಈಗ ಹೇಳಿ ಪರಿಸರ ನಮ್ಮಿಂದ ಹಾಳಾದ ಮೇಲೆ ನಾವೇ
ಸರಿಪಡಿಸಲು ಸರ್ಕಾರಕ್ಕೆ ಸಹಕರಿಸಬೇಕು ಅಂದರೆ,
ನಮ್ಮ ಅತಿಯಾದ ಹೊರಗಿನ ಆಚರಣೆಗಳನ್ನ
ಕಡಿತಗೊಳಿಸಿ ಆಂತರಿಕ ಶುದ್ದಿಗಾಗಿದಾನ ಧರ್ಮದ ಹಾದಿ ಹಿಡಿದರೆ,ಕಾಯಕವೇ ಕೈಲಾಸವಾದರೆ,ನಮ್ಮರಾಜಕೀಯ ಸಮಾವೇಶ ನಿಂತರೆ, ಹಾಗೆ ಅನಾವಶ್ಯಕ ಸಭೆ ಸಮಾರಂಭ ದಲ್ಲಿ ಸ್ವಚ್ಚತೆ ಇದ್ದರೆ,ಸಂಘ ಸಂಸ್ಥೆಗಳು ಮನರಂಜನೆಯ.
ಊಟ,ಉಪಚಾರಗಳಿಂದ ಮೈಮರೆಯದೆ ಪರಿಸರ
ಮಾಲಿನ್ಯದ ಅರಿವು ಹೆಚ್ಚಿಸಿಕೊಂಡು ನಡೆದರೆ,ನಮ್ಮ ನಮ್ಮ ಮನಸ್ಸು, ಮನೆ,ಸಂಸಾರ,ಸಮಾಜವೂ ಶುದ್ದ
ವಾಗುತ್ತದೆ. ಇಷ್ಟಕ್ಕೂ ಇಷ್ಟು ವರ್ಷ ನಡೆಸಿದ ಆಚರಣೆ
ಯಿಂದ ಮಾನವನ ಮನಸ್ಸುಶುದ್ದವಾಗಿದೆಯೆ? ಸ್ವಚ್ಚಭಾರತ ಆಗಿದೆಯೆ?
ಆಚರಣೆಗಳಿಂದ ನಾವು ಯಾವ ಧರ್ಮ ಉಳಿಸಿದ್ದೇವೆ?
.ಪ್ರಕೃತಿ ವಿಕೋಪಕ್ಕೆ ಮಾನವನ ಈ ಅನಾವಶ್ಯಕ ಹೊರ
ಆಚರಣೆಯೊಳಗಿನ ರಾಜಕೀಯ ಅಶುದ್ದತೆಯೆ ಕಾರಣ.
ಇದರಲ್ಲಿ ಕೊರೊನವೂ ಒಂದಾಗಿತ್ತು
ಇದುಧಾರ್ಮಿಕ,ರಾಜಕೀಯ,ಆರ್ಥಿಕ,ಶೈಕ್ಷಣಿಕ,ಸಾಮಾಜಿಕ ಕ್ಷೇತ್ರವನ್ನೇ ದಾರಿ ತಪ್ಪಿಸಿ ಪರಿಸರ ನಾಶಮಾಡಿದರೆ,
ಪ್ರಕೃತಿಯಿಂದ ಹುಟ್ಟಿದ ಸಣ್ಣ ಪ್ರಾಣಿಯಾದ ಮಾನವನನ್ನ ಪ್ರಕೃತಿ ಬಲಿ ತೆಗೆದುಕೊಳ್ಳುವುದರಲ್ಲಿ ತಪ್ಪಿಲ್ಲ.ಇದಕ್ಕೆ ಸರ್ಕಾರ ಕಾರಣವಲ್ಲ ನಮ್ಮ ಸಹಕಾರ ಕಾರಣ.
ಒಂದು ದಿನದ ಕಾರ್ಯಕ್ರಮಕ್ಕೆ ಹಣಸುರಿದು ಕಾಲ
ಹರಣಮಾಡೋ ಬದಲು ದಿನವೂ ಕಾರ್ಯವನ್ನ
ಕ್ರಮಬದ್ದವಾಗಿ ನಡೆಸಿಕೊಂಡು ಹೋದರೆ ನಾವು
ಸ್ವಚ್ಚ ಭಾರತೀಯ ಪ್ರಜೆಗಳಾಗಬಹುದು.ವಿದೇಶಿಗಳು ಪ್ರಾರಂಭಿಸಿದರು ನಾವು ಆಚರಿಸಿದೆವು .ಇದರಲ್ಲಿ ದಿನಕ್ಕೊಂದು ಆಚರಣೆಯಿದೆ.ಆದರೆ,ಎಲ್ಲವೂ ಹೆಸರು,ಹಣ,ಅಧಿಕಾರಕ್ಕಾಗಿ ನಡೆಸೋ ಆಚರಣೆ.
ತಪ್ಪೆನಿಸಿದ್ದರೆ ಕ್ಷಮಿಸಿ .ನಮ್ಮ ಹಲವು ಹೊರ ಆಚರಣೆ
ಪ್ರಕೃತಿ ವಿರುದ್ದ ನಡೆದಿದೆ.ಇದರಲ್ಲಿ ಪರಿಸರ ದಿನಾಚರಣೆ ಆಗಬಾರದಷ್ಟೆ.
No comments:
Post a Comment