ಯೋಗ ದಿನಾಚರಣೆಯ ಶುಭಾಶಯಗಳು.
ಭಾರತ. ಯೋಗಿಗಳ ದೇಶವಾಗಿತ್ತು.ಈಗ ಭೋಗದೆಡೆಗೆ ನಡೆದು ರೋಗಿಗಳ ದೇಶವಾಗಿ ತಿರುಗಿ ಬರಲು ಯೋಗವನ್ನು ಒಂದು ದಿನದ ಆಚರಣೆಯಾಗಿಸಿಕೊಂಡು ರಾಜಕೀಯ ನಡೆದಿದೆ. ಇಷ್ಟಕ್ಕೂ ಯೋಗ ಎಂದರೇನು?
ಯೋಗವೆಂದರೆ ಕೂಡುವುದು,ಸೇರುವುದು, ಒಂದಾಗುವುದು ಎಂದಾದಾಗ ಯಾರನ್ನು ಯಾರು ಸೇರುವುದು? ಪರಮಾತ್ಮನ ಜೀವಾತ್ಮ ಸೇರುವುದೇ ಮಹಾಯೋಗ.
ಪರಮಾತ್ಮ ಇರೋದೆಲ್ಲಿ? ಚರಾಚರದಲ್ಲಿಯೂ ಅಡಗಿರುವ ಈ ಶಕ್ತಿಯನ್ನು ಸೇರುವುದೆಂದರೆ ಕಣ್ಣಿಗೆ ಕಾಣದ ಈ ಶಕ್ತಿ ಒಳಗೂ ಹೊರಗೂ ಆವರಿಸಿರುವಾಗ ನಮ್ಮ ಉಸಿರಿನಲ್ಲಿಯೇ ಆ ಪರಮಾತ್ಮನ ದ್ಯಾನ ಜಪ ಇದ್ದರೆ ಮಾತ್ರ ಪರಮಾತ್ಮನ ಸತ್ಯ ಅರ್ಥ ವಾಗುವುದು.ಸತ್ಯವೇ ದೇವರೆಂದರೂ ಅಸತ್ಯದಲ್ಲಿ ಪರಮಾತ್ಮನ ಕಾಣಲು ಹೋದರೆ ಸಿಗೋದಿಲ್ಲ.ಒಳಗೇ ಇದ್ದರೂ ಹೊರಗೆ ಹುಡುಕುತ್ತಿದ್ದರೆ ಸಿಗೋದಿಲ್ಲ. ಧರ್ಮ ವೇ ದೇವರೆಂದರೂ ಪರಧರ್ಮದ ಬಗ್ಗೆ ಟೀಕೆ ಟಿಪ್ಪಣಿ ವಿರೋಧ ಮಾಡುತ್ತಿದ್ದರೆ ಧರ್ಮ ಬೆಳೆಯದು, ತಾಯಿ ತಂದೆಯೇ ದೇವರೆಂದರೂ ಅವರ ಧರ್ಮ ಕರ್ಮ ವನರಿಯದೆ ಋಣ ತೀರದು. ಹೀಗೇ ಮನಸ್ಸು,ಮನೆ,ಮಂದಿರ,ಮಠ,ಮಾಧ್ಯಮ ,ಮಹಿಳೆ ಮಕ್ಕಳವರೆಗೆ ಆವರಿಸಿರುವ ಈ ಪರಮಾತ್ಮನ ಶಕ್ತಿಯನ್ನು ಮಾನವನಾದವನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಯೋಗವಿರಬೇಕು.
ಭಗವದ್ಗೀತೆ ಯಲ್ಲಿರುವ ಪ್ರಮುಖವಾದ ನಾಲ್ಕು ಯೋಗ
ಜ್ಞಾನಯೋಗ,ರಾಜಯೋಗ,ಭಕ್ತಿಯೋಗ,ಕರ್ಮಯೋಗ
ಜ್ಞಾನಯೋಗ ಸತ್ಯಜ್ಞಾನದಿಂದ ಬೆಳೆದಿತ್ತು. ದೈವತತ್ವ ವು ಮಾನವನ ತಂತ್ರಕ್ಕೆ ಒಳಗಾದಾಗ ಹೊರಗಿನ ರಾಜಕೀಯ ಬೆಳೆಯಿತು. ಕ್ಷತ್ರಿಯ ಧರ್ಮದ ಪ್ರಕಾರ ತನ್ನ ತಾನರಿತಾಗಲೇ
ಭೂಮಿಯ ರಕ್ಷಣೆಗಾಗಿ ಧರ್ಮ ರಕ್ಷಣೆಗಾಗಿ ದುಷ್ಟ ಸಂಹಾರಕ್ಕಾಗಿ ಯುದ್ದಗಳಾಗಿದ್ದವು. ಪರಮಾತ್ಮನ ಮೇಲಿರುವ ಆಂತರಿಕ ಭಕ್ತಿಯಿಂದಷ್ಟೆ ಭಕ್ತಿಯೋಗ
ವಾಗುವುದು ಇದರಲ್ಲಿ ದೇಶಭಕ್ತಿ ಒಂದು ಭಾಗವಾಗಿದೆ.
ಅಂದರೆ ದೇಶದೊಳಗೆ ಇರುವ ಪ್ರಜೆಗಳಿಗೆ ಯಾವಾಗ ಸ್ವಾರ್ಥ ಅಹಂಕಾರ ಮಿತಿಮೀರುವುದೋ ಆಗ ದೇಶ ವಿದೇಶದ ವಶವಾದರೂ ಚಿಂತೆಯಿಲ್ಲ ನಾನು ಕ್ಷೇಮವಾಗಿರಬೇಕೆಂಬ ಆಸೆ ಹೆಚ್ಚಾಗುತ್ತದೆ ಇದನ್ನು ಅಜ್ಞಾನ ಎನ್ನುವರು. ಜೀವ ಶಾಶ್ವತವಲ್ಲ ಆತ್ಮ ಶಾಶ್ವತವೆನ್ನುವ ಮಹಾತ್ಮರು ಜೀವ ಹೋದರೂ ಪರಮಾತ್ಮನ ಮೇಲಿನ ಭಕ್ತಿ ಬಿಡೋದಿಲ್ಲವೆಂದಂತೆ ದೇಶಭಕ್ತರೂ ಜೀವದ ಹಂಗುತೊರೆದು ದೇಶರಕ್ಷಣೆಗೆ ನಿಲ್ಲುವರು
ವಾಸ್ತವದಲ್ಲಿ ದೇಶದೊಳಗೆ ಜನಸಂಖ್ಯೆ ಮಿತಿಮೀರಿದ್ದರೂ ದೇಶಭಕ್ತರ ಸಂಖ್ಯೆ ಕಡಿಮೆಯಾಗಿದೆ.ವಿದೇಶದೆಡೆಗೆ ಹೋಗಿ ದೇಶದ ಹುಳುಕನ್ನು ಎತ್ತಿ ಹಿಡಿದು ಒಳಗಿರುವ ದೇಶವಾಸಿಗಳಲ್ಲಿ ಒಡಕು ತಂದು ತಾವು ಮನರಂಜನೆಯಲ್ಲಿ ಬದುಕುವವರುಭಾರತೀಯರೆಂದರೆಇದರಲ್ಲಿದೇಶಭಕ್ತಿಯಿಲ್ಲ.
ಯೋಗವೇ ಇಲ್ಲ. ದೇಶದೊಳಗೆ ಸೇರಿಕೊಂಡು, ಕೂಡಿಕೊಂಡು ಒಗ್ಗಟ್ಟಿನಿಂದ ದೇಶವನ್ನು ಕಟ್ಟುವುದೇ ಯೋಗಿಗಳ ಲಕ್ಷಣ.ಅಂದರೆ ಯಾರಲ್ಲಿದೆ? ನಿಸ್ವಾರ್ಥ ನಿರಹಂಕಾರದಿಂದ ಯಾವ ಪ್ರಜೆ ಸ್ವತಂತ್ರವಾಗಿ ದೇಶದಲ್ಲಿ ಜೀವನ ನಡೆಸಲಾಗಿದೆ?
ಪರಕೀಯರ ಸಾಲ ಬಂಡವಾಳ ವ್ಯವಹಾರದ ಜೊತೆಗೆ ಶಿಕ್ಷಣವೇ ನಮ್ಮೊಳಗೇ ಇದ್ದು ಆಳುತ್ತಿರುವಾಗ ಯೋಗ ಮಾಡಿ ಪರಮಾತ್ಮನ ಸೇರಬಹುದೆ?
ಸ್ವಾಮಿ ವಿವೇಕಾನಂದರು ಅಂದೇ ತಿಳಿಸಿದಂತೆ ಭಾರತೀಯರ ಒಂದು ದೋಷವೆಂದರೆ ಅಧಿಕಾರವನ್ನು ಯಾರೊಂದಿಗೂ ಹಂಚಿಕೊಳ್ಳದಿರೋದು. ತನ್ನ ನಂತರದಲ್ಲಿ ಭವಿಷ್ಯ ಏನಾಗಬಹುದೆನ್ನುವ ಚಿಂತನೆ ಇಲ್ಲದೆ ಅಧಿಕಾರ ದುರ್ಭಳಕೆ ಮಾಡಿಕೊಂಡು ಆಳಿದರೆ ಮುಂದಿನ ಜನಾಂಗವೂ ಅದೇ ಮಾರ್ಗ ಹಿಡಿದಾಗ ಅಧರ್ಮ ಇನ್ನಷ್ಟು ಬೆಳೆಸಿದಂತೆ.
ಯಾರು ಧರ್ಮ ರಕ್ಷಿಸುವರೋ ಅವರನ್ನು ಧರ್ಮ ವೇ ರಕ್ಷಣೆ ಮಾಡುತ್ತದೆ.ಅಂದರೆ ದೇವರನ್ನು ಧರ್ಮ ಮಾರ್ಗದಲ್ಲಿ ನಡೆದಾಗಲೇ ಸೇರುವುದು ಸಾಧ್ಯ.
ದೇವರೆಂದಾಗ ನಮಗೆ ಕೋಟ್ಯಾಂತರ ದೇವತೆಗಳು ಕಾಣುವರು. ನಿಜವಾಗಿಯೂ ದೇವರಿರೋದೆಲ್ಲಿ ? ಒಳಗಿರುವ ಸದ್ಗುಣ,ಸುಜ್ಞಾನ,ಸತ್ಯ,ಧರ್ಮ ವೇ ದೇವರು.
ಅದನ್ನು ಶಿಕ್ಷಣದ ಮೂಲಕ ಬೆಳೆಸಿದಾಗಲೇ ದೈವತ್ವ ಬೆಳೆದು ಮಹಾತ್ಮರಾಗಿ ಪರಮಾತ್ಮನ ಸಾಕ್ಷಾತ್ಕಾರವಾಗುತ್ತದೆ.ಈ ಸಾಕ್ಷಾತ್ಕಾರಕ್ಕೆ ಮಾನವನಿಗೆ ಯೋಗವಿರಬೇಕು.ಅಂದರೆ ತನ್ನ ತಾನರಿತು ನಡೆಯೋದಕ್ಕೆ ಮಾನವನಮನಸ್ಸು ಆಂತರ್ಮುಖ ಆಗಿದ್ದರೆ ಮಾತ್ರ ಯೋಗಿಯಾಗಬಹುದು.
ಯಾವಾಗಲೂ ರಾಜಕೀಯದೆಡೆಗೆ ಮನಸ್ಸಿದ್ದು ಹೊರಗಿನ ಸತ್ಯಕ್ಕೆ ಬೆಲೆಕೊಟ್ಟು ಮನಸ್ಸು ಹೊರಗೇ ಹೋರಾಟ,ಹಾರಾಟ ಮಾರಾಟದಲ್ಲಿದ್ದರೆ ಪರಮಾತ್ಮನ ಹೆಸರಿನಲ್ಲಿ ದೇವರ ಹೆಸರಲ್ಲಿ ಸಾಹಿತ್ಯದಲ್ಲಿ ರಾಜಕೀಯವೇ ಹೆಚ್ಚಾಗುತ್ತಾ ಒಳಗಿದ್ದ ಯೋಗಶಕ್ತಿ ಕ್ಷೀಣವಾಗಿ ಕೊನೆಗೊಮ್ಮೆ ಜೀವ ಹೋಗುತ್ತದೆ. ಪರಮಾತ್ಮನಲ್ಲಿ ಜೀವಾತ್ಮ ಸೇರಬೇಕಾದರೆ ಒಳಗಿರುವ ರಾಜಕೀಯ ಬಿಟ್ಟು ನಡೆಯಬೇಕೆಂದರು.ರಾಜಕೀಯದಲ್ಲಿ ನಾನು ನಾನೇ ಸರಿ ಎನ್ನುವ ಅಹಂಕಾರ ಸ್ವಾರ್ಥ ಇರುವಾಗ ಪರಮಾತ್ಮನ ಸ್ಮರಣೆ ಮಾಡಲೂ ಸಾಧ್ಯವಿಲ್ಲ.ಆದರೂ ತಾತ್ಕಾಲಿಕ ವಾಗಿರುತ್ತದೆ. ಹೆಸರು,ಹಣ ಸ್ಥಾನಮಾನ
ಸನ್ಮಾನದ ಹಿಂದೆ ಜನಬಲ ಹಣಬಲ ಅಧಿಕಾರಬಲವಿದ್ದ ಮಾನವನಿಗೆ ಹೇಗೆತಾನೇ ದೇವರು ಎಲ್ಲಾ ನಡೆಸಿರೋದೆನ್ನುವ ಸತ್ಯ ತಿಳಿಯಬಹುದು? ಮನಸ್ಸು ಶಾಂತವಾಗಿರಲು ಯೋಗ,ದ್ಯಾನ ತಪಸ್ಸು ,ಉಪವಾಸ,ವ್ರತ ನಿಯಮ ನಿಷ್ಟೆ,ಶ್ರದ್ದೆ ಜ್ಞಾನ,ಭಕ್ತಿ , ಕರ್ಮಾನುಷ್ಟಾನದಲ್ಲಿ ಶುದ್ದಿಯಿರಬೇಕು ಎನ್ನುವರು. ಹೊರಗಿನ ರಾಜಕೀಯದಲ್ಲಿ ಮನಸ್ಸೇ ಹಾಳಾಗುತ್ತಿರುವಾಗ ಯೋಗವನ್ನೂ ರಾಜಕೀಯಕ್ಕೆ ಬಳಸಿದರೆ ಒಂದುದಿನದ ಕಾರ್ಯಕ್ರಮ ಆಗುತ್ತದೆ.ಆದರೂ ಆ ಒಂದು ದಿನದಲ್ಲಿ ಸಾಕಷ್ಟು ಮಂದಿ ಯೋಗಾಸನ ಮಾಡಿ ತಮ್ಮ ಯೋಗವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾದರೆ ಉತ್ತಮ. ಇದಕ್ಕಾಗಿ ಸರ್ಕಾರದ ಹಣವನ್ನು ಬಳಸದೆ ಸ್ವಂತ ಹಣವನ್ನು ಸದ್ಬಳಕೆ ಮಾಡಿಕೊಂಡರೆ ಉತ್ತಮ.
ಯೋಗಶಕ್ತಿ ಯಾವಾಗ ಯಾರಲ್ಲಿ ಹೇಗೆ ಸೇರುವುದು ಎನ್ನುವುದು ಗೊತ್ತಾಗುವುದಿಲ್ಲ. ಸಿರಿವಂತ ಕೆಳಗಿಳಿದು ಎಲ್ಲಾ ತ್ಯೆಜಿಸಿ ಯೋಗಿಯಾಗಲೂಬಹುದು. ಬಡವ ಎಲ್ಲಾ ಪಡೆದು ಮೇಲೇರಬಹುದು.ಇಲ್ಲಿ ಕೊಟ್ಟುಪಡೆಯುವ ವ್ಯವಹಾರವೇ ಯೋಗದಿಂದ ದೂರ ಮಾಡಿರುವುದು.ಆದರೂ ಜಗತ್ತು ನಡೆದಿರೋದೆ ವ್ಯವಹಾರದಲ್ಲಿ.ಇತಿಮಿತಿಗಳನ್ನು ಕಾಯ್ದುಕೊಂಡು ತಾನೂ ಬದುಕಿ ಇತರರನ್ನೂ ಸ್ವತಂತ್ರವಾಗಿ ಬದುಕಲು ಬಿಡುವುದೇ ಯೋಗ. ಅತಿಯಾದ ಹಸಿದವನಿಗೆ ಯೋಗವಿರದು ಅತಿಯಾಗಿ ಹೊಟ್ಟೆತುಂಬಿದವನಿಗೂ ಯೋಗವಿರದು. ಕಾರಣ ಜ್ಞಾನವಿಜ್ಞಾನದ ಸಮಾನತೆಯ ಯೋಗ ಮನುಕುಲಕ್ಕೆ ಅಗತ್ಯವಿದೆ.ಜ್ಞಾನವೆಂದರೆ ತಿಳುವಳಿಕೆ ವಿಜ್ಞಾನ ಎಂದರೆ ವಿಶೇಷವಾದ ತಿಳುವಳಿಕೆ.ಯಾವ ತಿಳುವಳಿಕೆ ಎಂದರೆ ಪರಮಾತ್ಮ ಹಾಗು ಪರಾಶಕ್ತಿಯ ತಿಳುವಳಿಕೆ, ಆಕಾಶ ಭೂ ತತ್ವದ ತಿಳುವಳಿಕೆ, ಪುರುಷ ಸ್ತ್ರೀ ಶಕ್ತಿಯ ಅರಿವು ಸಮಾನವಾಗಿದ್ದರೆ ಮನಸ್ಸು ಶಾಂತವಾಗಿರುವುದು.ಯಾವಾಗ ಭೂಮಿಯನ್ನು ಆಳಲು ಅಧರ್ಮ, ಅನ್ಯಾಯ, ಅಸತ್ಯದ ಬಳಕೆಯಾಗುವುದೋ ಕ್ರಾಂತಿಯಾಗಿ ಜೀವ ಹೋಗುವುದು.ಅದೇ ಮನಸ್ಥಿತಿ ಯಲ್ಲಿ ಮತ್ತೆ ಜನ್ಮಪಡೆದಾಗ ಭೌತಿಕದಲ್ಲಿನ ಸತ್ಯವಷ್ಟೆ ಕಾಣುವುದು ಅದರ ಹಿಂದಿರುವ ಪರಮಾತ್ಮನ ಸತ್ಯ ಅರ್ಥ ವಾಗದೆ ಜನ್ಮ ಜನ್ಮಕ್ಕೂ ಹೋರಾಟವೇ. ಹೀಗಾಗಿ ಈ ಹೋರಾಟ ಕ್ಷತ್ರಿಯಧರ್ಮ ವೆಂದು ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ಅಂದಿನ ದುಷ್ಟರನ್ನು ಸದೆಬಡಿಯಲು ಯುದ್ದ ಮಾಡಲೇಬೇಕೆಂಬ ಉಪದೇಶದ ಭಗವದ್ಗೀತೆ ಹಿಂದೂಗಳ ಧರ್ಮ ಗ್ರಂಥವಾಗಿದೆ. ವಾಸ್ತವದಲ್ಲಿ ಪ್ರಜಾಪ್ರಭುತ್ವದ ದೇಶವಿದೆ.ಪ್ರಜೆಗಳಲ್ಲಿ ಧರ್ಮ ಜ್ಞಾನವೇ ಇಲ್ಲ. ಶಿಕ್ಷಣವೇ ನಮ್ಮದಲ್ಲದಿರೋವಾಗ ಯೋಗವೆಲ್ಲಿರುವುದು? ಹೀಗಾಗಿ ಕೆಲವರಷ್ಟೆ ಯೋಗಿಗಳಾಗಿ ಸ್ವತಂತ್ರವಾಗಿ ಜೀವನ ನಡೆಸಿರಬಹುದು. ಮೊದಲು ಯೋಗ್ಯ ಶಿಕ್ಷಣ ನೀಡಿದರೆ ನಿಜವಾದ ಯೋಗದಿನಾಚರಣೆಗೆ ಅರ್ಥ ವಿರುವುದು. ಪ್ರತಿದಿನವೂ ಮಕ್ಕಳಿಗೆ ಯೋಗಶಿಕ್ಷಣವಿರಬೇಕು,ಯೋಗ್ಯ ವಿಷಯಜ್ಞಾನ ಕೊಡಬೇಕು,ಯೋಗ್ಯ ಶಿಕ್ಷಕರು ಬೇಕು.ಮನೆಯಲ್ಲಿರುವ ಮೊದಲ ಗುರು ತಾಯಿಗೆ ಅಧ್ಯಾತ್ಮ ಸತ್ಯದ ಜ್ಞಾನವಿರಬೇಕು.ಭಾರತಮಾತೆ ಅಧ್ಯಾತ್ಮ ಗುರು.ಅವಳ ಮಕ್ಕಳಿಗೇ ಅಧ್ಯಾತ್ಮ ಶಿಕ್ಷಣವಿರದೆ ಎಷ್ಟೇಭೂಮಿ ಆಳಿದರೂ ಆಳಾಗಿಯೇ ಜನ್ಮಪಡೆಯುವುದು ಕರ್ಮಯೋಗ. ಅಂದರೆ ಕರ್ಮಕ್ಕೆ ತಕ್ಕಂತೆ ಜನ್ಮ. ಇದನ್ನು ತಡೆಯಲು ಹಣದಿಂದ ,ರಾಜಕೀಯದಿಂದ ಅಸಾಧ್ಯವೆಂದು ಎಲ್ಲಾ ಜ್ಞಾನಿಗಳಿಗೂ ತಿಳಿದ ವಿಚಾರವಾದರೂ ರಾಜಕೀಯದ ಹಿಂದೆ ನಿಂತು ತಾವು ಬದಲಾಗದೆ,ಶಿಕ್ಷಣ ಬದಲಾಯಿಸದೆ ಇದ್ದರೆ ಯೋಗದ ಆಚರಣೆ ಕೇವಲ ತೋರುಗಾಣಿಕೆಯಾಗಿರುತ್ತದೆ. ವಿಶ್ವವೇ ಯೋಗದೆಡೆಗೆ ನಡೆದಿದೆ ಎಂದರೆ ಭಾರತ ಯೋಗಿಗಳ ದೇಶವಾಗಿತ್ತು.ಈಗ ಭೋಗದೆಡೆಗೆ ನಡೆದವರು ಯೋಗ ಹೇಳಿಕೊಡುವುದನ್ನು
ರಾಜಕೀಯವೆನ್ನಬಹುದೆ? ಅಥವಾ ರಾಜಯೋಗವೇ? ಏನೇ ಇರಲಿ ಬದಲಾವಣೆಗೆ ಸಹಕಾರವಿರಲಿ ಇದು ಶಾಶ್ವತವಾಗಿರಲಿ ಎಂದು ನಡೆಯೋಣ. ಯಾರೂ ಯಾರನ್ನೂ ಬದಲಾಯಿಸುವುದು ಸುಲಭವಿಲ್ಲ. ನಮ್ಮನ್ನು ನಾವು ಬದಲಾಯಿಸಿಕೊಳ್ಳಲೂ ಸುಲಭವಿಲ್ಲ ಆದರೆ ಸಾಧ್ಯವಿದೆ. ಇದಕ್ಕೆ ರಾಜಕೀಯದಲ್ಲಿ ಸತ್ಯ ಧರ್ಮ ದ ಅಗತ್ಯವಿದೆ .
ಪ್ರತಿಕ್ಷಣವೂ ನಮ್ಮನ್ನು ನಡೆಸುವ ಆ ಪರಮಾತ್ಮನ ಕಾಣೋದಕ್ಕೆ ಪ್ರತಿಕ್ಷಣದ ಉಸಿರಿನಲ್ಲಿ ಯೋಗವಿರಬೇಕು. ಇದಕ್ಕೆ ಧ್ಯಾನಯೋಗ ದಾರಿಯಾಗಿದೆ.ಹಾಗಂತ ಈಗಿನ ಪರಿಸ್ಥಿತಿಯಲ್ಲಿ ಮನಸ್ಸು ಧ್ಯಾನಕ್ಕೆ ಹೋಗಲು ಬಹಳ ಕಷ್ಟವಿದೆ. ಮಕ್ಕಳಿಗೆ ಸಾಧ್ಯವಿದೆ.ಶಿಕ್ಷಣದಲ್ಲಿಯೇ ಯೋಗದೆಡೆಗೆ ನಡೆಸಬಹುದಷ್ಟೆ. ಕೆಲವು ಶಾಲೆಗಳಲ್ಲಿ ಕಲಿಸಲಾಗುತ್ತಿದೆ.ಪೋಷಕರ ಸಹಕಾರವಿದ್ದರೆ ಒತ್ತಾಯವಿದ್ದರೆ ಎಲ್ಲಾ ಶಾಲೆಗಳಲ್ಲಿಯೂ
ನಡೆಸಬಹುದು.ಇದು ನಮ್ಮಮಕ್ಕಳ ಭವಿಷ್ಯವಾಗಿದೆ.
ಮಂತ್ರ ತಂತ್ರ ಯಂತ್ರಗಳನ್ನು ಬಳಸುತ್ತಾ ಯೋಗದೆಡೆಗೆ ನಡೆಯುವಾಗ. ನಮ್ಮ ಮನಸ್ಸು ಆಂತರಿಕ ವಾಗಿ ಶುದ್ದವಾದರೆ ರಾಜಯೋಗ ಮನಸ್ಸು ದ್ವೇಷ ಅಸೂಯೆ, ಭಿನ್ನಾಭಿಪ್ರಾಯ, ಅಶಾಂತಿಯ ಗೂಡಾಗುತ್ತಿದ್ದರೆ ಅದರಲ್ಲಿ ಸ್ವಾರ್ಥ ಅಹಂಕಾರದ ಮಿಶ್ರಣವಿದೆ ಎಂದರ್ಥ. ಪರಮಾತ್ಮನ ಸೇರಲು ಶುದ್ದ ಮನಸ್ಸಿನ ಯೋಗದಿಂದ ಸಾಧ್ಯವಿದೆ. ಇದಕ್ಕೆ ತತ್ವದ ಸಮಾನತೆ, ಒಗ್ಗಟ್ಟು, ಏಕತೆ,ಐಕ್ಯತೆ ಅಗತ್ಯವಿದೆ. ತಂತ್ರದಲ್ಲಿ ದ್ವಂದ್ವವೇ ಹೆಚ್ಚಾಗುತ್ತದೆ.ಕಾರಣ ಅಲ್ಲಿ ಒಂದಿರದು .ಆತ್ಮನೊಂದಿಗೆ ಮನಸ್ಸೂ ಬೆರೆತಾಗಲೇ ಯೋಗವಾಗುವುದು.
ನಮ್ಮ ಒಳಗಿನ ಸತ್ಯಜ್ಞಾನದೊಂದಿಗೆ ಧರ್ಮ ವೂ ಕೂಡಿದರೆ ಯೋಗ.
ನನ್ನ ನಾನರಿತು ಪರಮಾತ್ಮನ ಎಲ್ಲರಲ್ಲಿಯೂ ಕಾಣುವುದೇ ಯೋಗ
ನನ್ನ ಜೊತೆಗೆ ಜೀವನನಡೆಸೋರೆಲ್ಲರೂ ಸರಿಸಮನಾಗಿ ಬದುಕಲಾಗದಿದ್ದರೂ ಅವರನ್ನು ಬದುಕಲುಬಿಟ್ಟರೆ ಉತ್ತಮ.
ನನ್ನ ಸಾಲ ತೀರಿಸಲು ನನ್ನ ದೇಹವನ್ನು ದೇಗುಲವಾಗಿಟ್ಟುಕೊಂಡು ಕಾಯಕವೇ ಕೈಲಾಸವೆನ್ನುವ ಭಕ್ತಿ ಶ್ರದ್ದೆ ಆತ್ಮವಿಶ್ವಾಸ ದಿಂದ ದುಡಿದು ಬದುಕಿದವರೆ ಕರ್ಮ ಯೋಗಿ.
ಭಕ್ತಿಯೆನ್ನು ಹೊರಗೆ ತೋರಿಸಲಾಗದು. ಹಾಗೇನಾದರೂ ತೋರುಗಾಣಿಕೆಯಿದ್ದರೆ ಅದು ಯೋಗವಾಗಲಾರದು.
ಹೀಗೇ ಆಂತರಿಕ ಶಕ್ತಿಯನ್ನು ಅನುಭವದಿಂದ ಅರ್ಥ ಮಾಡಿಕೊಂಡು ಆತ್ಮಾನುಸಾರ ಸತ್ಯ ಧರ್ಮ ದೆಡೆಗೆ ಸ್ವಂತ ಬುದ್ದಿ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ಪರಮಾತ್ಮನ ಕಡೆಗೆ ನಡೆದವರೆ ಯೋಗಿಗಳಾಗಿರೋದು.
ಸಂನ್ಯಾಸಿಗಳಾದರೂ ಒಬ್ಬರೆ ಸಂಸಾರ ಬಿಟ್ಟು ಇರಬಹುದು.ಸಂಸಾರದೊಳಗಿದ್ದು ಸಮಾಜವೂದೇಶವೂ ವಿಶ್ವವೂ ಒಂದೇ ಶಕ್ತಿಯ ಅಧೀನದಲ್ಲಿರುವ ಸತ್ಯವನ್ನು ಅರ್ಥ ಮಾಡಿಕೊಂಡು ತನ್ನ ಆತ್ಮರಕ್ಷಣೆಗಾಗಿ ಪರಮಸತ್ಯ ಧರ್ಮದೊಡನೆ ನಡೆದವರು ಬ್ರಹ್ಮಜ್ಞಾನಿಗಳಾಗಿದ್ದರು.ಅವರಿಗೆ ಸೃಷ್ಟಿ ಯ ರಹಸ್ಯ ತಿಳಿದ ಕಾರಣ ಸೃಷ್ಟಿ ಉತ್ತಮವಾಗಿತ್ತು ನಂತರ ಸ್ಥಿತಿ ಲಯವೂ ಉತ್ತಮ ಧರ್ಮದ ಮಾರ್ಗದಲ್ಲಿ ನಡೆದಿತ್ತು. ಅಂದಿನ ಶಿಕ್ಷಣವೇ ಯೋಗದೆಡೆಗಿದ್ದ ಕಾರಣ ಸಮಸ್ಯೆಯ ಮೂಲ ತಿಳಿದು ಪರಿಹಾರವನ್ನೂ ಒಳಗಿನಿಂದಲೇ ಕಂಡುಕೊಂಡು ಜೀವನ ಸನ್ಮಾರ್ಗದಲ್ಲಿ ನಡೆಸಲಾಗಿತ್ತು.ಇದನ್ನರಿಯದ ಅಜ್ಞಾನಿಗಳೇ ಅಸುರರಾಗಿ ಭೂಮಿಯನ್ನು ಹಾಳು ಮಾಡಿ ಆಳಲು ಹೊರಟಿದ್ದರು.ಅಸುರ ಸಂಹಾರಕ್ಕಾಗಿ ದೇವತೆಗಳು
ಮಹಾಶಕ್ತಿಯ ಮೊರೆಹೋಗಿ ಯುದ್ದಗಳಾಗಿತ್ತು. ಇದು ಸರ್ವ ಕಾಲಕ್ಕೂ ನಡೆಯುತ್ತದೆ ಆದರೆ , ನಮ್ಮ ದೃಷ್ಟಿಕೋನ ಒಂದೇ ಆಗಿರದ ಕಾರಣ ಎಷ್ಟೇ ಲಯಕಾರ್ಯ ವಾದರೂ ಅಜ್ಞಾನದ ಸೃಷ್ಟಿ ಯೇ ಆಗುತ್ತಿದ್ದರೆ ಮುಗಿಯದ ಕಥೆ.
ಅಂದರೆ ಮಾನವನಿಗೆ ಸಿಗುವ ಜ್ಞಾನವಿಜ್ಞಾನದ ವಿಷಯದಲ್ಲಿ ವಿಷವೇ ಹೆಚ್ಚಾಗಿದ್ದರೆ ಸಾವೇ ಗತಿ. ಅಮೃತತತ್ವ ಇದ್ದರೆ ಮುಕ್ತಿ ಮೋಕ್ಷದ ಯೋಗ. ಏನೇ ಬರಲಿ ಒಗ್ಗಟ್ಟು ಇರಲಿ ಎಂದಿದ್ದ ಭಾರತೀಯ ಧರ್ಮ ಸಂಸ್ಕೃತಿ ಭಾಷೆ ಇಂದು ರಾಜಕೀಯ ದ ವಶವಾಗುತ್ತಾ ಬಿಕ್ಕಟ್ಟು ಬೆಳೆಸಿ ಆಳುವುದೇ ಸಾಧನೆ ಎನ್ನುವ ಅಜ್ಞಾನ ಆವರಿಸಿದೆ. ಯೋಗದಿಂದ ಭ್ರಷ್ಟಾಚಾರದ ರೋಗ ನಿಂತರೆ ಉತ್ತಮ. ದೇಹದ ರೋಗ ಒಬ್ಬರಿಗೆ ಸಮಸ್ಯೆ.ದೇಶಕ್ಕೆ ಅಂಟಿಕೊಂಡಿರುವ ಭ್ರಷ್ಟಾಚಾರದ ರೋಗ ಯೋಗಾಸನದಿಂದ ತಡೆಯಬಹುದೆ? ಯೋಗ್ಯ ಶಿಕ್ಷಣದಿಂದ ತಡೆಯಬೇಕಿದೆ. ಗುರು ಶಿಕ್ಷಕರೆ ರೋಗಿಗಳ ಹಿಂದೆ ನಡೆದರೆ ಕಾಯೋರು ಯಾರು? ಬದಲಾವಣೆ ನಿಧಾನವಾದರೂ ಸಾಧ್ಯವಿದೆ. ಆಗುತ್ತದೆ ನಮ್ಮ ಸಹಕಾರದ ಅಗತ್ಯವಿದೆ.ನಮ್ಮ ಆರೋಗ್ಯ ನಮ್ಮ ಕೈನಲ್ಲಿದೆ. ಕೈ ಸರ್ಕಾರಕ್ಕೆ ಕೊಟ್ಟರೆ ರೋಗವೆ ಗತಿ.
No comments:
Post a Comment