ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Saturday, June 17, 2023

ದ್ವೇಷದಿಂದ ದೇಶಕಟ್ಟಲಾಗದು

ದ್ವೇಷ ರೋಷ ಭಿನ್ನಾಭಿಪ್ರಾಯ ದಿಂದ ಬೆಳೆದ ಅಂತರದ ಅಜ್ಞಾನದಿಂದ  ಯಾರಿಗೆ ಲಾಭ ನಷ್ಟ?  ಇವುಗಳ ಮೂಲವೇ ಪ್ರಚಾರಕರು. ಪ್ರಚಾರಕರಿಗೆ ಯಾವುದೇ ನಷ್ಟಕಷ್ಟವಿಲ್ಲ ಕಾರಣ ಮಧ್ಯವರ್ತಿಗಳು ಎರಡೂ ಕಡೆಯವರನ್ನು ಓಲೈಸಿಕೊಂಡು  ಸಹಕಾರ ಪಡೆದು ತಮ್ಮ ಜೀವನ ನಡೆಸಿದ್ದಾರೆಂದರೆ  ಇದೊಂದು ಅಧರ್ಮ.
ಸಾಕಷ್ಟು ಪುರಾಣ ಇತಿಹಾಸದ ಕಥೆಗಳ ಮೂಲಕ ಜನರಲ್ಲಿ ಧರ್ಮ ಜಾಗೃತಿ ಮೂಡಿಸುವುದರಲ್ಲಿ ಎಷ್ಟು  ಯಶಸ್ಸು ಗಳಿಸಿದ್ದಾರೆಂಬ ಪ್ರಶ್ನೆಗೆ ಉತ್ತರ  ತಮ್ಮ ತಮ್ಮ ಹೆಸರು ಹಣ ಅಧಿಕಾರ ಸ್ಥಾನಮಾನ ಬೆಳೆಸಿಕೊಂಡವರಿದ್ದರೂ ಜನರಲ್ಲಿ ಧರ್ಮ  ಯಾವುದು ಸತ್ಯ ಯಾವುದು ಎನ್ನುವ ಅರಿವಿರದೆ ದೇವರನ್ನು  ಹೊರಗೆ ಹುಡುಕಿದರೂ ಸಿಗದೆ ಸರ್ಕಾರದ ಹಿಂದೆ ನಿಂತು ಬೇಡುತ್ತಿರೋದೆ ಆತ್ಮನಿರ್ಭರ ಭಾರತವೆಂದರೆ ತಪ್ಪು.
ಆತ್ಮಜ್ಞಾನದಿಂದ ಆತ್ಮನಿರ್ಭರ ಭಾರತ ಮಾಡೋದಕ್ಕೆ ಈ ದ್ವೇಷದ ರಾಜಕೀಯದ ಅಗತ್ಯವಿರಲಿಲ್ಲ. ಶಾಂತಿಯಿಂದ ದೇಶದ ಸ್ವಾತಂತ್ರ್ಯ ಗಳಿಸಲು ಹೋರಾಡಿದ ಮಹಾತ್ಮರನ್ನು ಸರಿಯಿಲ್ಲವೆನ್ನುವ ಜನರಿದ್ದಾರೆಂದರೆ ಸ್ವಾತಂತ್ರ್ಯ ಪದಕ್ಕೆ ಅರ್ಥ ತಿಳಿದಿಲ್ಲ. ಮಹಾತ್ಮರ ಸಂದೇಶಗಳಲ್ಲಿ ದೇಶದ ಹಿತ ಕಾಣಬೇಕಾದರೆ ದೇಶದೊಳಗೆ ಇದ್ದು ಸತ್ಯ ತಿಳಿಯುವುದು ಅಗತ್ಯವಿತ್ತು.ಆದರೆ ವಿದೇಶಸುತ್ತಿ ಬಂದವರು ದೇಶದ ಹಿತ ವಿದೇಶದ ವಿಜ್ಞಾನದಲ್ಲಿದೆ ಎನ್ನುವಂತಾದರೆ  ಅಜ್ಞಾನವಷ್ಟೆ.
ಇಲ್ಲಿ ಯಾರನ್ನು  ಸರಿಯಿಲ್ಲವೆನ್ನುವ ಮೊದಲು ನಾನೆಷ್ಟು ಸರಿ ಎನ್ನುವ ಪ್ರಶ್ನೆ ಹಾಕಿಕೊಂಡವರು ಕಡಿಮೆಯಾಗಿ ಯಾರೋ ಹೇಳಿದ್ದೇ ಸತ್ಯವೆಂದು ಸಹಕಾರ ನೀಡಿ ತಾನೂ ಅದೇ ಅಸತ್ಯಕ್ಕೆ ಶರಣಾಗಿ ನಮ್ಮ ನಮ್ಮವರನ್ನೇ ದ್ವೇಷ ಮಾಡುತ್ತಾ ವಿದೇಶದವರೆಗೆ ಹೋದರೆ  ಪ್ರಗತಿ ಎನ್ನುವ ಅಜ್ಞಾನಕ್ಕೆ ಮದ್ದಿಲ್ಲ. ಹಿಂದೂ ಧರ್ಮದ ರಕ್ಷಣೆಗೆ ಹಿಂದೂಗಳ ಒಗ್ಗಟ್ಟು ಅಗತ್ಯವಿತ್ತು. ಪರಕೀಯರ ಕೈ ಕುಲುಕಿ ನಮ್ಮವರ ವಿರುದ್ದದ ರಾಜಕೀಯ ಬೆಳೆದಿರುವಾಗ ಪರಕೀಯರಲ್ಲಿ ಹಿಂದೂ ಧರ್ಮ ಇದೆಯೆ? ನಮ್ಮ ಶಿಕ್ಷಣ ಅವರಲ್ಲಿದೆಯೆ?  ಬಂಡವಾಳ ಸಾಲದ ಹಣವನ್ನು ದೇಶದ ತುಂಬಾ ತುಂಬಿಕೊಂಡು ಅಭಿವೃದ್ಧಿ ಎಂದರೆ ಹಣ ಶಾಶ್ವತವೆ? ಸಾಲ ತೀರಿಸುವ ಯೋಗ್ಯತೆ ಪ್ರಜೆಗಳಿಗಿದೆಯೆ?  ಎಲ್ಲಾ ಪ್ರಶ್ನೆಗೆ ಉತ್ತರ ಪ್ರಜೆಗಳೆ  ಕೊಡಬೇಕು. ಇಲ್ಲಿ ಹಣ ಮಾತ್ರ ಬೇಕು ಕೆಲಸ ಬೇಡ. ಕಷ್ಟ ಪಡದೆ ಸುಖ ಅನುಭವಿಸಿದರೆ ಕಷ್ಟಬಂದಾಗ  ಹೋರಾಡಿ  ಸತ್ತರೆ  ಜೀವಕ್ಕೆ ಮುಕ್ತಿ ಸಿಗದು. ಆಂತರಿಕ ಶುದ್ದಿಯಿಂದ ಆಂತರಿಕ ಬುದ್ದಿ ಶಕ್ತಿಯನ್ನು  ಆಂತರಿಕ ವಾಗಿದ್ದು  ಸದ್ಬಳಕೆ ಮಾಡಿಕೊಂಡು  ಸನಾತನ ಹಿಂದೂ ಧರ್ಮ  ನಿಧಾನವಾಗಿ ಬೆಳೆದಿರುವಾಗ ಯಾರೋ ಹೊರಗಿನವರು ಬಂದು  ಹೊರಗಿನ ಆಸೆ ಆಮಿಷಗಳಿಗೆ  ಜೀವನವೇ  ಹಾಳಾಗುವಷ್ಟು  ಬಲಿಯಾಗಿಸಿಕೊಂಡು ಅಜ್ಞಾನ  ಬೆಳೆದಿರುವಾಗ  ಇದನ್ನು ಸರಿಪಡಿಸಲು ಜ್ಞಾನದ ಶಿಕ್ಷಣದ ಅಗತ್ಯವಿತ್ತು. ಆದರೆ ತಿಳಿದವರು ಧಾರ್ಮಿಕ ವರ್ಗ ಬೇರೆ ರಾಜಕೀಯ ಕ್ಷೇತ್ರ ಬೇರೆ ಎಂದು ಒಂದೇ ದೇಶದಲ್ಲಿ ಹಲವಾರು ಧರ್ಮ, ಪಕ್ಷಗಳನ್ನು ಸೃಷ್ಟಿ ಮಾಡಿದರೆ  ಒಂದೇ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಕಷ್ಟ. ಇದರಲ್ಲಿ ದ್ವೇಷ, ಸೇಡು,ಭಿನ್ನಾಭಿಪ್ರಾಯ, ನಾಟಕವೇ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದರೂ  ಇದಕ್ಕೂ ನನಗೂ ಸಂಬಂಧ ವಿಲ್ಲವೆಂದು ರಾಜಕೀಯ ನಡೆಸಿದರೆ ಪ್ರಜಾಪ್ರಭುತ್ವಕ್ಕೆ ವಿರುದ್ದ.
ಅಧ್ಯಾತ್ಮ ದಿಂದ ದ್ವೇಷ ಹೋಗಬೇಕೇ ಹೊರತು ಬೆಳೆದರೆ ಅಧರ್ಮ ವಾಗುತ್ತದೆ. ಇದನ್ನು  ಸರಿ ಎನ್ನುವ ಪ್ರಜೆಗಳ ಸಹಕಾರವಿದ್ದರೆ  ದ್ವೇಷವೇ ಬೆಳೆಯೋದಷ್ಟೆ.
ಕ್ಷಮೆ,ಕರುಣೆ,ದಯೆ,ದಾಕ್ಷಿಣ್ಯವಿಲ್ಲದ ಧರ್ಮ ಯಾವುದಿದೆ?
ವ್ಯಕ್ತಿಯ ಹಣಕ್ಕೆ ಬೆಲೆಕೊಟ್ಟು ಜ್ಞಾನಕ್ಕೆ ಬೆಲೆಯಿಲ್ಲದೆ ಇಂದಿನ ದಿನಗಳಲ್ಲಿ ಮನೆಮನೆಯ ಒಡಕು ಏರಿದೆ.
ಒಂದು ಮನೆಯಿಂದ ಇನ್ನೊಂದು ಮನೆಗೆ ಲಕ್ಮಿಯಂತೆ ಬಂದ ಪತ್ನಿಯನ್ನು, ಸೊಸೆಯನ್ನು  ಹೇಗೆ ಕಾಣಬೇಕೆಂಬ ಜ್ಞಾನವಿಲ್ಲದೆ  ಆಳಾಗಿ ಕಂಡರೆ ಹಾಳಾಗೋದು ಸಂಬಂಧವೆ. ಹಾಗೆಯೇ ಬೇರೆ ಮನೆಗೆ ಹೋದ ಮೇಲೆ ಅಲ್ಲಿಯ ರೀತಿ ನೀತಿಗಳನ್ನು ತಿಳಿಯುವುದೂ ಅಗತ್ಯವಿದೆ.ಇದನ್ನರಿತು  ಸಮಾಧಾನದಿಂದ ತಾಳ್ಮೆಯಿಂದ  ಬದುಕುವುದಕ್ಕೆ ಜ್ಞಾನಬೇಕಿದೆ.
ಜೋಡಿಸುವ ಕೆಲಸ ಮಾಡುವ ದೈವತ್ವಕ್ಕೂ ಬಿಡಿಸಿ ಆಳುವ ಅಸರತ್ವಕ್ಕೂ ವ್ಯತ್ಯಾಸವಿಷ್ಟೆ.
ಎಲ್ಲಿಯವರೆಗೆ  ಪ್ರಜೆಗಳಲ್ಲಿ ದ್ವೇಷ ಇರುವುದೋ ಅಲ್ಲಿಯವರೆಗೆ ವಿದೇಶಿಗಳಿಗೆ,ಪರಧರ್ಮದವರಿಗೆ ಖುಷಿ.
ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎನ್ನುವುದು ಸತ್ಯವಾಗಿದೆ.
ಸರ್ಕಾರ  ಜನರ ಜೀವ ಉಳಿಸಬಹುದೆ? ಸಾಲ ತೀರಿಸಬಹುದೆ? ದೇಶ ಉಳಿಸಬಹುದೆ?  ಧರ್ಮ ರಕ್ಷಿಸಬಹುದೆ? ಸತ್ಯ ತಿಳಿಸಬಹುದೆ? ಯಾವುದೂ ಈವರೆಗೆ ಸಾಧ್ಯವಾಗಿಲ್ಲ ಕೇವಲ ಸಾಲ ಮಾಡಿಕೊಂಡು ‌ನಡೆಯುತ್ತಿದೆ ಎಂದರೆ ನಮ್ಮ ಸಹಕಾರದಲ್ಲಿ ಅಧರ್ಮ, ಅನ್ಯಾಯ,ಅಸತ್ಯ, ಅಜ್ಞಾನವಿದೆ. ಇದನ್ನು ಅರ್ಥ ಮಾಡಿಕೊಳ್ಳಲು ಅಂತರಾತ್ಮ ಶುದ್ದಿಯಿಂದ ಸಾಧ್ಯ ಅಂತರಾಷ್ಟ್ರೀಯ ವ್ಯವಹಾರದಿಂದ ಅಸಾಧ್ಯ.  
ನಮ್ಮವರ ಸಂಬಂಧ ಗಟ್ಟಿಯಾಗಿಸದೆ ವಿದೇಶಿಗಳ ಸಂಬಂಧ ಬೆಳೆಸಿದರೆ  ಅತಿಥಿಗಳ  ಮಧ್ಯೆ ಪ್ರವೇಶ ಅಂತರಕ್ಕೆ ಕಾರಣ.
ಈಗಲೂ ವಿದೇಶಿ ಒಪ್ಪಂದ ಗಳು ಮಿತಿಮೀರಿದೆ.ಆರ್ಥಿಕ ಪ್ರಗತಿಯಾದರೂ ಧಾರ್ಮಿಕ ಪ್ರಗತಿ ಕುಂಟುತ್ತಿದೆ ಎಂದರೆ ಹಣವನ್ನು ದುರ್ಭಳಕೆ ಮಾಡಿಕೊಂಡು ಮನರಂಜನೆ ಕಡೆಗೆ ನಡೆದ ಮನಸ್ಸು ಆತ್ಮವಂಚನೆಯನ್ನು ನಿರ್ಲಕ್ಷ್ಯ ಮಾಡಿದೆ.
ಇದೇ ಮುಂದೆ  ಅಜ್ಞಾನದ ದ್ವೇಷ,ಅಸೂಯೆ,ಜಗಳ,ಕ್ರಾಂತಿಗೆ ಕಾರಣ.ಕ್ರಾಂತಿಯಿಂದ ಹೋದ ಜೀವಕ್ಕೆ ಶಾಂತಿ ಸಿಗದೆ ಮತ್ತೆ
ಜನ್ಮತಳೆದು ಹೋರಾಟವೇ ಜೀವನವಾಗಿದೆ ಎಂದರೆ ಹಿಂದೂ  ಧರ್ಮದ  ರಕ್ಷಣೆಗೆ ಶಾಂತಿ‌ಮುಖ್ಯವೆ? ಕ್ರಾಂತಿಯೆ?
ಅಜ್ಞಾನದ ಅಹಂಕಾರ ಸ್ವಾರ್ಥ ದಲ್ಲಿ ಜಗತ್ತನ್ನು ಆಳಲು ಹೊರಟು ಒಳಗಿದ್ದ ಜ್ಞಾನದ ಜಗತ್ತು ಕಣ್ಣಿಗೆ ಕಾಣದಾಗಿದೆ.
ಕಂಡಿದ್ದೆಲ್ಲಾ ಶಾಶ್ವತವಲ್ಲ ಸತ್ಯವೂ ಅಲ್ಲ. ಕಾಣದ ಜಗತ್ತನ್ನು ಅರಿತಾಗಲೇ  ನಿಜವಾದ ದ್ವೇಷ ಮರೆತು ಸ್ನೇಹ ಪ್ರೀತಿ ವಿಶ್ವಾಸ ದ  ಬದುಕು ಸಾಧ್ಯವೆಂದಿರುವರು ಮಹಾತ್ಮರುಗಳು. ಯಾರಿಗೆ ಗೊತ್ತು ಒಳಗೆ ಯಾವ ದೈವಶಕ್ತಿ ಅಡಗಿದೆಯೆಂದು.
ಅದರ ವಿರುದ್ದ ನಡೆದಷ್ಟೂ ಅಂತರ ಹೆಚ್ಚಾಗುತ್ತಾ ಜೀವನ ಅವಾಂತರವಾಗುತ್ತದೆ.

No comments:

Post a Comment