ವಿಷ್ಣು ಸಹಸ್ರನಾಮ
*೧೦೨.ಅಮೇಯಾತ್ಮಾ*
*ನಮ್ಮ ಮನಸ್ಸು, ಬುದ್ಧಿಗೆ ಒಂದು ಸೀಮೆ ಇದೆ. ಅದರಿಂದಾಚೆಗೆ ನಾವು ಗ್ರಹಿಸಲಾರೆವು. ಭಗವಂತನನ್ನು ನಮ್ಮ ಬುದ್ದಿಯಿಂದ ಅಳಿಯಲು ಅಸಾಧ್ಯ.*
*ಇಂತಹ ಭಗವಂತ ಅಮೇಯಾತ್ಮಾ ಭಗವಂತನನ್ನು ನಮಗೆ ತಿಳಿಯಲು ಅಸಾಧ್ಯವಾದರೂ ಕೂಡ ಆತ ಅಣುವಿನಲ್ಲಿ ಅಣುವಾಗಿ ನಮ್ಮೊಳಗೆ ತುಂಬಿದ್ದಾನೆ. ಆತ ಸೂಕ್ಷ್ಮಾತಿ ಸೂಕ್ಷ್ಮನೂ ಹೌದು ನಮಗೆ ತಿಳಿದಿರುವುದು ಮಣ್ಣು, ನೀರು, ಬೆಂಕಿ,ಗಾಳಿ, ಆಕಾಶ ಹಾಗೂ ಈ ಪಂಚಭೂತಗಳಿಂದಾದ ವಸ್ತುಗಳು ಮಾತ್ರ. ಆದರೆ ಭಗವಂತ ಇವೆಲ್ಲಕ್ಕಿಂತಲೂ ಬೇರೆ. ನಮ್ಮ ಜೀವಸ್ವರೂಪನಾದ ಭಗವಂತನ ಕಲ್ಪನೆಯೇ ನಮಗಿಲ್ಲ.*
*ಭಗವಂತನನ್ನು ನಮ್ಮ ಒಳಗಣ್ಣಿನಿಂದ ನೋಡುವ ಪ್ರಯತ್ನ ಮಾಡಬೇಕೇ ಹೊರತು, ಹೊರ ಪ್ರಪಂಚದಲ್ಲಿ ಹುಡುಕಿ ಪ್ರಯೋಜನವಿಲ್ಲ.*
ನಮ್ಮ ದೃಷ್ಟಿ ಕೋನಬದಲಾದರೆ ಸೃಷ್ಟಿ ಯ ರಹಸ್ಯ ಅರ್ಥ ಆಗುತ್ತದೆ. ಸೃಷ್ಟಿ ಯೇ ಸರಿಯಿಲ್ಲದೆ ಸ್ಥಿತಿ ಸರಿಯಾಗಿರದು.ಜ್ಞಾನದ ದೃಷ್ಟಿ ವಿಜ್ಞಾನದ ದೃಷ್ಟಿಯ ನಡುವೆ ಅಂತರ ಬೆಳೆದಷ್ಟೂ ಅಜ್ಞಾನ ಅಂತರವನ್ನು ಇನ್ನಷ್ಟು ಬೆಳೆಸಿ ಆಳುತ್ತದೆ. ಈ ಅಜ್ಞಾನದೊಳಗೆ ಅಡಗಿರುವ ಜ್ಞಾನವನ್ನು ಕಂಡುಕೊಳ್ಳಲು 'ಅ' ದಿಂದ 'ಆ' ಕಡೆಗೆ ನಡೆಯುವ ಪ್ರಯತ್ನ ಮಾನವ ಮಾಡಬೇಕಿದೆ.
'ಅ' ಇದರಲ್ಲಿ ಅರಿವಿದ್ದರೂ ಅಹಂಕಾರ, ಅಸಹಕಾರ,ಅವಿದ್ಯೆ ಯಿಂದ ಆಂತರಿಕ ಶುದ್ದಿಯಾಗದೆ ಭೌತಿಕಶುದ್ದಿಗೆ ಹೆಚ್ಚಿನ ಮಹತ್ವವಿರುತ್ತದೆ. ಹೀಗಾಗಿ ಅರ್ಧ ಸತ್ಯ ಅರ್ಧ ಮಿಥ್ಯದ ಅತಂತ್ರಸ್ಥಿತಿಗೆ ಜೀವಾತ್ಮ ತಲುಪಬಹುದು. ಇದರಿಂದ ದೂರವಾಗಲು ಒಳಗಿನ ಸತ್ಯ ಅಗತ್ಯ ಅಂದರೆ ಆತ್ಮಸಾಕ್ಷಿ ಅಗತ್ಯ. ಆಗ 'ಆ' ಜ್ಞಾನದೆಡೆಗೆ ನಡೆಯಬಹುದು. ಆತ್ಮವಿಶ್ವಾಸ, ಆತ್ಮಸಂತೋಷ, ಆತ್ಮಪರಿಶೀಲನೆ, ಆತ್ಮಸಮಾಲೋಚನೆ,ಆಧ್ಯಾತ್ಮ ದ ಆದಿ ಆತ್ಮ ಆದಿ ಪುರಾಣ,ಆದಿ ಶಕ್ತಿ,ಆದಿ ಪುರುಷ,ಆದಿ ಗುರುಗಳ ಕಡೆಗೆ ನಿದಾನವಾಗಿ ನಡೆದವರಿಗಷ್ಟೆ ಆತ್ಮಜ್ಞಾನ ಲಭಿಸಿರೋದು. ಇದರಿಂದಾಗಿ ಬ್ರಹ್ಮಾಂಡದ ರಹಸ್ಯದ ಜೊತೆಗೆ ಪ್ರಕೃತಿಯ ರಹಸ್ಯವೂ ತಿಳಿದಿದ್ದರು. ಒಂದು ಸಣ್ಣ ಬಿಂದು ಗಾತ್ರದ ಜೀವಶಕ್ತಿ ಬ್ರಹ್ಮಾಂಡ ಶಕ್ತಿಯನರಿಯಲು ಆಂತರಿಕ ಶುದ್ದಿಯಿಂದ ಮಾತ್ರ ಸಾಧ್ಯವೆನ್ನುವುದು ಹಿಂದೂ ಸನಾತನಧರ್ಮ , ಆದರೆ ಈ ಧರ್ಮ ವನ್ನೇ ಅಸತ್ಯವೆಂದು ವಾದ ವಿವಾದದಿಂದ ಗೆದ್ದು ನಿಲ್ಲುವುದರಿಂದ ಭೂಮಿಯಲ್ಲಿ ಹೆಸರು,ಹಣ,ಅಧಿಕಾರಸ್ಥಾನಮಾನ ಸಿಕ್ಕರೂಕೊನೆಯಲ್ಲಿ ಎಲ್ಲಾ ಇಲ್ಲೇ ಬಿಟ್ಟು ನಡೆಯೋದಂತೂ ತಪ್ಪಲ್ಲ. ಆದರೂ ವಿಜ್ಞಾನ ಜಗತ್ತನ್ನು ಆತ್ಮಜ್ಞಾನದಜಗತ್ತಿನಿಂದ ಕಂಡವರು ಮಹರ್ಷಿಗಳಾದರು. ಆತ್ಮಜ್ಞಾನದ ಜಗತ್ತನ್ನು ವಿಜ್ಞಾನ ಜಗತ್ತು ನೋಡಲಾಗದಿದ್ದರೆ ಇದು ನಮ್ಮ ದೃಷ್ಟಿ ದೋಷವಷ್ಟೆ ಇದಕ್ಕಾಗಿ ಎಷ್ಟೇ ಹೊರಗಿನ ಹೋರಾಟ ಹಾರಾಟ ಮಾರಾಟ ನಡೆದರೂ ಕಾದಾಟದ ಯುದ್ದವೇ ನಡೆಯೋದು. ಯುದ್ದದಿಂದ ಜೀವ ಹೋಗಿ ಜನ್ಮಪಡೆಯಬಹುದಷ್ಟೆ. ಜ್ಞಾನದಿಂದ ಜೀವ
ಹೋಗುವುದಕ್ಕೂ ಅಜ್ಞಾನದಿಂದ ಜೀವ ಹೋಗುವುದಕ್ಕೂ ಇಷ್ಟೇ ವ್ಯತ್ಯಾಸ. ಒಂದು ಅಂತರ್ದೃಷ್ಟಿಯ ಸದ್ಗತಿ ಇನ್ನೊಂದು ಭೌತಿಕದೃಷ್ಟಿಯ ಮರಣ.
ಮನಸ್ಸಿನ ನಿಗ್ರಹದಿಂದ ಆತ್ಮಜ್ಞಾನ,ಆತ್ಮಜ್ಞಾನದಿಂದ ಸತ್ಯದರ್ಶನ, ಸತ್ಯದರ್ಶನವಾದರೆ ಧರ್ಮದರ್ಶನ. ಧರ್ಮವನ್ನು ರಕ್ಷಣೆ ಮಾಡಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ.
ಹಾಗಾದರೆ ಮಾನವನಿಗೆ ಮನಸ್ಸು ಶತ್ರುವೂ ಹೌದು ಮಿತ್ರನೂ ಹೌದು. ಮನಸ್ಸನ್ನು ರಾಜಕೀಯದೆಡೆಗೆ ಎಳೆದರೆ ಹೊರಗಿರುತ್ತದೆ.ರಾಜಯೋಗದೆಡೆಗೆ ನಡೆಸಿದರೆ ಒಳಗಿರುವ ಪರಾಶಕ್ತಿಯ ಜೊತೆಗೆ ಪರಮಾತ್ಮನ ಕಾಣುತ್ತದೆ.
ಒಟ್ಟಿನಲ್ಲಿ ಆತ್ಮಸಾಕ್ಷಿಯಂತೆ ನಡೆದರೆ ಪರಮಾತ್ಮನ ದರ್ಶನ.
ಆತ್ಮಸಾಕ್ಷಿಗಿಂತ ದೊಡ್ಡ ಸತ್ಯ ಬೇರೊಂದು ಇಲ್ಲ.ಇದರಲ್ಲಿ
ದೇವತೆಗಳು, ಮಾನವರು,ಅಸುರರು ತಮ್ಮದೇ ಆದ ಲೋಕ ಸೃಷ್ಟಿ ಮಾಡಿಕೊಂಡು ನಾನೇ ಸರಿ ನೀನು ಸರಿಯಿಲ್ಲವೆಂದಾಗ ಎಲ್ಲರೊಳಗಿದ್ದು ನಡೆಸೋ ಆ ಒಬ್ಬ ಏನು ಮಾಡಲಾಗದು .
ಅದಕ್ಕೆ ಮಹರ್ಷಿಗಳು ತಿಳಿಸಿರೋದು ಪರಮಾತ್ಮನಿಗೆ ಏನೂ ಅಂಟುವುದಿಲ್ಲ ಅವನು ಸ್ಥಿರ,ಶುದ್ದ, ಅಣುರೇಣುತೃಣಕಾಷ್ಟ
ದಲ್ಲಿಯೂ ಅಡಗಿರುವ ಮಹಾಶಕ್ತಿ ಭಗವಂತ.ಅವನ ಒಂದು ಅಂಗದೊಳಗಿರುವ ಭೂಮಿ ಭೂಮಿಯಲ್ಲಿರುವ ಮನುಕುಲ ಮನುಕುಲದೊಳಗಿರುವ ಜ್ಞಾನ ವಿಜ್ಞಾನದ ಜಗತ್ತನ್ನು ಅಂತರ್ದೃಷ್ಟಿಯಿಂದ ಕಂಡವರು ಮಹರ್ಷಿಗಳು.
ಮಹಾ ಋಷಿ ಗಳ ಯೋಗಶಕ್ತಿಯೇ ಇದಕ್ಕೆ ಕಾರಣ.
ದೇವತೆಗಳು ದೈವತತ್ವದೆಡೆಗೆ ನಡೆದರೆ, ಮಾನವರು ಮಾನವೀಯ ತತ್ವ ಮೌಲ್ಯಗಳಿಂದ ನಡೆದರು ಅಸುರರಿಗೆ ತತ್ವಕ್ಕಿಂತ ತಂತ್ರವೇ ಹೆಚ್ಚಾಗಿ ಭೂಮಿಯನ್ನು ಆಳಲು ಹೊರಟು ಭೂಮಿಯ ಋಣ ತೀರಿಸಲಾಗದೆ ಜನಸಂಖ್ಯೆ ಬೆಳೆದರೂ ಜ್ಞಾನ ಬೆಳೆಯಲಿಲ್ಲ.ಕಲಿಗಾಲದಲ್ಲಿ ಅಜ್ಞಾನ ಮಿತಿಮೀರಿದ ಕಾರಣ ಒಳಗಿರುವ ಸತ್ಯಕ್ಕೆ ಬೆಲೆಯಿಲ್ಲ. ಹೊರಗಿನ ಮಿಥ್ಯಕ್ಕೆ ಬೆಲೆಕೊಟ್ಟು ಸಾಲ ಬೆಳೆದಿದೆ.ಸಾಲ ತೀರಿಸಲು ಬಂದ ಜೀವಕ್ಕೆ ಮುಕ್ತಿ ಸಿಗದೆ ಅತಂತ್ರಸ್ಥಿತಿಗೆ ತಲುಪಿದೆ ಜೀವನ.
ಭೂಮಿಯ ಮೇಲಿರುವ ಈ ಮೂವರ ಮೇಲು ಕೀಳುಗಳ
ದೃಷ್ಟಿ ದೋಷದ ರಾಜಕೀಯದ ಪ್ರಭಾವ ಮೂವರೂ ಅನುಭವಿಸಲೇಬೇಕು.
ಯಾರಿಗೂ ಲಾಭವೂ ಇಲ್ಲ ನಷ್ಟವೂ ಇಲ್ಲ. ಮೇಲೇರಿದವ ಕೆಳಗಿಳಿಯಬಹುದು.ಕೆಳಗಿಳಿದವ ಮೇಲೇರಬಹುದು.
ಮಧ್ಯದಲ್ಲಿದ್ದವ ಮಧ್ಯದಲ್ಲೇ ಅತಂತ್ರಸ್ಥಿತಿಗೆ ಹೋಗಬಹುದು. ತ್ರಿಶಂಕು ಸ್ಥಿತಿಯ ನರಕವನ್ನು ಸ್ವರ್ಗವೆಂಬ ಭ್ರಮೆ ಹಾಗು ಮಾಯಾಲೋಕದಲ್ಲಿರೋದೆ ಮನುಕುಲದಮಾನವ. ಇದರಲ್ಲಿ ವಿಷ್ಣುವಿನವತಾರ
ದಲ್ಲಿಯೇ ಭೇದ ಭಾವ ಹರಿಹರ, ಬ್ರಹ್ಮಾದಿ
ದೇವಾನುದೇವತೆಗಳ ವಿಚಾರದಲ್ಲಿಯೇ ಭಿನ್ನಾಭಿಪ್ರಾಯ ದ್ವೇಷ ಅಹಂಕಾರ ಸ್ವಾರ್ಥ ವಿರೋವಾಗ ಹುಲುಮಾನವನ ಅವತಾರ ಕೇಳಬೇಕೆ?
ಒಟ್ಟಿನಲ್ಲಿ ಪರಮಾತ್ಮನ ನೋಡುವ ಅಂತರ್ದೃಷ್ಟಿ ಇಲ್ಲದೆ ಪರದೇಶದೆಡೆಗೆ ಮನಸ್ಸು ಹೋದರೂ ದೃಷ್ಟಿ ಸರಿಯಿಲ್ಲದೆ ಸೃಷ್ಟಿ ಸರಿಯಾಗದು ಸ್ಥಿತಿಗೆ ಕಾರಣ ಮತ್ತು ಪರಿಹಾರ ಸಿಗದು.
No comments:
Post a Comment