ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Monday, June 5, 2023

ಸ್ಥಿತಪ್ರಜ್ಞಾವಂತ ಎಂದರೆ ...

ಸ್ಥಿತಪ್ರಜ್ಞಾವಂತರಾಗೋದೆಂದರೆ ತಟಸ್ಥ ರಾಗೋದೆಂದರ್ಥ ವಲ್ಲ. ಒಂದು ಕಡೆ ನಿಲ್ಲೋದೂ ಅಲ್ಲ. ಜ್ಞಾನವಿಜ್ಞಾನವನ್ನು ಸರಿಯಾಗಿ ತಿಳಿದು ಸ್ಥಿತಿಯನ್ನರಿತು ನಡೆಯೋದಷ್ಟೆ.
ಶ್ರೀ ಕೃಷ್ಣ ಪರಮಾತ್ಮನೇ ಅರ್ಜುನನ ಧರ್ಮ ಸಂಕಟವನ್ನು ಹೋಗಲಾಡಿಸಲು ಅಂದಿನ ಸ್ಥಿತಿಯನ್ನರಿತು  ಕ್ಷತ್ರಿಯ ಧರ್ಮದೆಡೆಗೆ  ನಡೆಯಲು ಭಗವದ್ಗೀತೆ ಉಪದೇಶ ಮಾಡಬೇಕಾಯಿತು.ಆದರೆ ಈಗ ರಾಜಪ್ರಭುತ್ವ ವಿಲ್ಲ.ಭಗವದ್ಗೀತೆ ಇದೆ ಪುರಾಣ ಇತಿಹಾಸದ ಜ್ಞಾನವಿದೆ.ಆದರೆ ಶಿಕ್ಷಣದಲ್ಲಿಯೇ  ಇದನ್ನು ತಿಳಿಸಿ ಕಲಿಸಿ ಬೆಳೆಸದೆ  ಹೊರಗಿನ ಶಿಕ್ಷಣವನ್ನು ಕೊಟ್ಟವರಿಗೆ ವಿಜ್ಞಾನವೆಂದರೆ ಭೌತಿಕ ವಿಜ್ಞಾನವಷ್ಟೆ. ಅಧ್ಯಾತ್ಮ ವಿಜ್ಞಾನವನ್ನು ಭಗವದ್ಗೀತೆ ತಿಳಿಸಿದೆ. ಪ್ರಜಾಪ್ರಭುತ್ವದ ಪ್ರಜೆಗಳಿಗೆ ಇದರ ಅರಿವಿಲ್ಲದೆ ಕೇವಲ ಪಠಣ ಮಾಡಿದರೆ ಪುಣ್ಯ ಬರಬಹುದು.ಕೆಲವರ ಜೀವನ ನಡೆಯಬಹುದು ಕೆಲವರಿಗೆ  ಹಣ ಅಧಿಕಾರ,ಸ್ಥಾನಮಾನ,ಸನ್ಮಾನ,ಪದಕ,ಪಟ್ಟ ಪದವಿಗಳಿಗೂ ಕೊರತೆಯಾಗದು.ಆದರೆ ದೇಶದ ಸ್ಥಿತಿ ಸರಿಯಾಗುವುದೆ? ಇದರಲ್ಲಿನ ತತ್ವವನರಿತರೆ  ಸಾಧ್ಯವಿದೆ.
ನಮ್ಮ ಈ ದೇಶದ ಸ್ಥಿತಿಗೆ ನನ್ನ ರಾಜಕೀಯ ಎಷ್ಟು ಕಾರಣ? ರಾಜಕೀಯಕ್ಕೆ ನೀಡಿದ ಸಹಕಾರ ಎಷ್ಟು ಕಾರಣ? ನನ್ನ ಶಿಕ್ಷಣ ಎಷ್ಟು ಕಾರಣ? ನನ್ನ  ಮಕ್ಕಳಿಗೇ ನಾನು ಪರಕೀಯರ ವಿದ್ಯೆ ನೀಡಿರುವಾಗ ನನ್ನನ್ನು ಹೇಗೆ ಅರ್ಥ ಮಾಡಿಕೊಳ್ಳಲು ಸಾಧ್ಯ? ಹಾಗೆ ಭಾರತ ಮಾತೆಯನ್ನರಿತು ನಡೆಯಲು ಭಾರತೀಯತೆ  ಅಗತ್ಯ.ತತ್ವವಿಲ್ಲದ ತಂತ್ರದಿಂದ ಅತಂತ್ರ ಜೀವನ. ಹೇಳೋದಕ್ಕೆ ತತ್ವ ನಡೆಯೋದಕ್ಕೆ ತಂತ್ರವಾದರೂ ಇದರಿಂದ ಸಮಾನತೆ  ಹೆಚ್ಚುವುದೆ?
ನಡೆ ನುಡಿಯ ನಡುವಿನ  ಅಂತರದಿಂದ ಸಾಕಷ್ಟು ಅಧರ್ಮ ಮಧ್ಯದಲ್ಲಿ ತೂರಿಕೊಂಡು ಪರಿಸ್ಥಿತಿ ಹದಗೆಟ್ಟಿರುವಾಗ ಆ ಅಂತರವನ್ನು ಕಡಿಮೆಮಾಡುವ ಪ್ರಯತ್ನವಾದರೂ ಮಾಡಲು ಸಹಕಾರ ಕೊಟ್ಟರೆ  ಪಕ್ಷಾಂತರ, ಧರ್ಮಾಂತರ,
ಜಾತ್ಯಾಂತರ,ದೇಶಾಂತರ ಹೋಗುವುದನ್ನು ತಡೆಯಬಹುದು. ಮನೆಯೊಳಗಿರುವ ಸದಸ್ಯರುಗಳೇ ಒಂದಾಗಿ ಬದುಕಲು ತಯಾರಿಲ್ಲವಾದರೆ ದೇಶ ಕಟ್ಟಲು ಕಷ್ಟ.
ಇದೊಂದು  ಅಜ್ಞಾನದ ಬೆಳವಣಿಗೆ. ಭೌತಿಕ ವಿಜ್ಞಾನದ ಮಿತಿಮೀರಿದ ಸಾಧನೆ ಆಧ್ಯಾತ್ಮ ವಿಜ್ಞಾನದ ಅವನತಿಗೆ ಕಾರಣ. ಇವೆರಡರ  ಸಮಾನತೆಯೇ ಆತ್ಮಜ್ಞಾನದ ಲಕ್ಷಣ.ಎಲ್ಲಿದೆ ಸಮಾನತೆ? ಹಣದಲ್ಲೆ? ಜ್ಞಾನದಲ್ಲೆ? 
ಸ್ವಾಮಿ ವಿವೇಕಾನಂದರು ದೇಶದ ಯುವಕರನ್ನು ರಾಜಯೋಗದೆಡೆಗೆ  ಕರೆತಂದು ಉತ್ತಮ ಕ್ಷಾತ್ರಧರ್ಮ ತಿಳಿದು ದೇಶಭಕ್ತರಾಗಲು ಕರೆಕೊಟ್ಟರೆ, ಈಗಿನ ಯುವಕರಿಗೆ ವಿದೇಶಿ ಶಿಕ್ಷಣ ಕೊಟ್ಟು ರಾಜಕೀಯದೆಡೆಗೆ ಎಳೆದು  ತಮ್ಮ ಸ್ವಾರ್ಥ ಕ್ಕೆ ಬಳಸಿಕೊಂಡರೆ  ಎಲ್ಲಿಯ ಧರ್ಮ?
ಜ್ಞಾನವನ್ನು ದುರ್ಭಳಕೆ ಮಾಡಿಕೊಂಡರೆ ಅಜ್ಞಾನವಷ್ಟೆ. ಹಾಗೆಯೇ ದೇಶವನ್ನು ವಿದೇಶ ಮಾಡಲು ಹೊರಟರೆ ಅಧರ್ಮ ವಾಗುತ್ತದೆ.

No comments:

Post a Comment