ಹಿಂದಿನ ಸನಾತನ ಧರ್ಮದ ಮಡಿಮೈಲಿಗೆ ಎಲ್ಲಿಯವರೆಗಿತ್ತು ಎಂದರೆ ಪರರ ಸ್ವತ್ತು ಆಸ್ತಿ ಅಂತಸ್ತು ಮನೆ ಮಡದಿ ಮಕ್ಕಳ ಬಗ್ಗೆ ಚಿಂತಿಸುವುದೇ ಮನಸ್ಸಿನಮೈಲಿಗೆ ಎನ್ನುವ ಹಂತದಲ್ಲಿತ್ತು ಅಂದರೆ ಪರಮಾತ್ಮ ನನಗೆ ಏನು ಕೊಟ್ಟಿದ್ದನೊ ಅಷ್ಟೇ ಶುದ್ದ ಭಕ್ತಿಯಿಂದ ಸ್ವೀಕರಿಸಿ ತನ್ನ ಜೀವನ ನಡೆಸಿದರೆ ಮಾತ್ರ ಪರಮಾತ್ಮನಲ್ಲಿ ಜೀವಾತ್ಮ ಐಕ್ಯವಾಗಲು ಸಾಧ್ಯ ಎನ್ನುವ ಶುದ್ದ ಜ್ಞಾನಿಗಳು ಹೊರಗಿನಿಂದ ಏನೇ ಬಂದರೂ ನನ್ನದಲ್ಲದ್ದನ್ನು ಪಡೆಯುತ್ತಿರಲಿಲ್ಲ. ಕಾಲಾನಂತರದಲ್ಲಿ ಮಾನವನ ಆಸೆ ಭೌತಿಕ ಜಗತ್ತಿನಲ್ಲಿ ಹರಿದಾಡುತ್ತಾ ಮನಸ್ಸು ಹೊರಗೆ ಹೋಗುತ್ತಾ ಪರರನ್ನು ಕಾಡಿಬೇಡಿಯಾದರೂ ಹಣ,ಆಸ್ತಿ ಮಾಡುವ ಹಂತಕ್ಕೆ ಬಂದಾಗ ಯಾವ ಧರ್ಮ, ಜಾತಿ ಬರಲಿಲ್ಲ. ಆಹಾರ ವಿಹಾರದಲ್ಲೂ ಎಲ್ಲರ ಜೊತೆಗೆ ಹಂಚಿಕೊಂಡು ಬದುಕುವಾಗ ಒಳಗೇ ಅಡಗಿದ್ದ ಜೀವಾತ್ಮನ ಕೇಳಲಿಲ್ಲ. ಹೀಗೇ ಬೆಳೆದಂತೆಲ್ಲಾ ಋಣ ಹೆಚ್ಚಾಯಿತು.ಋಣ ತೀರಿಸಲು ಜನ್ಮ ಗಳು ಹೆಚ್ಚಾದವು.ಜನ್ಮ ಹೆಚ್ಚಾದಂತೆ ಜನಸಂಖ್ಯೆ ಬೆಳೆಯಿತು.ಜನಸಂಖ್ಯೆ ಬೆಳೆದಾಗ ಆಹಾರದ ಕೊರತೆ ಆಹಾರಕ್ಕಾಗಿ ಬಿಕ್ಷೆ ಬೇಡುವುದಾಯಿತು. ಜೀವ ಉಳಿದರೂ ಆತ್ಮಕ್ಕೆ ಸಿಗಬೇಕಾದ ಜ್ಞಾನದ ಶಿಕ್ಷಣ ಸಿಗದೆ ಮನಸ್ಸು ಅಶುದ್ದವಾಗುತ್ತಾ ಹೊರಗೆ ಮಡಿ ಮೈಲಿಗೆಯ ಆಚಾರ ವಿಚಾರ ಪ್ರಚಾರವಾಯಿತು. ಹಣ ಮಾತ್ರ ಯಾವತ್ತೂ ಶುದ್ದವೆನ್ನುವಂತೆ ಎಲ್ಲಾ ಕಡೆ ಹರಿದಾಡಿತು.ಜ್ಞಾನವಿಲ್ಲದೆ ಹಣದ ದುರ್ಭಳಕೆ ಆದಂತೆಲ್ಲಾ ಮಡಿಯೂ ಇಲ್ಲ ಮೈಲಿಗೆಯೂ ಇಲ್ಲದೆ ಎಲ್ಲೆಂದರಲ್ಲಿ ಸ್ವತಂತ್ರ ವಾಗಿ ಮಾನವನ ದೃಷ್ಟಿ ಹೋಗುತ್ತಾ ಈಗ ದೇಶದ ಶುದ್ದತೆಗೆ ಹಿಂದಿನ ಶುದ್ದ ಶಿಕ್ಷಣವೇ ಇಲ್ಲ ವಿದೇಶದವರ ಶಿಕ್ಷಣ ಪಡೆದರೂ ಅವರನ್ನು ನಮ್ಮವರೆಂದು ಹೇಳಲಾಗದ ಮನಸ್ಥಿತಿ. ಇನ್ನೂ ಮುಂದೆ ಮುಂದೆ ನಡೆದವರಿಗಂತೂಹಿಂದೆ ಏನಾಗಿತ್ತೆಂಬ ಅರಿವೇ ಇಲ್ಲ. ಹೀಗೆ ಹಿಂದೂ ಇಸ್ಲಾಂ ಮುಸ್ಲಿಂ ಎಂಬ ಮೂರು ತಮ್ಮ ಒಂದೇ ಮೂಲವನರಿಯದೆ ಶುದ್ದ ಅಶುದ್ದತೆಯನ್ನು ಹೊರಗೆ ಕಾಣುತ್ತಾ ವ್ಯವಹಾರ ನಡೆಸುವಾಗ ಎಲ್ಲಾ ಒಂದೇ ನಾಣ್ಯ ಬಳಸೋದು ನೋಟಿಗೆ ಮೈಲಿಗೆಇಲ್ಲ.ದೇವರ ಗರ್ಭ ಗುಡಿಯವರೆಗೆ ಭ್ರಷ್ಟರ ಹಣ ಹೋದರೂ ಕಾಣೋದಿಲ್ಲ. ದೇವರಿಗೇನೂ ಸಮಸ್ಯೆಯಿಲ್ಲ ಮಾನವನಿಗೇ ಸಮಸ್ಯೆ ಹೆಚ್ಚಾಗಿರೋದು. ಕಾರಣ ಮನಸ್ಸು ಮಾನವನದ್ದೆ.ಅದು ಶುದ್ದವಾಗಿಟ್ಟುಕೊಳ್ಳಲು ಮಾಡಿಕೊಂಡು ಬಂದಿರುವ ಆಚರಣೆಯಿಂದ ಶುದ್ದವಾಗಿದ್ದರೆ ಸರಿ.ಇನ್ನಷ್ಟು ಅಶುದ್ದ ಮೈಲಿಗೆಯಾಗಿದ್ದರೆಕಾರಣ ತಿಳಿಯಬೇಕಿದೆ. ಸತ್ಯಕ್ಕೆ ಯಾವ ಶುದ್ದತೆಯ ಅಗತ್ಯವಿಲ್ಲ ಕಾರಣ ಸತ್ಯ ಯಾವತ್ತೂ ಒಂದೇ ಇದ್ದು ಸ್ಥಿರವಾಗಿರುತ್ತದೆ.ಯಾವುದು ಬದಲಾಗುವುದೋ ಅದೇ ಅಶುದ್ದ. ನಮ್ಮೊಳಗೇ ಪರಕೀಯರ ಪ್ರವೇಶವಾದರೆ ಅಶುದ್ದ.ನಮ್ಮೊಳಗೇ ಪರಮಾತ್ಮನ ದರ್ಶನ ವಾದರೆ ಶುದ್ದ. ಆ ಪರಮಾತ್ಮನ ದರ್ಶನ ಮಾಡೋದಕ್ಕಾಗಿ ನಮ್ಮಮಹಾತ್ಮರುಗಳು ಪರರ ವಸ್ತು ಒಡವೆ,ಸ್ತ್ರೀ ಮಕ್ಕಳು ಮನೆಯ ಬಗ್ಗೆ ವಿಚಾರ ಪ್ರಚಾರ ನಡೆಸದೆ ಸದಾ ಪರಮಾತ್ಮನ ಸ್ಮರಣೆಯಲ್ಲಿ ತಮ್ಮ ಆತ್ಮಶುದ್ದಿ ಮಾಡಿಕೊಂಡು ಹೊರಗಿನಿಂದ ಬೆಳೆದಿರುವ ಎಲ್ಲಾ ಮಡಿ ಮೈಲಿಗೆಯ ಬಗ್ಗೆ ಪ್ರಶ್ನೆ ಮಾಡಿದ್ದರು.ಆದರೂ ಮನಸ್ಸು ಸ್ವಚ್ಚವಾಗಲು ಮಾನವನಿಗೆ ಶುದ್ದ ಜಪತಪ ಅನುಷ್ಠಾನ ತಪಸ್ಸು ದ್ಯಾನಮಂತ್ರ, ಯೋಗದ ಅಗತ್ಯವಿದೆ.ಎಲ್ಲಾ ಕಾಣೋದಕ್ಕೆ ಮಾನವರಾದರೂ ಕೆಲವರಲ್ಲಿ ದೈವಗುಣ ಕೆಲವರಲ್ಲಿ ಮಾನವೀಯ ಮೌಲ್ಯ,ಕೆಲವರಲ್ಲಿ ಅಸುರಿ ಶಕ್ತಿ ಇರೋವಾಗ ನಮ್ಮ ಸಂಗ ಸತ್ಯದಲ್ಲಿದ್ದರೆ ಸತ್ಸಂಗ. ಅದು ನಮ್ಮನ್ನು ಆಂತರಿಕ ವಾಗಿ ಶುದ್ದತೆ ಕಡೆಗೆ ಕರೆದೊಯ್ಯಬೇಕಷ್ಟೆ.ಭೌತಿಕದಲ್ಲಿದ್ದೇ ವ್ಯವಹಾರವನ್ನು ಎಲ್ಲರೊಂದಿಗೆ ನಡೆಸಿ ಧರ್ಮದ ವಿಚಾರದಲ್ಲಿ ಬೇಡವೆಂದರೆ ಋಣ ತೀರಿಸಲಾಗದು. ಋಣವೇ ಮಾನವನ ಜನ್ಮಕ್ಕೆ ಕಾರಣ.ಇದನ್ನು ನಿಸ್ವಾರ್ಥ ನಿರಹಂಕಾರ, ಪ್ರತಿಫಲಾಪೇಕ್ಷೆ ಇಲ್ಲದೆ ನಡೆಸುವ ಕಾರ್ಯದಿಂದ ಋಣ ತೀರುತ್ತಾ ಕೊನೆಗೆ ಒಳಗೇ ಅಡಗಿರುವ ಪರಾಶಕ್ತಿಯ ದರ್ಶನ ವಾಗಿತ್ತು.
ವಾಸ್ತವದಲ್ಲಿ ನಮ್ಮ ಹಿಂದೂ ಮುಸ್ಲಿಂ ಇಸ್ಲಾಂ ಶಿಕ್ಷಣದಲ್ಲಿಯೇ ಬಹಳ ವ್ಯತ್ಯಾಸವಿದೆ. ಹಾಗಂತ ವ್ಯವಹಾರಕ್ಕೆ ಎಲ್ಲಾ ಕೈಜೋಡಿಸಿ ಹಣ ಅಧಿಕಾರ ಸ್ಥಾನಮಾನಕ್ಕೆ ಧರ್ಮ ಕ್ಕೆ ಹೋರಾಟ ನಡೆಸಿದರೆ ಇದ್ದ ಸ್ವಲ್ಪ ಶುದ್ದ ಮನಸ್ಸಿಗೂ ಘಾಸಿಯಾಗುತ್ತದೆ. ಶಿಕ್ಷಣದಿಂದ ಮನಸ್ಸು ಆತ್ಮ ಸೇರಬೇಕಿತ್ತು. ಈಗ ಮನಸ್ಸಿಲ್ಲದೆಯೇ ಕಲಿಯಲೇಬೇಕಾದ ಅನಗತ್ಯ ವಿಚಾರ ವಿಚಾರ ಪ್ರಚಾರವೇ ಮನಸ್ಸಿನ ಮೈಲಿಗೆ ಹೆಚ್ಚಿಸಿ ಸಂಕುಚಿತವಾಗಿಸಿ ಆಳೋರು ಹೆಚ್ಚಾಗಿರೋದು ಭಾರತಕ್ಕೆ ಸಮಸ್ಯೆ ತಂದಿದೆ. ಒಟ್ಟಿನಲ್ಲಿ ಸ್ವಚ್ಚಭಾರತಕ್ಕೆ ಸತ್ಯದ ಶಿಕ್ಷಣದ ನಂತರ ಮಿಥ್ಯದ ಶಿಕ್ಷಣ ವಿರಬೇಕಿದೆ. ಪೋಷಕರು ಎಚ್ಚರವಾದರೆ ಉತ್ತಮ ಬದಲಾವಣೆ.
ಈ ಮಡಿ ವಿಚಾರ ಯಾಕೆ ಬಂದಿತೆಂದರೆ ನಿನ್ನೆ ನಾನು ನನ್ನ ಹೊಸ ಪುಸ್ತಕ ಹಿಡಿದು ರಾಯರ ಗುಡಿಯಲ್ಲಿ ಪೂಜೆ ಮಾಡಿಕೊಡಲು ಕೇಳಿದರೆ , ಅಲ್ಲಿದ್ದವರು ಅವರು ಮಡಿಯಲ್ಲಿರುವರು ಆಗೋದಿಲ್ಲವೆಂದರು, ಹಾಗೆಯೇ ಇನ್ನೊಂದು ಮಠಕ್ಕೆ ಹೋದಾಗ ಅವರು ಪೂಜೆ ಮಾಡಿಕೊಟ್ಟರು ಇದನ್ನು ಮೇಲಿನವರಿಗೆ ತಲುಪಿಸಬೇಕಿತ್ತು ಧರ್ಮದ ವಿಚಾರವಿದೆ ಎಂದಾಗ ಇಲ್ಲ ನೀವೇ ಹೋಗಿ ಕೊಡಬೇಕೆಂದರು ಸರಿ ಎಂದು ಬಂದೆ.ಇನ್ನೊಂದು ಕಡೆ ಗುರುಗಳ ಶಿಷ್ಯರಿಗೆ ಲೇಖನನೀಡಿ ನನಗೆ ಅಲ್ಲಿಯವರೆಗೆ ಬರೋದಕ್ಕೆ ಸಾಧ್ಯವಾಗದ ಕಾರಣ ಇದನ್ನು ದಯವಿಟ್ಟು ತಲುಪಿಸಿ ಎಂದರೆ ನೀವೇ ಆಶ್ರಮಕ್ಕೆ ಬರಬೇಕೆಂದರು.
ಲೇಖನಗಳು ಜನಸಾಮಾನ್ಯರಿಗೆ ತಲುಪಿಸುವ ಅವಕಾಶವಿದೆ. ಆದರೆ ಮಹಾಗುರುಗಳವರೆಗೆ ತಲುಪಿಸಲು ಸಮಸ್ಯೆಯಾಗುತ್ತದೆ ಎಂದರೆ ಮಹಾಭಾರತದ ಪರಿಸ್ಥಿತಿ ಹೇಗಾಗಿದೆ. ಮಧ್ಯವರ್ತಿಗಳು ತಮ್ಮ ಸ್ವಾರ್ಥ ಕ್ಕಾಗಿ ಜನರಿಗೆ ಸತ್ಯ ತಿಳಿಸಲು ಹಿಂದುಳಿದರೆ, ಸತ್ಯ ತಿಳಿದೂ ತಿಳಿಸಲಾಗದ ಜನಸಾಮಾನ್ಯರು ಇನ್ನೂ ಹಿಂದುಳಿಯುವರು ಹೀಗಾಗಿ ಸತ್ಯ ಹಿಂದುಳಿದು ದೈವತ್ವವಿಲ್ಲದೆ ದೇವರನ್ನು ಕಾಣದಾಗಿದೆ. ಸತ್ಯ ಒಳಗೇ ಅಡಗಿರುವಾಗ ಹೊರಗೆ ಹುಡುಕಿದರೆ ಸಿಗೋದಿಲ್ಲ.
ಮೈ ಮನಸ್ಸು ಶುದ್ದ ಮಾಡಿಕೊಳ್ಳಲು ಹಣಕ್ಕಿಂತ ಜ್ಞಾನವೇ ಮುಖ್ಯವೆನ್ನಬಹುದಾದರೂ ಎಷ್ಟೋ ಮಂದಿಯ ಆಹಾರವೇ ಶುದ್ದವಾಗಿರದೆ ಮನಸ್ಸು ಶುದ್ದಿಯಾಗುವುದು ಕಷ್ಟ. ಕೆಲವರ ಆಹಾರ ಶುದ್ದವಿದ್ದರೂ ಸಂಪಾದನೆಯ ಮಾರ್ಗ ಶುದ್ದವಿರದು.ಹೀಗೇ ಅಧರ್ಮ, ಅಸತ್ಯ,ಅನ್ಯಾಯ ಭ್ರಷ್ಟಾಚಾರ ದಿಂದ ಗಳಿಸಿದ ಹಣದಿಂದ ಮನಸ್ಸು ಶುದ್ದವಾಗದೆ ಆತ್ಮವೂ ಶುದ್ದವಾಗಿರದು.
ಇಂತಹ ಸಾಕಷ್ಟು ಅನುಭವಗಳಾಗಿದ್ದರೂ ಪ್ರಶ್ನೆ ಮಾಡಲಾಗದು. ಒಂದು ಚೌಕಟ್ಟನ್ನು ಹಾಕಿಕೊಂಡಾಗ ಹೊರಗೆ ಬೇರೆ ಕಾಣೋದು. ಹೀಗಾಗಿ ಒಂದು ಚೌಕಟ್ಟನ್ನು ಶುದ್ದಿಗೊಳಿಸಿಕೊಳ್ಳುವಾಗ ಹೊರಗಿನವರನ್ನು ಸೇರಿಸಿಕೊಳ್ಳದೆ ದೂರವಿಟ್ಟು ಮಡಿ ಮೈಲಿಗೆ ಬಂದಿತು. ಆದರೆ ಮನಸ್ಸು ಕೇಳಬೇಕೇ ಎಲ್ಲೆಂದರಲ್ಲಿ ಓಡಾಡಿಕೊಂಡಿದ್ದರೆ ದೇಹ ಮಾತ್ರ ಚೌಕಟ್ಟಿನಲ್ಲಿರಲು ಸಾಧ್ಯವಾಗದೆಹೊರಬರುತ್ತದೆ. ಭಾರತದ ಹಲವು ಆಚಾರ ವಿಚಾರಗಳ ಹಿಂದೆ ಆತ್ಮಶುದ್ದಿಯ ಉದ್ದೇಶವಿತ್ತು. ವಿದೇಶ ಪ್ರಯಾಣವನ್ನು ಅಶುದ್ದವೆಂದಿದ್ದರು ಅಂದರೆ, ಒಳಗಿನಿಂದ ಹೊರಗೆ ಮನಸ್ಸು ನಡೆದಷ್ಟೂ ಮನಸ್ಸು ಚಂಚಲವಾಗುತ್ತಾ ಭೌತಿಕಾಸಕ್ತಿ ಹೆಚ್ಚಾದರೆ ಆತ್ಮಜ್ಞಾನಕ್ಕೆ ಸಮಸ್ಯೆ ಎನ್ನುವ ಕಾರಣವಿದೆ. ಈಗ ಶಿಕ್ಷಣವೇ ಹೊರಗಿನಿಂದ ಒಳಗೆ ಸೇರಿಸಿರುವಾಗ ಒಳಗೇ ಅಡಗಿದ್ದ ಮೂಲದ ಸತ್ಯಧರ್ಮ ಜ್ಞಾನ ಬೆಳೆಸುವವರಿಲ್ಲದೆ ಈ ಮಡಿ ಮೈಲಿಗೆಯ ಹಿಂದಿನ ಉದ್ದೇಶ ಅರ್ಥ ವಾಗದು. ಲೇಖನವು ಸತ್ಯಶುದ್ದವಿದ್ದರೂ ಪುಸ್ತಕ ಹೊರಗಿನಿಂದ ಬಂದಿದ್ದರಿಂದ ಮಡಿ ಹೋಗುವುದಾದರೆ ಎಲ್ಲಾ ಸಾಮಾಗ್ರಿಗಳನ್ನು ಶುದ್ದಗೊಳಿಸಿಯೇ ಪೂಜೆಗೆ ಬಳಸಬೇಕು. ಹಾಗೆಯೇ ಹಣವೂ ಕೂಡ. ಲೇಖನ ನೇರವಾಗಿ ಹೋಗಿ ಕೊಟ್ಟಿದ್ದರೂ ನೀವ್ಯಾರು? ನಿಮಗೇನಿದೆ ಅಧಿಕಾರ? ಎನ್ನುವ ಪ್ರಶ್ನೆ ಬಂದಾಗ ಸಾಮಾನ್ಯರಲ್ಲಿರುವ ಸತ್ಯಜ್ಞಾನ ಶುದ್ದವಾಗಿ ಕಾಣದು. ಅನುಭವಕ್ಕೆ ಬರದೆ ಸತ್ಯ ಶುದ್ದವಾಗಿರದು ಇದಕ್ಕೆ ನಮಗೆ ಈ ರೀತಿಯಲ್ಲಿ ನಡೆಸಿ, ತಿಳಿಸಿ ,ಕಲಿಸುವುದೂ ಆ ಒಬ್ಬನೇ ಪರಮಾತ್ಮನಾದಾಗ ಯಾರದ್ದೂ ತಪ್ಪು ಒಪ್ಪು ಎನ್ನಲಾಗದಲ್ಲವೆ? ಒಟ್ಟಿನಲ್ಲಿ ಇರುವ ಒಂದೇ ಸತ್ಯದೆಡೆಗೆ ಹೋಗೋದಕ್ಕೆ ಆಂತರಿಕ ವ್ಯಕ್ತಿತ್ವ ಅಗತ್ಯವಿದೆ. ಭೌತಿಕದಲ್ಲಿ ವ್ಯಕ್ತಿಯನ್ನು ಬೆಳೆಸಿದಷ್ಟೂ ಅಶುದ್ದವಾಗುವುದು ಮನಸ್ಸು.
.ಇಲ್ಲಿ ಸತ್ಯ ಒಂದೇ ದೇವನೊಬ್ಬನೇ ಧರ್ಮ ಒಂದೇ ನಾವೆಲ್ಲರೂ ಒಂದೇ ಎನ್ನುವಾಗ ನಮ್ಮೊಳಗೇ ಅಡಗಿರುವ ಬೇರೆ ಬೇರೆ ಧರ್ಮ, ಜಾತಿ,ಪಂಥ,ಪಂಗಡ,ಪಕ್ಷ ನಮ್ಮತನ ಗುರುತಿಸಿಕೊಳ್ಳಲು ಆಗದಂತೆ ಮಾಡುತ್ತಾ ಹೊರಗಿರುವ ಅನೇಕ ಸತ್ಯದೆಡೆಗೆ ಹೋಗಿ ಎಲ್ಲದರಲ್ಲೂ ಅಡಗಿರುವ ಆ ಒಂದೇ ಶಕ್ತಿಯನ್ನು ಗುರುತಿಸದಂತೆ ಮಾಡಿದೆ. ಇದನ್ನು ತಪ್ಪು ಎನ್ನಲಾಗದು ಕಾರಣ ಕಾಲಿಗೆ ಅಂಟಿರುವ ಕೊಳೆಯನ್ನು ತೊಳೆದು ಹಾಕಬಹುದು.ತಲೆಗೆ ಅಂಟಿರುವ ಕೊಳೆಯನ್ನು ಅಷ್ಟು ಸುಲಭವಾಗಿ ತೊಳೆಯಲಾಗದು.ಇದನ್ನು ಸತ್ಯ ಧರ್ಮದಿಂದ ಸತ್ಕರ್ಮದಿಂದ, ಸದಾಚಾರ,ಸಾಮರಸ್ಯ, ಸಹನೆ, ಸಮಾಧಾನದಿಂದ ನಿಧಾನವಾಗಿ ಹೊರಹಾಕಬೇಕು.
ಹೀಗಾಗಿ ಜಗತ್ತನ್ನು ತಿದ್ದಲಾಗದು.ನಮ್ಮೊಳಗಿನ ಜಗತ್ತನ್ನು ನಾವೇ ನೋಡಲಾಗದು.ಹೀಗಿರುವಾಗ ಶುದ್ದತೆ ಮೊದಲು ಒಳಗೆ ನಡೆದಾಗಲೇ ಹೊರಗಿನ ಸ್ವಚ್ಚತೆಗೆ ಸುರಿಯುತ್ತಿರುವ ಕೋಟ್ಯಾಂತರ ಹಣ ಉಳಿಸಬಹುದು. ಉಳಿತಾಯಕ್ಕೆ ಶುದ್ದ ಜ್ಞಾನದ ಶಿಕ್ಷಣದ ಅಗತ್ಯವಿದೆ. ಜ್ಞಾನ ಒಳಗಿದ್ದರೂ ಗುರುತಿಸುವ ಗುರು ಹಿರಿಯರನ್ನು ಕಾಣೋದಕ್ಕೂ ಸಮಯ ಬರಬೇಕಿದೆ. ಕಾಲಕೂಡಿಬಂದಾಗ ಆಗಲೇ ಬೇಕು ಆಗುತ್ತದೆ. ಯೋಗವೆಂದರೆ ಇದೇ ಅಲ್ಲವೆ? ಆಗೋದನ್ನು ತಡೆಯಲಾಗದು ಆದರೆ ಯಾಕೆ ಆಗುತ್ತಿದೆ ಎಂದು ತಿಳಿಯಬಹುದು.
No comments:
Post a Comment