ಜೂನ್18 ಅಪ್ಪಂದಿರ ದಿನಾಚರಣೆ. ಇತ್ತೀಚೆಗೆ ಆಚರಣೆಗಳು ಬೆಳೆದಿರೋದಕ್ಕೆ ಕಾರಣ ಸಂಬಂಧ ದ ಜೊತೆಗೆ ಅವರ ಧರ್ಮ ಕರ್ಮ ವನ್ನೂ ತಿಳಿದು ನಡೆಯಲೆಂಬುದಾಗಿದೆ. ಹಿಂದಿನ ಕಾಲದಲ್ಲಿದ್ದ ಕೂಡುಕುಟುಂಬ ವ್ಯವಸ್ಥೆ ಇಂದಿಲ್ಲ ಅಂದಿನ ಗುರು ಹಿರಿಯರು ಅವರವರ ಕರ್ತವ್ಯವನ್ನು ನಮ್ಮ ಧರ್ಮ ವೆಂದರಿತು ಯಾವುದೇ ಪ್ರಚಾರಪ್ರಿಯರಾಗದೆ ಸ್ವಪ್ರಯತ್ನದಿಂದ ಸ್ವಾವಲಂಬನೆ ಯ ಜೀವನ ನಡೆಸುತ್ತಾ ಸತ್ಯ ಧರ್ಮದ ಕಡೆಗೆ ಸರಳ ಜೀವನ ನಡೆಸಿಕೊಂಡು ಸಮಾಜದಲ್ಲಿ ಉತ್ತಮ ಹೊಂದಾಣಿಕೆಯಿತ್ತು.
ಈಗ ಇದಕ್ಕೆ ವಿರುದ್ದ ನಡೆದವರಿಗೆ ಮೂಲದ ಸತ್ಯ ಧರ್ಮ ದ ಜ್ಞಾನವಿಲ್ಲದೆಯೇ ಮಕ್ಕಳಿಗೂ ತಿಳಿಸದೆ ತಾವೂ ತಿಳಿಯದೆ ಮುಂದೆ ಹೋದಾಗ ತನ್ನ ತಂದೆಯ ಮೇಲೇ ಇರದಪ್ರೀತಿ ವಿಶ್ವಾಸ ಹೊರಗಿನವರಲ್ಲಿ ಇಟ್ಟರೆ ಅಧರ್ಮ . ಹೀಗಾಗಿ ನಮ್ಮ ಹಿಂದಿನ ಧರ್ಮದ ಜೊತೆಗೆ ಇಂದಿನ ಧರ್ಮವೂ ಸೇರಿದರೆ ಸ್ವಲ್ಪ ಮಟ್ಟಿಗೆ ಬದಲಾವಣೆಯ ಗಾಳಿ ಬೀಸಲು ಸಾಧ್ಯ. ಇಲ್ಲಿ ಹಿಂದಿನ ಧರ್ಮ ವೆಂದರೆ ಗುರುಹಿರಿಯರ ನಡೆ ನುಡಿಯ ಜ್ಞಾನ ಇಂದಿನ ಧರ್ಮ ನಮ್ಮ ನಡೆ ನುಡಿಯಲ್ಲಿರುವ ವಿಜ್ಞಾನ. ಜ್ಞಾನವಿಲ್ಲದ ವಿಜ್ಞಾನ ಜಗತ್ತು ಹೊರಗಿನ ಸತ್ಯ ತೋರಿಸಿ ನಡೆಸುತ್ತದೆ. ಹೀಗಾಗಿ ತಾಯಿ ತಂದೆಯರು ನಮಗೆ ಕಣ್ಣಿಗೆ ಕಾಣುವ ದೇವರು ಎಂದಿದ್ದಾರೆ. ತಂದೆತಾಯಿಯರ ನಡೆ ನುಡಿಯೇ ಮಕ್ಕಳ ಭವಿಷ್ಯದ ಅಡಿಪಾಯ. ನಮ್ಮತನವನ್ನು ಉಳಿಸಿಕೊಂಡು ನಡೆಯುವುದೇ ನಿಜವಾದ ಜೀವನ.
ಜ್ಞಾನಿ ವಿಜ್ಞಾನಿ, ಅಮ್ಮ ಅಪ್ಪ, ಭೂಮಿ ಆಕಾಶ, ಸ್ತ್ರೀ ಪುರುಷ ಎರಡೂ ಒಂದೇ ನಾಣ್ಯದ ಎರಡು ಮುಖ.ಒಂದೇ ದೇಹದ ಎರಡು ಕಣ್ಣುಗಳಿದ್ದಂತೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚಿದರೆ ಅಧರ್ಮ. ಆದರೂ ಜ್ಞಾನ ಆಂತರಿಕ ಶಕ್ತಿ.ವಿಜ್ಞಾನ ಭೌತಿಕ ಶಕ್ತಿ ಎನ್ನುವಂತಹ ಸ್ಥಿತಿಯಲ್ಲಿ ಮಕ್ಕಳು ಬೆಳೆದಿರುವುದು ಅಜ್ಞಾನವಾಗಿದೆ. ಆಂತರಿಕವಾಗಿರುವ ಶಕ್ತಿ ಸ್ತ್ರೀ ಯರಲ್ಲಿರುವಷ್ಟು ಪುರುಷರಲ್ಲಿರದಿದ್ದರೂ ವಿಶೇಷವಾಗಿರುವ ಅಧ್ಯಾತ್ಮ ವಿಷಯವನ್ನು ಹೊರಗಿನಿಂದ ಗಳಿಸಿಕೊಂಡು ಕಾಲಮಾನಕ್ಕೆ ತಕ್ಕಂತೆ ಜೀವನ ನಡೆಸುವ ಶಕ್ತಿ ಪುರುಷರಲ್ಲಿ ಹೆಚ್ಚಾಗಿದ್ದು ಒಂದು ಸಂಸಾರವನ್ನು ನಡೆಸುವ ಪೂರ್ಣ ಜವಾಬ್ದಾರಿ ಹೊತ್ತು ಜೀವಮಾನವಿಡೀ ಕಷ್ಟಪಡುವುದು ಪುರುಷರ ಶಕ್ತಿಯಾಗಿದೆ. ಕಾಲಬದಲಾಗಿದೆ ಸ್ತ್ರೀ ಕೂಡಾ ಸಂಸಾರದಜವಾಬ್ದಾರಿ ಹೊತ್ತು ನಡೆಯುತ್ತಾಳೆ ಆದರೆ, ಎರಡೂ ಚಕ್ರಗಳ ಸಮತೋಲನ ಅಗತ್ಯ.ಒಂದು ಚಕ್ರ ವಿರುದ್ದ ದಿಕ್ಕಿನಲ್ಲಿ ಹೋಗಲಾಗದು ಜೀವನ ಚಕ್ರ ಒಂದೇ ಮಾರ್ಗದಲ್ಲಿ ನಡೆಯುವಾಗ ಹಿಂದೆ ಬಂದ ಮಾರ್ಗ ತಿರುಗಿ ನೋಡದಿದ್ದರೆ ಸಂಬಂಧ ಉಳಿಯದು.
ಒಟ್ಟಿನಲ್ಲಿ ಅಪ್ಪನ ಶ್ರಮದ ಫಲ ಸಂಸಾರದ ಭವಿಷ್ಯವಾಗಿರುತ್ತದೆ. ಆ ಶ್ರಮಕ್ಕೆ ಬೆಲೆಕಟ್ಟಲು ಅಸಾಧ್ಯ. ಹೀಗಾಗಿ ವರ್ಷ ಕ್ಕೊಮ್ಮೆ ಅಪ್ಪಂದಿರ ದಿನಾಚರಣೆ ಮಾಡಿ ಅವರ ಋಣ ತೀರಿಸಲಾಗದು.ಅವರ ಧರ್ಮಾಚರಣೆ
ಯಲ್ಲಿದ್ದ ಪರಿಶ್ರಮವನ್ನರಿತು ಶ್ರಮವಹಿಸಿ ತಮ್ಮ ಮಕ್ಕಳ ಪಾಲನೆ ಪೋಷಣೆ ಮಾಡಲು ನಮಗೂ ಸಾಧ್ಯವಾದರೆ ಅವರು ಗತಿಸಿದ ಮೇಲೂ ಅಮರರಾಗಿರುತ್ತಾರೆ. ಇದು ಭಾರತೀಯ ಧರ್ಮ, ಸಂಸ್ಕೃತಿಯೊಳಗಿರುವ ಶಕ್ತಿ.ಕಣ್ಣಿಗೆ ಕಾಣದ ಪರಿಶ್ರಮ ಕಣ್ಣಿಗೆ ಕಾಣುವ ಅಪ್ಪ ಒಂದೇ ಆದರೂ ಅನುಭವಿಸಿದ ಮೇಲೇ ಶಕ್ತಿಯೇ ಬೇರೆ ವ್ಯಕ್ತಿಯೇ ಬೇರೆ ಎಂದು ತಿಳಿಯುವುದು. ಒಟ್ಟಿನಲ್ಲಿ ವ್ಯಕ್ತಿಯೊಳಗಿರುವ ಶಕ್ತಿ ಅರಿತು ಗೌರವಿಸಿದರೆ ಉತ್ತಮ ಆಚರಣೆಯಾಗುತ್ತದೆ.
ಎಲ್ಲರಂತಲ್ಲ ನಮ್ಮಪ್ಪ. ಎಲ್ಲರಿಗೂ ಅವರದೇ ಆದ ವಿಶೇಷ ಶಕ್ತಿಯಿರುತ್ತದೆ. ಅವರವರ ಸಂಸಾರದ ಜವಾಬ್ದಾರಿ ಹೊತ್ತು ನಡೆಯುವುದೇ ನಿಜವಾದ ಧರ್ಮ.
ನಮ್ಮ ಸಂಸಾರದ ಜವಾಬ್ದಾರಿಯನ್ನು ಸರ್ಕಾರ ಹೊತ್ತು ನಡೆಯಲೆಂಬುದೇ ಬೇಜವಾಬ್ದಾರಿತನ.
ಶಿಕ್ಷಕವೃತ್ತಿಯನ್ನು ಧರ್ಮದ ಮಾರ್ಗದಲ್ಲಿ ನಡೆಸಿಕೊಂಡು ಸಮಾಜದಲ್ಲಿ ಗೌರವದಿಂದ ಬಾಳಿ ಬದುಕಿದ ನಮ್ಮ ಅಪ್ಪ ಅಷ್ಟೂ ಹೆಣ್ಣುಮಕ್ಕಳಾದರೂ ಹೊರೆ ಎಂದೆಣಿಸದೆ ಸರಿಯಾದ ಮಾರ್ಗದರ್ಶನದ ಶಿಕ್ಷಣ ನೀಡಿ ಅಮರರಾಗಿದ್ದಾರೆ. ಆದರೂ ನಮ್ಮ ಭಾರತದಲ್ಲಿರುವ ರಾಜಕೀಯದ ಭಿನ್ನಾಭಿಪ್ರಾಯದಿಂದ ಈಗಲೂ ಉತ್ತಮ ಶಿಕ್ಷಕರನ್ನು ಗುರುತಿಸುವಲ್ಲಿ ಸೋತಿರುವುದು ಶಿಕ್ಷಣ ಕ್ಷೇತ್ರದ ಭ್ರಷ್ಟಾಚಾರಕ್ಕೆ ಕಾರಣವೆಂದರೆ ತಪ್ಪಿಲ್ಲ. ಶಿಕ್ಷಣದ ದಿಕ್ಕೇ ಬದಲಾಗಿರುವಾಗ ಸಂಬಂಧಗಳೂ ಬದಲಾಗುತ್ತಲೇ ಇರುತ್ತದೆ. ಯಾರು ಎಷ್ಟೇ ದಿಕ್ಕುತಪ್ಪಿಸಿದರೂ ಹಿಂದಿರುಗದೆ ಹಿಂದಿನ ಧರ್ಮ ಕಾಣೋದಿಲ್ಲ. ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಎಂದಿರೋದು ಇದಕ್ಕೆ ಅಲ್ಲವೆ?
ಜನ್ಮದಾತರಿಲ್ಲದೆ ಜನ್ಮವೇ ಇಲ್ಲ.
No comments:
Post a Comment